Tag: ಗಂಭೀರ

  • 3 ವರ್ಷದ ಬಾಲಕಿಯ ಬಾಯಿಯಲ್ಲಿ ಪಟಾಕಿ ಸಿಡಿಸಿದ ಪಾಪಿ!

    3 ವರ್ಷದ ಬಾಲಕಿಯ ಬಾಯಿಯಲ್ಲಿ ಪಟಾಕಿ ಸಿಡಿಸಿದ ಪಾಪಿ!

    ಲಕ್ನೋ: ಉತ್ತರ ಪ್ರದೇಶದ ಮೀರತ್‍ನಲ್ಲಿ ಯುವಕನೊಬ್ಬ ಮೂರು ವರ್ಷದ ಬಾಲಕಿಯ ಬಾಯಿಯಲ್ಲಿ ಪಟಾಕಿ ಸಿಡಿಸಿ ವಿಕೃತಿ ಮೆರೆದಿದ್ದಾನೆ.

    ಬಾಲಕಿಯು ತನ್ನ ಮನೆಯ ಮುಂದೆ ಆಟವಾಡುತ್ತಿದ್ದಾಗ ಅದೇ ಗ್ರಾಮದ ಯುವಕನೊಬ್ಬ ಆಕೆಯ ಬಾಯಿಗೆ ಪಟಾಕಿಯನ್ನ ಇಟ್ಟು ಬೆಂಕಿ ಹಚ್ಚಿದ್ದಾನೆ. ಪರಿಣಾಮ ಬಾಲಕಿಯ ಬಾಯಿಯಲ್ಲಿ ಪಟಾಕಿ ಸ್ಫೋಟಗೊಂಡಿದೆ.

    ಈ ಘಟನೆಯಿಂದ ಬಾಲಕಿಯು ಗಂಭೀರವಾಗಿ ಗಾಯಗೊಂಡಿದ್ದು, ಕೂಡಲೇ ಆಕೆಯನ್ನ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಬಾಲಕಿಯ ತಂದೆ ಶಶಿ ಕುಮಾರ್ ಹೇಳಿದ್ದಾರೆ.

    ಸಿಡಿದ ಪರಿಣಾಮ ಬಾಲಕಿಯ ಗಂಟಲಿಗೆ ಸೋಂಕಾಗಿದ್ದು, ಆಕೆಯ ಬಾಯಿಗೆ 50 ಕ್ಕೂ ಹೆಚ್ಚು ಹೊಲಿಗೆಗಳನ್ನ ಹಾಕಲಾಗಿದ್ದು, ಆಕೆಯ ಸದ್ಯದ ಪರಿಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಸಂಬಂಧ ಬಾಲಕಿಯ ತಂದೆ ಶಶಿ ಕುಮಾರ್ ಪೊಲೀಸರಿಗೆ ದೂರು ನೀಡಿದ್ದು, ಅದೇ ಗ್ರಾಮದವನಾದ ಹರ್ಪಾಲ್ ಎಂಬಾತನು ಈ ಕೃತ್ಯವನ್ನ ಎಸಗಿದ್ದಾನೆ ಎಂದು ದೂರಿದ್ದಾರೆ. ಪೊಲೀಸರು ಆರೋಪಿ ಹರ್ಪಾಲ್ ವಿರುದ್ಧ ಎಫ್‍ಐಆರ್ ದಾಖಲಿಸಿಕೊಂಡಿದ್ದು, ಆತನ ಪತ್ತೆಗಾಗಿ ಬಲೆ ಬೀಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಿಲಿಕಾನ್ ಸಿಟಿಯಲ್ಲಿ ಮುಂದುವರಿದ ಬೀದಿ ನಾಯಿಗಳ ಹಾವಳಿ

    ಸಿಲಿಕಾನ್ ಸಿಟಿಯಲ್ಲಿ ಮುಂದುವರಿದ ಬೀದಿ ನಾಯಿಗಳ ಹಾವಳಿ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬೀದಿನಾಯಿಗಳ ಹಾವಳಿ ಮುಂದುವರಿದಿದ್ದು, ಹೆಚ್‍ಎಎಲ್‍ನ ವಿಭೂತಿಪುರಂ ಬಳಿ ಬಾಲಕನ ಮೇಲೆ ಎರಗಿದ ನಾಯಿಗಳು ಗಂಭೀರವಾಗಿ ಗಾಯಗೊಳಿಸಿವೆ.

    ಹೌದು, ನಗರದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ಶೌಚಾಲಯಕ್ಕೆ ಹೋಗಿದ್ದ ಬಾಲಕನ ಮೇಲೆ 10 ಕ್ಕೂ ಹೆಚ್ಚು ನಾಯಿಗಳು ದಾಳಿ ಮಾಡಿ ಗಾಯಗೊಳಿಸಿವೆ. ಆಟ-ಪಾಠ ಕಲಿಯಬೇಕಿದ್ದ ಬಾಲಕನೀಗ ಸಾವು-ಬದುಕಿನ ಮಧ್ಯೆ ಹೋರಾಡುತ್ತಾ ಇದ್ದಾನೆ.

    ಪ್ರವೀಣ್ ಬೀದಿನಾಯಿಗಳ ದಾಳಿಗೆ ತುತ್ತಾದ ಬಾಲಕ. ಬುಧವಾರ ಸಂಜೆ ಬಾಲಕ ಶೌಚಾಲಯಕ್ಕೆ ತೆರಳಿದ್ದಾಗ, ಏಕಾಏಕಿ 10 ಕ್ಕೂ ಹೆಚ್ಚು ಬೀದಿನಾಯಿಗಳ ಗುಂಪು ಬಾಲಕನ ಮೇಲೆ ಎರಗಿ, ಕತ್ತು, ಮೈ ಹಾಗೂ ಕೈ ಭಾಗಕ್ಕೆ ಕಚ್ಚಿ ಗಂಭೀರವಾಗಿ ಗಾಯಗೊಳಿಸಿವೆ. ಇದನ್ನು ಕಂಡ ಸ್ಥಳೀಯರು ನಾಯಿಗಳನ್ನು ಓಡಿಸಿ, ಗಂಭೀರವಾಗಿ ಗಾಯಗೊಂಡಿದ್ದ ಬಾಲಕನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಬಾಲಕನ ಸ್ಥಿತಿಯು ಚಿಂತಾಜನಕವಾಗಿದೆ. ವೈದ್ಯರು ಇನ್ನು ಮೂರು ದಿನಗಳ ಕಾಲ ಏನು ಹೇಳುವುದಕ್ಕೆ ಆಗುವುದಿಲ್ಲ ಎಂದಿದ್ದಾರೆ.  ಇದರಿಂದ ಬಾಲಕನ ತಾಯಿ ತೀವ್ರವಾಗಿ ಚಿಂತೆಗೀಡಾಗಿದ್ದಾರೆ. ಮಗನ ಚಿಕಿತ್ಸೆಗೆ ಹಣ ಇಲ್ಲದೇ ಪರದಾಡುತ್ತಾ, ಸಹಾಯಕ್ಕಾಗಿ ಅಂಗಲಾಚುತ್ತಿದ್ದಾರೆ.

    ಘಟನೆ ಸಂಬಂಧ ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು, ಈ ಏರಿಯಾಗಳಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಿದೆ. ಇವುಗಳಿಗೆ ಮೂಲ ಕಾರಣ ವಿಭೂತಿಪುರಂನಲ್ಲಿರುವ ಹೆಚ್ಚಿನ ಮಾಂಸದ ಅಂಗಡಿಗಳು. ಅಂಗಡಿಯವರು ನಾಯಿಗಳಿಗೆ ಮಾಂಸದ ತುಂಡುಗಳನ್ನು ಹಾಕುತ್ತಾರೆ. ಹೀಗಾಗಿ ಇವನ್ನೇ ರೂಢಿ ಮಾಡಿಕೊಂಡಿರುವ ನಾಯಿಗಳು ಜನರ ಮೇಲೂ ದಾಳಿ ನಡೆಸುತ್ತಲೇ ಇರುತ್ತವೆ. ಈ ಬಗ್ಗೆ ಸ್ಥಳೀಯ ಕಾರ್ಪೋರೇಟರ್ ಹಾಗೂ ಬಿಬಿಎಂಪಿ ಅಧಿಕಾರಿಗಳಿಗೂ ದೂರು ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲವೆಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಸ್ತೆ ಮಧ್ಯೆ ಕುಡಿಯುತ್ತ ಕುಳಿತಿದ್ದವರನ್ನು ಪ್ರಶ್ನಿಸಿದ್ದಕ್ಕೆ ಹಲ್ಲೆ ನಡೆಸಿದ ಪುಂಡರು

    ರಸ್ತೆ ಮಧ್ಯೆ ಕುಡಿಯುತ್ತ ಕುಳಿತಿದ್ದವರನ್ನು ಪ್ರಶ್ನಿಸಿದ್ದಕ್ಕೆ ಹಲ್ಲೆ ನಡೆಸಿದ ಪುಂಡರು

    ಮಂಡ್ಯ: ರಸ್ತೆಯ ಮಧ್ಯದಲ್ಲಿ ಕುಡಿಯುತ್ತ ಕುಳಿತಿದ್ದನ್ನು ಪ್ರಶ್ನಿಸಿದ ಕೆಎಸ್ಆರ್‌ಟಿಸಿ ಬಸ್ ಚಾಲಕ ಮತ್ತು ನಿರ್ವಾಹಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಹಂಪಾಪುರ ಗ್ರಾಮದ ಬಳಿ ನಡೆದಿದೆ.

    ಚಾಲಕ ಮಾದೇಗೌಡ ಮತ್ತು ನಿರ್ವಾಹಕ ಸ್ವಾಮೀಗೌಡ ಹಲ್ಲೆಗೊಳಗಾಗಿದ್ದಾರೆ. ಮಂಗಳವಾರ ರಾತ್ರಿ ಹೆಬ್ಬಾಡಿ ಮತ್ತು ಮೈಸೂರು ಮಾರ್ಗವಾಗಿ ಬಸ್ ಪ್ರಯಾಣಿಸುತ್ತಿತ್ತು, ಈ ವೇಳೆ ಹಂಪಾಪುರ ಬಳಿ ರಸ್ತೆ ಮಧ್ಯದಲ್ಲೇ ಕುಡಿಯುತ್ತ ಕುಳಿತಿದ್ದ ಯುವಕರ ಗುಂಪನ್ನು ನೋಡಿ, ದಾರಿ ಬಿಡುವಂತೆ ಚಾಲಕ ಮತ್ತು ನಿರ್ವಾಹಕರು ಹೇಳಿದ್ದಾರೆ. ಇದರಿಂದ ಆಕ್ರೋಶಗೊಂಡ ಯುವಕರ ತಂಡ, ಚಾಲಕ ನಿರ್ವಾಹಕ ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಅಲ್ಲದೇ ಬಸ್‍ನ ಗಾಜಿಗೆ ಕಲ್ಲು ತೂರಿ ಒಡೆದು ಹಾಕಿದ್ದಾರೆ.

    ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಅರಕೆರೆ ಸಬ್ ಇನ್ಸ್​ಪೆಕ್ಟರ್ ನೇತೃತ್ವದ ತಂಡ ಹಲ್ಲೆ ಮಾಡಿದ್ದ ಮೂವರು ಯುವಕರನ್ನು ವಶಕ್ಕೆ ಪಡೆದಿದ್ದು, ಪರಾರಿಯಾದ 7 ಜನ ಯುವಕರ ಪತ್ತೆಗೆ ಬಲೆ ಬೀಸಿದ್ದಾರೆ. ಹಲ್ಲೆಯಿಂದ ಗಾಯಗೊಂಡಿದ್ದ ಚಾಲಕ ಹಾಗೂ ನಿರ್ವಾಹಕರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆದರೆ ಚಾಲಕ ಮಾದೇಗೌಡ ಗಂಭೀರವಾಗಿ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ ಎಂದು ತಿಳಿದು ಬಂದಿದೆ.

    ಹಲ್ಲೆ ನಡೆಸಿದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಘಟನೆ ಸಂಬಂಧ ಅರಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ತಮಿಳುನಾಡು ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಆರೋಗ್ಯ ಸ್ಥಿತಿ ಗಂಭೀರ

    ತಮಿಳುನಾಡು ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಆರೋಗ್ಯ ಸ್ಥಿತಿ ಗಂಭೀರ

    ಚೆನ್ನೈ: ತಮಿಳುನಾಡಿನ ಡಿಎಂಕೆ ಪಕ್ಷದ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಂ ಕರುಣಾನಿಧಿ ಅವರ ಆರೋಗ್ಯ ಗಂಭೀರವಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

    ಜ್ವರ ಹಾಗೂ ಮೂತ್ರನಾಳ ಸೋಂಕಿನಿಂದ ಬಳಲುತ್ತಿದ್ದ ಕರುಣಾನಿಧಿಯವರನ್ನು ಜುಲೈ 28ರಂದು ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಾಗಿಸಲಾಗಿತ್ತು. ಇಂದು ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಕಾವೇರಿ ಆಸ್ಪತ್ರೆ ಆಡಳಿತ ಮಂಡಳಿ ಪುತ್ರಿ ಕನಿಮೋಳಿಯೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.

    ಕಳೆದ ವಾರದಿಂದ ಚಿಕಿತ್ಸೆಗೆ ಸ್ಪಂದಿಸಿದ್ದ ಅವರು ಸ್ವಲ್ಪ ಚೇತರಿಕೆ ಕಂಡಿದ್ದರು. ಆದರೆ ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿರುವುದರಿಂದ ಅವರ ಆರೋಗ್ಯ ಮತ್ತಷ್ಟು ಗಂಭೀರವಾಗಿದೆ. ಕರುಣಾನಿಧಿಯವರಿಗೆ ಉನ್ನತ ವೈದ್ಯರುಗಳು ಚಿಕಿತ್ಸೆ ಮುಂದುವರಿಸಿದ್ದು, ಆರೋಗ್ಯ ಸುಧಾರಣೆ ಕಾಣುವವರೆಗೂ ಆಸ್ಪತ್ರೆಯಲ್ಲೇ ದಾಖಲಾಗಿರುತ್ತಾರೆ ಎಂದು ಆಸ್ಪತ್ರೆ ಆಡಳಿತ ಮಂಡಳಿ ಹೇಳಿದೆ.

    ಕರುಣಾನಿಧಿಯವರು ಆಸ್ಪತ್ರೆಗೆ ದಾಖಲಿಸಿದ ದಿನದಿಂದಲೂ ಆಸ್ಪತ್ರೆ ಬಳಿಯೇ ಜಮಾಯಿಸುವ ಅಭಿಮಾನಿಗಳಿಗೆ ವೈದ್ಯರ ಹೇಳಿಕೆಯಿಂದಾಗಿ ಮತ್ತಷ್ಟು ಆತಂಕಕ್ಕೊಳಗಾಗಿದ್ದಾರೆ. ಅಲ್ಲದೇ ಅಭಿಮಾನಿಗಳು ಕರುಣಾನಿಧಿಯವರು ಆದಷ್ಟು ಬೇಗ ಗುಣಮುಖರಾಗಿಬರಲೆಂದು ಹಾರೈಸುತ್ತಿದ್ದಾರೆ.

    ಭಾನುವಾರ ರಾಷ್ಟ್ರಪತಿ ರಾಮನಾಥ ಕೋವಿಂದರವರು ಕಾವೇರಿ ಆಸ್ಪತ್ರೆಗೆ 5 ಬಾರಿ ಭೇಟಿ ನೀಡಿ ಕರುಣಾನಿಧಿಯವರ ಆರೋಗ್ಯವನ್ನು ಖುದ್ದು ವಿಚಾರಿಸಿದ್ದಾರೆ. ಅವರ ಆರೋಗ್ಯದ ಬಗ್ಗೆ ಪುತ್ರ ಸ್ಟಾಲಿನ್ ಹಾಗೂ ವೈದ್ಯರ ಬಳಿ ದೀರ್ಘ ಮಾತುಕತೆಯನ್ನು ನಡೆಸಿದ್ದರು. ಭೇಟಿಯ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿತಿಸಿದ ಅವರು, ಕರುಣಾನಿಧಿಯವರು ಶೀಘ್ರವೇ ಗುಣಮುಖರಾಗಿ ಸಹಜ ಸ್ಥಿತಿಗೆ ಮರಳುತ್ತಾರೆಂದು ತಿಳಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews