Tag: ಗಜನಿ

  • ಮೈಕ್ರೋಮ್ಯಾಕ್ಸ್ ಕೋ-ಫೌಂಡರ್ ರಾಹುಲ್ ಶರ್ಮಾಗೆ ಡಿವೋರ್ಸ್ ಕೊಡ್ತಾರಾ ಆಸಿನ್- ನಟಿ ಸ್ಪಷ್ಟನೆ

    ಮೈಕ್ರೋಮ್ಯಾಕ್ಸ್ ಕೋ-ಫೌಂಡರ್ ರಾಹುಲ್ ಶರ್ಮಾಗೆ ಡಿವೋರ್ಸ್ ಕೊಡ್ತಾರಾ ಆಸಿನ್- ನಟಿ ಸ್ಪಷ್ಟನೆ

    ಹುಭಾಷಾ ನಟಿ ಆಸಿನ್ (Asin) ಅವರು ತಮ್ಮ ಪತಿ ಮೈಕ್ರೋಮ್ಯಾಕ್ಸ್ ಕೋ-ಫೌಂಡರ್ ಆಗಿರುವ ರಾಹುಲ್ ಶರ್ಮಾಗೆ (Rahul Sharma) ಡಿವೋರ್ಸ್ ನೀಡುತ್ತಿದ್ದಾರೆ ಎಂಬ ವಿಚಾರ ಕೆಲ ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ. ಈ ವಿಚಾರ, ನಟಿಯ ಗಮನಕ್ಕೂ ಬಂದಿದೆ. ಹಾಗಾಗಿ ಪತಿ ರಾಹುಲ್‌ಗೆ ಡಿವೋರ್ಸ್ (Divorce) ನೀಡ್ತಾ ಇರೋದು ನಿಜಾನಾ.? ಎಂಬ ಸುದ್ದಿಗೆ ನಟಿ ಆಸಿನ್ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ:ಕಾಲಿವುಡ್ ಸ್ಟಾರ್ ಕಾಮಿಡಿಯನ್‌ಗೆ ಸಾಧು ಕೋಕಿಲ ಪುತ್ರ ಆ್ಯಕ್ಷನ್ ಕಟ್

    ಸಿನಿಮಾರಂಗದಿಂದ ದೂರವಾಗಿರೋ ನಟಿ ಆಸಿನ್ ಈಗ ವೈವಾಹಿಕ ಬದುಕಿನ ವಿಚಾರವಾಗಿ ಸದ್ದು ಮಾಡ್ತಿದ್ದಾರೆ. ಆಸಿನ್ ಅವರ ವೈವಾಹಿಕ ಜೀವನದಲ್ಲಿ ಬಿರುಗಾಳಿ ಎದ್ದಿದೆ ಎನ್ನುವ ಸುದ್ದಿ ವೈರಲ್ ಆಗಿದ್ದು ಸದ್ಯದಲ್ಲೇ ಪತಿ ರಾಹುಲ್ ಶರ್ಮಾ ಅವರಿಂದ ವಿಚ್ಛೇದನ ಪಡೆದು ದೂರ ಆಗಲಿದ್ದಾರಂತೆ. ಮಲಯಾಳಿ ಮೂಲದ ಈ ನಟಿ ತಮಿಳು, ತೆಲುಗು ಮತ್ತು ಹಿಂದಿ ಸಿನಿಮಾರಂಗದಲ್ಲಿ ಖ್ಯಾತಿಗಳಿಸಿದ್ದರು. ತನ್ನ ಸಿನಿ ಜೀವನ ಉತ್ತುಂಗದಲ್ಲಿರುವಾಗಲೇ ಆಸಿನ್ ಮದುವೆಯಾದರು.

    ಆಸಿನ್ ಎನ್ನುವುದಕ್ಕಿಂತ ಗಜನಿ ನಟಿ ಎಂದರೆ ಎಲ್ಲರಿಗೂ ನೆನಪಾಗುತ್ತೆ. 2015ರಲ್ಲಿ ರಿಲೀಸ್ ಆಗಿದ್ದ ಗಜನಿ ಚಿತ್ರದ ಆಮೀರ್ ಖಾನ್‌ಗೆ ಅಸಿನ್ ನಾಯಕಿಯಾಗಿದ್ದರು. ನಟ ಸೂರ್ಯ ಜೊತೆ ಕಾಣಿಸಿಕೊಂಡಿದ್ದ ಆಸಿನ್ ಅಭಿಮಾನಿಗಳ ಹೃದಯ ಗೆದ್ದರು. ಈ ಸಿನಿಮಾ ಬಳಿಕ ಆಸಿನ್ ಸೌತ್‌ನಿಂದ ಬಾಲಿವುಡ್‌ಗೆ ಜಿಗಿದರು. ಹಿಂದಿಯಲ್ಲಿ ಒಂದಿಷ್ಟು ಸಿನಿಮಾ ಮಾಡುವಾಗಲೇ ಆಸಿನ್ ಮದುವೆಯಾದರು. ಇದೀಗ ಆಸಿನ್- ರಾಹುಲ್ ಇಬ್ಬರ ದಾಂಪತ್ಯ ಬದುಕು ಡಿವೋರ್ಸ್ ಹಂತಕ್ಕೆ ಬಂದಿದೆ ಎನ್ನುವ ಮಾತು ಕೆಲ ದಿನಗಳಿಂದ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ಈ ವದಂತಿ ನಟಿ ಆಸಿನ್ ಗಮನಕ್ಕೂ ಬಂದಿದ್ದು, ಡಿವೋರ್ಸ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

    ಹಬ್ಬಿರುವ ಸುದ್ದಿ ಶುದ್ಧ ಸುಳ್ಳು. ನಾವಿಬ್ಬರು ಚೆನ್ನಾಗಿದ್ದೀವಿ ಎಂದು ಆಸಿನ್ ಹೇಳಿದ್ದಾರೆ. ಆ ಮೂಲಕ ಗಾಳಿಸುದ್ದಿಗೆ ಆಸಿನ್ ಫುಲ್ ಸ್ಟಾಪ್ ಇಟ್ಟಿದ್ದಾರೆ. ನಾವೀಗ ಬೇಸಿಗೆ ರಜೆ ಕಳೆಯುತ್ತಿದ್ದೇವೆ. ನಾನು, ನನ್ನ ಪತಿ ಅಕ್ಷರಶಃ ಅಕ್ಕ-ಪಕ್ಕ ಕೂತಿದ್ದೇವೆ. ಬ್ರೇಕ್ ಫಾಸ್ಟ್ ಸವಿಯುತ್ತಿದ್ದೇವೆ. ಈ ಮಧ್ಯೆ ಕಾಲ್ಪನಿಕ ಹಾಗೂ ತಲೆಬುಡವಿಲ್ಲದ ಆಧಾರರಹಿತ ಸುದ್ದಿಯೊಂದು ನಮ್ಮ ಕಣ್ಣಿಗೆ ಬಿತ್ತು. ಇದು ನಮ್ಮ ಮದುವೆ ದಿನಗಳನ್ನು ನೆನಪಿಸುತ್ತದೆ. ಮದುವೆ ಬಗ್ಗೆ ನಮ್ಮ ಕುಟುಂಬಸ್ಥರು ಅಂದು ಮನೆಯಲ್ಲಿ ಪ್ಲಾನ್ನಿಂಗ್ ಮಾಡುತ್ತಿದ್ದಾಗ ನಾವಿಬ್ಬರು ಬ್ರೇಕಪ್ ಮಾಡಿಕೊಂಡ್ವಿ ಎಂಬ ಸುದ್ದಿ ಹಬ್ಬಿತ್ತು. ಇದೀಗ ಈ ಡಿವೋರ್ಸ್ ವದಂತಿಯಿಂದ ನಮ್ಮ ಅದ್ಭುತವಾದ ರಜಾ ದಿನದಲ್ಲಿ 5 ನಿಮಿಷ ವ್ಯರ್ಥವಾಗಿದ್ದಕ್ಕೆ ನಿರಾಶೆಗೊಂಡಿದ್ದೇನೆ ಎಂದು ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ನಟಿ ಆಸಿನ್ ಬರೆದುಕೊಂಡಿದ್ದಾರೆ. ಆ ಮೂಲಕ ತಮ್ಮ ಹಾಗೂ ಪತಿ ರಾಹುಲ್ ಶರ್ಮಾ ಸಂಬಂಧ ಗಟ್ಟಿಯಾಗಿದೆ ಅಂತಾ ಆಸಿನ್ ತಿಳಿಸಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಗಜನಿ’ ನಟಿ ಆಸಿನ್ ದಾಂಪತ್ಯದಲ್ಲಿ ಬಿರುಕು?

    ‘ಗಜನಿ’ ನಟಿ ಆಸಿನ್ ದಾಂಪತ್ಯದಲ್ಲಿ ಬಿರುಕು?

    ಜನಿ, ಲಂಡನ್ ಡ್ರೀಮ್ಸ್, ರೆಡಿ, ಹೌಸ್‌ಫುಲ್ 2 (Housefull 2) ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಆಸಿನ್ ಇದೀಗ ತಮ್ಮ ವೈವಾಹಿಕ ಬದುಕಿನ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಪತಿ ರಾಹುಲ್ ಶರ್ಮಾಗೆ(Rahul Sharma) ಆಸಿನ್ (Asin) ಡಿವೋರ್ಸ್ (Divorce) ನೀಡಲಿದ್ದಾರೆ ಎಂಬ ಸುದ್ದಿ ಇದೀಗ ಚಿತ್ರರಂಗದಲ್ಲಿ ಸುದ್ದಿಯಲ್ಲಿದ್ದಾರೆ. ಇದು ಗಾಸಿಪ್ ಪ್ರಿಯರ ಬಾಯಿಗೆ ಆಹಾರವಾಗಿದೆ.

    ಬಹುಭಾಷಾ ನಟಿ ಆಸಿನ್ ಅವರು ಕೆಲ ವರ್ಷಗಳಿಂದ ಸಿನಿಮಾ ರಂಗದಿಂದ ದೂರವಿದ್ದಾರೆ. ನಟನೆಯಿಂದ ಅಂತರ ಕಾಯ್ದುಕೊಂಡಿದ್ದಾರೆ. 2015ರಲ್ಲಿ ‘ಆಲ್ ಈಸ್ ವೆಲ್’ ಎಂಬ ಚಿತ್ರದಲ್ಲಿ ಆಸಿನ್ ನಟಿಸಿದ್ದರು. ಇದಾದ ಬಳಿಕ ಯಾವುದೇ ಸಿನಿಮಾದಲ್ಲೂ ಆಸಿನ್ ನಟಿಸಿಲ್ಲ.

    ಈಗ ವೈವಾಹಿಕ ಬದುಕಿನ ವಿಚಾರವಾಗಿ ನಟಿ ಆಸಿನ್ ಸದ್ದು ಮಾಡ್ತಿದ್ದಾರೆ. ಆಸಿನ್ ಅವರು ದಾಂಪತ್ಯದಲ್ಲಿ ಬಿರುಗಾಳಿ ಎದ್ದಿದೆ ಎನ್ನುವ ಸುದ್ದಿ ವೈರಲ್ ಆಗಿದ್ದು ಸದ್ಯದಲ್ಲೇ ಪತಿ ರಾಹುಲ್ ಶರ್ಮಾ ಅವರಿಂದ ವಿಚ್ಛೇದನ ಪಡೆದು ದೂರ ಆಗಲಿದ್ದಾರಂತೆ. ಮಲಯಾಳಿ ಮೂಲದ ಈ ನಟಿ ತಮಿಳು, ತೆಲುಗು ಮತ್ತು ಹಿಂದಿ ಸಿನಿಮಾರಂಗದಲ್ಲಿ ಖ್ಯಾತಿಗಳಿಸಿದ್ದರು. ತನ್ನ ಸಿನಿ ಜೀವನ ಉತ್ತುಂಗದಲ್ಲಿರುವಾಗಲೇ ಆಸಿನ್, ಮೈಕ್ರೋಮ್ಯಾಕ್ಸ್‌ ಸಿಇಓ ರಾಹುಲ್ ಶರ್ಮಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದನ್ನೂ ಓದಿ:ಕಿಚ್ಚನ ಮುಂದಿನ ಚಿತ್ರಕ್ಕೆ ಹೊಸ ನಿರ್ದೇಶಕ: ಅವರನ್ನ ಬಿಟ್ಟು ಇವರಾರು?

    ಆಸಿನ್ ಎನ್ನುವುದಕ್ಕಿಂತ ಗಜನಿ(Ghajini)  ನಟಿ ಎಂದರೆ ಎಲ್ಲರಿಗೂ ನೆನಪಾಗುತ್ತೆ. 2015ರಲ್ಲಿ ರಿಲೀಸ್ ಆಗಿದ್ದ ‘ಗಜನಿ’ ಚಿತ್ರದ ಆಮೀರ್ ಖಾನ್‌ಗೆ ಅಸಿನ್ ನಾಯಕಿಯಾಗಿದ್ದರು. ನಟ ಸೂರ್ಯ ಜೊತೆ ಕಾಣಿಸಿಕೊಂಡಿದ್ದ ಆಸಿನ್ ಅಭಿಮಾನಿಗಳ ಹೃದಯ ಗೆದ್ದರು. ಈ ಸಿನಿಮಾ ಬಳಿಕ ಆಸಿನ್ ಸೌತ್‌ನಿಂದ ಬಾಲಿವುಡ್‌ಗೆ ಜಿಗಿದರು. ಹಿಂದಿಯಲ್ಲಿ ಒಂದಿಷ್ಟು ಸಿನಿಮಾ ಮಾಡುವಾಗಲೇ ಆಸಿನ್ ಮದುವೆಯಾದರು. ಇದೀಗ ಆಸಿನ್-‌ ರಾಹುಲ್‌ ಇಬ್ಬರ ದಾಂಪತ್ಯ ಬದುಕು ಡಿವೋರ್ಸ್ ಹಂತಕ್ಕೆ ಬಂದಿದೆ ಎನ್ನುವ ಮಾತು ಕೇಳಿಬರುತ್ತಿದೆ. ಆಸಿನ್- ರಾಹುಲ್ ನಡುವೆ ಯಾವುದು ಸರಿ ಇಲ್ಲ ಇಬ್ಬರೂ ದೂರ ಆಗಲು ನಿರ್ಧರಿಸಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಅಷ್ಟಕ್ಕೂ ಈ ವಿಚಾರ ನಿಜಾನಾ.? ಎಂಬುದನ್ನ ಮುಂದಿನ ದಿನಗಳಲ್ಲಿ ಸ್ಪಷ್ಟಪಡಿಸಬೇಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]

  • Ghajini 2: ಅಲ್ಲು ಅರವಿಂದ್‌ ನಿರ್ಮಾಣದಲ್ಲಿ ಆಮೀರ್ ಖಾನ್

    Ghajini 2: ಅಲ್ಲು ಅರವಿಂದ್‌ ನಿರ್ಮಾಣದಲ್ಲಿ ಆಮೀರ್ ಖಾನ್

    ‘ಲಾಲ್ ಸಿಂಗ್ ಚಡ್ಡಾ’ (Lal Singh Chadha) ಸಿನಿಮಾದ ಸೋಲಿನ ನಂತರ ಆಮೀರ್ ಖಾನ್ (Aamir Khan) ಬ್ರೇಕ್ ತೆಗೆದುಕೊಂಡಿದ್ದರು. ಈ ಸಿನಿಮಾದ ಸೋಲು ಅವರನ್ನ ನಟನೆಯಿಂದ ದೂರಯುಳಿವಂತೆ ಮಾಡಿತ್ತು. ಇದೀಗ ಮತ್ತೆ ಕಂಬ್ಯಾಕ್ ಆಗುವ ಆಲೋಚನೆಯಲ್ಲಿದ್ದಾರೆ. ಸೂಪರ್ ಡೂಪರ್ ಹಿಟ್ ‘ಗಜನಿ’ ಸೀಕ್ವೆಲ್ ಮಾಡಲು ಆಮೀರ್ ಮುಂದಾಗಿದ್ದಾರೆ.

    2005ರಲ್ಲಿ ಬಂದ ತಮಿಳಿನ ‘ಗಜನಿ’ (Ghajini) ಚಿತ್ರವನ್ನು ಅದೇ ಹೆಸರಲ್ಲಿ ಹಿಂದಿಗೆ 2008ರಲ್ಲಿ ರಿಮೇಕ್ ಮಾಡಲಾಯಿತು. ತಮಿಳಿನಲ್ಲಿ (Tamil) ಸೂರ್ಯ (Suriya)  ಮಾಡಿದ್ದ ಪಾತ್ರವನ್ನು ಹಿಂದಿಯಲ್ಲಿ ಆಮಿರ್ ಖಾನ್ ಮಾಡಿದರು. ಈಗ ಚಿತ್ರಕ್ಕೆ ಈಗ ಸೀಕ್ವೆಲ್ ತರಲು ಸಿದ್ಧತೆ ನಡೆದಿದೆ. ಆಮಿರ್ ಖಾನ್ ಅವರು ಸೀಕ್ವೆಲ್‌ನಲ್ಲಿ ನಟಿಸುತ್ತಿದ್ದು, ಪುಷ್ಪ ಸ್ಟಾರ್ ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ಅವರು ಸಿನಿಮಾ ನಿರ್ಮಾಣ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:ಆರ್.ಎಲ್ ಜಾಲಪ್ಪ ವಿರುದ್ಧ ಸ್ಪರ್ಧಿಸಿ ಸೋತಿದ್ದರು ಹಿರಿಯ ನಟ ಶ್ರೀನಿವಾಸ್ ಮೂರ್ತಿ

    ತಮಿಳಿನ ‘ಗಜನಿ’ (Ghajini)  ಚಿತ್ರವನ್ನು ನಿರ್ಮಾಣ ಮಾಡಿದ್ದು ಸೇಲಮ್ ಚಂದ್ರಶೇಖರನ್. ಅವರು ಈಗ ನಮ್ಮೊಂದಿಗೆ ಇಲ್ಲ. 2021ರಲ್ಲಿ ಅವರು ತೀರಿಕೊಂಡರು. ಈ ಚಿತ್ರಕ್ಕೆ ಸೀಕ್ವೆಲ್ ಮಾಡಲು ಅಲ್ಲು ಅರವಿಂದ್ ಮುಂದಾಗಿದ್ದಾರೆ. ಈ ವಿಷ್ಯವಾಗಿಯೇ ಆಮೀರ್ ಅವರು ಪದೇ ಪದೇ ಹೈದರಾಬಾದ್‌ಗೆ ಭೇಟಿ ನೀಡ್ತಿದ್ದಾರೆ. ಕಥೆಯ ಬಗ್ಗೆ ತಂಡದ ಜೊತೆ ಆಮೀರ್ ಚರ್ಚೆ ಮಾಡ್ತಿದ್ದಾರೆ. ಹಿಂದಿಯ ‘ಗಜನಿ’ ಸಿನಿಮಾದಲ್ಲಿ ಆಮಿರ್ ಖಾನ್ (Aamir Khan) ಅವರು ಸಂಜಯ್ ಸಿಂಘಾನಿಯಾ ಆಗಿ ಕಾಣಿಸಿಕೊಂಡಿದ್ದರು. ಈಗ ಚಿತ್ರದ ಕಥೆ ಮುಂದುವರಿಯಲಿದೆ. ಈ ರೀತಿಯಲ್ಲಿ ಕಥೆ ಸಿದ್ಧಪಡಿಸಲಾಗಿದೆ ಎನ್ನಲಾಗುತ್ತಿದೆ.

    ಅಲ್ಲು ಅರವಿಂದ್ ಅವರು ಖ್ಯಾತ ನಿರ್ಮಾಪಕರಲ್ಲಿ ಒಬ್ಬರು. ಈಗಾಗಲೇ ಹಲವು ಸಿನಿಮಾಗಳನ್ನು ಅವರು ನಿರ್ಮಾಣ ಮಾಡಿದ್ದಾರೆ. ಈಗ ಅವರು ‘ಗಜನಿ 2’ ಚಿತ್ರವನ್ನು ನಿರ್ಮಿಸಲು ಹೊರಟಿದ್ದಾರೆ ಎನ್ನಲಾಗುತ್ತಿದೆ. ನಟ ಆಮೀರ್‌ಗೂ ಗಜನಿ ಪಾರ್ಟ್ 2 ಕಥೆ ಸಾಕಷ್ಟು ಇಷ್ಟ ಆಗಿದೆಯಂತೆ. ಈ ಚಿತ್ರದ ಭಾಗವಾಗಲು ಓಕೆ ಎಂದಿದ್ದಾರೆ. ಸದ್ಯ ಈ ಬಗ್ಗೆ ಅಂತೆ- ಕಂತೆ ಸುದ್ದಿ ಹರಿದಾಡುತ್ತಿದೆ. ಚಿತ್ರತಂಡ ಅಧಿಕೃತ ಅಪ್‌ಡೇಟ್ ನೀಡುವವೆರೆಗೂ ಕಾದು ನೋಡಬೇಕಿದೆ.