Tag: ಗಂಡುಗಲಿ ಮದಕರಿ ನಾಯಕ

  • ದರ್ಶನ್ ನನ್ನ ದತ್ತು ಮಗನಲ್ಲ ಸ್ವಂತ ಮಗ: ಸುಮಲತಾ

    ದರ್ಶನ್ ನನ್ನ ದತ್ತು ಮಗನಲ್ಲ ಸ್ವಂತ ಮಗ: ಸುಮಲತಾ

    ಬೆಂಗಳೂರು: ಐತಿಹಾಸಿಕ ಗಂಡುಗಲಿ ಮದಕರಿ ನಾಯಕ ಚಿತ್ರದ ಮುಹೂರ್ತ ಕಾರ್ಯಕ್ರಮದಲ್ಲಿ ಇಂದು ನಟಿ, ಸಂಸದೆ ಸುಮಲತಾ ಅಂಬರೀಶ್ ಭಾಗಿಯಾಗಿದ್ದಾರೆ. ಈ ವೇಳೆ ದರ್ಶನ್ ನನ್ನ ದತ್ತು ಮಗನಲ್ಲ ಸ್ವಂತ ಮಗ ಎಂದು ಖುಷಿಯಿಂದ ಹೇಳಿಕೊಂಡಿದ್ದಾರೆ.

    ಮುಹೂರ್ತದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಕ್ ಲೈನ್ ಪ್ರೊಡಕ್ಷನ್ ಹಾಗೂ ರಾಜೇಂದ್ರ ಸಿಂಗ್ ಬಾಬು ಅವರ ನಿರ್ದೇಶನದ ದರ್ಶನ್ ನಟನೆಯ ಸಿನಿಮಾ ಇದಾಗಿದ್ದು, ಸಿನಿಮಾ ಯಶಸ್ಸಿನಲ್ಲಿ ಇತಿಹಾಸ ಸೃಷ್ಟಿಸಬೇಕು ಎಂದು ಹೇಳಿದರು. ಇದನ್ನೂ ಓದಿ: ಮದಕರಿ ನಾಯಕನ ಪಾತ್ರದಿಂದ ಚಿತ್ರ ಜನರಿಗೆ ಇನ್ನಷ್ಟು ಹತ್ತಿರವಾಗಲಿದೆ: ದರ್ಶನ್

    ಐತಿಹಾಸಿಕ ಚಿತ್ರದಲ್ಲಿ ದರ್ಶನ್ ನಟಿಸುತ್ತಿರುವುದೇ ಒಂದು ಖುಷಿಯ ವಿಚಾರವಾಗಿದೆ. ದರ್ಶನ್ ನಟಿಸುತ್ತಿರುವುದು ಒಂದು ಹಿಸ್ಟರಿ ಕ್ರಿಯೇಟ್ ಮಾಡುತ್ತದೆ. ದರ್ಶನ್ ನನ್ನ ದತ್ತು ಮಗ ಅಲ್ಲ ನನ್ನ ಸ್ವಂತ ಮಗನೇ. ಐತಿಹಾಸಿಕ ಚಿತ್ರದಲ್ಲಿ ನಾನು ರಾಜಮಾತೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಇದನ್ನೂ ಓದಿ: ಗಂಡುಗಲಿ ಮದಕರಿ ನಾಯಕ ಸಿನಿಮಾ ಮೂಹೂರ್ತದಲ್ಲಿ ಸುಮಲತಾ ಭಾಗಿ

    ಇದಕ್ಕೂ ಮೊದಲು ದರ್ಶನ್ ಮಾತನಾಡಿ, ಇಂದು ಸುಮಲತಾ ಅಮ್ಮ ಚಿತ್ರದ ಮುಹೂರ್ತಕ್ಕೆ ಚಾಲನೆ ಕೊಟ್ಟಿದ್ದಾರೆ. ಚಿತ್ರದಲ್ಲಿ ಎಲ್ಲರೂ ಹಿರಿಯ ಕಲಾವಿದರಿದ್ದಾರೆ. ಅವರು ದರ್ಶನ್ ಕೂತ್ಕೋ ಅಂದರೆ ಕುತ್ಕೋಬೇಕು, ನಿಂತ್ಕೋ ಅಂದರೆ ನಿಂತ್ಕೋಬೇಕು. ಯಾಕೆಂದರೆ ಎಲ್ಲರೂ ನನ್ನ ಸಿನಿಯರ್ಸ್ ಎಂದು ಹೇಳಿದರು.

    ಚಿತ್ರದಲ್ಲಿರುವ ಬಹಳ ಕಲಾವಿದರು ನಮ್ಮ ತಂದೆ ಜೊತೆಗೆ ಕೆಲಸ ಮಾಡಿದ್ದಾರೆ. ಗಂಡುಗಲಿ ಮದಕರಿ ನಾಯಕನ ಚಿತ್ರಕ್ಕಾಗಿ ದೊಡ್ಡ ಟೀಮ್ ಸೇರಿದ್ದೀವಿ. ಮದಕರಿ ನಾಯಕನ ಪಾತ್ರದಿಂದ ಚಿತ್ರ ಇನ್ನಷ್ಟು ಜನರಿಗೆ ಹತ್ತಿರವಾಗಲಿದೆ. ಅಲ್ಲದೆ ರಾಜಮಾತೆ ಪಾತ್ರದಲ್ಲಿ ಸುಮಲತಾ ಅವರು ಕಾಣಿಸಿಕೊಳ್ಳಲಿದ್ದಾರೆ. ಈಗ ಆರಂಭವಾಗಿದೆ, ತಯಾರಿಗಳು ನಡೆಯುತ್ತಿದೆ ಎಂದು ದರ್ಶನ್ ತಿಳಿಸಿದರು. ಇದನ್ನೂ ಓದಿ: ದುರ್ಗದ ಕೋಟೆಯಲ್ಲಿ ‘ವೀರ ಮದಕರಿ ನಾಯಕ’ನಾಗಿ ಸಾರಥಿಯ ಪಯಣ

    ದರ್ಶನ್ ಅಭಿನಯದ ಐತಿಹಾಸಿಕ ಗಂಡುಗಲಿ ಮದಕರಿ ನಾಯಕ ಚಿತ್ರದ ಮಹೂರ್ತ ಇಂದು ನೆರವೇರಿದೆ. ಪುರಾತನ ಗವಿ ಗಂಗಾಧರೆಶ್ವರ ದೇವಸ್ಥಾನದಲ್ಲಿ ಮಹೂರ್ತ ನಡೆದಿದ್ದು, ಚಿತ್ರದ ಮೊದಲ ಸೀನ್ ಗೆ ಚಾಲನೆ ನೀಡಲಾಗಿದೆ. ಮಹೂರ್ತ ಕಾರ್ಯಕ್ರಮದಲ್ಲಿ ದರ್ಶನ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ಶ್ರೀನಿವಾಸ್ ಮೂರ್ತಿ ಭಾಗಿಯಾಗಿದ್ದಾರೆ.

  • ಮದಕರಿ ನಾಯಕನ ಪಾತ್ರದಿಂದ ಚಿತ್ರ ಜನರಿಗೆ ಇನ್ನಷ್ಟು ಹತ್ತಿರವಾಗಲಿದೆ: ದರ್ಶನ್

    ಮದಕರಿ ನಾಯಕನ ಪಾತ್ರದಿಂದ ಚಿತ್ರ ಜನರಿಗೆ ಇನ್ನಷ್ಟು ಹತ್ತಿರವಾಗಲಿದೆ: ದರ್ಶನ್

    ಬೆಂಗಳೂರು: ಐತಿಹಾಸಿಕ ಗಂಡುಗಲಿ ಮದಕರಿ ನಾಯಕ ಚಿತ್ರದ ಮುಹೂರ್ತಕ್ಕೆ ಇಂದು ಚಾಲನೆ ಸಿಕ್ಕಿದ್ದು, ಮದಕರಿ ನಾಯಕನ ಪಾತ್ರದಿಂದ ಚಿತ್ರ ಜನರಿಗೆ ಇನ್ನಷ್ಟು ಹತ್ತಿರವಾಗಲಿದೆ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ನಟ ದರ್ಶನ್, ಇಂದು ಸುಮಲತಾ ಅಮ್ಮ ಚಿತ್ರದ ಮುಹೂರ್ತಕ್ಕೆ ಚಾಲನೆ ಕೊಟ್ಟಿದ್ದಾರೆ. ಚಿತ್ರದಲ್ಲಿ ಎಲ್ಲರೂ ಹಿರಿಯ ಕಲಾವಿದರಿದ್ದಾರೆ. ಅವರು ದರ್ಶನ್ ಕೂತ್ಕೊ ಅಂದರೆ ಕುತ್ಕೋಬೇಕು, ನಿಂತ್ಕೊ ಅಂದರೆ ನಿಂತ್ಕೋಬೇಕು. ಯಾಕೆಂದರೆ ಎಲ್ಲರೂ ನನ್ನ ಸಿನಿಯರ್ಸ್ ಎಂದು ಹೇಳಿದರು. ಇದನ್ನೂ ಓದಿ: ಗಂಡುಗಲಿ ಮದಕರಿ ನಾಯಕ ಸಿನಿಮಾ ಮೂಹೂರ್ತದಲ್ಲಿ ಸುಮಲತಾ ಭಾಗಿ

    ಚಿತ್ರದಲ್ಲಿರುವ ಬಹಳ ಕಲಾವಿದರು ನಮ್ಮ ತಂದೆ ಜೊತೆಗೆ ಕೆಲಸ ಮಾಡಿದ್ದಾರೆ. ಗಂಡುಗಲಿ ಮದಕರಿ ನಾಯಕನ ಚಿತ್ರಕ್ಕಾಗಿ ದೊಡ್ಡ ಟೀಮ್ ಸೇರಿದ್ದೀವಿ. ಮದಕರಿ ನಾಯಕನ ಪಾತ್ರದಿಂದ ಚಿತ್ರ ಇನ್ನಷ್ಟು ಜನರಿಗೆ ಹತ್ತಿರವಾಗಲಿದೆ. ಅಲ್ಲದೆ ರಾಜಮಾತೆ ಪಾತ್ರದಲ್ಲಿ ಸುಮಲತಾ ಅವರು ಕಾಣಿಸಿಕೊಳ್ಳಲಿದ್ದಾರೆ. ಈಗ ಆರಂಭವಾಗಿದೆ, ತಯಾರಿಗಳು ನಡೆಯುತ್ತಿದೆ ಎಂದು ದರ್ಶನ್ ತಿಳಿಸಿದರು. ಇದನ್ನೂ ಓದಿ: ದುರ್ಗದ ಕೋಟೆಯಲ್ಲಿ ‘ವೀರ ಮದಕರಿ ನಾಯಕ’ನಾಗಿ ಸಾರಥಿಯ ಪಯಣ

    ದರ್ಶನ್ ಅಭಿನಯದ ಐತಿಹಾಸಿಕ ಗಂಡುಗಲಿ ಮದಕರಿ ನಾಯಕ ಚಿತ್ರದ ಮಹೂರ್ತ ಇಂದು ನೆರವೇರಿದೆ. ಪುರಾತನ ಗವಿ ಗಂಗಾಧರೆಶ್ವರ ದೇವಸ್ಥಾನದಲ್ಲಿ ಮಹೂರ್ತ ನಡೆದಿದ್ದು, ಚಿತ್ರದ ಮೊದಲ ಸೀನ್ ಗೆ ಚಾಲನೆ ನೀಡಲಾಗಿದೆ. ಮಹೂರ್ತ ಕಾರ್ಯಕ್ರಮದಲ್ಲಿ ದರ್ಶನ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ಶ್ರೀನಿವಾಸ್ ಮೂರ್ತಿ ಭಾಗಿಯಾಗಿದ್ದಾರೆ.

    ದರ್ಶನ್ ಅವರು ಕ್ರಾಂತಿವೀರ ಸಂಗೊಳ್ಳಿರಾಯಣ್ಣ, ಕುರುಕ್ಷೇತ್ರ ಚಿತ್ರಗಳ ನಂತ ಇದೀಗ ಮತ್ತೊಂದು ಐತಿಹಾಸಿಕ ಚಿತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಬಿ.ಎಲ್.ವೇಣು ಕಾದಂಬರಿಯನ್ನು ಆಧರಿಸಿದ ಸಿನಿಮಾ ಇದಾಗಿದ್ದು, ಬಿಗ್ ಬಜೆಟ್ ಚಿತ್ರವಾಗಿದೆ. ತಾರಾಗಣ, ತಂತ್ರಜ್ಞರ ತಂಡ ಕೂಡ ತುಂಬಾ ವಿಶಾಲವಾಗಿರಲಿದೆ. ಬೆಂಗಳೂರು, ರಾಜಸ್ಥಾನ, ಚಿತ್ರದುರ್ಗ, ಮುಂಬೈನಲ್ಲೂ ಕೂಡ ಶೂಟಿಂಗ್ ನಡೆಯಲಿದೆ ಎಂಬುದಾಗಿ ತಿಳಿದುಬಂದಿದೆ.

  • ಗಂಡುಗಲಿ ಮದಕರಿ ನಾಯಕ ಸಿನಿಮಾ ಮೂಹೂರ್ತದಲ್ಲಿ ಸುಮಲತಾ ಭಾಗಿ

    ಗಂಡುಗಲಿ ಮದಕರಿ ನಾಯಕ ಸಿನಿಮಾ ಮೂಹೂರ್ತದಲ್ಲಿ ಸುಮಲತಾ ಭಾಗಿ

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಐತಿಹಾಸಿಕ ಗಂಡುಗಲಿ ಮದಕರಿ ನಾಯಕ ಚಿತ್ರದ ಮುಹೂರ್ತ ಇಂದು ನೆರವೇರಿದೆ.

    ಪುರಾತನ ಗವಿ ಗಂಗಾಧರೇಶ್ವರ ದೇವಸ್ಥಾನದಲ್ಲಿ ಮುಹೂರ್ತ ನಡೆದಿದ್ದು, ಚಿತ್ರದ ಮೊದಲ ಸೀನ್ ಗೆ ಚಾಲನೆ ನೀಡಲಾಗಿದೆ. ಮುಹೂರ್ತ ಕಾರ್ಯಕ್ರಮದಲ್ಲಿ ದರ್ಶನ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ಶ್ರೀನಿವಾಸ್ ಮೂರ್ತಿ, ದೊಡ್ಡಣ್ಣ ಮತ್ತಿತರರು ಭಾಗಿಯಾಗಿದ್ದಾರೆ. ಇದನ್ನೂ ಓದಿ: ದುರ್ಗದ ಕೋಟೆಯಲ್ಲಿ ‘ವೀರ ಮದಕರಿ ನಾಯಕ’ನಾಗಿ ಸಾರಥಿಯ ಪಯಣ

  • ಸ್ಟಾರ್ ನಟನ ಜೊತೆ ಸ್ಯಾಂಡಲ್‍ವುಡ್‍ಗೆ ಪದ್ಮಾವತಿ ರೀ-ಎಂಟ್ರಿ!

    ಸ್ಟಾರ್ ನಟನ ಜೊತೆ ಸ್ಯಾಂಡಲ್‍ವುಡ್‍ಗೆ ಪದ್ಮಾವತಿ ರೀ-ಎಂಟ್ರಿ!

    ಬೆಂಗಳೂರು: ಮದಕರಿ ನಾಯನ ಒಂದೇ ಕತೆಗೆ ಈಗಾಗಲೇ ದರ್ಶನ್ ಹಾಗೂ ಸುದೀಪ್ ಬೇರೆ ಬೇರೆ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಆದರೆ ಈಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನಟಿಸುತ್ತಿರುವ ಮದಕರಿ ನಾಯಕನ ಚಿತ್ರಕ್ಕೆ ಸ್ಯಾಂಡಲ್‍ವುಡ್ ಪದ್ಮಾವತಿ ರಮ್ಯಾ ರೀ-ಎಂಟ್ರಿ ನೀಡಲಿದ್ದಾರೆ.

    ಈ ಹಿಂದೆ ಅಂದರೆ 2006 ರಂದು ರಮ್ಯಾ ಅವರು ದರ್ಶನ್ ಅವರ ‘ದತ್ತ’ ಚಿತ್ರದಲ್ಲಿ ನಟಿಸಿದ್ದರು. ಆದರೆ ಈಗ ರಮ್ಯಾ ಬರೋಬ್ಬರಿ 12 ವರ್ಷದ ನಂತರ ದರ್ಶನ್ ಅವರ ಜೊತೆ ‘ಗಂಡುಗಲಿ ಮದಕರಿ ನಾಯಕ’ ಚಿತ್ರದಲ್ಲಿನಾಯಕಿಯಾಗಿ ನಟಿಸುತ್ತಿದ್ದಾರೆ ಎಂಬ ಗಾಸಿಪ್ ಹರಿದಾಡುತ್ತಿದೆ.

    ಈ ಹಿಂದೆ ಪೌರಾಣಿಕ ಚಿತ್ರದಲ್ಲಿ ರಮ್ಯಾ ನಟಿಸಿದ್ದರು. ರಿಯಲ್ ಸ್ಟಾರ್ ಉಪೇಂದ್ರ ಅವರ ಜೊತೆ ‘ಕಠಾರಿ ವೀರ ಸುರಸುಂದರಾಂಗಿ’ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರವನ್ನು ನಿರ್ಮಾಪಕ ಹಾಗೂ ಕಾಂಗ್ರೆಸ್ ಶಾಸಕ ಮುನಿರತ್ನ ನಿರ್ಮಿಸಿದ್ದರು. ಹೀಗಾಗಿ ರಮ್ಯಾ ಪೌರಾಣಿಕ ಚಿತ್ರವನ್ನು ಮಾಡಿದ್ದರಿಂದ ಗಂಡುಗಲಿ ಮದಕರಿ ನಾಯಕ ಚಿತ್ರದಲ್ಲಿ ಇವರನ್ನೇ ನಾಯಕಿಯಾಗಲಿದ್ದಾರೆ. ಸದ್ಯ ರಮ್ಯಾ ಈ ಹಿಂದೆ ರಾಕ್‍ಲೈನ್ ವೆಂಕಟೇಶ್ ಅವರು ನಿರ್ಮಿಸಿದ್ದ ‘ಬೊಂಬಾಟ್’ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ನಾಯಕಿಯಾಗಿ ನಟಿಸಿದ್ದರು.

    ಈ ದೊಡ್ಡ ಐತಿಹಾಸಿಕ ಚಿತ್ರದಲ್ಲಿ ರಮ್ಯಾ ಅವರನ್ನು ಕರೆತರಲು ಚಿತ್ರತಂಡ ಯೋಚಿಸಿತ್ತು. ಅಲ್ಲದೇ ರಮ್ಯಾ ಅವರಿಗೂ ಕೂಡ ಚಿತ್ರದಲ್ಲಿ ನಟಿಸಬೇಕೆಂಬ ಆಸೆಯಿತ್ತು. ಈ ವಿಷಯವನ್ನು ತಮ್ಮ ಆಪ್ತರ ಬಳಿಯೂ ಹೇಳಿಕೊಂಡಿದ್ದರು ಎಂಬುದಾಗಿ ಮೂಲಗಳಿಂದ ತಿಳಿದು ಬಂದಿದೆ.

    ರಾಕ್‍ಲೈನ್ ವೆಂಕಟೇಶ್ ಅವರು ಈಗಾಗಲೇ ಗಂಡುಗಲಿ ಮದಕರಿ ನಾಯಕ ಸಿನಿಮಾ ನಿರ್ಮಾಣದಲ್ಲಿ ತೊಡಗಿದ್ದಾರೆ. ನಿರ್ದೇಶಕ ರಾಜೇಂದ್ರಸಿಂಗ್ ಬಾಬು ಅವರು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv