Tag: ಗಗನಯಾನಾ

  • ಖಾಸಗಿ ಬಾಹ್ಯಾಕಾಶ ಯಾನಕ್ಕೆ ಸುನಿತಾ ವಿಲಿಯಮ್ಸ್ ಆಯ್ಕೆ

    ಖಾಸಗಿ ಬಾಹ್ಯಾಕಾಶ ಯಾನಕ್ಕೆ ಸುನಿತಾ ವಿಲಿಯಮ್ಸ್ ಆಯ್ಕೆ

    ನ್ಯೂಯಾರ್ಕ್: ಅಮೆರಿಕ ಬಾಹ್ಯಕಾಶ ಸಂಸ್ಥೆ(ನಾಸಾ)ಯ ಮತ್ತೊಂದು ಗಗನಯಾತ್ರೆಯಲ್ಲಿ ಭಾರತ ಮೂಲದ ಸುನಿತಾ ವಿಲಿಯಮ್ಸ್ ಕೂಡ ಸ್ಥಾನ ಪಡೆದುಕೊಂಡಿದ್ದಾರೆ.

    2019 ರ ಮಧ್ಯಂತರದಲ್ಲಿ ನಾಸಾವು ತನ್ನ ಮೊದಲ ವಾಣಿಜ್ಯ ಯಾತ್ರೆಯನ್ನು ಒಂಬತ್ತು ಗಗನಯಾತ್ರಿಗಳನ್ನು ಒಳಗೊಂಡ ತಂಡ ಕೈಗೊಳ್ಳಲಿದ್ದು, ಈ ತಂಡದಲ್ಲಿ ಭಾರತ ಮೂಲದ ಸುನಿತಾ ವಿಲಿಯಮ್ಸ್ ಕೂಡ ಒಬ್ಬರಾಗಿದ್ದಾರೆ. ಇವರ ತಂದೆಯವರು ಮೂಲತಃ ಗುಜರಾತಿನ ಮೂಲದವರಾಗಿದ್ದಾರೆ. ಸುನಿತಾರವರು ಸದ್ಯ ಅಮೆರಿಕಾದ ನೌಕಾದಳದ ಕೋ ಪೈಲೆಟ್ ಹಾಗೂ ನಾಸಾದ ನಿವೃತ್ತ ರ್ಯಾಂಕ್ ಒನ್ ಅಧಿಕಾರಿಯಾಗಿದ್ದಾರೆ.

    ಬೋಯಿಂಗ್ ಮತ್ತು ಸ್ಪೇಸ್ ಎಕ್ಸ್ ಜಂಟಿಯಾಗಿ ಅಭಿವೃದ್ಧಿಪಡಿಸಿದ ಹೊಸ ನೌಕೆಯಲ್ಲಿ 9 ಗಗನಯಾತ್ರಿಗಳ ತಂಡವು ಅಧಿಕೃತ ಪ್ರವಾಸ ಕೈಗೊಳ್ಳಲಿದೆ ಎಂದು ನಾಸಾ ತಿಳಿಸಿದೆ.

    ಲಾಂಚ್ ಅಮೆರಿಕ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ನಾಸಾದ ಆಡಳಿತ ಮುಖ್ಯಸ್ಥ ಜಿಮ್ ಬ್ರಿಡೆನ್ ಸ್ಟೈನ್‍ರವರು, ಅಮೆರಿಕ ನೆಲದಿಂದ ದೇಶದ ಗಗನಯಾತ್ರಿಗಳನ್ನು ಅಮೆರಿಕದ ರಾಕೆಟ್ ಮೂಲಕ ಕಳುಹಿಸಿಕೊಡುತ್ತಿದ್ದೇವೆ. ಸುರಕ್ಷತೆ ಹಾಗೂ ಕಾರ್ಯನಿರ್ವಹಣಾ ಅಗತ್ಯತೆಗಳನ್ನು ಪೂರೈಸಲು ಇತರೆ ಸಹಯೋಗ ಸಂಸ್ಥೆಗಳ ಜೊತೆ ನಾಸಾವು ನೌಕೆಯನ್ನು ವಿನ್ಯಾಸ, ಅಭಿವೃದ್ಧಿ ಹಾಗೂ ಪರೀಕ್ಷಾ ವಿಧಾನಗಳಲ್ಲಿ ಜತೆಯಾಗಿ ಕೆಲಸ ಮಾಡಿದೆ ಎಂದು ಹೇಳಿದ್ದಾರೆ.

    ಸುನಿತಾ ವಿಲಿಯಮ್ಸ್ ಅವರೊಂದಿಗೆ ನಾಸಾದ ಖಗೋಳ ವಿಜ್ಞಾನಿಗಳಾದ ರಾಬರ್ಟ್ ಬೆಹೆಂಕೇನ್, ಡಗ್ಲಸ್ ಹರ್ಲೆ, ಏರಿಕಗ್ ಬೊಯೆ, ನಿಕೊಲೆ ಮನ್, ಬೋಯಿಂಗ್‍ನ ಅಧಿಕಾರಿ ಕ್ರಿಸ್ಟೋಫರ್ ಫರ್ಗುಸನ್ ರವರು ಸಹ ಈ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews