Tag: ಗಂಗವ್ವ

  • Bigg Boss ಸ್ಪರ್ಧಿಗೆ ಹೃದಯಾಘಾತ- ಆಸ್ಪತ್ರೆಗೆ ದಾಖಲು

    Bigg Boss ಸ್ಪರ್ಧಿಗೆ ಹೃದಯಾಘಾತ- ಆಸ್ಪತ್ರೆಗೆ ದಾಖಲು

    ನ್ನಡದ ‘ಬಿಗ್ ಬಾಸ್ ಸೀಸನ್ 11’ರ ಕಾರ್ಯಕ್ರಮದಂತೆ ತೆಲುಗಿನ ಬಿಗ್‌ ಬಾಸ್‌ ಸೀಸನ್‌ 8ಕ್ಕೂ (Bigg Boss Telugu 8) ಅದ್ಧೂರಿ ಚಾಲನೆ ಸಿಕ್ಕಿದೆ. ನಾಗಾರ್ಜುನ ನಿರೂಪಣೆಯ ತೆಲುಗಿನ ಬಿಗ್ ಬಾಸ್ ಕುರಿತು ಬ್ರೇಕಿಂಗ್ ನ್ಯೂಸ್‌ವೊಂದು ಹೊರಬಿದ್ದಿದೆ. ಬಿಗ್ ಬಾಸ್‌ನಲ್ಲಿರುವಾಗಲೇ ಖ್ಯಾತ ಯೂಟ್ಯೂಬರ್ ಗಂಗವ್ವಗೆ ಹೃದಯಾಘಾತವಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ:ಮೊದಲ ಹಂತದ ಶೂಟಿಂಗ್ ಮುಗಿಸಿದ ಮಂಸೋರೆ

    60 ವರ್ಷ ದಾಟಿದರೂ ಯಾವ ಸ್ಪರ್ಧಿಗಳಿಗೂ ಕಮ್ಮಿಯಿಲ್ಲ ಎಂಬಂತೆ ಟಫ್ ಫೈಟ್ ಕೊಡುತ್ತಿದ್ದ ವೈಲ್ಡ್ ಕಾರ್ಡ್ ಎಂಟ್ರಿ ಗಂಗಮ್ಮಗೆ ಸೋಮವಾರ ರಾತ್ರಿ (ಅ.21) ಹೃದಯಾಘಾತವಾಗಿದೆ ಎಂಬ ಸುದ್ದಿ ಹಬ್ಬಿದೆ. ಶೋನಲ್ಲಿರುವಾಗಲೇ ಈ ಘಟನೆ ನಡೆದಿದ್ದು, ಕೂಡಲೇ ಅವರಿಗೆ ವೈದ್ಯಕೀಯ ನೆರವು ಒದಗಿಸಲಾಗಿದೆ. ಸದ್ಯ ಅವರು ಪ್ರಾಣಪಾಯದಿಂದ ಪಾರಾಗಿದ್ದು, ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ವರದಿ ಆಗಿದೆ.

     

    View this post on Instagram

     

    A post shared by Milkuri Gangavva (@gangavva)

    ಅಂದಹಾಗೆ, ‘ಮೈ ವಿಲೇಜ್ ಶೋ’ ಮೂಲಕ ಯೂಟ್ಯೂಬ್‌ನಲ್ಲಿ ಹಾಸ್ಯ ಭರಿತ ವಿಡಿಯೋಗಳಿಂದ ಖ್ಯಾತಿ ಗಳಿಸಿದ್ದ ಗಂಗವ್ವ ಈ ಹಿಂದೆ ‘ಬಿಗ್ ಬಾಸ್ ಸೀಸನ್ 4’ರಲ್ಲಿ ಕೂಡ ಸ್ಪರ್ಧಿಯಾಗಿದ್ದರು. ಅನಾರೋಗ್ಯ ಸಮಸ್ಯೆಯಿಂದ ಅರ್ಧಕ್ಕೆ ಶೋ ತೊರೆದಿದ್ದರು. ಇದೀಗ ಮತ್ತೆ ತೆಲುಗಿನ ಸೀಸನ್ 8ರಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ರಂಜಿಸುತ್ತಿದ್ದಾರೆ.

  • ಬಿಗ್ ಬಾಸ್ ಸ್ಪರ್ಧಿ ಗಂಗವ್ವಗೆ ಮನೆ ಕಟ್ಟಲು ಸಹಾಯ ಮಾಡಿದ ನಟ ನಾಗಾರ್ಜುನ

    ಬಿಗ್ ಬಾಸ್ ಸ್ಪರ್ಧಿ ಗಂಗವ್ವಗೆ ಮನೆ ಕಟ್ಟಲು ಸಹಾಯ ಮಾಡಿದ ನಟ ನಾಗಾರ್ಜುನ

    ತೆಲುಗಿನ ಜನಪ್ರಿಯ ಯೂಟ್ಯೂಬರ್, ಮಾಜಿ ಬಿಗ್ ಬಾಸ್ (Bigg Boss) ಸ್ಪರ್ಧಿ ಗಂಗವ್ವ (Gangavva) ಅವರ ಸಂಕಷ್ಟಕ್ಕೆ ಟಾಲಿವುಡ್ (Tollywood) ನಟ ನಾಗಾರ್ಜುನ (Nagarjuna) ಸಾಥ್ ನೀಡಿದ್ದಾರೆ. ಮನೆ ಕಟ್ಟಲು ಗಂಗವ್ವ ಅವರಿಗೆ ನಟ ಕೈಜೋಡಿಸಿದ್ದಾರೆ. ಇದನ್ನೂ ಓದಿ: ರೆಡ್ ಲೆಹೆಂಗಾ ಧರಿಸಿ ನಟಿ ನೋರಾ ಜೊತೆ ಕುಣಿದ ಅಕ್ಷಯ್ ಕುಮಾರ್ ಟ್ರೋಲ್

     

    View this post on Instagram

     

    A post shared by Milkuri Gangavva (@gangavva)

    ಕಿರುತೆರೆ ಬಿಗ್ ಬಾಸ್ ಸೀಸನ್ 4ರಲ್ಲಿ ಸ್ಪರ್ಧಿಯಾಗಿ ಗಂಗವ್ವ ಗಮನ ಸೆಳೆದಿದ್ದರು. ಪ್ರೇಕ್ಷಕರ ಪ್ರೀತಿಯಷ್ಟೇ ಪಡೆದಿರೋದು ಮಾತ್ರವಲ್ಲ ನಾಗಾರ್ಜುನ ಅವರ ಸ್ನೇಹವನ್ನ ಕೂಡ ಸಂಪಾದಿಸಿದ್ದರು. ದೊಡ್ಮನೆ ವೇದಿಕೆಯಲ್ಲಿ ತಮಗೆ ಮನೆ ಕಟ್ಟುವ ಆಸೆಯಿದೆ ಎಂದು ಅವರು ತಿಳಿಸಿದ್ದರು. ಅದರಂತೆಯೇ ಗಂಗವ್ವ ಅವರ ಕನಸಿಗೆ ನಟ ಸಹಾಯ ಮಾಡಿದ್ದಾರೆ.

     

    View this post on Instagram

     

    A post shared by Milkuri Gangavva (@gangavva)

    ಇತ್ತೀಚೆಗೆ ನೀಡಿರುವ ಸಂದರ್ಶನದಲ್ಲಿ ಮನೆ (House) ಕಟ್ಟಲು ಎಷ್ಟು ಖರ್ಚಾಯಿತು, ಹಣ ಹೊಂದಿಸಿದ್ದು ಹೇಗೆ? ನಟ ನಾಗಾರ್ಜುನ ಎಷ್ಟು ಹಣ ಕೊಟ್ಟರು ಇತ್ಯಾದಿ ವಿಷಯಗಳ ಬಗ್ಗೆ ಗಂಗವ್ವ ಮಾತನಾಡಿದ್ದಾರೆ.

     

    View this post on Instagram

     

    A post shared by Milkuri Gangavva (@gangavva)

    ಮನೆ ಕಟ್ಟಲು 20 ಲಕ್ಷ ರೂಪಾಯಿ ಖರ್ಚು ಮಾಡಿರುವುದಾಗಿ ಹೇಳಿರುವ ಗಂಗವ್ವ, ನಟ ನಾಗಾರ್ಜುನ ಏಳು ಲಕ್ಷ ರೂಪಾಯಿ ಹಣವನ್ನು ಮನೆ ಕಟ್ಟಲೆಂದು ನೀಡಿದ್ದಾಗಿ ಹೇಳಿಕೊಂಡಿದ್ದಾರೆ. ತಾನು ಬಿಗ್‌ಬಾಸ್‌ನಲ್ಲಿ ಭಾಗವಹಿಸಿ ಐದು ವಾರ ಇದ್ದಿದ್ದಕ್ಕೆ ಸಂಭಾವನೆಯಾಗಿ ಹತ್ತು ಲಕ್ಷ ಹಣ ಕೊಟ್ಟಿದ್ದರು. ಎಲ್ಲವನ್ನೂ ಸೇರಿಸಿ ಮನೆ ಕಟ್ಟಿಸಿದ್ದಾಗಿ ಗಂಗವ್ವ ಹೇಳಿದ್ದಾರೆ. ಇದೀಗ ನಾಗಾರ್ಜುನ ಅವರ ನಡೆಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.

    ಇನ್ನೂ ಬಿಗ್‌ ಬಾಸ್‌ ಶೋ ಬಳಿಕ ತೆಲುಗಿನ ಸಾಕಷ್ಟು ಸಿನಿಮಾಗಳಲ್ಲಿ ಗಂಗವ್ವ ನಟಿಸಿದ್ದಾರೆ. ಚಿತ್ರರಂಗದಲ್ಲಿ ಗಂಗವ್ವ ಆಕ್ಟೀವ್‌ ಆಗಿದ್ದಾರೆ.