Tag: ಗಂಗಾವತಿ

  • ಗಂಗಾವತಿ ಕಾಂಗ್ರೆಸ್ ಟಿಕೆಟ್ ಹಿಂದೂ ಅಭ್ಯರ್ಥಿಗೆ ನೀಡಿ – ಸ್ವಪಕ್ಷೀಯರಿಂದ್ಲೇ ಇಕ್ಬಾಲ್ ಅನ್ಸಾರಿಗೆ ಟಕ್ಕರ್

    ಗಂಗಾವತಿ ಕಾಂಗ್ರೆಸ್ ಟಿಕೆಟ್ ಹಿಂದೂ ಅಭ್ಯರ್ಥಿಗೆ ನೀಡಿ – ಸ್ವಪಕ್ಷೀಯರಿಂದ್ಲೇ ಇಕ್ಬಾಲ್ ಅನ್ಸಾರಿಗೆ ಟಕ್ಕರ್

    ಕೊಪ್ಪಳ: ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಮುಸ್ಲಿಮರಿಗೆ ನೀಡಬೇಡಿ. ಆಂಜನೇಯನ ಜನ್ಮ ಸ್ಥಳದಲ್ಲಿ ಹಿಂದೂ ಅಭ್ಯರ್ಥಿಗೆ ಟಿಕೆಟ್ ನೀಡದಿದ್ದರೆ ಸೋಲು ಖಚಿತ!. ಹೀಗೆ ಹೇಳಿದ್ದು ಬಿಜೆಪಿ ಮುಖಂಡರಲ್ಲ. ಸ್ವತಃ ಕಾಂಗ್ರೆಸ್ ಮುಖಂಡರೇ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಮುಂದೆ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ.

    ವರಿಷ್ಠರ ಭೇಟಿಯಾಗಿ ಗಂಗಾವತಿ ಕಾಂಗ್ರೆಸ್ ಮುಖಂಡರು ಮಾತನಾಡಿದ್ದು, ಮಾಜಿ ಸಚಿವ ಇಕ್ಬಾಲ್ ಅನ್ಸಾರಿಗೆ ಕಾಂಗ್ರೆಸ್ ಟಿಕೆಟ್ ನೀಡದಂತೆ ಮನವಿ ಮಾಡಿದ್ದಾರೆ. ಬಿ.ಕೆ.ಹರಿಪ್ರಸಾದ್ ಮುಂದೆ ಕಾಂಗ್ರೆಸ್ ಮುಖಂಡರು ಅಳಲು ತೋಡಿಕೊಂಡ ವೀಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ. ಕಾಂಗ್ರೆಸ್ ಟಿಕೆಟ್ ಪಡೆದು ಕಣಕ್ಕಿಳಿಯುವ ನಿರೀಕ್ಷೆಯಲ್ಲಿರೋ ಇಕ್ಬಾಲ್ ಅನ್ಸಾರಿಗೆ ಶಾಕ್ ನೀಡಿದ್ದಾರೆ. ಇದರಿಂದ ಕೊಪ್ಪಳ ಕಾಂಗ್ರೆಸ್ ನಲ್ಲಿ ಮನೆಯೊಂದು ಮೂರು ಬಾಗಿಲು ಸ್ಥಿತಿ ನಿರ್ಮಾಣ ಆಗಿದೆ.

    ಅಂಜನಾದ್ರಿಯನ್ನ ಅಯೋಧ್ಯೆಯಂತೆ ನಿರ್ಮಾಣ ಮಾಡಲಾಗ್ತಿದೆ. ಅಯೋಧ್ಯೆಯಂತೆ ಅಂಜನಾದ್ರಿಯಲ್ಲೂ ಹಿಂದೂ ಎಂಎಲ್‍ಗೆ ಮಾಡುವ ವ್ಯವಸ್ಥೆ ನಡೆದಿದೆ. ಇಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಟ್ಟರೆ ಗೆಲ್ಲುವ ಪರಿಸ್ಥಿತಿ ಇಲ್ಲ ಎಂದು ಬಿ.ಕೆ.ಹರಿಪ್ರಸಾದ್ ಗೆ ಕಾಂಗ್ರೆಸ್ ಮುಖಂಡರು ಮನವರಿಕೆ ಮಾಡಿದ್ದಾರೆ. ಈ ವೇಳೆ ಹರಿಪ್ರಸಾದ್, ನಾನು ಕಾಂಗ್ರೆಸ್ ನಲ್ಲೇ ಹಿಂದೂ- ಮುಸ್ಲಿಂ ಎಂಬುದನ್ನು ಒಪ್ಪುವುದಿಲ್ಲ ಎಂದಿದ್ದಾರೆ. ಆಗ ಹರಿಪ್ರಸಾದ್ ಮುಂದೆ ಮತ್ತೆ ನೋವು ತೋಡಿಕೊಂಡು, ನಮ್ಮನ್ನು ಸಿದ್ದರಾಮಯ್ಯ ಕೂಡ ಟಾರ್ಗೆಟ್ ಮಾಡಿದ್ರು. ಇಕ್ಬಾಲ್ ಅನ್ಸಾರಿ ಎಚ್.ಜಿ. ರಾಮುಲುರನ್ನು ಕಡೆಗಣಿಸಿದ್ರು ಎಂದು ದೂರಿದ್ದಾರೆ.

    ಕಾಂಗ್ರೆಸ್ ಮುಖಂಡ ವೀರಭದ್ರಪ್ಪ ನಾಯಕ, ಮಾಜಿ ಎಂಎಲ್ಸಿ ಕರಿಯಣ್ಣ ಸಂಗಟಿ ಅವರು ದೂರಿದ್ದು, ಎಚ್.ಆರ್.ಶ್ರೀನಾಥ್ ಕಾಂಗ್ರೆಸ್ ಟಿಕೆಟ್ ನೀಡಬೇಕು ಎಂದು ಕೆಲ ಮುಸ್ಲಿಂ ಮುಖಂಡರು ಎಚ್.ಆರ್. ಶ್ರೀನಾಥ್ ಪರ ಬ್ಯಾಟಿಂಗ್ ಮಾಡಿದ್ದಾರೆ. ಇದನ್ನೂ ಓದಿ: ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಸಿಎಂ ಇಬ್ರಾಹಿಂ ಅಧಿಕಾರ ಸ್ವೀಕಾರ

  • ಹೆಚ್‍ಡಿಕೆ ಸದನದಲ್ಲಿ ಸದ್ದು ಮಾಡಿದ್ರೂ ನಿಂತಿಲ್ಲ ಜೂಜಾಟ- ಪೊಲೀಸ್ ಅಧಿಕಾರಿಯೇ ಕಿಂಗ್‍ಪಿನ್

    ಹೆಚ್‍ಡಿಕೆ ಸದನದಲ್ಲಿ ಸದ್ದು ಮಾಡಿದ್ರೂ ನಿಂತಿಲ್ಲ ಜೂಜಾಟ- ಪೊಲೀಸ್ ಅಧಿಕಾರಿಯೇ ಕಿಂಗ್‍ಪಿನ್

    ಕೊಪ್ಪಳ: ನಗರದ ಗಂಗಾವತಿ ತಾಲೂಕಿನ ವಿವಿಧ ಕಡೆ ಇಸ್ಪೀಟ್ ಜೂಜಾಟ ನಡೆಯುತ್ತಿದ್ದು, ಈ ಬಗ್ಗೆ 2 ದಿನದ ಹಿಂದಷ್ಟೇ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸದನದಲ್ಲಿ ಚರ್ಚೆ ಮಾಡಿದ್ದರು.

    ಆದರೂ ಗಂಗಾವತಿ ತಾಲೂಕಿನ ಮಲ್ಲಾಪುರ ಗ್ರಾಮದ ಹೊರವಲಯದಲ್ಲಿ ಇಸ್ಪೀಟ್ ಆಡುವ ದೃಶ್ಯ ವೈರಲ್ ಆಗಿದೆ. ಇನ್ನು ವಾನಭದ್ರಪ್ಪ ದೇವಸ್ಥಾನ, ಆರಾಳ ಮಲಕನಮರಡಿ ಗುಡ್ಡ, ಹೇರೂರು ಕೆಸರಹಟ್ಟಿ ಕಾಲುವೆ, ಕೊರಂಕ್ಯಾಂಪ್ ಕಡೇಬಾಗಿಲು, ವಿದ್ಯಾನಗರ ಚಿಕ್ಕಜಂತಕಲ್, ವೆಂಕಟಗಿರಿ ಗುಡ್ಡದ ಸೇರಿ ಹತ್ತಾರು ಕಡೆ ದಿನವೂ ರಾತ್ರಿ ಅಂದರ್ ಬಾಹರ್ ಜೂಜಾಟ ನಡೆಯುತ್ತದೆ. ಇದನ್ನೂ ಓದಿ: ಸದನ ಬೀಗರ ಮನೆಯಲ್ಲ – ಸಚಿವರ ಗೈರಿಗೆ ಸಭಾಪತಿಗಳು ಗರಂ

    Ispit cards

    ಪ್ರತಿಯೊಬ್ಬ ಜೂಜುಕೋರರಿಗೆ 2 ಸಾವಿರ ರೂಪಾಯಿ ಪ್ರವೇಶ ಶುಲ್ಕ ನಿಗದಿ ಮಾಡಿದ್ದು, ನೆರೆಯ ಹೊಸಪೇಟೆ, ಸಿಂಧನೂರು, ಬಳ್ಳಾರಿ ಮತ್ತು ಆಂಧ್ರ ಪ್ರದೇಶದಿಂದ ಜೂಜುಕೋರರು ಬರುತ್ತಾರೆ. ಗಂಗಾವತಿ ಗ್ರಾಮೀಣ ಠಾಣೆ ಪಿಐ ಉದಯ ರವಿ ಅವರೇ ಕಿಂಗ್‍ಪಿನ್ ಎಂಬ ಗಂಭೀರ ಆರೋಪ ಕೇಳಿ ಬರುತ್ತಿದೆ. ಇದನ್ನೂ ಓದಿ: ಸಭಾಪತಿ ಹೊರಟ್ಟಿ ವಿರುದ್ಧ FIR ದಾಖಲಿಸಿದ್ದ ಇನ್ಸ್‌ಪೆಕ್ಟರ್‌ ಅಮಾನತು

    ಅಂದರ್ ಬಾಹರ್ ದಂಧೆಕೋರರ ಜೊತೆ ಪೊಲೀಸ್ ಅಧಿಕಾರಿ ನಂಟು ಇದೆ ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಕೂಡ ಆರೋಪಿಸಿದ್ದರು. ಈ ಬಗ್ಗೆ ಕ್ರಮಕ್ಕೆ ಎಸ್ಪಿ ಮುಂದಾಗುತ್ತಾರೆಯೇ ಕಾದು ನೋಡಬೇಕಿದೆ.

  • ಆಂಜನೇಯನ ಜನ್ಮಭೂಮಿ ಹೈಜಾಕ್ – ಬಿಜೆಪಿ ಯಾಕೆ ಸುಮ್ಮನಿದೆ ಉಗ್ರಪ್ಪ ಪ್ರಶ್ನೆ

    ಆಂಜನೇಯನ ಜನ್ಮಭೂಮಿ ಹೈಜಾಕ್ – ಬಿಜೆಪಿ ಯಾಕೆ ಸುಮ್ಮನಿದೆ ಉಗ್ರಪ್ಪ ಪ್ರಶ್ನೆ

    ದಾವಣಗೆರೆ: ಆಂಜನೇಯನ ಜನ್ಮಭೂಮಿ ಹೈಜಾಕ್ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ವಿ.ಎಸ್.ಉಗ್ರಪ್ಪ ಕಿಡಿಕಾರಿದರು.

    ಶ್ರೀ ಆಂಜನೇಯ ಜನ್ಮಭೂಮಿ ವಿವಾದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗಂಗಾವತಿಯ ಕಿಷ್ಕಿಂದೆ ಆಂಜನಾದ್ರಿ ಬೆಟ್ಟವೇ ಹನುಮನ ನಿಜವಾದ ಜನ್ಮಭೂಮಿ. ತಿರುಪತಿಯಲ್ಲಿ ವಿನಾಕರಣ ವಿವಾದ ಸೃಷ್ಠಿ ಮಾಡಲಾಗುತ್ತಿದೆ. ಆಂಜನೇಯನ ಜನ್ಮಭೂಮಿಯನ್ನೆ ಹೈಜಾಕ್ ಮಾಡಲಾಗುತ್ತಿದೆ. ಕೋಟ್ಯಂತರ ಭಕ್ತರ ಭಾವನೆಯ ಪ್ರಶ್ನೆ ಇದಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ:  ಟ್ರ್ಯಾಕ್ಟರ್ ಬಳಸಿ ರಷ್ಯಾದ ಮಿಲಿಟರಿ ಟ್ಯಾಂಕ್ ಹೊತ್ತೊಯ್ದ ರೈತ

    ಪ್ರಧಾನಿ ಮೋದಿ ಅವರ ಶ್ರೀಮತಿಯವರು ಸಹ ಇಲ್ಲಿಗೆ ಭೇಟಿ ನೀಡಿದ್ದಾರೆ. ರಾಮ ಜನ್ಮಭೂಮಿ ಬಗ್ಗೆ ತಲೆಕೆಡಿಸಿಕೊಂಡಿದ್ದ ಬಿಜೆಪಿ ಇಲ್ಲಿ ಯಾಕೆ ಮೌನ ವಹಿಸಿದೆ. ಯಾಕೆ RSS ಕೇಂದ್ರ, ರಾಜ್ಯ ಸರ್ಕಾರ ಖಂಡಿಸುತ್ತಿಲ್ಲ? ಸುಮ್ಮನಿದ್ದರೆ ಒಪ್ಪಿಕೊಂಡಂತೆ ಅಲ್ವಾ ಎಂದು ವ್ಯಂಗ್ಯವಾಡಿದರು.

    ನಾವು ಬಿಜೆಪಿ ಅವರ ತರ ವೋಟ್ ಬ್ಯಾಂಕ್ ರಾಜಕಾರಣ ಮಾಡಲ್ಲ. ಭಕ್ತಿ ಮತ್ತು ಶ್ರದ್ಧೆಯ ಪ್ರತೀಕ ಆಂಜನೇಯ. ಆಂಜನೇಯನ ನೈಜ ಜನ್ಮಭೂಮಿ ಅಭಿವೃದ್ಧಿ ಮಾಡುವ ಕೆಲಸ ಎಲ್ಲರಿಂದ ಆಗಲಿ. ತಿರುಪತಿಗೆ ಆಂಜನೇಯ ಬಂದು ಹೋಗಿರಬಹುದು. ಆದರೆ ನಿಜವಾದ ಹುಟ್ಟು ಕರ್ನಾಟಕದ ಕಿಷ್ಕಿಂದೆಯಲ್ಲಿದೆ. ಈ ಹಿನ್ನೆಲೆ ಗಂಗಾವತಿಯ ಆಂಜನಾದ್ರಿಬೆಟ್ಟ ಅಭಿವೃದ್ಧಿಪಡಿಸಲಿ ಎಂದು ಆಗ್ರಹಿಸಿದರು.

    ರಾಷ್ಟ್ರದಲ್ಲಿ ರಾಮ ಜನ್ಮಭೂಮಿ ಬಗ್ಗೆ ವಾದ ನಡೀತಾ ಇದೆ. ಸಂಘರ್ಷದ ಬಳಿಕ ರಾಮಮಂದಿರ ಕಟ್ಟಲಾಗ್ತಿದೆ. ಇಡೀ ವಿಶ್ವಕ್ಕೆ ರಾಮನ ಪರಿಚಯ ಮಾಡಿದ್ದು ಮಹರ್ಷಿ ವಾಲ್ಮೀಕಿ. ಆದರೆ ವಾಲ್ಮೀಕಿಯನ್ನು ಆಧುನಿಕ ರಾಮಭಕ್ತರು ಮರೆತಿದ್ದಾರೆ. ತಲಕಾವೇರಿಯಿಂದ ಹಿಡಿದು ಪಶ್ಚಿಮ ಘಟ್ಟಗಳಲ್ಲಿ 4 ಸಾವಿರ ಟಿಎಂಸಿ ನೀರು ಪ್ರಕೃತಿದತ್ತವಾಗಿ ಶೇಖರಣೆಯಾಗುತ್ತದೆ. ಇಲ್ಲಿಯವರೆಗೂ ಬಳಕೆಯಾಗುವ ನೀರು 2 ಸಾವಿರ ಟಿಎಂಸಿ ನೀರು ಮಾತ್ರ. ಉಳಿದ 2 ಸಾವಿರ ಟಿಎಂಸಿ ನೀರು ಸಮುದ್ರದ ಪಾಲಾಗುತ್ತದೆ ಎಂದು ತಿಳಿಸಿದರು.

    ಕೇಂದ್ರ ಸರ್ಕಾರ ಬಜೆಟ್‍ನಲ್ಲಿ ಅನೌನ್ಸ್ ಮಾಡುತ್ತಾರೆ. ನದಿಗಳ ಜೋಡಣೆ ಮಾಡುತ್ತೇವೆ. ದಕ್ಷಿಣ ಭಾರತದ ನದಿಜೋಡಣೆ ಮಾಡಲು ಹೋಗಿದ್ದಾರೆ. ಇಲ್ಲಿ ಯಾರು ಕೂಡ ಕೇಳಿಲ್ಲ, ಎಷ್ಟು ನೀರು ಇದೆ ಎನ್ನುವುದು ಅವರಿಗೆ ಗೊತ್ತಿಲ್ಲ. ಎಲ್ಲ ನೀರನ್ನು ಪೆನ್ನಾರ್‍ನಲ್ಲಿ ತಂದು ಬಿಡುತ್ತಾರಂತೆ. ಕರ್ನಾಟಕವನ್ನು ನೀರಿನ ವಿಚಾರವಾಗಿ ಏನು ಬೇಕಾದರೂ ಮಾಡಬಹುದು ಎಂದು ಕೇಂದ್ರ ಸರ್ಕಾರ ತಿಳಿದಿದೆ. ಯಾರ ಅಭಿಪ್ರಾಯ ಸಂಗ್ರಹಿಸದೆ ನದಿ ಜೋಡಣೆಗೆ ಕೈ ಹಾಕಿದ್ದಾರೆ ಎಂದರು. ಇದನ್ನೂ ಓದಿ: ನಾಯಕರಿಗಿಲ್ಲದ ವಯಸ್ಸು ನಾಯಕಿಗೇಕೆ? ಲಾರಾ ದತ್ತ ಪ್ರಶ್ನೆ

    ಇದು ಏನಾದ್ರು ಜಾರಿಯಾದರೆ ಕರ್ನಾಟಕಕ್ಕೆ ದೊಡ್ಡ ಪೆಟ್ಟು ಬೀಳುತ್ತದೆ. ಲಾಭ ಆಗುವುದು ತಮಿಳುನಾಡು ಹಾಗೂ ಆಂಧ್ರಕ್ಕೆ ಮಾತ್ರ. ಕರ್ನಾಟಕದಲ್ಲಿ ಸಾಕಷ್ಟು ನೀರಾವರಿ ಯೋಜನೆಗಳು ಇವೆ ಅದನ್ನು ಬಿಟ್ಟಿದ್ದಾರೆ. ಈಗ ಇರುವ ಯೋಜನೆಗಳ ಬಗ್ಗೆ ಜನಾಭಿಪ್ರಾಯ ಪಡೆಯದೆ ಅಂತರಾಜ್ಯ ಯೋಜನೆಗಳ ಜಾರಿಗೆ ತಂದಿದ್ದಾರೆ. ಇದರಲ್ಲಿ ಪೊಲಿಟಿಕಲ್ ವಿಲ್ ಎಷ್ಟು ಇದೆ ಎಂದು ಕೇಳುತ್ತಿದ್ದೇವೆ ಎಂದು ಸಂಶಯ ವ್ಯಕ್ತಪಡಿಸಿದರು.

  • ವಿದ್ಯಾರ್ಥಿಗಳು ತರಗತಿಗೆ ಚಕ್ಕರ್, ರೊಮ್ಯಾನ್ಸ್​ಗೆ ಹಾಜರ್

    ವಿದ್ಯಾರ್ಥಿಗಳು ತರಗತಿಗೆ ಚಕ್ಕರ್, ರೊಮ್ಯಾನ್ಸ್​ಗೆ ಹಾಜರ್

    ಕೊಪ್ಪಳ: ಆತ ಪ್ರೇಮಿಯೇ ಇರಲಿ, ಪತಿಯೇ ಆಗಿರಲಿ. ತನ್ನ ಹೊರತಾಗಿ ಬೇರೊಂದು ಹೆಣ್ಣನ್ನು ಕಣ್ಣೆತ್ತಿ ನೋಡಿದ್ರೂ ಸಿಡಿಮಿಡಿಗೊಳ್ಳುವುದು ಭಾರತೀಯ ಹೆಣ್ಣು ಮಕ್ಕಳ ಹುಟ್ಟುಗುಣ. ಆದರೆ ಇಲ್ಲೊಂದು ಕಡೆ ಅಕ್ಕ ಪಕ್ಕ ಕುಳಿತು ಇಬ್ಬರು ಯುವತಿಯರನ್ನು ಒಬ್ಬನೇ ಮುದ್ದಾಡುವ ದೃಶ್ಯ ಸಾಮಾನ್ಯವಾಗಿದ್ದು, ಇದು ಸ್ವಾತಂತ್ರ್ಯನಾ? ಸ್ವೇಚ್ಚಾಚಾರವೇ ಎಂಬ ಪ್ರಶ್ನೆ ಮೂಡಿದೆ.

    ಕೊಪ್ಪಳದ ಗಂಗಾವತಿಯ ನ್ಯಾಯಾಧೀಶರ ನಿವಾಸ ಹಾಗೂ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಹಿಂದಿನ ಜಾಗವನ್ನು ಕಾಲೇಜ್ ವಿದ್ಯಾರ್ಥಿಗಳು ಪ್ರಣಯದ ಅಡ್ಡ ಮಾಡಿಕೊಂಡಿದ್ದಾರೆ. ಗಂಗಾವತಿಯ ಎಸ್.ಕೆ.ಎನ್.ಜಿ ಸರ್ಕಾರಿ ಪದವಿ ಕಾಲೇಜು ಸೇರಿ ಪಟ್ಟಣದ ವಿವಿಧ ಕಾಲೇಜು ವಿದ್ಯಾರ್ಥಿಗಳ ಈ ನಡೆ ಬಗ್ಗೆ ಸಾರ್ವಜನಿಕರು ಮತ್ತು ಅಯ್ಯಪ್ಪನ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:   ಪಾರ್ಕಿನಲ್ಲಿ ಆಟ ಆಡುವಾಗ ವಿದ್ಯುತ್ ತಗುಲಿ ಬಾಲಕ ಸಾವು

    ಕಾಲೇಜಿಗೆ ಚಕ್ಕರ್ ಹಾಕಿ ವಿದ್ಯಾರ್ಥಿಗಳು ಲವ್ವಿ ಡವ್ವಿ ಆಟದಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಅಯ್ಯಪ್ಪ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಮುಜುಗರವಾದರೂ ಕಾಣದಂತೆ ಸುಮ್ಮನಿರುತ್ತಾರೆ. ಅಯ್ಯಪ್ಪನ ಸನ್ನಿಧಿಯಲ್ಲಿ ಕಾಲೇಜು ವಿದ್ಯಾರ್ಥಿಗಳು ಈ ರೀತಿ ಮಾಡೋದು ಎಷ್ಟು ಸರಿ? ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ. ಇದನ್ನೂ ಓದಿ: ಶಾಹೀನ್ ಚಂಡಮಾರುತ- ಅ.3ರ ವರೆಗೆ ರಾಜ್ಯದಲ್ಲಿ ಭಾರೀ ಮಳೆ

    ದಾರಿ ತಪ್ಪುತ್ತಿರೋ ವಿದ್ಯಾರ್ಥಿಗಳಿಗೆ ಕಾಡಿವಾಣ ಹಾಕವಂತೆ ಸಾರ್ವಜನಿಕರು ಮತ್ತು ಅಯ್ಯಪ್ಪ ಸ್ವಾಮಿ ದೇವಾಲಯದ ಅಧ್ಯಕ್ಷ ಜಟ್ಟಿ ವೀರಪ್ಪ ಪ್ರಸಾದ್ ಮನವಿ ಮಾಡಿಕೊಂಡಿದ್ದಾರೆ. ಈ ಕುರಿತು ಸ್ವತಃ ನ್ಯಾಯಾಧೀಶರೇ ಪೊಲೀಸರ ಗಮನಕ್ಕೆ ತಂದಿದ್ದರೂ ಅವರು ಎಚ್ಚೆತ್ತುಕೊಳ್ಳುತ್ತಿಲ್ಲ.

  • ಒಂದೇ ಬೃಂದಾವನಕ್ಕೆ ಇಬ್ಬರ ತೀರ್ಥರ ಹೆಸರು – ಆರಾಧನೆಯಲ್ಲಿ ಉಂಟಾದ ಗೊಂದಲ

    ಒಂದೇ ಬೃಂದಾವನಕ್ಕೆ ಇಬ್ಬರ ತೀರ್ಥರ ಹೆಸರು – ಆರಾಧನೆಯಲ್ಲಿ ಉಂಟಾದ ಗೊಂದಲ

    ಕೊಪ್ಪಳ: ನವಬೃಂದಾವನ ಗಡ್ಡೆಯಲ್ಲಿರುವ ಶ್ರೀಗಳ ಬೃಂದಾವನಗಳಲ್ಲಿ ಒಂದು ಬೃಂದಾವನಕ್ಕೆ ರಾಯರ, ಉತ್ತಾರಾಧಿ ಮಠದ ಅರ್ಚಕರು ಪೂಜೆ ವಿಚಾರವಾಗಿ ಗಲಾಟೆ ನಡೆಸಿರುವ ವಿಡಿಯೋ ವೈರಲ್ ಆಗಿದೆ.

    ಕೊಪ್ಪಳದ ಗಂಗಾವತಿ ತಾಲೂಕಿನ ಆನೆಗೊಂದಿ ಬಳಿರುವ ನವಬೃಂದಾವನ ಗಡ್ಡೆಯಲ್ಲಿ ಇತಿಹಾಸ ಕಾಲದ ತೀರ್ಥರ ಬೃಂದಾವನಗಳು ಇವೆ. ಅವರಿಗೆ ಭಕ್ತರು ಪೂಜೆಯನ್ನು ಸಲ್ಲಿಸಿ, ಶ್ರೀಗಳ ಆಶೀರ್ವಾದ ಪಡೆದುಕೊಳ್ಳುತ್ತಾರೆ. ಅದರಂತೆ ಗುರುವಾರದಂದು ಜಯತೀರ್ಥರ ಆರಾಧನೆ ಇದ್ದಿದ್ದು, ಆರಾಧನೆಯ ಪೂಜೆಯನ್ನು ಸಲ್ಲಿಸಲು ರಾಯರ ಮಠದ ಅರ್ಚಕರು ಹಾಗೂ ಭಕ್ತರು ನವಬೃಂದಾವನ ಗಡ್ಡೆಗೆ ಆಗಮಿಸಿ ಪೂಜೆ ಸಲ್ಲಿಸಲು ಮುಂದಾಗಿದ್ದಾರೆ. ಆಗ ಉತ್ತಾರಾಧಿ ಮಠದ ಅರ್ಚಕರು, ರಾಯರ ಮಠದ ಅರ್ಚಕರಿಗೆ ಪೂಜೆ ಮಾಡಲು ಅವಕಾಶ ನೀಡಲಿಲ್ಲ. ನೀವು ಪೂಜೆ ಮಾಡಲು ಹೊರಟಿರುವ ಬೃಂದಾವನವು ಜಯತೀರ್ಥರ ಬೃಂದಾವನ ಅಲ್ಲ. ಅದು ರಘುವೀರ ತೀರ್ಥರ ಬೃಂದಾವನವಾಗಿದೆ. ಆ ಬೃಂದಾವನಕ್ಕೆ ನೀವು ಪೂಜೆ ಮಾಡುವಂತಿಲ್ಲ. ಜಯತೀರ್ಥರ ಬೃಂದಾವನ ಮಳಖೇಡನಲ್ಲಿದೆ. ಅಲ್ಲಿ ಆರಾಧನೆಯನ್ನ ಮಾಡಬೇಕು ಎಂದು ಅಡ್ಡಿಪಡಿಸಿದ್ದಾರೆ.

    ಉತ್ತಾರಾಧಿ ಮಠದ ಅರ್ಚಕರು ಪೂಜೆಗೆ ನಿರಾಕರಿಸಿದ್ದರೂ ಕೂಡ ರಾಯರ ಮಠದ ಅರ್ಚಕರು ಮಳಖೇಡದಲ್ಲಿ ಇರುವುದು ಜಯತೀರ್ಥರ ಮೂಲ ಬೃಂದಾವನ ಅಲ್ಲ. ಮೂಲ ಬೃಂದಾವನ ಇರುವುದು ನವಬೃಂದಾವನದಲ್ಲಿಯೇ ನೀವು ಹೇಳುವ ಪ್ರಕಾರ ರಘುವೀರ ತೀರ್ಥರ ಬೃಂದಾವನ ಇದಲ್ಲ. ಇದು ಜಯತೀರ್ಥರ ಬೃಂದಾವನ ಎಂದು ಪಟ್ಟು ಹಿಡಿದ್ದಿದ್ದಾರೆ. ಈ ರೀತಿಯಾಗಿ ಎರಡು ಮಠದ ಅರ್ಚಕರ ನಡುವೆ ಮಾತಿನ ಚಕಮಕಿ ನಡೆದ ವೀಡಿಯೋ ಸದ್ಯ ವೈರಲ್ ಆಗಿದ್ದು, ಭಕ್ತರಲ್ಲಿ ಗೊಂದಲವನ್ನು ಉಂಟು ಮಾಡಿದೆ. ಇದನ್ನೂ ಓದಿ: ಹಿಂದೂಸ್ತಾನ್ ಪೆಟ್ರೋಲಿಯಂಗೆ ಸೇರಿದ ಪೈಪ್ ಲೈನ್‍ಗೆ ಕನ್ನ

  • ಬೊಮ್ಮಾಯಿ ಸಂಪುಟದಲ್ಲಿ ನಾನು ಕೂಡ ಸಚಿವಾಕಾಂಕ್ಷಿ: ಪರಣ್ಣ ಮುನವಳ್ಳಿ

    ಬೊಮ್ಮಾಯಿ ಸಂಪುಟದಲ್ಲಿ ನಾನು ಕೂಡ ಸಚಿವಾಕಾಂಕ್ಷಿ: ಪರಣ್ಣ ಮುನವಳ್ಳಿ

    ಕೊಪ್ಪಳ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ನಾನು ಕೂಡ ಸಚಿವನಾಗುವ ಆಕಾಂಕ್ಷಿ ಎಂದು ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಹೇಳಿದ್ದಾರೆ.

    ಇಂದು ಗಂಗಾವತಿಯಲ್ಲಿ ಬೊಮ್ಮಾಯಿಯವರಿಗೆ ಅಭಿನಂದನೆ ಸಲ್ಲಿಸುವ ಹಿನ್ನೆಲೆಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ತಾವು ಸಚಿವಾಕಾಂಕ್ಷಿಗಳು ಎಂದು ತಿಳಿಸಿದ್ದಾರೆ. ಕೊಪ್ಪಳ ಜಿಲ್ಲೆಗೆ ಸಚಿವ ಸ್ಥಾನ ನೀಡಬೇಕು, ನೀಡುತ್ತಾರೆ ಎಂಬ ವಿಶ್ವಾಸವಿದೆ. ಅದು ಗಂಗಾವತಿ ಕ್ಷೇತ್ರಕ್ಕೆ ನೀಡುತ್ತಾರೆ. ಖಂಡಿತವಾಗಿ ಗಂಗಾವತಿಗೆ ಸಚಿವ ಸ್ಥಾನ ಸಿಗುತ್ತದೆ, ನಾನು ಪಾಸಿಟಿವ್ ಆಗಿದ್ದೇನೆ. ಕೊಡದಿದ್ದರೆ ಎಂಬ ನೆಗಟಿವ್ ವಿಚಾರವಿಲ್ಲ, ಕೊಡದಿದ್ದರೆ ಮುಂದೆ ಎಂಬ ಪ್ರಶ್ನೆಯೇ ಇಲ್ಲ. ಕೊಡದಿದ್ದರೆ ಪಕ್ಷದ ಸಿದ್ದಾಂತಕ್ಕೆ ಬದ್ದ ಎಂದರು.

    ಇತ್ತೀಚಿನ ಮೊಟ್ಟೆ ಡೀಲ್ ಪ್ರಕರಣದ ಬಗ್ಗೆಯೂ ಮಾತನಾಡಿದ ಅವರು, ಈ ಪ್ರಕರಣದ ಬಗ್ಗೆ ನ್ಯಾಯಾಲಯಕ್ಕೆ ಹೋಗಿದ್ದೇವೆ. ನ್ಯಾಯಾಲಯವು ತೀರ್ಮಾನ ತೆಗೆದುಕೊಳ್ಳುತ್ತದೆ. ಇದು ಕೆಲವು ಗ್ರಾಫಿಕ್ ಗಳು ಇರಬಹುದು ನನಗೆ ಗೊತ್ತಿಲ್ಲ. ಈ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಗಂಗಾವತಿ ಕ್ಷೇತ್ರದ ಕೆಲವರು ನನ್ನ ಮೇಲೆ ಅತಿ ಪ್ರೀತಿಯಿಂದಾಗಿ ಈ ಪ್ರಕರಣದಲ್ಲಿ ಸಿಕ್ಕಿಸಿದ್ದಾರೆ. ಅವರಿಗೆ ದೇವರು ಒಳ್ಳೆಯದು ಮಾಡಲಿ. ಇದು ರಾಜಕೀಯ ಪ್ರೇರಿತವಾಗಿ ಮಾಡಿರುವ ಪ್ರಕರಣ. ಕೊನೆಯದಾಗಿ ಕ್ಷೇತ್ರದ ಜನತೆಯೇ ತೀರ್ಮಾನ ಮಾಡುತ್ತಾರೆ. ಅವರ ತೀರ್ಮಾನವೇ ಅಂತಿಮ ಎಂದು ಶಾಸಕರು ಹೇಳಿದರು.

  • ಯುವಕನ ಕೊಲೆಗೈದು ಯುವತಿಗೆ ಬೇರೆಯವನ ಜೊತೆ ನಿಶ್ಚಿತಾರ್ಥಕ್ಕೆ ಸಿದ್ಧತೆ..!

    ಯುವಕನ ಕೊಲೆಗೈದು ಯುವತಿಗೆ ಬೇರೆಯವನ ಜೊತೆ ನಿಶ್ಚಿತಾರ್ಥಕ್ಕೆ ಸಿದ್ಧತೆ..!

    ಕೊಪ್ಪಳ: ಇಲ್ಲಿನ ಗಂಗಾವತಿ ತಾಲೂಕಿನ ಸಂಗಾಪೂರ ಗ್ರಾಮದ ಹೊರ ವಲಯದ ಮಾವಿನ ತೋಟದಲ್ಲಿ ಯುವಕನೊಬ್ಬನ ಕೊಲೆ ನಡೆದಿದೆ.

    ಕೊಲೆಯಾದ ಯುವಕನನ್ನು ಸಂಗಾಪೂರ ಗ್ರಾಮದ ಹನುಮೇಶ ಬೋವಿ (22) ಎಂದು ಗುರುತಿಸಲಾಗಿದೆ. ಕೊಲೆಯಾಗಿರುವ ಹನುಮೇಶ ಕಳೆದ ಮೂರು ವರ್ಷಗಳಿಂದ ಅದೇ ಗ್ರಾಮದ ಯುವತಿಯನ್ನು ಪ್ರೀತಿಸುತ್ತಿದ್ದ, ಯುವತಿ ಮನೆಯವರಿಗೆ ಪ್ರೀತಿ ವಿಷಯ ತಿಳಿದು ಎರಡು ಕುಟುಂಬಗಳ ನಡುವೆ ಗಲಾಟೆ ನಡೆದಿದೆ. ಯುವತಿಯನ್ನು ಬೇರೆ ಹುಡುಗನ ಜೊತೆಗೆ ಮದುವೆ ಮಾಡಲು ಯುವತಿ ಕಡೆಯವರು ನಿರ್ಧಾರ ಮಾಡಿದ್ದರು.

    ಮಾಹಿತಿ ತಿಳಿದ ಯುವಕ, ಯುವತಿ ಊರು ಬಿಟ್ಟು ಹೋಗಲು ಕೂಡ ನಿರ್ಧಾರ ಮಾಡಿದ್ದರು. ಯುವತಿ ಕುಟುಂಬದವರು ಅವಸರದಲ್ಲಿ ಯುವತಿ ಮದುವೆಗೆ ನಿಶ್ಚಿತಾರ್ಥ ಸಿದ್ಧಪಡಿಸಿಕೊಂಡಿದ್ದರು. ಇಂದು ಯುವತಿ ಮನೆಯಲ್ಲಿ ನಿಶ್ಚಿತಾರ್ಥ ತಯಾರಿ ನಡೆಸಿದ್ದರು. ಕಾರ್ಯಕ್ರಮಕ್ಕೆ ಯುವಕ ಅಡ್ಡಿಪಡಿಸಬಹುದು ಎನ್ನುವ ಮಾಹಿತಿಯಿಂದ ಯುವತಿ ಕಡೆಯವರು ಯುವಕನನ್ನು ಕೊಲೆ ಮಾಡಿದ್ದಾರೆ ಎಂದು ಯುವಕನ ಕಡೆಯವರು ಆರೋಪ ಮಾಡುತ್ತಿದ್ದಾರೆ.

    ಪೊಲೀಸ್ ಇಲಾಖೆಯವರು ಸ್ಥಳಕ್ಕೆ ಭೇಟಿಯನ್ನು ನೀಡಿದ್ದು, ಕೊಲೆ ಆಗಿರುವ ಕುರಿತು ಖಚಿತ ಮಾಹಿತಿ ಹೊರಹಾಕಿಲ್ಲ. ಘಟನೆ ಸಂಬಂಧ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಿದ್ದಾರೆ. ಇದನ್ನೂ ಓದಿ: ಅವಾಚ್ಯ ಬೈಗುಳಕ್ಕೆ ಶುರುವಾದ ಜಗಳ – ಅತ್ತೆಯನ್ನೇ ಕೊಂದ ಸೊಸೆ

  • ತಲೆ ಕೆಳಗಾಗಿ ಚಿತ್ರ ಬಿಡಿಸುವ ಗಂಗಾವತಿಯ ಯುವ ಕಲಾವಿದ

    ತಲೆ ಕೆಳಗಾಗಿ ಚಿತ್ರ ಬಿಡಿಸುವ ಗಂಗಾವತಿಯ ಯುವ ಕಲಾವಿದ

    ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನ ಕಲ್ಗುಡಿಯ ನಿವಾಸಿ ಹಜರತ್ ಬಳಿಗಾರ ಕಾಲಿನಿಂದ ಚಿತ್ರ ಬಿಡಿಸುವ ಕಲಾವಿದ.

    ಕೊಪ್ಪಳದ ಸರ್ಕಾರಿ ಕಾಲೇಜಿನಲ್ಲಿ ಪದವಿ ಓದುತ್ತಿರುವ ಹಜರತ್, ನಗರದ ಅಲ್ಪಸಂಖ್ಯಾತರ ವಸತಿ ನಿಲಯದಲ್ಲಿದ್ದನು. ಆದ್ರೆ ಕೊರೊನಾ ಲಾಕ್‍ಡೌನ್ ಆಗಿದ್ದರಿಂದ ಮನೆಗೆ ಬಂದಿದ್ದ ಹಜರತ್ ಓದಿನ ಜೊತೆಯಲ್ಲಿ ವಿಶೇಷ ಕಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಚಿತ್ರ ಬಿಡಿಸೋದು ದೊಡ್ಡ ಸವಾಲಿನ ಕೆಲಸ. ಆದರೆ ಹಜರತ್ ಈ ಸವಾಲಿನ ಕೆಲಸವನ್ನು ವಿಭಿನ್ನವಾಗಿ ಮಾಡುವ ಮೂಲಕ ಕಲಾಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಗಿದ್ದಾನೆ.

    ಹಜರತ್ ತಂದೆ ಚಾಂದ್‍ಪಾಶಾ ಕೃಷಿಕರಾಗಿದ್ದು, ತಾಯಿ ಅಲ್ಲಾಭಿ ಬಳೆ ವ್ಯಾಪಾರ ಮಾಡುತ್ತಾರೆ. ಹಜರತ್‍ಗೆ ಇಮಾಮ್ ಅನ್ನೋ ಪುಟ್ಟ ತಮ್ಮನಿದ್ದಾನೆ. ಚಿತ್ರಕಲೆ ಜೊತೆ ಓದಿನಲ್ಲಿ ಮುಂದಿರುವ ಹಜರತ್ ಶಿಕ್ಷಕರಿಗೂ ಅಚ್ಚುಮೆಚ್ಚು. ಇದನ್ನೂ ಓದಿ: ಜೋಕಾಲಿಯಿಂದ 6,300 ಅಡಿ ಕೆಳಗೆ ಬಿದ್ದ ಮಹಿಳೆಯರು- ವೀಡಿಯೋ ವೈರಲ್

    ಲಾಕ್‍ಡೌನ್ ಸಮಯವನ್ನು ಸದುಪಯೋಗಪಡಿಸಿಕೊಂಡಿರುವ ಹಜರತ್, ತಲೆ ಕೆಳೆಗಾಗಿ ಮತ್ತು ಕಾಲಿನಿಂದಲೂ ಚಿತ್ರ ಬಿಡಿಸುವ ಕಲೆಯನ್ನ ಕರಗತ ಮಾಡಿಕೊಂಡಿದ್ದಾನೆ. ಹಜರತ್ ಕುಂಚದಲ್ಲಿ ಸ್ವಾತಂತ್ರ್ಯ ಹೋರಾಟಗಾರರು, ಅಬ್ದುಲ್ ಕಲಾಂ, ಅಂಬೇಡ್ಕರ್, ಧೋನಿ, ವಿರಾಟ್ ಕೊಹ್ಲಿ ಸೇರಿದಂತೆ ಹಲವು ಗಣ್ಯರ ಚಿತ್ರಗಳು ಅರಳಿವೆ. ಇದನ್ನೂ ಓದಿ: ಇಂಜಿನೀಯರ್ ಬಾಳಿಗೆ ಆಸರೆಯಾದ ನರೇಗಾ – ಹೆಚ್ಚಿನ ವಿದ್ಯಾಭ್ಯಾಸಕ್ಕೆ ಕೂಲಿ ಹಣ ಬಳಕೆ

  • ಇಂಜಿನೀಯರ್ ಬಾಳಿಗೆ ಆಸರೆಯಾದ ನರೇಗಾ – ಹೆಚ್ಚಿನ ವಿದ್ಯಾಭ್ಯಾಸಕ್ಕೆ ಕೂಲಿ ಹಣ ಬಳಕೆ

    ಇಂಜಿನೀಯರ್ ಬಾಳಿಗೆ ಆಸರೆಯಾದ ನರೇಗಾ – ಹೆಚ್ಚಿನ ವಿದ್ಯಾಭ್ಯಾಸಕ್ಕೆ ಕೂಲಿ ಹಣ ಬಳಕೆ

    – ಲಾಕ್‍ಡೌನ್ ಕಷ್ಟದಲ್ಲಿ ಕುಟುಂಬಕ್ಕೆ ಆಸರೆ

    ಕೊಪ್ಪಳ: ಕೋವಿಡ್ ಹಿನ್ನೆಲೆಯಲ್ಲಿ ಸಾಕಷ್ಟು ಜನ ನಿರುದ್ಯೋಗಿಗಳಾಗಿದ್ದು, ಕೆಲಸದ ನಿರೀಕ್ಷೆಯಲ್ಲಿ ಇದ್ದ ಪದವೀಧರರಿಗೂ ಮಹಾಮಾರಿ ಕೊರೊನಾ ಸಂಕಷ್ಟವನ್ನು ಉಂಟು ಮಾಡಿತ್ತು. ಆದರೆ ಇಂತಹ ಪರಿಸ್ಥಿತಿಯಲ್ಲಿ ಇಂಜಿನೀಯರಿಂಗ್ ಮುಗಿಸಿ ಕೆಲಸದ ನಿರೀಕ್ಷೆಯಲ್ಲಿದ್ದ ಯುವಕನಿಗೆ ಸರ್ಕಾರದ ನರೇಗಾ ಯೋಜನೆಯು ಆಸರೆ ಆಗಿದೆ.

    ಕೊಪ್ಪಳ ಗಂಗಾವತಿ ತಾಲೂಕಿನ ಸಣಾಪೂರ ಗ್ರಾಮದ ಬಡ ಕುಟುಂಬದ ನಿವಾಸಿ ರಾಮಾಂಜನೇಯ ಬೆಂಗಳೂರಿನಲ್ಲಿ ಬಿಇ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದುಕೊಂಡಿದ್ದರು. ಬಿಇ ಮುಗಿಸಿಕೊಂಡು ಕೆಲಸಕ್ಕೆ ಹುಡುಕುವ ವೇಳೆಯಲ್ಲಿಯೇ ಕೋವಿಡ್ ಅಲೆಯಿಂದಾಗಿ ಲಾಕ್‍ಡೌನ್ ಘೋಷಣೆ ಆಯ್ತು. ಉದ್ಯೋಗ ಇಲ್ಲದೆ ಮಾನಸಿಕವಾಗಿ ನೊಂದ ರಾಮಾಂಜನೇಯ ಬರಿಗೈಯಲ್ಲಿ ಗ್ರಾಮಕ್ಕೆ ವಾಪಸ್ಸ ಆಗಮಿಸಿದ್ದರು. ಉದ್ಯೋಗ ಇಲ್ಲದೆ ಗ್ರಾಮದಲ್ಲಿ ತಿಂಗಳುಗಳ ಕಾಲ ಕಳೆದ ವಿದ್ಯಾರ್ಥಿಗೆ ಸದ್ಯ ಉದ್ಯೋಗ ಖಾತರಿ ಯೋಜನೆಯು ಆಸರೆಯಾಗಿದೆ.

    ಗ್ರಾಮದಲ್ಲಿ ವಿದ್ಯಾರ್ಥಿಯ ಕುಟುಂಬಸ್ಥರು, ಗ್ರಾಮಸ್ಥರು ನರೇಗಾ ಯೋಜನೆಯಲ್ಲಿ ಕೆಲಸ ಮಾಡುವುದನ್ನು ಕಂಡು ರಾಮಾಂಜನೇಯ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ತಾನು ಕೂಡ ನರೇಗಾ ಯೋಜನೆಯಲ್ಲಿ ಕೆಲಸ ಮಾಡಲು ಪಂಚಾಯಿತಿ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಅಧಿಕಾರಿಗಳು ನಿಯಮಗಳ ಪ್ರಕಾರ ಅರ್ಜಿಯನ್ನು ಪಡೆದುಕೊಂಡು, ವಿದ್ಯಾರ್ಥಿಗೆ ಕೆಲಸವನ್ನು ನೀಡಿದ್ದಾರೆ. ಕಳೆದ ಒಂದು ವರ್ಷದಿಂದ ನರೇಗಾ ಯೋಜನೆಯಡಿಯಲ್ಲಿ ಕೆಲಸ ಮಾಡುತ್ತಿರುವ ರಾಮಾಂಜನೇಯ ಬರುವ ಕೂಲಿ ಹಣದಲ್ಲಿ ಕುಟುಂಬಕ್ಕೆ ಆಸರೆಯಾಗುವುದರ ಜೊತೆಗೆ ಆತನ ಹೆಚ್ಚಿನ ವಿದ್ಯಾಭ್ಯಾಸಕ್ಕೂ ಕೂಡ ಅನುಕೂಲವಾಗಿದೆ.

    ಆನ್‍ಲೈನ್ ಕ್ಲಾಸ್‍ಗೂ ಅನುಕೂಲ: ಹೊರಗಡೆ ಕೆಲಸ ಇಲ್ಲದೆ ಮನೆಯಲ್ಲಿ ಇದ್ದ ರಾಮಾಂಜನೇಯ ನರೇಗಾದಡಿಯಲ್ಲಿ ಕೆಲಸ ಪಡೆದುಕೊಂಡಿದ್ದಾರೆ. ಕೆಲಸಕ್ಕೆ ತಕ್ಕ ಕೂಲಿಯನ್ನು ನೇರವಾಗಿ ಖಾತೆಗೆ ಜಮಾ ಆಗುತ್ತಿರೋದರಿಂದ ರಾಮಾಂಜನೇಯನಿಗೆ ಸಾಕಷ್ಟು ಅನುಕೂಲವಾಗಿದೆ. ಹೆಚ್ಚಿನ ವಿದ್ಯಾಭ್ಯಾಸ ಮಾಡುವ ಆಸೆಯನ್ನು ಹೊಂದಿರುವ ವಿದ್ಯಾರ್ಥಿಗೆ ನರೇಗಾದಿಂದ ಆರ್ಥಿಕ ಸಹಾಯಕ್ಕೆ ಆಗುತ್ತಿರುವುದರಿಂದ ಸದ್ಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿಯನ್ನು ನಡೆಸಿದ್ದಾರೆ. ಬರುವ ಕೂಲಿ ಹಣದಲ್ಲಿ ಕುಟುಂಬಕ್ಕೆ ಒಂದಿಷ್ಟು ನೀಡಿ, ತನ್ನ ಅಭ್ಯಾಸಕ್ಕೂ ಕೂಡ ಬಳಕೆ ಮಾಡುತ್ತಿದ್ದಾರೆ.

    ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯಲ್ಲಿ ಇರುವ ರಾಮಾಂಜನೇಯ ಅದಕ್ಕೆ ಸಂಬಂಧಪಟ್ಟಂತೆ ಆನ್‍ಲೈನ್ ತರಗತಿಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಕುಟುಂಬಸ್ಥರಿಗೆ ಹೊರೆಯಾಗಿದ್ದ ರಾಮಾಂಜನೇಯ ನರೇಗಾ ಯೋಜನೆಯು ಆಸರೆಯಾಗಿದ್ದು, ಬರುವ ಕೂಲಿ ಹಣದಲ್ಲಿ ಹೆಚ್ಚಿನ ವಿದ್ಯಾಭ್ಯಾಸವನ್ನು ಮುಂದುವರಿಸಿದ್ದಾರೆ. ಇದನ್ನೂ ಓದಿ: ಸೂಪರ್‌ ಟೆಕ್ನಾಲಜಿ ಅಭಿವೃದ್ಧಿ ಪಡಿಸಿದವರಿಗೆ 729 ಕೋಟಿ ಬಹುಮಾನ ಘೋಷಿಸಿದ ಮಸ್ಕ್‌

    ಇಂಜಿನಿಯರಿಂಗ್ ಮುಗಿಸಿಕೊಂಡು ಕಳೆದ ವರ್ಷ ಕೋವಿಡ್ ಸಮಯಕ್ಕೆ ಗ್ರಾಮಕ್ಕೆ ಆಗಮಿಸಿದೆ. ಎಲ್ಲೂ ಕೆಲಸ ಸಿಗದೇ ಇರುವುದರಿಂದ ನಮ್ಮೂರಲ್ಲಿಯೇ ಉದ್ಯೋಗ ಖಾತರಿ ಯೋಜನಯಲ್ಲಿ ಕೆಲಸ ಮಾಡುತ್ತಿದ್ದೆನೆ. ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ನರೇಗಾದಡಿಯಲ್ಲಿ ಕೆಲಸ ಮಾಡುತ್ತೇನೆ. ಉಳಿದ ಸಮಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರು ನಡೆಸುತ್ತಿದ್ದೆನೆ. ನರೇಗಾ ಯೋಜನೆಯಿಂದ ಸಾಕಷ್ಟು ಅನುಕೂಲವಾಗಿದೆ. ಇದನ್ನೂ ಓದಿ: ಕೃಷಿಯಲ್ಲಿ ಯಶಸ್ಸು ಕಂಡ ಕಾನೂನು ಪದವೀಧರೆ – ದಿನಕ್ಕೆ 30 ಸಾವಿರ ರೂ. ವ್ಯಾಪಾರ

  • ಇಂಜಿನೀಯರ್​​​ಗೆ ಅಂತರಾಷ್ಟ್ರೀಯ ಫೋಟೋಗ್ರಾಫಿ ಪ್ರಶಸ್ತಿ

    ಇಂಜಿನೀಯರ್​​​ಗೆ ಅಂತರಾಷ್ಟ್ರೀಯ ಫೋಟೋಗ್ರಾಫಿ ಪ್ರಶಸ್ತಿ

    ಕೊಪ್ಪಳ: ವೃತ್ತಿಯಲ್ಲಿ ಇಂಜಿನೀಯರ ಆಗಿದ್ದರೂ ಕೂಡ ಛಾಯಾಚಿತ್ರದ ಹವ್ಯಾಸ ಬೆಳೆಸಿಕೊಂಡಿರುವ ಶ್ರೀನಿವಾಸ್ ಸದ್ಯ ಅಂತರಾಷ್ಟ್ರೀಯ ಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ಹೆಸರು ವಾಸಿಯಾಗಿದ್ದಾರೆ.

    ಒಂದು ಫೋಟೊ ಸಾವಿರ ಪದಗಳಿಗೆ ಸಮ ಎನ್ನುತ್ತಾರೆ. ಫೋಟೊದಲ್ಲಿರುವ ಭಾವ, ಫೋಟೊ ಹೇಳುವ ನೂರಾರು ಕಥೆಗಳಿಂದಾಗಿ ಫೋಟೋಗ್ರಾಫರ್ ಗಳಿಗೆ ತಮ್ಮದೇ ಸ್ಥಾನ ಹೊಂದಿದ್ದಾರೆ. ಹಲವರು ಫೋಟೋಗ್ರಾಫಿಯನ್ನು ವೃತ್ತಿಯನ್ನಾಗಿ ಮಾಡಿಕೊಂಡಿದ್ದಾರೆ, ಬಹಳಷ್ಟು ಫೋಟೋಗ್ರಾಫಿಯನ್ನು ಪ್ಯಾಶನ್ ನ್ನಾಗಿ ಇಟ್ಟುಕೊಂಡಿದ್ದಾರೆ. ಹೀಗೆ ಹವ್ಯಾಸಕ್ಕಾಗಿ ಫೋಟೋಗ್ರಾಫಿ ಮಾಡುವ ಇಂಜನೀಯರ್ ಕೆಲವೇ ದಿನಗಳಲ್ಲಿ ನೂರಾರು ಮೆಡಲ್ ಪಡೆದಿದ್ದಾರೆ, ಅದರಲ್ಲಿ ತಿಂಗಳ ಹಿಂದೆ ಅಂತರಾಷ್ಟ್ರೀಯ ಚಿನ್ನದ ಪದಕ ಪಡೆದಿದ್ದಾರೆ.

    ಮೂಲತಃ ಕೊಪ್ಪಳದ ಗಂಗಾವತಿಯವರಾಗಿರುವ ಶ್ರೀನಿವಾಸ್ ಎಣ್ಣಿ, ಓದಿದ್ದು ಡಿಪ್ಲೋಮಾ ಕಂಪ್ಯೂಟರ್ ಸೈನ್ಸ್. ಗಂಗಾವತಿಯಲ್ಲಿ ಕೆಪಿಟಿಸಿಎಲ್ ನಲ್ಲಿ ಟ್ರಾನ್ಸಮಿಷನ್ ಇಂಜಿನೀಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ವೃತ್ತಿ, ಓದಿನ ಜೊತಗೆ ಅವರಿಗೆ ಅವರ ಒಳತುಡಿತ ಫೋಟೋಗ್ರಾಫಿ. ದೇಶ , ವಿದೇಶದ ಫೋಟೊಗ್ರಾಫರ್ ಗಳ ಬಗ್ಗೆ ಮಾಹಿತಿ ಪಡೆದಿರುವ ಶ್ರೀನಿವಾಸ್ ಅವರಂತೆ ತಾನು ಫೋಟೊಗಳನ್ನು ತೆಗೆಯಬೇಕೆನ್ನುವ ತುಡಿತ ಹೊಂದಿದವರು. ಇದಕ್ಕೆ ತಕ್ಕಂತೆ ಕ್ಯಾಮೆರಾ ಖರೀದಿಸಿದ ಅವರು ಪ್ರಕೃತಿಯಲ್ಲಿಯ ಫೋಟೊಗಳನ್ನು ಕ್ಲಿಕ್ಕಿಸುತ್ತಾ ಹೋಗುತ್ತಿದ್ದಾರೆ. ಅವರ ರಸ್ತೆಯಲ್ಲಿ ಹೋಗುವಾಗ ನೋಡಿರುವ ದೃಷ್ಠಿಕೋನ, ಸಭೆ ಸಮಾರಂಭಗಳು, ಉತ್ಸವಗಳಲ್ಲಿ ಅವರ ಚಕಾಚಕಿತ ಹಾಗೂ ಬೆಳಕುಫೋಟೊಗಳಲ್ಲಿರುವ ಭಾವವನ್ನು ತಾಳ್ಮೆಯಿಂದ ಕ್ಲಿಕ್ ಮಾಡಿದ್ದಾರೆ. ನಿತ್ಯ ಸರ್ಕಾರಿ ಕಚೇರಿಯ ನಂತರ ಬಿಡುವಿನ ವೇಳೆಯನ್ನು ಅವರ ಇಂಥ ಹವ್ಯಾಸಕ್ಕಾಗಿ ಬಳಸಿಕೊಂಡಿರುವುದು ವಿಶೇಷವಾಗಿದೆ.

    ಕಳೆದ ಆರು ವರ್ಷಗಳ ಹಿಂದೆಯೇ ರಘು ರಾಯ್, ರಘಬೀರಸಿಂಗ್, ಅಶೋಕ ಸರವಣಂ ಫೋಟೋಗ್ರಾಫಿಯಿಂದ ಉತ್ತೇಜನಗೊಂಡು ಫೋಟೋಗಳನ್ನು ತೆಗೆಯುವ ಹವ್ಯಾಸ ಬಳಸಿಕೊಂಡಿದ್ದಾರೆ. ನಾಡಿನಲ್ಲಿ ಎಲ್ಲಿಯಾದರೂ ಉತ್ಸವಗಳು ನಡೆದರೆ ಅಲ್ಲಿ ಹೋಗಿ ತಮ್ಮ ಕಲ್ಪನೆಗೆ ತಕ್ಕಂತೆ ಫೋಟೋಗಳನ್ನು ಸೆರೆ ಹಿಡಿಯುತ್ತಾರೆ.

    ಕಳೆದ ಎರಡು ತಿಂಗಳ ಹಿಂದೆ ಭಾರತ, ಗಾಲ್ಫ ಸಮೂಹ, ಬಹರೈನ್, ಸೌದಿ ಅರಬಿಯಾ, ಕುವೈತ್ ರಾಷ್ಟ್ರಗಳ ಫೋಟೋಗ್ರಾಫಿ ಸೊಸೈಟಿಯಿಂದ ನಾಲ್ಕು ವಿಭಾಗಗಳಲ್ಲಿ ಸ್ಪರ್ಧೆ ಏರ್ಪಡಿಸಿದ್ದರು. ಈ ಸ್ಪರ್ಧೆಯಲ್ಲಿ 48 ದೇಶಗಳ 450ಕ್ಕೂ ಹೆಚ್ಚು ಫೋಟೋಗ್ರಾಫರ್ ಗಳು ಭಾಗವಹಿಸಿದ್ದರು. ಅದರಲ್ಲಿ ಶ್ರೀನಿವಾಸ್ ಎಣ್ಣಿಯವರ ಟ್ರಾವೆಲ್ ವಿಭಾಗದಲ್ಲಿ ನಾಲ್ಕು ಫೋಟೋಗಳಿಗೆ ಪ್ರಶಸ್ತಿ ಬಂದಿದ್ದು, ಚಿನ್ನದ ಪದಕ ಪಡೆದಿದ್ದಾರೆ. ಈ ಸ್ಪರ್ಧೆಯಲ್ಲಿ ಅಂತರಾಷ್ಟ್ರೀಯ ಫೋಟೋಗ್ರಾಫರ್ ಗಳಾದ ಓಲಾ ಅಲ್ಡೌಜ್, ಶಫೀಕ್ ಅಲ್ ಶಫೀಕ್, ಅಮ್ಮರ್ ಅಲಾವರ್, ನಜೌತ್ ಪರ್ಸಾನ ತೀರ್ಪುಗಾರರಾಗಿದ್ದರು.

    ಶ್ರೀನಿವಾಸ್ ಆರು ವರ್ಷಗಳಲ್ಲಿ ದೇಶ ವಿದೇಶಗಳಲ್ಲಿ ಫೋಟೋಗಳನ್ನು ಸ್ಪರ್ಧೆಗಾಗಿ ಕಳುಹಿಸಿದ್ದು ಈಗಾಗಲೇ 100 ಅಧಿಕ ಮೆಡಲ್, ಪ್ರಶಂಸೆಗಳನ್ನು ಪಡೆದುಕೊಂಡಿದ್ದಾರೆ. ನಾಡಿನ ಬಹುತೇಕ ಡಿಜಿಟಲ್ ವಿಭಾಗದಲ್ಲಿ ಸಾಕಷ್ಟು ಫೋಟೋಗಳು ಪ್ರಕಟವಾಗಿವೆ, ದೇಶದ ವಿವಿಧ ಫೋಟೋಗ್ರಾಫರ್ ಅಸೋಸಿಯೇಷನ್ ಸದಸ್ಯರಾಗಿದ್ದಾರೆ.

    ಪರಿಸರ, ಜನರ ಬದುಕು, ಉತ್ಸವ, ಸಭೆ ಸಮಾರಂಭಗಳನ್ನು ಎಲ್ಲರೂ ನೋಡುವ ದೃಷ್ಠಿಕೋನ ಒಂದಾದರೆ ಶ್ರೀನಿವಾಸ್ ಎಣ್ಣಿ ನೋಡುವ ದೃಷ್ಠಿಕೋನವೇ ವಿಭಿನ್ನವಾಗಿದ್ದು, ಅವರ ಸಾವಿರಾರು ಭಾವನೆಗಳ ಫೋಟೋಗಳ ಇನ್ನಷ್ಟು ಪ್ರಸಾರವಾಗಿ ಅವರ ಇನ್ನಷ್ಟು ಮನ್ನಣೆ ಸಿಗಲಿ ಎಂಬುವುದು ಅವರ ಸ್ನೇಹಿತರ ಆಶಯವಾಗಿದೆ.