Tag: ಗಂಧದ ಮರ

  • ಗಂಧದ ಮರ ಚೋರನಿಗೆ ಬಿತ್ತು ಗುಂಡೇಟು – ಸ್ಥಳದಲ್ಲೇ ಪ್ರಾಣ ಬಿಟ್ಟ ಕಳ್ಳ

    ಗಂಧದ ಮರ ಚೋರನಿಗೆ ಬಿತ್ತು ಗುಂಡೇಟು – ಸ್ಥಳದಲ್ಲೇ ಪ್ರಾಣ ಬಿಟ್ಟ ಕಳ್ಳ

    ಆನೇಕಲ್: ಕಳೆದ ಹಲವು ದಿನಗಳಿಂದ ಗಂಧದ ಮರ (Sandalwood) ಕಳ್ಳತನ (Theft) ಮಾಡುತ್ತಿದ್ದ ಖದೀಮನ ಮೇಲೆ ಫಾರೆಸ್ಟ್ ಬೀಟ್ ಸಿಬ್ಬಂದಿ ಗುಂಡು ಹಾರಿಸಿದ್ದು, ಕಳ್ಳ ಸ್ಥಳದಲ್ಲೇ ಪ್ರಾಣ ಬಿಟ್ಟಿರುವ ಘಟನೆ ಬನ್ನೇರುಘಟ್ಟ (Bannerghatta) ಅರಣ್ಯ ಪ್ರದೇಶದ ಕಲ್ಕೆರೆಯಲ್ಲಿ ನಡೆದಿದೆ.

    ಬೆಂಗಳೂರು ಹೊರವಲಯದ ಬನ್ನೇರುಘಟ್ಟದ ಅರಣ್ಯ ಪ್ರದೇಶದಲ್ಲಿ ಕಳೆದ ಕೆಲ ದಿನಗಳಿಂದ ಗಂಧದ ಮರಗಳ ಕಳ್ಳತನವಾಗುತ್ತಿತ್ತು. ಈ ಹಿನ್ನೆಲೆ ಫಾರೆಸ್ಟ್ ಬೀಟ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿತ್ತು. ರಾತ್ರಿ 2 ಗಂಟೆಯ ಸುಮಾರಿಗೆ ಕಳ್ಳ ಗಂಧದ ಮರ ಕಳ್ಳತನಕ್ಕೆ ಬಂದಿದ್ದ. ಈ ವೇಳೆ ಬೀಟ್ ಫಾರೆಸ್ಟ್ ಗಾರ್ಡ್ ವಿನಯ್ ಗುಂಡು ಹಾರಿಸಿದ್ದಾರೆ. ಇದನ್ನೂ ಓದಿ: KRS ಡ್ಯಾಂನಿಂದ ಮತ್ತೆ ತಮಿಳುನಾಡಿಗೆ ನೀರು

    ಗಸ್ತಿನ ವೇಳೆ ಕಳ್ಳನ ಮೇಲೆ ಫಾರೆಸ್ಟ್ ಗಾರ್ಡ್ ಫೈರಿಂಗ್ ಮಾಡಿದ್ದು, ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಇಂದು ಮೈಸೂರಿನಲ್ಲಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗಾಳಿಯಲ್ಲಿ ಗುಂಡುಹಾರಿಸಿ ಹಿಡಿಯಲು ಮುಂದಾದ ಅರಣ್ಯಾಧಿಕಾರಿಗಳ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ ಗಂಧಚೋರರು

    ಗಾಳಿಯಲ್ಲಿ ಗುಂಡುಹಾರಿಸಿ ಹಿಡಿಯಲು ಮುಂದಾದ ಅರಣ್ಯಾಧಿಕಾರಿಗಳ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ ಗಂಧಚೋರರು

    ಮಂಡ್ಯ: ಗಂಧದ ಮರ (Sandalwood) ಕಡಿಯುತ್ತಿದ್ದವರನ್ನು ಹಿಡಿಯಲು ಅರಣ್ಯಾಧಿಕಾರಿಗಳು (Forest Officer) ಗಾಳಿಯಲ್ಲಿ ಫೈರಿಂಗ್ (Firing) ಮಾಡಿದ್ದು, ಈ ವೇಳೆ ಗಂಧಚೋರರು ಅರಣ್ಯ ಸಿಬ್ಬಂದಿ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿರುವ ಘಟನೆ ಮಂಡ್ಯ (Mandya) ಜಿಲ್ಲೆಯ ನಾಗಮಂಗಲ ತಾಲೂಕಿನ ದೇವಲಾಪುರದ ಎಚ್.ಎನ್ ಕಾವಲ್ ಮೀಸಲು ಅರಣ್ಯ ಪ್ರದೇಶದಲ್ಲಿ ನಡೆದಿದೆ.

    ಬುಧವಾರ ಸಂಜೆ ನಾಗಮಂಗಲ ತಾಲೂಕಿನ ಅರಣ್ಯ ಪ್ರದೇಶದಲ್ಲಿ ಹಾಸನ ಮೂಲದ ಗೋವಿಂದಪ್ಪ ಹಾಗೂ ಆತನ ಮಕ್ಕಳಾದ ಶಂಕರ್ ಮತ್ತು ಕುಮಾರ್ ಗಂಧದ ಮರ ಕಡಿಯಲು ಬಂದಿದ್ದಾರೆ. ಈ ವೇಳೆ ಖಚಿತ ಮಾಹಿತಿ ಮೇರೆಗೆ ಅರಣ್ಯಾಧಿಕಾರಿಗಳು ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಿನ ಇತಿಹಾಸದಲ್ಲೇ ಫಸ್ಟ್ ಟೈಮ್ ಎಸ್‍ಪಿ ರೋಡ್ ಬಂದ್ – ಡಿ.13ಕ್ಕೆ ವಿಧಾನಸೌಧಕ್ಕೆ ವರ್ತಕರ ಮೆರವಣಿಗೆ

    ಅರಣ್ಯ ಇಲಾಖೆ ಅಧಿಕಾರಿಗಳು ಗಾಳಿಯಲ್ಲಿ ಗುಂಡು ಹಾರಿಸಿ ಮರಗಳ್ಳರನ್ನು ಬಂಧಿಸಲು ಮುಂದಾಗಿದ್ದಾರೆ. ಈ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಸಾಕಯ್ಯ ಅವರ ಮೇಲೆ ಮರಗಳ್ಳರು ಏಕಾಏಕಿ ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ. ಬಳಿಕ ಅಧಿಕಾರಿಗಳು ಮತ್ತೊಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಇದನ್ನೂ ಓದಿ: ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಯೋಧ ಸಾವು

    ಈ ವೇಳೆ ಗೋವಿಂದಪ್ಪನಿಗೆ ಗುಂಡಿನ ಚೂರುಗಳು ತಗುಲಿ ಗಾಯಗಳಾಗಿವೆ. ಮತ್ತಿಬ್ಬರು ಆರೋಪಿಗಳನ್ನು ಅಧಿಕಾರಿಗಳು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಗಾಯಾಳುಗಳಾದ ಅರಣ್ಯ ಸಿಬ್ಬಂದಿ ಸಾಕಯ್ಯ ಹಾಗೂ ಗುಂಡಿನ ಚೂರುಗಳಿಂದ ಗಾಯಗೊಂಡ ಆರೋಪಿ ಗೋವಿಂದಪ್ಪನಿಗೆ ನಾಗಮಂಗಲ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಶ್ರೀಗಂಧದ ಮರ ಕಳವು ಮಾಡಲು ಚಿಕನ್ ಪೀಸ್‍ನಲ್ಲಿ ವಿಷವಿಟ್ಟು ಶ್ವಾನಗಳನ್ನು ಕೊಂದ್ರು

    ಶ್ರೀಗಂಧದ ಮರ ಕಳವು ಮಾಡಲು ಚಿಕನ್ ಪೀಸ್‍ನಲ್ಲಿ ವಿಷವಿಟ್ಟು ಶ್ವಾನಗಳನ್ನು ಕೊಂದ್ರು

    ದಾವಣಗೆರೆ: ಶ್ವಾನಗಳಿಗೆ (Dog) ಚಿಕನ್ ಪೀಸ್‍ನಲ್ಲಿ (Chicken Pieces) ವಿಷಪ್ರಾಹಸನ ಮಾಡಿಸಿ ಶ್ರೀಗಂಧದ ಮರ (Sandalwood Tree) ಕದಿಯಲು ಯತ್ನಿಸಿದ ಘಟನೆ ದಾವಣಗೆರೆ (Davanagere) ಜಿಲ್ಲೆಯ ಹರಿಹರ ತಾಲೂಕಿನ ದೇವರಬೆಳಕೆರೆ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಮಂಜುನಾಥ್ ಎಂಬುವರ ಮನೆ ಮುಂದೆ ಇದ್ದ ಶ್ರೀಗಂಧದ ಮರ ಕದಿಯೋದಕ್ಕೆ ಬಂದಿದ್ದ ನಾಲ್ವರು ಕಳ್ಳರು (Thief) ಶ್ವಾನಗಳಿಗೆ ಚಿಕನ್ ಪೀಸ್‍ನಲ್ಲಿ ವಿಷವಿಟ್ಟು ಕೊಂದಿದ್ದಾರೆ. ಅಲ್ಲದೆ ಮಂಜುನಾಥ್ ಅವರ ಮನೆ ಸೇರಿದಂತೆ ಅಕ್ಕಪಕ್ಕದ 10ಕ್ಕೂ ಹೆಚ್ಚು ಮನೆಗಳ ಬಾಗಿಲಿಗೆ ಚಿಲಕ ಹಾಕಿ ಶ್ರೀಗಂಧದ ಮರ ಕತ್ತರಿಸಿದ್ದಾರೆ.

    ಬೆಳಗ್ಗಿನ ಜಾವ 3 ಗಂಟೆ ಸುಮಾರಿಗೆ ಮರ ನೆಲಕ್ಕೆ ಅಪ್ಪಳಿಸಿದ ಸದ್ದು ಕೇಳಿ ಅಕ್ಕಪಕ್ಕದವರಿಗೆ ಎಚ್ಚರವಾದಾಗ ಮನೆಗಳ ಬಾಗಲಿಗೆ ಚಿಲಕ ಹಾಕಿರೋದು ಗೊತ್ತಾಗಿದೆ. ಆಗ ಜೋರಾಗಿ ಬಾಯಿ ಮಾಡಿದ ಮೇಲೆ ಊರಿನ ಜನ ಹೊರ ಬಂದು ಕಳ್ಳರನ್ನು ಸೆರೆ ಹಿಡಿಯಲು ಯತ್ನಿಸಿದ್ದಾರೆ. ಇದನ್ನೂ ಓದಿ: ಹಾಸನ ಭಾಗದಲ್ಲಿ ಕಾಡಾನೆಗಳ ದಾಳಿಗೆ ಸರಣಿ ಬಲಿ- ವ್ಯಕ್ತಿ ಶವವಿಟ್ಟು ಪ್ರತಿಭಟನೆ

    ಕಾರಿನಲ್ಲಿ ಬಂದಿದ್ದ ನಾಲ್ವರ ಪೈಕಿ ಇಬ್ಬರು ಕಾರು ತೆಗೆದುಕೊಂಡು ಪರಾರಿಯಾಗಿದ್ದಾರೆ. ಮರದ ಮೇಲಿದ್ದ ಇಬ್ಬರು ಸುಮಾರು 2 ಕಿಮೀ ಓಡಿ ಹೋಗಿದ್ದಾರೆ. ಗ್ರಾಮದ ಯುವಕರು ಕಳ್ಳರನ್ನು ಬೆನ್ನಟ್ಟಿ ಸೆರೆ ಹಿಡಿದ್ದಾರೆ. ಸೆರೆ ಸಿಕ್ಕ ಇಬ್ಬರು ಕಳ್ಳರ ಪೈಕಿ ಒಬ್ಬ ಚಿಕ್ಕಮಗಳೂರಿನ ಲವಕುಮಾರ್, ಇನ್ನೊಬ್ಬ ತುಮಕೂರಿನ ಇಬ್ರಾನ್ ಎಂದು ಗುರುತಿಸಲಾಗಿದೆ. ಇವರದ್ದು ದೊಡ್ಡ ಗ್ಯಾಂಗ್ ಇದ್ದು, ಹರಿಹರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಅತ್ತ ಮೂಕಪ್ರಾಣಿಗಳು ಖದೀಮರ ಕೃತ್ಯಕ್ಕೆ ಜೀವತೆತ್ತಿದೆ. ಇದನ್ನೂ ಓದಿ: ಎಂ.ಪಿ ರೇಣುಕಾಚಾರ್ಯ ಸಹೋದರನ ಪುತ್ರ ನಾಪತ್ತೆ- ಕುಟುಂಬಸ್ಥರಲ್ಲಿ ಆತಂಕ

    Live Tv
    [brid partner=56869869 player=32851 video=960834 autoplay=true]

  • ‘ದೆವ್ವ’ವನ್ನು ಕಂಬಕ್ಕೆ ಕಟ್ಟಿ ಹೊಡೆದ ಮಲೆನಾಡಿಗರು

    ‘ದೆವ್ವ’ವನ್ನು ಕಂಬಕ್ಕೆ ಕಟ್ಟಿ ಹೊಡೆದ ಮಲೆನಾಡಿಗರು

    ಚಿಕ್ಕಮಗಳೂರು: ಶ್ರೀಗಂಧದ ಮರಗಳ ಕಳ್ಳತನಕ್ಕೆ ಬಂದಿದ್ದ ಹಾಸನ ಜಿಲ್ಲೆ ಬೇಲೂರು ತಾಲೂಕಿನ ಅರೇಹಳ್ಳಿಯ ‘ದೆವ್ವ’ವನ್ನು ಮಲೆನಾಡಿಗರು ಕಂಬಕ್ಕೆ ಕಟ್ಟಿ ಹೊಡೆದಿದ್ದಾರೆ.

    ಕೇಳೋಕೆ ಆಶ್ಚರ್ಯ ಅನ್ನಿಸಿದರು ಸತ್ಯ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಜಿ.ಹೊಸಳ್ಳಿ ಗ್ರಾಮದಂಚಿನಲ್ಲಿದ್ದ ಐದು ಶ್ರೀಗಂಧದ ಮರಗಳನ್ನ ಕದಿಯಲೆಂದು ಅರೇಹಳ್ಳಿಯ ಐವರು ಕಳ್ಳರು ಬಂದಿದ್ದರು. ಊರ ಹೊರಗೆ ಮರ ಕಡಿಯುವ ಶಬ್ಧವನ್ನು ಆಲಿಸಿದ ಗ್ರಾಮಸ್ಥರು ಸ್ಥಳಕ್ಕೆ ಬಂದಾಗ ಗಂಧದ ಕಳ್ಳರು ಮುಖಕ್ಕೆ ವಿಚಿತ್ರ ಮಾಸ್ಕ್ ಹಾಕಿ ಗ್ರಾಮಸ್ಥರನ್ನ ಹೆದರಿಸಲು ಪ್ರಯತ್ನಿಸಿದ್ದಾರೆ.

    ದೆವ್ವಕ್ಕೆ ಹೆದರದ ಗ್ರಾಮಸ್ಥರು ಒಟ್ಟಾಗಿ ಮುನ್ನುಗ್ಗಿದಾಗ, ಮುಖದಿಂದ ಮಾಸ್ಕ್ ತೆಗೆದು ಎಲ್ಲರೂ ಓಡಲು ಆರಂಭಿಸಿದ್ದಾರೆ. ಆದರೆ ಊರಿನ ಜನ ಓರ್ವನನ್ನ ಹಿಡಿದು ಕಂಬಕ್ಕೆ ಕಟ್ಟಿ ಚೆನ್ನಾಗಿ ಹೊಡೆದು ಅರಣ್ಯ ಇಲಾಖೆಯ ವಶಕ್ಕೆ ನೀಡಿದ್ದಾರೆ. ಐವರಲ್ಲಿ ಓರ್ವ ಸಿಕ್ಕಿಬಿದ್ದಿದ್ದು, ನಾಲ್ವರು ತಪ್ಪಿಸಿಕೊಂಡಿದ್ದಾರೆ. ಬಂಧಿತರಿಂದ ಐದು ಗಂಧದ ತುಂಡು, ಆಟೋ, ಒಂದು ಬೈಕ್ ಹಾಗೂ ಮುಖವಾಡಗಳನ್ನು ಅರಣ್ಯ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

  • ಬೆಳಗ್ಗೆ ಅಂಗವಿಕಲನಂತೆ ಬಂದು ರಾತ್ರಿ ಗಂಧದ ಮರ ದೋಚಿದ್ರು

    ಬೆಳಗ್ಗೆ ಅಂಗವಿಕಲನಂತೆ ಬಂದು ರಾತ್ರಿ ಗಂಧದ ಮರ ದೋಚಿದ್ರು

    ಉಡುಪಿ: ಕಾಡಲ್ಲಿರುವ ಗಂಧದ ಮರ ದೋಚಿ ಖಾಲಿ ಮಾಡಿರುವ ಕಳ್ಳರು ಈಗ ನಾಡಿಗೂ ಲಗ್ಗೆಯಿಟ್ಟಿದ್ದಾರೆ. ಮನೆಯಂಗಳದಲ್ಲಿ ನೆಟ್ಟ ಗಂಧದ ಗಿಡಕ್ಕೂ ಕತ್ತರಿ ಹಾಕಿದ್ದಾರೆ.

    ಉಡುಪಿಯ ನಗರದ ಅಂಬಲಪಾಡಿ ಮಹಾಕಾಳಿ ದೇವಸ್ಥಾನ ಪರಿಸರದ ಮನೆ ಆವರಣದಲ್ಲಿ ಬೆಳೆದಿದ್ದ ಗಂಧದ ಮರವನ್ನು ಮೂವರು ಚೋರರು ರಾತ್ರೋ ರಾತ್ರಿ ಕಡಿದು ಕೊಂಡೊಯ್ದಿದ್ದಾರೆ. ಮರ ಕಳ್ಳತನವಾದ ದಿನ ಹಗಲಲ್ಲಿ ಅಂಗವಿಕಲನ ವೇಷದಲ್ಲಿ ಬಂದಿದ್ದ ವ್ಯಕ್ತಿ ಮರವನ್ನು ನೋಡಿಕೊಂಡು ಹೋಗಿದ್ದಾನೆ. ನಂತರ ಕತ್ತಲಾಗುತ್ತಿದ್ದಂತೆ ಅವನು ಮತ್ತವನ ಗ್ಯಾಂಗ್ ಬಂದು ಮರ ಕಿತ್ತೊಯ್ದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ.

    ಹಗಲಿನಲ್ಲಿ ಭಿಕ್ಷೆ ಕೇಳುವ ನೆಪ ಮಾಡಿಕೊಂಡು ಮನೆಗೆ ಬಂದಾತ ಅದೇ ದಿನ ರಾತ್ರಿ ಒಂದು ಗಂಟೆ ಸುಮಾರಿಗೆ ಇತರ ಇಬ್ಬರೊಂದಿಗೆ ಬಂದು ಮರಕಳ್ಳತನ ಮಾಡಿದ್ದಾನೆ. ಸದ್ದಿಲ್ಲದೆ ಗಂಧದ ಮರ ಉರುಳಿಸಿ, ಯಾರಿಗೂ ಸಂಶಯ ಬಾರದಂತೆ ಕ್ಷಣ ಮಾತ್ರದಲ್ಲಿ ಅದನ್ನು ತೆಗೆದುಕೊಂಡು ಹೋಗಿದ್ದಾರೆ.

    ಸುಮಾರು ಒಂದೂವರೆ ಲಕ್ಷರೂಪಾಯಿಯಷ್ಟು ಮೌಲ್ಯದ ಈ ಗಂಧದ ಗಿಡವನ್ನು ಮನೆತೋಟದಲ್ಲೇ ಬೆಳೆಸಲಾಗಿತ್ತು. ಮನೆಯಲ್ಲಿ ಜನರು ವಾಸವಿದ್ದರೂ ರಾಜಾರೋಷವಾಗಿ ಬಂದು ಚೋರರ ತಂಡ ಕೆಲಸ ಮುಗಿಸಿ ಹೋಗಿದ್ದಾರೆ. ಅರಣ್ಯ ಇಲಾಖೆ ಮತ್ತು ಪೊಲೀಸ್ ಠಾಣೆಗೆ ದೂರು ಕೊಡಲು ಮನೆಯವರು ನಿರ್ಧರಿಸಿದ್ದಾರೆ.

  • ಪೊಲೀಸ್ ಕಮೀಷನರ್ ಕಚೇರಿ ಪಕ್ಕದಲ್ಲೇ ಗಂಧದ ಮರ ಕದ್ದ ಕಳ್ಳರು!

    ಪೊಲೀಸ್ ಕಮೀಷನರ್ ಕಚೇರಿ ಪಕ್ಕದಲ್ಲೇ ಗಂಧದ ಮರ ಕದ್ದ ಕಳ್ಳರು!

    ಬೆಂಗಳೂರು: ನಗರ ಪೊಲೀಸ್ ಆಯುಕ್ತ ಕಚೇರಿ ಕೂಗಳತೆ ದೂರದಲ್ಲೇ ಗಂಧದ ಮರಗಳ ಕಳ್ಳತನ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

    ಇನ್‍ಫ್ಯಾಂಟ್ರಿ ರಸ್ತೆಯಲ್ಲಿರುವ ಕಮೀಷನರ್ ಕಚೇರಿ ಪಕ್ಕದಲ್ಲೇ ಇರುವ ಎಂಬೆಸ್ಸಿ ಅಪಾಟ್ರ್ಮೆಂಟ್‍ನಲ್ಲಿ ಗಂಧದ ಮರವನ್ನು ಕಳ್ಳರು ಕದ್ದೊಯ್ದಿದ್ದಾರೆ. ಇದೇ ತಿಂಗಳ 21 ರಂದು ಘಟನೆ ನಡೆದಿದ್ದು, ಈ ವೇಳೆ ಮಚ್ಚು ದೊಣ್ಣೆಗಳಿಂದ ಭದ್ರತಾ ಸಿಬ್ಬಂದಿಯನ್ನು ಬೆದರಿಸಿರುವ ಕಳ್ಳರು ಗಂಧದ ಮರವನ್ನು ಕಳ್ಳತನ ಮಾಡಿದ್ದಾರೆ.

    ಬೆಳಗಿನ ಜಾವ ಸುಮಾರು 3.55 ಸಮಯದಲ್ಲಿ ಮುಖಕ್ಕೆ ಮಂಕಿ ಕ್ಯಾಪ್ ಧರಿಸಿ ಬಂದ ನಾಲ್ಕು ಕಳ್ಳರು ಅಪಾರ್ಟ್‍ಮೆಂಟ್ ಕಾಂಪೌಂಡ್ ಜಿಗಿದು ಒಳಪ್ರವೇಶ ಮಾಡಿದ್ದಾರೆ. ಅಲ್ಲದೇ ಈ ವೇಳೆ ಕರ್ತವ್ಯದಲ್ಲಿದ್ದ ಭದ್ರತಾ ಸಿಬ್ಬಂದಿಗಳಿಗೆ ಮಾರಕಾಸ್ತ್ರಗಳಿಂದ ಬೆದರಿಕೆ ಹಾಕಿ ಸ್ಥಳದಲ್ಲಿದ್ದ ಶ್ರೀಗಂಧ ಮರವನ್ನು ಯಂತ್ರದಿಂದ ತುಂಡರಿಸಿ ಕಳವು ಮಾಡಿದ್ದಾರೆ.

    ಘಟನೆ ಸಂಬಂಧ ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಸಚಿವರ ಮನೆಗಳಿಗೂ ಸೇಫ್ ಇಲ್ಲ – 7 ಮಿನಿಸ್ಟರ್  ಕ್ವಾಟ್ರಸ್‍ನಲ್ಲಿ  ಕಳ್ಳತನ

    ಸಚಿವರ ಮನೆಗಳಿಗೂ ಸೇಫ್ ಇಲ್ಲ – 7 ಮಿನಿಸ್ಟರ್ ಕ್ವಾಟ್ರಸ್‍ನಲ್ಲಿ ಕಳ್ಳತನ

    ಬೆಂಗಳೂರು: ನಗರದಲ್ಲಿ ಸಚಿವರ ಮನೆಗಳಿಗೂ ಸುರಕ್ಷತೆ ಇಲ್ಲದಂತಾಗಿದೆ. ಯಾಕಂದರೆ 7 ಮಿನಿಸ್ಟರ್  ಕ್ವಾಟ್ರಸ್‍ನಲ್ಲಿ  ಕಳ್ಳತನ ನಡೆದಿದೆ.

    ಬೆಂಗಳೂರಿನ ಗಾಲ್ಫ್ ಕ್ಲಬ್ ಬಳಿಯ 7 ಮಿನಿಸ್ಟರ್  ಕ್ವಾಟ್ರಸ್‍ನಲ್ಲಿ  ಈ ಕಳ್ಳತನ ನಡೆದಿದೆ. ರಾತ್ರೋರಾತ್ರಿ 2 ಗಂಧದ ಮರಗಳನ್ನು ಕತ್ತರಿಸಿಕೊಂಡು ಖದೀಮರು ಪರಾರಿಯಾಗಿದ್ದಾರೆ. ಖಾಲಿ ಇದ್ದ 6ನೇ ಖಾಲಿ ಕ್ವಾರ್ಟರ್ಸ್ ನ ಆವರಣದಲ್ಲಿ ಈ ಕಳ್ಳತನ ನಡೆದಿದೆ. ಈ ಹಿಂದೆ ಕಾನೂನು ಸಚಿವರಾಗಿದ್ದ ಟಿ.ಬಿ ಜಯಚಂದ್ರಗೆ ಈ ಕ್ವಾಟ್ರಸ್‍ ನೀಡಲಾಗಿತ್ತು.

    ಈಗ ಸಮ್ಮಿಶ್ರ ಸರ್ಕಾರದಲ್ಲಿ ಈ ಕ್ವಾರ್ಟರ್ಸ್ ನ್ನು ಯಾವ ಸಚಿವರಿಗೂ ನಿಯೋಜನೆ ಮಾಡಿಲ್ಲ. ಆದರು ಈ ಕ್ವಾಟ್ರಸ್‍ ಗೆ ಪೊಲೀಸ್ ಕಣ್ಗಾವಲಿತ್ತು. ಪೊಲೀಸರ ಕಾವಲಿದ್ದರೂ 2 ಗಂಧದ ಮರಗಳು ಬುಡಸಮೇತ ಮಾಯವಾಗಿವೆ. ಈ ಗಂಧದ ಮರ 30 ವರ್ಷ ಹಳೆಯದಾಗಿದ್ದು, ಭಾರೀ ಗಾತ್ರದಾಗಿದ್ದವು.

    ಸಚಿವರ ಕ್ವಾಟ್ರಸ್‍ನಲ್ಲಿ  ಗಂಧದ ಮರ ಕಳ್ಳತನ ನಡೆದಿರೋದು ಹಲವು ಅನುಮಾನ ಹುಟ್ಟು ಹಾಕಿದೆ. ಈ ಮರಗಳ್ಳತನದ ಹಿಂದೆ ಅಧಿಕಾರಿಗಳು ಶಾಮೀಲಾಗಿದ್ದಾರಾ ಅನ್ನೋ ಗುಮಾನಿ ವ್ಯಕ್ತವಾಗಿದೆ. ಯಾಕಂದ್ರೆ ಗಂಧದ ಮರ ಕಳವಾದರು ಕೂಡ ಯಾವ ಸಿಬ್ಬಂದಿ ಕೂಡ ಇದರ ಬಗ್ಗೆ ಗಮನ ಹರಿಸಿಲ್ಲ. ಸದ್ಯ ಪೊಲೀಸರು ಈ ಬಗ್ಗೆ ತನಿಖೆಯನ್ನು ಮುಂದುವರಿಸಿದ್ದಾರೆ.

    ಈ ಕ್ವಾಟ್ರಸ್‍ನ ಮುಂಭಾಗದಲ್ಲಿಯೇ ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ಅವರ ಕ್ವಾಟ್ರಸ್‍ ಕೂಡ ಇದೆ. ಪಕ್ಕದಲ್ಲಿಯೇ ಹೈಕೋರ್ಟ್ ನ್ಯಾಯಾಧೀಶರಾದ ಎಸ್.ಎನ್ ಸತ್ಯನಾರಾಯಣ್ ಅವರ ನಿವಾಸ ಕೂಡ ಇದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪೊಲೀಸ್ ಠಾಣೆ, ಕೋರ್ಟ್ ಆವರಣದಲ್ಲೇ ಗಂಧದ ಮರ ಕಳವು

    ಪೊಲೀಸ್ ಠಾಣೆ, ಕೋರ್ಟ್ ಆವರಣದಲ್ಲೇ ಗಂಧದ ಮರ ಕಳವು

    ದಾವಣರೆಗೆ: ಪೊಲೀಸ್ ಠಾಣೆ ಹಾಗೂ ಕೋರ್ಟ್ ಆವರಣದಲ್ಲಿರುವ ಗಂಧದ ಮರ ಕಳವಾಗಿರುವ ಘಟನೆ ಜಿಲ್ಲೆಯ ಚನ್ನಗಿರಿ ಪಟ್ಟಣದಲ್ಲಿ ನಡೆದಿದೆ.

    ಪೊಲೀಸ್ ಠಾಣೆಯ ಹಿಂಭಾಗದಲ್ಲಿರುವ ಎರಡು ಗಂಧದ ಮರಗಳು ಹಾಗೂ ಕೋರ್ಟ್ ಪಕ್ಕದಲ್ಲಿರುವ ಗಂಧದ ಮರ ಕಳವುವಾಗಿವೆ. ಎರಡು ವರ್ಷಗಳ ಹಿಂದೆ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಒಂದು ಗಂಧದ ಮರ ಕಳವುವಾಗಿತ್ತು. ಈಗ ಮತ್ತೆ ಅಲ್ಲಿ ಗಂಧದ ಮರ ಕಳ್ಳತನವಾಗಿರುವುದರಿಂದ ಹಲವು ಅನುಮಾನಕ್ಕೆ ಕಾರಣವಾಗಿವೆ.

    ಸರ್ಕಾರಿ ಕಚೇರಿಗಳಾದ ಕೋರ್ಟ್ ಆವರಣ ಹಾಗೂ ಪೊಲೀಸ್ ಠಾಣೆಯಲ್ಲಿಯೇ ಗಂಧದ ಮರಗಳು ಕಳವುವಾಗುತ್ತಿವೆ. ಅಲ್ಲಿಯೇ ಮರಗಳಿಗೆ ರಕ್ಷಣೆ ಇಲ್ಲ. ಇನ್ನೂ ಬೇರೆ ಯಾವ ಕಡೆ ಮರಗಳಿಗೆ ರಕ್ಷಣೆ ಇರುತ್ತದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಪೊಲೀಸ್ ಠಾಣೆಯ ಮುಂಭಾಗವೇ ಗಂಧದ ಮರ ಕಳವಿನಿಂದ ಪೊಲೀಸರು ತಲೆಕೆಡಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಅರಣ್ಯ ಇಲಾಖೆ ಕಚೇರಿ ಆವರಣದೊಳಗೆ ನುಗ್ಗಿ ಗಂಧದ ಮರ ಕತ್ತರಿಸಿದ ಕಳ್ಳರು!

    ಅರಣ್ಯ ಇಲಾಖೆ ಕಚೇರಿ ಆವರಣದೊಳಗೆ ನುಗ್ಗಿ ಗಂಧದ ಮರ ಕತ್ತರಿಸಿದ ಕಳ್ಳರು!

    ಮಂಡ್ಯ: ವಲಯ ಅರಣ್ಯಾಧಿಕಾರಿಗಳ ಕಚೇರಿ ಆವರಣದ ಒಳಗೆ ಗಂಧದ ಮರ ಕಡಿದು ಕಳವು ಮಾಡಲು ಯತ್ನಿಸಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಗುರುವಾರ ರಾತ್ರಿ ಕಳ್ಳರು ಅರಣ್ಯ ಇಲಾಖೆ ಕಚೇರಿ ಆವರಣಕ್ಕೆ ಬಂದು ಗರಗಸದಿಂದ ಮರವನ್ನು ಕತ್ತರಿಸಿದ್ದಾರೆ. ಈ ವೇಳೆ ಮರ ಬಿದ್ದ ಶಬ್ಧ ಕೇಳಿ ಅರಣ್ಯ ಇಲಾಖೆ ಸಿಬ್ಬಂದಿ ಓಡಿ ಬಂದಿದ್ದಾರೆ. ಸಿಬ್ಬಂದಿಯನ್ನು ನೋಡಿ ಕಳ್ಳರು ಸ್ಥಳದಿಂದ ಪರಾರಿಯಾಗಿದ್ದಾರೆ.

    ಅರಣ್ಯ ಇಲಾಖೆ ಕಚೇರಿ ಆವರಣದಲ್ಲಿ ಸಿಬ್ಬಂದಿ ಇರುವಾಗಲೇ ಗಂಧದ ಮರ ಕಳವಿಗೆ ಯತ್ನಿಸಿರುವುದು ಇದೀಗ ಟೀಕೆಗೆ ಗುರಿಯಾಗಿದೆ. ಕಚೇರಿ ಆವರಣದಲ್ಲೇ ಮರವನ್ನು ರಕ್ಷಿಸಲಾಗದ ಸಿಬ್ಬಂದಿ ಇನ್ನು ಅರಣ್ಯ ಪ್ರದೇಶದಲ್ಲಿ ಹೇಗೆ ಮರಗಳನ್ನು ರಕ್ಷಿಸುತ್ತಾರೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.