Tag: ಗಂಗಾವತಿ

  • ಬಿಜೆಪಿ ಮುಖಂಡನಿಗೆ ಕೊಲೆ ಬೆದರಿಕೆ ಹಾಕಿದ ಬ್ಯಾಟರಿ ಕಳ್ಳತನ ಪ್ರಕರಣದ ಆರೋಪಿ ಸಲ್ಮಾನ್

    ಬಿಜೆಪಿ ಮುಖಂಡನಿಗೆ ಕೊಲೆ ಬೆದರಿಕೆ ಹಾಕಿದ ಬ್ಯಾಟರಿ ಕಳ್ಳತನ ಪ್ರಕರಣದ ಆರೋಪಿ ಸಲ್ಮಾನ್

    ಕೊಪ್ಪಳ: ಇತ್ತೀಚೆಗೆ ನಡೆದ ಬ್ಯಾಟರಿ ಕಳ್ಳತನ ಪ್ರಕರಣದ ಆರೋಪಿ ಸಲ್ಮಾನ್ ಬಿಜೆಪಿ ಮುಖಂಡನಿಗೆ ಕೊಲೆ ಬೆದರಿಕೆ ಹಾಕಿರೋ ವಿಡಿಯೋ ವೈರಲ್ ಆಗಿದೆ.

    ಕೊಪ್ಪಳದ ಗಂಗಾವತಿ ನಗರಸಭೆ ನಾಮನಿರ್ದೇಶಿತ ಸದಸ್ಯನೂ ಆಗಿರುವ ಸಲ್ಮಾನ್ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಮುಖಂಡ ಸೈಯದ್ ಅಲಿ ಮತ್ತು ಆತನ ಏಕೈಕ ಪುತ್ರನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.

    ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಮತ್ತು ನಗರಸಭೆ ಸದಸ್ಯ ಶ್ಯಾಮೀದ್ ಮನಿಯಾರ್ ಬಗ್ಗೆ ಟೀಕೆ ಮಾಡಿದ್ರೆ ಕೊಲೆ ಮಾಡುವುದಾಗಿ ಹೇಳಿದ್ದಾರೆ. ಸಲ್ಮಾನ್ ಕೂಡ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಬಲಗೈ ಬಂಟ. ಕೇವಲ ಸೈಯದ್ ಅಲಿ ಮಾತ್ರವಲ್ಲ. ಪತ್ರಕರ್ತರು ಮತ್ತು ವಿರೋಧ ಪಕ್ಷದ ಸಾಕಷ್ಟು ಮುಖಂಡರಿಗೆ ಸಲ್ಮಾನ್ ಫೇಸ್ ಬುಕ್ ಸೇರಿ ವಿವಿಧ ಸಾಮಾಜಿಕ ಜಾಲತಾಣಗಳ ಮೂಲಕ ಕೊಲೆ ಬೆದರಿಕೆ ಹಾಕುವುದು ಸಾಮಾನ್ಯವಾಗಿದೆ. ಇದನ್ನೂ ಓದಿ: ಬ್ಯಾಟರಿ ಕದ್ದು ಸಿಕ್ಕಿಬಿದ್ದ ಇಕ್ಬಾಲ್ ಅನ್ಸಾರಿ ಆಪ್ತ? ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿ

    ಗಂಗಾವತಿ ಪೊಲೀಸರು ಮಾತ್ರ ಸಲ್ಮಾನ್‍ಸ ವಿರುದ್ಧ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಇದಕ್ಕೆ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಕುಮ್ಮಕ್ಕು ಕಾರಣ ಎನ್ನಲಾಗಿದೆ. ಅಲ್ಲದೇ ಸ್ವತಃ ಮಾಜಿ ಶಾಸಕ ಕರೆ ಮಾಡಿ, ಪ್ರಕರಣ ದಾಖಲಿಸದಂತೆ ಒತ್ತಡ ಹಾಕ್ತಾರೆ ಎಂಬ ಆರೋಪಗಳು ಸಹ ಕೇಳಿ ಬಂದಿದೆ.

    https://www.youtube.com/watch?v=1yfjpJhvomg

  • ಚಾಲಕನಿಗೆ ಹೃದಯಾಘಾತ-ಎತ್ತಿನ ಬಂಡಿಗೆ ಡಿಕ್ಕಿಯಾಗಿ, ಟೋಲ್ ಗೇಟ್‍ಗೆ ಗುದ್ದಿ ನಿಂತ ಬಸ್

    ಚಾಲಕನಿಗೆ ಹೃದಯಾಘಾತ-ಎತ್ತಿನ ಬಂಡಿಗೆ ಡಿಕ್ಕಿಯಾಗಿ, ಟೋಲ್ ಗೇಟ್‍ಗೆ ಗುದ್ದಿ ನಿಂತ ಬಸ್

    ಕೊಪ್ಪಳ: ಚಲಿಸುತ್ತಿದ್ದ ಬಸ್ ನಲ್ಲೇ ಚಾಲಕನಿಗೆ ಹೃದಯಾಘಾತವಾಗಿದ್ದು, ಪರಿಣಾಮ ಬಸ್ ಎದುರಿಗೆ ಬರುತ್ತಿದ್ದ ಎತ್ತಿನ ಬಂಡಿಗೆ ಡಿಕ್ಕಿ ಹೊಡೆದು ಬಳಿಕ ಟೋಲ್ ಗೇಟ್ ಗೆ ಗುದ್ದಿ ನಿಂತಿದೆ. ಈ ಘಟನೆ ಜಿಲ್ಲೆಯ ಗಂಗಾವತಿ ತಾಲೂಕಿನ ಮರಳಿ ಗ್ರಾಮದ ಬಳಿ ನಡೆದಿದೆ.

    ಬಸ್ ಚಾಲನೆ ಮಾಡುವಾಗ ನಾರಾಯಣಸ್ವಾಮಿ ಎಂಬವರಿಗೆ ಹೃದಯಾಘಾತ ಸಂಭವಿಸಿದೆ. ಇದರಿಂದ ಬಸ್ಸನ್ನು ನಿಯಂತ್ರಿಸಲು ಸಾಧ್ಯವಾಗದೆ ಬಸ್ ನೇರವಾಗಿ ಎತ್ತಿನ ಬಂಡಿಗೆ ಡಿಕ್ಕಿಯಾಗಿದೆ. ಘಟನೆಯಿಂದಾಗಿ ಚಾಲಕ ಹಾಗೂ ಎತ್ತಿನ ಬಂಡಿಯಲ್ಲಿದ್ದ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬಸ್ ಚಾಲಕ ಮತ್ತು ಗಾಯಾಳುಗಳನ್ನು ಗಂಗಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಎತ್ತಿನ ಬಂಡಿಯಲ್ಲಿದ್ದವರು ಜಂಗಮರಕಲ್ಗುಡಿ ಗ್ರಾಮದ ಸುರೇಶ್, ಯಮನೂರಪ್ಪ ಮತ್ತು ನರಸಪ್ಪ ಎಂದು ತಿಳಿದುಬಂದಿದೆ.

    ಬಸ್ ಕುಕನೂರುನಿಂದ ಮಂತ್ರಾಲಯಕ್ಕೆ ತೆರಳುತ್ತಿತ್ತು. ಬಸ್ ಟೋಲ್ ಗೇಟ್ ಹತ್ತಿರ ನಿಧಾನವಾಗಿ ಚಲಿಸುತ್ತಿದ್ದರಿಂದ ಹೆಚ್ಚಿನ ಅಪಾಯವಾಗಿಲ್ಲ. ಬಸ್ ಡಿಕ್ಕಿಯಿಂದಾಗಿ ಟೋಲ್‍ಗೇಟ್ ಸಂಪೂರ್ಣ ನಜ್ಜುಗುಜ್ಜಾಗಿದೆ.

    ಈ ಘಟನೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • ಬ್ಯಾಟರಿ ಕದ್ದು ಸಿಕ್ಕಿಬಿದ್ದ ಇಕ್ಬಾಲ್  ಅನ್ಸಾರಿ ಆಪ್ತ – ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿ

    ಬ್ಯಾಟರಿ ಕದ್ದು ಸಿಕ್ಕಿಬಿದ್ದ ಇಕ್ಬಾಲ್ ಅನ್ಸಾರಿ ಆಪ್ತ – ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿ

    ಕೊಪ್ಪಳ: ವಾಹನಗಳ ಬ್ಯಾಟರಿ ಕಳ್ಳತನ ಮಾಡುವ ವೇಳೆ ನಗರಸಭೆ ಸದಸ್ಯನೊಬ್ಬ ಸಿಕ್ಕಿಬಿದ್ದು, ಬಳಿಕ ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಿರುವ ಘಟನೆ ಗಂಗಾವತಿಯಲ್ಲಿ ನಡೆದಿದೆ.

    ಜಿಲ್ಲೆ ಗಂಗಾವತಿ ನಗರಸಭೆ ನಾಮನಿರ್ದೇಶಿತ ಸದಸ್ಯ ಬಿಚ್ಚುಗತ್ತಿ ಸಲ್ಮಾನ್ ಪೊಲೀಸರ ಮೇಲೆ ಹಲ್ಲೆ ಮಾಡಿದ ಆರೋಪಿ. ಶಾಸಕ ಇಕ್ಬಾಲ್ ಅನ್ಸಾರಿ ಬಲಗೈ ಬಂಟ ಎಂದು ಗುರುತಿಸಿಕೊಂಡಿರುವ ಸಲ್ಮಾನ್ ಕೆಲ ದಿನಗಳ ಹಿಂದೆ ಲಾರಿ ಬ್ಯಾಟರಿ ಕಳ್ಳತನ ಮಾಡುತ್ತಿದ್ದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ದೃಶ್ಯಗಳನ್ನ ಆಧರಿಸಿ ಕಳ್ಳತನದ ಆರೋಪಿ ಸಲ್ಮಾನ್ ನನ್ನು ಬಂಧಿಸಲು ಪೊಲೀಸರು ತೆರಳಿದ್ದರು.

    ಈ ವೇಳೆ ಸಲ್ಮಾನ್ ಮತ್ತು ಆತನ ಬೆಂಬಲಿಗರು ಪೊಲೀಸರ ಮೇಲೆ ಸಿನಿಮೀಯ ಮಾದರಿಯಲ್ಲಿ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಸಲ್ಮಾನ್ ರೌಡಿಶೀಟರ್ ಕೂಡ ಹೌದು.

    ಪ್ರಸ್ತುತ ಘಟನೆ ಕುರಿತು ಸಲ್ಮಾನ್ ವಿರುದ್ಧ ಗಂಗಾವತಿ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿದೆ. ಲಾರಿ ಮಾಲೀಕ ಭಾಷಸಾಬ ನೀಡಿದ ದೂರಿನ ಹಿನ್ನೆಲೆಯಲ್ಲಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಭಾಷಸಾಬ ಅವರು ಸಿಸಿ ಕ್ಯಾಮೆರಾದ ವಿಡಿಯೋಗಳನ್ನು ಮಾಧ್ಯಮಗಳಿಗೆ ನೀಡಿದ್ದಾರೆ.

    https://www.youtube.com/watch?v=1yfjpJhvomg

     

  • ಬೆಳ್ಳಂಬೆಳಗ್ಗೆ ರಾಜ್ಯದ ಹಲವೆಡೆ ಎಸಿಬಿ ದಾಳಿ- ಅಧಿಕಾರಿಗಳ ಮನೆ, ಕಚೇರಿಯಲ್ಲಿ ಶೋಧ

    ಬೆಳ್ಳಂಬೆಳಗ್ಗೆ ರಾಜ್ಯದ ಹಲವೆಡೆ ಎಸಿಬಿ ದಾಳಿ- ಅಧಿಕಾರಿಗಳ ಮನೆ, ಕಚೇರಿಯಲ್ಲಿ ಶೋಧ

    ಬೆಂಗಳೂರು: ಇಂದು ಬೆಳ್ಳಂಬೆಳಗ್ಗೆ ಎಸಿಬಿ ರಾಜ್ಯಾದ ಹಲೆವಡೆ ದಾಳಿ ನಡೆಸಿದೆ. ಮಂಗಳೂರು, ಕೊಪ್ಪಳ, ತುಮಕೂರು, ಬೆಳಗಾವಿ, ಗಂಗಾವತಿ, ಕೋಲಾರದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

    ಅಕ್ರಮ ಆಸ್ತಿ ಗಳಿಗೆ ಹಿನ್ನಲೆಯಲ್ಲಿ ಮಂಗಳೂರಿನ ಕುಂಟಿಕಾನದಲ್ಲಿರುವ ಅಬಕಾರಿ ಡಿವೈಎಸ್‍ಪಿ ಮನೆ ಮೇಲೆ ಬೆಳ್ಳಂಬೆಳಗ್ಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಎಸಿಬಿ ಅಧಿಕ್ಷಕಿ ಶೃತಿ ನೇತೃತ್ವದಲ್ಲಿ ಈ ದಾಳಿ ನಡೆದಿದೆ.

    ಚಿಕ್ಕಮಗಳೂರಿನ ಆರ್.ಟಿ.ಓ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ವಿರುಪಾಕ್ಷ ಕೆ.ಸಿ ಅವರ ಜಯನಗರದಲ್ಲಿರುವ ಮನೆ ಮೇಲೆ ಹಾಗೂ ಆರ್‍ಟಿಓ ಕಚೇರಿ ಮೇಲೆ ದಾಳಿ ನಡೆದಿದೆ. ಹಾಸನ ಎಸಿಬಿ ಡಿವೈಎಸ್ಪಿ ಚಂದ್ರಪ್ಪ, ಮಂಡ್ಯ ಎಸಿಬಿ ಡಿವೈಎಸ್ಪಿ ಶೈಲೇಂದ್ರ ನೇತೃತ್ವದಲ್ಲಿ ಈ ದಾಳಿ ನಡೆದಿದ್ದು, ಸತತ ಮೂರು ಗಂಟೆಗಳಿಂದ ದಾಖಲೆ ಪರಿಶೀಲನೆ ನಡೆಸುತ್ತಿರೋ ಎಸಿಬಿ ಅಧಿಕಾರಿಗಳು, ಆರ್‍ಟಿಓ ಕಚೇರಿ ಕೂಡ ಪರಿಶೀಲನೆ ನಡೆಸಿದ್ದಾರೆ.

    ಕೊಪ್ಪಳ ಜಿಲ್ಲೆಯ ಗಂಗಾವತಿಯ ಜಿಲ್ಲಾ ಪಂಚಾಯತ್ ನ ಉಪ ವಿಭಾಗೀಯ ಕಚೇರಿ ಸಹಾಯಕ ಕಾರ್ಯಪಾಲಕ ಅಭಿಯಂತರ ವಿಜಯಕುಮಾರ್ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಗಂಗಾವತಿಯ ಜಯನರದಲ್ಲಿನ ಮನೆ ಮೇಲೆ ದಾಳಿ ನಡೆದಿದೆ. ಬಳ್ಳಾರಿ ಹಾಗೂ ರಾಯಚೂರು ಜಿಲ್ಲೆಯ ಸುಮಾರು 20 ಕ್ಕೂ ಹೆಚ್ಚು ಅಧಿಕಾರಿಗಳು ಈ ದಾಳಿಯಲ್ಲಿ ಪಾಲ್ಗೊಂಡಿದ್ದು, ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ.

    ಎಸಿಬಿ ಅಧಿಕಾರಿಳು ಏಕಕಾಲಕ್ಕೆ ವಿಜಯಕುಮಾರ್ ಅವರಿಗೆ ಸೇರಿದ ಮನೆ ಹಾಗೂ ಖಾಸಗಿ ಕಚೇರಿಗಳ ಮೇಲೆ ದಾಳಿ ನಡೆಸಿದ್ದು, ಮಹತ್ವದ ದಾಖಲೆಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ವಿಜಯಕುಮಾರ್ ಈ ಹಿಂದೆ ಕನಕಗಿರಿ ಮೀಸಲು ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡಲು ಮುಂದಾಗಿದ್ದರು. ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದಾರೆ ಎನ್ನುವ ಆರೋಪಗಳು ವಿಜಯಕುಮಾರ್ ಮೇಲೆ ಇದ್ದ ಹಿನ್ನಲೆಯಲ್ಲಿ ಎಸಿಬಿ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

    ಬೆಳಗಾವಿ ಜಿಲ್ಲೆಯ ಅಥಣಿಯ ಕೃಷ್ಣಾ ಮೇಲ್ದಂಡೆ ಯೋಜನೆ ವಿಶೇಷ ಭೂಸ್ವಾಧೀನಾಧಿಕಾರಿ ರಾಜಶ್ರೀ ಜೈನಾಪುರ ಅವರ ವಿಜಯಪುರದ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ನಗರದ ಅಥಣಿ ರಸ್ತೆಯಲ್ಲಿನ ಲಕ್ಷ್ಮಿ ನರಸಿಂಹ ನಗರದಲ್ಲಿರುವ ನಿವಾಸದ ಮೇಲೆ ಎಸಿಬಿ ದಾಳಿ ನಡೆದಿದ್ದು, 6 ಅಧಿಕಾರಿಗಳ ತಂಡ ಭೇಟಿ ಮಾಡಿ ವಿಚಾರಣೆ ನಡೆಸಿದ್ದಾರೆ. ಈ ಮನೆಯನ್ನು ಜೈನಾಪುರ ಬಾಡಿಗೆಗೆ ನೀಡಿದ್ದು, ಬಾಡಿಗೆದಾರರನ್ನೇ ಎಸಿಬಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ.

    ಕೋಲಾರ ಜಿಲ್ಲೆ ಮುಳಬಾಗಿಲು ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ಎಂಜಿನಿಯರ್ ಮನೆ ಮೇಲೆಯೂ ಎಸಿಬಿ ಅಧಿಕಾರಿಗಳು ದಾಳಿ ನಡೆಸುವ ಮೂಲಕ ಶಾಕ್ ನೀಡಿದ್ದಾರೆ.

  • ಕಾಪಿ ಪ್ರಶ್ನಿಸಿದ್ದೇ ತಪ್ಪಾಯ್ತು- ಎರಡು ಕಾಲೇಜು ಸಿಬ್ಬಂದಿ ನಡುವೆ ಫೈಟ್

    ಕಾಪಿ ಪ್ರಶ್ನಿಸಿದ್ದೇ ತಪ್ಪಾಯ್ತು- ಎರಡು ಕಾಲೇಜು ಸಿಬ್ಬಂದಿ ನಡುವೆ ಫೈಟ್

    ಕೊಪ್ಪಳ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಾಪಿ ಹೊಡೆಯುತ್ತಿದ್ದ ವಿದ್ಯಾರ್ಥಿಯನ್ನು ಕೊಠಡಿ ಮೇಲ್ವಿಚಾರಕ ಪ್ರಶ್ನಿಸಿದ್ದಕ್ಕೆ ಎರಡು ಕಾಲೇಜಿನ ಸಿಬ್ಬಂದಿ ಹೊಡೆದಾಡಿಕೊಂಡಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ.

    ಕೊಪ್ಪಳದ ಗಂಗಾವತಿಯ ವಿದ್ಯಾನಗರದ ಶಾರದಾ ಎಜುಕೇಷನ್ ವ್ಯೆಜೆಆರ್‍ಪಿಯು ಕಾಲೇಜಿಗೆ ವಿದ್ಯಾನಿಕೇತನ ಕಾಲೇಜಿನ ವಿದ್ಯಾರ್ಥಿಗಳು ಸಹ ಪರೀಕ್ಷೆ ಬರೆಯಲು ಬಂದಿದ್ದರು. ವಿದ್ಯಾನಿಕೇತನ್ ಕಾಲೇಜಿನ ವಿದ್ಯಾರ್ಥಿ ಒಬ್ಬ ತಾನು ತಂದಿದ್ದ ಪ್ಯಾಡ್ ಮೇಲೆ ಕೆಲವೊಂದು ಉತ್ತರಗಳನ್ನು ಬರೆದುಕೊಂಡಿದ್ದನು. ಇದನ್ನು ನೋಡಿದ ಕೊಠಡಿ ಮೇಲ್ವಿಚಾರಕರು ವಿದ್ಯಾರ್ಥಿಗೆ ಬುದ್ಧಿವಾದ ಹೇಳಿದ್ದಾರೆ ಎನ್ನಲಾಗಿದೆ.

    ಈ ವೇಳೆ ವೈ ಜೆ ಆರ್ ಪಿ ಯು ಕಾಲೇಜಿನ ರಾಮಕೃಷ್ಣ ಮತ್ತು ವಿದ್ಯಾನಿಕೇತನ್ ಕಾಲೇಜಿನ ಪ್ರಿನ್ಸಿಪಾಲ್‍ರ ನಡುವೆ ಮಾತಿನ ಚಕಮಕಿ ನಡೆದಿದ್ದು, ಬಳಿಕ ಕೈ ಕೈ ಮಿಲಾಯಿಸಿಕೊಂಡಿದ್ದಾರೆ. ಪರಿಣಾಮ ರಾಮಕೃಷ್ಣ ಅವರಿಗೆ ತೀವ್ರ ಪೆಟ್ಟಾಗಿದೆ. ಕೂಡಲೇ ಗಂಗಾವತಿ ತಾಲೂಕು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

    ಘಟನೆ ಸಂಬಂಧ ಸ್ಪಷ್ಟಿಕರಣ ನೀಡಿದ ವಿದ್ಯಾನಿಕೇತನ ಸಂಸ್ಥೆಯ ಅಧ್ಯಕ್ಷ, ನಮ್ಮ ಕಾಲೇಜಿನ ವಿದ್ಯಾರ್ಥಿಗೆ ಯಾರೋ ಹೊಡೆದಿದ್ದಾರೆ. ಅದನ್ನು ಕೇಳಲು ಕಾಲೇಜಿಗೆ ಹೋಗಿದ್ದ ಸಮಯದಲ್ಲಿ ಮಾತಿನ ಚಕಮಕಿ ನಡೆದಿದೆ. ನಮ್ಮ ಶಾಲೆಯ ವಿದ್ಯಾರ್ಥಿಗಳು ಯಾವುದೇ ರೀತಿಯಲ್ಲಿ ಕಾಪಿ ಮಾಡಿಲ್ಲ ಅಂತ ಹೇಳಿದ್ದಾರೆ.

    ಈ ಕುರಿತು ಗಂಗಾವತಿ ಗ್ರಾಮಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ರಾಜ್ಯ ರಾಜಕಾರಣಕ್ಕೆ ಜನಾರ್ದನ ರೆಡ್ಡಿ ರೀಎಂಟ್ರಿ ನಿಚ್ಚಳ- ಕೊಪ್ಪಳದಲ್ಲಿ ಸಿಂಗಲ್ ಬೆಡ್ ರೂಂ ಮನೆ ನೋಡಿದ ಗಣಿಧಣಿ

    ರಾಜ್ಯ ರಾಜಕಾರಣಕ್ಕೆ ಜನಾರ್ದನ ರೆಡ್ಡಿ ರೀಎಂಟ್ರಿ ನಿಚ್ಚಳ- ಕೊಪ್ಪಳದಲ್ಲಿ ಸಿಂಗಲ್ ಬೆಡ್ ರೂಂ ಮನೆ ನೋಡಿದ ಗಣಿಧಣಿ

    ಕೊಪ್ಪಳ: ಮಾಜಿ ಸಚಿವ ಜನಾರ್ದನ ರೆಡ್ಡಿ ರಾಜ್ಯ ರಾಜಕಾರಣಕ್ಕೆ ರೀಎಂಟ್ರಿ ಕೊಡುವ ಸಾಧ್ಯತೆ ನಿಚ್ಚಳವಾಗಿದೆ. ಇದಕ್ಕೆ ಪೂರಕ ಎನ್ನುವಂತೆ ರೆಡ್ಡಿ ಬಳ್ಳಾರಿ ಜಿಲ್ಲೆ ಗಡಿಭಾಗದ ಹಳ್ಳಿಗಳಲ್ಲಿ ವಾಸ್ತವ್ಯಕ್ಕೆ ಮನೆ ಶೋಧ ನಡೆಸಿದ್ದಾರೆ.

    ಈಗಾಗಲೇ ಮೂರ್ನಾಲ್ಕು ಕಡೆ ಮನೆ ನೋಡಿರುವ ಜನಾರ್ದನ ರೆಡ್ಡಿ ಕೊಪ್ಪಳದ ಗಂಗಾವತಿಯ ಆನೆಗೊಂದಿಯಲ್ಲೂ ಮನೆ ಪರಿಶೀಲಿಸಿ ಹೋಗಿದ್ದು, ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ಬಳ್ಳಾರಿ, ಅನಂತಪುರ ಮತ್ತು ಕಡಪ ಜಿಲ್ಲೆಗೆ ಪ್ರವೇಶ ನಿಷೇಧಿಸಿ ಸುಪ್ರೀಂಕೋರ್ಟ್ ಆದೇಶವಿರುವ ಹಿನ್ನೆಲೆಯಲ್ಲಿ ರೆಡ್ಡಿ ಗಡಿ ಜಿಲ್ಲೆಯ ಹಳ್ಳಿಗಳಲ್ಲಿ ವಾಸ್ತವ್ಯದ ಮಾಸ್ಟರ್ ಪ್ಲಾನ್ ಮಾಡಿದ್ದಾರೆ.

    ಈಗಾಗಲೇ ಆನೆಗೊಂದಿಯ ಪ್ರವೀಣ್ ಎಂಬವರಿಗೆ ಸೇರಿದ ಸಿಂಗಲ್ ಬೆಡ್ ರೂಮ್ ಮನೆ ನೋಡಿಕೊಂಡು ಹೋಗಿರುವ ರೆಡ್ಡಿ ಸರಳತೆಗೆ ಒತ್ತು ಕೊಟ್ಟಂತೆ ಕಾಣುತ್ತಿದೆ. ತುಂಬಾ ಸಿಂಪಲ್ ಆಗಿರೋ ಈ ಮನೆಯಲ್ಲಿ ಒಂದು ಬೆಡ್ ರೂಮ್, ಒಂದು ಕಿಚನ್, ಒಂದು ಹಾಲ್ ಮತ್ತು ಚಿಕ್ಕದಾದ ದೇವರ ಕೋಣೆ ಇದೆ. ಒಟ್ಟು 60 ಅಡಿ ಉದ್ದ 15 ಅಡಿ ಅಗಲವಿದ್ದು, ಈ ಮನೆಗೆ ಇನ್ನೇನು ರೆಡ್ಡಿ ಕುಟುಂಬ ಬರುವುದೊಂದೇ ಬಾಕಿ ಇದೆ. ಇದನ್ನೂ ಓದಿ: ರಾಹುಲ್ ಗಾಂಧಿ ಕಾಲಿಟ್ಟಲ್ಲೆಲ್ಲಾ ಕಾಂಗ್ರೆಸ್ ಪಕ್ಷ ಸುಟ್ಟು ಭಸ್ಮವಾಗಲಿದೆ: ಜನಾರ್ದನ ರೆಡ್ಡಿ

    ಈ ಮನೆಯಲ್ಲಿ ರೆಡ್ಡಿ ಬಾಡಿಗೆಗೆ ಇರ್ತಾರಾ ಅಥವಾ ಸ್ವಂತಕ್ಕೆ ತಗೆದುಕೊಳ್ಳುತ್ತಾರಾ ಅಂತ ಪ್ರಶ್ನಿಸಿದ್ರೆ, ಜನಾರ್ದನ ರೆಡ್ಡಿ ಬರೋದೇ ನಮಗೆ ಖುಷಿಯ ವಿಚಾರ, ಅವರು ಇರ್ತೀನಿ ಅಂದ್ರೆ ನಾವು ಫ್ರೀ ಆಗಿ ಕೊಡೋಕು ಸಿದ್ಧ ಅಂತಾರೆ ಮನೆಯ ಒಡೆಯ ಪ್ರವೀಣ್.

    ಬಳ್ಳಾರಿ ರಾಜಕಾರಣವನ್ನು ಹೀಗೆ ಹತ್ತಿರದಲ್ಲಿದ್ದುಕೊಂಡು ನಿಯಂತ್ರಿಸುವ ಇರಾದೆಯನ್ನು ಜನಾರ್ದನರೆಡ್ಡಿ ಹೊಂದಿದ್ದಾರೆ ಎನ್ನಲಾಗಿದೆ. ಮುಂದಿನ ದಿನಗಳಲ್ಲಿ ಅವರ ರಾಜಕೀಯ ಭವಿಷ್ಯವನ್ನೂ ನಿರ್ಧರಿಸುತ್ತದೆ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಸುಪ್ರೀಂ ಕೋರ್ಟ್ ಸೇರು ಅಂದ್ರೆ ಜನಾರ್ದನ ರೆಡ್ಡಿ ಸವಾಸೇರು ಎಂಬಂತೆ 3 ಜಿಲ್ಲೆಗಳ ರಾಜಕೀಯವನ್ನು ಹತ್ತಿರದಲ್ಲಿ ಇದ್ದುಕೊಂಡೇ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ತಂತ್ರ ಹೂಡಿದ್ದಾರೆ.

  • ಶಾಸಕ ಇಕ್ಬಾಲ್ ಅನ್ಸಾರಿಗೆ ಮಹಿಳೆಯರಿಂದ ತಂಬಿಗೆ, ಚಪ್ಪಲಿ ಎಸೆತ

    ಶಾಸಕ ಇಕ್ಬಾಲ್ ಅನ್ಸಾರಿಗೆ ಮಹಿಳೆಯರಿಂದ ತಂಬಿಗೆ, ಚಪ್ಪಲಿ ಎಸೆತ

    ಕೊಪ್ಪಳ: ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿಗೆ ಮಹಿಳೆಯರು ತಂಬಿಗೆ ಮತ್ತು ಚಪ್ಪಲಿ ಎಸೆದ ಘಟನೆ ಭಾನುವಾರ ರಾತ್ರಿ ನಡೆದಿದೆ.

    ಗಂಗಾವತಿ ನಗರದ 28 ನೇ ವಾರ್ಡಿನಲ್ಲಿ ಈ ಘಟನೆ ನಡೆದಿದೆ. ವಾರ್ಡ್ ವಿಸಿಟ್ ಗೆ ಬಂದ ವೇಳೆ ಶಾಸಕ ಅನ್ಸಾರಿ ಗೆ ಮಹಿಳೆಯರು ಘೇರಾವ್ ಹಾಕಿದ್ರು. ಸರಿಯಾದ ಶೌಚಾಲಯ ಇರದ ಹಿನ್ನಲೆಯಲ್ಲಿ ತಂಬಿಗೆ ಹಿಡಿದುಕೊಂದು ಅನ್ಸಾರಿ ಭಾಷಣಕ್ಕೆ ಘೇರಾವ್ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ರು.

    ಇದರಿಂದಾಗಿ ಕೆಲ ಕಾಲ 28ನೇ ವಾರ್ಡಿನಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸರು ಮತ್ತು ವಾರ್ಡ್ ಜನರ ಮಧ್ಯೆ ವಾಗ್ವಾದ ನಡೆಯಿತು. ಕಾರ್ಯಕ್ರಮದಿಂದ ಇಕ್ಬಾಲ್ ಅನ್ಸಾರಿ ಅರ್ಧಕ್ಕೆ ಹೊರಟುಹೋದ್ರು.

    ಮಹಿಳೆಯರು ಅನ್ಸಾರಿಗೆ ತಂಬಿಗೆ ಮತ್ತು ಚಪ್ಪಲಿ ಎಸೆದ ನಂತರ ಪೊಲೀಸ್ ರಿಂದ ಲಘು ಲಾಠಿ ಪ್ರಹಾರ ನಡೆಯಿತು.

  • ದಾಖಲೆ ಸಮೇತ ಶಾಸಕ ಇಕ್ಬಾಲ್ ಅನ್ಸಾರಿಯ ಸುಳ್ಳಿನ ಮುಖವಾಡ ಬಯಲು ಮಾಡಿದ ಅರ್ಚಕ!

    ದಾಖಲೆ ಸಮೇತ ಶಾಸಕ ಇಕ್ಬಾಲ್ ಅನ್ಸಾರಿಯ ಸುಳ್ಳಿನ ಮುಖವಾಡ ಬಯಲು ಮಾಡಿದ ಅರ್ಚಕ!

    ಕೊಪ್ಪಳ: ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿ ಹೇಳೋದೆಲ್ಲಾ ಬರೀ ಸುಳ್ಳು. ಅಲ್ಲದೇ ಸಂಸ್ಕೃತ ದ್ವೇಷಿ ಕೂಡ. ಇತ್ತೀಚೆಗಷ್ಟೇ ಶ್ರೀರಾಮನ ಬಗ್ಗೆ ಮಾತನಾಡಿದ್ದ ಇವರಿಗೆ ಸಂಸ್ಕೃತ ಪಾಠ ಶಾಲೆಯ ಅವಶ್ಯಕತೆಯಿಲ್ಲ ಅಂತ ಅರ್ಚಕ ವಿದ್ಯಾದಾಸ್ ಬಾಬಾ ಹೇಳಿದ್ದಾರೆ.

    ಅಂಜನಾದ್ರಿ ಪರ್ವತದಲ್ಲಿ ಸಂಸ್ಕೃತ ಪಾಠ ಶಾಲೆ ನಡೆಯಲು ಶಾಸಕರು ಅಡ್ಡಿಪಡಿಸಿದ್ದಾರೆ. ಅಲ್ಲದೇ ಪ್ರಧಾನಿ ಮೋದಿ ಪತ್ನಿ ಪೂಜೆ ಸಲ್ಲಿಸೋ ಅಂಜನಾದ್ರಿ ಪರ್ವತಕ್ಕೆ 2 ಕೋಟಿ ರೂ. ಅನುದಾನ ನೀಡಿದ್ದೇನೆ ಅಂತಾ ಬೊಗಳೆ ಬಿಟ್ಟು ತಗಲಾಕೊಂಡಿದ್ದಾರೆ ಅಂತ ಶಾಸಕರ ಸುಳ್ಳಿನ ಮುಖವಾಡವನ್ನ ಅರ್ಚಕ ವಿದ್ಯಾದಾಸ್ ಬಾಬಾ ದಾಖಲೆ ಸಮೇತ ಬಯಲು ಮಾಡಿದ್ದಾರೆ. ಇದನ್ನೂ ಓದಿ: ಮನೆಯೊಳಗೆ ಜೈ ಶ್ರೀರಾಮ್, ಹೊರಗೆ ಕೊಲೆ ಸುಲಿಗೆ: ಶಾಸಕ ಇಕ್ಬಾಲ್ ಅನ್ಸಾರಿ ವಿವಾದಿತ ಹೇಳಿಕೆ

    ಈ ಹಿಂದೆ ಪ್ರವಾಸೋದ್ಯಮ ಸಚಿವರಾಗಿದ್ದ ಆರ್.ವಿ ದೇಶಪಾಂಡೆ ಪರ್ವತದ ಅಭಿವೃದ್ಧಿಗೆ 2 ಕೋಟಿ ರೂ. ಅನುದಾನ ನೀಡಿದ್ದಾರೆ. ಎಂಎಲ್‍ಸಿ 10 ಲಕ್ಷ, ಸಂಸದ ಸಂಗಣ್ಣ ಕರಡಿ 10 ಲಕ್ಷ ರೂ. ಅನುದಾನ ನೀಡಿದ್ದಾರೆ. ಆದ್ರೆ ಶಾಸಕ ಇಕ್ಬಾಲ್ ಅನ್ಸಾರಿ ನಯಾಪೈಸೆ ಅನುದಾನ ನೀಡದೇ ಸುಳ್ಳು ಹೇಳುತ್ತಾ ಹಿಂದೂ ಕಾರ್ಯಕರ್ತರಿಗೆ ಮೋಸ ಮಾಡುತ್ತಿದ್ದಾರೆ ಅಂತ ಅವರು ಆರೋಪಿಸಿದ್ದಾರೆ.

    ಇತ್ತೀಚೆಗೆ ಕೊಪ್ಪಳದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅನ್ಸಾರಿ, ಮರ್ಯಾದಾ ಪುರುಷೋತ್ತಮ ಶ್ರೀರಾಮನ ಹೆಸರಿನಲ್ಲಿ ಕೊಲೆ ಸುಲಿಗೆ ನಡೆಯುತ್ತಿದೆ. ಶ್ರೀರಾಮನ ಹೆಸರಿನಲ್ಲಿ ವಿಷ ಬೀಜ ಬಿತ್ತಲಾಗುತ್ತಿದೆ. ಈ ಮೂಲಕ ನಮ್ಮ ಯುವಕರನ್ನು ಜೈಲಿಗೆ ಹೋಗಬೇಕೆಂದು ಕುಮ್ಮಕ್ಕು ಕೊಡುತ್ತಿದ್ದಾರೆ. ಮೋದಿ ಪ್ರಧಾನಿಯಾದ ಮೇಲೆ ಇದು ಹೆಚ್ಚಾಗಿದೆ. ಅವರಿಗೆ ಸಂವಿಧಾನ, ಕಾನೂನು ಇಲ್ಲ. ನಮಗೆ ಇರುವ ದೇಶಾಭಿಮಾನ ಅವರಿಗಿಲ್ಲ ಎಂದು ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದನ್ನೂ ಓದಿ: ಧಮ್ ಇದ್ರೆ ನನ್ನ ಸಾಧನೆ ತೋರಿಸಿ – ನನ್ನನ್ನು ಟಿವಿಗೆ ಚರ್ಚೆಗೆ ಕರೆಯಿರಿ ಎಂದ ಕೊಪ್ಪಳ ಶಾಸಕ ಅನ್ಸಾರಿ

    ಈ ವಿಚಾರ ಸುದ್ದಿಯಾದ ಬೆನ್ನಲ್ಲೇ ಶಸಕರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದರು. ನಾನು ಏನು ಹೇಳಿದ್ದೀನಿ ಅನ್ನೋದು ಟಿವಿಯವರು ಪೂರ್ಣ ತೋರಿಸುವುದಿಲ್ಲ. ಹಿಂದೆ- ಮುಂದೆ ಏನು ಹೇಳಿದ್ದೀನಿ ಅನ್ನೋದು ಬಿಟ್ಟು ಶ್ರೀರಾಮ ಹೆಸ್ರಲ್ಲಿ ಕೊಲೆ -ಅನ್ಸಾರಿ ಹೇಳಿಕೆ ಅಂತ ತೋರಿಸ್ತಾರೆ. ಇದಕ್ಕೆ ಗೋಮಧುಸೂದನ್ ಕರೆದು ಡಿಬೇಟ್ ಮಾಡ್ತಾರೆ. ಗಡ್ಡ ಬಿಟ್ಟ ಅಮಾಯಕ ಮುಸ್ಲಿಮ್ ವ್ಯಕ್ತಿಗಳನ್ನು ಕರೆದು ಏನ್ರಿ ಶಾಸಕ ಅನ್ಸಾರಿ ಹೀಗೆ ಹೇಳಿದ್ದಾರೆ ಅಂತ ಕೇಳ್ತಾರೆ. ಅದಕ್ಕೆ ಅವರು ಈ ರೀತಿ ಹೇಳೋದು ತಪ್ಪು ಅಂತಾರೆ ಎಂದು ಮಾಧ್ಯಮದ ವಿರುದ್ಧ ಅನ್ಸಾರಿ ಹರಿಹಾಯ್ದಿದ್ದರು.

  • ಸೆಕ್ಸ್ ಹಗರಣದಲ್ಲಿ ಸಿಲುಕಿದ್ದ ಕಲ್ಮಠ ಸ್ವಾಮಿ ಅಂದು ನಾನವನಲ್ಲ..ನಾನವನಲ್ಲ-ಇಂದು ನಾನೇ.. ನಾನೇ.. ಅಂದ

    ಸೆಕ್ಸ್ ಹಗರಣದಲ್ಲಿ ಸಿಲುಕಿದ್ದ ಕಲ್ಮಠ ಸ್ವಾಮಿ ಅಂದು ನಾನವನಲ್ಲ..ನಾನವನಲ್ಲ-ಇಂದು ನಾನೇ.. ನಾನೇ.. ಅಂದ

    ಕೊಪ್ಪಳ: ಸೆಕ್ಸ್ ಹಗರಣದಲ್ಲಿ ಸಿಕ್ಕಿಬಿದ್ದಿದ್ದ ಗಂಗಾವತಿ ಕಲ್ಮಠದ ಕೊಟ್ಟೂರು ಸ್ವಾಮೀಜಿ ತಾನು ಹೊಂದಿದ್ದ ಪರಸ್ತ್ರಿ ಸಂಗದ ಬಗ್ಗೆ ಒಪ್ಪಿಕೊಂಡಿದ್ದಾನೆ.

    ನಾನವನಲ್ಲ ನಾನವನಲ್ಲ ಅಂತಿದ್ದ ಸ್ವಾಮೀಜಿ ಇದೀಗ ನಾನು ಅವಳ ಜೊತೆ ಸಂಬಂಧ ಹೊಂದಿದ್ದೇನೆ ಏನ್ ಮಾಡ್ತಿಯಾ ಮಾಡ್ಕೋ ಹೋಗು ಎಂದು ತನ್ನ ಕಾರು ಚಾಲಕನಿಗೆ ಅವಾಜ್ ಹಾಕಿದ್ದಾನೆ. ಇನ್ನು ಈ ಕಾಮಿಸ್ವಾಮಿ ಬಾಯಿಬಿಟ್ಟರೆ ಬರೀ ಅಸಭ್ಯ ಭಾಷೆಯನ್ನೇ ಮಾತನಾಡಿದ್ದಾನೆ.

    ಕೊಟ್ಟೂರು ಸ್ವಾಮೀಜಿ ಮತ್ತು ಕಾರು ಚಾಲಕ ನಡುವಿನ ಸಂಭಾಷಣೆಯನ್ನು ಇಲ್ಲಿ ನೀಡಲಾಗಿದೆ.

    ಸ್ವಾಮಿ : ನನ್ನ ಜೊತೆ ಅನುಸರಿಸಿಲ್ಲ ಅಂದ್ರೆ, ನನಗೆ ಬೇಡವಾದ ಮೇಲೆ ಏನಕ್ಕೆ ಬೇಕೋ…
    ವ್ಯಕ್ತಿ : ಇಷ್ಟು ವರ್ಷ ನಾನು ಬೇಕಾಗಿತ್ತು ಈಗ ಬೇಡವಾದನಾ…. ಏತಕ್ಕಾಗಿ ಬೇಡ ಅಂತಿದ್ದೀರಾ… ನನ್ನಿಂದ ಎಲ್ಲಾ ರೀತಿ ಲಾಭ ಪಡೆದು ಈಗ ಬೇಡ ಅಲ್ವಾ…..
    ಸ್ವಾಮಿ : ಅದು ನಿನಗೆ ಗೊತ್ತಿದೆ. ನನಗೂ ಗೊತ್ತಿದೆ. ನಿನ್ನದು  ಹೊಲಸು ಬಾಯಿ
    ವ್ಯಕ್ತಿ : ನೀನು ಮಾಡಿದ್ದನೆಲ್ಲಾ. ನೋಡಿ ಕಣ್ಮುಚ್ಚಿ ಕೂತಿದ್ದೆ ನಾನು. ಅದಕ್ಕೆ ನಾನು ಈಗ ಬೇಡವಾದೆ ಅಲ್ವಾ.
    ಸ್ವಾಮಿ : ನಾನು ಹೆಂಗಸರಿಗೆ ತಾನೇ ಮಾಡಿದ್ದೀನಿ. ಹೆಂಗಸರನ್ನ ಬಿಟ್ಟು ಬೇರೆಯವರಿಗೆ ಮಾಡಿದ್ದೀನಾ ಹೇಳು. ಇಲ್ಲ ಯಾರದಾದ್ರೂ ಆಸ್ತಿ ತಿಂದಿದ್ದೀನಾ ಹೇಳು. ನಾನು ಹೆಂಗಸರಿಗೆ ಮಾಡಿದ್ದೇನೆ, ಅದಕ್ಕಿಂತ ಹೆಚ್ಚಾಗಿ ಏನ್ ಆಡಿದ್ದೇನೆ ಬೋ.. ಮಗನೆ. ಬದ್ಮಾಶ್ ಸೂ.. ಮಗನೆ. ಹೆಂಗಸರನ್ನ ತಂದು ಇಟ್ಟುಕೊಂಡು ಕೂತಿರುವ ಬೋಳಿ ಮಗ. ನಾನ್ ಹೆಂಗಸರಿಗೆ ಮಾಡಿದ್ದೀನಿ ಯಾರಿಗೆ ಹೇಳಿಕೊಳ್ಳುತ್ತಿಯಾ ಹೇಳು ಹೋಗು. ನಿನ್ನ ಕೈಯಲ್ಲಿ ಏನ್ ಮಾಡಿಕೊಳ್ಳಲು ಆಗುತ್ತೋ ಮಾಡಿಕೋ ಹೋಗು. ನಾನು ಎಲ್ಲದಕ್ಕೂ ರೆಡಿ ಇದ್ದೀನಿ.
    ವ್ಯಕ್ತಿ : ಹಾಗೇನಾದ್ರೂ ಮಾಡಬೇಕು ಅಂತ ಅನಿಸಿದ್ರೆ ನಾನು ಮಾಡುತ್ತಿದ್ದೆ.
    ಸ್ವಾಮಿ : ಯಾರು ನಿನ್ನ ಬಾಯಿಗೆ ಬತ್ತಿ ಇಟ್ಟೋರು ಅಷ್ಟೊಂದು ಮಾತಾಡತೀಯಾ.

    ಕಲ್ಮಠ ಸ್ವಾಮಿ ಕಾಮ ಪುರಾಣ ಬಯಲಿಗೆಳೆದ ಕಾರು ಚಾಲಕನಿಗೆ ಜೀವಬೆದರಿಕೆ ಕೂಡ ಹಾಕಲಾಗಿತ್ತು. ಸ್ವಾಮೀಜಿ ಆಪ್ತರಾದ ಶರಣಪ್ಪ ಹುನಗುಂದ, ಶರಣಪ್ಪ ಹೊಸೂರು, ನಾಗರಾಜ್, ಶಿವಾನಂದ ಹಾಗೂ ಗುರುಪಾದಯ್ಯ ಕಾರು ಚಾಲಕ ಮಲ್ಲಯ್ಯಸ್ವಾಮಿ ಮನೆಗೆ ನುಗ್ಗಿ ಕಲ್ಮಠ ಸ್ವಾಮೀಜಿ ವಿರುದ್ಧ ಕೊಟ್ಟಿರೋ ದೂರು ಹಿಂತೆಗೆದುಕೊಳ್ಳುವಂತೆ ಜೀವಬೆದರಿಕೆ ಹಾಕಿದ್ದು ಅಲ್ಲದೇ ಅವಾಚ್ಯ ಪದದಿಂದ ಬೈದು ಹಲ್ಲೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು. ಈ ಕುರಿತು ಮಲ್ಲಯ್ಯಸ್ವಾಮಿ ಗಂಗಾವತಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಐಪಿಸಿ ಸೆಕ್ಷನ್ 143, 147, 323, 504, 506, ಹಾಗೂ 149 ರಡಿ ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

    ಇನ್ನೊಂದೆಡೆ ಸ್ವಾಮೀಜಿ ವಿರುದ್ಧ ಪ್ರತಿಭಟನೆ ಮಾಡ್ತಿರೋ ಹೋರಾಟಗಾರರಿಗೆ ಹಣದ ಆಮಿಷವೊಡ್ಡುತ್ತಿದ್ದಾರೆ ಅನ್ನುವ ಆರೋಪ ಕೇಳಿಬಂದಿದೆ. ವೀರಶೈವ ಲಿಂಗಾಯತ ಸಮಾಜದ ಮುಖಂಡ ಮಹಾಬಳೇಶ ಹಾಸಿನಾಳರಿಗೆ ಹಣದ ಆಮಿಷವೊಡ್ಡಿದ್ದಾರೆ ಅಂತ ಬಹಿರಂಗಪಡಿಸಿದ್ದಾರೆ. ಸ್ವಾಮೀಜಿಯ ವಿರುದ್ಧ ಗಂಗಾವತಿಯ ವೀರಶೈವ ಮುಖಂಡರು ಕಲ್ಮಠಕ್ಕೆ ಮುತ್ತಿಗೆ ಹಾಕುವ ಪ್ರಯತ್ನವನ್ನು ನಡೆಸಿದ್ದರು.

    ಕಲ್ಮಠದ ಕೊಟ್ಟೂರು ಸ್ವಾಮಿಯ ರಾಸಲೀಲೆ ಮಾಧ್ಯಮದಲ್ಲಿ ಪ್ರಸಾರವಾಗುತ್ತಿದ್ದಂತೆ ಮಠದಿಂದ ಕಾಲ್ಕಿತ್ತಿದ್ದ ಕೊಟ್ಟೂರು ಸ್ವಾಮಿ ಆನಂತರ ಸ್ಥಳೀಯ ಶಾಸಕ ಇಕ್ಬಾಲ್ ಅನ್ಸಾರಿ ಬೆಂಬಲಿಗರನ್ನ ಕರೆದುಕೊಂಡು ಮಠವನ್ನು ಪ್ರವೇಶ ಮಾಡಿದ್ದರು. ಇದೀಗ ಆಕ್ರೋಶಗೊಂಡ ವೀರಶೈವ ಸಮಾಜ ನಮ್ಮ ಸಮಾಜದಲ್ಲಿ ಶಾಸಕ ಇಕ್ಬಾಲ್ ಅನ್ಸಾರಿ ಹಸ್ತಕ್ಷೇಪ ಮಾಡಿರೋದು ಖಂಡನೀಯ ಒಬ್ಬ ಕಳ್ಳ ಕಾಮಿಸ್ವಾಮಿಯ ಬೆಂಬಲಕ್ಕೆ ನಿಂತಿರೋ ಶಾಸಕರು ತಮ್ಮ ಯೋಗ್ಯತೆ ಏನೆಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

    ಕೊಟ್ಟೂರು ಸ್ವಾಮಿಯ ಕಾಮಪುರಾಣ ಇಡೀ ದೇಶವೇ ನೋಡಿದೆ ಇಂತಹ ಸ್ವಾಮಿಜಿಯಿಂದ ಸಮಾಜಕ್ಕೆ ಕೆಟ್ಟ ಹೆಸರು ಬಂದಿದೆ. ಯಾವುದೇ ಕಾರಣಕ್ಕೂ ಸ್ವಾಮಿ ಮಠದಲ್ಲಿ ಇರುವುದಕ್ಕೆ ಅವಕಾಶವಿಲ್ಲಾ ಕಳಂಕಿತರು ಈ ಕೂಡಲೇ ಪೀಠ ತ್ಯಾಗ ಮಾಡಿ ಮಠ ಬಿಟ್ಟು ಹೋಗಲೇಬೇಕು ಎಂದು ವೀರಶೈವ ಸಮಾಜ ಮತ್ತು ಗಂಗಾವತಿ ನಾಗರಿಕರು ವಿರುದ್ಧ ಆಗ್ರಹಿಸಿದ್ದರು.

    https://www.youtube.com/watch?v=A8BjfkuWaLo

    https://www.youtube.com/watch?v=utpp_AldyJw

    https://www.youtube.com/watch?v=rhJalJHq9KM

    https://www.youtube.com/watch?v=FVSC0QaAIt8

  • ಸಿಎಂ ಬಳಿ ಮೂಲ ಕಾಂಗ್ರೆಸ್ ರಕ್ತ ಇಲ್ಲ- ಕಾಂಗ್ರೆಸ್ ಗೆ ಗುಡ್ ಬೈ ಹೇಳಿದ ಮಾಜಿ ಎಂಎಲ್‍ಸಿ ಶ್ರೀನಾಥ್

    ಸಿಎಂ ಬಳಿ ಮೂಲ ಕಾಂಗ್ರೆಸ್ ರಕ್ತ ಇಲ್ಲ- ಕಾಂಗ್ರೆಸ್ ಗೆ ಗುಡ್ ಬೈ ಹೇಳಿದ ಮಾಜಿ ಎಂಎಲ್‍ಸಿ ಶ್ರೀನಾಥ್

    ಕೊಪ್ಪಳ: ಸಿದ್ದರಾಮಯ್ಯನವರ ಬಳಿ ಮೂಲ ಕಾಂಗ್ರೆಸ್ ರಕ್ತ ಇಲ್ಲ. ಸಿದ್ದರಾಮಯ್ಯ ಹಿಟ್ಲರ್ ಇದ್ದ ಹಾಗೆ ಅಂತ ಕೊಪ್ಪಳದ ಗಂಗಾವತಿಯಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಶ್ರೀನಾಥ್ ವಾಗ್ದಾಳಿ ನಡೆಸಿದ್ರು.

    ಗಂಗಾವತಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಪತ್ರ ರವಾನಿಸಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದ ಅವರು, ಇಂದಿರಾಗಾಂಧಿ ಕಾಲದಿಂದ ನಮ್ಮ ಮನೆಯಲ್ಲಿ ಕಾಂಗ್ರೆಸ್ ಕೆಲಸ ಆರಂಭವಾಗುತ್ತಿತ್ತು. ಆದ್ರೆ ಸಿದ್ದರಾಮಯ್ಯ ಮೂಲ ಕಾಂಗ್ರೆಸಿಗರ ಮೇಲೆ ದರ್ಪ ತೋರಿಸುತ್ತಿದ್ದಾರೆ ಅಂದ್ರು.

    ಸಿದ್ದರಾಮಯ್ಯನವರಿಂದ ಕಾಂಗ್ರೆಸ್ ಪಕ್ಷ ಹೈಜಾಕ್ ಆಗಿದೆ. ಕರ್ನಾಟಕದಲ್ಲಿ ಸಿದ್ದರಾಮಯ್ಯ ಕಾಂಗ್ರೆಸ್ ಆಡಳಿತ ನಡೆಯುತ್ತಿದೆ ಅಂತ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ರು. ನಾಲ್ಕು ವರ್ಷದಿಂದ ಮೂಲ ಕಾಂಗ್ರೆಸ್‍ಗೆ ಅನ್ಯಾಯವಾಗಿದೆ. ಸಾಧನಾ ಸಮಾವೇಶದಲ್ಲಿ ಮುಖ್ಯಮಂತ್ರಿ ಅನ್ಸಾರಿ ಮುಂದೆ ನಮ್ಮ ಜೊತೆ ಇರ್ತಾರೆ ಎಂದು ಘೋಷಣೆ ಮಾಡಿದ್ರು.

    ಸಿದ್ದರಾಮಯ್ಯ ನಿಲುವಿನಿಂದ ಬೇಸತ್ತು ರಾಜೀನಾಮೆ ನೀಡಿದ್ದೇನೆ. ಜಿಪಂ ಸದಸ್ಯರು, ನಗರಸಭೆ ಸದಸ್ಯರು, ತಾಪಂ ಸದಸ್ಯ ರೊಂದಿಗೆ ಅಪಾರ ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷ ಕ್ಕೆ ಗುಡ್ ಬೈ ಹೇಳಿದ್ರು.