Tag: ಗಂಗಾವತಿ

  • ಮುಖಕ್ಕೆ ಟವಲ್ ಕಟ್ಟಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆ

    ಮುಖಕ್ಕೆ ಟವಲ್ ಕಟ್ಟಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆ

    ಕೊಪ್ಪಳ: ಗಂಗಾವತಿ ತಾಲೂಕಿನ ಕಾರಟಗಿಯಲ್ಲಿ ಮುಖಕ್ಕೆ ಟವಲ್ ಕಟ್ಟಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನೊಬ್ಬನ ಶವ ಪತ್ತೆಯಾಗಿದೆ. ಯುವಕನನ್ನು 33 ವರ್ಷದ ಸಂತೋಷ ಎಂದು ಗುರುತಿಸಲಾಗಿದೆ. ಯುವಕ ಮಂಡ್ಯ ಮೂಲದ ಲಾರಿ ಚಾಲಕನಾಗಿದ್ದಾನೆ.

    ಮೃತ ಯುವಕ ಭಾನುವಾರ ಸಂಜೆ ಲಾರಿಯಲ್ಲಿ ಭತ್ತ ತುಂಬಿಕೊಂಡು ಕೊಪ್ಪಳದ ಕಡೆ ಬಂದಿದ್ದು, ಇಂದು ಬೆಳಗ್ಗಿನ ಜಾವ ಕಾರಟಗಿಯ ವಿಶೇಷ ಎಪಿಎಂಸಿ ಆವರಣದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.

    ಸ್ಥಳಕ್ಕೆ ಕಾರಟಗಿ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್: ಶಾಸಕ ಅನ್ಸಾರಿ ಮದ್ಯದಂಗಡಿಗಳ ವಿರುದ್ಧ ಪ್ರಕರಣ ದಾಖಲು

    ಪಬ್ಲಿಕ್ ಟಿವಿ ಇಂಪ್ಯಾಕ್ಟ್: ಶಾಸಕ ಅನ್ಸಾರಿ ಮದ್ಯದಂಗಡಿಗಳ ವಿರುದ್ಧ ಪ್ರಕರಣ ದಾಖಲು

    ಕೊಪ್ಪಳ: ಗಂಗಾವತಿ ವಿಧಾನ ಸಭಾ ಕ್ಷೇತ್ರದ ಶಾಸಕ ಇಕ್ಬಾಲ್ ಅನ್ಸಾರಿ ಅವರ ಮದ್ಯದಂಗಡಿಗಳಲ್ಲಿ ನಡೆಯುವ ಹಗಲು ದರೋಡೆ ಬಗ್ಗೆ ಪಬ್ಲಿಕ್ ಟಿವಿ ವಿಸ್ತ್ರತವಾಗಿ ವರದಿ ಮಾಡಿತ್ತು, ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಬಕಾರಿ ಇಲಾಖೆ ಅಧಿಕಾರಿಗಳು ಎಂಆರ್‍ಪಿ ದರಕ್ಕಿಂತ ಹೆಚ್ಚು ಮಾರಾಟ ಮಾಡುವ ಬಾರ್‍ಗಳ ಮೇಲೆ ದಾಳಿ ಮಾಡಿ ಕೇಸ್ ದಾಖಲಿಸಿಕೊಂಡಿದ್ದಾರೆ.

    ಗಂಗಾವತಿ ತಾಲೂಕಿನಲ್ಲಿ ಒಟ್ಟು 17 ಸಿಎಲ್ 2 ಬಾರ್‍ಗಳಿದ್ದು ಎಲ್ಲವೂ ಶಾಸಕ ಇಕ್ಬಾಲ್ ಅನ್ಸಾರಿ ಒಡೆತನದಲ್ಲಿಯೇ ಇವೆ. ಸಾಮಾನ್ಯವಾಗಿ ಸಿಎಲ್ 2 ಮದ್ಯದಂಗಡಿಯಲ್ಲಿ ಎಂಆರ್‍ಪಿ ದರಕ್ಕೆ ಮದ್ಯ ಮಾರಾಟ ಮಾಡಬೇಕು. ಜೊತೆಗೆ ಅಲ್ಲಿಯೇ ನಿಂತು ಕುಡಿಯಲು ಅವಕಾಶ ಇಲ್ಲ.  ಆದ್ರೆ, ಗಂಗಾವತಿಯ ಎಲ್ಲ ಸಿಎಲ್ 2 ಅಂಗಡಿಯಲ್ಲಿ ಪ್ರತಿ ಫುಲ್ ಬಾಟಲ್ ಮೇಲೆ 40 ರಿಂದ 50 ರೂಪಾಯಿ ಹೆಚ್ಚು ಹಣ ಪೀಕುತ್ತಿದ್ದಾರೆ. ಈ ಬಗ್ಗೆ ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್ ನಡೆಸಿ ಲಿಕ್ಕರ್ ಲಾಬಿಯನ್ನು ಎಳೆಎಳೆಯಾಗಿ ವರದಿ ಮಾಡಿತ್ತು.

    ಇದನ್ನೂ ಓದಿ: ಕೊಪ್ಪಳದಲ್ಲಿ ಶಾಸಕ ಇಕ್ಬಾಲ್ ಅನ್ಸಾರಿ ಮದ್ಯಕೋಟೆ?- ಇಲ್ಲಿ ಎಂಆರ್‍ಪಿಗಿಂತ ದುಪ್ಪಟ್ಟು ವಸೂಲಿ

    ಪ್ರತಿಕ್ರಿಯೆ ನೀಡಲು ಹಿಂದೇಟು: ಈ ಕುರಿತು ಶಾಸಕ ಇಕ್ಬಾಲ್ ಅನ್ಸಾರಿ ಅವರನ್ನು ಕೇಳಿದ್ರೆ ಅವರಿಂದ ಯಾವುದೇ ಪ್ರತಿಕ್ರಿಯೆ ಪಬ್ಲಿಕ್ ಟಿವಿಗೆ ನೀಡಿಲ್ಲ. ಬದಲಾಗಿ ಪತ್ರಿಕೆಗಳಿಗೆ ಪ್ರತಿಕ್ರಿಯಿಸಿರುವ ಶಾಸಕರು ಅಕ್ರಮ ಮದ್ಯದ ಹಿಂದೆ ನನ್ನ ತೇಜೋವಧೆ ಮಾಡೋದಕ್ಕೆ ಕಾಣದ ಕೈಗಳು ಈ ರೀತಿ ಮಾಡ್ತಿದ್ದಾರೆ ಅಂತ ಹೇಳಿದ್ದಾರೆ. ಕೊನೆಗೆ ರಾಜಕೀಯವೇ ಬೇರೆ, ವ್ಯಾಪಾರವೇ ಬೇರೆ ಎಂಬ ಸಮಜಾಯಿಸಿಯನ್ನು ಸಹ ನೀಡಿದ್ದಾರೆ.

    ಶಾಸಕ ಇಕ್ಬಾಲ್ ಅನ್ಸಾರಿ ಅವರಿ ಗಂಗಾವತಿ ತಾಲೂಕಿನಲ್ಲಿ ಬರೋಬ್ಬರಿ 24 ಬಾರ್ ಗಳನ್ನು ಹೊಂದಿದ್ದಾರೆ. ಇದರಲ್ಲಿ 22 ಬಾರ್ ಗಳು ಶಾಸಕ ಅನ್ಸಾರಿ ಹಾಗೂ ಪತ್ನಿ ತಬಸುಮ್ ಅನ್ಸಾರಿ ಅವರ ಹೆಸರಲ್ಲಿದೆ. ಹೀಗಾಗಿಯೇ ಇಲ್ಲಿ ಯಾವುದೇ ಬಾರ್‍ಗಳಿಗೆ ಹೋದರೂ ಎಂಆರ್‍ಪಿ ದರಕ್ಕಿಂತ 40 ರಿಂದ 50 ರೂ. ಹೆಚ್ಚಿನ ಹಣ ಕೊಡಲೇಬೇಕು. ಇನ್ನೂ ಇವರ ಬಾರ್ ಗಳಲ್ಲಿ ಸರ್ಕಾರದ ನಿಯಮದಂತೆ ಯಾವುದೇ ದರಪಟ್ಟಿ ಅಥವಾ ಎಂಆಪಿ ರೇಟ್ ಲಿಸ್ಟ್ ಕೂಡ ಹಾಕಿಲ್ಲ. ಈಗ ಇವರ ಲಿಕ್ಕರ್ ಲಾಬಿ ವಿರುದ್ಧ ಸಾಮಾಜಿಕ ಕಾರ್ಯಕರ್ತ ಸೈಯದ್ ಅಲಿ ಎಂಬುವರು ಬೆಂಗಳೂರಿನ ಅಬಕಾರಿ ಇಲಾಖೆ ಆಯುಕ್ತರಿಗೆ ದೂರು ನೀಡಿದ್ದರು.

    ಇದನ್ನೂ ಓದಿ: ಕೊಪ್ಪಳ: ಹನಿ ನೀರಿಗೂ ತತ್ವಾರ, ಆದ್ರೆ ಇಲ್ಲಿ ಪೆಟ್ಟಿ ಅಂಗಡಿಯಲ್ಲೂ ಸಿಗುತ್ತೆ ಮದ್ಯ 

    ಪಬ್ಲಿಕ್ ಟಿವಿ ಸುದ್ದಿ ಬಿತ್ತರಿಸಿದ ಬಳಿಕ ಅಬಕಾರಿ ಇಲಾಖೆ ಅಧಿಕಾರಿಗಳು 20ಕ್ಕೂ ಹೆಚ್ಚು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್ನು ಶಾಸಕರ ಅಕ್ರಮದ ಬಗ್ಗೆ ಅಬಕಾರಿ ಇಲಾಖೆ ಅಧಿಕಾರಿಗಳು ಒತ್ತಡಕ್ಕೆ ಮಣಿಯದೆ ದಾಳಿ ಮಾಡಿ ಪ್ರಕರಣ ದಾಖಲಿಸಬೇಕು. ಕೂಡಲೇ ಶಾಸಕರ ಅಕ್ರಮದ ಮದ್ಯದ ಅಂಗಡಿಗಳನ್ನು ಬಂದ್ ಮಾಡಬೇಕು ಅಂತ ವಿವಿಧ ಕನ್ನಡಪರ ಸಂಘಟನೆಗಳು ಒತ್ತಾಯ ಮಾಡಿವೆ.

     

  • ಗುಂಪು ಚದುರಿಸಲು ಬೂಟ್‍ನಿಂದ ಬಾರಿಸಿದ ಪಿಎಸ್‍ಐ: ವಿಡಿಯೋ ವೈರಲ್

    ಗುಂಪು ಚದುರಿಸಲು ಬೂಟ್‍ನಿಂದ ಬಾರಿಸಿದ ಪಿಎಸ್‍ಐ: ವಿಡಿಯೋ ವೈರಲ್

    ಕೊಪ್ಪಳ: ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸರ ಮುಂದೆಯೇ ಕೈ ಕೈ ಮಿಲಾಯಿಸಿದ ವೇಳೆ ಪಿಎಸ್‍ಐ ಬೂಟ್‍ನಿಂದ ಹೊಡೆದು ದರ್ಪ ತೋರಿಸಿದ ಘಟನೆ ಕೊಪ್ಪಳದ ಗಂಗಾವತಿ ತಾಲೂಕಿನಲ್ಲಿ ನಡೆದಿದ್ದು, ಈ ಘಟನೆಯ ವಿಡಿಯೋ ಇದೀಗ ವೈರಲ್ ಆಗಿದೆ.

    ಗಂಗಾವತಿ ತಾಲೂಕಿನ ಸಿಂಗನಾಳ ಗ್ರಾಮದಲ್ಲಿ ಇಪ್ಪತ್ತೈದು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಮಾಧ್ಯಮಗಳಿಗೆ ತಡವಾಗಿ ವಿಡಿಯೋ ಲಭ್ಯವಾಗಿದೆ. ಸಿಂಗನಾಳ ಗ್ರಾಮದ ಶಿವಬಸಪ್ಪ ಹಾಗೂ ವೀರಭದ್ರಪ್ಪ ನಡುವೆ ಭೂವಿವಾದಕ್ಕೆ ಸಂಬಂಧಪಟ್ಟಂತೆ ಗಲಾಟೆ ನಡೆದಿತ್ತು. ಆಗ ಗಂಗಾವತಿ ಗ್ರಾಮೀಣ ಠಾಣೆ ಪಿಎಸ್‍ಐ ಪ್ರಕಾಶ ಮಾಳೆ ಬೂಟ್ ನಿಂದ ಸಾರ್ವಜನಿಕವಾಗಿ ಥಳಿಸಿದ್ದಾರೆ. ಬೂಟ್ ನಿಂದ ಹೊಡೆದು ಗುಂಪನ್ನ ಚದುರಿಸಿದ್ದಾರೆ.

    ಗುಂಪು ಚದುರಿಸಬೇಕಾದ್ರೆ ಲಾಠಿ ಬಳಸಬೇಕು ಆದ್ರೆ ಪಿಎಸ್‍ಐ ಪ್ರಕಾಶ ಮಾಳೆ ಬೂಟ್ ಬಳಸಿರೋದು ವಿವಾದಕ್ಕೆ ಕಾರಣವಾಗಿದೆ. ಇದೀಗ ಪಿಎಸ್‍ಐ ಕೃತ್ಯಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ.

    https://www.youtube.com/watch?v=1sMur_Y6GmI&feature=youtu.be

  • ಕೊಪ್ಪಳ: ಹನಿ ನೀರಿಗೂ ತತ್ವಾರ, ಆದ್ರೆ ಇಲ್ಲಿ ಪೆಟ್ಟಿ ಅಂಗಡಿಯಲ್ಲೂ ಸಿಗುತ್ತೆ ಮದ್ಯ

    ಕೊಪ್ಪಳ: ಹನಿ ನೀರಿಗೂ ತತ್ವಾರ, ಆದ್ರೆ ಇಲ್ಲಿ ಪೆಟ್ಟಿ ಅಂಗಡಿಯಲ್ಲೂ ಸಿಗುತ್ತೆ ಮದ್ಯ

    ಕೊಪ್ಪಳ: ಜಿಲ್ಲೆಯ ಗಂಗಾವತಿಯಲ್ಲಿ ಬೀದಿಗೊಂದು ಬಾರ್ ಇದೆ. ಸ್ವತಃ ಇಲ್ಲಿನ ಶಾಸಕ ಇಕ್ಬಾಲ್ ಅನ್ಸಾರಿ ಲಿಕ್ಕರ್ ಲಾಬಿ ನಡೆಸ್ತಿದ್ದಾರೆ ಅನ್ನೋದನ್ನ ಮೊನ್ನೆಯಷ್ಟೇ ದಾಖಲೆ ಸಮೇತ ಬಹಿರಂಗಪಡಿಸಿದ್ವಿ. ಆದ್ರೆ ಇಷ್ಟೇ ಅಲ್ಲ ಇಲ್ಲಿ ಸಣ್ಣ ಪುಟ್ಟ ಪಾನ್ ಶಾಪ್, ಕಿರಾಣಿ ಅಂಗಡಿ, ಡಾಬಾ, ಹೋಟೆಲ್‍ಗಳಲ್ಲೂ ಮದ್ಯ ಪೂರೈಕೆ ಆಗ್ತಿದೆ. ಪಬ್ಲಿಕ್ ಟಿವಿ ಸ್ಟಿಂಗ್‍ನಲ್ಲಿ ಈ ಅಕ್ರಮ ದಂಧೆ ಬಯಲಾಗಿದೆ.

    ಈ ಕ್ಷೇತ್ರದ ಜನರು ಹನಿ ಹನಿ ನೀರಿಗೂ ಪರದಾಡುತ್ತಿದ್ದಾರೆ. ಈ ಸಮಸ್ಯೆ ಬಗೆಹರಿಸಿ ನೀರು ಪೂರೈಕೆ ಬಗ್ಗೆ ಚಿಂತಿಸಬೇಕಾದ ಇಲ್ಲಿನ ಶಾಸಕರು ಬೀದಿಗೊಂದು ಬಾರ್ ಅಂಗಡಿ ತೆರೆದು ಲಾಭಿ ನಡೆಸ್ತಿದ್ದಾರೆ. ಈ ಕೆಲಸಕ್ಕೆ ಬೇರೆ ಬೇರೆ ಪಕ್ಷದವರ ಕೂಡ ಕೈಜೋಡಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಅಬಕಾರಿ ಅಧಿಕಾರಿಯನ್ನ ಕೇಳಿದ್ರೆ ಮೇಲಾಧಿಕಾರಿಗಳನ್ನ ಕೇಳಿ ಎಂದು ಉಡಾಫೆ ಉತ್ತರ ನೀಡಿದ್ದಾರೆ.

    ಇನ್ನು ಈ ಕ್ಷೇತ್ರದ ಜನತೆ ಹನಿ ಹನಿ ನೀರಿಗೆ ಪರದಾಡ್ತಿದ್ದಾರೆ. ಕಿಲೋಮೀಟರ್‍ಗಟ್ಟಲೇ ಸೈಕಲ್‍ನಲ್ಲಿ ಹೋಗಿ ನೀರು ತರೋ ಪರಿಸ್ಥಿತಿ ಇದೆ. ಮದ್ಯವನ್ನ ಸಲೀಸಾಗಿ ಒದಗಿಸೋ ನಮ್ಮ ಶಾಸಕರಿಗೆ ನೀರು ಪೂರೈಸೋದು ಮಾತ್ರ ತಿಳೀತಿಲ್ಲ ಅಂತ ಸ್ಥಳೀಯರು ಆರೋಪಿಸಿದ್ದಾರೆ.

    ಇದನ್ನೂ ಓದಿ: ಕೊಪ್ಪಳದಲ್ಲಿ ಶಾಸಕ ಇಕ್ಬಾಲ್ ಅನ್ಸಾರಿ ಮದ್ಯಕೋಟೆ?- ಇಲ್ಲಿ ಎಂಆರ್‍ಪಿಗಿಂತ ದುಪ್ಪಟ್ಟು ವಸೂಲಿ

  • ಕೊಪ್ಪಳದಲ್ಲಿ ಶಾಸಕ ಇಕ್ಬಾಲ್ ಅನ್ಸಾರಿ ಮದ್ಯಕೋಟೆ?- ಇಲ್ಲಿ ಎಂಆರ್‍ಪಿಗಿಂತ ದುಪ್ಪಟ್ಟು ವಸೂಲಿ

    ಕೊಪ್ಪಳದಲ್ಲಿ ಶಾಸಕ ಇಕ್ಬಾಲ್ ಅನ್ಸಾರಿ ಮದ್ಯಕೋಟೆ?- ಇಲ್ಲಿ ಎಂಆರ್‍ಪಿಗಿಂತ ದುಪ್ಪಟ್ಟು ವಸೂಲಿ

    – ದೂರು ನೀಡಿದ್ರೆ ಧಮ್ಕಿ ಹಾಕ್ತಾರೆ ಶಾಸಕರ ಬೆಂಬಲಿಗರು

     ಕೊಪ್ಪಳ: ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವುದು ಜನಪ್ರತಿನಿಧಿಗಳ ಕರ್ತವ್ಯ. ಆದ್ರೆ ಗಂಗಾವತಿಯ ಶಾಸಕ ಇಕ್ಬಾಲ್ ಅನ್ಸಾರಿ ಮಾತ್ರ ಲಿಕ್ಕರ್ ಮಾಫಿಯಾ ಮೂಲಕ ಜನರನ್ನು ಹಗಲು ದರೋಡೆ ಮಾಡುತ್ತಿದ್ದಾರೆ.

    ಶಾಸಕ ಇಕ್ಬಾಲ್ ಅನ್ಸಾರಿ ಅವರಿ ಗಂಗಾವತಿ ತಾಲೂಕಿನಲ್ಲಿ ಬರೋಬ್ಬರಿ 24 ಬಾರ್‍ಗಳನ್ನು ಹೊಂದಿದ್ದಾರೆ. ಇದರಲ್ಲಿ 22 ಬಾರ್‍ಗಳು ಶಾಸಕ ಅನ್ಸಾರಿ ಹಾಗೂ ಪತ್ನಿ ತಬಸುಮ್ ಅನ್ಸಾರಿ ಅವರ ಹೆಸರಲ್ಲಿದೆ. ಹೀಗಾಗಿಯೇ ಇಲ್ಲಿ ಯಾವುದೇ ಬಾರ್‍ಗಳಿಗೆ ಹೋದರೂ ಎಂಆರ್‍ಪಿ ದರಕ್ಕಿಂತ 40 ರಿಂದ 50 ರೂ. ಹೆಚ್ಚಿನ ಹಣ ಕೊಡಲೇಬೇಕು. ಇನ್ನೂ ಇವರ ಬಾರ್‍ಗಳಲ್ಲಿ ಸರ್ಕಾರದ ನಿಯಮದಂತೆ ಯಾವುದೇ ದರಪಟ್ಟಿ ಅಥವಾ ಎಂಆರ್‍ಪಿ ರೇಟ್ ಲಿಸ್ಟ್ ಕೂಡ ಹಾಕಿಲ್ಲ. ಈಗ ಇವರ ಲಿಕ್ಕರ್ ಲಾಬಿ ವಿರುದ್ಧ ಸಾಮಾಜಿಕ ಕಾರ್ಯಕರ್ತ ಸೈಯದ್ ಅಲಿ ಎಂಬುವರು ಬೆಂಗಳೂರಿನ ಅಬಕಾರಿ ಇಲಾಖೆ ಆಯುಕ್ತರಿಗೆ ದೂರು ನೀಡಿದ್ದಾರೆ.

    ಕೊಪ್ಪಳದ ಗಂಗಾವತಿ ತಾಲೂಕಿನಾದ್ಯಂತ ಲಿಕ್ಕರ್ ಮಾರಾಟದಲ್ಲಿ ಮಾತ್ರ ಸ್ಪರ್ಧೆಯೇ ಇಲ್ಲ. ಬದಲಾಗಿ ಇಕ್ಬಲ್ ಅನ್ಸಾರಿ ಅವರೇ ಇಡೀ ತಾಲೂಕಿನಲ್ಲಿ ಮದ್ಯ ಮಾರಾಟದ ಮೇಲೆ ಹಿಡಿತ ಸಾಧಿಸಿದ್ದಾರೆ. ಇದರಿಂಂದ ತಾಲೂಕಿನಾದ್ಯಂತ ಮದ್ಯವನ್ನು ನಿಗದಿಗಿಂದ 40 ರಿಂದ 50 ರೂಪಾಯಿ ಹೆಚ್ಚುವರಿ ದರಕ್ಕೆ ಮಾರಾಟ ಮಾಡಲಾಗುತ್ತಿದೆ. ಇದರಿಂದ ವಿವಿಧ ಮದ್ಯಕ್ಕೆ ಇಡೀ ರಾಜ್ಯದಲ್ಲೇ ಒಂದು ಬೆಲೆಯಾದ್ರೆ, ಗಂಗಾವತಿ ತಾಲೂಕಿನಲ್ಲೇ ಮತ್ತೊಂದು ಬೆಲೆ ನಿಗದಿಯಾಗಿದೆ. ಈ ಬಗ್ಗೆ ಕೆಲ ಸಾಮಾಜಿಕ ಕಾರ್ಯಕರ್ತ ಸೈಯದ್ ಅಲಿ ಅಬಕಾರಿ ಇಲಾಖೆಗೆ ಸಾಕಷ್ಟು ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ.

    ಗಂಗಾವತಿ ತಾಲೂಕಿನಲ್ಲಿ ಒಟ್ಟು 17 ಸಿಎಲ್ 2 ಬಾರ್‍ಗಳಿದ್ದು ಎಲ್ಲವೂ ಶಾಸಕ ಇಕ್ಬಾಲ್ ಅನ್ಸಾರಿ ಒಡೆತನದಲ್ಲಿಯೇ ಇವೆ. ಸಾಮಾನ್ಯವಾಗಿ ಸಿಎಲ್ 2 ಮದ್ಯದಂಗಡಿಯಲ್ಲಿ ಎಂಆರ್‍ಪಿ ದರಕ್ಕೆ ಮದ್ಯ ಮಾರಾಟ ಮಾಡಬೇಕು. ಜೊತೆಗೆ ಅಲ್ಲಿಯೇ ನಿಂತು ಕುಡಿಯಲು ಅವಕಾಶ ಇಲ್ಲ. ಆದ್ರೆ, ಗಂಗಾವತಿಯ ಎಲ್ಲ ಸಿಎಲ್ 2 ಅಂಗಡಿಯಲ್ಲಿ ಪ್ರತಿ ಫುಲ್ ಬಾಟಲ್ ಮೇಲೆ 40 ರಿಂದ 50 ರೂಪಾಯಿ ಹೆಚ್ಚು ಹಣ ಪೀಕುತ್ತಿದ್ದಾರೆ. ಈ ಬಗ್ಗೆ ಪಬ್ಲಿಕ್ ಟಿವಿ ನಡೆಸಿದ ರಿಯಾಲಿಟಿ ಚೆಕ್‍ನಲ್ಲಿ ಲಿಕರ್ ಲಾಬಿ ಎಳೆಎಳೆಯಾಗಿ ಹೊರ ಬಿದ್ದಿದೆ.

    ಸರ್ಕಾರದ ನಿಯಮದಂತೆ ಗಂಗಾವತಿಯ ಯಾವುದೇ ಬಾರ್‍ನಲ್ಲಿ ದರಪಟ್ಟಿ ನೇತು ಹಾಕಿಲ್ಲ. ಇನ್ನು ಸಿಎಲ್ 2 ಅಂಗಡಿ ಮುಂದೆಯೇ ಕುಡುಕರು ಕುಡಿದು ಅಸಭ್ಯ ವರ್ತನೆ ಮಾಡುವುದು ಮಹಿಳೆಯರಿಗೆ ಬೇಸರ ತರಿಸಿದೆ. ಈ ಎಲ್ಲ ಅಕ್ರಮವನ್ನು ಪ್ರಶ್ನಿಸುವವರಿಗೆ ಶಾಸಕ ಅನ್ಸಾರಿ ಬೆಂಬಲಿಗರು ಧಮ್ಕಿ ಹಾಕಿ, ಕೊಲೆ ಬೆದರಿಕೆ ಹಾಕುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.

    https://youtu.be/PUaUP8kiIg0

     

  • ತಾಯಿ ಹಸು ಜನ್ಮ ನೀಡ್ತಿದ್ದಾಗಲೇ ಕರುವನ್ನ ಕಚ್ಚಿ ತಿಂದ ನಾಯಿಗಳು- ಕೊಪ್ಪಳದಲ್ಲಿ ಹೃದಯ ವಿದ್ರಾವಕ ಘಟನೆ

    ತಾಯಿ ಹಸು ಜನ್ಮ ನೀಡ್ತಿದ್ದಾಗಲೇ ಕರುವನ್ನ ಕಚ್ಚಿ ತಿಂದ ನಾಯಿಗಳು- ಕೊಪ್ಪಳದಲ್ಲಿ ಹೃದಯ ವಿದ್ರಾವಕ ಘಟನೆ

    ಕೊಪ್ಪಳ: ಆಕಳು ಕರುವೊಂದು ಭೂಮಿಗೆ ಬಂದು ಕಣ್ಣು ಬಿಡುವ ಮೊದಲೇ ಬೀದಿ ನಾಯಿಗಳ ಪಾಲಾಗಿರುವ ಹೃದಯ ವಿದ್ರಾವಕ ಘಟನೆ ಕೊಪ್ಪಳದಲ್ಲಿ ನಡೆದಿದೆ.

    ಗಂಗಾವತಿಯ ವಲಯ ಅರಣ್ಯ ಇಲಾಖೆಯ ಕಚೇರಿ ಹಿಂದೆ ಹಸುವೊಂದು ಕರು ಹಾಕುತ್ತಿರುವಾಗಲೇ ಬೀದಿನಾಯಿಗಳು ಕಚ್ಚಿ ತಿಂದಿವೆ.

    ನಡೆದಿದ್ದೇನು?: ಬೀದಿ ಆಕಳೊಂದು ನಿರ್ಜನ ಪ್ರದೇಶದಲ್ಲಿ ಕರುವಿಗೆ ಜನ್ಮ ನೀಡುತ್ತಿತ್ತು. ತಾಯಿ ಹಸುವಿನ ಜನನಾಂಗದಿಂದ ಕರುವಿನ ಮುಖ ಹೊರ ಬರುತ್ತಿದ್ದಂತೆಯೇ ಬೀದಿ ನಾಯಿಗಳು ಕಚ್ಚಿ ತಿಂದಿವೆ. ಹೃದಯ ವಿದ್ರಾವಕ ಘಟನೆ ಕಂಡ ಜನರು ಮಮ್ಮಲ ಮರುಗಿದ್ದಾರೆ. ಬೀದಿ ನಾಯಿಗಳು ಕರು ಮಾತ್ರವಲ್ಲದೇ ತಾಯಿ ಹಸುವಿನ ಜನನಾಂಗವನ್ನೂ ಕಚ್ಚಿದ್ದರಿಂದ ಆಕಳು ಸಾವು ಬದುಕಿನ ನಡುವೆ ಹೋರಾಡುತ್ತಿದೆ.

    ಸ್ಥಳೀಯರು ಹೃದಯ ವಿದ್ರಾವಕ ದೃಶ್ಯ ಕಂಡು ಬೀದಿ ನಾಯಿಗಳನ್ನು ಓಡಿಸಿದ್ದಾರೆ. ಈ ವೇಳೆ ಕರು ಅರ್ಧ ಹೊರ ಬಂದಿದ್ದರೆ ಇನ್ನರ್ಧ ಆಕಳಿನ ದೇಹದಲ್ಲೇ ಉಳಿದಿತ್ತು. ಈ ವೇಳೆ ಸ್ಥಳೀಯರು ಕರುವಿನ ಉಳಿದ ದೇಹವನ್ನು ಹೊರತೆಗೆದಿದ್ದಾರೆ. ಸ್ಥಳೀಯರು ಪಶು ವೈದ್ಯರಿಗೆ ಮಾಹಿತಿ ನೀಡಿದ್ದು, ಸದ್ಯ ಹಸುವಿನ ಸ್ಥಿತಿ ಚಿಂತಾಜನಕವಾಗಿದೆ.

    https://youtu.be/wPf_48UsjdI

     

  • ತೆರೆದ ಕೊಳವಿ ಬಾವಿ ಮುಚ್ಚಿಸಿ ಫೋಟೋ ಕಳಿಸಿದ್ರೆ ಖಾತೆಗೆ ಹಣ

    ತೆರೆದ ಕೊಳವಿ ಬಾವಿ ಮುಚ್ಚಿಸಿ ಫೋಟೋ ಕಳಿಸಿದ್ರೆ ಖಾತೆಗೆ ಹಣ

    ಕೊಪ್ಪಳ: ನೀವು ಕೊಪ್ಪಳ ಜಿಲ್ಲೆಯಲ್ಲಿ ವಾಸವಾಗಿದ್ದೀರಾ? ನಿಮ್ಮ ಸುತ್ತಮುತ್ತಲು ತೆರೆದ ಕೊಳವೆ ಬಾವಿ ಇದೆಯೇ? ಹಾಗಾದ್ರೆ ತಡಮಾಡದೇ ಸ್ಥಳದ ಮಾಹಿತಿಯ ಜೊತೆಗೆ ಫೋಟೋವನ್ನು ವಾಟ್ಸಪ್ ಮಾಡಿದ್ರೆ ನಿಮ್ಮ ಖಾತೆಗೆ ಹಣ ಜಮೆಯಾಗಲಿದೆ.

    ಆರಂಭದ ಪೀಠಿಕೆ ಓದಿ ಖಾತೆಗೆ ಹಣ ನೀಡುವ ಯೋಜನೆಯನ್ನು ಸರ್ಕಾರ ಪ್ರಕಟಿಸಿದೆ ಎಂದು ನೀವು ಭಾವಿಸಿದರೆ ತಪ್ಪಾದಿತು. ತೆರೆದ ಕೊಳವೆ ಬಾವಿ ದುರಂತಕ್ಕೆ ಮನಮಿಡಿದ ಪ್ರಗತಿಪರ ರೈತರೊಬ್ಬರು ಬಹುಮಾನವನ್ನು ಘೋಷಣೆ ಮಾಡಿದ್ದಾರೆ.

    ಜಿಲ್ಲೆಯ ಗಂಗಾವತಿ ಪಟ್ಟಣದ ಪ್ರಗತಿಪರ ರೈತ ಶಿವಪ್ಪ ಚಳ್ಳಕೇರಿ ಅವರು 500 ರೂಪಾಯಿ ಬಹುಮಾನ ಘೋಷಣೆ ಮಾಡಿದ್ದಾರೆ. ಇಂದು ತೆರೆದ ಕೊಳವೆ ಬಾವಿ ಮುಚ್ಚಿಸೋದಕ್ಕಾಗಿ ಒಂದು ಲಕ್ಷ ರೂಪಾಯಿ ಬ್ಯಾಂಕ್ ನಲ್ಲಿ ಡಿಪಾಸಿಟ್ ಮಾಡಿದ್ದಾರೆ.

    ಕೊಪ್ಪಳ ಜಿಲ್ಲೆಯಲ್ಲಿ ಈಗಾಗ್ಲೇ 338 ವಿಫಲ ಕೊಳವೆ ಬಾವಿಗಳಿವೆ ಅಲ್ದೆ ಕೊಪ್ಪಳ ನಗರದಲ್ಲಿ 21 ವಿಫಲ ಕೊಳವೆ ಬಾವಿಗಳಿವೆ. ತೆರೆದ ಕೊಳವೆ ಬಾವಿ ಮುಚ್ಚಬೇಕಂತ ಮಾತನಾಡೋವ್ರೆ ಹೆಚ್ಚು ಆದ್ರೆ ಯಾರು ಮುಚ್ಚೋಕೆ ಮುಂದಾಗೊಲ್ಲ. ಆದ್ರೆ ಇಂತಹ ಬಹುಮಾನ ಘೋಷಣೆ ಮಾಡೋದ್ರಿಂದ ಮುಚ್ಚುತ್ತಾರೆ ಅನ್ನೋ ನಿರೀಕ್ಷೆಯಿದೆ ಎಂದು ಶಿವಪ್ಪ ಅವರು ತಿಳಿಸಿದ್ದಾರೆ.

    ಬಹುಮಾನ ಪಡೆಯಲು ಹೀಗೆ ಮಾಡ್ಬೇಕು: ಕೊಪ್ಪಳ ಜಿಲ್ಲೆಯಲ್ಲಿ ತೆರೆದ ಕೊಳವೆ ಬಾವಿ ಇರೋ ಫೋಟೋ ಹಾಗೂ ಮುಚ್ಚಿದ ಬಳಿಕ ಫೋಟೋ ಮತ್ತು ಗ್ರಾಮ ಪಂಚಾಯತ್‍ನಿಂದ ದೃಢೀಕರಣ ಪತ್ರದ ಜೊತೆಗೆ ಬ್ಯಾಂಕ್ ಖಾತೆಯ ಮಾಹಿತಿಯನ್ನು 8861318934 ನಂಬರ್ ಗೆ ವಾಟ್ಸಾಪ್ ಮಾಡಿದ್ರೆ 500 ರೂ. ಬಹುಮಾನ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ. ಈ ಬಹುಮಾನದ ನೀಡುವ ಅವಧಿ 6 ತಿಂಗಳು ಆಗಿದ್ದು, ಜನರು ಫೋಟೋಗಳನ್ನು ಕಳುಹಿಸಬಹುದು.

    ರಾಜ್ಯದಲ್ಲಿ ತೆರೆದ ಕೊಳವೆ ಬಾವಿ ಮುಚ್ಚೋ ಅಭಿಯಾನವಾಗ್ತಿದೆ. ಆದ್ರೆ ಕೊಪ್ಪಳದ ಪ್ರಗತಿಪರ ರೈತ ಬಹುಮಾನ ಘೋಷಣೆ ಮಾಡೋ ಮೂಲಕ ಗಮನಸೆಳೆದಿದ್ದಾರೆ. ಇನ್ಮೇಲಾದ್ರೂ ತೆರೆದ ಕೊಳವೆ ಬಾವಿ ಮುಚ್ಚಿ ಮುಂದೆ ಇಂಥ ದುರಂತ ಆಗದಿರಲಿ ಅನ್ನೋದೆ ಎಲ್ಲರ ಆಶಯ.

  • ಸಿಬ್ಬಂದಿಯೆದುರೇ ಕೈ ಕೈ ಮಿಲಾಯಿಸಿದ ಗಂಗಾವತಿಯ ಸರ್ಕಾರಿ ಆಸ್ಪತ್ರೆ ವೈದ್ಯರು

    ಸಿಬ್ಬಂದಿಯೆದುರೇ ಕೈ ಕೈ ಮಿಲಾಯಿಸಿದ ಗಂಗಾವತಿಯ ಸರ್ಕಾರಿ ಆಸ್ಪತ್ರೆ ವೈದ್ಯರು

    ಕೊಪ್ಪಳ: ಸರ್ಕಾರಿ ಆಸ್ಪತ್ರೆಯ ವೈದ್ಯರಿಬ್ಬರು ಗಲಾಟೆ ಮಾಡಿಕೊಂಡು ಕೈ ಮಿಲಾಯಿಸಿದ ಘಟನೆ ಮಂಗಳವಾರ ಕೊಪ್ಪಳದಲ್ಲಿ ನಡೆದಿದೆ. ಗಂಗಾವತಿ ಉಪ ವಿಭಾಗ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಈಶ್ವರ್ ಸವದಿ ಮತ್ತು ಇನ್ನೋರ್ವ ಹಿರಿಯ ವೈದ್ಯರಾದ ಡಾ.ಜುಬೇರ್ ಅಹಮ್ಮದ್ ಆಸ್ಪತ್ರೆಯಲ್ಲೆ ಗಲಾಟೆ ಮಾಡಿಕೊಂಡು ಸಾರ್ವಜನಿಕರು ಮತ್ತು ಸಿಬ್ಬಂದಿ ಎದುರೇ ನಗೆಪಾಟಲಿಗೀಡಾಗಿದ್ದಾರೆ.

    ಡಾ.ಜುಬೇರ್ ಅಹಮ್ಮದ್ ದಿನ ನಿತ್ಯ ಆಸ್ಪತ್ರೆಗೆ ತಡವಾಗಿ ಬರುತ್ತಿದ್ದು ಇದರಿಂದ ರೋಗಿಗಳಿಗೆ ತೊಂದರೆಯಾಗುತ್ತಿರುವುದನ್ನು ಗಮನಿಸಿದ ಅಧಿಕಾರಿ ಡಾ.ಈಶ್ವರ್ ಸವಡಿ ಅವರನ್ನು ತಮ್ಮ ಛೇಂಬರ್‍ಗೆ ಕರೆಸಿ, ಸರಿಯಾಗಿ ಕೆಲಸ ನಿರ್ವಹಿಸಿ ಎಂದು ಹೇಳಿದ್ದಾರೆ. ಇದಕ್ಕೆ ಕುಪಿತರಾದ ಡಾ.ಜುಬೇರ್ ನೀವು ಹೇಳಿದ ಹಾಗೆ ಕೇಳಬೇಕೆಂದೇನಿಲ್ಲ ಎಂದು ತಿರುಗೇಟು ನೀಡಿದ್ದಾರೆ. ಈ ನಡುವೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸಿದ್ದಾರೆ.

    ಈ ಇಬ್ಬರು ವೈದ್ಯಾಧಿಕಾರಿಗಳ ಜಗಳ ಆಸ್ಪತ್ರೆ ಸಿಬ್ಬಂದಿ ಮತ್ತು ರೋಗಿಗಳ ಮುಂದೆ ನಡೆದಿದೆ. ವೈದ್ಯಾಧಿಕಾರಿಗಳೇ ಈ ರೀತಿ ಜಗಳ ಮಾಡಿಕೊಂಡರೆ ಆಸ್ಪತ್ರೆಗೆ ಬರುವ ರೋಗಿಗಳನ್ನು ನೋಡುವರು ಯಾರು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.