Tag: ಗಂಟಲು

  • ತಾನು ನಿರ್ಮಿಸಿದ ಹೆಲಿಕಾಪ್ಟರ್‌ನಿಂದಲೇ ಯುವಕನಿಗೆ ಕಾದಿತ್ತು ಆಪತ್ತು

    ತಾನು ನಿರ್ಮಿಸಿದ ಹೆಲಿಕಾಪ್ಟರ್‌ನಿಂದಲೇ ಯುವಕನಿಗೆ ಕಾದಿತ್ತು ಆಪತ್ತು

    ಮುಂಬೈ: 24 ವರ್ಷದ ಯುವಕರೊಬ್ಬರು ತಾವೇ ನಿರ್ಮಿಸಿದ ಹೆಲಿಕಾಪ್ಟರ್ ಟ್ರಯಲ್ ರನ್ ನೋಡುವ ವೇಳೆ ಅದರ ಬ್ಲೇಡ್ ಗಂಟಲಿಗೆ ತಗುಲಿ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

    ಮಹಾರಾಷ್ಟ್ರದ ಮಹಾಗಾಂವ್ ತಾಲೂಕಿನ ಪುಲ್ಸವಾಂಗಿ ಗ್ರಾಮದ ಶೇಖ್ ಇಸ್ಮಾಯಿಲ್ ಶೇಖ್ ಇಬ್ರಾಹಿಂ 8ನೇ ತರಗತಿಯಲ್ಲಿದ್ದಾಗಲೇ ಶಾಲೆ ತೊರೆದು ಮೆಕ್ಯಾನಿಕ್ ಆಗಿ ಸ್ಟಿಲ್ ಪೈಪ್‍ಗಳನ್ನು ಬೆಸೆಯುವ ಕೆಲಸ ಮಾಡುತ್ತಿದ್ದರು. ಅವರೇ ಸಿಂಗಲ್ ಸೀಟ್ ಇರುವ ಹೆಲಿಕಾಪ್ಟರ್ ಮೂಲ ಮಾದರಿಯೊಂದನ್ನು ನಿರ್ಮಿಸಿದ್ದರು. ಆದರೆ ಹೆಲಿಕಾಪ್ಟರ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ಪರೀಕ್ಷಿಸುತ್ತಿದ್ದ ವೇಳೆ ಬ್ಲೇಡ್ ತಗುಲಿ ಅವರ ಗಂಟಲು ಕಟ್ ಆಗಿದೆ. ಈ ಘಟನೆ ಆಗಸ್ಟ್ 10 ರಂದು ಮಹಾರಾಷ್ಟ್ರದ ಯವತ್ಮಲ್ ಜಿಲ್ಲೆಯಲ್ಲಿ ನಡೆದಿದ್ದು, ಗಾಯಗೊಂಡ ಶೇಖ್ ಇಸ್ಮಾಯಿಲ್ ಶೇಖ್ ಇಬ್ರಾಹಿಂಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಾಕಾರಿಯಾಗದೇ ಇಸ್ಮಾಯಿಲ್ ಶೇಖ್ ಮೃತಪಟ್ಟಿದ್ದಾರೆ. ಸದ್ಯ ಈ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸುದ್ದಿಯಾಗುತ್ತಿದೆ.

    ಈ ಕುರಿತಂತೆ ಪೊಲೀಸರು, ಮೃತ ವ್ಯಕ್ತಿ 2 ವರ್ಷಗಳ ಹಿಂದೆ ಈ ಹೆಲಿಕಾಪ್ಟರ್‌ನನ್ನು ನಿರ್ಮಿಸಿದ್ದರು. ಅಲ್ಲದೇ ಹೆಲಿಕಾಪ್ಟರ್ ಚಾಪರ್ ಸಿದ್ಧಪಡಿಸಲು ವೆಲ್ಡಿಂಗ್ ಸ್ಟೀಲ್ ಪೈಪ್ ಮತ್ತು ಮಾರುತಿ 800 ಎಂಜಿನ್ ಬಳಸಿದ್ದರು. ಆಗಸ್ಟ್ 15 ಸ್ವಾತಂತ್ರ್ಯ ದಿನದಂದು ಸಾರ್ವಜನಿಕವಾಗಿ ಹೆಲಿಕಾಪ್ಟರ್‍ನನ್ನು ಅನಾವರಣಗೊಳಿಸುವ ಯೋಜನೆ ಹೊಂದಿದ್ದರು ಎಂದು ತಿಳಿಸಿದ್ದಾರೆ. ಇದನ್ನೂ ಓದಿ:ಸರ್ಕಾರ ಸಾರ್ವಜನಿಕ ಗಣೇಶೋತ್ಸವದ ನಿಷೇಧವನ್ನು ಹಿಂಪಡೆಯಬೇಕು: ಶ್ರೀರಾಮಸೇನೆ

    ಈ ಬಗ್ಗೆ ಇಸ್ಮಾಯಿಲ್ ಅವರ ಸಹೋದರ ಮತ್ತು ಮೂವರು ಸ್ನೇಹಿತರನ್ನು ವಿಚಾರಣೆ ನಡೆಸಲಾಗುತ್ತಿದ್ದು, ಸದ್ಯ ಹೆಲಿಕಾಪ್ಟರ್‌ನನ್ನು ಪೊಲೀಸರು ವಶಪಡೆದುಕೊಂಡಿದ್ದಾರೆ. ಇದನ್ನೂ ಓದಿ:BJP ಜೊತೆಗೆ ಟ್ವಿಟ್ಟರ್ ಕೈಜೋಡಿಸಿ ಪ್ರಜಾತಂತ್ರ ಹತ್ತಿಕ್ಕುವ ಕೃತ್ಯದಲ್ಲಿ ತೊಡಗಿದೆ: ಪ್ರಿಯಾಂಕಾ ಗಾಂಧಿ

  • ಮಗುವಿನ ಗಂಟಲಲ್ಲಿ ಸಿಲುಕಿದ್ದ ಡಬ್ಬಿ ಹೊರತೆಗೆದ ವೈದ್ಯರು

    ಮಗುವಿನ ಗಂಟಲಲ್ಲಿ ಸಿಲುಕಿದ್ದ ಡಬ್ಬಿ ಹೊರತೆಗೆದ ವೈದ್ಯರು

    ಕೊಪ್ಪಳ: ಮಗುವಿನ ಗಂಟಲಿನಲ್ಲಿ ಸಿಲುಕಿಕೊಂಡಿದ್ದ ಮೆಂತೋಪ್ಲಸ್ ಡಬ್ಬಿಯನ್ನು ಸರ್ಕಾರಿ ವೈದ್ಯರು ಯಶಸ್ವಿಯಾಗಿ ಹೊರತೆಗೆದು ಅಪಾಯದಿಂದ ಪಾರು ಮಾಡಿದ್ದಾರೆ.

    ಈ ಘಟನೆ ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಹುಣಸಿಹಾಳ ಗ್ರಾಮದಲ್ಲಿ ನಡೆದಿದೆ. ಮಹಾಂತೇಶ ಎಂಬ (8) ತಿಂಗಳ ಮಗು ಆಟವಾಡುತ್ತಾ ಮೆಂತೋಪ್ಲಸ್ ಡಬ್ಬಿ ನುಂಗಿತ್ತು. ಕೂಡಲೇ ಇದನ್ನು ಅರಿತ ಮಗುವಿನ ಪೋಷಕರು, ಕೊಪ್ಪಳದ ಸರ್ಕಾರಿ ಆಸ್ಪತ್ರೆಗೆ ಮಗುವನ್ನು ಕರೆದುಕೊಂಡು ಹೋಗಿದ್ದಾರೆ. ಇದನ್ನೂ ಓದಿ: ಯತಿರಾಜ್ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಗೆ ಶಿಫ್ಟ್: ಎಸ್‌ಪಿ ಮಿಥುನ್ ಕುಮಾರ್

    ಮಗುವನ್ನು ಪರೀಕ್ಷಿಸಿದ ವೈದ್ಯರು, ಮಗುವಿನ ಗಂಟಲಿನಲ್ಲಿ ಡಬ್ಬಿ ಸಿಲುಕಿಕೊಂಡಿದೆ. ಹೀಗಾಗಿ ಉಸಿರಾಟಕ್ಕೆ ತೊಂದರೆಯಾಗಿ ಅಪಾಯದಲ್ಲಿದೆ ಎಂದು ತಿಳಿಸಿದ್ದಾರೆ. ಕೂಡಲೇ ಮಗುವಿಗೆ ಶಸ್ತ್ರಚಿಕಿತ್ಸೆ ಮಾಡಿಸುವಂತೆ ಹೇಳಿದ್ದಾರೆ. ಪೋಷಕರ ಅನುಮತಿಯಂತೆ ಕೂಡಲೇ ಜಿಲ್ಲಾಸ್ಪತ್ರೆಯ ಇಎನ್‍ಟಿ ವಿಭಾಗದ ವೈದ್ಯರಾದ ಡಾ. ಮಲ್ಲಿಕಾರ್ಜುನ ಅವರು ಮಗುವಿನ ಗಂಟಲಲ್ಲಿ ಸಿಲುಕಿದ್ದ ಡಬ್ಬಿಯನ್ನು ಯಶಸ್ವಿಯಾಗಿ ಹೊರತೆಗೆದಿದ್ದಾರೆ. ಈ ಮೂಲಕ ಭಾರೀ ಅಪಾಯದಿಂದ ಪುಟ್ಟ ಕಂದಮ್ಮನನ್ನು ಪಾರು ಮಾಡಿದ್ದಾರೆ.

  • ಕತ್ತಿನ ಚೈನಿನಲ್ಲಿ ಸೇಫ್ಟಿಪಿನ್ ಹಾಕಿಕೊಳ್ಳುವವರೇ ಎಚ್ಚರ

    ಕತ್ತಿನ ಚೈನಿನಲ್ಲಿ ಸೇಫ್ಟಿಪಿನ್ ಹಾಕಿಕೊಳ್ಳುವವರೇ ಎಚ್ಚರ

    ಮುಂಬೈ: ಬೇಗನೆ ಸಿಗಬೇಕು ಅಂತ ಕೆಲವರು ತಮ್ಮ ಕತ್ತಿನಲ್ಲಿರುವ ತಮ್ಮ ಚೈನಿಗೆ ಸೇಫ್ಟಿ ಪಿನ್ ಹಾಕಿಕೊಂಡಿರುತ್ತಾರೆ. ಇದೊಂದು ಒಳ್ಳೆಯ ಉಪಾಯವಾದ್ರೂ ಇದರಿಂದ ಅಪಾಯ ತಪ್ಪಿದ್ದಲ್ಲ. ಇದಕ್ಕೆ ನಿದರ್ಶನ ಮುಂಬೈನಲ್ಲಿ ನಡೆದ ಘಟನೆ.

    ಹೌದು. ಮಹಿಳೆಯೊಬ್ಬರು ತಮ್ಮ ಮಾಂಗಲ್ಯ ಸರದಲ್ಲಿ ಪಿನ್ ಸಿಕ್ಕಿಸಿಕೊಂಡಿದ್ದರು. ಈ ಪಿನ್ ಮಗುವಿನ ಜೀವಕ್ಕೆ ಅಪಾಯವುಂಟು ಮಾಡಿದೆ. ಈ ಘಟನೆ ಕಳೆದ ವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಪುಟ್ಟ ಮಕ್ಕಳನ್ನು ಎತ್ತಿಕೊಂಡಾಗ ಅವರು ಕತ್ತಿನಲ್ಲಿರುವ ಚೈನ್ ಅನ್ನು ಬಾಯಿಗೆ ಹಾಕಿಕೊಳ್ಳುವುದು ಸಾಮಾನ್ಯ. ಅಂತೆಯೇ ಇಲ್ಲಿ ಕೂಡ ಮಗುವನ್ನು ತಾಯಿ ಎತ್ತಿಕೊಂಡಾಗ, ಮಗು ತನ್ನ ತಾಯಿ ಕತ್ತಿನಲ್ಲಿದ್ದ ಕರಿಮಣಿಯಲ್ಲಿ ಸಿಕ್ಕಿಸಿರುವ ಪಿನ್ ಅನ್ನು ನುಂಗಿದೆ. ಈ ಪಿನ್ ಮಗುವಿನ ಗಂಟಲಲ್ಲಿ ಸಿಕ್ಕಿಹಾಕಿಕೊಂಡಿದೆ.

    ಮಗು ನಿರಂತವಾಗಿ ಅಳುತ್ತಿರೋದನ್ನು ಗಮನಿಸಿದ ಹೆತ್ತವರು ಗಾಬರಿಯಾಗಿದ್ದಾರೆ. ಅಲ್ಲದೇ ಮಗು ನೀರು ಕುಡಿಯಲು ಕೂಡ ನಿರಾಕರಿಸುತ್ತಿತ್ತು. ಹೀಗಾಗಿ ಹೆತ್ತವರು ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ, ಈ ವೇಳೆ ಪರೀಕ್ಷಿಸಿದ ವೈದ್ಯರು ಮಗುವಿನ ಎಕ್ಸ್ ರೇ ತೆಗೆದಾಗ ಮಗುವಿನ ಕುತ್ತಿಗೆಯಲ್ಲಿ ಪಿನ್ ಸಿಲುಕಿರುವ ಬಗ್ಗೆ ತಿಳಿದುಬಂದಿದೆ. ಅಲ್ಲಿಂದ ಕೂಡಲೇ ನಗರದ ಕೆಇಎಂ ಆಸ್ಪತ್ರೆಗೆ ತೆರಳಿರುವುದಾಗಿ ಮಗುವಿನ ತಂದೆ ತಿಳಿಸಿದ್ದಾರೆ.

    ಶಸ್ತ್ರ ಚಿಕಿತ್ಸೆಯ ಮೂಲಕ ಮಗುವಿನ ಗಂಟಲಲ್ಲಿ ಸಿಲುಕಿದ್ದ ಪಿನ್ ಹೊರತೆಗೆಯಲಾಗಿದೆ. ಆದ್ರೆ ಇದನ್ನು ತೆಗಯಲು ತುಂಬಾ ಕಷ್ಟವಾಯಿತು. ಯಾಕಂದ್ರೆ ಇದರಿಂದ ಮಗುವಿನ ಜೀವಕ್ಕೇ ಕುತ್ತು ತರುವಂತಿತ್ತು ಅಂತ ಆಸ್ಪತ್ರೆಯ ವೈದ್ಯರಾದ ಡಾ. ನೀಲಂ ಸತೆ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಗುವಿನ ಗಂಟಲಲ್ಲಿ ಸಿಕ್ಕಿಕೊಂಡ ನಾಣ್ಯ: ಚಿಕಿತ್ಸೆ ನೀಡದೇ ಅಲೆದಾಡಿಸಿದ 4 ಆಸ್ಪತ್ರೆಗಳು!

    ಮಗುವಿನ ಗಂಟಲಲ್ಲಿ ಸಿಕ್ಕಿಕೊಂಡ ನಾಣ್ಯ: ಚಿಕಿತ್ಸೆ ನೀಡದೇ ಅಲೆದಾಡಿಸಿದ 4 ಆಸ್ಪತ್ರೆಗಳು!

    ಕೋಲ್ಕತ್ತಾ:ಸರಿಯಾದ ಸಮಯದಲ್ಲಿ ಸೂಕ್ತ ಚಿಕಿತ್ಸೆ ದೊರೆಯದೆ ನಾಣ್ಯ ನುಂಗಿದ್ದ 4 ವರ್ಷದ ಮಗುವೊಂದು ಪರದಾಡಿದ ಘಟನೆ ಪಶ್ಚಿಮ ಬಂಗಾಳದ ಕೋಲ್ಕತ್ತಾದ ಗಂಗಾಪುರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಶನಿವಾರ ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಮನೆಯೊಳಗೆ ಆಟವಾಡುತ್ತಿದ್ದಾಗ 4 ವರ್ಷದ ಆಗ್ರ್ಯ ಬಿಸ್ವಾಸ್ ಏಕಾಏಕಿ 1 ರೂಪಾಯಿ ನಾಣ್ಯವನ್ನು ನುಂಗಿದ್ದಾನೆ. ನಾಣ್ಯ ಗಂಟಲಲ್ಲಿ ಸಿಕ್ಕಿಕೊಂಡು ಅಗ್ರ್ಯ ಜೋರಾಗಿ ಅಳುತ್ತಿದ್ದ. ಕೂಡಲೇ ಅವನನ್ನು ಪರೀಕ್ಷಿಸಿದಾಗ ನಾಣ್ಯ ನುಂಗಿರುವುದು ತಿಳಿಯಿತು ಎಂದು ಮಗುವಿನ ಅಜ್ಜ ದಿನೇಶ್ ಬಿಸ್ವಾಸ್ ತಿಳಿಸಿದ್ದಾರೆ.

    ಮಗುವನ್ನು 2 ಗಂಟೆಹೊತ್ತಿಗೆ ಹತ್ತಿರದ ಕಲ್ಯಾಣಿ ಮೆಡಿಕಲ್ ಕಾಲೇಜು ಆಸ್ಪತ್ರೆ ಹಾಗೂ ಜೆಎನ್‍ಎಂ ಆಸ್ಪತ್ರೆಯ ವೈದ್ಯರುಗಳಿಗೆ ತೋರಿಸಲಾಯಿತು. ಆದರೆ ಮಗುವನ್ನು ಪರೀಕ್ಷಿಸಿದ ಅವರು ನಮ್ಮ ಬಳಿ ಸರಿಯಾದ ಉಪಕರಣಗಳಿಲ್ಲ, ಮಗುವನ್ನು ಎನ್‍ಆರ್‍ಎಸ್ ಆಸ್ಪತ್ರೆ ಅಥವಾ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ತೋರಿಸಿ ಎಂದು ಸಲಹೆ ನೀಡಿದರು. ನಾವು ಎನ್‍ಆರ್‍ಎಸ್ ಆಸ್ಪತ್ರೆ ತಲುಪಿದಾಗ ರಾತ್ರಿ 10 ಗಂಟೆಯಾಗಿತ್ತು, ಆದರೆ ಅಲ್ಲಿಯೂ ಸಹ ನಮಗೆ ಯಾವುದೇ ಪ್ರಯೋಜನವಾಗಲಿಲ್ಲ. ಅಲ್ಲಿಂದ ನೇರವಾಗಿ ನಾವು ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಹೋದರೂ ವೈದ್ಯರು ಮಗುವನ್ನು ದಾಖಲಿಸಿಕೊಳ್ಳಲು ನಿರಾಕರಿಸಿದ್ದರು ಎಂದು ಹೇಳಿದರು.

    ಕೊನೆಗೆ ತಡರಾತ್ರಿ 2 ರ ಸುಮಾರಿಗೆ ಎಸ್‍ಎಸ್‍ಕೆಎಂ ಆಸ್ಪತ್ರೆಗೆ ಹೋದೆವು, ಕೂಡಲೇ ಅಲ್ಲಿನ ವೈದ್ಯರುಗಳು ಮಗುವನ್ನು ದಾಖಲಿಸಿಕೊಂಡು ಎಂಡೋಸ್ಕೋಪಿ ಮುಖಾಂತರ ನಾಣ್ಯವನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಆಗ್ರ್ಯ ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾನೆ. ನಾನು ಹಾಗೂ ನಮ್ಮ ಕುಟುಂಬವು ಎಸ್‍ಎಸ್‍ಕೆಎಂ ಆಸ್ಪತ್ರೆಯ ವೈದ್ಯರಾದ ಡಾ. ಅರುಣಭ ಸೇನಗುಪ್ತರಿಗೆ ಕೃತಜ್ಞತೆಗಳನ್ನು ಅರ್ಪಿಸುತ್ತೇವೆ. ನಮ್ಮ ಮೊಮ್ಮಗ ತಾಯಿ ಇಲ್ಲದ ತಬ್ಬಲಿ, ನಾನು, ನನ್ನ ಹೆಂಡತಿ ಹಾಗೂ ತಂದೆಯ ಆಶ್ರಯದಲ್ಲಿ ಅವನು ಬೆಳೆಯುತ್ತಿದ್ದಾನೆ ಎಂದು ತಿಳಿಸಿದರು.

    ನಾಣ್ಯನುಂಗಿದ್ದ ಮಗುವನ್ನು ಸತತ ನಾಲ್ಕು ಆಸ್ಪತ್ರೆಗಳನ್ನು ತಿರುಗಿ, ಕೊನೆಗೂ ಮಗುವನ್ನು ಉಳಿಸಿಕೊಳ್ಳುವಲ್ಲಿ ಪೋಷಕರು ಯಶಸ್ವಿಯಾಗಿದ್ದಾರೆ. ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡದ ಆಸ್ಪತ್ರೆಗಳು, ಕೇವಲ ಉಪಕರಣಗಳ ಕೊರತೆಯಿಂದ ಸಾಗಾಕಿರುವುದು ಶೋಚನೀಯ ಸಂಗತಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಪ್ರಿಯಕರನ ಪ್ರಾಣ ಉಳಿಸಲು ಆತನ ಗಂಟಲನ್ನೇ ಕಟ್ ಮಾಡಿದ ಪ್ರಿಯತಮೆ!

    ಪ್ರಿಯಕರನ ಪ್ರಾಣ ಉಳಿಸಲು ಆತನ ಗಂಟಲನ್ನೇ ಕಟ್ ಮಾಡಿದ ಪ್ರಿಯತಮೆ!

    ವೆಲ್ಲಿಂಗ್ಟನ್: ಪ್ರಿಯಕರನ ಪ್ರಾಣ ಉಳಿಸಲು ಪ್ರಿಯತಮೆ ಆತನ ಗಂಟಲನ್ನೇ ಕತ್ತರಿಸಿದ ಘಟನೆ ನ್ಯೂಜಿಲೆಂಡ್‍ನಲ್ಲಿ ನಡೆದಿದೆ.

    ಹೌದು. ನಂಬಲಸಾಧ್ಯವಾದ್ರೂ ಇದು ನಿಜ. ಸಾರಾ ಗ್ಲಾಸ್ ಹಾಗೂ ಐಸಾಕ್ ಬೆಸ್ಟರ್ ಊಟಕ್ಕೆಂದು ಹೋಟೆಲ್‍ಗೆ ಹೋಗಿದ್ದರು. ಹೋಟೆಲ್‍ನಲ್ಲಿ ಬಾರ್ಬೆಕ್ಯೂ ಆರ್ಡರ್ ಮಾಡಿದ್ದಾರೆ. ಐಸಾಕ್ ತನ್ನ ಸಾಮಥ್ರ್ಯಕಿಂತ ಹೆಚ್ಚು ಮಾಂಸವನ್ನ ಬಾಯಿಯಲ್ಲಿ ಹಾಕಿಕೊಂಡಿದ್ದ. ಆಹಾರವನ್ನು ಒಂದೇ ಸಮನೆ ಬಾಯಿಗೆ ಹಾಕಿದ ಮೇಲೆ ಐಸಾಕ್ ಅದನ್ನು ಜಗಿಯಲು ಸಾಧ್ಯವಾಗದೇ ಒದ್ದಾಡಿದ್ದ. ಮಾಂಸದ ತುಂಡು ಗಂಟಲಲ್ಲಿ ಸಿಲುಕಿಕೊಂಡು ಉಸಿರಾಡಲಾಗದೇ ಐಸಾಕ್ ಒದ್ದಾಡುತ್ತಿದ್ದನು.

    ಐಸಾಕ್‍ನ ಆ ಸ್ಥಿತಿ ನೋಡಿ ಹೋಟೆಲ್‍ನಲ್ಲಿದ್ದ ಅಕ್ಕಪಕ್ಕದ ಟೇಬಲ್‍ನವರು ಆತನ ಸಹಾಯಕ್ಕೆ ಬಂದರು. ಆತನ ಹೊಟ್ಟೆ ಮೇಲೆ ಒತ್ತಡ ಹಾಕಿ ಗಂಟಲಲ್ಲಿದ್ದ ಮಾಂಸದ ತುಂಡನ್ನು ಹೊರತೆಗೆಯಲು ಯತ್ನಿಸಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಹೀಗೆ ಇದ್ದರೆ ಐಸಾಕ್ ಬದುಕುಳಿಯುವುದು ಕಷ್ಟವೆಂದು ತಿಳಿದ ಸಾರಾ ದೃಢ ನಿರ್ಧಾರವನ್ನು ಕೈಗೊಂಡರು.

    ವೃತಿಯಲ್ಲಿ ಸೂಲಗಿತ್ತಿಯಾಗಿದ್ದ ಸಾರಾ ತನ್ನ ಬಾಯ್‍ಫ್ರೆಂಡ್ ಐಸಾಕ್‍ನನ್ನು ಉಳಿಸಲು ಆತನ ಗಂಟಲನ್ನು ಶ್ವಾಸನಾಳದ ಬಳಿ ಸಣ್ಣಗೆ ಕತ್ತರಿಸಿದ್ದಳು. ಐಸಾಕ್ ಗಂಟಲನ್ನು ಕತ್ತರಿಸಿದಕ್ಕೆ ಆತನಿಗೆ ಉಸಿರಾಡಲು ಸಾಧ್ಯವಾಯಿತು. ನಂತರ ವೈದ್ಯಕೀಯ ಸಬ್ಬಂದಿಯವರು ಸ್ಥಳಕ್ಕೆ ಭೇಟಿ ನೀಡಿ ಐಸಾಕ್ ಗೆ ಆಕ್ಸಿಜನ್ ಅಳವಡಿಸಿ ಆಸ್ಪತ್ರೆಗೆ ಕರೆದುಕೊಂಡು ಹೋದರು.

    ನನಗೆ ಬೇರೆ ಯಾವುದೇ ದಾರಿ ಇರಲಿಲ್ಲ. ನಾನು ಈ ರೀತಿ ಮಾಡದಿದ್ದರೆ ಐಸಾಕ್ ಬದುಕುತ್ತಿರಲಿಲ್ಲ. ನಾನೇ ಅಲ್ಲ, ನನ್ನ ಜಾಗದಲ್ಲಿ ಬೇರೆ ಯಾರೇ ಇದ್ದರೂ ತಮ್ಮವರ ಪ್ರಾಣ ಉಳಿಸಲು ಈ ರೀತಿ ಮಾಡುತ್ತಿದ್ದರು ಎಂದು ಸಾರಾ ತಿಳಿಸಿದ್ದಾರೆ.

    ವೈದ್ಯರು ಸ್ಥಳಕ್ಕೆ 20 ನಿಮಿಷಗಳ ಬಳಿಕ ಬಂದು ಐಸಾಕ್‍ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಸಂಪೂರ್ಣವಾಗಿ ಗುಣವಾದ ನಂತರ ಐಸಾಕ್‍ನನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗುತ್ತದೆ. ತನ್ನ ಪ್ರಿಯಕರನನ್ನು ಉಳಿಸಲು ಸಾರಾ ಈ ನಿರ್ಧಾರ ತೆಗೆದುಕೊಳ್ಳಲಿಲ್ಲವೆಂದರೆ ಐಸಾಕ್ ಉಳಿಯುವುದು ಕಷ್ಟವಾಗುತ್ತಿತ್ತು ಎಂದು ಹೇಳಲಾಗಿದೆ.