Tag: ಗಂಗೂಬಾಯಿ

  • ಬಾಕ್ಸ್ ಆಫೀಸಿನಲ್ಲಿ ಭರ್ಜರಿ ಕಮಾಯಿ ಮಾಡಿದ ಗಂಗೂಬಾಯಿ

    ಬಾಕ್ಸ್ ಆಫೀಸಿನಲ್ಲಿ ಭರ್ಜರಿ ಕಮಾಯಿ ಮಾಡಿದ ಗಂಗೂಬಾಯಿ

    ಮುಂಬೈ: ಬಾಲಿವುಡ್ ತಾರೆ ಆಲಿಯಾ ಭಟ್ ನಟನೆಯ ಗಂಗೂಬಾಯಿ ಕಾಠಿಯಾವಾಡಿ ಇದೇ ಶುಕ್ರವಾರದಂದು ಬಿಡುಗಡೆ ಆಗಿದೆ. ಬಿಡುಗಡೆಗೊಂಡ ಮೊದಲ ದಿನವೇ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಈ ಚಿತ್ರವು ಅಂದಾಜು 7 ಕೋಟಿ ಗಳಿಸಬಹುದು ಎಂಬ ಲೆಕ್ಕಾಚಾರವಿತ್ತು. ಆದರೆ ಅಚ್ಚರಿ ಪಡುವಷ್ಟು ಗಂಗೂಬಾಯಿ ಗಲ್ಲಾಪೆಟ್ಟಿಗೆ ತುಂಬಿಸಿದ್ದಾಳೆ. ಮೊದಲ ದಿನವೇ ಬರೋಬ್ಬರಿ 10.50 ಕೋಟಿ ರೂ. ಈ ಸಿನಿಮಾ ಬಾಚಿಕೊಂಡಿದೆ.

    ರಿಲೀಸ್ ಆದ ಎರಡನೇ ದಿನ ಶನಿವಾರ 13.32 ಕೋಟಿ ರೂಪಾಯಿ, ಮೂರನೇ ದಿನ ಭಾನುವಾರ 15.30 ಕೋಟಿ ರೂಪಾಯಿ ಗಳಿಸಿತ್ತು. ಈ ಮೂಲಕ ಮೂರನೇ ದಿನಕ್ಕೆ ಈ ಚಿತ್ರದ ಕಲೆಕ್ಷನ್ 39.12 ಕೋಟಿ ರುಪಾಯಿ ದಾಟಿತ್ತು. ವೀಕೆಂಡ್ ಅಲ್ಲದೇ, ವೀಕ್ ಡೇಸ್ ನಲ್ಲೂ ಅದರ ಲೆಕ್ಕಾಚಾರ ಕೆಳಗಿಳಿಯಲಿಲ್ಲ. ಸೋಮವಾರವೂ ಚಿತ್ರದ ಕಲೆಕ್ಷನ್ ಕುಗ್ಗದೇ, ವಾರದ ಮೊದಲ ದಿನವಾದರೂ ಅಂದಾಜು 8.20 ಕೋಟಿ ರೂಪಾಯಿ ಸಿನಿಮಾ ಗಳಿಸಿದೆ. ಈ ಮೂಲಕ ಚಿತ್ರದ ಕಲೆಕ್ಷನ್ ಅಂದಾಜು 47 ಕೋಟಿ ರೂಪಾಯಿ ಎನ್ನಲಾಗುತ್ತಿದೆ. ಇದನ್ನೂ ಓದಿ : ದುನಿಯಾ ವಿಜಯ್ ಹೊಸ ಚಿತ್ರಕ್ಕೆ ಟೈಟಲ್ ಫಿಕ್ಸ್

    ಚಿತ್ರವು ತೆರೆಗೆ ಬಂದು ಇಂದಿಗೆ 4 ದಿನಗಳಾಗಿವೆ. ಅಲ್ಲದೇ, ಮಹಾ ಶಿವರಾತ್ರಿ ನಿಮಿತ್ಯ ದೇಶಾದ್ಯಂತ ಹಬ್ಬಕ್ಕೆ ಸರ್ಕಾರಿ ರಜೆ ಇದೆ. ಈ ಕಾರಣಕ್ಕೆ ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರಮಂದಿರದತ್ತ ಧಾವಿಸಿದ್ದರು. ಹೀಗಾಗಿ, ಈ ಸಿನಿಮಾ ಮಂಗಳವಾರ ಮಧ್ಯಾಹ್ನದವರೆಗೆ 10 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ ಅಂದಾಜಿದೆ. ಹೀಗೆ ಗಂಗೂಬಾಯಿಯ ನಾಲ್ಕು ದಿನಗಳ ಒಟ್ಟು ಕಲೆಕ್ಷನ್ ಅಂದಾಜು 57 ಕೋಟಿ ದಾಟಬಹುದು ಅಂತಿದೆ ಬಿ ಟೌನ್ ಬಾಕ್ಸ್ ಆಫೀಸ್. ಸಿನಿಮಾದ ಕಲೆಕ್ಷನ್ ಹೀಗೆಯೇ ಮುಂದುವರಿದರೆ ಈ ವಾರಾಂತ್ಯಕ್ಕೆ ಗಂಗೂಬಾಯಿ 100 ಕೋಟಿ ಕ್ಲಬ್ ಗೆ ಸೇರಳಿದ್ದಾಳೆ. ಇದನ್ನೂ ಓದಿ : ಸಿಂಪಲ್ ಸುನಿ ನಿರ್ದೇಶನದ ಸಿನಿಮಾದಲ್ಲಿ ವಾಸ್ಕೋಡಿಗಾಮನ ಕಥೆ

  • ವಿವಾದ ಇಲ್ಲದೇ ಸಿನಿಮಾ ರಿಲೀಸ್ ಮಾಡಲ್ಲವಾ ಸಂಜಯ್ ಲೀಲಾ ಬನ್ಸಾಲಿ? : ಗಂಗೂಬಾಯಿ ಮೇಲೆ ಮತ್ತೊಂದು ಕೇಸ್

    ವಿವಾದ ಇಲ್ಲದೇ ಸಿನಿಮಾ ರಿಲೀಸ್ ಮಾಡಲ್ಲವಾ ಸಂಜಯ್ ಲೀಲಾ ಬನ್ಸಾಲಿ? : ಗಂಗೂಬಾಯಿ ಮೇಲೆ ಮತ್ತೊಂದು ಕೇಸ್

    ವಿವಾದಗಳಿಗೂ ಮತ್ತು ಬಾಲಿವುಡ್ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿಗೂ ಹಾಲು ತುಪ್ಪದ ಸಂಬಂಧ ಅನಿಸತ್ತೆ. ಅವರು ಆಯ್ಕೆ ಮಾಡಿಕೊಳ್ಳುವ ಪ್ರತಿ ಕಥೆಯೂ ವಿವಾದ ಕೇಂದ್ರಬಿಂದು ಆಗುತ್ತಿದೆ. ಈ ಹಿಂದೆ ತೆರೆಕಂಡ ಇವರ ನಿರ್ದೇಶನದ ‘ಪದ್ಮಾವತ್’ ಚಿತ್ರ ಕೂಡ ವಿವಾದದಿಂದಾಗಿಯೇ ಸಾಕಷ್ಟು ಸಂಚಲನ ಮೂಡಿಸಿತ್ತು. ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥರಿಂದ ಹಿಡಿದು, ನಾನಾ ಸಂಘಟನೆಗಳು ಬನ್ಸಾಲಿ ವಿರುದ್ಧ ಪ್ರತಿಭಟಿಸಿದವು. ಕೋರ್ಟು, ಕಚೇರಿ ಅಂತ ಪದ್ಮಾವತಿ ಅಲೆದು ಅಲೆದು, ನಂತರ ಬಿಡುಗಡೆ ಆಯಿತು. ಇದನ್ನೂ ಓದಿ : ರಾಷ್ಟ್ರ ಪ್ರಶಸ್ತಿ ವಿಜೇತೆ ಮಲಯಾಳಂ ನಟಿ ಲಲಿತಾ ಇನ್ನಿಲ್ಲ

    ಇದೀಗ ಗಂಗೂಬಾಯಿ ಕಾಠಿಯಾವಾಡಿ ಸರದಿ. ಈ ಸಿನಿಮಾ ಇನ್ನೇನು ಎರಡೇ ಎರಡು ದಿನಗಳಲ್ಲಿ ಬಿಡುಗಡೆಯಾಗಬೇಕು. ಅಷ್ಟರಲ್ಲಿ ಮೂರು ಕೇಸ್ ಗಳು ಈ ಸಿನಿಮಾದ ವಿರುದ್ಧ ದಾಖಲಾಗಿವೆ. ಗಂಗೂಬಾಯಿ ದತ್ತು ಪುತ್ರ ಎಂದು ಹೇಳಿಕೊಳ್ಳುತ್ತಿರುವ ಬಾಬು ರಾವ್ ಷಾ ಎನ್ನುವವರು ಈ ಮೊದಲು ಸಂಜಯ್ ಲೀಲಾ ಬನ್ಸಾಲಿ ಮತ್ತು ಗಂಗೂಬಾಯಿ ಪಾತ್ರ ಮಾಡಿರುವ ಅಲಿಯಾ ಭಟ್ ವಿರುದ್ಧ ಮಾನಹಾನಿ ದೂರ ದಾಖಲಿಸಿದ್ದರು. ತಮ್ಮ ಸಾಕು ತಾಯಿಯನ್ನು ಕೆಟ್ಟದಾಗಿ ಬಿಂಬಿಸಿದ್ದಾರೆ ಎನ್ನುವುದು ಅವರ ದೂರಾಗಿತ್ತು. ಕೇಸ್ ಇನ್ನೂ ನ್ಯಾಯಾಲಯದಲ್ಲಿ ಇದೆ. ಈಗ ಈ ಸಿನಿಮಾದ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ.  ಇದನ್ನೂ ಓದಿ : ನಟ ಚೇತನ್‌ಗೆ 14 ದಿನ ನ್ಯಾಯಾಂಗ ಬಂಧನ

    ಗಂಗೂಬಾಯಿ ಕಾಠಿಯಾವಾಡಿ ಸಿನಿಮಾದ ವಿರುದ್ಧ ಇದೀಗ ಮಹಾರಾಷ್ಟ್ರದ ಶಾಸಕ ಅಮೀನ್ ಪಟೇಲ್ ಕೂಡ ಮತ್ತೊಂದು ದೂರು ಕೊಟ್ಟಿದ್ದಾರೆ. ಕಾಠಿಯಾವಾಡಿ ಎನ್ನುವುದು ಪ್ರದೇಶದ ಹೆಸರು. ಈ ಹೆಸರನ್ನು ಚಿತ್ರದಲ್ಲಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಅವರು ದೂರಿನಲ್ಲಿ ದಾಖಲಿಸಿದ್ದಾರೆ.