Tag: ಗಂಡ

  • ರಸ್ತೆ ನಡುವೆಯೇ ಹೆಂಡ್ತಿಯನ್ನ ಕೊಚ್ಚಿ ಕೊಂದು ಸ್ಥಳದಲ್ಲೇ ಕೂತಿದ್ದ!

    ರಸ್ತೆ ನಡುವೆಯೇ ಹೆಂಡ್ತಿಯನ್ನ ಕೊಚ್ಚಿ ಕೊಂದು ಸ್ಥಳದಲ್ಲೇ ಕೂತಿದ್ದ!

    ಶಿವಮೊಗ್ಗ: ಅನೈತಿಕ ಸಂಬಂಧದ ಶಂಕೆಯಿಂದ ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನು ರಸ್ತೆ ಮಧ್ಯೆಯೇ ಕೊಚ್ಚಿ ಕೊಂದ ಘಟನೆ ಶಿವಮೊಗ್ಗದ ರಾಗಿಗುಡ್ಡದಲ್ಲಿ ಇಂದು ಬೆಳಗ್ಗೆ ನಡೆದಿದೆ.

    ಕುಂಸಿಯ ಮಂಜುಳಾ ಕೊಲೆಯದ ದುರ್ದೈವಿ. ಈಕೆಯನ್ನು ಕೊಲೆ ಮಾಡಿದ ಗಂಡ ರಮೇಶನನ್ನು ಪೆÇಲೀಸರು ಬಂಧಿಸಿದ್ದಾರೆ. ಕುಂಸಿಯಲ್ಲಿ ಗಾರೆ ಕೆಲಸ ಮಾಡುತ್ತಿದ್ದ ರಮೇಶ್ ಮೊದಲ ಹೆಂಡತಿಯನ್ನು ಬಿಟ್ಟು ಮಂಜುಳಾಳನ್ನು ಮದುವೆಯಾಗಿದ್ದ. ಆದರೆ ಮಂಜುಳಾ ಇನ್ನೊಬ್ಬನ ಜೊತೆ ಅಕ್ರಮವಾಗಿ ಸಂಬಂಧ ಇಟ್ಟುಕೊಂಡಿದ್ದಾಳೆ ಎಂಬ ಶಂಕೆಯಿಂದ ರಮೇಶ್ ಈ ಕೃತ್ಯವೆಸಗಿದ್ದಾನೆ.

    ಸೋಮವಾರ ರಾತ್ರಿ ರಾಗಿಗುಡ್ಡಕ್ಕೆ ಕೆಲಸ ಕೇಳಲು ಪತ್ನಿ ಸಮೇತ ಬಂದಿದ್ದ ರಮೇಶ ಮತ್ತೆ ಹಿಂತಿರುಗಿದ್ದ. ಇಂದು ಮುಂಜಾನೆ ಪತ್ನಿಯೊಂದಿಗೆ ಬಂದ ಈತ ರಸ್ತೆ ನಡುವೆಯೇ ಹೆಂಡತಿಯನ್ನು ಕೊಚ್ಚಿ ಕೊಂದಿದ್ದಾನೆ. ಹೆಂಡತಿಯನ್ನು ಕೊಂದು ಸ್ಥಳದಲ್ಲೇ ಕೂತಿದ್ದ ಈತನನ್ನು ಗ್ರಾಮಾಂತರ ಪೆÇಲೀಸರು ವಶಕ್ಕೆ ಪಡೆದು ಬಂಧಿಸಿದ್ದಾರೆ.

  • ಗಂಡನ ಬಳಿಯೇ 1 ಕೆಜಿ ಚಿನ್ನಾಭರಣ ಕದ್ದ ಖತರ್ನಾಕ್ ಹೆಂಡತಿ ಅರೆಸ್ಟ್

    ಗಂಡನ ಬಳಿಯೇ 1 ಕೆಜಿ ಚಿನ್ನಾಭರಣ ಕದ್ದ ಖತರ್ನಾಕ್ ಹೆಂಡತಿ ಅರೆಸ್ಟ್

    ಬೆಂಗಳೂರು: ಗಂಡನ ಬಳಿಯೇ 1 ಕೆ.ಜಿ ಚಿನ್ನಾಭರಣ ಕದ್ದ ಖತರ್ನಾಕ್ ಹೆಂಡತಿಯನ್ನ ಬಂಧಿಸುವಲ್ಲಿ ಎಸ್‍ಜೆ ಪಾರ್ಕ್ ಪೊಲೀಸರು ಯಶಸ್ವಿಯಾಗಿದ್ದಾರೆ.

    ತಮಿಳುನಾಡಿನ ಹೊಸೂರು ಮೂಲದ ನಾಗಲಕ್ಷ್ಮಿ ಬಂಧಿತ ಮಹಿಳೆ. ಈಕೆ ಬೆಂಗಳೂರಿನಿಂದ ತಮಿಳುನಾಡಿನ ಸೇಲಂಗೆ ಬಸ್‍ನಲ್ಲಿ ಹೋಗುವಾಗ ತನ್ನ ಗಂಡನ ಬಳಿಯೇ ಚಿನ್ನಾಭರಣ ಕದ್ದಿದ್ದಳು. ಆದ್ರೆ ತಮಿಳುನಾಡಿನ ಸೇಲಂನಲ್ಲಿ ಚಿನ್ನ ಮಾರಾಟದ ವೇಳೆ ನಾಗಲಕ್ಷ್ಮಿ ಪೆÇಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾಳೆ. ಬಂಧಿತ ಮಹಿಳೆಯಿಂದ ಪೊಲೀಸರು ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.

    ಏನಿದು ಘಟನೆ?: ಬೆಂಗಳೂರಿನ ಚೆಮ್ಮನೂರು ಜ್ಯೂವೆಲರ್ಸ್‍ನಲ್ಲಿ ಕೆಲಸ ಮಾಡುತ್ತಿದ್ದ ಮುನಿಯಪ್ಪನ್ ಫೆಬ್ರವರಿ 21 ರಂದು ಬೆಂಗಳೂರಿನಿಂದ ಸೇಲಂಗೆ 1 ಕೆಜಿ ಚಿನ್ನ ತೆಗೆದುಕೊಂಡು ಹೋಗ್ತಿದ್ರು. ಈ ವೇಳೆ ಜೊತೆಯಲ್ಲೇ ಬಂದ ಹೆಂಡತಿ ನಾಗಲಕ್ಷ್ಮಿ ಗಂಡನಿಗೆ ಜ್ಯೂಸ್‍ನಲ್ಲಿ ನಿದ್ದೆ ಮಾತ್ರೆ ಹಾಕಿ ದರೋಡೆ ಮಾಡಿದ್ದಳು. ನಂತರ ಬಸ್‍ನಲ್ಲಿ ಚಿನ್ನಾಭರಣ ಕಳ್ಳತನವಾಗಿದೆ ಅಂತಾ ಡ್ರಾಮಾ ಮಾಡಿದ್ದಳು. ಈ ಬಗ್ಗೆ ಎಸ್.ಜೆ.ಪಾರ್ಕ್ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

    ಇದೀಗ ನಾಗಲಕ್ಷ್ಮಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

  • ಸೊಸೆ ಮೇಲೆ ಅತ್ಯಾಚಾರವೆಸಗಿದ ಪತಿಯನ್ನ ಗುಂಡಿಟ್ಟು ಕೊಂದ್ಳು!

    ಸೊಸೆ ಮೇಲೆ ಅತ್ಯಾಚಾರವೆಸಗಿದ ಪತಿಯನ್ನ ಗುಂಡಿಟ್ಟು ಕೊಂದ್ಳು!

    ಇಸ್ಲಾಮಾಬಾದ್: ಸೊಸೆಯ ಮೇಲೆ ಅತ್ಯಾಚಾರವೆಸಗಿದ ಕಾರಣಕ್ಕೆ ಮಹಿಳೆಯೊಬ್ಬರು ತನ್ನ ಗಂಡನನ್ನೇ ಗುಂಡಿಟ್ಟು ಕೊಲೆ ಮಾಡಿದ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.

    ಇಲ್ಲಿನ ಶಾಂಗ್ಲಾ ಗ್ರಾಮದ ನಿವಾಸಿಯಾದ ಬೇಗಂ ಬೀಬಿ ತನ್ನ ಗಂಡ ಗುಲ್ಬರ್ ಖಾನ್‍ನನ್ನು ಕೊಲೆ ಮಾಡಿದ್ದಾರೆ. ಅವರು ಕುಟುಂಬ ಮತ್ತು ಸಂಬಂಧಗಳಿಗೆ ಬೆಲೆ ಕೊಡಲಿಲ್ಲ. ಹೀಗಾಗಿ ಕೊಲೆ ಮಾಡಿದೆ ಎಂದು ಬೇಗಂ ಬೀಬಿ ಒಪ್ಪಿಕೊಂಡಿದ್ದಾರೆ. ಗುಲ್ಬರ್ ಖಾನ್ ಕಳೆದ 3 ತಿಂಗಳಿನಿಂದ ಸೊಸೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದನೆಂದು ಬೀಬಿ ಹೇಳಿದ್ದಾರೆ.

    ಅತ್ಯಾಚಾರಕ್ಕೊಳಗಾಗಿದ್ದಾರೆ ಎನ್ನಲಾದ ಮಹಿಳೆಯ ಗಂಡ ಸೈನಿಕರಾಗಿದ್ದು, ಈ ಬಗ್ಗೆ ಪತ್ರಿಕೆಯೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಹೆಂಡತಿಯ ಸ್ಥಿತಿಯ ಬಗ್ಗೆ ನನಗೆ ಗೊತ್ತಿತ್ತು. ಆದ್ರೆ ತಂದೆಯೆಂಬ ಗೌರವದಿಂದ ಅವರನ್ನು ನಾನು ಕೊಲ್ಲುವುದು ಅಸಾಧ್ಯ. ಆದ್ರೆ ನಾನು ತರಬೇತಿ ಮುಗಿಸಿ ಹಿಂದಿರುಗಿದ ನಂತರ ಮನೆಯಿಂದ ಹೊರಹೋಗುತ್ತೇನೆ ಎಂದು ನನ್ನ ತಾಯಿಗೆ ಹೇಳಿದ್ದೆ ಎಂದಿದ್ದಾರೆ.

    ಗುಲ್ಬರ್ ಖಾನ್ ಮಲಗಿದ್ದ ವೇಳೆ ಬೀಬಿ ತನ್ನ ಸೊಸೆಯ ನೆರವು ಪಡೆದು ಪಿಸ್ತೂಲ್‍ನಿಂದ ಗುಂಡಿಟ್ಟು ಗಂಡನನ್ನು ಕೊಲೆ ಮಾಡಿದ್ದಾಗಿ ಪೊಲೀಸರು ಹೇಳಿದ್ದಾರೆ. ಬೇಗಂ ಬೀಬಿ, ಆಕೆಯ ಸೊಸೆ ಹಾಗೂ ಮಗನನ್ನು ಪೊಲೀಸರು ಕೋರ್ಟ್ ಮುಂದೆ ಹಾಜರುಪಡಿಸಿದ್ದು, ಸದ್ಯ ಅವರನ್ನ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.

  • ಮದ್ವೆಯಾದ ಒಂದೇ ವಾರಕ್ಕೆ ಪತಿಯನ್ನ ರುಬ್ಬೋ ಕಲ್ಲಿನಿಂದ ಹೊಡೆದು ಕೊಂದ್ಳು!

    ಮದ್ವೆಯಾದ ಒಂದೇ ವಾರಕ್ಕೆ ಪತಿಯನ್ನ ರುಬ್ಬೋ ಕಲ್ಲಿನಿಂದ ಹೊಡೆದು ಕೊಂದ್ಳು!

    ಚೆನ್ನೈ: 22 ವರ್ಷದ ಮಹಿಳೆಯೊಬ್ಬಳು ತನ್ನ ಗಂಡನನ್ನ ಹಿಟ್ಟು ರುಬ್ಬೋ ಕಲ್ಲಿನಿಂದ ಹೊಡೆದು ಕೊಲೆ ಮಾಡಿರೋ ಘಟನೆ ತಮಿಳುನಾಡಿನ ಕಡಲೂರಿನಲ್ಲಿ ನಡೆದಿದೆ.

    ವಾರದ ಹಿಂದಷ್ಟೆ ಇಬ್ಬರಿಗೂ ಮದುವೆಯಾಗಿದ್ದು, ಸೋಮವಾರ ರಾತ್ರಿ ಮನೆಯಲ್ಲಿ ಗಂಡ ಹೆಂಡಿರ ನಡುವೆ ಜಗಳವಾಗಿದೆ. ಈ ವೇಳೆ ಹೆಂಡತಿ ಗಂಡನ ಮೇಲೆ ಹಲ್ಲೆ ಮಾಡಿ ಕೊಂದಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.

    ಕೊಲೆಗೆ ಕಾರಣವೇನು?: ಹತ್ಯೆಗೀಡಾದ ವ್ಯಕ್ತಿ ಮರಗೆಲಸ ಮಾಡಿಕೊಂಡಿದ್ದರು. ನಿನ್ನ ಗಂಡ ನೋಡಲು ಸುಂದರವಗಿಲ್ಲ. ನಿನಗೆ ಆತ ಸರಿಯಾದ ಜೋಡಿ ಅಲ್ಲ ಎಂದು ಸ್ನೇಹಿತರು ಹಾಗೂ ಸಂಬಂಧಿಕರು ಹೇಳಿದ್ದರಿಂದ ಮಹಿಳೆ ತನ್ನ ಗಂಡನನ್ನು ದ್ವೇಷಿಸಲು ಶುರು ಮಾಡಿದ್ದಳು. ಈ ಕಾರಣಕ್ಕೆ ಕೊಲೆ ಮಾಡಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.

    ಘಟನೆ ನಂತರ ಮಹಿಳೆ ಮನೆಯಿಂದ ಹೊರಗೆ ಹೋಗಿ ಅಳುತ್ತಾ ಯಾರೋ ನನ್ನ ಗಂಡನನ್ನು ಕೊಂದಿದ್ದಾರೆ ಎಂದು ನಾಟಕವಾಡಿದ್ದಾಳೆ. ಈ ಬಗ್ಗೆ ವಿಚಾರಣೆ ನಡೆಸಿದ ಬಳಿಕ ಪೊಲೀಸರು ಕೊಲೆ ಆರೋಪದ ಮೇಲೆ ಆಕೆಯನ್ನು ಮಂಗಳವಾರದಂದು ಬಂಧಿಸಿದ್ದಾರೆ.

    ಮಹಿಳೆಯನ್ನು ಸ್ಥಳೀಯ ಕೋರ್ಟ್‍ನಲ್ಲಿ ಹಾಜರುಪಡಿಸಿ ಸದ್ಯಕ್ಕೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ವರದಿಯಾಗಿದೆ.

  • ಪತಿ ಬೇಕೆಂದು ಮನೆಯ ಮುಂದೆ ಧರಣಿ ಕುಳಿತ ಪತ್ನಿ!

    ಪತಿ ಬೇಕೆಂದು ಮನೆಯ ಮುಂದೆ ಧರಣಿ ಕುಳಿತ ಪತ್ನಿ!

    ದಾವಣಗೆರೆ: ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹೊಸ ಬ್ರಹ್ಮಪುರದಲ್ಲಿ ಮಹಿಳೆಯೊಬ್ರು ಇಂದು ಬೆಳ್ಳಂಬೆಳಗ್ಗೆ ನ್ಯಾಯಕ್ಕಾಗಿ ಪತಿ ಮನೆ ಮುಂದೆ ಧರಣಿ ಕುಳಿತಿದ್ದಾರೆ.

    ಧರಣಿ ಯಾಕೆ?: ಹುಬ್ಬಳ್ಳಿ ಮೂಲದ ಗೀತಾ, ಹರಿಹರದ ಗೋವಿಂದ ಎಂಬವರನ್ನ 8 ವರ್ಷದ ಹಿಂದೆ ವಿವಾಹ ಆಗಿದ್ದರು. ಬಳಿಕ ಮನೆಯವರ ಕಿರುಕುಳ ತಾಳಲಾರದೇ ತವರು ಮನೆಗೆ ಹೋಗಿದ್ರು. ಅಲ್ಲದೆ ಗಂಡನ ಮೇಲೆ ಹುಬ್ಬಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು.

    ಆದ್ರೆ ಇದೀಗ ತಮ್ಮ ಮಗುವಿನ ಭವಿಷ್ಯದ ದೃಷ್ಠಿಯಿಂದ ತನಗೆ ಪತಿ ಬೇಕು ಅಂತಾ ಪಟ್ಟುಹಿಡಿದಿದ್ದಾರೆ. ಹೀಗಾಗಿ ಇಂದು ಬೆಳಗ್ಗೆಯಿಂದ ಗಂಡನ ಮನೆಯ ಮುಂದೆ ಮಗಳ ಜೊತೆ ಧರಣಿ ಕುಳಿತುಕೊಂಡಿದ್ದಾರೆ. ಆದರೆ ಗಂಡನ ಮನೆಯವರು ಮಾತ್ರ ಯಾವುದಕ್ಕೂ ಲೆಕ್ಕ ಹಾಕುತ್ತಿಲ್ಲ. ಗೀತಾ ಪತಿ ಮಾತ್ರ ಬೆಳಗ್ಗೆಯಿಂದ ಪೊಲೀಸ್ ಠಾಣೆಯಲ್ಲಿ ಕುಳಿತಿದ್ದು, ಯಾವುದಕ್ಕೂ ಸ್ಪಷ್ಟನೆ ನೀಡುತ್ತಿಲ್ಲ.

    ಗಂಡನ ಜೊತೆ ಜೀವನ ಮಾಡದೇ ಮನೆ ಬಿಟ್ಟು ಹೋಗುವುದಿಲ್ಲ ಎಂದು ಹಠ ಹಿಡಿದು ಮನೆ ಮುಂದೆಯೇ ಮಗುವಿನ ಜೊತೆ ಕುಳಿತು ಗೀತಾ ಅವರು ಏಕಾಂಗಿಯಾಗಿ ಪ್ರತಿಭಟನೆ ಮಾಡುತ್ತಿದ್ದಾರೆ.

     

  • ಮೊದಲರಾತ್ರಿಯೇ ಪತಿ ನಪುಂಸಕನೆಂದು ಬಯಲು- ವಿಚ್ಚೇದನ ಕೇಸ್ ಹಿಂಪಡೆಯುವಂತೆ ಪತ್ನಿಗೆ ಬೆದರಿಕೆ

    ಮೊದಲರಾತ್ರಿಯೇ ಪತಿ ನಪುಂಸಕನೆಂದು ಬಯಲು- ವಿಚ್ಚೇದನ ಕೇಸ್ ಹಿಂಪಡೆಯುವಂತೆ ಪತ್ನಿಗೆ ಬೆದರಿಕೆ

    ಬೆಂಗಳೂರು: ವಿಚ್ಛೇದನ ಪ್ರಕರಣ ವಾಪಸ್ ಪಡೆಯುವಂತೆ ಗಂಡನ ಕಡೆಯವರು ಬೆದರಿಕೆ ಹಾಕಿದ್ದಾರೆಂದು ಮಹಿಳೆಯೊಬ್ಬರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಬೆಂಗಳೂರಿನ ನಿವಾಸಿ ಇಂದ್ರಜಿತ್ ನರ ದೌರ್ಬಲ್ಯವಿದ್ದರೂ ಮಧುರಾ ಎಂಬಾಕೆಯನ್ನು ಮದುವೆಯಾಗಿದ್ದ. ಮೊದಲ ರಾತ್ರಿಯಲ್ಲಿ ಇಂದ್ರಜಿತ್ ನಪುಂಸಕ ಎಂಬುದು ಮಧುರಾಗೆ ಗೊತ್ತಾಗಿತ್ತು. ಮದುವೆಯಾದ ಗಂಡ ನಪುಂಸಕ ಅಂತಾ ಗೊತ್ತಿದ್ದರು ಮಧುರಾ ಇಂದ್ರಜಿತ್‍ನೊಂದಿಗೆ ಸಂಸಾರ ಮಾಡಿದ್ದರು. ಗಂಡನ ದೌರ್ಬಲ್ಯ ಹೊರ ಜಗತ್ತಿಗೆ ಗೊತ್ತಾದರೆ ಮಾನ ಮರ್ಯಾದೆ ಹೊಗುತ್ತದೆ ಎಂದು ಮಧುರಾ ಭಯದಲ್ಲಿದ್ದರು. ಈ ನಡುವೆ ಇಂದ್ರಜಿತ್, ಪತ್ನಿ ಶೀಲದ ಮೇಲೆ ಶಂಕೆ ವ್ಯಕ್ತಪಡಿಸಿದ್ದು, ಇಂದ್ರಜಿತ್ ಮತ್ತು ಕುಟುಂಬದವರು ಸೇರಿ ಮಧುರಾ ನಡತೆ ಸರಿ ಇಲ್ಲ ಅಂತಾ ಹಣೆಪಟ್ಟೆ ಕಟ್ಟಿದ್ದಾರೆ ಅಂತ ಆರೋಪಿಸಲಾಗಿದೆ.

    ಗಂಡ ಇಂದ್ರಜಿತ್ ಹಾಗೂ ಕುಟುಂಬದವರ ಕಾಟ ತಾಳಲಾರದೆ ಮಧುರಾ ವಿಚ್ಛೇದನದ ಮೊರೆ ಹೊಗಿದ್ದರು. ಕೌಟುಂಬಿಕ ನ್ಯಾಯಾಲಯದಲ್ಲಿ ಇಂದ್ರಜಿತ್‍ನಿಂದ ವಿಚ್ಛೇದನಕ್ಕಾಗಿ ಮನವಿ ಮಾಡಿದ್ದರು.

    ಈ ಹಿನ್ನೆಲೆಯಲ್ಲಿ ವಿಚ್ಛೇದನ ಪ್ರಕರಣ ವಾಪಸ್ ಪಡೆಯುವಂತೆ ಇಂದ್ರಜಿತ್ ಕಡೆಯವರಿಂದ ಬೆದರಿಕೆ ಬಂದಿದೆ ಎಂದು ಮಧುರಾ ಆರೋಪಿಸಿದ್ದಾರೆ. ರಾಜಕೀಯ ಬೆಂಬಲ ಹೊಂದಿರೋ ಇಂದ್ರಜಿತ್ ಅಪರಿಚಿತ ವ್ಯಕ್ತಿಗಳನ್ನು ಮನೆ ಬಳಿ ಕಳುಹಿಸಿ ಕೇಸ್ ವಾಪಸ್ ಪಡೆಯುವಂತೆ ಬೆದರಿಸಿದ್ದಾರೆ. ಕೇಸ್ ವಾಪಸ್ ಪಡೆಯದೆ ಹೋದ್ರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿರೋ ಮಧುರಾ ಈ ಸಂಬಂಧ ಗಂಡ ಇಂದ್ರಜಿತ್, ವಿಶ್ವನಾಥ್, ಪರಶುರಾಮ್ ಎಂಬವರ ವಿರುದ್ಧ ದೂರು ದಾಖಲಿಸಿದ್ದಾರೆ

    ಆರ್ ಟಿ ನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.