Tag: ಗಂಡ

  • ವಿಮಾನದಲ್ಲಿ ಪತಿ ಮಲಗಿದ್ದಾಗ ಫೋನ್ ಚೆಕ್ ಮಾಡಿದ್ಲು, ಆತನ ಅಕ್ರಮ ಸಂಬಂಧ ಬಯಲಾಯ್ತು- ಮುಂದೇನಾಯ್ತು ಗೊತ್ತಾ?

    ವಿಮಾನದಲ್ಲಿ ಪತಿ ಮಲಗಿದ್ದಾಗ ಫೋನ್ ಚೆಕ್ ಮಾಡಿದ್ಲು, ಆತನ ಅಕ್ರಮ ಸಂಬಂಧ ಬಯಲಾಯ್ತು- ಮುಂದೇನಾಯ್ತು ಗೊತ್ತಾ?

    ದೋಹಾ: ಬಾಲಿಗೆ ಹೊರಟಿದ್ದ ವಿಮಾನದಲ್ಲಿ ಪತಿ ಹಾಯಾಗಿ ಮಲಗಿ ಕನಸು ಕಾಣ್ತಿದ್ದ. ಇತ್ತ ಪತ್ನಿ ಹೇಗೋ ಆತನ ಮೊಬೈಲ್ ಪಡೆದು ಅನ್‍ಲಾಕ್ ಕೂಡ ಮಾಡಿದ್ಲು. ನಂತರ ತನ್ನ ಗಂಡ ತನಗೆ ಮೋಸ ಮಾಡ್ತಿದ್ದಾನೆ ಅನ್ನೋದು ಆಕೆಗೆ ಗೊತ್ತಾಗಿತ್ತು.

    ಆಮೇಲಾಗಿದ್ದೇನು ಗೊತ್ತಾ? ವಿಮಾನದಲ್ಲೇ ಜಗಳ ಶುರು. ದಂಪತಿಯ ರಂಪಾಟದಿಂದ ವಿಮಾನವನ್ನ ಡೈವರ್ಟ್ ಮಾಡಿ ಚೆನ್ನೈನಲ್ಲಿ ಲ್ಯಾಂಡಿಂಗ್ ಮಾಡಬೇಕಾಯ್ತು.

    ಹೌದು. ಕತಾರ್ ಏರ್‍ವೇಸ್ ವಿಮಾನದಲ್ಲಿ ಇಂತಹದ್ದೊಂದು ಘಟನೆ ನಡೆದಿದೆ. ಭಾನುವಾರದಂದು ದಂಪತಿ ತಮ್ಮ ಪುಟ್ಟ ಮಗುವಿನೊಂದಿಗೆ ಬಾಲಿಗೆ ಪ್ರಯಾಣ ಬೆಳೆಸುತ್ತಿದ್ದರು. ಈ ವಿಮಾನಕ್ಕೆ ಭಾರತದಲ್ಲಿ ನಿಲುಗಡೆ ಇರಲಿಲ್ಲ. ಆದರೂ ಚೆನ್ನೈನಲ್ಲಿ ಲ್ಯಾಂಡಿಂಗ್ ಮಡಬೇಕಾಯ್ತು.

    ನವೆಂಬರ್ 5ರಂದು ಬೆಳಗ್ಗೆ ಸುಮಾರು 10 ಗಂಟೆ ವೇಳೆಯಲ್ಲಿ ದೋಹಾದಿಂದ ಬಾಲಿಗೆ ಹೊರಟಿದ್ದ ಕತಾರ್ ಏರ್‍ವೇಸ್‍ನ ಕ್ಯೂಆರ್-962 ವಿಮಾನವನ್ನ ಚೆನ್ನೈಗೆ ಡೈವರ್ಟ್ ಮಾಡಲಾಯ್ತು. ಐರಾನ್‍ನವರಾದ ಮಹಿಳೆ, ಆಕೆಯ ಗಂಡ ಮತ್ತು ಮಗು ಪ್ರಯಾಣ ಮಾಡುತ್ತಿದ್ರು. ಆದ್ರೆ ಮಹಿಳೆ ಮಾಡಿದ ರಂಪಾಟದಿಂದ ಹಾಗೂ ಆಕೆ ವಿಮಾನದ ಸಿಬ್ಬಂದಿಯ ಜೊತೆ ಅನುಚಿತವಾಗಿ ವರ್ತಿಸಿದ್ದರಿಂದ ಮೂವರನ್ನೂ ಕೆಲಗಿಳಿಸಬೇಕಾಯ್ತು ಎಂದು ಹಿರಿಯ ಭದ್ರತಾ ಸಿಬ್ಬಂದಿಯೊಬ್ಬರು ಹೇಳಿದ್ದಾರೆ .

    ಪತ್ರಿಕೆಯೊಂದರ ವರದಿಯ ಪ್ರಕಾರ, ವಿಮಾನ ಟೇಕ್ ಆಫ್ ಆದ ಕೆಲವು ಗಂಟೆಗಳಲ್ಲಿ ಗಂಡ ನಿದ್ರೆಗೆ ಜಾರಿದ್ದಾನೆ. ಗಂಡನ ಮೇಲೆ ಮೊದಲೇ ಅನುಮಾನವಿದ್ದ ಪತ್ನಿ ಈ ಸಂದರ್ಭದ ಲಾಭ ಪಡೆದು, ಫೋನ್ ಸ್ಕ್ಯಾನರ್ ಮೇಲೆ ಗಂಡನ ಹೆಬ್ಬೆಟ್ಟು ಒತ್ತಿ ಅನ್‍ಲಾಕ್ ಮಾಡಿದ್ದಾಳೆ. ನಂತರ ಫೋನ್ ಚೆಕ್ ಮಾಡಿದಾಗ ಆತ ತನಗೆ ಮೋಸ ಮಾಡುತ್ತಿರುವುದು ಗೊತ್ತಾಗಿದೆ.

    ಈ ವೇಳೆ ಮಹಿಳೆ ಮದ್ಯಪಾನ ಮಾಡಿದ್ದಳು. ಹೀಗಾಗಿ ವಿಮಾನದಲ್ಲೇ ಗಂಡನೊಂದಿಗೆ ಜಗಳವಾಡಿದ್ದಾಳೆ. ವಿಮಾನದ ಸಿಬ್ಬಂದಿ ಮಧ್ಯಪ್ರವೇಶಿಸಿ ಆಕೆಯನ್ನು ಸಮಾಧಾನ ಮಾಡಲೆತ್ನಿಸಿದಾಗ ಅವರ ಜೊತೆಯೂ ಅನುಚಿತವಾಗಿ ವರ್ತಿಸಿದ್ದಾಳೆ ಎನ್ನಲಾಗಿದೆ.

    ಪರಿಸ್ಥಿತಿ ಕೈ ಮೀರಿ ಹೋದಾಗ ವಿಮಾನದ ಸಿಬ್ಬಂದಿ ಮಹಿಳೆ, ಆಕೆಯ ಗಂಡ ಹಾಗೂ ಮಗುವನ್ನು ಕೆಳಗಿಳಿಸಲು ನಿರ್ಧರಿಸಿದ್ರು. ಅದರಂತೆ ಪೈಲಟ್ ಚೆನ್ನೈ ಕಡೆಗೆ ವಿಮಾನವನ್ನ ಡೈವರ್ಟ್ ಮಾಡಿದ್ರು. ಭಾರತದಲ್ಲಿ ಕುಟುಂಬವನ್ನ ಡೀಬೋರ್ಡ್ ಮಾಡಿ ನಂತರ ಬಾಲಿಗೆ ವಿಮಾನ ಹೊರಟಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

    ಚೆನ್ನೈನಲ್ಲಿ ಅಧಿಕಾರಿಗಳು ಮಹಿಳೆ ಸಮಾಧಾನವಾಗುವವರೆಗೆ ಕುಟುಂಬವನ್ನು ಏರ್‍ಪೋರ್ಟ್‍ನಲ್ಲೇ ಉಳಿಸಿಕೊಳ್ಳಲು ನಿರ್ಧರಿಸಿದ್ದರು. ನಂತರ ಅವರನ್ನು ಕೌಲಾಲಂಪುರ್‍ನ ವಿಮಾನದಲ್ಲಿ ಕಳಿಸಿ ಅಲ್ಲಿಂದ ದೋಹಾಗೆ ಕಳಿಸಿದ್ದಾರೆ.

    ಅಲ್ಲದೆ ಭಾರತೀಯ ವೀಸಾ ಇಲ್ಲದ ಕಾರಣ ದಂಪತಿ ಕೆಲವು ತೀವ್ರ ಭದ್ರತಾ ಪರಿಶೀಲನೆಗೂ ಒಳಪಡಬೇಕಾಯ್ತು ಎಂದು ಮೂಲಗಳು ತಿಳಿಸಿವೆ.

  • ಗಂಡ ಬೇಕು ಗಂಡ ಎಂದು ಹಾವೇರಿ ಎಸ್‍ಪಿ ಕಚೇರಿ ಮುಂದೆ ಹೆಂಡತಿ ಪ್ರತಿಭಟನೆ

    ಗಂಡ ಬೇಕು ಗಂಡ ಎಂದು ಹಾವೇರಿ ಎಸ್‍ಪಿ ಕಚೇರಿ ಮುಂದೆ ಹೆಂಡತಿ ಪ್ರತಿಭಟನೆ

    ಹಾವೇರಿ: ಅವರಿಬ್ಬರೂ ಏಳು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಜಾತಿ ಬೇರೆ ಬೇರೆಯಾದರೂ ಪ್ರೀತಿ ಎಂಬ ಎರಡಕ್ಷರ ಅವರಿಬ್ಬರನ್ನು ಒಂದು ಮಾಡಿತ್ತು. ನಾಲ್ಕೈದು ವರ್ಷಗಳ ಕಾಲ ಅನ್ಯೋನ್ಯವಾಗಿದ್ದ ಇವರ ಸಂಸಾರದಲ್ಲಿ ಈಗ ಬಿರುಕು ಮೂಡಿದೆ. ಕಳೆದ ಕೆಲವು ದಿನಗಳಿಂದ ಪತಿರಾಯ ಪತ್ನಿ ಮೇಲೆ ಹಲ್ಲೆ ಮಾಡಿ ಇನ್ನಿಲ್ಲದ ಕಿರುಕುಳ ನೀಡಿ ಕೈಕೊಟ್ಟು ಹೋಗಿದ್ದಾನೆ. ಈಗ ನ್ಯಾಯ ಕೊಡಿಸಿ ಎಂದು ಪೊಲೀಸರ ದುಂಬಾಲು ಬಿದ್ದ ಮಹಿಳೆ ಇವತ್ತು ಎಸ್ಪಿ ಕಚೇರಿಗೆ ಬಂದು ಗಂಡ ಬೇಕು ಗಂಡ ಎಂದು ಕುಳಿತಿದ್ದಾಳೆ.

    ಸರ್ ನನ್ನ ಗಂಡನನ್ನ ಹುಡುಕಿ ಕೊಡಿ ಎಂದು ಪೊಲೀಸರ ಮುಂದೆ ಅಳಲು ತೋಡಿಕೊಳುತ್ತಿರೋ ಮಹಿಳೆ. ಹೌದು. ಮೂಲತಃ ಹಾವೇರಿ ತಾಲೂಕಿನ ಕಾಟೇನಹಳ್ಳಿ ಗ್ರಾಮದ ಹೆಸರು ಯಲ್ಲವ್ವ ಕಳ್ಳೀಮನಿ ಸದ್ಯ ಹಾವೇರಿ ಜಿಲ್ಲೆ ಬ್ಯಾಡಗಿ ಪಟ್ಟಣದ ಖಾಸಗಿ ಹೈಸ್ಕೂಲ್ ನಲ್ಲಿ ದೈಹಿಕ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಏಳು ವರ್ಷಗಳ ಹಿಂದೆ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಐರಣಿ ಗ್ರಾಮದ ನಿಂಗಪ್ಪ ಕಳ್ಳೀಮನಿಯನ್ನು ಪ್ರೀತಿಸಿ ಯಲ್ಲವ್ವ ಮದುವೆಯಾಗಿದ್ದರು.

    ಮದುವೆ ನಂತರದ ಕೆಲವು ವರ್ಷಗಳ ಕಾಲ ನಿಂಗಪ್ಪ ಮತ್ತು ಯಲ್ಲವ್ವ ಸಂಸಾರ ಸುಂದರವಾಗಿ ನಡೆಯುತಿತ್ತು. ನಂತರದಲ್ಲಿ ಪತಿ ನಿಂಗಪ್ಪ ಮತ್ತು ಆತನ ಮನೆಯವರು ಯಲ್ಲವ್ವಳಿಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡೋಕೆ ಶುರು ಮಾಡಿದ್ದರು. ಗರ್ಭಿಣಿ ಆಗಿದ್ದ ವೇಳೆಯೂ ತನ್ನ ಮೇಲೆ ಹಲ್ಲೆ ಮಾಡಿ ಅರ್ಬಾಶನ್ ಆಗುವಂತೆ ಮಾಡಿದ್ದರು. ಆದರೂ ಗಂಡ ಬೇಕು ಎಂದು ಎಲ್ಲವನ್ನೂ ಸಹಿಸಿಕೊಂಡಿದ್ದೆ. ಆದರೆ ಕೆಲವು ದಿನಗಳಿಂದ ಗಂಡ ನಿಂಗಪ್ಪ ತನ್ನನ್ನು ಬಿಟ್ಟು ಹೋಗಿದ್ದಾನೆ. ಹೀಗಾಗಿ ನನಗೆ ಗಂಡ ಬೇಕು. ಹುಡುಕಿಕೊಡಿ ಎಂದು ಯಲ್ಲವ್ವ ಈಗ ನಗರದ ಎಸ್ಪಿ ಕಚೇರಿ ಮುಂದೆ ಪ್ರತಿಭಟಿಸುತ್ತಿದ್ದಾರೆ.

    ಅಕ್ಟೋಬರ್ 2 ರಂದು ಹಾವೇರಿ ಗ್ರಾಮೀಣ ಠಾಣೆ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಿಸುವಂತೆ ಹೇಳಿ ಪ್ರಕರಣ ದಾಖಲಿಸಿಕೊಂಡಿದ್ದ ಗ್ರಾಮೀಣ ಠಾಣೆ ಪಿಎಸ್‍ಐ ಶಶಿಧರ್ ಪತಿಯನ್ನ ಹುಡುಕಿ ಕೊಡುವುದು ಬಿಟ್ಟು ನಂತರದಲ್ಲಿ ರಾಜಿ ಮಾಡಿಕೊಳ್ಳುವಂತೆ ದುಂಬಾಲು ಬಿದ್ದರು ಎಂದು ಯಲ್ಲವ್ವ ಬೇಸರ ವ್ಯಕ್ತಪಡಿಸಿದ್ದಾರೆ.

    ಗ್ರಾಮೀಣ ಠಾಣೆ ಪೊಲೀಸರು ಪತಿಯನ್ನ ಪತ್ತೆ ಮಾಡೋ ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಿರೋ ಯಲ್ಲವ್ವ ಪೊಲೀಸರು ಪತಿಯನ್ನು ಹುಡುಕಿಕೊಂಡು ಬರೋವರೆಗೂ ಎಸ್ಪಿ ಕಚೇರಿ ಆವರಣದಿಂದ ಹೋಗೋದಿಲ್ಲ. ಪತಿ ವಿರುದ್ಧ ಕಿರುಕುಳ ಪ್ರಕರಣ ದಾಖಲಿಸಿಕೊಳ್ಳಿ ಎಂದರೆ ಪೊಲೀಸರು ಮಿಸ್ಸಿಂಗ್ ಕೇಸ್ ಮಾಡಿಕೊಂಡಿದ್ದಾರೆ. ಹೀಗಾಗಿ ನನಗೆ ನ್ಯಾಯ ಕೊಡಿಸಿ ಎಂದು ಯಲ್ಲವ್ವ ಮಾಧ್ಯಮಗಳ ಬಳಿ ತನ್ನ ಅಳಲು ತೋಡಿಕೊಂಡಿದ್ದಾರೆ.

    ವಿಚಾರ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಮತ್ತು ಗ್ರಾಮೀಣ ಠಾಣೆ ಪಿಎಸ್‍ಐ ಶಶಿಧರ್, ಮಹಿಳೆಯನ್ನು ಗ್ರಾಮೀಣ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.

  • ಬಾಟಲಿಯಿಂದ ಪತ್ನಿಯನ್ನು ಚುಚ್ಚಿ, ಕುತ್ತಿಗೆಯನ್ನು ಕಾಲಿನಿಂದ ತುಳಿದು ಕೊಂದ!

    ಬಾಟಲಿಯಿಂದ ಪತ್ನಿಯನ್ನು ಚುಚ್ಚಿ, ಕುತ್ತಿಗೆಯನ್ನು ಕಾಲಿನಿಂದ ತುಳಿದು ಕೊಂದ!

    ಅನೇಕಲ್: ಶೀಲ ಶಂಕಿಸಿದ ಪತಿರಾಯ ತನ್ನ ಪತ್ನಿಯನ್ನು ಬಾಟಲಿನಿಂದ ಚುಚ್ಚಿ, ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಅತ್ತಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಅತ್ತಿಬೆಲೆ ಸಮೀಪದ ಮುತ್ಸಂದ್ರ ಗ್ರಾಮದಲ್ಲಿ ಕಲಾವತಿ (24) ಕೊಲೆಯಾದ ದುರ್ದೈವಿ. ಪತಿ ನಾಗೇಶ್ ತನ್ನ ಪತ್ನಿ ಶೀಲ ಶಂಕಿಸಿ ನಿತ್ಯ ಜಗಳವಾಡುತ್ತಿದ್ದು, ಇಂದು ಬೆಳಗ್ಗೆ 11 ಗಂಟೆ ವೇಳೆಗೆ ಕುಡಿದು ಮನೆಗೆ ಬಂದು ಹೆಂಡತಿ ಜೊತೆ ಜಗಳವಾಡಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿ ನಾಗೇಶ್ ಮದ್ಯದ ಬಾಟಲಿಯಿಂದ ಪತ್ನಿಗೆ ಚುಚ್ಚಿ, ಕುತ್ತಿಗೆಯನ್ನು ಕಾಲಿನಿಂದ ತುಳಿದುಕೊಂಡು ಉಸಿರುಗಟ್ಟಿಸಿ ಸಾಯಿಸಿದ್ದಾನೆ.

    ಈ ಕೃತ್ಯ ನಡೆಸಿದ ನಂತರ ಪತಿ ನಾಗೇಶ್ ಅತ್ತಿಬೆಲೆ ಪೊಲೀಸ್ ಠಾಣೆಗೆ ಬಂದು ತನ್ನ ಪತ್ನಿಯನ್ನು ಕೊಲೆ ಮಾಡಿರುವುದಾಗಿ ತಿಳಿಸಿ ಪೊಲೀಸರಿಗೆ ಶರಣಾಗಿದ್ದಾನೆ. ಕಲಾವತಿಗೆ ಒಂದು ಗಂಡು ಹಾಗೂ ಒಂದು ಹೆಣ್ಣು ಮಕ್ಕಳಿದ್ದಾರೆ. ತಾಯಿ ಕೊಲೆಯಾಗಿದ್ದು, ತಂದೆ ಜೈಲು ಪಾಲಾಗಿರುವುದರಿಂದ ಅಪ್ಪ ಅಮ್ಮ ಇಲ್ಲದೆ ತಬ್ಬಲಿಯಾಗಿವೆ.

  • ತನ್ನನ್ನು ಕೊಲ್ಲಲೆತ್ನಿಸಿದನೆಂದು ಪತಿಯ ಅಂಗಡಿಗೆ ಬೀಗ ಜಡಿದು ಪತ್ನಿ ಆಕ್ರೋಶ

    ತನ್ನನ್ನು ಕೊಲ್ಲಲೆತ್ನಿಸಿದನೆಂದು ಪತಿಯ ಅಂಗಡಿಗೆ ಬೀಗ ಜಡಿದು ಪತ್ನಿ ಆಕ್ರೋಶ

    ಹಾಸನ: ತನ್ನನ್ನು ಕೊಲಲ್ಲು ಪತಿ ಯತ್ನ ಮಾಡಿದ್ದಾನೆ ಎಂದು ಆರೋಪಿಸಿರುವ ಮಹಿಳೆಯೊಬ್ಬರು ಪತಿಯ ಅಂಗಡಿಗೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದ ಘಟನೆ ಹಾಸನದಲ್ಲಿ ನಡೆದಿದೆ.

    ಹಾಸನದ ಡಬಲ್ ಟ್ಯಾಂಕ್ ರಸ್ತೆಯಲ್ಲಿರುವ ರಾಘವೇಂದ್ರ ಹಾರ್ಡ್‍ವೇರ್ ಮಾಲಿಕ ಲೋಕೇಶ್ ಮತ್ತು ಪತ್ನಿ ದುರ್ಗಾಲಕ್ಷ್ಮಿ ಜಗಳ ಈಗ ಬೀದಿಗೆ ಬಿದ್ದಿದೆ. ಮೂರು ವರ್ಷಗಳ ಹಿಂದೆ ಮದುವೆಯಾಗಿರುವ ಲೋಕೇಶ್ ನನಗೆ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದಾನೆ ಮತ್ತು ಕೊಲೆಗೆ ಸಹ ಯತ್ನ ಮಾಡಿದ್ದಾನೆ ಎಂದು ಆರೋಪಿಸಿರುವ ದುರ್ಗಾಲಕ್ಷ್ಮಿ ದುರ್ಗೆಯ ಅವತಾರವನ್ನೇ ತಾಳಿದ್ದಾರೆ.

    ಲೋಕೇಶ್ ಮತ್ತು ದುರ್ಗಾಲಕ್ಷ್ಮಿ ಮದುವೆ ಆಗಿ ಮೂರು ವರ್ಷವಾಗಿದೆ. ಆರು ತಿಂಗಳು ಚೆನ್ನಾಗಿದ್ದ ಲೋಕೇಶ್ ಬೇರೊಬ್ಬಳೊಂದಿಗೆ ಅಕ್ರಮ ಸಂಭಂದ ಇಟ್ಟುಕೊಂಡಿದ್ದಾನೆ. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಈಗಾಗಲೆ ಡೈವೋರ್ಸ್ ನೋಟಿಸ್ ನೀಡಿದ್ದಾನೆ ಎಂದು ಪತ್ನಿ ಹೇಳಿದ್ದಾರೆ. ದುರ್ಗಾ ಪೋಷಕರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮದುವೆ ಮಾಡಿ ನಂತರ ಹಾರ್ಡ್‍ವೇರ್ ಅಂಗಡಿಗೂ ಸಹ ಹಣವನ್ನು ನೀಡಿದ್ದರು ಎನ್ನಲಾಗಿದೆ.

    ಈಗ ಒಬ್ಬಳೇ ಮಗಳ ಸ್ಥಿತಿಗೆ ಪರದಾಡುವಂತಾಗಿದೆ. ಹಲವು ಬಾರಿ ರಾಜಿ ಪಂಚಾಯಿತಿ ಮಾಡಿಸಿದರೂ ಸಹ ಸರಿಯಾಗದ ಲೋಕೇಶ್ ಈಗ ಪತ್ನಿಯೇ ಬೇಡ ಎಂದು ಹೇಳುತ್ತಾನೆ. ನನಗೆ ನ್ಯಾಯ ಬೇಕು ಎಂದು ನೊಂದ ಪತ್ನಿ ತನ್ನ ಅಳಲು ತೋಡಿಕೊಂಡಿದ್ದಾರೆ.

  • ಎಲ್‍ಐಸಿ ಹಣದ ಆಸೆಗಾಗಿ ನಾದಿನಿ ವರಿಸಲು ಮುಂದಾಗಿ ನಾಪತ್ತೆ- ಪತಿಗಾಗಿ ಪತ್ನಿ ಕಣ್ಣೀರು

    ಎಲ್‍ಐಸಿ ಹಣದ ಆಸೆಗಾಗಿ ನಾದಿನಿ ವರಿಸಲು ಮುಂದಾಗಿ ನಾಪತ್ತೆ- ಪತಿಗಾಗಿ ಪತ್ನಿ ಕಣ್ಣೀರು

    ಹಾವೇರಿ: ಪ್ರೀತಿ ಹೆಸರಲ್ಲಿ ತಲೆಕೆಡಿಸಿದ ಭೂಪ ಮೂರು ಬಾರಿ ಮದುವೆಯಾಗಿ ಸಂಸಾರ ಮಾಡಿದ್ದ. ಆದ್ರೀಗ, ತಮ್ಮನ ಎಲ್‍ಐಸಿ ಹಣ ಬರುತ್ತೆ ಅಂತ ನಾದಿನಿಯನ್ನ ಮದುವೆಯಾಗಲು ಹೆಂಡತಿಯನ್ನೇ ದೂರ ಮಾಡಿದ್ದಾನೆ. ಆದ್ರೆ, ಹೆಂಡತಿ ಮಾತ್ರ ನನಗೆ ಗಂಡ ಬೇಕು ಅಂತ ಪಟ್ಟು ಹಿಡಿದಿದ್ದಾರೆ.

    ಹೌದು. ಹಾವೇರಿಯ ಕಾಟೇನಹಳ್ಳಿ ಗ್ರಾಮದ ಯಲ್ಲವ್ವ ಮತ್ತು ನಿಂಗಪ್ಪ ಕಳ್ಳಿಹಾಳ ಪ್ರೀತಿಸಿ 2007ರಲ್ಲಿ ಮದ್ವೆಯಾಗಿದ್ರು. ಅಂತರ್ಜಾತಿಯವರಾಗಿದ್ದರಿಂದ ಮನೆಯವರ ವಿರೋಧದಿಂದ 2010ರಲ್ಲಿ ಮತ್ತೆ ರಿಜಿಸ್ಟರ್ ಮದ್ವೆಯಾದ್ರು. ಇನ್ನೊಮ್ಮೆ ದೇವಸ್ಥಾನದಲ್ಲಿಯೂ ವಿವಾಹವಾದ್ರು. ಆದ್ರೆ, ಮೊದಲಿಗೆ ಕೆಲದಿನ ಚೆನ್ನಾಗಿದ್ದ ನಿಂಗಪ್ಪ ನಿನ್ನ ನಡತೆ ಸರಿಯಿಲ್ಲ ಅಂತ ಕುಟುಂಬದವರ ಜೊತೆ ಸೇರಿ ಯಲ್ಲವ್ವಳಿಗೆ ಕಿರುಕುಳ ಕೊಡಲು ಆರಂಭಿಸಿದ್ದಾನೆ.

    ಎಲ್‍ಐಸಿ ಏಜೆಂಟರ್ ಆಗಿರೋ ಪತಿ ನಿಂಗಪ್ಪ ತನ್ನ ತಮ್ಮ ಸತ್ತ ಮೇಲೆ, ಎಲ್‍ಐಸಿ ಹಣದ ಆಸೆಗೆ ತಮ್ಮನ ಪತ್ನಿಯನ್ನೇ ಮದ್ವೆಯಾಗಲು ಯತ್ನಿಸಿದ್ದಾನೆ. ರಾಜಿ ಪಂಚಾಯ್ತಿ ಬಳಿಕ ಹೊಂದಿಕೊಂಡು ಹೋಗ್ತಿದ್ದ ನಿಂಗಪ್ಪ ಒಂದು ವಾರದಿಂದ ನಾಪತ್ತೆಯಾಗಿದ್ದಾನೆ. ಹೀಗಾಗಿ ನನಗೆ ನನ್ನ ಪತಿಬೇಕು, ಹುಡಿಕಿಕೊಡಿ ಅಂತ ಗ್ರಾಮೀಣ ಪೊಲಿಸ್ ಠಾಣೆ ಮೆಟ್ಟಿಲೇರಿದ್ದಾರೆ. ಪತಿ ನಿಂಗಪ್ಪ ಬೇರೊಬ್ಬರಿಗೆ ಮೋಸ ಮಾಡಬಾರದು. ತನ್ನ ಗತಿ ಬೇರೆ ಯಾರಿಗೂ ಬರಬಾರದು ಅಂತ ಯಲ್ಲವ್ವ ಕಣ್ಣೀರಿಡುತ್ತಿದ್ದಾರೆ.

  • ಮದುವೆಯಾಗಿದ್ರೂ ಸಿಕ್ಕಾಪಟ್ಟೆ ಪ್ರಯಣದಾಟ -ಹೊಟೇಲ್‍ನಲ್ಲಿ ಸಿಕ್ಕಿಬಿದ್ದ ಜೋಡಿಗೆ ಪತ್ನಿಯಿಂದ ಗೂಸಾ

    ಮದುವೆಯಾಗಿದ್ರೂ ಸಿಕ್ಕಾಪಟ್ಟೆ ಪ್ರಯಣದಾಟ -ಹೊಟೇಲ್‍ನಲ್ಲಿ ಸಿಕ್ಕಿಬಿದ್ದ ಜೋಡಿಗೆ ಪತ್ನಿಯಿಂದ ಗೂಸಾ

    ಬೆಂಗಳೂರು: ಮದುವೆಯಾಗಿ ಮನೆಯಲ್ಲಿ ಪತ್ನಿ ಇದ್ದರೂ ಗಂಡ ಮಾತ್ರ ತನ್ನ ಆಫೀಸ್ ನಲ್ಲಿಯ ಯುವತಿಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡು ಪತ್ನಿಯ ಕೈಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಸಕತ್ ಒದೆ ತಿಂದಿದ್ದಾನೆ.

    ಗುರು ಪ್ರಸಾದ್ ಎಂಬಾತನೇ ಪತ್ನಿಯಿಂದ ಥಳಿಸಿಕೊಂಡ ಪತಿರಾಯ. ಗುರುಪ್ರಸಾದ್ ತನ್ನ ಪತ್ನಿ ಉಷಾರ ಕೈಯಲ್ಲಿ ಪ್ರೇಯಸಿಯೊಂದಿಗೆ ಹೋಟೆಲ್ ನಲ್ಲಿ ರೊಮ್ಯಾನ್ಸ್ ಮಾಡುವಾಗ ಸಿಕ್ಕಿಬಿದ್ದಿದ್ದಾನೆ. ಗುರುಪ್ರಸಾದ್ ಖಾಸಗಿ ಕಂಪನಿಯ ನೌಕರನಾಗಿದ್ದು, ತನ್ನದೇ ಕಂಪನಿಯಲ್ಲಿ ಕೆಲಸ ಮಾಡುವ ಜ್ಯೋತಿ ಎಂಬವರ ಜೊತೆ ಲವ್ವಿ ಡವ್ವಿ ಶುರು ಮಾಡಿಕೊಂಡಿದ್ದನು.

    ಗುರು ಪ್ರಸಾದ್

    ಕಂಪನಿಯಲ್ಲಿ ತನ್ನ ಪತ್ನಿ ಜ್ಯೋತಿ ಬೇರೊಬ್ಬನೊಂದಿಗೆ ಸಂಬಂಧ ಹೊಂದಿರುವ ವಿಷಯ ತಿಳಿದ ಜ್ಯೋತಿ ಪತಿ ಚೈತನ್ಯ ಡೈವೋರ್ಸ್ ಗೆ ಅಪ್ಲೈ ಮಾಡಿದ್ದಾರೆ. ಜ್ಯೋತಿ ಗಂಡನ ಬಿಟ್ಟು ನನ್ನ ಗಂಡ ಗುರುಪ್ರಸಾದ್ ಜೊತೆಯಲ್ಲಿ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾಳೆ ಅಂತ ಗುರುಪ್ರಸಾದ್ ಪತ್ನಿ ಉಷಾರಿಗೆ ತಿಳಿದಿತ್ತು. ಹೇಗಾದ್ರೂ ಮಾಡಿ ರೆಡ್ ಹ್ಯಾಂಡ್ ಆಗಿ ಹಿಡಿಬೇಕು ಅಂತ ಗುರುಪ್ರಸಾದ್ ಫಾಲೋ ಮಾಡುತ್ತಿದ್ದ ಉಷಾ, ತನ್ನ ಗಂಡ ಮತ್ತು ಜ್ಯೋತಿ ಹೋಟೆಲ್ ಒಳಗೆ ಹೋಗಿ ಜೊತೆಯಲ್ಲಿ ಕೂತು ಲವ್ವಿ ಡವ್ವಿ ಆಡೋದನ್ನ ನೋಡಿದ್ದಾರೆ.

    ಜ್ಯೋತಿ

    ಗಂಡ ಮತ್ತು ಜ್ಯೋತಿ ಹೊರಗೆ ಬರೋದನ್ನು ಕಾದು ಕುಳಿತಿದ್ದ ಉಷಾ ಇಬ್ಬರಿಗೂ ಚೆನ್ನಾಗಿ ಥಳಿಸಿದ್ದಾರೆ. ಇದೆಲ್ಲಾ ದೃಶ್ಯಗಳು ಹೋಟೆಲ್ ನ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ. ಹೋಟೆಲ್‍ನ ಹೊರಗೆ ಮಾರಾಮಾರಿ ನಡೆಯಿತೋ ಕೊನೆಗೆ ಉಷಾ, ಜ್ಞಾನಭಾರತಿ ಪೊಲೀಸ್ ಸ್ಟೇಷನ್ ಅಲ್ಲಿ ದೂರು ನೀಡಿದ್ದಾರೆ. ವಿಚಾರ ತಿಳಿದ ಗುರುಪ್ರಸಾದ್ ಮತ್ತು ಜ್ಯೋತಿ ಇಬ್ಬರು ಎಸ್ಕೇಪ್ ಆಗಿದ್ದಾರೆ.

  • `ದಯವಿಟ್ಟು ಹುಡ್ಕೋ ಪ್ರಯತ್ನ ಮಾಡ್ಬೇಡಿ ಮಮ್ಮಿ’- ವಿಡಿಯೋ ಕಾಲ್ ಮಾಡಿ ಮಗುವಿನೊಂದಿಗೆ ಗೃಹಿಣಿ ನಾಪತ್ತೆ!

    `ದಯವಿಟ್ಟು ಹುಡ್ಕೋ ಪ್ರಯತ್ನ ಮಾಡ್ಬೇಡಿ ಮಮ್ಮಿ’- ವಿಡಿಯೋ ಕಾಲ್ ಮಾಡಿ ಮಗುವಿನೊಂದಿಗೆ ಗೃಹಿಣಿ ನಾಪತ್ತೆ!

    ಮೈಸೂರು: ಗಂಡನ ಕಿರುಕುಳಕ್ಕೆ ಬೇಸತ್ತ ಗೃಹಿಣಿ ಮಗನ ಜೊತೆ ನಾಪತ್ತೆಯಾಗಿರೋ ಘಟನೆಯೊಂದು ಜಿಲ್ಲೆಯಲ್ಲಿ ನಡೆದಿರೋ ಬಗ್ಗೆ ಬೆಳಕಿಗೆ ಬಂದಿದೆ.

    ಮೈಸೂರು ನಗರದ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹೂಟಗಳ್ಳಿಯಲ್ಲಿ ಈ ಘಟನೆ ನಡೆದಿದೆ. ಗೃಹಿಣಿ ಲಿಖಿತ (24) ಮಗ ಧ್ರುವ (2) ನಾಪತ್ತೆಯಾದವರು.

    ನಾಪತ್ತೆಯಾಗೋದಕ್ಕೂ ಮೊದಲು ಲಿಖಿತ ತನ್ನ ತಾಯಿ ಪಂಕಜಾ ಅವರಿಗೆ ವೀಡಿಯೋ ಕಾಲ್ ಮಾಡಿ ಅದರಲ್ಲಿ, ತಾನು ನಾಪತ್ತೆ ಆಗುತ್ತಿರುವುದಾಗಿ ಹೇಳಿದ್ದಾರೆ. ಅಲ್ಲದೇ ಗಂಡ ಕಿರುಕುಳ ನೀಡುತ್ತಿರುವುದಾಗಿ ಕೂಡ ದೂರಿದ್ದಾರೆ.

    ಆ ಬಳಿಕ ಹೂಟಗಳ್ಳಿಯಲ್ಲಿರುವ ಗಂಡ ಮಂಜುನಾಥ್ ಮನೆಯಿಂದ ಲಿಖಿತ ಮಗುವಿನ ಸಮೇತ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    https://www.youtube.com/watch?v=-CQL0kx4Nlc&feature=youtu.be

  • ಪತ್ನಿಯ ಪ್ರಿಯಕರನಿಗೆ ಅವಾಜ್ ಹಾಕಿದ ಪತಿ-ಮುಂದೇನಾಯ್ತು, ಈ ಸ್ಟೋರಿ ಓದಿ

    ಪತ್ನಿಯ ಪ್ರಿಯಕರನಿಗೆ ಅವಾಜ್ ಹಾಕಿದ ಪತಿ-ಮುಂದೇನಾಯ್ತು, ಈ ಸ್ಟೋರಿ ಓದಿ

    ಕಲಬುರ್ಗಿ: ಪತ್ನಿಯ ಪ್ರಿಯಕರನಿಗೆ ಅವಾಜ್ ಹಾಕಿದ್ದ ಪತಿಯೋರ್ವನಿಗೆ ಮಾರಣಾಂತಿಕ ಹಲ್ಲೆ ನಡೆಸಿ, ಬೆತ್ತಲೆಗೊಳಿಸಿ ರಸ್ತೆ ಮಧ್ಯೆ ಎಸೆದಿರುವ ಅಮಾನವೀಯ ಘಟನೆ ನಗರದ ಗಾಜಿಪುರ ಬಡಾವಣೆಯಲ್ಲಿ ನಡೆದಿದೆ.

    ಮಹೇಶ್ ಹಲ್ಲೆಗೊಳಗಾದ ಪತಿರಾಯ. ಮಹೇಶ್ ಕಳೆದ ಆರು ವರ್ಷಗಳ ಹಿಂದೆ ಶಶಿಕಲಾ ಎಂಬವನರನ್ನು ಮದುವೆಯಾಗಿದ್ದರು. ಆದರೆ ಪತ್ನಿ ಶಶಿಕಲಾ ಮಾತ್ರ ಬೇರೊಬ್ಬ ಯುವಕನನ್ನು ಪ್ರೀತಿಸುತ್ತಿದ್ದಳು. ಪತ್ನಿಯ ಅಕ್ರಮ ಸಂಬಂಧ ತಿಳಿದ ಮಹೇಶ್ ಮಂಗಳವಾರ ಶಶಿಕಲಾ ಪ್ರಿಯಕರನಿಗೆನ ಅವಾಚ್ಯ ಶಬ್ಧಗಳನ್ನು ಬಳಸಿ ಬೈದು ಅವಾಜ್ ಹಾಕಿದ್ದಾನೆ.

    ಮಹೇಶ್ ಅವಾಜ್ ಹಾಕಿದ್ದರಿಂದ ಕೋಪಗೊಂಡ ಪ್ರಿಯಕರ ತನ್ನ ಸ್ನೇಹಿತರೊಂದಿಗೆ ಬಂದು ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಹಲ್ಲೆಯ ಬಳಿಕ ಮಹೇಶನನ್ನು ಪೂರ್ಣ ಬೆತ್ತಲೆಗೊಳಿಸಿ ನಗರದ ಲಾರಿ ತಂಗುದಾಣದಲ್ಲಿ ಬೀಸಾಡಿ ಹೋಗಿದ್ದಾರೆ.

    ಮಹೇಶನನ್ನು ಸ್ಥಳೀಯರು ನಗರದ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಶಶಿಕಲಾ, ನನ್ನ ಮೇಲಿನ ಆರೋಪಗಳೆಲ್ಲಾ ಸುಳ್ಳು ಎಂದು ಹೇಳಿದ್ದಾರೆ. ಈ ಕುರಿತು ಕಲಬುರಗಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

  • ಹೆಣ್ಣು ಮಗು ಹುಟ್ಟಿದ್ದಕ್ಕೆ ಹೆಂಡ್ತಿಯನ್ನ ಹೂರ ಹಾಕಿದ ಗಂಡ!

    ಹೆಣ್ಣು ಮಗು ಹುಟ್ಟಿದ್ದಕ್ಕೆ ಹೆಂಡ್ತಿಯನ್ನ ಹೂರ ಹಾಕಿದ ಗಂಡ!

    ಬೆಂಗಳೂರು: ಪಾಪಿ ಗಂಡ ಹೆಣ್ಣು ಮಗು ಹುಟ್ಟಿದ್ದಕ್ಕೆ ಹೆಂಡತಿಯನ್ನ ಹೂರ ಹಾಕಿದ ಘಟನೆ ನಗರದ ಮಾಗಡಿ ರೋಡ್ ಬಳಿ ದಾಸರಹಳ್ಳಿಯಲ್ಲಿ ನಡೆದಿದೆ.

    ಗಂಡ ಮಹೇಶ್ ಎಂಬಾತ ಪತ್ನಿ ಸುಮಿತ್ರ ಅವರನ್ನು ಮನೆಯಿಂದ ಹೊರ ಹಾಕಿದ್ದಾರೆ. ಈ ದಂಪತಿ ನಾಲ್ಕು ವರ್ಷದ ಹಿಂದೆ ಮದುವೆಯಾಗಿದ್ದರು.

    ಮಹೇಶ, ನಾದಿನಿ ಮಂಜುಳ, ಗಂಡನ ಅಣ್ಣ ರಾಜು, ಅತ್ತೆ ಜಯಮ್ಮನಿಂದ ಹೆಣ್ಣು ಮಗು ಆಗಿದೆ ಅಂತ ಗಂಡನ ಕುಟುಂಬಸ್ಥರು ಸುಮಿತ್ರಗೆ ಕಿರುಕುಳ ನೀಡುತಿದ್ದರು ಎನ್ನಲಾಗಿದೆ.

    ಕಂಪ್ಲೇಟ್ ತೆಗೆದುಕೊಳ್ಳದೇ ಪೊಲೀಸರು ಸತಾಯಿಸುತ್ತಿದ್ದರು. ಮಹಿಳಾ ಠಾಣೆಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ. ಸದ್ಯ ಸುಮಿತ್ರಾ ಅವರು ಮಾಗಡಿ ರೋಡ್ ಪೊಲೀಸ್ ಠಾಣೆಗೆ ಬಂದಿದ್ದಾರೆ.

  • ಗಂಡನಿಗೆ ಅದು ಬೇಕು, ಇದು ಬೇಕು-ಕೊನೆಗೆ ಡಾಕ್ಟರ್ ಹೇಳಿದ್ದೇ ನಿಜ ಆಯ್ತು

    ಗಂಡನಿಗೆ ಅದು ಬೇಕು, ಇದು ಬೇಕು-ಕೊನೆಗೆ ಡಾಕ್ಟರ್ ಹೇಳಿದ್ದೇ ನಿಜ ಆಯ್ತು

    ಬೆಂಗಳೂರು: ಗಂಡನಿಗೆ ಸೆಕ್ಸ್ ಮಾಡಲು ಹೆಂಡತಿಯೂ ಬೇಕು ಮತ್ತು ಪರ ಪುರುಷರು ಬೇಕು. ಅಂತಹ ಪತಿಯ ವಿರುದ್ಧ ಗೃಹಿಣಿಯೊಬ್ಬರು ವನಿತಾ ಸಹಾಯವಾಣಿಗೆ ದೂರು ನೀಡಿ, ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.

    ನಗರದ ಬಾಣಸವಾಡಿಯ ನಿವಾಸಿಯಾದ ಮಹಿಳೆ ಕೆಲವು ದಿನಗಳ ಹಿಂದೆ ಗುಪ್ತಾಂಗಕ್ಕೆ ಸಂಬಂಧಪಟ್ಟಂತೆ ಸಮಸ್ಯೆ ಕಾಣಿಸಿಕೊಂಡಿತ್ತು. ಯಾಕೆ ಹೀಗೆ ಆಗುತ್ತಿದೆ ಎಂದು ಡಾಕ್ಟರ್ ಬಳಿ ಹೋದಾಗ ವೈದ್ಯರು ಗಂಡನ ಬಗ್ಗೆಯೇ ಅನುಮಾನ ವ್ಯಕ್ತಪಡಿಸಿದ್ದಾರೆ. ಕೊನೆಗೆ ಡಾಕ್ಟರ್ ಹೇಳಿದ್ದೇ ನಿಜವಾಗಿದೆ.

    ಇದನ್ನೂ ಓದಿ: ಹೋಮೊ ಸೆಕ್ಸ್ ಗೆ ಬಂದವನನ್ನು ಕೊಲೆ ಮಾಡಿದ್ದ ಜೇಬುಗಳ್ಳ ಅರೆಸ್ಟ್!

    ಡಾಕ್ಟರ್ ಹೇಳಿದ್ದೇನು?: ಆಸ್ಪತ್ರೆಯಿಂದ ಮನೆಗೆ ಬಂದ ಮಹಿಳೆ ಅನುಮಾನಗೊಂಡು ಗಂಡನನ್ನು ಫಾಲೋ ಮಾಡಿದ್ದಾರೆ. ಬಳಿಕ ಗಂಡನ ಲ್ಯಾಪ್ ಟ್ಯಾಪ್ ಪರಿಶೀಲಿಸಿದಾಗ ಆತನ ಕಾಮಪುರಾಣ ಬೆಳಕಿಗೆ ಬಂದಿದೆ. ಇದನ್ನು ಸಹಿಲಾರದ ಪತ್ನಿ ಗಂಡನನ್ನು ಪ್ರಶ್ನಿಸಿದ್ರೆ ನಾನು ಗಂಡಸರೊಂದಿಗೆ ಲೈಂಗಿಕ ಸಂಪರ್ಕ ಹೊಂದುತ್ತೇನೆ. ನಿನ್ನೊಂದಿಗೂ ಅದನ್ನೇ ಮಾಡ್ತೀನಿ ಅಂತ ಹೇಳಿದ್ದಾನೆ.

    ಇದನ್ನೂ ಓದಿ: ಹುಡುಗರೇ ಬೀ ಕೇರ್‍ಫುಲ್.. ಫೇಸ್‍ಬುಕ್‍ನಲ್ಲಿದೆ ಹೋಮೊ ಸೆಕ್ಸ್ ಪೇಜ್!

    ಗಂಡನೊಂದಿಗೆ ಸಂಸಾರ ಮಾಡ್ಬೇಕು ಅಂದುಕೊಂಡ್ರೆ ಆತ ಬೇರೊಬ್ಬ ಪುರಷನೊಂದಿಗೆ ಸಂಪರ್ಕ ಬೆಳಸಿದ್ದಾನೆ. ಇದರಿಂದ ಬೇಸತ್ತ ಮಹಿಳೆ ಈಗ ಗಂಡನೊಂದಿಗೆ ಬಾಳಲು ಸಾಧ್ಯವಿಲ್ಲವೆಮದು ದೂರ ಉಳಿಯಲು ಕಾನೂನು ಹೋರಾಟ ಮಾಡುತ್ತಿದ್ದಾರೆ.

    ಇದನ್ನೂ ಓದಿ:  ಮಗನಿಗೆ ಸೆಕ್ಸ್ ಪಾಠ ಹೇಳಿಕೊಡಲು ಕಾಲ್ ಗರ್ಲ್ ನೇಮಿಸಿದ್ಳು ತಾಯಿ!