Tag: ಗಗನಯಾನ

  • 2027ಕ್ಕೆ ಮಾನವ ಸಹಿತ ಗಗನಯಾನಕ್ಕೆ ಇಸ್ರೋ ಸಿದ್ಧತೆ

    2027ಕ್ಕೆ ಮಾನವ ಸಹಿತ ಗಗನಯಾನಕ್ಕೆ ಇಸ್ರೋ ಸಿದ್ಧತೆ

    ನವದೆಹಲಿ: ಚಂದ್ರಯಾನ-3 ಮೂಲಕ ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದ್ದ ಇಸ್ರೋ (ISRO) ಈಗ ಮತ್ತೊಂದು ಇತಿಹಾಸ ಬರೆಯಲು ಸಿದ್ಧವಾಗಿದೆ. 2027ಕ್ಕೆ ಮಾನವ ಸಹಿತ ಗಗನಯಾನಕ್ಕೆ ಇಸ್ರೋ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಇಸ್ರೋ ಅಧ್ಯಕ್ಷ ವಿ.ನಾರಾಯಣ್ (V Narayan) ಅವರು ತಿಳಿಸಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2027ಕ್ಕೆ ಮಾನವ ಸಹಿತ ಗಗನಯಾನಕ್ಕೆ ಇಸ್ರೋ ಸಿದ್ಧತೆ ನಡೆಸಿದೆ. ಗಗನಯಾನಿಗಳ ಸುರಕ್ಷತಾ ದೃಷ್ಟಿಯಿಂದ ಸಾಕಷ್ಟು ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗುತ್ತಿದೆ. ತುರ್ತು ಸಂದರ್ಭಗಳಿಂದ ಬಾಹ್ಯಾಕಾಶಯಾನವು ವಿಫಲಗೊಂಡರೆ, ಆಂತರಿಕ್ಷ ನೌಕೆಯಲ್ಲಿನ ಕ್ರೂ ಮಾಡ್ಯೂಲ್‌ನಿಂದ ಗಗನಯಾನಿಗಳನ್ನು ಕಾಪಾಡಬಹುದು. ಸುರಕ್ಷಿತವಾಗಿ ಪಾರುಮಾಡುವ ಕ್ರೂ ಎಸ್ಕೇಪ್ ಸಿಸ್ಟಮ್ ಸೇರಿ ಎಲ್ಲವನ್ನೂ ಅತ್ಯಂತ ಎಚ್ಚರಿಕೆಯಿಂದ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.ಇದನ್ನೂ ಓದಿ: ಟ್ರಂಪ್‌ ಆಸೆಗೆ ತಣ್ಣೀರು – ಮಲೇಷ್ಯಾಗೆ ಬರಲ್ಲ ಎಂದ ಮೋದಿ

    ಭಾರತವು 2035ರ ವೇಳೆಗೆ ತನ್ನದೇ ಆದ ಬಾಹ್ಯಾಕಾಶ ನಿಲ್ದಾಣವನ್ನು ಸ್ಥಾಪಿಸಲಿದೆ. ವಿಕಸಿತ ಭಾರತ್ 2047 ಅಡಿಯಲ್ಲಿ ಇಸ್ರೋದಿಂದ ಇಎಸ್‌ಟಿಐಸಿ 2025 ಕಾನ್ ಕ್ಲೇವ್‌ಗೆ ತಯಾರಿ ನಡೆದಿದೆ. ನವೆಂಬರ್ 3 ರಿಂದ 5 ರವರೆಗೆ ದೆಹಲಿಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಪ್ರಧಾನಿ ಮೋದಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದಿದ್ದಾರೆ.

    ಈಗಾಗಲೇ ಶೇ.90ರಷ್ಟು ಎಲ್ಲವೂ ಪೂರ್ಣಗೊಂಡಿದ್ದು, ಇನ್ನೂ ಕೊನೆಯ ಹಂತದ ಸಿದ್ಧತೆ ಬಾಕಿಯಿದೆ ಎಂದು ಮಾಹಿತಿ ನೀಡಿದ್ದಾರೆ.ಇದನ್ನೂ ಓದಿ: ಶಾಸ್ತ್ರೋಕ್ತವಾಗಿ ಮುಚ್ಚಿದ ಕೇದಾರನಾಥ ಧಾಮದ ಬಾಗಿಲು

  • 2027ಕ್ಕೆ ಚಂದ್ರಯಾನ-4, 2026ಕ್ಕೆ ಗಗನಯಾನ: ಜಿತೇಂದ್ರ ಸಿಂಗ್‌

    2027ಕ್ಕೆ ಚಂದ್ರಯಾನ-4, 2026ಕ್ಕೆ ಗಗನಯಾನ: ಜಿತೇಂದ್ರ ಸಿಂಗ್‌

    ನವದೆಹಲಿ: ಚಂದ್ರನ ಮೇಲ್ಮೈನಲ್ಲಿನ ಕಲ್ಲುಗಳನ್ನು ಭೂಮಿಗೆ ಹೊತ್ತು ತರುವ ಚಂದ್ರಯಾನ-4 ಮಿಷನ್‌ (Chandrayaan-4 Space Missions) ಅನ್ನು 2027ರ ವೇಳೆ ಜಾರಿಮಾಡಲಾಗುವುದು ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್‌ (Jitendra Singh) ಹೇಳಿದ್ದಾರೆ.

    ಕಲ್ಲುಗಳ ಮಾದರಿಗಳನ್ನು ಹೊರುವ ಶಕ್ತಿ ಹೊಂದಿರುವ ಎರಡು ಪ್ರತ್ಯೇಕ ರಾಕೆಟ್‌ಗಳನ್ನು ಉಡ್ಡಯನ ಮಾಡಲಾಗುವುದು. ಈ ರಾಕೆಟ್‌ಗಳಲ್ಲಿ ಐದು ವಿವಿಧ ಕಾಂಪೋನೆಂಟ್‌ಗಳು ಇರಲಿವೆ. ಇವುಗಳನ್ನು ಕ್ಷಕೆಯಲ್ಲಿ ಜೋಡಿಸಲಾಗುವುದು ಎಂದಿದ್ದಾರೆ.

    ಅಲ್ಲದೇ ಮುಂದಿನ ವರ್ಷ ಮಾನವರವನ್ನು ಬಾಹ್ಯಾಕಾಶಕ್ಕೆ ಕಳುಹಿಸಿ, ಸುರಕ್ಷಿತವಾಗಿ ವಾಪಸ್‌ ಕರೆಸಿಕೊಳ್ಳುವ ʻಗಗನಯಾನʼ ಮಿಷನ್‌ ಅನ್ನು ಕೂಡ ಜಾರಿ ಮಾಡಲಾಗುವುದು. 2026ರಲ್ಲಿ ʻಸಮುದ್ರಯಾನʼ ಮಿಷನ್‌ ಅನ್ನೂ ಜಾರಿ ಮಾಡಲಿದ್ದೇವೆ. ಸಮುದ್ರದ 6,000 ಮೀಟರ್‌ನಷ್ಟು ಆಳಕ್ಕೆ ಮೂವರು ವಿಜ್ಞಾನಿಗಳು ತೆರಳಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

    ʻರೊಬೊಟ್ ವ್ಯೂಮಿತ್ರಾʼವನ್ನು ಗಗನಯಾನಕ್ಕೆ ಕಳುಹಿಸುವ ಮಹತ್ವದ ಕಾರ್ಯ ಇದೇ ವರ್ಷ ನಡೆಯಲಿದೆ. 1969ರಲ್ಲಿ ಇಸ್ರೋ ಸ್ಥಾಪನೆಯಾದರೂ ಇದರ ಮೊದಲ ಉಡ್ಡಯನ ಕೇಂದ್ರವು 1993ರಲ್ಲಿ ಸ್ಥಾಪನೆಯಾಯಿತು. ಇಸ್ರೋ ಸ್ಥಾಪನೆಯಿಂದ 2014ರ ವರೆಗೆ ಭಾರತೀಯ ಬಾಹ್ಯಾಕಾಶ ಕ್ಷೇತ್ರವು ಅಭಿವೃದ್ಧಿ ಹೊಂದಿದ್ದಕ್ಕಿಂತ ಹೆಚ್ಚಿನ ಅಭಿವೃದ್ಧಿಯು ಕಳೆದ 10 ವರ್ಷಗಳಲ್ಲಾಗಿದೆ ಎಂದರು.

  • ಗಗನಯಾನ ಸಾಹಸಿಗರಿಗೆ ಪೌಷ್ಠಿಕ ಆಹಾರ; ಇದು ಎಲ್ಲಿಂದ – ಹೇಗೆ ತಯಾರಾಗುತ್ತೆ ಗೊತ್ತಾ?

    ಗಗನಯಾನ ಸಾಹಸಿಗರಿಗೆ ಪೌಷ್ಠಿಕ ಆಹಾರ; ಇದು ಎಲ್ಲಿಂದ – ಹೇಗೆ ತಯಾರಾಗುತ್ತೆ ಗೊತ್ತಾ?

    ಭಾರತೀಯ ಬಾಹ್ಯಾಕಾಶ ಮತ್ತು ಸಂಶೋಧನಾ ಸಂಸ್ಥೆಯು (ISRO) ಮಹತ್ವಾಕಾಂಕ್ಷೆಯ ಗಗನಯಾನಕ್ಕೆ (Mission Gaganyaan) ಸಜ್ಜಾಗುತ್ತಿದೆ. ಈಗಾಗಲೇ ಅಂತರಿಕ್ಷಯಾನಿಗಳ ಹೆಸರು ಹಾಗೂ ವಿವರಗಳನ್ನೂ ಬಹಿರಂಗಪಡಿಸಿದೆ.

    ಗ್ರೂಪ್‌ ಕ್ಯಾಪ್ಟನ್‌ಗಳಾದ ಪ್ರಶಾಂತ್ ಬಾಲಕೃಷ್ಣನ್ ನಾಯರ್ (Prashanth Nair), ಅಂಗದ್ ಪ್ರತಾಪ್, ಅಜಿತ್ ಕೃಷ್ಣನ್ ಮತ್ತು ವಿಂಗ್‌ ಕಮಾಂಡರ್‌ ಶುಭಾಂಶು ಶುಕ್ಲಾ (Shubhanshu Shukla) ಅವರು ಬಾಹ್ಯಾಕಾಶಕ್ಕೆ ಭಾರತದ ಮೊದಲ ಮಾನವ ಸಹಿತ ಗಗನಯಾನ ಮಿಷನ್‌ನಲ್ಲಿ ಗಗನಯಾತ್ರಿಗಳಾಗಿ ಆಯ್ಕೆಯಾಗಿದ್ದಾರೆ. ಗಗನಯಾತ್ರಿಗಳ ಆಯ್ಕೆಯು ಐಎಎಫ್‌ನ ಇನ್‌ಸ್ಟಿಟ್ಯೂಟ್ ಆಫ್ ಏರೋಸ್ಪೇಸ್ ಮೆಡಿಸಿನ್‌ನಲ್ಲಿ ಇತ್ತೀಚೆಗೆ ನಡೆಯಿತು. ಇದನ್ನೂ ಓದಿ: ಆದಿತ್ಯ ಮಿಷನ್‌ ಉಡಾವಣೆಯಾದ ದಿನವೇ ಇಸ್ರೋ ಮುಖ್ಯಸ್ಥ ಸೋಮನಾಥ್‌ಗೆ ಕ್ಯಾನ್ಸರ್‌

    ಭಾರತದ ಮೊಟ್ಟ ಮೊದಲ ಗಗನಯಾತ್ರೆಗೆ ಆಯ್ಕೆಯಾಗಿರುವ ನಾಲ್ವರು 140 ಕೋಟಿ ಭಾರತೀಯರ ಕನಸನ್ನು ನಭಕ್ಕೆ ಕೊಂಡೊಯ್ಯಲಿದ್ದಾರೆ. ಅಂದು ರಾಕೆಟ್‌ ಸೃಷ್ಟಿಸುವ ಸದ್ದಿಗೆ ಅವರ ಕಿವಿ ತಡೆದುಕೊಳ್ಳಬೇಕು, ಹೃದಯ ಬಡಿತ ಅಷ್ಟೇ ಸ್ಥಿರತೆ ಕಾಯ್ದುಕೊಳ್ಳಬೇಕು. ಇಸ್ರೋ ವಿಜ್ಞಾನಿಗಳಿಗೆ ಇದು ಕೇವಲ ಉಡಾವಣೆಯಷ್ಟೇ ಅಲ್ಲ. ಯಾತ್ರಿಕರು ಗಗನ ತಲುಪಿ ಮೂರ್ನಾಲ್ಕು ದಿನ ಅವರು ಕುಳಿತ ಕ್ಯಾಪ್ಸುಲ್‌ 300 ಕಿಮೀ ಆಚೆಗೆ ಸುತ್ತಾಡಿ, ಮರಳಿ ಭೂಮಿಗೆ ಬರುವವರೆ ಅವರ ಯೋಗಕ್ಷೇಮ ಅಷ್ಟೇ ಮುಖ್ಯ. ಅದಕ್ಕಾಗಿ ಈಗಾಗಲೇ ಇಸ್ರೋ ಸೂಕ್ತ ತರಬೇತಿಯನ್ನೂ ಕೊಡಿಸುತ್ತಿದೆ.

    ಕಳೆದ 50 ವರ್ಷಗಳಲ್ಲಿ ಹಲವಾರು ಉಪಗ್ರಹಗಳನ್ನು ಇಸ್ರೋ ಕಕ್ಷೆಗೆ ಸೇರಿಸಿದೆ. ಆದ್ರೆ ಅವುಗಳನ್ನು ಎಲೆಕ್ಟ್ರಾನಿಕ್‌ ಸಿಗ್ನಲ್‌ ಬಳಸಿ ನಿಯಂತ್ರಿಸುತ್ತಿದೆ. ಮಂಗಳನ ಕಕ್ಷೆಗೆ ನೌಕೆ ಬಿಟ್ಟಿದ್ದು, ಚಂದ್ರನ ಮೇಲೆ ರೋವರ್‌ ಇರಿಸಿದ್ದು, ಸೂರ್ಯನ ಅಧ್ಯಯನಕ್ಕೆ ನೌಕೆ ಕಳುಹಿಸಿರುವುದು ಇದೆಲ್ಲವೂ ಇಸ್ರೋನ ಹೆಮ್ಮೆ. ಆದ್ರೆ ಗಗನಯಾನ ಇದೆಲ್ಲದಕ್ಕಿಂತಲೂ ಭಿನ್ನ. ಏಕೆಂದರೆ ಭಾರತ ಈವರೆಗೆ ಗಗನಯಾನಕ್ಕೆ ಯಾವುದೇ ಜೀವಿಯನ್ನು ಕಳುಹಿಸಿಲ್ಲ. ಹಾಗಾಗಿ ಯಾವ ಅನುಭವಗಳನ್ನು ಆಧಾರವಾಗಿಟ್ಟುಕೊಂಡು ಭಾರತ ಗಗನಯಾನಕ್ಕೆ ವಿಜ್ಞಾನಿಗಳನ್ನ ಕಳುಹಿಸಲಿದೆ ಎಂಬುದೂ ಅಷ್ಟೇ ಕುತೂಹಲ. ಇದರೊಂದಿಗೆ ಗಗನಯಾತ್ರಿಗೆ ಹೋಗುವವರ ಆರೋಗ್ಯ ದೃಷ್ಟಿಯಿಂದ ಅವರಿಗೆ ನೀಡಬೇಕಾದ ಆಹಾರ ಕ್ರಮದ ಬಗ್ಗೆಯೂ ಕಾಳಜಿ ಇರುತ್ತದೆ. ಅಂತರಿಕ್ಷ ಯಾನ ಮುಗಿಯುವವರೆಗೆ ಅವರು ಯಾವ ರೀತಿಯ ಆಹಾರ ಸೇವನೆ ಮಾಡಬೇಕು? ಏನೇನು ಆಹಾರ ಸೇವಿಸುತ್ತಾರೆ ಅನ್ನೋದು ಸಹ ಕುತೂಹಲವಿರುತ್ತದೆ.

    ಗಗನಯಾನಿಗಳ ಆಹಾರ ಕ್ರಮ ಹೇಗಿರುತ್ತೆ? ಎಲ್ಲಿಂದ ತಯಾರಾಗುತ್ತೆ?
    ಗಗನಯಾತ್ರಿಗಳಿಗೆ ಆಹಾರ ತಯಾರಿಸುವ ಹೊಣೆಯನ್ನು ಹೈದರಾಬಾದಿನ ಐಸಿಎಂಆರ್ – ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್ (ಎನ್ಐಎನ್) ಸಂಸ್ಥೆಯು ಹೊತ್ತಿದೆ. ಇಲ್ಲಿನ ಸಂಶೋಧಕರು ಗಗನಯಾತ್ರಿಗಳೊಡನೆ ಸಹಯೋಗ ಹೊಂದಿ, ಅವರಿಗಾಗಿ ಅವಶ್ಯಕ ಪೋಷಕಾಂಶಗಳನ್ನು ಹೊಂದಿರುವ ಆಹಾರ ಕ್ರಮವನ್ನು ರೂಪಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಗಗನಯಾತ್ರಿಗಳು ಬಾಹ್ಯಾಕಾಶದಿಂದ ಮರಳಿದ ಬಳಿಕವೂ ಅವರ ಆಹಾರ ಕ್ರಮದೆಡೆಗೆ ವಿಶೇಷ ನಿಗಾವನ್ನು ಸಹ ವಹಿಸಲಾಗುತ್ತಿದೆ.

    ಬಾಹ್ಯಾಕಾಶ ಯಾನ ತರಬೇತಿ ಸಂದರ್ಭದಲ್ಲಿ, ಬಾಹ್ಯಾಕಾಶಯಾನ ಸಂದರ್ಭದಲ್ಲಿ ಮತ್ತು ಹಾರಾಟ ಹಂತಗಳ ಬಳಿಕವು ಅವರ ಶಕ್ತಿ ಮಟ್ಟವನ್ನು ಅಳೆಯಬೇಕಾಗುತ್ತದೆ. ಅದಕ್ಕಾಗಿಯೇ ಆಹಾರ ಕ್ರಮವು ಮುಖ್ಯವಾಗಿದೆ. ಇದು ಅವರ ಆರೋಗ್ಯ, ದೈನಂದಿನ ಚಟುವಟಿಕೆಗಳು, ಜೀವರಾಸಾಯನಿಕ ಮತ್ತು ಶಾರೀರಿಕ ಸೂಚಕಗಳ ಪರೀಕ್ಷೆಗಳನ್ನು ಒಳಗೊಂಡಿದ್ದು, ಇದರ ಮೌಲ್ಯಮಾಪನದ ಆಧಾರದಲ್ಲಿ ಆಹಾರ ಯೋಜನೆಯನ್ನು ರೂಪಿಸಲಾಗುತ್ತದೆ. ಇದನ್ನೂ ಓದಿ: ನೌಕಾಪಡೆಗೆ ಎಂಹೆಚ್ 60ಆರ್ ಸೀಹಾಕ್ ಹೆಲಿಕಾಪ್ಟರ್ ನಿಯೋಜನೆಗೆ ಸಿದ್ಧತೆ – ಭಾರತಕ್ಕೆ ಭೀಮ ಬಲ

    ವಿಜ್ಞಾನಿಗಳು ಈಗಾಗಲೇ ಗಗನಯಾತ್ರಿಗಳ ಆಹಾರ ಆದ್ಯತೆಗಳ ಕುರಿತು, ರುಚಿಗಳ ಕುರಿತು ಮಾಹಿತಿ ಕಲೆಹಾಕಿದ್ದಾರೆ. ಇದು ಸಸ್ಯಾಹಾರ ಮತ್ತು ಮಾಂಸಾಹಾರಗಳನ್ನೂ ಒಳಗೊಂಡಿರುತ್ತದೆ. ಗಗನಯಾತ್ರಿಗಳು ತಮ್ಮ ಪ್ರಯಾಣದ ಮೊದಲ ದಿನದಂದು ತಾಜಾ ತರಕಾರಿಗಳನ್ನು ಸೇವಿಸುವ ಅವಕಾಶವಿದೆಯಾದರೂ, ಇನ್ನುಳಿದ ಪ್ರಯಾಣದ ಸಂದರ್ಭದಲ್ಲಿ ತಾವು ಕೊಂಡೊಯ್ದ ಆಹಾರವನ್ನೇ ಸೇವಿಸಬೇಕಾಗುತ್ತದೆ. ಅವರಿಗೆ ನೀಡಿರುವ ಆಹಾರ ಆಯ್ಕೆಗಳಲ್ಲಿ ಬಿರಿಯಾನಿಯೂ ಒಂದಾಗಿದೆ ಎಂದು ಆಹಾರ ಸಂಶೋಧಕರು ತಿಳಿಸಿದ್ದಾರೆ.

    ಭಾರತದ ಗಗನಯಾನಕ್ಕೆ ಆಧಾರ ಏನು?
    ಈ ಹಿಂದೆ ರಷ್ಯಾದ ದತ್ತಾಂಶಗಳನ್ನೇ ಆಧರಿಸಿ ಚೀನಾ ಬಾಹ್ಯಾಕಾಶಕ್ಕೆ ಜಿಗಿದಿತ್ತು. 20023ರ ಅಕ್ಟೋಬರ್‌ 15 ರಂದು ಶೆಂಝೌ-15 ನೌಕೆ ಮೂಲಕ ಚೀನಾದ ಗಗನ ಯಾತ್ರಿಕ ಯಾಂಗ್‌ ಲಿವೆಯಿ 21 ಗಂಟೆಗಳಲ್ಲಿ ಭೂಮಿಗೆ 14 ಸುತ್ತುಗಳನ್ನು ಪೂರ್ಣಗೊಳಿಸಿದ್ದರು. ಬಳಿಕ ಪ್ಯಾರಾಚುಟ್‌ ಮೂಲಕ ಇನ್ನರ್‌ ಮಂಗೋಲಿಯಾದ ಮರುಭೂಮಿಯಲ್ಲಿ ಯಶಸ್ವಿಯಾಗಿ ಇಳಿದು ಇತಿಹಾಸ ನಿರ್ಮಿಸಿದ್ದರು. ಲಿವೆಯಿಗೆ ರಷ್ಯಾದಲ್ಲೇ ಚೀನಾ ತರಬೇತಿ ಕೊಡಿಸಿತ್ತು. ಆದ್ರೆ ಪ್ರಸ್ತುತ ಭಾರತದ ಗಗನಯಾತ್ರಿಕರಿಗೂ ರಷ್ಯಾ ತನ್ನ ನೆಲದಲ್ಲಿಯೇ ತರಬೇತಿ ನೀಡಿದೆ. ಸೆಂಟ್ರಿಫ್ಯೂಜ್‌ ಸಿಮ್ಯೂಲೆಟರ್‌ಗಳಲ್ಲಿ ಯಾತ್ರಿಕರ ಗುರುತ್ವಬಲದ ತಾಳ್ಮೆ ಎಷ್ಟು ಎಂಬುದನ್ನು ರಷ್ಯಾ ನೆಲದಲ್ಲಿ ಪರೀಕ್ಷಿಸಿದೆ. ಅಲಲ್ದೇ ಅಲ್ಲಿನ ಕೆಲವು ಸಾಧನಗಳಲ್ಲಿ ದೇಹದ ಮೇಲೆ ಪೋಷಾಕಿನ ಭಾರವನ್ನೂ ಹೊತ್ತು ಕಡಿಮೆ ತೇವಾಂಶ, ತಾಪಮಾನ ಹಾಗೂ ಗಾಳಿಯ ಒತ್ತಡಗಳಲ್ಲಿನ ದೇಹ ನಿಯಂತ್ರಣದ ಅನುಭವವನ್ನೂ ಯಾತ್ರಿಕರಿಗೆ ನೀಡಲಾಗಿದೆ. ಮಾನವನ ದೇಹದ ಮೇಲೆ ಬಾಹ್ಯಾಕಶ ಪರಿಣಾಮಗಳ ಬಗ್ಗೆ ವಿವರವಾದ ದತ್ತಾಂಶ ಈಗಾಗಲೇ ಇಸ್ರೋ ಬಳಿ ಲಭ್ಯವಿದೆ, ಈ ದತ್ತಾಂಶವನ್ನು ಪರೀಕ್ಷಿಸಲು ಇಸ್ರೋ ರೊಬೊಟಿಕ್‌ ತಂತ್ರಜ್ಞಾನದ ಸೇವೆಗಳನ್ನು ವ್ಯಾಪಕವಾಗಿ ಬಳಸಿಕೊಳ್ಳಲಿದೆ.

    ಸಾಹಸಕ್ಕೆ ಸಿದ್ಧವಾಗಿರುವವರು ಇವರೇ..
    ಗ್ರೂಪ್‌ ಕ್ಯಾಪ್ಟನ್‌ ಪ್ರಶಾಂತ್‌ ಬಾಲಕೃಷ್ಣನ್‌ ನಾಯರ್‌:
    ಪ್ರಶಾಂತ್‌ ಬಾಲಕೃಷ್ಣನ್‌ ನಾಯರ್‌ 1976ರ ಆಗಸ್ಟ್‌ 26ರಂದು ಕೇರಳದ ತಿರುವಾಳಿಯಾಡ್‌ನಲ್ಲಿ ಜನಿಸಿದರು. 1998ರ ಡಿಸೆಂಬರ್‌ 19ರಂದು ಐಎಎಫ್‌ ಫೈಟರ್‌ ಜೆಟ್‌ ಪೈಲಟ್‌ ಆಗಿ ವೃತ್ತಿ ಆರಂಭಿಸಿದರು. ʻಟೆಸ್ಟ್‌ ಪೈಲಟ್‌ ಮತ್ತು ಕ್ಯಾಟ್‌ ಎʼ ಹಾರಾಟ ತರಬೇತುರಾರರಾಗಿರುವ ಪ್ರಶಾಂತ್‌ 3,000 ಗಂಟೆಗಳ ಒಟ್ಟು ವಿಮಾನ ಚಾಲನೆಯ ಅನುಭವ ಹೊಂದಿದ್ದಾರೆ. ಏರ್ಫೋರ್ಸ್‌ ಅಕಾಡೆಮಿಯಿಂದ ʻಸ್ಕ್ವಾಡ್‌ ಆಫ್‌ ಆನರ್‌ʼ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಪಾಕ್‌ ವಶದಲ್ಲಿದ್ದ ‘ಸಿಂಗಂ’ ವಿಂಗ್‌ ಕಮಾಂಡರ್‌ ತಾಯ್ನಾಡಿಗೆ ವಾಪಸ್‌ – ಭಾರತದ ಗೆಲುವಿಗೆ 5ರ ಸಂಭ್ರಮ

    ಗ್ರೂಪ್‌ ಕ್ಯಾಪ್ಟನ್‌ ಅಜಿತ್‌ ಕೃಷ್ಣನ್‌:
    ಅಜಿತ್‌ ಕೃಷ್ಣನ್‌ 1982ರ ಏಪ್ರಿಲ್‌ 19ರಂದು ತಮಿಳುನಾಡಿನ ಚೆನ್ನೈನಲ್ಲಿ ಜನಿಸಿದರು. 2003ರ ಜೂನ್‌ 21 ರಂದು ಐಎಎಫ್‌ ಯುದ್ಧವಿಮಾನಗಳ ಪೈಲಟ್‌ ಆಗಿ ವೃತ್ತಿ ಆರಂಭಿಸಿದ ಅಜಿತ್‌ ಸದ್ಯ ಟೆಸ್ಟ್‌ ಪೈಲಟ್‌ ಮತ್ತು ಹಾರಾಟ ತರಬೇತುದಾರರಾಗಿದ್ದಾರೆ. ಸುಮಾರು 2,900 ಗಂಟೆಗಳ ವಿಮಾನ ಚಾಲನೆ ಮಾಡಿದ ಅನುಭವ ಹೊಂದಿದ್ದಾರೆ. ರಾಷ್ಟ್ರಪತಿ ಚಿನ್ನದ ಪದಕ ಪಡೆದಿರುವುದು ಇವರ ಹೆಗ್ಗಳಿಕೆ.

    ಗ್ರೂಪ್‌ ಕ್ಯಾಪ್ಟನ್‌ ಅಂಗದ್‌ ಪ್ರತಾಪ್‌:
    ಅಂಗದ್‌ ಪ್ರತಾಪ್‌ 1982ರ ಜುಲೈ 17 ರಂದು ಉತ್ತರ ಪ್ರದೇಶದ ಪ್ರಯಾಗ್‌ನಲ್ಲಿ ಜನಿಸಿದರು. ಸದ್ಯ ಫ್ಲೈಯಿಂಗ್‌ ತರಬೇತುದಾರರು ಮತ್ತು ಟೆಸ್ಟ್‌ ಪೈಲಟ್‌ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಸುಮಾರು 2,000 ಸಾವಿರ ಗಂಟೆಗಳ ವಿಮಾನ ಚಾಲನೆ ಅನುಭವ ಹೊಂದಿದ್ದಾರೆ.

    ವಿಂಗ್‌ ಕಮಾಂಡರ್‌ ಶುಭಾಂಶು ಶುಕ್ಲಾ:
    1985ರ ಅಕ್ಟೋಬರ್‌ 10ರಂದು ಉತ್ತರ ಪ್ರದೇಶದ ಲಕ್ನೋನಲ್ಲಿ ಜನಿಸಿದ ಶುಕ್ಲಾ ಅವರು 2006ರ ಏಪ್ರಿಲ್‌ 17ರಂದಯು ವಾಯುಪಡೆಯ ಫೈಟರ್‌ ಜೆಟ್‌ ಪೈಲಟ್‌ ಆಗಿ ನೇಮಕಗೊಂಡರು. ಸದ್ಯ ಫೈಟರ್‌ ಕಾಂಬ್ಯಾಟ್‌ ಲೀಡರ್‌ ಮತ್ತು ಟೆಸ್ಟ್‌ ಪೈಲಟ್‌ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಸುಮಾರು 2,000 ಗಂಟೆಗಳ ವಿಮಾನ ಚಾಲನೆ ಅನುಭವ ಹೊಂದಿದ್ದಾರೆ.

    ಮಾಹಿತಿ ಸಂಗ್ರಹ: ಗಿರೀಶ್ ಲಿಂಗಣ್ಣ (ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

  • Gaganyaan Mission- ಇಸ್ರೋ ಗಗನಯಾನ ಪರೀಕ್ಷಾರ್ಥ ಉಡಾವಣೆ ಯಶಸ್ವಿ

    Gaganyaan Mission- ಇಸ್ರೋ ಗಗನಯಾನ ಪರೀಕ್ಷಾರ್ಥ ಉಡಾವಣೆ ಯಶಸ್ವಿ

    ಬೆಂಗಳೂರು: ಮಾನವಸಹಿತ ಗಗನಯಾನ (Gaganyaan Mission) ಸಿದ್ಧತೆಯ ಭಾಗವಾಗಿ, ಶನಿವಾರ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ನಡೆಸಿದ ಮಾನವ ರಹಿತ ಮೊದಲ ಪ್ರಾಯೋಗಿಕ ಪರೀಕ್ಷಾರ್ಥ ವಾಹನ ಯಶಸ್ವಿಯಾಗಿ ಉಡಾವಣೆಯಾಗಿದೆ.

    3 ಬಾರಿ ವಿಫಲವಾದ ಬಳಿಕ ಮತ್ತೊಮ್ಮೆ ರಾಕೆಟ್ ಉಡಾವಣೆಗೆ ಪ್ರಯತ್ನಿಸಿದ ಇಸ್ರೋ, ತಾಂತ್ರಿಕ ದೋಷ ಸರಿಪಡಿಸಿದ ನಂತರ ಬೆಳಗ್ಗೆ 10 ಗಂಟೆ ವೇಳೆಗೆ TV-D1 ರಾಕೆಟ್‌ ಉಡಾವಣೆ ಮಾಡಲಾಯಿತು. ಯಶಸ್ವಿಯಾಗಿ ಹಾರಾಟ ನಡೆಸಿದ, ರಾಕೆಟ್‌ ಸೇಫ್‌ ಲ್ಯಾಂಡಿಂಗ್‌ ಆಗಿದೆ ಎಂದು ಇಸ್ರೋ ಮಾಹಿತಿ ಹಂಚಿಕೊಂಡಿದೆ.

    ಇಂದು ಬೆಳಗ್ಗೆ 8:45 ಗಂಟೆಗೆ ಮಾನವರಹಿತ ಪರೀಕ್ಷಾರ್ಥ ವಾಹನ ಉಡಾವಣೆಗೆ ಇಸ್ರೋ ಸಜ್ಜಾಗಿತ್ತು. ಅದಕ್ಕೂ ಮುನ್ನ 8:30 ಗಂಟೆಗೆ ಉಡ್ಡಯನಕ್ಕೆ ಇಸ್ರೋ ಸಮಯ ನಿಗದಿಪಡಿಸಿತ್ತು, ಆದ್ರೆ ಹವಾಮಾನ ವೈಪರಿತ್ಯದಿಂದ ಸಮಯ ಬದಲಾವಣೆ ಮಾಡಲಾಗಿತ್ತು. ಕೊನೇ ಕ್ಷಣದಲ್ಲಿ ಇಂಜಿನ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಕೆಲಕಾಲ ಸ್ಥಗಿತಗೊಳಿಸಲಾಗಿತ್ತು. ತಾಂತ್ರಿಕ ದೋಷ ಸರಿಪಡಿಸಿದ ಬಳಿಕ ಯಶಸ್ವಿಯಾಗಿ ಪರೀಕ್ಷಾರ್ಥ ಹಾರಟಕ್ಕೆ ರಾಕೆಟ್‌ ಉಡಾವಣೆ ಮಾಡಲಾಯಿತು.

    ಈ ಪರೀಕ್ಷೆಗೆ TV-D1 ಎಂದು ಹೆಸರಿಸಲಾಗಿದೆ. ಇಂತಹ ಉದ್ದೇಶಿತ ಮೂರು ಪರೀಕ್ಷೆಗಳಲ್ಲಿ ಇದು ಮೊದಲನೆಯದ್ದಾಗಿದೆ. ಆಂಧ್ರ ಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಏಕ ಹಂತದ ರಾಕೆಟ್ ʻಟಿವಿ-ಡಿ1ʼ ನಭಕ್ಕೆ ಚಿಮ್ಮಿದ್ದು, ಪ್ರಾಯೋಗಿಕ ಪರೀಕ್ಷೆಯಲ್ಲಿ ಯಶಸ್ಸು ಕಂಡಿದೆ.

    TV-D1 ಪರೀಕ್ಷಾರ್ಥ ಹಾರಾಟವು ಗಗನಯಾನ ಮಿಷನ್‌ನ ನಿರ್ಣಾಯಕ ಭಾಗವಾಗಿದೆ. ಇದು ಮೂರು ವ್ಯಕ್ತಿಗಳ ಸಿಬ್ಬಂದಿಯನ್ನು 3 ದಿನಗಳ ಕಾರ್ಯಾಚರಣೆಗಾಗಿ 400 ಕಿಲೋಮೀಟರ್ ಕಕ್ಷೆಗೆ ಕಳುಹಿಸುವುದು, ಈ ಮೂಲಕ ಹಿಂದೂ ಮಹಾಸಾಗರದ ನೀರಿನಲ್ಲಿ ಸೇಫ್ ಲ್ಯಾಂಡಿಂಗ್ ಮತ್ತು ಅವರ ಸುರಕ್ಷಿತ ವಾಪಸಾತಿಯನ್ನು ಖಚಿತಪಡಿಸಿಕೊಳ್ಳುವುದು ಇದರೊಂದಿಗೆ ಮಾನವಸಹಿತ ಬಾಹ್ಯಾಕಾಶ ಯಾನಕ್ಕೆ ಭಾರತದ ಸಾಮರ್ಥ್ಯ ಪ್ರದರ್ಶಿಸುವ ಗುರಿಯನ್ನು ಹೊಂದಿದೆ.

    TV-D ವಾಹನವು ಮಾರ್ಪಡಿಸಿದ ವಿಕಾಸ್ (VIKAS) ಎಂಜಿನ್ ಒಳಗೊಂಡಿದ್ದು, ಕ್ರ‍್ಯೂ ಮಾಡ್ಯೂಲ್ ಮತ್ತು ಕ್ರ‍್ಯೂ ಎಸ್ಕೇಪ್ ಸಿಸ್ಟಂ ಅನ್ನು ಬಳಸುತ್ತದೆ. ಇದು 34.9 ಮೀಟರ್ ಎತ್ತರದಲ್ಲಿದೆ ಮತ್ತು 44 ಟನ್‌ಗಳಷ್ಟು ತೂಕ ಹೊಂದಿದೆ. ಒಂದು ವೇಳೆ ಈ ಮಿಷನ್ ಯಶಸ್ವಿಯಾದಲ್ಲಿ ಮಾನವಸಹಿತ ಬ್ಯಾಹ್ಯಾಕಾಶ ನೌಕೆಯನ್ನು ಉಡಾವಣೆ ಮಾಡುವ ಸಾಮರ್ಥ್ಯವಿರುವ ರಾಷ್ಟ್ರಗಳ ಪಟ್ಟಿಗೆ ಭಾರತ ಸೇರಲಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಿಷನ್‌ ಗಗನಯಾನ; ಅ.21 ಕ್ಕೆ ಮೊದಲ ಪರೀಕ್ಷಾರ್ಥ ಉಡಾವಣೆ

    ಮಿಷನ್‌ ಗಗನಯಾನ; ಅ.21 ಕ್ಕೆ ಮೊದಲ ಪರೀಕ್ಷಾರ್ಥ ಉಡಾವಣೆ

    ನವದೆಹಲಿ: ಚಂದ್ರಯಾನ-3 (Chandrayaan-3), ಸೂರ್ಯಯಾನ (Aditya L1) ಯಶಸ್ಸಿನ ಬಳಿಕ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮಾನವ ಸಹಿತ ಗಗನಯಾನಕ್ಕೆ (Gaganyaan Mission) ಸಜ್ಜಾಗಿದೆ. ಇದೇ ತಿಂಗಳ 21 ರಂದು ಪರೀಕ್ಷಾರ್ಥ ಉಡಾವಣೆ ನಡೆಸಲಾಗುವುದು ಎಂದು ಇಸ್ರೋ ತಿಳಿಸಿದೆ.

    ಅ.21 ರಂದು ಬೆಳಗ್ಗೆ 7 ಮತ್ತು 9 ಗಂಟೆ ನಡುವಿನಲ್ಲಿ ಶ್ರೀಹರಿಕೋಟಾದ ಸತೀಶ್‌ ಧವನ್‌ ಉಡಾವಣಾ ಕೇಂದ್ರದಲ್ಲಿ ಮಾನವರಹಿತ ಗಗನಯಾನ ಪರೀಕ್ಷಾರ್ಥ ಉಡಾವಣೆ ನಡೆಯಲಿದೆ ಎಂದು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಇಸ್ರೋ ಪೋಸ್ಟ್‌ ಮಾಡಿದೆ. ಇದನ್ನೂ ಓದಿ: ಮಾನವ ಸಹಿತ ಗಗನಯಾನಕ್ಕೆ ಇಸ್ರೋ ಸಜ್ಜು – ಇದೇ ತಿಂಗಳಲ್ಲಿ ಪರೀಕ್ಷಾರ್ಥ ಉಡಾವಣೆ

    ಗಗನಯಾನ ಮಿಷನ್‌ನಡಿ ನಾಲ್ಕು ಪರೀಕ್ಷಾರ್ಥ ಉಡಾವಣೆ ನಡೆಸಲಾಗುವುದು ಎಂದು ಇಸ್ರೋ ಅಧ್ಯಕ್ಷ ಸೋಮನಾಥ್‌ ತಿಳಿಸಿದ್ದರು. ಅ.21 ರಂದು ಟಿವಿ-ಡಿ1 ಪರೀಕ್ಷಾರ್ಥ ಉಡಾವಣೆ ಮಾಡಲಾಗುವುದು. ಇದರ ಬಳಿಕ ಟಿವಿ-ಡಿ2, ಟಿವಿ-ಡಿ3 ಮತ್ತು ಟಿವಿ-ಡಿ4 ಹೀಗೆ ಇನ್ನೂ ಮೂರು ಪರೀಕ್ಷಾರ್ಥ ಉಡಾವಣೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

    ಕ್ರೂ ಎಸ್ಕೇಪ್ ಸಿಸ್ಟಂನ ಕಾರ್ಯಕ್ಷಮತೆ ಪ್ರದರ್ಶಿಸುವ ಫ್ಲೈಟ್ ಟೆಸ್ಟ್ ವೆಹಿಕಲ್ ಅಬಾರ್ಟ್ ಮಿಷನ್-1 (ಟಿವಿ-ಡಿ1) ಗಾಗಿ ಸಿದ್ಧತೆ ನಡೆಯುತ್ತಿವೆ ಎಂದು ಇಸ್ರೋ ಇತ್ತೀಚೆಗೆ ಹೇಳಿತ್ತು. ಮೊದಲ ಪರೀಕ್ಷಾರ್ಥ ಉಡಾವಣೆ ಭಾಗವಾಗಿರುವ ಫ್ಲೈಟ್ ಟೆಸ್ಟ್ ವೆಹಿಕಲ್ (ಟಿವಿ-ಡಿ1) ತಯಾರಿಯ ಅಂತಿಮ ಹಂತದಲ್ಲಿದೆ. ಇದನ್ನೂ ಓದಿ: 2024ಕ್ಕೆ ಮಾನವ ಬಾಹ್ಯಾಕಾಶಕ್ಕೆ – ಭಾರತದ ಗಗನಯಾನ ನೌಕೆ ಮೊದಲ ಚಿತ್ರ ರಿಲೀಸ್‌

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಾನವ ಸಹಿತ ಗಗನಯಾನಕ್ಕೆ ಇಸ್ರೋ ಸಜ್ಜು – ಇದೇ ತಿಂಗಳಲ್ಲಿ ಪರೀಕ್ಷಾರ್ಥ ಉಡಾವಣೆ

    ಮಾನವ ಸಹಿತ ಗಗನಯಾನಕ್ಕೆ ಇಸ್ರೋ ಸಜ್ಜು – ಇದೇ ತಿಂಗಳಲ್ಲಿ ಪರೀಕ್ಷಾರ್ಥ ಉಡಾವಣೆ

    ನವದೆಹಲಿ: ಸೂರ್ಯಯಾನ, ಚಂದ್ರಯಾನದ ನಂತರ ಇಸ್ರೋ (ISRO) ಮತ್ತೊಂದು ಮೈಲುಗಲ್ಲಿಗೆ ಸಜ್ಜಾಗಿದೆ. ಮಾನವ ಸಹಿತ ಗಗನಯಾನಕ್ಕೆ (Gaganyaan) ಇಸ್ರೋ ಸಜ್ಜಾಗಿದ್ದು, ಇದೇ ತಿಂಗಳಲ್ಲಿ ಪರೀಕ್ಷಾರ್ಥ ಉಡಾವಣೆ  ನಡೆಯಲಿದೆ.

    ಭಾರತೀಯ ಬಾಹ್ಯಾಕಾಶ ಸಂಸ್ಥೆಯಾದ ಇಸ್ರೋ ಈಗಾಗಲೇ ಚಂದ್ರಯಾನ, ಸೂರ್ಯಯಾನ ಯೋಜನೆಗಳನ್ನು ಯಶಸ್ವಿಗೊಳಿಸಿ ನಭೋಮಂಡಲದಲ್ಲಿ ಇತಿಹಾಸ ನಿರ್ಮಿಸಿದೆ. ಇದೀಗ ಮತ್ತೊಂದು ಇತಿಹಾಸ ನಿರ್ಮಿಸಲು ಸಜ್ಜಾಗಿದ್ದು, ಮಾನವ ಸಹಿತ ಗಗನಯಾನದ ಯೋಜನೆ ಸಿದ್ಧ ಮಾಡಿದೆ. ಈ ಗಗನಯಾನಕ್ಕೂ ಮುನ್ನ ಪರೀಕ್ಷಾರ್ಥ ಉಡಾವಣೆಯನ್ನು (Test Launch) ಈ ತಿಂಗಳಾಂತ್ಯಕ್ಕೆ ನಡೆಸಲಾಗುವುದು ಎಂದು ಇಸ್ರೋ ಕೆಲ ಚಿತ್ರಗಳನ್ನು ಸಹ ಬಿಡುಗಡೆ ಮಾಡಿದೆ. ಇದನ್ನೂ ಓದಿ: ಲೋಕಸಭೆ ಚುನಾವಣೆಗೆ ಬಿಜೆಪಿ ಸಿದ್ಧತೆ – ದೆಹಲಿಯಲ್ಲಿ ಇಬ್ಬರು ಅಭ್ಯರ್ಥಿಗಳನ್ನ ಕಣಕ್ಕಿಳಿಸಲು ಹೈಕಮಾಂಡ್ ಉತ್ಸುಕ

    ಮನುಷ್ಯನನ್ನು ಬಾಹ್ಯಾಕಾಶಕ್ಕೆ ಕಳಿಸುವ ಮುನ್ನ ಕೆಲವು ಅಂತರಾಷ್ಟ್ರೀಯ ಪ್ರಕ್ರಿಯೆ ಪಾಲಿಸಬೇಕಾಗುತ್ತದೆ. ಮನುಷ್ಯನನ್ನು ಆಕಾಶಕ್ಕೆ ಕರೆದುಕೊಂಡು ಹೋಗುವ ಯೂನಿಟ್‌ಗೆ ಪ್ಯಾಡ್ ಅಬಾಟ್ ಎಂದು ಕರೆಯಲಾಗುತ್ತದೆ. ಈ ಪ್ಯಾಡ್ ಅಬಾಟ್ ಅನ್ನು ರಾಕೆಟ್ ಇರಿಸಿ ಪ್ರಯೋಗ ಮಾಡಲಾಗುತ್ತಿದೆ. ಇದನ್ನೇ ಗಗನಯಾನ ‘ಟಿವಿ-ಡಿ1’ (Test Vehicle Development) ಬಾಹ್ಯಾಕಾಶನೌಕೆ ಉಡ್ಡಯನ ಎನ್ನಲಾಗುತ್ತದೆ. ಇದನ್ನೂ ಓದಿ: 2024ಕ್ಕೆ ಮಾನವ ಬಾಹ್ಯಾಕಾಶಕ್ಕೆ – ಭಾರತದ ಗಗನಯಾನ ನೌಕೆ ಮೊದಲ ಚಿತ್ರ ರಿಲೀಸ್‌

    ಈ ಪರೀಕ್ಷೆಗಳು ಯಾಕೆ?
    ಸುರಕ್ಷತೆಯ ಖಾತ್ರಿ: ವಿವಿಧ ಪರೀಕ್ಷೆಗಳನ್ನು ಕೈಗೊಳ್ಳುವುದರಿಂದ, ಕ್ರ‍್ಯೂ ಎಸ್ಕೇಪ್ ಸಿಸ್ಟಮ್ ಸೇರಿದಂತೆ ಎಲ್ಲಾ ವ್ಯವಸ್ಥೆಗಳು ಉದ್ದೇಶಿತ ರೀತಿಯಲ್ಲಿ ಕಾರ್ಯಾಚರಿಸುತ್ತವೆಯೇ ಎನ್ನುವುದು ಖಾತ್ರಿಯಾಗಲಿದೆ. ಇದು ಗಗನಯಾತ್ರಿಗಳ ಸುರಕ್ಷತೆಯನ್ನು ಖಚಿತಪಡಿಸುತ್ತದೆ.

    ತಂತ್ರಜ್ಞಾನದ ಖಚಿತತೆ: ಪರೀಕ್ಷೆಗಳನ್ನು ನಡೆಸುವ ಮೂಲಕ ಮಾನವ ಸಹಿತ ಗಗನಯಾತ್ರೆ ಕೈಗೊಳ್ಳಲು ಅವಶ್ಯಕವಾದ ಜೀವ ಬೆಂಬಲ ವ್ಯವಸ್ಥೆ ಹಾಗೂ ಬಾಹ್ಯಾಕಾಶ ಕ್ಯಾಪ್ಸೂಲ್ ಸೇರಿದಂತೆ ವಿವಿಧ ಆಧುನಿಕ ತಂತ್ರಜ್ಞಾನಗಳ ಕಾರ್ಯಾಚರಣೆಯನ್ನು ಖಚಿತಪಡಿಸಿಕೊಳ್ಳಲು ಸಾಧ್ಯ.

    ಅಪಾಯಗಳನ್ನು ತಗ್ಗಿಸುವುದು: ಸಮರ್ಪಕವಾಗಿ ಪರೀಕ್ಷೆಗಳನ್ನು ಕೈಗೊಳ್ಳುವುದರಿಂದ ಸಂಭಾವ್ಯ ಸಮಸ್ಯೆಗಳು ಹಾಗೂ ಅಪಾಯಗಳನ್ನು ಗುರುತಿಸಿ, ನೈಜ ಮಾನವ ಸಹಿತ ಯೋಜನಾ ಜಾರಿಗೂ ಮುನ್ನವೇ ಅದನ್ನು ಸರಿಪಡಿಸಲು ಸಾಧ್ಯ.

    ಸಿಬ್ಬಂದಿ ತರಬೇತಿ: ಸಂಪೂರ್ಣ ಪರೀಕ್ಷೆಗಳನ್ನು ನಡೆಸುವುದರಿಂದ, ಗಗನಯಾತ್ರಿಗಳು ಮತ್ತು ಭೂ ಸಿಬ್ಬಂದಿಗೆ ಪರಿಪೂರ್ಣ ತರಬೇತಿ ಲಭಿಸುತ್ತದೆ. ಎಲ್ಲಾ ಉಪಕರಣಗಳನ್ನು, ಕಾರ್ಯಾಚರಣೆಗಳನ್ನು ಸರಿಯಾಗಿ ಅರ್ಥೈಸಿಕೊಳ್ಳಲು ಸಾಧ್ಯ.

    ಯೋಜನಾ ಯಶಸ್ಸು: ಎಲ್ಲಾ ವ್ಯವಸ್ಥೆಗಳು ಸರಿಯಾದ ರೀತಿಯಲ್ಲಿ ಕಾರ್ಯಾಚರಿಸುತ್ತಿವೆ ಎಂದು ಖಾತ್ರಿಪಡಿಸಿಕೊಳ್ಳುವುದರಿಂದ ಯೋಜನೆಯ ಯಶಸ್ಸು ಸಾಧಿಸುವ ಸಾಧ್ಯತೆಗಳು ಹೆಚ್ಚಾಗಿ, ಗಗನಯಾನ ಯೋಜನೆಯ ಗುರಿಗಳನ್ನು ಸಾಧಿಸಲು ನೆರವಾಗುತ್ತದೆ.

    ಈ ಮಾನವಸಹಿತ ಗಗನಯಾನಕ್ಕೂ ಮುನ್ನ ಮೂರು ಟೆಸ್ಟ್‌ಗಳಿದ್ದು, ಮುಂದಿನ ವರ್ಷ ಮತ್ತೊಂದು ಪರೀಕ್ಷಾರ್ಥ ಉಡಾವಣೆ ನಡೆಸಲಾಗುವುದು. ‘ವ್ಯೋಮ ಮಿತ್ರ’ ಹೆಸರಿನ ಮಹಿಳಾ ರೊಬೋಟ್ ಅನ್ನು ಕಳುಹಿಸಲಾಗುವುದು ಎಂದು ಇಸ್ರೋ ಹೇಳಿದೆ. ನಂತರ ಗಗನಯಾನಿಯನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಪ್ಲಾನ್ ಮಾಡಿದೆ. ಇದನ್ನೂ ಓದಿ: ಭಾರತದಲ್ಲಿ ಇರಬೇಕೆಂದರೆ ಭಾರತ್ ಮಾತಾ ಕಿ ಜೈ ಎನ್ನಬೇಕು: ಕೇಂದ್ರ ಸಚಿವ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 2024ಕ್ಕೆ ಮಾನವ ಬಾಹ್ಯಾಕಾಶಕ್ಕೆ – ಭಾರತದ ಗಗನಯಾನ ನೌಕೆ ಮೊದಲ ಚಿತ್ರ ರಿಲೀಸ್‌

    2024ಕ್ಕೆ ಮಾನವ ಬಾಹ್ಯಾಕಾಶಕ್ಕೆ – ಭಾರತದ ಗಗನಯಾನ ನೌಕೆ ಮೊದಲ ಚಿತ್ರ ರಿಲೀಸ್‌

    ನವದೆಹಲಿ: ಚಂದ್ರಯಾನ-3 (Chandrayaan-3) ಮತ್ತು ಆದಿತ್ಯ ಎಲ್‌1 (Aditya L1) ಯಶಸ್ಸಿನ ಬಳಿಕ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO)ಯು ಮಾನವಸಹಿತ ಬಾಹ್ಯಾಕಾಶ ಯಾನಕ್ಕೆ ಸಜ್ಜಾಗುತ್ತಿದೆ. 2024ರಲ್ಲಿ ಮಾನವರನ್ನು ಕೊಂಡೊಯ್ಯಲು ಸಜ್ಜಾಗಿರುವ ಗಗನಯಾನ ಬಾಹ್ಯಾಕಾಶ ನೌಕೆಯ ಚಿತ್ರಗಳನ್ನು ಬಿಡುಗಡೆ ಮಾಡಿದೆ.

    ಗಗನಯಾನ (Gaganyaan) ಕಾರ್ಯಾಚರಣೆಗಾಗಿ ಶೀಘ್ರದಲ್ಲೇ ಮಾನವರಹಿತ ಹಾರಾಟ ಪರೀಕ್ಷೆಯನ್ನು ಪ್ರಾರಂಭಿಸುವುದಾಗಿ ಇಸ್ರೋ ಹೇಳಿದೆ. ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿರುವ ಇಸ್ರೋ, ಗಗನಯಾನ ಮಿಷನ್‌ಗಾಗಿ ಮಾನವರಹಿತ ಹಾರಾಟ ಪರೀಕ್ಷೆಗಳನ್ನು ಇಸ್ರೋ ಪ್ರಾರಂಭಿಸಲಿದೆ. ಕ್ರೂ ಎಸ್ಕೇಪ್ ಸಿಸ್ಟಮ್‌ನ ಕಾರ್ಯಕ್ಷಮತೆಯನ್ನು ಪ್ರದರ್ಶಿಸುವ ಫ್ಲೈಟ್ ಟೆಸ್ಟ್ ವೆಹಿಕಲ್ ಅಬಾರ್ಟ್ ಮಿಷನ್-1 (ಟಿವಿ-ಡಿ1) ಗಾಗಿ ಸಿದ್ಧತೆಗಳು ನಡೆಯುತ್ತಿವೆ ಎಂದು ತಿಳಿಸಿದೆ. ಇದನ್ನೂ ಓದಿ: ಸಿಕ್ಕಿಂ ಹಠಾತ್ ಪ್ರವಾಹಕ್ಕೆ ಬಲಿಯಾದವರ ಸಂಖ್ಯೆ 56ಕ್ಕೆ ಏರಿಕೆ – 140 ಮಂದಿ ಕಣ್ಮರೆ

    ಗಗನಯಾನ ಯೋಜನೆಯು 2024 ರಲ್ಲಿ ಕಾರ್ಯರೂಪಕ್ಕೆ ಬರಲಿದೆ. ಈ ಯೋಜನೆಯಲ್ಲಿ ಮೂವರು ಗಗನಯಾತ್ರಿಗಳನ್ನು 400 ಕಿ.ಮೀ ಎತ್ತರದ ಕಕ್ಷೆಗೆ ಮೂರು ದಿನಗಳ ಪ್ರಯಾಣಕ್ಕಾಗಿ ಕರೆದೊಯ್ಯಲಾಗುವುದು. ನಂತರ ಅವರನ್ನು ಮರಳಿ ಸುರಕ್ಷಿತವಾಗಿ ಭೂಮಿಗೆ ಕರೆತಂದು, ಭಾರತದ ವ್ಯಾಪ್ತಿಯ ಸಮುದ್ರದಲ್ಲಿ ಇಳಿಸಲಾಗುತ್ತದೆ.

    ಕ್ರೂ ಎಸ್ಕೇಪ್‌ ಸಿಸ್ಟಮ್‌ ಗಗನಯಾನ ಯೋಜನೆಯ ಬಹುದೊಡ್ಡ ಅಂಶವಾಗಿದ್ದು, ಡೈನಮಿಕ್‌ ಪ್ರಶೆರ್‌ ಹಾಗೂ ಟ್ರಾನ್ಸಾನಿಕ್‌ ಕಂಡೀಶನ್‌ಗಳಲ್ಲಿಯೂ ಈ ವ್ಯವಸ್ಥೆ ಕಾರ್ಯನಿರ್ವಹಿಸುವುದು ಅತ್ಯಗತ್ಯವಾಗಿದೆ. ಅದರ ಕಾರ್ಯನಿರ್ವಹಣೆಯನ್ನು ಖಾತರಿಪಡಿಸಿಕೊಳ್ಳುವ ಉದ್ದೇಶವನ್ನು ಪರೀಕ್ಷಾರ್ಥ ಉಡಾವಣೆ ಹೊಂದಿದೆ. ಇದನ್ನೂ ಓದಿ: ಮಹೇಂದ್ರ ಸಿಂಗ್ ಧೋನಿ ಈಗ ಜಿಯೋಮಾರ್ಟ್ ಬ್ರಾಂಡ್ ಅಂಬಾಸಿಡರ್

    ಒಟ್ಟು 4 ಪರೀಕ್ಷಾರ್ಥ ಉಡಾವಣೆ ನಡೆಯಲಿದ್ದು, ಈ ತಿಂಗಳ ಅಂತ್ಯದಲ್ಲಿ ಟಿವಿ-ಡಿ1 ಎನ್ನುವ ಪರೀಕ್ಷಾರ್ಥ ವಾಹನ ಉಡಾವಣೆಯಾಗಲಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗಗನಯಾನ ಮಿಷನ್‌ನಲ್ಲಿ ಬಾಹ್ಯಾಕಾಶಕ್ಕೆ ಹೋಗಲಿದ್ದಾಳೆ ʼವ್ಯೋಮಿತ್ರ’

    ಗಗನಯಾನ ಮಿಷನ್‌ನಲ್ಲಿ ಬಾಹ್ಯಾಕಾಶಕ್ಕೆ ಹೋಗಲಿದ್ದಾಳೆ ʼವ್ಯೋಮಿತ್ರ’

    ನವದೆಹಲಿ: ಭಾರತದ ಮಹತ್ವಾಕಾಂಕ್ಷೆಯ ಗಗನಯಾನ ಮಿಷನ್‌ನಲ್ಲಿ (Gaganyaan Mission) ವ್ಯೋಮಿತ್ರ (Vyommitra) ಹೆಸರಿನ ಮಹಿಳಾ ರೋಬೋಟ್‌ (Female Robot) ಅನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗುತ್ತದೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆಯ ರಾಜ್ಯ ಸಚಿವ ಜಿತೇಂದ್ರ ಸಿಂಗ್ (Jitendra Singh) ಹೇಳಿದ್ದಾರೆ.

    ಖಾಸಗಿ ವಾಹಿನಿಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಬಾಹ್ಯಾಕಾಶ (Space) ಯಾನದ ಮೊದಲ ಪ್ರಯೋಗವನ್ನು ಅಕ್ಟೋಬರ್ ಮೊದಲ ಅಥವಾ ಎರಡನೇ ವಾರದಲ್ಲಿ ನಿಗದಿಪಡಿಸಲಾಗಿದೆ. ನಂತರದ ಕಾರ್ಯಾಚರಣೆಗಳಲ್ಲಿ ಮಹಿಳಾ ರೋಬೋಟ್ ‘ವ್ಯೋಮಿತ್ರ’ ಬಾಹ್ಯಾಕಾಶಕ್ಕೆ ಪ್ರಯಾಣಿಸಲಿದೆ ಎಂದು ತಿಳಿಸಿದರು. ಇದನ್ನೂ ಓದಿ: ಅಮಿತ್‌ ಶಾ ಕಾಲ್‌ ಮಾಡಿದ್ರಾ – ಪ್ರಶ್ನೆಗೆ ಶೆಟ್ಟರ್‌ ಸ್ಪಷ್ಟನೆ

    ಮಹಿಳಾ ರೋಬೋಟ್ ಎಲ್ಲಾ ಮಾನವ ಚಟುವಟಿಕೆಗಳನ್ನು ಅನುಕರಿಸಲಿದೆ. ಈ ಪ್ರಯೋಗ ಯಶಸ್ವಿಯಾದ ಬಳಿಕ ನಾವು ಈ ಯೋಜನೆಯಲ್ಲಿ ಮುಂದುವರಿಯಬಹುದು ಎಂ ಹೇಳಿದರು.

    2019 ರವರೆಗೆ ಮುಚ್ಚಿದ್ದ ಶ್ರೀಹರಿಕೋಟಾದ ಗೇಟ್‌ಗಳನ್ನು ಈಗ ತೆರೆಯಲಾಗಿದೆ. ಈಗ ಮಾಧ್ಯಮಗಳನ್ನು ಮತ್ತು ಶಾಲಾ ಮಕ್ಕಳನ್ನು ಆಹ್ವಾನಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಬಾಹ್ಯಾಕಾಶ ಕ್ಷೇತ್ರವನ್ನು ಎಲ್ಲರಿಗೂ ಈಗ ತೆರೆದಿದ್ದಾರೆ ಎಂದರು.

    ಗಗನಯಾನ ಮಾನವನನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಮತ್ತು ಸುರಕ್ಷಿತವಾಗಿ ಭೂಮಿಗೆ ಮರಳಿಸುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ನಿಗದಿ ಪ್ರಕಾರ 2024ಕ್ಕೆ ಮೂವರು ಗಗನಯಾನಿಗಳನ್ನು ಇಸ್ರೋ ಬಾಹ್ಯಾಕಾಶಕ್ಕೆ ಕಳುಹಿಸಬೇಕಿತ್ತು. ಆದರೆ ಕೋವಿಡ್‌ನಿಂದಾಗಿ ಈ ಯೋಜನೆ ವಿಳಂಬವಾಗಿದೆ.


    ಗಗನಯಾನ ಮಿಷನ್‌ನಲ್ಲಿ ಮೂವರು ಗಗನಯಾನಿಗಳನ್ನು ಮೂರು ದಿನ 400 ಕಿ.ಮೀ ಎತ್ತರದ ಕಕ್ಷೆಗೆ ಕಳುಹಿಸಿ ನಂತರ ಸಮುದ್ರದ ನೀರಿನ ಮೇಲೆ ಇಳಿಸಲಾಗುತ್ತದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗಗನಯಾನಕ್ಕೆ ಹಸಿರು ನಿಶಾನೆ-ಭಾರತದಿಂದ ಮೂವರು ಬಾಹ್ಯಾಕಾಶಕ್ಕೆ ಪಯಣ

    ಗಗನಯಾನಕ್ಕೆ ಹಸಿರು ನಿಶಾನೆ-ಭಾರತದಿಂದ ಮೂವರು ಬಾಹ್ಯಾಕಾಶಕ್ಕೆ ಪಯಣ

    ನವದೆಹಲಿ: ಭಾರತದ ಮಹತ್ವಾಕಾಂಕ್ಷೆಯ ಗಗನಯಾನಕ್ಕೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿಸಿದೆ. ಇಂದು ನಡೆದ ಸಚಿವ ಸಂಪುಟದ ಸಭೆಯಲ್ಲಿ 10 ಸಾವಿರ ಕೋಟಿ ವೆಚ್ಚದಿಂದ ಭಾರತದ ಮೂವರು ಗಗನಯಾನಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಕೇಂದ್ರ ಮುದ್ರೆಯನ್ನು ಒತ್ತಿದೆ.

    ಗಗನಯಾನದಲ್ಲಿ ಮೂವರು ಚಾಲಕ ಸಿಬ್ಬಂದಿ ಒಟ್ಟು ಏಳು ದಿನಗಳ ಕಾಲ ಬಾಹ್ಯಾಕಾಶದಲ್ಲಿ ಇರಲಿದ್ದಾರೆ. ಗಗನಯಾನಕ್ಕೆ ಮಾನವ ಕ್ರಮಾಂಕದ ಜಿಎಸ್‍ಎಲ್‍ವಿ ಎಂಕೆ-111 ಬಳಕೆ ಮಾಡಲಾಗುತ್ತಿದೆ. ಈ ಬಾಹ್ಯಾಕಾಶ ನೌಕೆಯಲ್ಲಿ ಏಳು ದಿನ ಮೂವರು ಯಾನಿಗಳಿಗೆ ವಿಹರಿಸಲು ಅವಕಾಶವಿದೆ. ಈ ಯೋಜನೆಗಾಗಿ ಸರ್ಕಾರ 10 ಸಾವಿರ ಕೋಟಿ ರೂ. ಹಣವನು ಮೀಸಲಿರಿಸಿದೆ. ಯೋಜನೆಯ ತಂತ್ರಜ್ಞಾನ ಅಭಿವೃದ್ಧಿ, ಹಾರ್ಡ್ ವೇರ್ ಅಳವಡಿಕೆ, ಅವಶ್ಯಕ ಮೂಲಸೌಕರ್ಯ ಸೇರಿದಂತೆ ಎಲ್ಲ ವೆಚ್ಚಕ್ಕಾಗಿ 10 ಸಾವಿರ ಕೋಟಿ ಬಳಕೆಯಾಗಲಿದೆ.

    ಎರಡು ಮಾನವ ರಹಿತ ಹಾರಾಟ ಮತ್ತು ಮಾನವ ಸಹಿತ ಹಾರಟವನ್ನು ಗಗನಯಾನ ಭಾಗವಾಗಿ ಕೈಗೊಳ್ಳಲಾಗುತ್ತಿದೆ. ಗಗನಯಾನ ಕಾರ್ಯಕ್ರಮವನ್ನು ಕೆಲಸವನ್ನು ಇಸ್ರೋ, ಅಕ್ಯಾಡೆಮಿಯಾ, ನ್ಯಾಶನಲ್ ಏಜೆನ್ಸಿ, ಕೈಗಾರಿಗೆಗಳು ಒಳಗೊಂಡಂತೆ ವೈಜ್ಞಾನಿಕ ಸಂಘ, ಸಂಸ್ಥೆಗಳ ಸಹಭಾಗಿತ್ವದಲ್ಲಿ ಸಿದ್ಧಪಡಿಸಲಾಗುತ್ತಿದೆ.

    ಈ ವಿಶೇಷ ಯೋಜನೆ ಉದ್ಯೋಗ ಸೃಷ್ಟಿಸಲಿದ್ದು, ಹೊಸ ಹೊಸ ತಂತ್ರಜ್ಞಾನ, ಯುವ ವಿಜ್ಞಾನಿಗಳ ಸಾಧನೆಗೆ ನಾಂದಿಯಾಲಿದೆ ಎಂದು ಹೇಳಲಾಗುತ್ತಿದೆ. ಸಂಶೋಧನಾ ವಿದ್ಯಾರ್ಥಿಗಳಿಗೂ ಅನುಕೂಲವಾಗಲಿದೆ. ಈ ಒಂದು ಯೋಜನೆ ಮುಂಬರುವ ವಿದ್ಯಾರ್ಥಿಗಳು ವಿಜ್ಞಾನ ಮತ್ತು ತಂತ್ರಜ್ಞಾನದ ವಿಷಯಗಳಲ್ಲಿ ತೊಡಗಿಕೊಳ್ಳಲು ಪ್ರೇರಣೆಯಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv