Tag: ಗಂಡ

  • ಗಂಡನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಊರೆಲ್ಲಾ ಅರಚಾಡಿ ಹೈ-ಡ್ರಾಮಾ ಮಾಡಿದ ಪತ್ನಿ

    ಗಂಡನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಊರೆಲ್ಲಾ ಅರಚಾಡಿ ಹೈ-ಡ್ರಾಮಾ ಮಾಡಿದ ಪತ್ನಿ

    ಚಿಕ್ಕಬಳ್ಳಾಪುರ: ಪ್ರತಿನಿತ್ಯ ಕುಡಿದು ಬಂದು ವಿನಾಕಾರಣ ಗಲಾಟೆ ಮಾಡ್ತಿದ್ದ ಪತಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಪತ್ನಿ ಕೊಲೆ ಮಾಡಿದ್ದಾಳೆ. ಈ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಜಕ್ಕಸಂದ್ರ ಗ್ರಾಮದಲ್ಲಿ ನಡೆದಿದೆ.

    ಜಕ್ಕಸಂದ್ರ ಗ್ರಾಮದ ಹನುಮಯ್ಯ(35) ಕೊಲೆಯಾದ ವ್ಯಕ್ತಿ. ಹನುಮಯ್ಯ ಪತ್ನಿ ಭಾಗ್ಯಳನ್ನು ಕುಡಿದುಬಂದು ಯಾವಾಗಲೂ ಹಿಂಸೆ ಕೊಡುತ್ತಿದ್ದ. ಇದರಿಂದ ಬೇಸತ್ತ ಭಾಗ್ಯ, ಹನುಮಯ್ಯ ಮನೆಯಲ್ಲಿ ಮಲಗಿದ ಮೇಲೆ ದೊಡ್ಡ ಸೈಜುಗಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾಳೆ. ನಂತರ ಕೊಲೆ ಮಾಡಿದ್ದು ಯಾರಿಗೂ ಗೊತ್ತಾಗಬಾರದು ಅಂತ ಸೈಜುಗಲ್ಲನ್ನು ಮನೆ ಪಕ್ಕದ ಬಾವಿಯಲ್ಲಿ ಬಿಸಾಡಿದ್ದಾಳೆ. ಇದನ್ನೂ ಓದಿ: ಡ್ಯಾನ್ಸ್ ಕಲಿಸುವುದಾಗಿ ಹೇಳಿ ಕ್ಲಾಸ್‍ಗೆ ಕರೆಸಿ ಪ್ರೀತಿಸುಂತೆ ಪಿಡಿಸಿದ ಯುವಕ

    ಬೆಳಗ್ಗೆ ‘ಎದ್ದು ಅಯ್ಯೋ ನನ್ನ ಗಂಡನನ್ನ ಯಾರೋ ಕೊಲೆ ಮಾಡಿದ್ದಾರೆ’ ಅಂತ ಊರೆಲ್ಲಾ ಅರಚಾಡಿ ಕಿರುಚಾಟ ಮಾಡಿ ನಾಟಕ ಮಾಡಿದ್ದಾಳೆ. ವಿಷಯ ತಿಳಿದು ಗ್ರಾಮಕ್ಕೆ ಬಂದ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಭಾಗ್ಯಳನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಮಾಡಿದ ವಿಷಯ ಬಾಯ್ಬಿಟ್ಟಿದ್ದಾಳೆ.

    ಪ್ರಸ್ತುತ ಭಾಗ್ಯಳನ್ನ ವಶಕ್ಕೆ ಪಡೆದಿರುವ ಪೊಲೀಸರು, ಮೃತದೇಹವನ್ನ ದೊಡ್ಡಬಳ್ಳಾಪುರ ನಗರದ ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಭಿಕ್ಷುಕನ ಜೊತೆ ಪತ್ನಿ ರೊಮ್ಯಾನ್ಸ್ ನೋಡಿ ಬೆಚ್ಚಿಬಿದ್ದ ಪತಿ 

  • ಶೀಲ ಶಂಕಿಸಿ ಪತ್ನಿಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ!

    ಶೀಲ ಶಂಕಿಸಿ ಪತ್ನಿಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ!

    ವಿಜಯನಗರ: ಕೌಟುಂಬಿಕ ಕಲಹ ಕೊಲೆಯಲ್ಲಿ ಅಂತ್ಯವಾದ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ನಾಗೇನಹಳ್ಳಿಯಲ್ಲಿ ನಡೆದಿದೆ.

    ಹೆಂಡತಿಯ ಶೀಲದ ಮೇಲೆ ಅನುಮಾನಗೊಂಡ ಪತಿ ದೊಡ್ಡ ಹೊನ್ನೂರಪ್ಪಾ, ಹೆಂಡತಿ ಶಾಂತಮ್ಮ ಅವರನ್ನು ಕೊಚ್ಚಿ ಕೊಲೆ ಮಾಡಿದ್ದಾನೆ. ಕೊಡಲಿಯಿಂದ ಕೊಚ್ಚಿ ಪತ್ನಿಯನ್ನು ಕೊಂದು ತಾನೂ ಚಾಕು ಹಾಕಿಕೊಂಡು ಆತ್ಮಹತ್ಯೆ ಯತ್ನ ಮಾಡಿದ್ದಾನೆ. ಘಟನೆಯಲ್ಲಿ ಪತ್ನಿ ಶಾಂತಮ್ಮ ಸ್ಥಳದಲ್ಲೇ ಸಾವಿಗೀಡಾಗಿದ್ದು, ಪತಿ ದೊಡ್ಡ ಹೊನ್ನೂರಪ್ಪ ಸ್ಥಿತಿ ಗಂಭೀರವಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇದನ್ನೂ ಓದಿ: ತಾವು ಆಯ್ಕೆಯಾದ ಕ್ಷೇತ್ರಗಳಲ್ಲಿ ಕೆಲಸ ಮಾಡಿ, ರಾಜಧಾನಿಯಲ್ಲಿ ಅಲ್ಲ: ಭಗವಂತ್ ಮಾನ್

    ಕಳೆದ ಒಂದು ವರ್ಷಗಳಿಂದ ಪತಿ ದೊಡ್ಡ ಹೊನ್ನೂರಪ್ಪಾ ಹೆಂಡತಿಯ ಜೊತೆ ಆಗಾಗ ಜಗಳವಾಡಿ ಹೆಂಡತಿಯ ಶೀಲದ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದ. ಇದೇ ಕಾರಣಕ್ಕೆ ಇಂದು ಸಹ ಮನೆಯಲ್ಲಿ ಮಕ್ಕಳು ಇಲ್ಲದ ಸಮಯದಲ್ಲಿ ಜಗಳಕ್ಕೆ ಇಳಿದಿದ್ದಾನೆ.

    ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ತಿರುಗಿದ್ದು, ಈ ಸಮಯದಲ್ಲಿ ಕೊಡಲಿಯಿಂದ ಹೆಂಡತಿಯ ಕುತ್ತಿಗೆಗೆ ಹೊಡೆದು ಕೊಲೆ ಮಾಡಿದ್ದಾನೆ. ಬಳಿಕ ತಾನು ಚಾಕುವಿನಿಂದ ಹೊಟ್ಟೆಗೆ ಇರಿದುಕೊಂಡು, ಆತ್ಮಹತ್ಯೆಗೆ ಯತ್ನ ಮಾಡಿದ್ದಾನೆ. ಈ ಸಂಬಂಧ ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮತ್ತೆ ಬರ್ತಿದ್ಯ ಬಾಹುಬಲಿ 3 – ಪ್ರಭಾಸ್ ಉತ್ತರವೇನು?

  • 3 ತಿಂಗಳ ಗರ್ಭಿಣಿ ಪತ್ನಿಯ ಮೇಲೆ ಡೀಸೆಲ್ ಸುರಿದು ಬೆಂಕಿ ಹಚ್ಚಿದ!

    3 ತಿಂಗಳ ಗರ್ಭಿಣಿ ಪತ್ನಿಯ ಮೇಲೆ ಡೀಸೆಲ್ ಸುರಿದು ಬೆಂಕಿ ಹಚ್ಚಿದ!

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ರಾಕ್ಷಸ ಪ್ರವೃತ್ತಿಯ ಗಂಡನೊಬ್ಬನು ತನ್ನ ಮೂರು ತಿಂಗಳ ಗರ್ಭಿಣಿ ಪತ್ನಿಗೆ ಡೀಸೆಲ್ ಸುರಿದು ಕೊಲೆ ಮಾಡಲು ಯತ್ನಿಸಿದ ಘಟನೆ ನಡೆದಿದೆ.

    ಮಾರ್ಚ್ 9 ರಂದು ನಗರದ ಬೈಯಪ್ಪನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಪೊಲೀಸರು 37 ವರ್ಷದ ಆರೋಪಿ ಬಾಬುವನ್ನು ಬಂಧಿಸಿದ್ದಾರೆ.

    ಏನಿದು ಪ್ರಕರಣ?
    ಏಳು ವರ್ಷದ ಹಿಂದೆ ಮೀನಾ ವಿಜಯಕಾಂತ್ ಎಂಬುವವರನ್ನು ವಿವಾಹವಾಗಿದ್ದರು. ಈ ದಂಪತಿಗೆ 3 ಜನ ಹೆಣ್ಣು ಮಕ್ಕಳಿದ್ದು ವಿಧಿವಶಾತ್ ಮೂರು ವರ್ಷದ ಹಿಂದೆಯೇ ಅವರ ಮೊದಲನೇಯ ಪತಿ ತೀರಿಹೋಗಿದ್ದರು. ಇದನ್ನೂ ಓದಿ: Bulldozer is Back – ಟ್ರೆಂಡ್‌ ಆಯ್ತು ಬುಲ್ಡೋಜರ್‌, ಬುಲ್ಡೋಜರ್‌ ಏರಿ ಬಿಜೆಪಿಯಿಂದ ಸಂಭ್ರಮಾಚರಣೆ

    ನಂತರ ಮೀನಾಗೆ ಬಾಬು ಪರಿಚಯವಾಗುತ್ತದೆ. ಮೀನಾ ತನ್ನ ಬಾಳು ಬಂಗಾರವಾಗುತ್ತದೆ ಅಂತ ಬಾಬುನನ್ನು ಎರಡನೇ ಮದುವೆ ಆಗಿದ್ದರು. ಇಬ್ಬರು ಮದುವೆ ಆಗಿ ಬೈಯಪ್ಪನಹಳ್ಳಿಯಲ್ಲಿ ಒಂದು ವರ್ಷದಿಂದ ವಾಸವಿದ್ದರು. ನಂತರದಲ್ಲಿ ಇವರ ದಾಂಪತ್ಯ ಜೀವನವು ಚೆನ್ನಾಗಿಯೇ ಇತ್ತು. ಆದರೆ ಮೀನಾ ಕೂಲಿ ಮಾಡಿ ಕೂಡಿಟ್ಟ ಹಣವನ್ನೆಲ್ಲಾ ಅವನು ಕುಡಿದು ಹಾಳು ಮಾಡುತ್ತಿದ್ದನು.

    ಈ ವಿಚಾರಕ್ಕೆ ಇಬ್ಬರ ನಡುವೆ ಆಗಾಗ ಜಗಳವಾಗುತ್ತಲೇ ಇತ್ತು. ಮಾರ್ಚ್ 9 ರಂದು ದಂಪತಿಯ ನಡುವೆ ಜೋರಾಗಿ ಜಗಳ ನಡೆದಿದ್ದು, ಪತ್ನಿಯು ಇನ್ನೂ ದುಡ್ಡು ಕೇಳಿದರೆ ನಾನು ಮೈ ಮೇಲೆ ಡೀಸೆಲ್ ಸುರಿದುಕೊಂಡು ಸತ್ತು ಹೋಗುತ್ತೆನೆ ಎಂದಿದ್ದಾರೆ. ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆ – ಬಿಜೆಪಿ ಅಭ್ಯರ್ಥಿಗೆ ಸುಲಭವಾಗಿ ಸಿಗಲಿದೆ ಜಯ

    ಈ ವೇಳೆ ಸಾಯುತ್ತೇನೆ ಎಂದ ಪತ್ನಿಯನ್ನು ನೀನ್ಯಾಕೆ ಸಾಯ್ತೀಯಾ ನಾನೆ ಸಾಯಿಸ್ತೇನೆ ಬಾ ಅಂತ ಅಲ್ಲಿಯೇ ಸ್ಟೌ ನಲ್ಲಿದ್ದ ಡೀಸೆಲ್ ಸುರಿದು ಬೆಂಕಿ ಹಚ್ಚಿದ್ದಾನೆ. ನಂತರ ಮೀನಾರ ಮೊದಲ ಪತಿಗೆ ಜನಿಸಿದ್ದ ಪುಟ್ಟ ಹೆಣ್ಣು ಮಗುವನ್ನು ಕೂಡಾ ಕಚ್ಚಿ ವಿಕೃತಿ ಮೆರೆದಿದ್ದಾನೆ. ಘಟನೆ ಕುರಿತು ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕೌಟುಂಬಿಕ ಕಲಹ – ನಾಪತ್ತೆಯಾದ ಪತ್ನಿ ಫೋಟೋಗೆ ಫೇಸ್‍ಬುಕ್‍ನಲ್ಲಿ RIP ಸಿಂಬಲ್

    ಕೌಟುಂಬಿಕ ಕಲಹ – ನಾಪತ್ತೆಯಾದ ಪತ್ನಿ ಫೋಟೋಗೆ ಫೇಸ್‍ಬುಕ್‍ನಲ್ಲಿ RIP ಸಿಂಬಲ್

    ಚಿಕ್ಕಬಳ್ಳಾಪುರ: ಬರ್ತ್‍ಡೇ ಪಾರ್ಟಿ ವಿಚಾರವಾಗಿ ಗಂಡ, ಹೆಂಡತಿ ನಡುವೆ ಜಗಳ ನಡೆದಿದ್ದು, ಹೆಂಡತಿ ನಾಪತ್ತೆಯಾಗಿದ್ದಾಳೆ. ನಂತರ ಗಂಡನ ಫೇಸ್‍ಬುಕ್ ಖಾತೆಯಲ್ಲಿ ಹೆಂಡತಿ ಫೋಟೋಗೆ RIP ಅಂತ ಹಾಕಿ ಶ್ರದ್ಧಾಂಜಲಿ ಸಲ್ಲಿಸಲಾಗಿದೆ. ಇನ್ನು ಈ ಪೋಸ್ಟ್ ಕಂಡು ಯುವತಿಯ ಪೋಷಕರು ಮಗಳನ್ನು ಹುಡುಕಿಕೊಂಡು ಗಂಡನ ಮನೆಗೆ ಬಂದಿದ್ದು, ಅಳಿಯನ ವಿರುದ್ಧ ಕೊಲೆ ಆರೋಪ ಮಾಡಿದ್ದಾರೆ.

    ಈ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಉದನಹಳ್ಳಿ ಗ್ರಾಮದಲ್ಲಿ ನಡೆದಿದ್ದು, 22 ವರ್ಷದ ಲೀಲಾವತಿ ನಾಪತ್ತೆಯಾದ ಗೃಹಿಣಿಯಾಗಿದ್ದಾರೆ. ಲೀಲಾವತಿ ಅವರನ್ನು ಊದನಹಳ್ಳಿ ಗ್ರಾಮದ ಆರ್ಕೆಸ್ಟ್ರಾ ಕಲಾವಿದ ಮುನಿಕೃಷ್ಣ ಜೊತೆ ಮದುವೆ ಮಾಡಿಕೊಡಲಾಗಿತ್ತು. ಫೆಬ್ರವರಿ 23ರ ರಾತ್ರಿ ಮುನಿಕೃಷ್ಣ ತನ್ನ ತಂಗಿ ಮಗನ ಬರ್ತ್‍ಡೇ ಪಾರ್ಟಿಗೆ ಹೋಗಿದ್ದರು. ಇದೇ ವಿಚಾರಕ್ಕೆ ಲೀಲಾವತಿ ಹಾಗೂ ಮುನಿಕೃಷ್ಣನ ಇಬ್ಬರು ಜಗಳವಾಡಿದ್ದರು. ಈ ವೇಳೆ ಮುನಿಕೃಷ್ಣ ಹೆಂಡತಿಗೆ ಹೊಡೆದಿದ್ದರು. ಮರುದಿನ ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಮುನಿಕೃಷ್ಣ ತನ್ನ ಫೇಸ್‍ಬುಕ್ ಅಕೌಂಟ್‍ನಲ್ಲಿ ಹೆಂಡತಿಯ ಫೋಟೋಗೆ RIP ಅಂತ ಬರೆದು ಶ್ರದ್ಧಾಂಜಲಿ ಸಲ್ಲಿಸಿ ಪೋಸ್ಟ್ ಹಾಕಲಾಗಿತ್ತು. ಇದನ್ನೂ ಓದಿ: ಪ್ರವಾಸಿಗರಿಗೆ ಸಿಹಿ ಸುದ್ದಿ- ಡಾರ್ಜಿಲಿಂಗ್‍ನ ಟಾಯ್ ರೈಲಿನ ದರ ಇಳಿಕೆ

    chikkaballapur

    ಈ ಪೋಸ್ಟ್ ನೋಡಿ ಗಾಬರಿಗೊಂಡ ಲೀಲಾವತಿ ತಂದೆ ಉದನಹಳ್ಳಿಗೆ ಬಂದು ಮಗಳನ್ನು ಹುಡುಕಾಡಿದ್ದಾರೆ. ಆದರೆ ಮಗಳು ಪತ್ತೆಯಾಗದ ಕಾರಣ ತನ್ನ ಮಗಳನ್ನು ಹೊಡೆದು ಸಾಯಿಸಿದ್ದಾನೆಂದು ನೆನೆದು ಕಣ್ಣೀರು ಹಾಕಿದ್ದಾರೆ. ಆದರೆ ಮುನಿಕೃಷ್ಣನ ತಮ್ಮ ಮುನಿರಾಜು ಬೇರೆಯದೇ ಕಥೆ ಹೇಳುತ್ತಿದ್ದಾರೆ. ಬರ್ತ್‍ಡೇ ಪಾರ್ಟಿ ವಿಚಾರಕ್ಕೆ ಅಣ್ಣ, ಅತ್ತಿಗೆ ನಡುವೆ ಜಗಳವಾಗಿ ಮರುದಿನ ಬೆಳಗ್ಗೆ ಅತ್ತಿಗೆಗೆ ಅಣ್ಣ ಹೊಡೆದಿದ್ದು ನಿಜ. ಆ ನಂತರ ಅತ್ತಿಗೆ ಬ್ಯಾಗ್ ತೆಗೆದುಕೊಂಡು ಮನೆ ಬಿಟ್ಟು ಹೋಗಿದ್ದಾರೆ. ಅಣ್ಣನ ಮೊಬೈಲ್ ಆಕೆಯ ಬಳಿ ಇದ್ದು, ಅತ್ತಿಗೆಯೇ ಅಣ್ಣನ ಫೇಸ್‍ಬುಕ್ ಅಕೌಂಟ್‍ನಲ್ಲಿ ತನ್ನ ಫೋಟೋ ಹಾಕಿ RIP ಎಂದು ಹಾಕಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ ಎಂದು ವಾದ ಮಾಡಿದ್ದಾರೆ.

    chikkaballapur

    ಸದ್ಯ ದೊಡ್ಡಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ಲೀಲಾವತಿ ನಾಪತ್ತೆಗೆ ಸಂಬಂಧಿಸಿದಂತೆ ದೂರು ನೀಡಲಾಗಿದ್ದು, ಆಕೆಯ ಗಂಡ ಮುನಿಕೃಷ್ಣನನ್ನು ಠಾಣೆಗೆ ಕರೆದು ವಿಚಾರಣೆ ಮಾಡಲಾಗಿದೆ. ಜೊತೆಗೆ ಮೊಬೈಲ್ ಟವರ್ ಲೋಕೇಷನ್ ಪತ್ತೆ ಮಾಡಿದ್ದಾಗ ಆ ಮೊಬೈಲ್ ತಿರುಪತಿಯಲ್ಲಿರುವ ಮಾಹಿತಿ ಬರುತ್ತಿದೆ. ಆಸರೆ ಆಕೆ ಬದುಕಿದ್ದಾಳಾ ಇಲ್ಲವಾ ಎಂಬುದು ಪೊಲೀಸರ ತನಿಖೆಯಿಂದ ತಿಳಿದು ಬರಬೇಕಿದೆ. ಇದನ್ನೂ ಓದಿ: ಉಕ್ರೇನ್‍ನಲ್ಲಿ ಬಾಂಬ್ ಆರ್ಭಟ – 30 ಗಂಟೆಗಳ ಕಾಲ ಮೆಟ್ರೋ ಸುರಂಗದಲ್ಲೇ ಕುಳಿತ ಭಾರತೀಯ ವಿದ್ಯಾರ್ಥಿಗಳು

  • ನವವಿವಾಹಿತೆ ಟೆಕ್ಕಿ ಅನುಮಾನಸ್ಪದ ಸಾವು – ವರದಕ್ಷಿಣೆ ಕಿರುಕುಳ ಆರೋಪ

    ನವವಿವಾಹಿತೆ ಟೆಕ್ಕಿ ಅನುಮಾನಸ್ಪದ ಸಾವು – ವರದಕ್ಷಿಣೆ ಕಿರುಕುಳ ಆರೋಪ

    ಚಿಕ್ಕಬಳ್ಳಾಪುರ: ನವವಿವಾಹಿತೆ ಟೆಕ್ಕಿ ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ನಗರದ ಪ್ರಶಾಂತ ನಗರದಲ್ಲಿ ನಡೆದಿದೆ.

    ಪ್ರಶಾಂತ ನಗರದ ಮನೆಯ ಮೂರನೇ ಅಂತಸ್ತಿನ ಸ್ಟೋರ್ ರೂಂನಲ್ಲಿ ನವ್ಯ(23) ಫ್ಯಾನಿಗೆ ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಘಟನಾ ಸ್ಥಳಕ್ಕೆ ಚಿಕ್ಕಬಳ್ಳಾಪುರ ನಗರ ಪೊಲೀಸರು ಹಾಗೂ ತಾಲೂಕು ದಂಡಾಧಿಕಾರಿ ಗಣಪತಿ ಶಾಸ್ತ್ರೀ ಭೇಟಿ ನೀಡಿ ಪರಿಶೀಲನೆ ನಡೆಸಿ ಮೃತದೇಹವನ್ನ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ.

    Chikkaballapura

    ಇತ್ತ ಮೃತಳ ಸಂಬಂಧಿಕರು ಗಂಡ ಚೇತನ್ ಹಾಗೂ ಅತ್ತೆ ಮಾವನ ವಿರುದ್ಧ ವರದಕ್ಷಿಣೆ ಕಿರುಕುಳದ ಆರೋಪ ಹೊರಿಸಿದ್ದಾರೆ. ತಮ್ಮ ಮಗಳ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿ ತದನಂತರ ನೇಣು ಹಾಕಿದ್ದಾರೆ ಅಂತ ಆರೋಪಿಸಿದ್ದಾರೆ. ಮತ್ತೊಂದೆಡೆ ಮಗಳನ್ನು ಕಳೆದುಕೊಂಡ ದುಃಖದ ಮಡುವಿನಲ್ಲಿರುವ ಮೃತಳ ಸಂಬಂಧಿಕರು ಗಂಡ ಚೇತನ್ ಮೇಲೆ ಮುಗಿ ಬಿದ್ದು ಹಲ್ಲೆ ನಡೆಸಿದ್ದಾರೆ.

    ಗಂಡನ ಕಡೆಯವರು ವರದಕ್ಷಿಣೆ ಕಿರುಕುಳ ಇಲ್ಲ. ಕೆಲಸದ ಒತ್ತಡ, ಮಾನಸಿಕ ಒತ್ತಡಕ್ಕೆ ನವ್ಯ ಗುರಿಯಾಗಿದ್ದಳು, ಗಂಡ ಹೆಂಡತಿ ಮಧ್ಯೆ ಕಳೆದ 6 ತಿಂಗಳಿಂದ ಒಂದಷ್ಟು ಕಲಹಗಳು ಏರ್ಪಟ್ಟಿದ್ದವು ಹೊಂದಾಣಿಕೆ ಇರಲಿಲ್ಲ. ಹೀಗಾಗಿ ನವ್ಯ ಸಾಕಷ್ಟು ಮನನೊಂದಿದ್ದಳು ಅಂತ ಹೇಳುತ್ತಿದ್ದಾರೆ. ಸದ್ಯ ಚಿಕ್ಕಬಳ್ಳಾಪುರ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದು ತನಿಖೆಯಿಂದ ಅಸಲಿ ಸತ್ಯ ಬಯಲಾಗಬೇಕಿದೆ. ಇನ್ನೂ ಬಾಗೇಪಲ್ಲಿ ತಾಲೂಕು ಸಡ್ಲವಾರಪಲ್ಲಿ ಗ್ರಾಮದ ನವ್ಯ ಹಾಗೂ ಚೇತನ್ ವಿವಾಹ ಕಳೆದ 1 ವರ್ಷದ ಹಿಂದೆ ನಡೆದಿತ್ತು.

  • ಎರಡು ಮಕ್ಕಳೊಂದಿಗೆ ತಾಯಿ ಸಾವು – ಗಂಡ, ಕುಟುಂಬಸ್ಥರ ಬಂಧನ ಆಗೋವರೆಗೂ ಶವಸಂಸ್ಕಾರ ಮಾಡೋಲ್ಲ

    ಎರಡು ಮಕ್ಕಳೊಂದಿಗೆ ತಾಯಿ ಸಾವು – ಗಂಡ, ಕುಟುಂಬಸ್ಥರ ಬಂಧನ ಆಗೋವರೆಗೂ ಶವಸಂಸ್ಕಾರ ಮಾಡೋಲ್ಲ

    ಬೆಳಗಾವಿ: ಎರಡು ಮಕ್ಕಳೊಂದಿಗೆ ತಾಯಿ ಸಾವು ಪ್ರಕರಣ ಗಂಡ ಮತ್ತು ಕುಟುಂಬಸ್ಥರ ಬಂಧನ ಆಗುವವರೆಗೂ ಶವಸಂಸ್ಕಾರ ಮಾಡುವುದಿಲ್ಲ ಎಂದು ಮೃತ ಮಹಿಳೆಯ ಕುಟುಂಬಸ್ಥರು ಪಟ್ಟು ಹಿಡಿದು ಕುಳಿತಿದ್ದಾರೆ.

    ನಗರದ ಬೀಮ್ಸ್ ಆಸ್ಪತ್ರೆಯ ಶವಗಾರದ ಬಳಿ ಬಂದ ಮೃತ ಕೃಷಾ ಕುಟುಂಬಸ್ಥರು ಆಕೆಯ ಗಂಡ ಮತ್ತು ಆತನ ಕುಟುಂಬಸ್ಥರ ವಿರುದ್ಧ ಕೊಲೆ ಆರೋಪ ಮಾಡಿದ್ದಾರೆ. ಅಲ್ಲದೇ ಗಂಡ ಮತ್ತು ಕುಟುಂಬಸ್ಥರ ಬಂಧನ ಆಗುವವರೆಗೂ ಶವ ಪಡೆಯುವುದಿಲ್ಲ ಎಂದು ಪಟ್ಟುಹಿಡಿದ್ದಾರೆ. ಹೀಗಾಗಿ ಮೂರು ದಿನಗಳಿಂದ ಬಿಮ್ಸ್ ಶವಗಾರದಲ್ಲೇ ತಾಯಿ ಮತ್ತು ಕಂದಮ್ಮಗಳ ಮೃತ ದೇಹ ಇದ್ದು ನಿನ್ನೆ ದಿನ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಮೃತಳ ಕುಟುಂಬಸ್ಥರು ದೂರು ನೀಡಿದ್ದಾರೆ. ಇದಲ್ಲದೇ ದೂರು ನೀಡದಂತೆ, ಶವಗಳನ್ನು ತೆಗೆದುಕೊಂಡು ಹೋಗುವಂತೆ ಕೆಲವರಿಂದ ನಮ್ಮ ಮೇಲೆ ಒತ್ತಡ ಹೇರಲಾಗುತ್ತಿದೆ. ಹೀಗಾಗಿ ನ್ಯಾಯ ಕೊಡಿಸುವಂತೆ ಮೃತ ಕೃಷಾ ಕುಟುಂಬಸ್ಥರು ಇಂದು ಬಿಮ್ಸ್ ಆಸ್ಪತ್ರೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವೇಳೆ ಕೊಲೆ ಆರೋಪಿಗಳನ್ನು ಬಂಧಿಸಿ ನಮಗೆ ನ್ಯಾಯ ಕೊಡಿಸಿ ಅಂತ ಘೋಷಣೆ ಕೂಗಿದ್ದಾರೆ. ಇದನ್ನೂ ಓದಿ: ಆಸ್ತಿ ವಿವಾದ – ಗರ್ಭಿಣಿ ಸೇರಿದಂತೆ ಮೂವರನ್ನು ಬೆಂಕಿಗೆ ಹಾಕಿದ ದುರುಳರು

    ಪ್ರಕರಣದ ಹಿನ್ನೆಲೆ
    ಫೆಬ್ರವರಿ 11ರಂದು ಬೆಳಗಾವಿಯ ಹಿಂಡಲಗಾ ಗಣಪತಿ ದೇವಸ್ಥಾನ ಕೆರೆಯಲ್ಲಿ ಎರಡು ಮಕ್ಕಳೊಂದಿಗೆ ತಾಯಿಯ ಮೃತದೇಹ ಕೆರೆಯಲ್ಲಿ ಪತ್ತೆ ಆಗಿತ್ತು. ತಾಯಿ ಕೃಷಾ(36), ಮಕ್ಕಳಾದ ವಿರೇನ್(7), ಭಾವೀರ್(4) ಕೆರೆಯಲ್ಲಿ ಶವ ಪತ್ತೆಯಾಗಿದ್ದವು. ಈ ವೇಳೆ ಹೆಂಡತಿ ಮಕ್ಕಳ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಗಂಡ ಮತ್ತು ಕುಟುಂಬಸ್ಥರು ಎಸ್ಕೇಪ್ ಆಗಿದ್ದಾರೆ. ಇದನ್ನೂ ಓದಿ: ಮಕ್ಕಳ ಜೊತೆ ಕೆರೆಗೆ ಹಾರಿದ ತಾಯಿ – ಶವವಾಗಿ ಪತ್ತೆ!

  • ಕುಡಿತ ಬಿಟ್ಟರೆ ಮಾತ್ರ ಮನೆಗೆ ಬರುತ್ತೇನೆ ಎಂದಿದ್ದಕ್ಕೆ ಪತ್ನಿಯನ್ನೇ ಕೊಲೆಗೈದ

    ಕುಡಿತ ಬಿಟ್ಟರೆ ಮಾತ್ರ ಮನೆಗೆ ಬರುತ್ತೇನೆ ಎಂದಿದ್ದಕ್ಕೆ ಪತ್ನಿಯನ್ನೇ ಕೊಲೆಗೈದ

    ವಿಜಯಪುರ: ಪಾಪಿ ಗಂಡನೊಬ್ಬ ಹೆಂಡತಿಯನ್ನು ಕೊಲೆಗೈದ ಘಟನೆ ಜಿಲ್ಲೆಯ ಸಿಂದಗಿ ತಾಲೂಕಿನ ಚಾಂದಕವಠೆ ಗ್ರಾಮದಲ್ಲಿ ನಡೆದಿದೆ.

    ಶೀಲವಂತಿ ಕನ್ನಾಳ ಕೊಲೆಯಾದ ಪತ್ನಿ. ಪತಿ ಗುರುಬಾಳ ಕನ್ನಾಳನು ಹರಿತವಾದ ಆಯುಧದಿಂದ ಪತ್ನಿಗೆ ತಿವಿದು ಹತ್ಯೆಗೈದಿದ್ದಾನೆ. ಗಂಡನ ಕುಡಿತದ ಕಾರಣ ಸಂಸಾರದಲ್ಲಿ ಬಿರುಕು ಉಂಟಾಗಿತ್ತು. ಹೀಗಾಗಿ ಪತ್ನಿಯು ತನ್ನ ತವರು ಮನೆಯಲ್ಲಿದ್ದಳು. ಈ ಸಂದರ್ಭದಲ್ಲಿ ಅವನು ಹೆಂಡತಿಯ ಮನವೊಲಿಸಿ ತನ್ನ ಮನೆಗೆ ಕರೆದುಕೊಂಡು ಹೋಗಲು ಬಂದಿದ್ದನು. ಆಗ ಪತ್ನಿಯು ಕುಡಿತ ಬಿಟ್ಟರೆ ಮನೆಗೆ ಬರುವೆ ಅಂತ ಕರಾರು ಹಾಕಿದ್ದರು. ಇದನ್ನೂ ಓದಿ: ಫುಟ್‍ಪಾತ್ ಮೇಲೆ ಕಾರು ಚಾಲನೆ – ಅಪ್ರಾಪ್ತನ ಹುಚ್ಚಾಟಕ್ಕೆ ನಾಲ್ವರು ಬಲಿ

    ಪತ್ನಿಯ ಕರಾರಿಗೆ ಒಪ್ಪದ ಅವನು, ಶೀಲವಂತಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದಾನೆ. ಘಟನೆಯು ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • ಸಲಿಂಗ ಸಂಗಾತಿ ಜೊತೆಗೆ ವಧು ಎಸ್ಕೇಪ್

    ಸಲಿಂಗ ಸಂಗಾತಿ ಜೊತೆಗೆ ವಧು ಎಸ್ಕೇಪ್

    ರಾಂಚಿ: ಒಲ್ಲದ ಮನಸ್ಸಿನಿಂದ ಮನೆಯವರ ಒತ್ತಾಯಕ್ಕೆ ಮದುವೆ ಮಾಡಿಕೊಂಡಿರುವ ಯುವತಿ ಮರುದಿನವೇ ಸಲಿಂಗ ಸಂಗಾತಿ ಜೊತೆ ಓಡಿ ಹೋಗಿರುವ ಘಟನೆ ಜಾರ್ಖಂಡ್​ನ ಧನ್ಬಾದ್‍ನಲ್ಲಿ ನಡೆದಿದೆ.

    ಕುಟುಂಬಸ್ಥರು ಬಲಂತವಾಗಿ ಯುವತಿಯ ಮದುವೆ ಮಾಡಿದ್ದಾರೆ. ಆದರೆ ಆಕೆ ಮರುದಿನವೇ ಸಲಿಂಗ ಸಂಗಾತಿ ಜೊತೆ ಓಡಿ ಹೋಗಿದ್ದಾಳೆ. ಈ ಜೋಡಿ ತಮಗೆ ರಕ್ಷಣೆ ನೀಡುವಂತೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಇದನ್ನೂ ಓದಿ: ಟ್ರ್ಯಾಕ್ಟರ್‌ಗೆ ಗುದ್ದಿದ ಕಾರ್- ಐದು ಮಂದಿ ಸ್ಥಳದಲ್ಲೇ ಸಾವು

    ಯುವತಿ ವಿವಾಹ ಮಾಡಿಕೊಳ್ಳುವುದಕ್ಕೂ ಮುಂಚಿತವಾಗಿ ಸಲಿಂಗ ಸಂಗಾತಿ ಜೊತೆ ವಾಸವಾಗಿದ್ದಳು. ಇದನ್ನರಿತ ಕುಟುಂಬಸ್ಥರು ಯುವಕನೊಂದಿಗೆ ಬಲವಂತವಾಗಿ ಮದುವೆ ಮಾಡಿಸಿದ್ದಾರೆ. ಈ ಬೆನ್ನಲ್ಲೇ ಆಕೆ ಮದುವೆಯಾದ ಮರುದಿನವೇ ಸಲಿಂಗ ಸಂಗಾತಿ ಜೊತೆಗೆ ಎಸ್ಕೇಪ್ ಆಗಿದ್ದಾಳೆ. ಇಬ್ಬರೂ ಕಳೆದ ಅನೇಕ ವರ್ಷಗಳಿಂದ ಪರಿಚಯವಾಗಿದ್ದು, ಒಬ್ಬರನ್ನೊಬ್ಬರು ಪ್ರೀತಿಸಲು ಶುರು ಮಾಡಿದ್ದರಂತೆ. ಇದನ್ನೂ ಓದಿ: ಕೆಟ್ಟದಾಗಿ ಮುಟ್ಟಿದ್ದಕ್ಕಾಗಿ ಛೀಮಾರಿ ಹಾಕಿದ ಮಹಿಳೆಯನ್ನೇ ಕೊಲ್ಲಲು ಮುಂದಾದ ವ್ಯಕ್ತಿ ಅರೆಸ್ಟ್

    ಕಳೆದ ಡಿಸೆಂಬರ್ ತಿಂಗಳಲ್ಲಿ ನಡೆದ ಪ್ರಕರಣ ಇದಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.  ಪೊಲೀಸ್ ಠಾಣೆಯಲ್ಲಿ ಯುವತಿ ಗಂಡನೊಂದಿಗೆ ಜೀವನ ನಡೆಸಲು ಸಾಧ್ಯವಿಲ್ಲ, ಸಲಿಂಗ ಸಂಗಾತಿ ಜೊತೆ ಇರುವುದಾಗಿ ಹೇಳಿದ್ದಾಳೆ.

  • ಜಗಳ ಮಾಡಿಕೊಂಡು ಅಕ್ಕನ ಮನೆಗೆ ಬಂದಿದ್ದ ಪತ್ನಿಯನ್ನು ನಡುರಸ್ತೆಯಲ್ಲೇ ಕೊಲೆಗೈದ ಪತಿ!

    ಜಗಳ ಮಾಡಿಕೊಂಡು ಅಕ್ಕನ ಮನೆಗೆ ಬಂದಿದ್ದ ಪತ್ನಿಯನ್ನು ನಡುರಸ್ತೆಯಲ್ಲೇ ಕೊಲೆಗೈದ ಪತಿ!

    ರಾಮನಗರ: ಗಲಾಟೆ ಮಾಡಿಕೊಂಡು ಅಕ್ಕನ ಮನೆಗೆ ಬಂದಿದ್ದ ಪತ್ನಿಯನ್ನು ನಡುರಸ್ತೆಯಲ್ಲೇ ಪತಿ ಹತ್ಯೆಗೈದಿರುವ ಘಟನೆ ಅರಳಿಮರದೊಡ್ಡಿ ಗ್ರಾಮದಲ್ಲಿ ನಡೆದಿದೆ.

    ರಾಮನಗರ ತಾಲೂಕಿನ ಅರಳಿಮರದೊಡ್ಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಂಗಳಗೌರಿ ಕೊಲೆಯಾದ ಮಹಿಳೆ. ಆರೋಪಿ ಸತೀಶ್ ಪರಾರಿಯಾಗಿದ್ದಾನೆ. ಇದನ್ನೂ ಓದಿ: ಓಮಿಕ್ರಾನ್ ಭೀತಿ: ಮುಂಬೈನಲ್ಲಿ 144 ಸೆಕ್ಷನ್ ಜಾರಿ- ರ‍್ಯಾಲಿ, ಮೆರವಣಿಗೆಗೆ ನಿಷೇಧ

    ಆನಮಾನಹಳ್ಳಿ ನಿವಾಸಿ ಪತಿ ಸತೀಶ್ ಜೊತೆ ಕಳೆದ ಒಂದು ವಾರದ ಹಿಂದೆ ಮಂಗಳಗೌರಿ ಗಲಾಟೆ ಮಾಡಿಕೊಂಡು ಅಕ್ಕನ ಮನೆಗೆ ಬಂದಿದ್ದರು. ನಂತರ ಮಂಗಳಗೌರಿ ರಾಮನಗರ ಮಧುರಾ ಗಾರ್ಮೆಂಟ್ಸ್‍ನಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ರಾತ್ರಿ ಮಂಗಳಗೌರಿ ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ವೇಳೆ ಹಿಂದಿನಿಂದ ಬಂದ ಸತೀಶ್ ಚಾಕುವಿನಿಂದ ಹಲ್ಲೆ ಮಾಡಿ ಅಲ್ಲಿಂದ ಪರಾರಿಯಾಗಿದ್ದಾನೆ.

    A Young Couple Holding Hands In The Sunset

    ಹಲ್ಲೆಯಿಂದ ಗಂಭೀರ ಗಾಯಗೊಂಡಿದ್ದ ಮಂಗಳಗೌರಿ ಸ್ಥಳದಲ್ಲೇ ಅಸುನೀಗಿದ್ದಾರೆ. ರಾಮನಗರ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಮಂಗಳಗೌರಿಯ ಮೃತದೇಹ ರವಾನೆ ಮಾಡಲಾಗಿದೆ. ರಾಮನಗರ ಗ್ರಾಮಾಂತರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಪತಿಯಿಂದಲೇ ಪತ್ನಿಯ ಕತ್ತು ಸೀಳಿ ಭೀಕರ ಹತ್ಯೆ

    ಪತಿಯಿಂದಲೇ ಪತ್ನಿಯ ಕತ್ತು ಸೀಳಿ ಭೀಕರ ಹತ್ಯೆ

    ಬೆಂಗಳೂರು: ಮೊಬೈಲ್ ಸಂಭಾಷಣೆ ವಿಚಾರವಾಗಿ ಜಗಳವಾಡಿ, ಶೀಲ ಶಂಕಿಸಿ ಪತಿಯೇ ಪತ್ನಿಯ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಅನ್ನಪೂರ್ಣೇಶ್ವರಿ ನಗರದಲ್ಲಿ ನಡೆದಿದೆ.

    ರೂಪ(34) ಮೃತ ದುರ್ದೈವಿ. ಬುಧವಾರ ಸಂಜೆ 5 ಗಂಟೆ ವೇಳೆಗೆ ಘಟನೆ ನಡೆದಿದ್ದು, ಆರೋಪಿ ಕಾಂತರಾಜ್ ವೃತ್ತಿಯಲ್ಲಿ ಫೈನಾನ್ಶಿಯರ್ ಹಾಗೂ ರಿಯಲ್ ಎಸ್ಟೇಟ್ ಬ್ರೋಕರ್ ಕೆಲಸ ಮಾಡುತ್ತಿದ್ದ. ಘಟನೆ ಬಳಿಕ ಕಾಂತರಾಜ್ ಮನೆಗೆ ಬೀಗ ಹಾಕಿ ಎಸ್ಕೇಪ್ ಆಗಿದ್ದಾನೆ. ಇದನ್ನೂ ಓದಿ: ಬೀದರ್‌ನಲ್ಲಿ ಖಾಸಗಿ ಅಂಬುಲೆನ್ಸ್‌ಗಳದ್ದೇ ಕಾರ್‌ಬಾರ್ – ಬ್ರಿಮ್ಸ್ ಆಸ್ಪತ್ರೆ ಎದುರೇ ಖಾಸಗಿ ಸುಲಿಗೆ

    ಘಟನೆ ವಿವರ:
    ಬುಧವಾರ ಸಂಜೆ 4.30 ರಲ್ಲಿ ಪತಿ ಕಾಂತರಾಜ್ ಪತ್ನಿ ರೂಪಾಳ ಮೊಬೈಲ್ ಪರಿಶೀಲಿಸಿದಾಗ ಆಕೆ ಬೇರೆ ವ್ಯಕ್ತಿಯೊಂದಿಗೆ ಮಾತನಾಡಿರುವುದು ಕಂಡುಬಂದಿದೆ. ಈ ವಿಚಾರವಾಗಿ ಗಂಡ ಹೆಂಡತಿ ನಡುವೆ ಜಗಳವಾಗಿದೆ. ಇದೇ ವೇಳೆ ಆಕ್ರೋಶಗೊಂಡ ದೇವರಾಜ್ ಮನೆಯಲ್ಲಿದ್ದ ಚಾಕುವಿನಿಂದ ಪತ್ನಿಯ ಕತ್ತು ಸೀಳಿ ಹತ್ಯೆ ಮಾಡಿ ಮನೆಯ ಬಾಗಿಲನ್ನು ಲಾಕ್ ಮಾಡಿಕೊಂಡು ಎಸ್ಕೇಪ್ ಆಗಿದ್ದಾನೆ. ಟ್ಯೂಷನ್‍ಗೆ ಹೋಗಿದ್ದ ಮಗ ಮನೆಗೆ ವಾಪಸ್ಸಾದಾಗ ಘಟನೆ ಬೆಳಕಿಗೆ ಬಂದಿದ್ದು, ಬಳಿಕ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಸ್ಥಳಕ್ಕೆ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ಕಾಂತರಾಜ್ ಈ ಹಿಂದೆ 2005 ರಲ್ಲಿ ಜಾಗದ ವಿಚಾರವಾಗಿ ಲಾಯತ್ ಕುಟುಂಬದ ಮೂವರನ್ನು ಹತ್ಯೆ ಮಾಡಿ ಜೈಲು ಸೇರಿದ್ದ. ಬಳಿಕ 2011 ಜೈಲಿನಿಂದ ಹೊರಬಂದಿದ್ದ ಬಳಿಕ ರೂಪಳನ್ನು ಮದುವೆಯಾಗಿದ್ದ. ಸದ್ಯ ದಂಪತಿಗೆ 9 ವರ್ಷದ ಮಗನಿದ್ದಾನೆ ಘಟನೆ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದು ಕಾಂತರಾಜ್ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಇದನ್ನೂ ಓದಿ: ಭಿಕ್ಷೆ ಬೇಡುವಾಗ ತಿಂಡಿ ಆಸೆ ತೋರಿಸಿ 14ರ ಬಾಲಕಿ ಮೇಲೆ ಅತ್ಯಾಚಾರ