Tag: ಗಂಗೊಳ್ಳಿ

  • ಗಂಗೊಳ್ಳಿಯಲ್ಲಿ ಅಗ್ನಿ ಅವಘಡ – ಹೊತ್ತಿ ಉರಿದ 7 ಬೋಟ್‍ಗಳು

    ಗಂಗೊಳ್ಳಿಯಲ್ಲಿ ಅಗ್ನಿ ಅವಘಡ – ಹೊತ್ತಿ ಉರಿದ 7 ಬೋಟ್‍ಗಳು

    ಉಡುಪಿ: ಅಗ್ನಿ ಅವಘಡದಿಂದಾಗಿ (Fire Accident) 7 ಮೀನುಗಾರಿಕಾ ಬೋಟ್‍ಗಳು (Boats) ಸಂಪೂರ್ಣವಾಗಿ ಸುಟ್ಟು ಕರಕಲಾದ ಘಟನೆ ಗಂಗೊಳ್ಳಿಯಲ್ಲಿ (Gangolli) ನಡೆದಿದೆ.

    ದೀಪಾವಳಿ (Deepavali) ಪೂಜೆಯ ವೇಳೆ ಹಚ್ಚಿದ ಪಟಾಕಿಯಿಂದ ಬೆಂಕಿ ಹತ್ತಿಕೊಂಡಿರುವ ಸಾಧ್ಯತೆ ಇದೆ. ಬೈಂದೂರು ಹಾಗೂ ಗಂಗೊಳ್ಳಿ ಅಗ್ನಿಶಾಮಕ ದಳದಿಂದ ರಕ್ಷಣಾ ಕಾರ್ಯಚರಣೆ ನಡೆಯುತ್ತಿದೆ. ಹೆಚ್ಚುವರಿ ಅಗ್ನಿಶಾಮಕ ವಾಹನಗಳನ್ನು ರವಾನೆ ಮಾಡಲಾಗಿದೆ. ದುರಂತದಲ್ಲಿ ಕೋಟ್ಯಂತರ ರೂ. ನಷ್ಟ ಸಂಭವಿಸಿದೆ. ಇದನ್ನೂ ಓದಿ: ಟೈಗರ್ 3 ಪ್ರದರ್ಶನ ವೇಳೆ ಥಿಯೇಟರ್ ಒಳಗೆ ಪಟಾಕಿ ಸಿಡಿಸಿದ ಫ್ಯಾನ್ಸ್: ತಪ್ಪಿದ ಅನಾಹುತ

    ಬೋಟ್‍ಗಳನ್ನು ದುರಸ್ತಿ ಮತ್ತು ಪೇಂಟಿಂಗ್ ಕಾರ್ಯಕ್ಕೆ ದಡದಲ್ಲಿ ಇರಿಸಲಾಗಿತ್ತು. ಬೋಟ್‍ಗಳ ಮೇಲೆ ತೆಂಗಿನ ಗರಿಗಳನ್ನು ಹಾಸಲಾಗಿತ್ತು. ಆರಂಭದಲ್ಲಿ ಬೋಟ್ ಮೇಲೆ ಹಾಸಿದ್ದ ತೆಂಗಿನ ಗರಿಗಳಿಗೆ ಬೆಂಕಿ ತಗುಲಿದೆ. ಬಳಿಕ ಬೋಟ್‍ಗಳಿಗೆ ವ್ಯಾಪಿಸಿದ್ದು ಭಾರೀ ಪ್ರಮಾಣದ ಅಗ್ನಿ ಅವಘಡಕ್ಕೆ ಕಾರಣವಾಗಿದೆ. ಘಟನೆಯ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಪಟಾಕಿಗೆ ಹೊಗೆಮಯವಾದ ಬೆಂಗ್ಳೂರು – ಎಲ್ಲೆಲ್ಲಿ ಎಷ್ಟು ವಾಯುಮಾಲಿನ್ಯ?

  • ಉಡುಪಿ: ಹಸುವನ್ನು ಕೊಂದು, ಮಾಂಸ ಮಾರಾಟಕ್ಕೆ ಸಿದ್ಧತೆ ನಡೆಸಿದ್ದ ಮೂವರ ಬಂಧನ

    ಉಡುಪಿ: ಹಸುವನ್ನು ಕೊಂದು, ಮಾಂಸ ಮಾರಾಟಕ್ಕೆ ಸಿದ್ಧತೆ ನಡೆಸಿದ್ದ ಮೂವರ ಬಂಧನ

    ಉಡುಪಿ: ಕುಂದಾಪುರ ತಾಲೂಕಿನ ಗಂಗೊಳ್ಳಿ ಗ್ರಾಮದ ಮೊವಾಡಿ ಪ್ರದೇಶದಲ್ಲಿ ಅಕ್ರಮ ಕಸಾಯಿಖಾನೆ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಮೂವರನ್ನು ಬಂಧಿಸಿದ್ದಾರೆ.

    ಶ್ರೀಕಾಂತ್, ಹರೀಶ್, ಮಹೇಶ್ ಬಂಧಿತರು. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಮೊವಾಡಿ ಪ್ರದೇಶದಲ್ಲಿ ಅಕ್ರಮ ಕಸಾಯಿಖಾನೆ ಕಾರ್ಯಾಚರಿಸುತ್ತಿರುವ ಬಗ್ಗೆ ಪೊಲೀಸರಿಗೆ ಸೋಮವಾರ ರಾತ್ರಿ ಮಾಹಿತಿ ರವಾನೆಯಾಗಿತ್ತು. ಮಾಹಿತಿ ಪಡೆದ ಬೆನ್ನಲ್ಲೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಈ ವೇಳೆ ಹಸುವನ್ನು ಕೊಂದು ಮಾಂಸ ಮಾಡಿ, ಮಾರಾಟಕ್ಕೆ ಸಿದ್ಧತೆ ನಡೆಸಿದ್ದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಜೊತೆಗೆ ಹಸುವಿನ ಮೃತದೇಹದ ಜೊತೆ ಮಾಂಸವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ಸಮಾರಂಭಕ್ಕೋ? ವ್ಯಾಪಾರಕ್ಕೋ?: ಮೊವಾಡಿ ವಸಮೀಪದ ಮನೆಯ ಕಾರ್ಯಕ್ರಮವೊಂದಕ್ಕೆ ಹಸುವನ್ನು ಕದ್ದು ತಂದು ಮಾಂಸ ಮಾಡುತ್ತಿದ್ದರು ಎಂಬ ಮಾಹಿತಿಯಿದೆ. ಅಲ್ಲದೇ ಹಸುವಿನ ಮಾಂಸವನ್ನು ಮಾರಾಟ ಮಾಡಲು ತರಲಾಗಿತ್ತು ಅಂತ ಕೂಡ ಸ್ಥಳೀಯರು ಆರೋಪಿಸಿದ್ದಾರೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದು ಇನ್ನಷ್ಟೇ ನಿಜಾಂಶ ಹೊರಬರಲಿದೆ.