Tag: ಗಂಗಾವತಿ

  • ಗಂಗಾವತಿಯಲ್ಲಿ ಜೆಡಿಎಸ್, ಕಾಂಗ್ರೆಸ್ ಒಂದಾಗಲು ಸಾಧ್ಯವಿಲ್ಲ- ಎಚ್‍ಆರ್ ಶ್ರೀನಾಥ್

    ಗಂಗಾವತಿಯಲ್ಲಿ ಜೆಡಿಎಸ್, ಕಾಂಗ್ರೆಸ್ ಒಂದಾಗಲು ಸಾಧ್ಯವಿಲ್ಲ- ಎಚ್‍ಆರ್ ಶ್ರೀನಾಥ್

    -ಬಿಜೆಪಿ ಜೊತೆ ಕೈ ಜೋಡಿಸಲು ಸಿದ್ಧ

    ಕೊಪ್ಪಳ: ರಾಜ್ಯದಲ್ಲಿ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರ ಇರಬಹುದು. ಆದ್ರೆ, ಗಂಗಾವತಿಯಲ್ಲಿ ಅದು ಸಾಧ್ಯವಿಲ್ಲ ಎಂದು ಜೆಡಿಎಸ್‍ನ ರಾಜ್ಯ ಘಟಕದ ಉಪಾಧ್ಯಕ್ಷ ಮತ್ತು ಹೈಕಮಾಂಡ್ ಉಸ್ತುವಾರಿ ಎಚ್‍ಆರ್ ಶ್ರೀನಾಥ್ ಹೇಳಿದ್ದಾರೆ.

    ಕೊಪ್ಪಳದ ಗಂಗಾವತಿ ನಗರಸಭೆ ಚುನಾವಣೆ ಫಲಿತಾಂಶದಲ್ಲಿ ಅತಂತ್ರ ಸ್ಥಿತಿ ಎದುರಾದರೆ ಬಿಜೆಪಿ ಜೊತೆ ಕೈ ಜೋಡಿಸುತ್ತೇವೆ. ನಗರ ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶಕ್ಕೂ ಮುನ್ನವೇ ಬಿಜೆಪಿ ಜೊತೆ ಒಪ್ಪಂದ ಎಂದು ತಿಳಿಸಿದ್ದಾರೆ. ಗಂಗಾವತಿ ನಗರಸಭೆ ಚುನಾವಣೆ ಫಲಿತಾಂಶ ಅತಂತ್ರವಾಗೋ ಸಾಧ್ಯತೆ ಇದೆ. ಅಧಿಕಾರ ಹಿಡಿಯುವಲ್ಲಿ ಜೆಡಿಎಸ್ ಪ್ರಮುಖ ಪಾತ್ರ ವಹಿಸಲಿದೆ. ಹೀಗಾಗಿ ನಾವು ಬಿಜೆಪಿ ಜತೆ ಒಪ್ಪಂದ ಮಾಡಿಕೊಂಡಿದ್ದೇವೆ. ಬಿಜೆಪಿ ಬೆಂಬಲ ಕೊಟ್ಟರೆ ನಾವು ಸ್ವಾಗತ ಮಾಡುತ್ತೀವಿ ಅವರ ಜೊತೆ ಕೈ ಜೋಡಿಸುತ್ತಿವಿ ಎಂದು ಅವರು ತಿಳಿಸಿದ್ದಾರೆ.

    ಗಂಗಾವತಿಯಲ್ಲಿ ನಾವು ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಅನ್ಸಾರಿ ಕುಮಾರಸ್ವಾಮಿ ಅವರನ್ನು ನಾಯಕ ಎಂದು ಒಪ್ಪುದಿಲ್ಲವಂತೆ. ಈ ಕಾರಣಕ್ಕೆ ನಾವು ಯಾವತ್ತೂ ಕಾಂಗ್ರೆಸ್ ಜೊತೆ ಹೋಗಲ್ಲ. ನಮ್ಮ ನಾಯಕರಿಗೆ ಗಂಗಾವತಿ ಕಾಂಗ್ರೆಸ್ ಮುಖಂಡರಿಂದ ಮರ್ಯಾದೆ ಇಲ್ಲ. ಈ ಕಾರಣಕ್ಕೆ ನಾವು ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳಲ್ಲ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಗಂಗಾವತಿಯಲ್ಲಿ ಇಕ್ಬಾಲ್ ಅನ್ಸಾರಿ ಗೂಂಡಾಗಿರಿ – ಆ ನನ್ಮಗನಿಗೆ ಒದಿರಲೇ ಎಂದ ಕೈ ಮಾಜಿ ಶಾಸಕ

    ಗಂಗಾವತಿಯಲ್ಲಿ ಇಕ್ಬಾಲ್ ಅನ್ಸಾರಿ ಗೂಂಡಾಗಿರಿ – ಆ ನನ್ಮಗನಿಗೆ ಒದಿರಲೇ ಎಂದ ಕೈ ಮಾಜಿ ಶಾಸಕ

    ಕೊಪ್ಪಳ: ಇಲ್ಲಿನ ಗಂಗಾವತಿ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಮತ್ತೆ ಬಾಯಿ ಹರಿಬಿಟ್ಟಿದ್ದಾರೆ. ನೀವು ಡಬಲ್ ಗೇಮ್ ಆಡುತ್ತಿದ್ದೀರಿ ಎಂದ ವ್ಯಕ್ತಿಯನ್ನು ಸಾರ್ವಜನಿಕವಾಗಿಯೇ ನಿಂದಿಸಿದ್ದು, ಇದೀಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

    ಗಂಗಾವತಿ ನಗರಸಭೆ ಚುನಾವಣೆ ಹಿನ್ನೆಲೆಯಲ್ಲಿ ನಾಲ್ಕನೇ ವಾರ್ಡ್ ನಲ್ಲಿ ಪ್ರಚಾರದ ವೇಳೆ ಅನ್ಸಾರಿ ಗೂಂಡಾಗಿರಿ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಪ್ರಚಾರದ ವೇಳೆ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಭಾಷಣಕ್ಕೆ ಅಡ್ಡಿಪಡಿಸಿದ ವ್ಯಕ್ತಿಗೆ ಹೋಗಲೇ ನನ್ನ ಮಗನೆ ಎಂದು ನಿಂದಿಸಿದ್ದಾರೆ. ಅಲ್ಲದೇ ಆ ನನ್ನ ಮಗನಿಗೆ ಒದಿರಲೇ ಎಂದು ಸಾರ್ವಜನಿಕವಾಗಿಯೇ ತಮ್ಮ ಬೆಂಬಲಿಗರಿಗೆ ಸೂಚಿಸಿದ್ದಾರೆ.

    ಕಾಂಗ್ರೆಸ್ ಅಭ್ಯರ್ಥಿ ಅರ್ಜುನ್ ನಾಯಕ ಪರ ಪ್ರಚಾರ ಮಾಡುವ ವೇಳೆ ಈ ಘಟನೆ ನಡೆದಿದೆ. ಈ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಗಂಗಾವತಿಯ ಕಂಪ್ಯೂಟರ್ ಕೇಂದ್ರದಲ್ಲಿ ಕೋಟಿ ರೂ. ಕಾಮಗಾರಿಗಳಿಗೆ ಅನುಮೋದನೆ ಸಿಗುತ್ತೆ!

    ಗಂಗಾವತಿಯ ಕಂಪ್ಯೂಟರ್ ಕೇಂದ್ರದಲ್ಲಿ ಕೋಟಿ ರೂ. ಕಾಮಗಾರಿಗಳಿಗೆ ಅನುಮೋದನೆ ಸಿಗುತ್ತೆ!

    ಕೊಪ್ಪಳ: ಗಂಗಾವತಿ ಪಂಚಾಯತ್ ರಾಜ್ ಎಂಜಿನಿಯರಿಂಗ್ ಉಪ- ವಿಭಾಗ ಕಚೇರಿ ಸದ್ಯ ನಗರದ ಖಾಸಗಿ ವ್ಯಕ್ತಿ ಅಂಗಡಿಯಲ್ಲೇ ನಡೆಯುತ್ತಿದೆ.

    ಹೌದು. ಕಚೇರಿಯಲ್ಲಿ ಕುಳಿತು ಕೆಲಸ ಮಾಡಬೇಕಿದ್ದ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಗಂಗಾವತಿಯಲ್ಲಿ ಅಂಗಡಿಯಲ್ಲೇ ಕೆಲಸ ಮಾಡುತ್ತಿದ್ದು, ಕಚೇರಿ ಮಾತ್ರ ಖಾಲಿ ಇರುತ್ತದೆ.

    ಗಂಗಾವತಿಯ ಉಪ- ವಿಭಾಗ ಎಇಇ ಕಚೇರಿ ಖಾಸಗಿ ವ್ಯಕ್ತಿಯಯಾಗಿರುವ ಹಫೀಸ್ ಎಂಬಾತನ ಕಂಪ್ಯೂಟರ್ ಸೆಂಟರ್ ನಲ್ಲಿ ನಡೆಯುತ್ತಿದೆ. ಇಡೀ ತಾಲೂಕಿನ ಕೋಟಿ- ಕೋಟಿ ರೂಪಾಯಿ ಅನುದಾನದ ಕಾಮಗಾರಿಗೆ ಇಲ್ಲೇ ಅನುಮೋದನೆ ನೀಡಲಾಗುತ್ತದೆ.

    ಹಫೀಸ್ ನಡೆಸುವ ಕಂಪ್ಯೂಟರ್ ನಲ್ಲಿಯೇ ಸರ್ಕಾರಿ ಸಾಫ್ಟ್ವೇರ್ ಇವೆ. ಅಷ್ಟೇ ಅಲ್ಲದೇ ಕೋಟ್ಯಾಂತರ ರೂಪಾಯಿ ಕಾಮಗಾರಿಯ ದಾಖಲಾತಿಯನ್ನು ಈ ಖಾಸಗಿ ವ್ಯಕ್ತಿಯೇ ಪರಿಶೀಲನೆ ಮಾಡಿ ಕೊಡುತ್ತಾನೆ. ನಂತರ ಬರುವ ಎಂಜಿನಿಯರ್ ಸಹಿ ಹಾಕಿ ಅಪ್ರೂವ್ ಮಾಡುವುದಕ್ಕೂ ಇಲ್ಲಿಗೆ ಬರಬೇಕಂತೆ. ಕಳೆದ ಐದು ತಿಂಗಳಿನಿಂದ ಈ ವ್ಯವಸ್ಥೆ ಇದ್ದು ಈ ಅವ್ಯವಸ್ಥೆಯನ್ನು ಸ್ವತಃ ಎಇಇ ಓಂಕಾರ್ ಒಪ್ಪಿಕೊಂಡಿದ್ದಾರೆ.

    ಹಫೀಸ್ ಈ ಹಿಂದೆ ಗಂಗಾವತಿ ತಾಪಂ ಕಚೇರಿಯಲ್ಲಿ ಗುತ್ತಿಗೆ ನೌಕರನಾಗಿ ಕೆಲಸ ಮಾಡುತ್ತಿದ್ದ. ಇಲ್ಲಿ ಅವ್ಯವಹಾರ ಮಾಡಿ, ಕೆಲಸ ಕಳೆದುಕೊಂಡ ಬಳಿಕ ಕಚೇರಿಯನ್ನೇ ತನ್ನ ಅಂಗಡಿಗೆ ಶಿಫ್ಟ್ ಮಾಡಿಕೊಂಡಿದ್ದಾನೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ತುಂಗಭದ್ರಾ ನದಿಗೆ ಭಾರೀ ಪ್ರಮಾಣದ ನೀರು ಬಿಡುಗಡೆ – ಕಂಪ್ಲಿ, ಗಂಗಾವತಿ ಸೇತುವೆ ಮುಳುಗಡೆ!

    ತುಂಗಭದ್ರಾ ನದಿಗೆ ಭಾರೀ ಪ್ರಮಾಣದ ನೀರು ಬಿಡುಗಡೆ – ಕಂಪ್ಲಿ, ಗಂಗಾವತಿ ಸೇತುವೆ ಮುಳುಗಡೆ!

    ಬಳ್ಳಾರಿ: ತುಂಗಭದ್ರಾ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಜಲಾಶಯದಿಂದ 70 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರನ್ನು 20 ಗೇಟ್‍ಗಳ ಮೂಲಕ ನದಿಗೆ ಬಿಡಲಾಗಿದೆ. ಇದರಿಂದ ಕಂಪ್ಲಿ ಪಟ್ಟಣದ ಬಳಿಯ ಕಂಪ್ಲಿ, ಗಂಗಾವತಿ ಸೇತುವೆ ಮುಳುಗಡೆಗೆ ಕೆಲವು ಅಡಿಯಷ್ಟೇ ಬಾಕಿಯಿದೆ.

    ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳ ಸಂಪರ್ಕದ ಕೊಂಡಿಯಾದ ಕಂಪ್ಲಿ ಕೋಟೆಯ ತುಂಗಾಭದ್ರ ನದಿಯಲ್ಲಿ ಉಕ್ಕಿ ಬರುತ್ತಿರುವ ನೀರನ್ನು ಕಣ್ತುಂಬಿಕೊಳ್ಳಲು ಹೆಚ್ಚಿನ ಜನ ನದಿಯತ್ತ ಆಗಮಿಸಿಸುತ್ತಿದ್ದಾರೆ. ಕಳೆದ ನಾಲ್ಕು ವರ್ಷದ ಹಿಂದೆ ಈ ಸೇತುವೆ ಮುಳುಗಡೆಯಾಗಿ ಸಾರ್ವಜನಿಕರಿಗೆ ತೊಂದರೆ ಉಂಟಾಗಿತ್ತು. ಆದರೆ, ನಂತರ ಜಲಾಶಯ ಭರ್ತಿಯಾಗದೇ ಇದ್ದರಿಂದ ಈ ಸೇತುವೆ ಮುಳುಗಡೆ ಭೀತಿಯನ್ನು ಜನ ಕಂಡಿರಲಿಲ್ಲ. ಆದರೆ ಈ ವರ್ಷ ಸೇತುವೆಗೆ ಮುಳುಗಡೆ ಭೀತಿ ಎದುರಾಗಿದೆ.

    ಕಂಪ್ಲಿ-ಕೋಟೆಯ ಹೊರವಲಯದ ಬಾಳೆ ತೋಟಗಳಿಗೆ ನೀರು ನುಗ್ಗಿದ್ದು, ಹೊಳೆ ಆಂಜನೇಯ ದೇವಸ್ಥಾನ ಜಲಾವೃತವಾಗುವ ಸಾಧ್ಯತೆಯಿದೆ. ಒಂದು ಕಡೆ ರೈತರಿಗೆ ಹರ್ಷವಾದರೆ, ಮತ್ತೊಂದು ಕಡೆ ನದಿ ಪಾತ್ರದ ಜನರಿಗೆ ಸಂಕಷ್ಟ ಎದುರಾದಂತಾಗಿದೆ. ನದಿಗೆ ನೀರು ಬಿಟ್ಟಿರುವುದನ್ನು ನೋಡಲು ಸುತ್ತಮುತ್ತಲ ಪ್ರದೇಶದ ಜನ ಆಗಮಿಸುತ್ತಿದ್ದಾರೆ. ಸೇತುವೆಯ ತಳಭಾಗದಲ್ಲಿ ನೀರು ಹರಿಯುತ್ತಿದೆ. ಇನ್ನೇನು ಸೇತುವೆ ಮೇಲೆ ನೀರು ಹರಿಯಲು ಕೆಲವು ಅಡಿ ಬಾಕಿಯಿದೆ.

    ಸೇತುವೆ ಮುಳುಗಡೆಗೆ ಕೆಲವೆ ಅಡಿಗಳು ಬಾಕಿ ಇದ್ದರೂ ಭಾರೀ ಗಾತ್ರದ ವಾಹನಗಳ ಸಂಚಾರ ನಿಂತಿಲ್ಲ. ಆದರೆ ನದಿ ಪಾತ್ರದ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚನೆ ನೀಡಲಾಗಿದ್ದು, ನದಿ ನೀರಿನಿಂದ ಸಾರ್ವಜನಿಕರು ದೂರ ಉಳಿಯಬೇಕೆಂದು ತಹಶೀಲ್ದಾರ್ ಶರಣಮ್ಮ ಸೂಚಿಸಿದ್ದಾರೆ.

  • ಮಹಿಳೆಯೊಂದಿನ ಕೊಟ್ಟೂರು ಸ್ವಾಮಿ ಫೋಟೋ ವೈರಲ್ – ಸ್ವಾಮೀಜಿ ಉಚ್ಚಾಟನೆಗೆ ಮಹಿಳಾ ಭಕ್ತರ ಆಗ್ರಹ

    ಮಹಿಳೆಯೊಂದಿನ ಕೊಟ್ಟೂರು ಸ್ವಾಮಿ ಫೋಟೋ ವೈರಲ್ – ಸ್ವಾಮೀಜಿ ಉಚ್ಚಾಟನೆಗೆ ಮಹಿಳಾ ಭಕ್ತರ ಆಗ್ರಹ

    ಕೊಪ್ಪಳ: ಜಿಲ್ಲೆಯ ಗಂಗಾವತಿ ನಗರ ಕಲ್ಮಠದ ಕೊಟ್ಟೂರು ಸ್ವಾಮಿ ಮಹಿಳೆಯರೊಂದಿಗೆ ಲಾಡ್ಜ್ ನಲ್ಲಿದ್ದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಕಳೆದ ವರ್ಷ ಪಬ್ಲಿಕ್ ಟಿವಿ ಕೊಟ್ಟೂರು ಸ್ವಾಮಿಗಳು ಲಾಡ್ಜ್ ನಲ್ಲಿ ಮಹಿಳೆಯೊಂದಿಗೆ ಅಕ್ರಮ ಸಂಬಂಧದ ಬಗ್ಗೆ ಮೊದಲು ಸುದ್ದಿ ಮಾಡಿದ್ದು, ವರದಿ ಪ್ರಸಾರವಾದ ಬಳಿಕ ಕೆಲ ದಿನಗಳ ಕಾಲ ಕೊಟ್ಟೂರ ಶ್ರೀಗಳು ಮಠವನ್ನ ತೊರೆದಿದ್ದರು. ಆದರೆ ಆರು ತಿಂಗಳಿಂದ ಸ್ವಾಮೀಜಿಯನ್ನ ಮಠದಿಂದ ಉಚ್ಛಾಟಿಸುವಂತೆ ಪ್ರತಿಭಟನೆ ಹಮ್ಮಿಕೊಂಡಿದ್ದರು. ಆದರೆ ಇದೀಗ ಸ್ವಾಮೀಜಿ ಮತ್ತಷ್ಟು ಫೋಟೋಗಳು ವೈರಲ್ ಆಗಿವೆ. ಇದನ್ನು ಓದಿ: ಲೈಂಗಿಕ ಹಗರಣ ಹೊರಬಿದ್ದ ನಂತರ ಎಸ್ಕೇಪ್ ಆಗಿದ್ದ ಕಲ್ಮಠ ಸ್ವಾಮೀಜಿ ಮಠಕ್ಕೆ ವಾಪಸ್

    ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸ್ವಾಮಿ ಮಹಿಳೆಯೊಂದಿಗಿರುವ ಮತ್ತಷ್ಟು ಫೋಟೋಗಳನ್ನು ಬಿಡುಗಡೆ ಮಾಡಿರುವ ಹೋರಾಟಗಾರರು ಗಂಗಾವತಿ ನೂತನ ಶಾಸಕರಾದ ಪರಣ್ಣ ಮುನವಳ್ಳಿ ಅವರಿಗೆ ಸ್ವಾಮೀಜಿಯನ್ನು ಮಠದಿಂದ ಕಿತ್ತು ಹಾಕುವಂತೆ ಆಗ್ರಹಿಸಿದ್ದಾರೆ. ಇನ್ನು ಕೆಲವರು ಸ್ವಾಮೀಜಿಯನ್ನ ತೆಗೆದು ಹಾಕದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿ ಸಾಮಾಜಿಕ ಜಾಲತಾಣದಲ್ಲಿ ಫೋಸ್ಟ್ ಹಾಕಿದ್ದಾರೆ. ಇದನ್ನು ಓದಿ: ಸೆಕ್ಸ್ ಹಗರಣದಲ್ಲಿ ಸಿಲುಕಿದ್ದ ಕಲ್ಮಠ ಸ್ವಾಮಿ ಅಂದು ನಾನವನಲ್ಲ..ನಾನವನಲ್ಲ-ಇಂದು ನಾನೇ.. ನಾನೇ.. ಅಂದ

    ಚುನಾವಣೆ ವೇಳೆಯಲ್ಲಿ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿಯವರು ತಾವು ಶಾಸಕರಾಗಿ ಆಯ್ಕೆ ಆದರೆ ಸ್ವಾಮೀಜಿ ವಿರುದ್ಧದ ಆರೋಪಗಳನ್ನು ಪರಿಗಣಿಸಿ ಅವರನ್ನು ಮಠದಿಂದ ತೆಗೆದು ಹಾಕುವ ಆಶ್ವಾಸನೆಯನ್ನು ನೀಡಿದ್ದರು. ಸದ್ಯ ಜನರಿಗೆ ನೀಡಿರುವ ಮಾತಿನಂತೆ ಸ್ವಾಮೀಜಿಯವನ್ನು ತೆಗೆದು ಹಾಕುವಂತೆ ಸಾಮಾಜಿಕ ಜಾಲತಾಣದಲ್ಲಿ ಆಗ್ರಹಿಸಿದ್ದಾರೆ.  ಇದನ್ನು ಓದಿ: ಕಲ್ಮಠದ ಕೊಟ್ಟೂರು ಸ್ವಾಮಿಯ ಕಾಮಪುರಾಣ ಬಯಲು- ಟೀಚರ್, ಅಡುಗೆ ಮಹಿಳೆ, ಲೈಬ್ರೇರಿಯನ್ ಯಾರನ್ನೂ ಬಿಟ್ಟಿಲ್ಲ ಈ ಸ್ವಾಮಿ

    https://www.youtube.com/watch?v=3lbgvaviytI

  • ಮಹಿಳೆಯರಿಂದ್ಲೇ ಮಟ್ಕಾ ದಂಧೆ- ಪೊಲೀಸರ ವಿರುದ್ಧ ಸಾರ್ವಜನಿಕರ ಆಕ್ರೋಶ

    ಮಹಿಳೆಯರಿಂದ್ಲೇ ಮಟ್ಕಾ ದಂಧೆ- ಪೊಲೀಸರ ವಿರುದ್ಧ ಸಾರ್ವಜನಿಕರ ಆಕ್ರೋಶ

    ಕೊಪ್ಪಳ: ಜಿಲ್ಲೆಯಾದ್ಯಂತ ಮಟ್ಕಾ ದಂಧೆ ಅವಿರತವಾಗಿ ನಡೆಯುತ್ತಿದೆ. ಅದರಲ್ಲೂ ಗಂಗಾವತಿ ತಾಲೂಕಿನಲ್ಲಿ ಇದಕ್ಕೆ ಕಡಿವಾಣವೇ ಇಲ್ಲ. ಅವ್ಯಾಹತವಾಗಿ ನಡೆಯುತ್ತಿರುವ ಈ ಮಟ್ಕಾ ದಂಧೆಯನ್ನು ಪೊಲೀಸರು ಕಂಡರೂ ಜಾಣ ಕುರುಡುತನಕ್ಕೆ ಜಾರಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಗಂಗಾವತಿ ತಾಲೂಕಿನಲ್ಲಿ ಬಹುತೇಕ ಕಿರಾಣಿ ಅಂಗಡಿಗಲ್ಲಿಯೂ ಈ ಮಟ್ಕಾ ದಂಧೆ ನಡೆಯುತ್ತಿದೆ. ಇಲ್ಲಿ ಇನ್ನೊಂದು ವಿಶೇಷ ಏನಂದ್ರೆ ದಂಧೆ ನಡೆಸುತ್ತಿರೋದು ಮಹಿಳೆಯರು. ಕಿರಾಣಿ ಅಂಗಡಿಗಲ್ಲಿ ಮಹಿಳೆಯರೇ ಮಟ್ಕಾ ಬುಕ್ಕಿಗಳಾಗಿದ್ದಾರೆ. ಜೀರಾಳ ಹಾಗೂ ಕಲ್ಗುಡಿಯ ಕಿರಾಣಿ ಅಂಗಡಿಯಲ್ಲಿ ಮಹಿಳೆಯೊಬ್ಬಳು ಮಟ್ಕಾ ದಂಧೆ ನಡೆಸುತ್ತಿರುವುದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಈ ಮಟ್ಕಾ ದಂಧೆಯ ಬಗ್ಗೆ ಪೊಲೀಸರಿಗೂ ಗೊತ್ತಿದೆ. ಎಲ್ಲ ಗೊತ್ತಿದ್ದೂ ಹಣದ ಆಸೆಗೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಇಕ್ಬಾಲ್ ಅನ್ಸಾರಿಗೆ ತಲೆನೋವು ತಂದಿಟ್ಟ ಗಂಗಾವತಿ ನೂತನ ಬಿಜೆಪಿ ಶಾಸಕ!

    ಇಕ್ಬಾಲ್ ಅನ್ಸಾರಿಗೆ ತಲೆನೋವು ತಂದಿಟ್ಟ ಗಂಗಾವತಿ ನೂತನ ಬಿಜೆಪಿ ಶಾಸಕ!

    ಕೊಪ್ಪಳ: ಜಿಲ್ಲೆಯ ಗಂಗಾವತಿಯಲ್ಲಿ ಶಾಸಕ ಮತ್ತು ಮಾಜಿ ಶಾಸಕರ ನಡುವೆ ಲಿಕ್ಕರ್ ಫೈಟ್ ಆರಂಭವಾಗಿದೆ. ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಅಬಕಾರಿ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

    ಮದ್ಯ ಅಕ್ರಮ ಮಾರಾಟ ಹಾಗೂ ಹೆಚ್ಚುವರಿ ಹಣ ವಸೂಲಿ ತಡೆಗಟ್ಟುವಂತೆ ಪತ್ರದಲ್ಲಿ ಶಾಸಕರು ಆಗ್ರಹಿಸಿದ್ದಾರೆ. ಜಿಲ್ಲಾ ಅಬಕಾರಿ ಆಯುಕ್ತರಿಗೆ ಪತ್ರ ಬರೆದಿರುವ ಶಾಸಕ ಪರಣ್ಣ ಮುನವಳ್ಳಿ, ಹೆಚ್ಚುವರಿ ಹಣಕ್ಕೆ ಮದ್ಯ ಮಾರಾಟ ಮಾಡ್ತಿರೋದರಿಂದ ನಗರದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗ್ತಿದೆ. ಗಂಗಾವತಿಯಲ್ಲಿ ಪ್ರತಿ 180 ಎಂಎಲ್ ಗೆ 30 ರಿಂದ 40 ರೂ. ಹೆಚ್ಚುವರಿ ಹಣ ವಸೂಲಿ ಮಾಡಲಾಗುತ್ತಿದೆ ಎಂದು ಶಾಸಕರು ಆರೋಪಿಸಿದ್ದಾರೆ.

    ಗಂಗಾವತಿ ತುಂಬ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಒಡೆತನದ ಮದ್ಯದಗಂಡಿಗಳಿವೆ. ಇಕ್ಬಾಲ್ ಅನ್ಸಾರಿಯವರ ಮದ್ಯದಂಗಡಿಯಲ್ಲಿ ಎಂ.ಆರ್.ಪಿ ಗಿಂತ ಹೆಚ್ಚಿನ ಹಣ ವಸೂಲಿ ಮಾಡಲಾಗುತ್ತಿದೆ. ಇದರಿಂದ ಪರಣ್ಣ ಮುನವಳ್ಳಿ ಶಾಸಕರಾಗಿ ಆಯ್ಕೆಯಾಗುತ್ತಲೇ ಅಬಕಾರಿ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

    ಎಂ.ಆರ್.ಪಿ ದರಕ್ಕೆ ಮದ್ಯ ಮಾರಾಟ ಮಾಡುವಂತೆ ಜನ ದೂರು ನೀಡಿದ್ರೂ ಯಾವುದೇ ಪ್ರಯೋಜನವಾಗಲಿಲ್ಲ. ಇದೀಗ ಶಾಸಕರೇ ಪತ್ರ ಬರೆದಿದ್ದಾರೆ. ಗಂಗಾವತಿಯಲ್ಲಿನ 22 ಸಿಎಲ್ – 2 ಬಾರ್ ಗಳು ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಮತ್ತವರ ಪತ್ನಿ ಹೆಸರಲ್ಲಿವೆ. ಇದರಿಂದ ಅಬಕಾರಿ ಅಧಿಕಾರಿಗಳು ಶಾಸಕರ ಪತ್ರಕ್ಕೆ ಕ್ಯಾರೆ ಎಂದಿಲ್ಲ. ಅಬಕಾರಿ ಅಧಿಕಾರಿಗಳು ಶಾಸಕರ ಪತ್ರದ ಬಗ್ಗೆ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಗಮನಕ್ಕೆ ತಂದಿದ್ದಾರಂತೆ. ಯಾರು ಹೇಳಿದ್ರೂ ನಾನು ಹೆಚ್ಚುವರಿ ದರಕ್ಕೆ ಮಾರಾಟ ಮಾಡುತ್ತೇನೆ ಎನ್ನುತ್ತಿದ್ದಾರಂತೆ ಅನ್ಸಾರಿ ಸಾಹೇಬ್ರು. ಇದರಿಂದ ಅಧಿಕಾರಿಗಳು ಸಂದಿಗ್ಧ ಸ್ಥಿತಿಗೆ ತಲುಪಿದ್ದಾರೆ.

  • ಇಕ್ಬಾಲ್ ಅನ್ಸಾರಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ: ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ

    ಇಕ್ಬಾಲ್ ಅನ್ಸಾರಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ: ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ

    ಕೊಪ್ಪಳ: ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಎಂದು ಗಂಗಾವತಿಯ ನೂತನ ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ ವ್ಯಂಗ್ಯವಾಡಿದ್ದಾರೆ.

    ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡಿರುವ ಇಕ್ಬಾಲ್ ಅನ್ಸಾರಿ ಹತಾಶರಾಗಿದ್ದಾರೆ. ಈ ಕಾರಣಕ್ಕೆ ಅವರ ಬೆಂಬಲಿಗರಿಗೆ ಕುಮ್ಮಕ್ಕು ನೀಡಿ ಕೋಮು ಗಲಭೆ ಮಾಡಿಸ್ತಿದ್ದಾರೆ. ಚುನಾವಣೆಯಲ್ಲಿ ಸೋತಿದ್ದರೂ, ನಮ್ಮ ಸರ್ಕಾರ ಇದೆ ಅಭಿವೃದ್ಧಿ ಮಾಡ್ತಿನಿ ಅಂತಿದ್ದಾರೆ. ಅನ್ಸಾರಿ ಹತಾಶರಾಗಿದ್ದು, ತಮ್ಮ ಬೆಂಬಲಿಗರ ಮೂಲಕ ಅಮಾಯಕರ ಮನೆ ಮುಂದೆ ಪಟಾಕಿ ಹೊಡೆದು ಗಲಭೆ ಮಾಡಿಸ್ತಿದ್ದಾರೆ ಎಂದು ಪರಣ್ಣ ಆರೋಪಿಸುತ್ತಿದ್ದಾರೆ.

    ನಾವು ಗೆದ್ದ ಮೇಲೆ ಶಾಂತಿ ಸುವ್ಯವಸ್ಥೆ ಕಾಪಾಡಲು ಸಂಭ್ರಮಾಚಾರಣೆಯನ್ನು ಮಾಡಿಲ್ಲ. ಗಂಗಾವತಿಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವುದು ನಮ್ಮ ಕರ್ತವ್ಯ. ಹಿಂದೂ ಧರ್ಮಕ್ಕೆ ದಕ್ಕೆ ಉಂಟುಮಾಡುವ ಯಾರನ್ನೇ ಆಗಲಿ ನಾವು ಬಿಡುವುದಿಲ್ಲಾ. ಅಂತವರ ವಿರುದ್ಧ ಕಾನೂನು ಹೋರಾಟ, ಪ್ರತಿಭಟನೆ ಮಾಡುತ್ತೇವೆ ಎಂದು ನೂತನ ಶಾಸಕರು ಎಚ್ಚರಿಕೆ ನೀಡಿದ್ರು.

    ಸಿಎಂ ಸ್ಥಾನಕ್ಕೆ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ನೀಡಿದ ಹಿನ್ನೆಲೆ, ಜೆಡಿಎಸ್-ಕಾಂಗ್ರೆಸ್ ಸರ್ಕಾರ ರಚನೆಯಾಗುತ್ತದೆ ಎಂದು ಮಾಜಿ ಶಾಸಕ ಅನ್ಸಾರಿ ಬೆಂಬಲಿಗರು ವಿಜಯೋತ್ಸವದ ಆಚರಿಸಿದ್ದರು. ವಿಜಯೋತ್ಸವದ ವೇಳೆ ಅತಿರೇಕದಿಂದ ವರ್ತಿಸಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತತು ಆರೋಪಿಸುತ್ತಿದ್ದಾರೆ. ಒಟ್ಟಾರೆಯಾಗಿ ಗಂಗಾವತಿಯಲ್ಲಿ ವಿಜಯೋತ್ಸವದ ವೇಳೆ ಶನಿವಾರ ನಡೆದ ಕಾಂಗ್ರೆಸ್- ಬಿಜೆಪಿ ಕಾರ್ಯಕರ್ತರ ನಡುವಿನ ಘರ್ಷಣೆಗೆ ಸಂಬಂಧಿಸಿದಂತೆ ನಾಲ್ಕು ಪ್ರಕರಣಗಳು ದಾಖಲಾಗಿದ್ದು, 15 ಜನರನ್ನು ಪೊಲೀಸರು ಬಂಧಿಸಿದ್ದಾರೆ.

  • ನಿಮ್ಮೂರಲ್ಲಿ ವೋಟು ಬಂದಿಲ್ಲ, ಅಭಿವೃದ್ಧಿಗೆ ಅನುದಾನ ನೀಡಲ್ಲ: ಅನ್ಸಾರಿ

    ನಿಮ್ಮೂರಲ್ಲಿ ವೋಟು ಬಂದಿಲ್ಲ, ಅಭಿವೃದ್ಧಿಗೆ ಅನುದಾನ ನೀಡಲ್ಲ: ಅನ್ಸಾರಿ

    ಕೊಪ್ಪಳ: ನಿಮ್ಮೂರಿನಲ್ಲಿ ನನಗೆ ವೋಟ್ ಬಂದಿಲ್ಲ. ಹದಿನೈದಿಪ್ಪತ್ತು ವೋಟ್ ಬಂದ್ರೆ ಕೆಲಸ ಮಾಡಲು ಆಗುತ್ತಾ ಎಂದು ಪ್ರಶ್ನಿಸುವ ಮೂಲಕ ಕೈ ನಾಯಕ ಇಕ್ಬಾಲ್ ಅನ್ಸಾರಿ ಸಂವಿಧಾನ ವಿರೋಧಿ ನಡೆ ಅನುಸರಿಸಿದ್ದಾರೆ.

    ಗಂಗಾವತಿ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಅನ್ಸಾರಿ ಬಾಯಿಂದಲೇ ಇಂಥ ಸಂವಿಧಾನ ವಿರೋಧಿ ಹೇಳಿಕೆ ಹೊರ ಬಿದ್ದಿದೆ. ನನಗೆ ವೋಟ್ ಹಾಕದ ಗ್ರಾಮಕ್ಕೆ ಅಭಿವೃದ್ಧಿಗಾಗಿ ಅನುದಾನ ನೀಡಲ್ಲ ಎಂದು ಅವರು ಬಹಿರಂಗವಾಗಿಯೇ ಹೇಳಿದ್ದಾರೆ.

    ಗಂಗಾವತಿ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯ ಇಂದಿರಾನಗರ ಗ್ರಾಮದಲ್ಲಿ ಶನಿವಾರ ಅನ್ಸಾರಿ ಪ್ರಚಾರಕ್ಕೆ ತೆರಳಿದ್ದಾರೆ. ಈ ವೇಳೆ ಜನ, ಕಳೆದ ಬಾರಿ ಬಂದಾಗ ಮಸೀದಿ ಅಭಿವೃದ್ಧಿಗೆ ಹಣ ನೀಡುತ್ತೇನೆ ಎಂದು ಭರವಸೆ ನೀಡಿದ್ದೀರಿ. ಆದರೆ ಇದೂವರೆಗೆ ಹಣ ಬಿಡುಗಡೆ ಮಾಡಿಲ್ಲ ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ.

    ಈ ಪ್ರಶ್ನೆಗೆ ಅನ್ಸಾರಿ,  2013ರಲ್ಲಿ ನನಗೆ ನಿಮ್ಮ ಗ್ರಾಮದವರು ಎಷ್ಟು ಮತ ನೀಡಿದ್ದೀರಿ ಎಂದು ಮರು ಪ್ರಶ್ನೆ ಹಾಕಿದ್ದಾರೆ. ಅಲ್ಲದೇ ನಿಮ್ಮೂರಲ್ಲಿ ಕೇವಲ 15 ರಿಂದ 20 ವೋಟ್ ಮಾತ್ರ ಬಂದಿವೆ. ಇಷ್ಟು ವೋಟ್ ಹಾಕಿದ್ರೆ ಕೆಲಸ ಮಾಡಲು ಆಗುತ್ತಾ ಎಂದು ಉತ್ತರಿಸಿದ್ದಾರೆ. ಕೊನೆಗೆ ಈ ಸಲ ನನ್ನ ಜೊತೆ ಇರಿ ಎಲ್ಲ ಮಾಡೋಣ ಎಂದು ಹೇಳಿ ಅಲ್ಲಿಂದ ಕಾಲ್ಕಿತ್ತಿದ್ದಾರೆ.

    https://www.youtube.com/watch?v=CGrl__faRx0

  • 2ನೇ ಮದ್ವೆ ಬಗ್ಗೆ ದಾಖಲೆ ಸಮೇತ ಅಣ್ಣನ ಅಸಲಿ ಬಣ್ಣ ಬಯಲು ಮಾಡಿದ ಶಾಸಕ ಅನ್ಸಾರಿ ಸಹೋದರರು

    2ನೇ ಮದ್ವೆ ಬಗ್ಗೆ ದಾಖಲೆ ಸಮೇತ ಅಣ್ಣನ ಅಸಲಿ ಬಣ್ಣ ಬಯಲು ಮಾಡಿದ ಶಾಸಕ ಅನ್ಸಾರಿ ಸಹೋದರರು

    ಕೊಪ್ಪಳ: ತಮ್ಮ ಎರಡನೇ ಮದುವೆ ಬಗ್ಗೆ ಪ್ರಶ್ನಿಸಿದ್ದ ವಿರೋಧ ಪಕ್ಷದ ನಾಯಕರು ಮತ್ತು ಮಾಧ್ಯಮಗಳಿಗೆ ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿ, ನಾನು ಹರಾಮ್ ಮಾಡಿಲ್ಲ. ನಮ್ಮ ಧರ್ಮದಲ್ಲಿ ಎರಡನೇ ಮದುವೆಗೆ ಅವಕಾಶ ಇದ್ದು, ಗಂಡಸ್ತನದ ಕೆಲಸ ಮಾಡಿದ್ದೇನೆ ಎಂದಿದ್ದರು.

    ಇದೀಗ ಆ ಶಾಸಕರಿಗೆ ಸ್ವತಃ ಅವರ ಸಹೋದರರೇ ಟಾಂಗ್ ನೀಡಿದ್ದು, ಗಂಡಸ್ತನದ ಬಗ್ಗೆ ಮಾತಾಡಿದ್ದ ಶಾಸಕನ ಅಸಲಿ ಬಣ್ಣವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಗಂಡಸ್ತನದ ಬಗ್ಗೆ ಮಾತನಾಡುವ ನಮ್ಮ ಅಣ್ಣ ಶಾಸಕ ಇಕ್ಬಾಲ್ ಅನ್ಸಾರಿ ಕಿರುತೆರೆ ನಟಿ ಪಂಚಮಿಯನ್ನು ಅಸಲಿಗೆ ಮದುವೆಯೇ ಆಗಿಲ್ಲ ಅಂತಾ ದಾಖಲಾತಿ ಬಿಡುಗಡೆ ಮಾಡಿದ್ದಾರೆ.

    ಕಳೆದ ಚುನಾವಣೆಯಲ್ಲಿ ಪಂಚಮಿ ಶಾಸಕರ ಪರವಾಗಿ ಪ್ರಚಾರ ಕೈಗೊಂಡಿದ್ದರು. ಪಂಚಮಿ ಮತ್ತು ಅನ್ಸಾರಿ ನಡುವಿನ ಸಂಬಂಧ ಇಡೀ ರಾಜ್ಯಕ್ಕೆ ಗೊತ್ತು. ಆದರೆ ದಾಖಲಾತಿಯಲ್ಲಿ ಅವರ ಹೆಸರು ಇನ್ನೂ ಪಂಚಮಿ ತಂದೆ ಗುರುಸ್ವಾಮಿ ಅಂತಾ ಇದೆ. ಕಿರುತೆರೆ ನಟಿ ಪಂಚಮಿಯನ್ನು ನೀವು ಮದುವೆ ಆಗಿದ್ದರೆ. ಯಾಕೆ ನೀವು 2ನೇ ಪತ್ನಿ ಎಂದು ಒಪ್ಪಿಕೊಳ್ಳುತ್ತಿಲ್ಲಾ? ಎಂದು ಸವಾಲು ಹಾಕಿದ್ದಾರೆ. ನೀವು ಮದುವೆಯಾಗದೇ ಆಕೆ ಜೊತೆ ಇದ್ದರೆ ಅದು ಹರಾಮ್ ಅಲ್ಲದೇ ಮತ್ತೇನು ಎಂದು ಟೀಕಿಸಿದ್ದಾರೆ.

    ನಮ್ಮ ತಾಯಿಗೆ ಬೆದರಿಕೆ ಹಾಕಿ, ತಲೆಗೆ ಚಾಕು, ಗನ್ ಇಟ್ಟು ತಮ್ಮ ಪರ ಹೇಳಿಕೆ ಹೇಳಿಸುತ್ತಾರೆ ಅಂತಾ ಸಹೋದರರು ಶಾಸಕರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಚುನಾವಣೆ ಹೊಸ್ತಿಲಲ್ಲಿ ಶಾಸಕ ಇಕ್ಬಾಲ್ ಅನ್ಸಾರಿ ಸಹೋದರರಾದ ಅಜಾದ್ ಅನ್ಸಾರಿ ಮತ್ತು ಅಮ್ಜದ್ ಅನ್ಸಾರಿ ದಾಖಲೆ ಸಮೇತ ಅವರ ಅಣ್ಣನ ಅಸಲಿ ಬಣ್ಣ ಬಯಲು ಮಾಡಿದ್ದಾರೆ. ನಮ್ಮ ಮನೆತನದ ಮಾನ ಮಾರ್ಯಾದೆಯನ್ನು ಹಾಗೂ ನಮ್ಮ ತಂದೆ ಎಂ.ಎಸ್.ಅನ್ಸಾರಿಯವರ ಹೆಸರನ್ನು ಬೀದಿಪಾಲು ಮಾಡಿದ್ದಾರೆ ಎಂದು ಅಣ್ಣ ಇಕ್ಬಾಲ್ ಅನ್ಸಾರಿ ವಿರುದ್ಧ ಹರಿಹಾಯ್ದಿದ್ದಾರೆ.