Tag: ಗಂಗಾವತಿ

  • ಫಿಲ್ಮಿ ಸ್ಟೈಲ್‌ ಗಂಗಾವತಿಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷನ ಕೊಲೆ

    ಫಿಲ್ಮಿ ಸ್ಟೈಲ್‌ ಗಂಗಾವತಿಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷನ ಕೊಲೆ

    ಕೊಪ್ಪಳ: ಸಿನಿಮಿಯ ರೀತಿಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಬಿಜೆಪಿ ಯುವ ಮೋರ್ಚಾ (BJP Yuva Morcha) ಅಧ್ಯಕ್ಷನನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ಗಂಗಾವತಿ (Gangavathi) ನಗರದಲ್ಲಿ ನಡೆದಿದೆ.

    ವೆಂಕಟೇಶ ಕುರುಬರ (31) ವರ್ಷ ಕೊಲೆಯಾದ ಬಿಜೆಪಿ ನಾಯಕ. ಕೊಪ್ಪಳ ರಸ್ತೆಯ ಲೀಲಾವತಿ ಎಲುಬು ಕೀಲು ಅಸ್ಪತ್ರೆಯ ಮುಂಭಾಗದಲ್ಲಿ ನಸುಕಿನ ಜಾವ 2 ಗಂಟೆಗೆ ಕಾರಿನಲ್ಲಿ ಆಗಮಿಸಿದ್ದ ಗ್ಯಾಂಗ್ ಕೊಲೆ ಮಾಡಿದೆ.  ಇದನ್ನೂ ಓದಿ:  ಬೆಳ್ಳಿ ವಸಂತಕ್ಕೆ ಕಾಲಿಟ್ಟು ಸತತ 24 ವರ್ಷಗಳ ಅಧಿಕಾರವಧಿ ಪೂರೈಸಿದ ಮೋದಿ

    ದೇವಿಕ್ಯಾಂಪ್‌ನಿಂದ ಗಂಗಾವತಿಗೆ ವೆಂಕಟೇಶ್‌ ಅವರು ಸ್ನೇಹಿತರ ಜೊತೆ ಊಟ ಮಾಡಿ ಬೈಕಿನಲ್ಲಿ ಬರುತ್ತಿದ್ದರು. ಅವರನ್ನು ಹಿಂಬಾಲಿಸಿಕೊಂಡು ಬಂದಿದ್ದ ಗ್ಯಾಂಗ್‌ ಸದಸ್ಯರು ಬೈಕಿಗೆ ಗುದ್ದಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಡಿವೈಸ್‌ಪಿ ಸಿದ್ದನಗೌಡ ಪಾಟೀಲ್‌ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

    ಪ್ರಕರಣದ ಬಗ್ಗೆ ವೆಂಕಟೇಶ ಸ್ನೇಹಿತ ರಾಮು ಪ್ರತಿಕ್ರಿಯಿಸಿ, ಸ್ನೇಹಿತರೆಲ್ಲರೂ ಊಟಕ್ಕೆ ಹೋಗಿದ್ದೆವು. ವಾಪಸ್‌ ಮರಳುತ್ತಿದ್ದಾಗ 7-8 ಜನ ಮಾರಾಕಾಸ್ತ್ರಗನ್ನು ಹಿಡಿದು ನಮ್ಮನ್ನು ಬೆದರಿಸಿ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ:  ಕಲಾವಿದರ ಮೇಲೆ ಸೇಡು ತೀರಿಸಿದ ನಟ್ಟು ಬೋಲ್ಟ್‌ ಮಿನಿಸ್ಟರ್‌- ಜೆಡಿಎಸ್‌ ಕಿಡಿ

  • 5,000 ದೀಪಗಳು, 4,000 ವಿದ್ಯಾರ್ಥಿಗಳಿಂದ ಬೃಹತ್ ಗಣೇಶ ಆಕೃತಿ ರಚನೆ

    5,000 ದೀಪಗಳು, 4,000 ವಿದ್ಯಾರ್ಥಿಗಳಿಂದ ಬೃಹತ್ ಗಣೇಶ ಆಕೃತಿ ರಚನೆ

    ಕೊಪ್ಪಳ: ವಿಘ್ನನಿವಾರಕ, ಆದಿವಂದಿತ ಗಣೇಶನ ಹಬ್ಬ ಸಮೀಪಿಸುತ್ತಿದ್ದು, ಈ ಹಿನ್ನೆಲೆ ಕೊಪ್ಪಳದ ಗಂಗಾವತಿ ತಾಲೂಕಿನ ಶ್ರೀರಾಮನಗರದ ವಿದ್ಯಾನಿಕೇತನ ಪಬ್ಲಿಕ್ ಶಾಲೆಯ ಮಕ್ಕಳು ವಿನಾಯಕನ ಹಬ್ಬವನ್ನು ವಿಭಿನ್ನ ರೀತಿಯಲ್ಲಿ ಸ್ವಾಗತಿಸುವ ಮೂಲಕ ಗಮನ ಸೆಳೆದಿದ್ದಾರೆ.

    ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಪೈಕಿ ನಾಲ್ಕು ಸಾವಿರ ಮಕ್ಕಳು ಬೃಹತ್ ಆಕಾರದ ರೇಖಾ ಚಿತ್ರದ ಮೂಲಕ ಮೂಡಿಸಲಾದ ಗಣೇಶನ ಮೂರ್ತಿ ರೂಪಕದಲ್ಲಿ ಐದು ಸಾವಿರ ದೀಪಗಳನ್ನು ಬೆಳಗಿಸಿದ್ದಾರೆ.ಇದನ್ನೂ ಓದಿ: ಸ್ವತಃ ದೇವರೇ ಹೇಳಿದ್ರೂ ಮತ್ತೆ ಚುನಾವಣೆಗೆ ನಿಲ್ಲಲ್ಲ: ಕೇಂದ್ರ ಸಚಿವ ವಿ.ಸೋಮಣ್ಣ ರಾಜಕೀಯ ನಿವೃತ್ತಿ ಮಾತು

    ಈ ಮನಮೋಹಕ ದೃಶ್ಯವನ್ನು ಸುಮಾರು ಐನೂರು ಮೀಟರ್ ಎತ್ತರದಿಂದ ಡ್ರೋನ್ ಕ್ಯಾಮೆರಾ ಮೂಲಕ ಸೆರೆ ಹಿಡಿಯಲಾಗಿದೆ. ಅದರಲ್ಲೂ ಸಂಜೆಯ ಬಳಿಕ ಮಕ್ಕಳು, ಗಣೇಶನ ಆಕೃತಿಯ ಮೇಲೆ ದೀಪ ಹಚ್ಚಿರುವ ದೃಶ್ಯ ಹೆಚ್ಚು ಆಕರ್ಷಕವಾಗಿ ಸೆರೆ ಹಿಡಿಯಲಾಗಿದೆ.

    ಈ ಬಗ್ಗೆ ಮಾತನಾಡಿದ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನೆಕ್ಕಂಟಿ ಸೂರಿಬಾಬು, 4000 ವಿದ್ಯಾರ್ಥಿಗಳು 5000 ದೀಪಗಳಿಂದ ಬೃಹತ್ ಗಾತ್ರದ ಗಣೇಶನ ಆಕೃತಿಯ ರಚಿಸುವ ಮೂಲಕ ಗಣೇಶನ ಹಬ್ಬಕ್ಕೆ ಶುಭ ಕೋರಿದ್ದಾರೆ. ಅಲ್ಲದೇ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಪೂರ್ವ, ಪ್ರಾಥಮಿಕ ಹಂತದಿಂದ ಎಂಟನೆಯ ತರಗತಿವರೆಗಿನ ಸುಮಾರು 2000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಪರಿಸರ ಸ್ನೇಹಿ ಗಣೇಶನ ಮೂರ್ತಿಗಳನ್ನು ಮಾಡಿಸಲಾಗಿದೆ.

    ಈ ಮೂಲಕ ವಿದ್ಯಾರ್ಥಿಗಳಲ್ಲಿ ಪರಿಸರದ ಕುರಿತು ಕಾಳಜಿಯನ್ನು ಬೆಳೆಸುವುದರೊಂದಿಗೆ ಅವರಲ್ಲಿ ಅಂತರ್ಗತವಾಗಿರುವ ಕರಕುಶಲ ಸಾಮರ್ಥ್ಯ ಹಾಗೂ ಸೃಜನಶೀಲತೆಯನ್ನು ಅಭಿವ್ಯಕ್ತಗೊಳಿಸಲು ಈ ಕೆಲಸ ಮಾಡಿಸಲಾಗಿದೆ. ಶಾಲೆಯ ಕಲಾ ಮತ್ತು ಕರಕುಶಲ ವಿಭಾಗದ ಶಿಕ್ಷಕ ವಿನೋದ್ ಕುಮಾರ್ ನೇತೃತ್ವದಲ್ಲಿ ಈ ಕಾರ್ಯ ಮಾಡಲಾಗಿದೆ ಎಂದರು.ಇದನ್ನೂ ಓದಿ:

  • ಪೈಪ್ ಮೇಲಿಂದ ತುಂಗಭದ್ರಾ ಕಾಲುವೆ ದಾಟುವಾಗ ಬಾಲಕಿ ನೀರುಪಾಲು

    ಪೈಪ್ ಮೇಲಿಂದ ತುಂಗಭದ್ರಾ ಕಾಲುವೆ ದಾಟುವಾಗ ಬಾಲಕಿ ನೀರುಪಾಲು

    ಕೊಪ್ಪಳ: ಪೈಪ್ ಮೇಲಿಂದ ತುಂಗಭದ್ರಾ ಎಡದಂಡೆ ಕಾಲುವೆ ದಾಟಲು ಹೋಗಿ ಬಾಲಕಿಯೊಬ್ಬಳು ನೀರುಪಾಲಾದ ಘಟನೆ ಕೊಪ್ಪಳ (Koppal) ಜಿಲ್ಲೆಯ ಗಂಗಾವತಿ (Gangavathi) ತಾಲೂಕಿನ ಕರೆಕಲ್ ಕ್ಯಾಂಪ್ ಬಳಿ ನಡೆದಿದೆ.

    ಬಾಲಕಿಯನ್ನು ಚೈತ್ರಾ ಯಾದವ್(13) ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ದೆಹಲಿಯಲ್ಲಿ ಲ್ಯಾಂಡಿಂಗ್‌ ವೇಳೆ ಏರ್ ಇಂಡಿಯಾ ವಿಮಾನದಲ್ಲಿ ಬೆಂಕಿ – ಪ್ರಯಾಣಿಕರು ಸೇಫ್

    ಕಾಲುವೆ ಎಡಭಾಗದಲ್ಲಿ ಬಾಲಕಿಯ ಪಾಲಕರು ಕುರಿಯ ಹಟ್ಟಿಯನ್ನು ಹಾಕಿಕೊಂಡಿದ್ದರು. ಕಾಲುವೆಗೆ ಅಡ್ಡಲಾಗಿ ಹಾಕಿರುವ ಪೈಪ್ ಮೂಲಕ ಕಾಲುವೆಯ ಬಲಭಾಗಕ್ಕೆ ಬಂದು, ತಮ್ಮ ದಿನಬಳಕೆ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತಿದ್ದರು. ಎಂದಿನಂತೆ ಮಂಗಳವಾರ ಬಾಲಕಿಯು ಪೈಪ್ ಮೇಲಿಂದ ಕಾಲುವೆ ದಾಟಲು ಹೋಗಿದ್ದಾಳೆ. ಈ ವೇಳೆ ಕಾಲು ಜಾರಿ, ಎಡದಂಡೆ ಕಾಲುವೆಗೆ ಬಿದ್ದಿದ್ದಾಳೆ.

    ಕಾಲುವೆಯಲ್ಲಿ ನೀರಿನ ರಭಸ ಹೆಚ್ಚಾಗಿದ್ದ ಕಾರಣ ಬಾಲಕಿಯು ಹರಿದುಕೊಂಡು ಹೋಗಿದ್ದಾಳೆ. ಮಾಹಿತಿ ತಿಳಿದ ಕೂಡಲೇ ಪೊಲೀಸ್ ಇಲಾಖೆ, ಅಗ್ನಿಶಾಮಕ ದಳ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಬಾಲಕಿಗಾಗಿ ಹುಡುಕಾಟ ನಡೆಸಿದ್ದು, ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಕೇಸ್ – ಪ್ರಕರಣದ ತನಿಖೆಯನ್ನು ರಾಜಕೀಕರಣಗೊಳಿಸಬೇಡಿ: ಸತೀಶ್ ಜಾರಕಿಹೊಳಿ

  • ಕೊಪ್ಪಳ | ಹೃದಯಾಘಾತಕ್ಕೆ ಯೋಗ ಶಿಕ್ಷಕ ಬಲಿ – ಎರಡೇ ದಿನದಲ್ಲಿ ಮೂರು ಸಾವು

    ಕೊಪ್ಪಳ | ಹೃದಯಾಘಾತಕ್ಕೆ ಯೋಗ ಶಿಕ್ಷಕ ಬಲಿ – ಎರಡೇ ದಿನದಲ್ಲಿ ಮೂರು ಸಾವು

    ಕೊಪ್ಪಳ: ಏಕಾಏಕಿ ಎದೆನೋವು ಕಾಣಿಸಿಕೊಂಡು ಯೋಗ ಶಿಕ್ಷಕರೊಬ್ಬರು ಹೃದಯಾಘಾತದಿಂದ (Heart Attack) ಸಾವನ್ನಪ್ಪಿರುವ ಘಟನೆ ಕೊಪ್ಪಳ (Koppal) ಜಿಲ್ಲೆ ಗಂಗಾವತಿ (Gangavathi) ತಾಲೂಕಿನ ಹಿರೇಬೆನಕಲ್‌ನಲ್ಲಿ ನಡೆದಿದೆ.ಇದನ್ನೂ ಓದಿ: ಚಿಕ್ಕಮಗಳೂರು | ವಿದ್ಯುತ್ ಶಾಕ್‍ಗೆ ನವವಿವಾಹಿತ ಲೈನ್‍ಮೆನ್ ಬಲಿ

    ಮೃತರನ್ನು ಬಹದ್ದೂರ ಬಂಡಿ ಗ್ರಾಮದ ಶಾಂತವೀರ ಸ್ವಾಮಿ ಗಂಗಾಧರ ಮಠ (57) ಎನ್ನಲಾಗಿದ್ದು, ಹಿರೇಬೆನಕಲ್ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಯ ಹಾಗೂ ಯೋಗ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು.

    ಶುಕ್ರವಾರ ಬೆಳಗಿನ ಜಾವ ಎದೆನೋವು ಕಾಣಿಸಿಕೊಂಡ ಹಿನ್ನೆಲೆ ಹುಬ್ಬಳ್ಳಿ (Hubballi) ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಈವರೆಗೂ ಜಿಲ್ಲೆಯಲ್ಲಿ ಹೃದಯಾಘಾತದಿಂದ ಐದು ಜನ ಸಾವನ್ನಪ್ಪಿದ್ದು, ಎರಡೇ ದಿನದಲ್ಲಿ ಮೂವರು ಸಾವನ್ನಪ್ಪಿದ್ದಾರೆ.ಇದನ್ನೂ ಓದಿ: ಇಂಡಿಯಾ ಒಕ್ಕೂಟದಿಂದ ಹೊರಬಂದ ಆಪ್‌ – ಎಎಪಿ ನಾಯಕ ಸಂಜಯ್‌ ಸಿಂಗ್‌ ಹೇಳಿಕೆ

  • ರಘುವರ್ಯ ತೀರ್ಥರ ಮಧ್ಯಾರಾಧನೆ ಮಹೋತ್ಸವ ಸಂಪನ್ನ

    ರಘುವರ್ಯ ತೀರ್ಥರ ಮಧ್ಯಾರಾಧನೆ ಮಹೋತ್ಸವ ಸಂಪನ್ನ

    ಕೊಪ್ಪಳ: ಗಂಗಾವತಿ (Gangavathi) ತಾಲೂಕಿನ ಆನೆಗೊಂದಿ (Anegondi) ಗ್ರಾಮದ ನವಬೃಂದಾವನ ಗಡ್ಡೆಯಲ್ಲಿ ಶ್ರೀರಘುವರ್ಯ ತೀರ್ಥರ ಮಧ್ಯಾರಾಧನೆಯ ಮಹೋತ್ಸವವನ್ನು ಶನಿವಾರ ನೆರವೆರಿಸಲಾಯಿತು.ಇದನ್ನೂ ಓದಿ: ವಿಮಾನ ದುರಂತ ಸ್ಥಳಕ್ಕೆ ಭೇಟಿ – ಗಾಯಾಳುಗಳ ಆರೋಗ್ಯ ವಿಚಾರಿಸಿ, ಧೈರ್ಯ ತುಂಬಿದ ಮಲ್ಲಿಕಾರ್ಜುನ ಖರ್ಗೆ

    ಉತ್ತರಾಧಿ ಮಠದ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ, ಶಿವಮೊಗ್ಗದ ಆರ್ಯ ಅಕ್ಷೋಭ್ಯ ತೀರ್ಥ ಮಠದ ಮಠಾಧೀಶರಾದ ರಘುವಿಜಯ ತೀರ್ಥರ ಸಾನಿಧ್ಯದಲ್ಲಿ ಮಧ್ಯಾರಾಧನೆ ಮಹೋತ್ಸವ ಪೂಜಾ ಕಾರ್ಯಕ್ರಮಗಳನ್ನು ನಡೆಸಲಾಯಿತು. ಮಧ್ಯಾರಾಧನೆಯ ಅಂಗವಾಗಿ ರಘುವರ್ಯ ತೀರ್ಥರ ಮೂಲಬೃಂದಾವನಕ್ಕೆ ನಿರ್ಮೂಲ್ಯ ವಿಸರ್ಜನೆ, ಪಂಚಾಮೃತ ಅಭಿಷೇಕ, ರೇಷ್ಮೆ ವಸ್ತ್ರಗಳ ಸಮರ್ಪಣೆ, ವಿವಿಧ ಪುಷ್ಪಗಳ ಅಲಂಕಾರ, ಮಹಾಮಂಗಳಾರತಿ ಸೇರಿದಂತೆ ನಾನಾ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಿದವು. ನಂತರ ಉತ್ತರಾಧಿ ಮಠದ ಶ್ರೀಗಳಾದ ಸತ್ಯಾತ್ಮ ತೀರ್ಥ ಶ್ರೀಗಳಿಂದ ಭಕ್ತರಿಗೆ ತಪ್ತಮುದ್ರಾಧಾರಣೆ, ಸಂಸ್ಥಾನ ಪೂಜೆ, ಹಸ್ತೋದಕ ಪೂಜೆಗಳನ್ನು ನಡೆಸಲಾಯಿತು.

    ನಂತರ ಸತ್ಯಾತ್ಮ ತೀರ್ಥ ಶ್ರೀಗಳು ಮಾತನಾಡಿ, ನವಬೃಂದಾವನ ಗಡ್ಡೆಯಲ್ಲಿ ಬೃಂದಾವನರಾಗಿರುವ ಶ್ರೀ ರಘುವರ್ಯ ತೀರ್ಥರು ತೋರಿಸಿಕೊಟ್ಟ ಮಾರ್ಗದಲ್ಲಿ, ಸಾಧಿಸಿದ ಹಾದಿಯಲ್ಲಿ ನಾವೆಲ್ಲರೂ ಸಾಗಬೇಕು. ಅವರ ಸಂದೇಶಗಳನ್ನು ಆಚರಣೆಗೆ ತರಬೇಕು. ಸುಧಾ-ಸರ್ವಮೂಲ ಗ್ರಂಥಗಳ ಅಧ್ಯಯನದ ಮೂಲಕ ಜೀವನ ಪಾವನಗೊಳಿಸಿಕೊಳ್ಳಬೇಕು. ನವಬೃಂದಾವನ ಗಡ್ಡೆ ಒಂದು ಪರಮ ಪವಿತ್ರ ತಾಣವಾಗಿದ್ದು, ಇಲ್ಲಿನ ಯತಿಗಳ ಆರಾಧನೆಯಲ್ಲಿ ಭಾಗವಹಿಸುವ ಮೂಲಕ ಅವರ ಆಶೀರ್ವಾದಕ್ಕೆ ಪಾತ್ರರಾಗಬೇಕು ಎಂದು ಹೇಳಿದರು. ಮಠದ ದಿವಾನ ಪಂಡಿತ ಶಶಿಧರ ಚಾರ್ಯರು, ಉಮರ್ಜಿ ಶ್ರೀಕರಾಚಾರ್ಯರು, ಮಹಿಷಿ ಆನಂದ ಆಚಾರ್ಯ, ನರಸಿಂಹ ಆಚಾರ್ಯ, ಜ್ಯೋತಿಷ್ಯ ವಿದ್ವಾಂಸ ಪ್ರಸನ್ನಾಚಾರ್ಯ ಕಟ್ಟಿ, ಮಠದ ವ್ಯವಸ್ಥಾಪಕ ಆನಂದ ಆಚಾರ್ಯ ಹಾಗೂ ಇತರರಿದ್ದರು.ಇದನ್ನೂ ಓದಿ: 11A ಸೀಟ್ ಮಿಸ್ಟರಿ – 2 ವಿಮಾನ ಪತನ, ಒಂದೇ ಕಡೆ ಕುಳಿತಿದ್ದ ಇಬ್ಬರು ಮೃತ್ಯುಂಜಯರು!

  • ಪೆಟ್ರೋಲ್ ಹಾಕಿ ದುಡ್ಡು ಕೇಳಿದ್ದಕ್ಕೆ ಪಂಪ್ ಸಿಬ್ಬಂದಿ ಮೇಲೆ ಮೂವರಿಂದ ಹಲ್ಲೆ

    ಪೆಟ್ರೋಲ್ ಹಾಕಿ ದುಡ್ಡು ಕೇಳಿದ್ದಕ್ಕೆ ಪಂಪ್ ಸಿಬ್ಬಂದಿ ಮೇಲೆ ಮೂವರಿಂದ ಹಲ್ಲೆ

    ಕೊಪ್ಪಳ: ಪೆಟ್ರೋಲ್ (Petrol) ಹಾಕಿ ದುಡ್ಡು ಕೇಳಿದ್ದಕ್ಕೆ ಪಂಪ್ ಸಿಬ್ಬಂದಿ ಮೇಲೆ ಮೂವರು ಸೇರಿ ಹಲ್ಲೆ ನಡೆಸಿರುವ ಘಟನೆ ಗಂಗಾವತಿ (Gangavathi) ಹೊರವಲಯದ ಸಾಯಿ ನಗರದಲ್ಲಿನ ಭಾರತ ಪೆಟ್ರೋಲ್ ಪಂಪ್‌ನಲ್ಲಿ ನಡೆದಿದೆ.ಇದನ್ನೂ ಓದಿ:ಆರಾಧನಾ ಸ್ಥಳಗಳ ಕಾಯ್ದೆ ಪ್ರಶ್ನಿಸಿ ರಿಟ್ – ಹೊಸ ಅರ್ಜಿ ವಿಚಾರಣೆಗೆ ನಿರಾಕರಿಸಿದ ಸುಪ್ರೀಂ

    ಸೋಮವಾರ ಸಂಜೆ ಈ ಘಟನೆ ನಡೆದಿದ್ದು, 50 ರೂ. ಪೆಟ್ರೋಲ್ ಹಾಕಿಸಿಕೊಂಡು ಗಲಾಟೆ ಮಾಡಿದ್ದಾರೆ. ಬಳಿಕ ಕೈಗೆ ಸಿಕ್ಕ ವಸ್ತುಗಳಿಂದ ಹಲ್ಲೆ ಮಾಡಿದ್ದಾರೆ. ಪೆಟ್ರೋಲ್ ಪಂಪ್ ಸಿಬ್ಬಂದಿ ಶ್ರೀಕಾಂತ ಹಾಗೂ ಅನಿಲ್ ಎಂಬುವವರ ಮೇಲೆ ಮೂವರು ಪುಂಡರು ಸೇರಿ ಹಲ್ಲೆ ನಡೆಸಿದ್ದಾರೆ. ಜೊತೆಗೆ ಗಲಾಟೆ ಬಿಡಿಸಲು ಹೋದವರ ಮೇಲೆಯೂ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಹಲ್ಲೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಸದ್ಯ ಹಲ್ಲೆಗೊಳಗಾದ ಪೆಟ್ರೋಲ್ ಪಂಪ್ ಸಿಬ್ಬಂದಿ ಗಂಗಾವತಿ ಗ್ರಾಮೀಣ ಠಾಣೆಗೆ ದೂರು ದಾಖಲಿಸಿದ್ದು, ಗಂಗಾವತಿ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.ಇದನ್ನೂ ಓದಿ:ಎರಡು ಅವಧಿಗೆ ಸಿಡ್ನಿ ಸಿಕ್ಸರ್‌ ಪರ ಆಡಲಿದ್ದಾರೆ ಕೊಹ್ಲಿ!

  • ಅಂಜನಾದ್ರಿ ಬೆಟ್ಟಕ್ಕೆ ರೋಪ್ ವೇ ನಿರ್ಮಿಸಲು ರಾಜ್ಯ ಸರ್ಕಾರದಿಂದ ಅನುಮೋದನೆ

    ಅಂಜನಾದ್ರಿ ಬೆಟ್ಟಕ್ಕೆ ರೋಪ್ ವೇ ನಿರ್ಮಿಸಲು ರಾಜ್ಯ ಸರ್ಕಾರದಿಂದ ಅನುಮೋದನೆ

    ಕೊಪ್ಪಳ: ರಾಮಾಯಣ ಕಾಲದ ಐತಿಹಾಸಿಕ ಹಿನ್ನೆಲೆ ಹೊಂದಿರುವ ಗಂಗಾವತಿ (Gangavtahi) ತಾಲೂಕಿನ ಚಿಕ್ಕರಾಂಪೂರ ಗ್ರಾಮದ ಅಂಜನಾದ್ರಿ ಬೆಟ್ಟಕ್ಕೆ (Anjanadri Hill) ರೋಪ್ ವೇ ನಿರ್ಮಿಸಲು ರಾಜ್ಯ ಸರ್ಕಾರ ಅನುಮೋದನೆ ನೀಡಿದ್ದು, ಪ್ರವಾಸೋದ್ಯಮ ಇಲಾಖೆಯ (Tourism Department) ಅಧಿಕಾರಿಗಳು ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿದರು.ಇದನ್ನೂ ಓದಿ:ಜಮ್ಮು-ಕಾಶ್ಮೀರದ ಕಥುವಾದಲ್ಲಿ ಎನ್‌ಕೌಂಟರ್‌ – ನಾಲ್ವರು ಪೊಲೀಸರು ಹುತಾತ್ಮ, ಇಬ್ಬರು ಉಗ್ರರ ಹತ್ಯೆ

    ರೋಪ್ ವೇ ನಿರ್ಮಾಣಕ್ಕೆ ಅನುಮೋದನೆ ದೊರೆತಿರುವ ಕಾರಣ ಕೇಂದ್ರದ RITES ಸಂಸ್ಥೆಯ ಪ್ರತಿನಿಧಿಗಳು ಹಾಗೂ ರಾಜ್ಯ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಶಾಸಕ ಗಾಲಿ ಜನಾರ್ದನ ರೆಡ್ಡಿಯವರ (G.Janardhana Reddy) ನೇತೃತ್ವದಲ್ಲಿ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಬೆಟ್ಟದ ಹಿಂಬದಿಯಿಂದ ರೋಪ್ ವೇ ನಿರ್ಮಾಣಕ್ಕೆ ಸ್ಥಳ ಗುರುತು ಮಾಡಲಾಗಿದ್ದು, 450 ಮೀ. ಉದ್ದದ ರೋಪ್ ವೇ ನಿರ್ಮಾಣಕ್ಕೆ ನಿರ್ಧರಿಸಿದೆ. ಅದರಲ್ಲಿ ಒಂದು ಗಂಟೆಯಲ್ಲಿ 800 ಭಕ್ತಾಧಿಗಳನ್ನು ಅಂಜನಾದ್ರಿ ಬೆಟ್ಟದ ಮೇಲೆ ತಲುಪಿಸಬಹುದಾಗಿದೆ.

    ಶಾಸಕ ಗಾಲಿ ಜನಾದ9ನ ರೆಡ್ಡಿ ಮಾತನಾಡಿ, ಅಂಜನಾದ್ರಿ ಬೆಟ್ಟಕ್ಕೆ ರೋಪ್ ವೇ ನಿರ್ಮಾಣ ವಿಚಾರಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಜೊತೆ ಮಾತುಕತೆ ನಡೆಸಿ, ರೋಪ್ ವೇ ನಿರ್ಮಾಣ ಕ್ಕೆ ಮನವಿ ಮಾಡಿಕೊಂಡಿದ್ದೆ. ಮನವಿಗೆ ಸ್ಪಂದಿಸಿ, ರೋಪ್ ವೇ ನಿರ್ಮಾಣ ಒಪ್ಪಿಗೆ ಸಿಕ್ಕಿದೆ. ರಾಜ್ಯ ಸರ್ಕಾರ ಕೂಡ ಅನುಮೋದನೆಯನ್ನು ನೀಡಿದೆ. ಸದ್ಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ ಬಳಿಕ ಕಾಮಗಾರಿ ಆರಂಭವಾದ 1 ವರ್ಷದ ಒಳಗಾಗಿಯೇ ಪೂಣ9ಗೊಳಿಸುವ ಸಾಧ್ಯತೆ ಇದೆ ಎಂದು ಹೇಳಿದರು.ಇದನ್ನೂ ಓದಿ:ಮಧುಗಿರಿ ಏಕಶಿಲಾ ಬೆಟ್ಟಕ್ಕೆ ರೋಪ್ ವೇ ನಿರ್ಮಾಣಕ್ಕೆ 50 ಕೋಟಿ ರೂ.ನಿಗದಿ: ಸಚಿವ ರಾಜಣ್ಣ

  • ಕೊಪ್ಪಳ ಗ್ಯಾಂಗ್‌ರೇಪ್ ಪ್ರಕರಣ – ಮೂವರು ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ

    ಕೊಪ್ಪಳ ಗ್ಯಾಂಗ್‌ರೇಪ್ ಪ್ರಕರಣ – ಮೂವರು ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ

    ಕೊಪ್ಪಳ: ವಿದೇಶಿ ಮಹಿಳೆ ಮತ್ತು ಹೋಮ್‌ಸ್ಟೇ ಮಾಲೀಕೆ ಮೇಲೆ ಗ್ಯಾಂಗರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ (Judicial Custody) ಒಪ್ಪಿಸಿ ಕೊಪ್ಪಳ (Koppal) ಗಂಗಾವತಿ ನ್ಯಾಯಾಲಯ ಆದೇಶ ಹೊರಡಿಸಿದೆ.

    ಆರೋಪಿಗಳಾದ ಮಲ್ಲೇಶ್, ಚೇತನಸಾಯಿ, ಶರಣಬಸವನನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಗಂಗಾವತಿ ಗ್ರಾಮೀಣ ಠಾಣೆ ಪೊಲೀಸರು ಸೋಮವಾರ ರಾತ್ರಿ ಮೂವರು ಆರೋಪಿಗಳನ್ನು ನ್ಯಾಯಾಲಯ ಮುಂದೆ ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ಮೂವರು ಆರೋಪಿಗಳನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಿದ್ದಾರೆ. ಸದ್ಯ ಮೂವರು ಆರೋಪಿಗಳನ್ನು ಪೊಲೀಸರು ಕೊಪ್ಪಳ ಜೈಲಿಗಟ್ಟಿದ್ದಾರೆ. ಇದನ್ನೂ ಓದಿ: ಗ್ರೇಟರ್ ಬೆಂಗಳೂರು ವಿಧೇಯಕಕ್ಕೆ ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ವಿರೋಧ

    ಘಟನೆ ಏನು?
    ಜಿಲ್ಲೆಯ ಗಂಗಾವತಿ (Gangavati) ತಾಲೂಕಿನ ಸಣಾಪೂರ ಕೆರೆ ಸಮೀಪದ ತುಂಗಭದ್ರಾ ಎಡದಂಡೆ ಕಾಲುವೆ ಪಕ್ಕದಲ್ಲಿ ಕುಳಿತುಕೊಂಡು ನಕ್ಷತ್ರ ವೀಕ್ಷಿಸುತ್ತಿದ್ದ 5 ಜನ ವಿದೇಶಿ ಪ್ರವಾಸಿಗರ ಮೇಲೆ ಗುರುವಾರ ಮೂವರು ದುಷ್ಕರ್ಮಿಗಳು ಹಲ್ಲೆ ನಡೆಸಿದ್ದರು. ಮೂವರು ಪುರುಷರನ್ನು ಕೆರೆಗೆ ತಳ್ಳಿ, ಇಬ್ಬರು ಮಹಿಳಾ ಪ್ರವಾಸಿಗರ ಮೇಲೆ ಅತ್ಯಾಚಾರವೆಸಗಿದ್ದರು. ಇದನ್ನೂ ಓದಿ: Hassan| ಅತ್ತೆ-ಸೊಸೆ ಜಗಳ; ಕೆರೆಗೆ ಹಾರಿ ತಾಯಿ, ಮಗ ಆತ್ಮಹತ್ಯೆ

  • ಅಂಜನಾದ್ರಿಯಲ್ಲಿ ಹುಂಡಿ ಎಣಿಕೆ – ಎಣಿಕೆ ಕಾರ್ಯದಲ್ಲಿ ಗಮನ ಸೆಳೆದ ವಿದೇಶಿ ಮಹಿಳೆ

    ಅಂಜನಾದ್ರಿಯಲ್ಲಿ ಹುಂಡಿ ಎಣಿಕೆ – ಎಣಿಕೆ ಕಾರ್ಯದಲ್ಲಿ ಗಮನ ಸೆಳೆದ ವಿದೇಶಿ ಮಹಿಳೆ

    ಕೊಪ್ಪಳ: ಅಂಜನಾದ್ರಿಯಲ್ಲಿ (Anjanadri) ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ವಿದೇಶಿ ಮಹಿಳೆ ಎಣಿಕೆ ಕಾರ್ಯದಲ್ಲಿ ಭಾಗವಹಿಸಿ ಎಲ್ಲರ ಗಮನ ಸೆಳೆದಿದ್ದಾರೆ.

    ಜಿಲ್ಲೆಯ ಗಂಗಾವತಿ ತಾಲೂಕಿನ ಹನುಮಳ್ಳಿಯ ಅಂಜನಾದ್ರಿ ಬೆಟ್ಟದಲ್ಲಿ ಇಂದು ಹುಂಡಿ ಎಣಿಕೆ ಕಾರ್ಯ ನಡೆಯಿತು. ಇದೇ ವೇಳೆ ಪ್ರವಾಸಕ್ಕೆಂದು ಅಂಜನಾದ್ರಿಗೆ ಬಂದಿದ್ದ ವಿದೇಶಿ ಮಹಿಳೆ ಹುಂಡಿ ಎಣಿಕೆ ಕಾರ್ಯದಲ್ಲಿ ತೊಡಗಿಕೊಂಡಿದ್ದು, ಗಮನ ಸೆಳೆದಿದೆ.ಇದನ್ನೂ ಓದಿ: ಅಪಘಾತದ ಬಳಿಕ ಚಾಲಕನಿಗೆ ಭಯ – ಬೇಗ ಹೋಗಪ್ಪ ಅಂದ್ರೂ 30ರ ಮೇಲೆ ಹೋಗಲ್ಲ: ಲಕ್ಷ್ಮಿ ಹೆಬ್ಬಾಳ್ಕರ್

    ಇತ್ತೀಚಿನ ದಿನಗಳಲ್ಲಿ ಅಂಜನಾದ್ರಿಗೆ ಬರುವ ಭಕ್ತರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ. ಜ.01 ರಿಂದ ಮಾ.07ರವರೆಗಿನ ಅವಧಿಯಲ್ಲಿ ಸಂಗ್ರಹಗೊಂಡ ಕಾಣಿಕೆಯ ಎಣಿಕೆ ಕಾರ್ಯ ಇಂದು ನಡೆದಿದ್ದು, ಒಟ್ಟು 28 ಲಕ್ಷ ರೂ. (28,35,647) ಕಾಣಿಕೆ ಸಂಗ್ರಹವಾಗಿದೆ.

    ದೇವಸ್ಥಾನ ಆಡಳಿತಾಧಿಕಾರಿ ಪ್ರಕಾಶ್.ರಾವ್ ಅವರ ನೇತೃತ್ವದಲ್ಲಿ ಹಾಗೂ ಪೊಲೀಸ್ ಬಂದೋಬಸ್ತ್, ಸಿಸಿಟಿವಿ ಕ್ಯಾಮೆರಾ ಕಣ್ಗಾವಲಿನಲ್ಲಿ ಹುಂಡಿ ಎಣಿಕೆ ಕಾರ್ಯ ನಡೆಯಿತು.ಇದನ್ನೂ ಓದಿ: ಹೆಣ್ಣುಮಕ್ಕಳಿಗೆ ಅಟೋ ಕಲಿಸಿಕೊಟ್ಟ ಡಬಲ್‌ ಸ್ಟಾರ್‌ ಪ್ರಭಾವತಿಗೆ ನಾರಿ ನಾರಾಯಣಿ ಗೌರವ

     

     

  • ಕೊಪ್ಪಳ| ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿ ನಾಪತ್ತೆಯಾಗಿದ್ದ ಪ್ರವಾಸಿಗ ಶವವಾಗಿ ಪತ್ತೆ

    ಕೊಪ್ಪಳ| ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿ ನಾಪತ್ತೆಯಾಗಿದ್ದ ಪ್ರವಾಸಿಗ ಶವವಾಗಿ ಪತ್ತೆ

    ಕೊಪ್ಪಳ: ವಿದೇಶಿ ಮತ್ತು ದೇಶಿ ಪ್ರವಾಸಿಗರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾಗಿದ್ದ ಓರ್ವ ಪ್ರವಾಸಿಯ ಶವ ಇಂದು ತುಂಗಭದ್ರಾ ಎಡದಂಡೆ ಕಾಲುವೆ (Tungabhadra Left Bank Canal) ಬಳಿ ಪತ್ತೆಯಾಗಿದೆ.

    ಮೃತನನ್ನು ಒರಿಸ್ಸಾ ಮೂಲದ ಬೀಬಾಷಾ ಎಂದು ಗುರುತಿಸಲಾಗಿದೆ. ಜಿಲ್ಲೆಯ ಗಂಗಾವತಿ ತಾಲೂಕಿನ ಸಾಣಾಪುರ ಕೆರೆಯ ಸಮೀಪದ ತುಂಗಭದ್ರಾ ಎಡದಂಡೆ ಕಾಲುವೆ ಬಳಿ ಗುರುವಾರ ರಾತ್ರಿ ಸಂಗೀತ ಆಲಿಸುತ್ತಾ ಕುಳಿತ್ತಿದ್ದ ನಾಲ್ವರ ಮೇಲೆ ಹಲ್ಲೆ ನಡೆದಿತ್ತು. ನಾಲ್ವರ ಪೈಕಿ ಓರ್ವ ನಾಪತ್ತೆಯಾಗಿದ್ದ.ಇದನ್ನೂ ಓದಿ: ಕೊಪ್ಪಳದಲ್ಲಿ ಇಸ್ರೇಲ್‌ ಮಹಿಳೆ ಸೇರಿ ಇಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ

    ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಸೇರಿ ಕಾಲುವೆಯಲ್ಲಿ ಹುಡುಕಾಟ ನಡೆಸಿದ್ದರು. 24 ಗಂಟೆಗಳ ಬಳಿಕ ಕಾಲುವೆಯಲ್ಲಿ ಮೃತದೇಹ ತೇಲುತ್ತಿರುವುದನ್ನು ಗಮನಿಸಿದ ಅಧಿಕಾರಿಗಳು, ಶವವನ್ನು ಹೊರತೆಗೆದಿದ್ದಾರೆ.

    ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಉಪವಿಭಾಗ ಆಸ್ಪತ್ರೆಗೆ ರವಾನಿಸಲಾಗಿದ್ದು, ದುಷ್ಕರ್ಮಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

    ಘಟನೆ ಏನು?
    ಗುರುವಾರ ರಾತ್ರಿ 11 ಗಂಟೆ ಸುಮಾರಿಗೆ ಎಡದಂಡೆ ಕಾಲುವೆ ಬಳಿ ಸಂಗೀತ ಆಲಿಸುತ್ತಾ ನಾಲ್ವರು ಕುಳಿತ್ತಿದ್ದರು. ಈ ವೇಳೆ ಬೈಕ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು, ಇಸ್ರೇಲ್, ಜರ್ಮನಿ ದೇಶದ ಇಬ್ಬರು, ಮಹಾರಾಷ್ಟ್ರ, ಓರಿಸ್ಸಾದ ಇಬ್ಬರ ಮೇಲೆ ಹಲ್ಲೆ ನಡೆಸಿದ್ದರು. ನಾಲ್ವರ ಪೈಕಿ ಓರ್ವ ನಾಪತ್ತೆಯಾಗಿದ್ದು, ಹುಡುಕಾಟ ನಡೆದಿತ್ತು.ಇದನ್ನೂ ಓದಿ: ನಮ್ಮ ಬಜೆಟ್ ದೇಶಕ್ಕೆ ಮಾದರಿ: ಡಿಕೆಶಿ