Tag: ಗಜೇಂದ್ರ

  • 20 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಸಿನಿ ನಿರ್ದೇಶಕ ಗಜೇಂದ್ರ ಕೊಲೆ ಕೇಸ್‌ನಲ್ಲಿ ಅರೆಸ್ಟ್!

    20 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಸಿನಿ ನಿರ್ದೇಶಕ ಗಜೇಂದ್ರ ಕೊಲೆ ಕೇಸ್‌ನಲ್ಲಿ ಅರೆಸ್ಟ್!

    ನ್ನಡ ಚಿತ್ರರಂಗಕ್ಕೆ ಮತ್ತೊಂದು ಶಾಕ್ ತಟ್ಟಿದೆ. 20 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಸ್ಯಾಂಡಲ್‌ವುಡ್ (Sandalwood) ನಿರ್ದೇಶಕ ಗಜೇಂದ್ರ (Gajendra) ಅಲಿಯಾಸ್ ಗಜ ಎಂಬಾತನನ್ನ ಕೊಲೆ ಪ್ರಕರಣದಲ್ಲಿ ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ:ಅಲ್ಲು ಅರ್ಜುನ್‌ ಫ್ಯಾನ್ಸ್‌ಗೆ ಬ್ಯಾಡ್‌ ನ್ಯೂಸ್- ಡಿಸೆಂಬರ್‌ನಲ್ಲೂ ‘ಪುಷ್ಪ 2’ ರಿಲೀಸ್ ಆಗೋದು ಡೌಟ್

    ಏನಿದು ಕೇಸ್?
    2004ರಲ್ಲಿ ಬೆಂಗಳೂರಿನ ವಿಲ್ಸನ್ ಗಾರ್ಡನ್‌ನಲ್ಲಿ ರೌಡಿ ಶೀಟರ್ ಕೊತ್ತರವಿ ಕೊಲೆಯಾಗಿತ್ತು. ಈ ಕೇಸ್‌ನಲ್ಲಿ ಚಂದ್ರಪ್ಪ, ಅಲ್ಯೂಮಿನಿಯಂ ಬಾಬು ಜೊತೆಗೆ ನಿರ್ದೇಶಕ ಗಜೇಂದ್ರ 8ನೇ ಆರೋಪಿಯಾಗಿದ್ದ. ಕೊಲೆ ಕೇಸ್‌ನಲ್ಲಿ ಬಂಧಿತನಾಗಿದ್ದ ಗಜೇಂದ್ರಗೆ ಕೋರ್ಟ್ 1 ವರ್ಷ ಶಿಕ್ಷೆ ಕೂಡ ವಿಧಿಸಿತ್ತು. ಒಂದು ವರ್ಷ ಜೈಲುವಾಸ ಅನುಭವಿಸಿದ್ದ ಗಜೇಂದ್ರ ಬಳಿಕ ಜಾಮೀನು ಪಡೆದು ಹೊರಬಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

    ಜಾಮೀನು ಸಿಕ್ಕ ಬಳಿಕ 20 ವರ್ಷಗಳಿಂದ ಕೋರ್ಟ್‌ಗೆ ಹಾಜರಾಗದೇ ತಲೆ ಮರೆಸಿಕೊಂಡು ಓಡಾಡಿಕೊಂಡಿದ್ದ. ಬುಧವಾರ ಆತನನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

    ರೌಡಿಶೀಟರ್ ಅರಸಯ್ಯನ ಶಿಷ್ಯನಾಗಿದ್ದ ಗಜೇಂದ್ರ, ಈ ಹಿಂದೆ ‘ಪುಟಾಣಿ ಪವರ್’ ಹಾಗೂ ‘ರುದ್ರ’ ಎಂಬ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದರು. ಅಷ್ಟೇ ಅಲ್ಲದೇ ತಮಿಳಿನಲ್ಲಿ ಒಂದೆರಡು ಸಿನಿಮಾ ಮಾಡಿರೋದಾಗಿ ಹೇಳಿಕೊಂಡಿದ್ದಾನೆ.

  • ಬೆಂಗ್ಳೂರು ಆಯುಕ್ತರ ಕಚೇರಿಯಲ್ಲೇ ಸಿಕ್ಕಿಬಿದ್ದ ಪೊಲೀಸ್ ಕಳ್ಳ

    ಬೆಂಗ್ಳೂರು ಆಯುಕ್ತರ ಕಚೇರಿಯಲ್ಲೇ ಸಿಕ್ಕಿಬಿದ್ದ ಪೊಲೀಸ್ ಕಳ್ಳ

    ಬೆಂಗಳೂರು: PSI ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣವು ಭಾರೀ ಸದ್ದು ಮಾಡುತ್ತಿದ್ದು, ಸಿಐಡಿ ಅಧಿಕಾರಿಗಳು ಬೆಂಗಳೂರಿನ ಪರೀಕ್ಷಾ ಕೇಂದ್ರಗಳತ್ತ ಹದ್ದಿನ ಕಣ್ಣು ಹಾಯಿಸಿದ್ದಾರೆ. ಈ ಹೊತ್ತಿನಲ್ಲಿ ನಗರ ಪೊಲೀಸ್ ಆಯುಕ್ತರ ಕೇಂದ್ರ ಕಚೇರಿಯಲ್ಲೇ ಪೊಲೀಸ್ ಪೇದೆಯೊಬ್ಬ ಸಿಕ್ಕಿಬಿದ್ದಿದ್ದಾನೆ.

    PoliceCommissioner (1)

    ಪೇದೆ ಗಜೇಂದ್ರನನ್ನು ಸಿಐಡಿ ಬಂಧಿಸಿದೆ. ನಗರ ಪೊಲೀಸ್ ಆಯುಕ್ತರ ಕೇಂದ್ರ ಕಚೇರಿಯಲ್ಲಿ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಗಜೇಂದ್ರ ಕದ್ದು ಕದ್ದು ಎಕ್ಸಾಂ ಬರೆದು ಪಾಸಾಗಿದ್ದ. ಗಜೇಂದ್ರ ಇನ್ ಸರ್ವಿಸ್ ಖೋಟಾದಡಿ ಫಸ್ಟ್ ರ‍್ಯಾಂಕ್ ಪಡೆದಿದ್ದ. ಸ್ಟಾರ್ ಹಾಕಿಕೊಂಡು ಬರೋದಕ್ಕೂ ತಯಾರಾಗಿದ್ದ. ಅಷ್ಟರಲ್ಲೇ ಅಕ್ರಮ ಎಸಗಿ ಸಿಕ್ಕಿ ಬಿದ್ದಿದ್ದಾನೆ. ಇದನ್ನೂ ಓದಿ: PSI ಟಾಪರ್ಸ್‍ಗಳ ಅಸಲಿ ಮುಖವಾಡ ಬಯಲು – ತಾತ್ಕಾಲಿಕ ಪಟ್ಟಿಯಲ್ಲಿ ಬೆಂಗ್ಳೂರಿನ 172 ಮಂದಿ ಆಯ್ಕೆ!

    ಕೆಲಸ ಮುಗಿಸಿ ಮನೆಗೆ ಹೋಗಲು ತಯಾರಿಯಾಗುತ್ತಿದ್ದ ವೇಳೆ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿಯೇ ಅಧಿಕಾರಿಗಳು ಬಂಧಿಸಿದ್ದಾರೆ.

  • ಮರಾಠಿಗರಿಂದಲೇ ಕರ್ನಾಟಕ ಕಿಂಗ್ ಅಂತ ಬಿರುದು ಪಡೆದ ಗಟ್ಟಿಗ ಗಜೇಂದ್ರ!

    ಮರಾಠಿಗರಿಂದಲೇ ಕರ್ನಾಟಕ ಕಿಂಗ್ ಅಂತ ಬಿರುದು ಪಡೆದ ಗಟ್ಟಿಗ ಗಜೇಂದ್ರ!

    ಚಿಕ್ಕೋಡಿ(ಬೆಳಗಾವಿ): ಸಖತ್ ಆಗಿ ಬಾಡಿ ಬಿಲ್ಡ್ ಮಾಡಲು, ಪೈಲ್ವಾನ್ ಗಳು ಕುಸ್ತಿ ಗೆಲ್ಲಲು ಕೆಲವೊಂದಿಷ್ಟು ಜನ ದಿನಕ್ಕೆ ಸಾವಿರಾರು ರೂಪಾಯಿ ಖರ್ಚು ಮಾಡುತ್ತಾರೆ. ಆದರೆ ಇಲ್ಲೊಂದು ಕೋಣದ ಬಾಡಿ ಬಿಲ್ಡ್ ಮಾಡಲು ದಿನನಿತ್ಯ ಸಾವಿರಾರು ಖರ್ಚು ಮಾಡಲಾಗುತ್ತಿದೆ. ಕೋಣದ ಹೆಸರು ಗಜೇಂದ್ರ. ದಿನ ಬೆಳಗಾದ್ರೆ ಸಾಕು 15 ಲೀಟರ್ ಹಾಲು ಕುಡಿಯೋಕೇ ಬೇಕು. ಆತನ ಒಂದು ನೋಟ ಆತನ ಮೈಮಾಟಕ್ಕೆ ಫಿದಾ ಆಗದವರೇ ಇಲ್ಲ. ಸದ್ಯ ಕರ್ನಾಟಕ ಮಹಾರಾಷ್ಟ್ರದ ಜನರ ಹಾಟ್ ಫೇವರಿಟ್ ಆಗಿಬಿಟ್ಟಿದ್ದಾನೆ.

    ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮಂಗಸೂಳಿ ಗ್ರಾಮದ ವಿಲಾಸ್ ನಾಯಿಕ್ ಎಂಬವರು ಬೆಳೆಸಿರೋ ಈತ ಮುರಾ ತಳಿಯ ಕೋಣ. ದಿನವೊಂದಕ್ಕೆ ಈತನಿಗೆ ಬರೊಬ್ಬರಿ 15 ಲೀಟರ್ ಹಾಲು ಹಾಗೂ 5 ಕೆಜಿ ಪಶು ಆಹಾರ ಕಬ್ಬು ಮೇವು ಹಾಕಿ ಕಳೆದ ನಾಲ್ಕು ವರ್ಷಗಳಿಂದ ವಿಲಾಸ್ ಅವರು ಇದನ್ನ ಪ್ರೀತಿಯಿಂದ ಬೆಳೆಸಿದ್ದಾರೆ. ಇತ್ತಿಚಿಗೆ ಮಹಾರಾಷ್ಟ್ರದ ಸಾಂಗ್ಲಿಯ ತಾಸಗಾಂವ್ ನಲ್ಲಿ ನಡೆದ ಪಶು ಪ್ರದರ್ಶನದಲ್ಲಿ ಈ ಗಜೇಂದ್ರನನ್ನ 80 ಲಕ್ಷ ರೂಪಾಯಿಗೆ ಬೇಡಿದ್ದರೂ ಸಹ ಮಾಲೀಕ ವಿಲಾಸ ಮಾರಟ ಮಾಡಿಲ್ಲ.

    ಈ ಕೋಣವನ್ನ ಪಾಲನೆ ಲಾಲನೆ ಮಾಡಲು ತಿಂಗಳಿಗೆ 45 ರಿಂದ 50 ಸಾವಿರ ರೂ. ಖರ್ಚು ಮಾಡಲಾಗುತ್ತಿದೆ. ದಿನನಿತ್ಯ ಹಾಲು, ಮೇವು ನೀಡಿ ಈ ಕೋಣವನ್ನ ಜಬರದಸ್ತ್ ಮಾಡಲಾಗಿದೆ. ಈ ಕೋಣವನ್ನ ಜಾತ್ರೆಗಳ ಸಂದರ್ಭದಲ್ಲಿ ಆಯೋಜಿಸಲಾಗುವ ಸ್ಪರ್ಧೆಗಳಲ್ಲಿ ಈ ಕೋಣ ನಂಬರ್ ಒನ್ ಪ್ರಶಸ್ತಿ ತರದೇ ಇರುವ ಮಾತಿಲ್ಲ. ಯಾಕೆಂದರೆ ಇದನ್ನ ನೋಡಿದ ಯಾವುದೇ ತೀರ್ಪುಗಾರ ನಂಬರ್ ಕೊಡಲೇಬೇಕು ಅಂಥ ಮೈ ಮಾಟವನ್ನೇ ಈ ಕೋಣ ಹೊಂದಿದೆ.

    2 ಕೋಟಿ ರೂ. ಹಣ ಬರುವ ನಿರೀಕ್ಷೆಯಲ್ಲಿ ಮಾಲೀಕ:
    ಜಾನುವಾರ ಪ್ರದರ್ಶನ ಸಂದರ್ಭದಲ್ಲಿ ಮಹಾರಾಷ್ಟ್ರಕ್ಕೆ ಹೋದಾಗ ಬರೋಬ್ಬರಿ 80 ಲಕ್ಷ ಬೆಲೆ ಈ ಕೋಣವವನ್ನ ಖರೀದಿಗಾಗಿ ಕೇಳಿದ್ದರಂತೆ. ಆದರೆ ವಿಲಾಸ ಕುಟುಂಬ ಎರಡು ಕೋಟಿ ರೂ. ವರೆಗೂ ನಮ್ಮ ಕೋಣ ಮಾರಾಟವಾಗುತ್ತದೆ ಎನ್ನುವ ನಂಬಿಕೆಯಲ್ಲಿದ್ದಾರೆ. ಈ ಕೋಣ ನಮಗೆ ಅದೃಷ್ಟದ ಕೋಣವಾಗಿದ್ದು ಹೆಚ್ಚಿನ ಪ್ರೀತಿಯಿಂದ ಈ ಕುಟುಂಬದವರು ಈ ಕೋಣವನ್ನ ಸಾಕಿ ಸಲಹುತ್ತಿದ್ದಾರೆ.

    ಇನ್ನು ಸ್ವಂತವಾಗಿ ಗದ್ದೆಯೂ ಇರದೆ ನೀರಿನ ವ್ಯವಸ್ಥೆಯೂ ಸಹ ಇರದೆ ಇದ್ದರೂ ಸಹ ವಿಲಾಸ್ ಅವರು ಮೇವು ಖರೀದಿಸಿ, ಬರೊಬ್ಬರಿ 50ಕ್ಕೂ ಹೆಚ್ಚು ಎಮ್ಮೆಗಳನ್ನ ಸಾಕಿದ್ದು, ಇತರ ರೈತರಿಗೆ ಮಾದರಿಯಾಗಿದ್ದಾರೆ. ಈ ಗಜೇಂದ್ರನ ತಾಯಿ ಎಮ್ಮೆಯನ್ನ ಕಳೆದ ನಾಲ್ಕು ವರ್ಷದ ಹಿಂದೆ ವಿಲಾಸ ಬರೋಬ್ಬರಿ 1 ಲಕ್ಷ 40 ಸಾವಿರ ಕೊಟ್ಟು ತಂದಿದ್ದರಂತೆ. ಅದು ಜನ್ಮ ನೀಡಿದ ಮರಿಯೇ ಸದ್ಯ ಹೀಗೆ ದೈತ್ಯವಾಗಿ ಬೆಳೆದಿರುವ ಈ ಗಜೇಂದ್ರ. ಇಷ್ಟು ತೂಕ ಇಷ್ಟು ಆಕರ್ಷಣಿಯವಾಗಿ ಗಜೇಂದ್ರ ಬೆಳೆಯುತ್ತಾನೆ ಎಂದು ಸ್ವತಃ ವಿಲಾಸ ಅವರೇ ಭಾವಿಸಿರಲಿಲ್ಲವಂತೆ, ಈ ಗಜೇಂದ್ರ ಕೋಣದ ಜೊತೆ ಹೈನುಗಾರಿಕೆ ಮಾಡುತ್ತಿರುವ ಇವರು ದಿನಂಪ್ರತಿ ನೂರರಿಂದ ನೂರೈವತ್ತು ಲೀಟರ್ ಡೈರಿಗೆ ಹಾಲು ಹಾಕುತ್ತಾರೆ. ಇದನ್ನೂ ಓದಿ: ವೇದಿಕೆ ಮೇಲೆ ನಿಂಬೆ ಹಣ್ಣು ಉರುಳಿಬಿಟ್ಟ ಹೆಚ್‍ಡಿ ರೇವಣ್ಣ!

    ಈ ಕೋಣಕ್ಕೆ ಯಾಕಿಷ್ಟು ಬೇಡಿಕೆ:
    ಮುರಾ ತಳಿಯ ಕೋಣಗಳಿಗೆ ಫುಲ್ ಡಿಮ್ಯಾಂಡ್ ಇದೆ. ಯಾಕಂದ್ರೆ ಈ ತಳಿಯ ಕೋಣಗಳನ್ನ ಸಂತಾನೋತ್ಪತ್ತಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬಳಸಲಾಗುತ್ತದೆ. ಈ ಕೋಣದಿಂದ ಸಂತಾನೋತ್ಪತ್ತಿ ಮಾಡಲು ಭಾರೀ ಡಿಮ್ಯಾಂಡ್. ಈ ತಳಿಯ ಎಮ್ಮೆಗಳು ಹೆಚ್ಚಿನ ಪ್ರಮಾಣದ ಹಾಲು ನೀಡುವ ಕಾರಣ ಬಹುತೇಕ ರೈತರು ಈ ಕೋಣದ ವಿರ್ಯವನ್ನ ಸಂತಾನೋತ್ಪತ್ತಿಗೆ ಬಳಿಸುತ್ತಾರೆ. ಇದರಿಂದ ಕಟ್ಟು ಮಸ್ತಾದ ಎಮ್ಮೆಗಳು ಹಾಗೂ ಕೋಣಗಳು ಜನಿಸುವ ಕಾರಣ ಸಾಕಷ್ಟು ಈ ಭಾಗದ ರೈತರು ತಮ್ಮ ಎಮ್ಮೆಗಳನ್ನ ಗಜೇಂದ್ರನ ಬಳಿ ಕರೆ ತರುತ್ತಾರೆ. ಹೀಗಾಗಿ ಮಾಲೀಕನಿಗೆ ಈ ಒಂದು ಕಸುಬಿನಿಂದ ಹೆಚ್ಚಿನ ಲಾಭ ಬರುವುದರ ಜೊತೆಗೆ ಜಾನುವಾರ ಪ್ರದರ್ಶನಗಳಲ್ಲಿ ಬರುವ ಪ್ರಶಸ್ತಿಗಳಿಂದ ಇನ್ನಷ್ಟು ಲಾಭ ಬರುತ್ತದೆ. ಹೀಗಾಗಿ ಮಾಲೀಕನಿಗೆ ತನ್ನ ಖರ್ಚಿಗೆ ತಕ್ಕಂತೆ ಈ ಕೋಣ ಲಾಭ ಮಾಡಿಕೊಡುವ ಕಾರಣ ಈ ಗಜೇಂದ್ರ ಎಲ್ಲರಿಗೆ ಅಚ್ಚು ಮೆಚ್ಚಾಗಿದ್ದಾನೆ. ಇದನ್ನೂ ಓದಿ: ಸೋನಿಯಾ ಗಾಂಧಿ ನಿವಾಸ ಸಹಿತ ಕಾಂಗ್ರೆಸ್ ಪಕ್ಷದ ಪ್ರಧಾನ ಕಚೇರಿಯ ಬಾಡಿಗೆ ಬಾಕಿ – ಆರ್‌ಟಿಐ ಮಾಹಿತಿ ಬಹಿರಂಗ

    ಒಟ್ಟಿನಲ್ಲಿ ಈಗಿನ ಕಾಲದಲ್ಲಿ ಪೆಟ್ ಡಾಗ್ ಗಳ ಹೆಸರಲ್ಲಿ ಸಾವಿರಾರು ರೂಪಾಯಿ ಖರ್ಚು ಮಾಡೋ ಜನರಿಂತ ವಿಲಾಸ ಅಭಿರುಚಿ ಮತ್ತು ಗಜೇಂದ್ರನನ್ನು ಸಾಕಿರುವ ರೀತಿಗೆ ಕರ್ನಾಟಕ ಮತ್ತು ಮಹಾರಾಷ್ಟ್ರದ ಜನ ಫಿದಾ ಆಗಿದ್ದು ನಿತ್ಯ ನೂರಾರು ಮಂದಿ ಬಂದು ಗಜೇಂದ್ರನ ನೋಡಿಕೊಂಡು ಹೋಗ್ತಿದ್ದಾರೆ.