Tag: ಖುಷ್ಬು

  • ಲೋಕಸಭಾ ಚುನಾವಣಾ ಪ್ರಚಾರದಿಂದ ಹಿಂದೆ ಸರಿದ ಖುಷ್ಬು

    ಲೋಕಸಭಾ ಚುನಾವಣಾ ಪ್ರಚಾರದಿಂದ ಹಿಂದೆ ಸರಿದ ಖುಷ್ಬು

    ಚೆನ್ನೈ: ತಮಿಳುನಾಡಿನಲ್ಲಿ ಬಿಜೆಪಿಯ ಪ್ರಮುಖ ಸದಸ್ಯರಲ್ಲಿ ಒಬ್ಬರಾಗಿರುವ ನಟಿ ಖುಷ್ಬು ಸುಂದರ್ (Khusbhu Sundar) ಅವರು ಲೋಕಸಭಾ ಚುನಾವಣಾ (Loksabha Election 2024) ಪ್ರಚಾರದಿಂದ ಹಿಂದೆ ಸರಿದಿದ್ದಾರೆ.

    ಈ ಸಂಬಂಧ ಖುಷ್ಬು ಭಾನುವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ (J.P Nadda) ಅವರಿಗೆ ಪತ್ರವೊಂದನ್ನು ಬರೆದಿದ್ದಾರೆ. ಪತ್ರದಲ್ಲಿ ತಮ್ಮ ನಿರ್ಧಾರವನ್ನು ತಿಳಿಸಿದ್ದಾರೆ. ಕೆಲವೊಮ್ಮೆ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಆರೋಗ್ಯದ ಮೇಲೆ ಗಮನಹರಿಸಬೇಕು. ಹೀಗಾಗಿ ನಾನು ಇಂದು ಅಂತಹ ಸಂದಿಗ್ಧದಲ್ಲಿದ್ದೇ ನೆ ಎಂದಿದ್ದಾರೆ.

    2019 ರಲ್ಲಿ ದೆಹಲಿಯಲ್ಲಿ ಸಂಭವಿಸಿದ ಅಪಘಾತದಿಂದ ಮೂಳೆ ಮುರಿದಿದೆ. ಕಳೆದ 5 ವರ್ಷಗಳಿಂದ ಆರೋಗ್ಯದ ಕುರಿತು ಮುನ್ನೆಚ್ಚರಿಕೆ ವಹಿಸುತ್ತಿದ್ದೇನೆ. ಆದರೂ ಸಮಸ್ಯೆ ನನ್ನನ್ನು ಕಾಡುತ್ತಿದೆ. ಹೀಗಾಗಿ ವೈದ್ಯರು ಚುನಾವಣಾ ಪ್ರಚಾರದಲ್ಲಿ (Election Campaign) ಭಾಗಿಯಾಗದಂತೆ ಸೂಚಿಸಿದ್ದಾರೆ ಎಂದು ಪತ್ರದಲ್ಲಿ ನಟಿ ತಿಳಿಸಿದ್ದಾರೆ.

    ಪ್ರಚಾರದ ಸಂದರ್ಭದಲ್ಲಿ ಹೆಚ್ಚು ಪ್ರಯಾಣ, ಕುಳಿತುಕೊಳ್ಳುವುದು ಅತ್ಯಗತ್ಯ. ಹೀಗಾಗಿ ಮತ್ತೆ ನನಗೆ ಸಮಸ್ಯೆ ಕಾಡುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಚುನಾವಣಾ ಪ್ರಚಾರಕ್ಕೆ ಅಲ್ಪ ವಿರಾಮ ಘೋಷಿಸಿದ್ದೇನೆ ಎಂದು ಖುಷ್ಬು ಪತ್ರದಲ್ಲಿ ವಿವರಿಸಿದ್ದಾರೆ. ಇದನ್ನೂ ಓದಿ: ಸಮಾಜವಾದಿ ಪಕ್ಷದ ಅಭ್ಯರ್ಥಿ ಕಾಜಲ್ ನಿಶಾದ್ ಆಸ್ಪತ್ರೆಗೆ ದಾಖಲು

  • ಬಿಜೆಪಿಯಲ್ಲಿರುವ ನಟಿಯರು ಐಟಂಗಳು ಹೇಳಿಕೆಗೆ ಕ್ಷಮೆಯಾಚಿಸಿದ ಕನಿಮೋಳಿ

    ಬಿಜೆಪಿಯಲ್ಲಿರುವ ನಟಿಯರು ಐಟಂಗಳು ಹೇಳಿಕೆಗೆ ಕ್ಷಮೆಯಾಚಿಸಿದ ಕನಿಮೋಳಿ

    ಚೆನ್ನೈ: ಬಿಜೆಪಿ (BJP) ನಾಯಕರಾಗಿ ಬದಲಾದ ಹಲವರು ನಟಿಯರ ಬಗ್ಗೆ ಡಿಎಂಕೆ (DMK) ವಕ್ತಾರ ಸೈದಾಯಿ ಸಾಧಿಕ್ (Saidai Sadiq) ಆಕ್ಷೇಪಾರ್ಹ ಹೇಳಿಕೆ ನೀಡಿರೋದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ತಮಿಳುನಾಡು ಬಿಜೆಪಿಯಲ್ಲಿರುವ ನಟಿ ಖುಷ್ಬು ಸುಂದರ್ (Khushbu Sundar), ನಮಿತಾ (Namitha), ಗೌತಮಿ (Gowthami), ಗಾಯತ್ರಿ ರಘುರಾಮ್‍ರನ್ನು ಐಟಂಗಳು ಎಂದು ಬಹಿರಂಗ ಸಮಾವೇಶವೊಂದಲ್ಲಿ ಸಾಧಿಕ್ ವ್ಯಾಖ್ಯಾನಿಸಿದ್ದಾರೆ.

    ತಮಿಳುನಾಡಲ್ಲಿ ಬಿಜೆಪಿ ತಳವೂರುತ್ತಿದೆ ಎಂದು ಖುಷ್ಬು ಹೇಳ್ತಾರೆ. ಅಮಿತ್ ಶಾ (Amit Shah) ನೆತ್ತಿಯ ಮೇಲೆ ಕೂದಲಾದರೂ ಬರಬಹುದು ಆದ್ರೆ, ಇಲ್ಲಿ ಕಮಲದ ವಿಕಸನ ಆಗಲ್ಲ. ಡಿಎಂಕೆಯನ್ನು ನಾಶ ಮಾಡಿ ಬಿಜೆಪಿ ಬಲಿಷ್ಠಗೊಳಿಸಲು ಇಂತವರೆಲ್ಲ ನೆರವಾಗ್ತಾರಾ? ಖಂಡಿತವಾಗಲೂ ಸಾಧ್ಯವಿಲ್ಲ. ನನ್ನ ಬ್ರದರ್ ಇಳಯ ಅರುಣ ಖುಷ್ಬುರನ್ನು ಎಷ್ಟೋ ಬಾರಿ ಭೇಟಿ ಮಾಡಿದ್ರು. ಅಂದ್ರೆ ನಾನು ಹೇಳೋದು, ಆಕೆ ಡಿಎಂಕೆಯಲ್ಲಿದ್ದಾಗ (DMK) ಆರು ಬಾರಿ ಸಮಾವೇಶಗಳಲ್ಲಿ ಮೀಟ್ ಮಾಡಿದ್ರು ಎಂದು ನಾನಾರ್ಥ ಬರುವಂತೆ ಮಾತನಾಡಿದ್ದಾರೆ. ಇದಕ್ಕೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ಇದನ್ನೂ ಓದಿ: ಜುಟ್ಟು ಹಿಡಿದು ರೋಗಿಯನ್ನು ಬೆಡ್ ಮೇಲೆ ಎಳೆದೊಯ್ದ ನರ್ಸ್ – ನಡೆದಿದ್ದೇನು ಗೊತ್ತಾ?

    ಸಾದಿಕ್ ಹೇಳಿಕೆ ಖಂಡಿಸಿ ಬಿಜೆಪಿ ಬೀದಿಗೆ ಇಳಿದಿದೆ. ನಟಿ ಖುಷ್ಬು ಟ್ವೀಟ್ ಮಾಡಿ, ಮಹಿಳೆಯರನ್ನು ಅಪಮಾನಿಸುವುದು ಹೊಸ ದ್ರಾವಿಡ ಮಾದರಿಯ ಭಾಗವೇ ಎಂದು ಪ್ರಶ್ನೆ ಮಾಡಿದ್ದಾರೆ. ಈ ಬೆನ್ನಲ್ಲೇ ಡಿಎಂಕೆ ನಾಯಕಿ ಕನಿಮೋಳಿ ಕ್ಷಮೆಯಾಚಿಸಿದ್ದಾರೆ. ನಾನೊಬ್ಬ ಮಹಿಳೆಯಾಗಿ, ಹೇಳಿಕೆಗೆ ಕ್ಷಮೆಯಾಚಿಸುತ್ತೇನೆ. ಇದನ್ನು ಯಾರೇ ಹೇಳಿದ್ರೂ ಕ್ಷಮಿಸಲು ಸಾಧ್ಯವಿಲ್ಲ. ನನ್ನ ನಾಯಕ ಸ್ಟಾಲಿನ್, ನನ್ನ ಪಕ್ಷ ಡಿಎಂಕೆ ಇದನ್ನು ಎಂದಿಗೂ ಕ್ಷಮಿಸಲ್ಲ ಎಂದು ಕನಿಮೋಳಿ (Kanimozhi) ಟ್ವೀಟ್ ಮಾಡಿದ್ದಾರೆ. ಇತ್ತೀಚಿಗಷ್ಟೇ ಮಹಿಳೆಯರನ್ನು ಐಟಂ ಎಂದು ಅವಹೇಳನಕಾರಿ ಎಂದು ಮುಂಬೈ ವಿಶೇಷ ಕೋರ್ಟ್ (Court) ಅಭಿಪ್ರಾಯಪಟ್ಟಿತ್ತು. ಇದನ್ನೂ ಓದಿ: ಭಾರತೀಯ ರೂಪಾಯಿ, ಏಮ್ಸ್ ಯೋಜನೆ ಬಗ್ಗೆ ಟೀಕೆ – ಬಿಜೆಪಿ ವಿರುದ್ಧ ಉದಯನಿಧಿ ಸ್ಟಾಲಿನ್ ವಾಗ್ದಾಳಿ

    Live Tv
    [brid partner=56869869 player=32851 video=960834 autoplay=true]

  • 12 ವರ್ಷಗಳ ನಂತರ ಕನ್ನಡಕ್ಕೆ ಖುಷ್ಬು : ರವಿಚಂದ್ರನ್ ಪತ್ನಿಯಾಗಿ ನಟನೆ

    12 ವರ್ಷಗಳ ನಂತರ ಕನ್ನಡಕ್ಕೆ ಖುಷ್ಬು : ರವಿಚಂದ್ರನ್ ಪತ್ನಿಯಾಗಿ ನಟನೆ

    ಖುಷ್ಬು ಅಂದಾಕ್ಷಣ ತಕ್ಷಣವೇ ನೆನಪಾಗುವ ಸಿನಿಮಾ ‘ರಣಧೀರ’. ಈ ಚಿತ್ರದ ರವಿಚಂದ್ರನ್ ಮತ್ತು ಖುಷ್ಬು ಜೋಡಿ ಮರೆಯುವುದುಂಟೆ. ನಂತರ ಇವರು ಜತೆಯಾಗಿ ಎರಡು ಚಿತ್ರಗಳಲ್ಲೂ ಕಾಣಿಸಿಕೊಂಡರು. ಆ ಎಲ್ಲ ಸಿನಿಮಾಗಳು ಸೂಪರ್ ಹಿಟ್ ಆಗಿದ್ದರಿಂದ ಹಿಟ್ ಜೋಡಿ ಎಂದೇ ಸ್ಯಾಂಡಲ್ ವುಡ್ ಕರೆಯುತ್ತಿತ್ತು. ನಂತರ ಖುಷ್ಬು ಬೇರೆ ಬೇರೆ ಚಿತ್ರಗಳಲ್ಲಿ ನಟಿಸರೂ, ಕ್ರೇಜಿಸ್ಟಾರ್ ಜತೆ ನಟಿಸಲು ಮತ್ತೆ ಅವರಿಗೆ ಅವಕಾಶವೇ ಸಿಕ್ಕಿರಲಿಲ್ಲ. ಯುಗ ಪುರುಷ ಸಿನಿಮಾ ನಂತರ ಮತ್ತೆ ಈ ಜೋಡಿ ಒಟ್ಟಾಗಿ ತೆರೆ ಹಂಚಿಕೊಳ್ಳುತ್ತಿದೆ. ಕಿರೀಟಿ ನಟನೆಯ ಹೊಸ ಸಿನಿಮಾದಲ್ಲಿ ನಾಯಕನ ತಂದೆಯಾಗಿ ರವಿಚಂದ್ರನ್ ನಟಿಸುತ್ತಿದ್ದರೆ, ತಾಯಿಯಾಗಿ ಖುಷ್ಬು ಪಾತ್ರ ನಿರ್ವಹಣೆ ಮಾಡಲಿದ್ದಾರೆ. ಇದನ್ನೂ ಓದಿ : ಎಪ್ರಿಲ್ 2ನೇ ವಾರದಲ್ಲಿ ನಟಿ ಕಾವ್ಯ ಶಾ ಮದ್ವೆ : ಮಾಧ್ಯಮ ಲೋಕದ ಹುಡುಗನ ಜತೆ ಸಪ್ತಪದಿ

    2005ರಲ್ಲಿ ತೆರೆಕಂಡ ಮ್ಯಾಜಿಕ್ ಅಜ್ಜಿ ಸಿನಿಮಾದಲ್ಲಿ ಖುಷ್ಬು ಪೂರ್ಣಪ್ರಮಾಣದಲ್ಲಿ ಕಾಣಿಸಿಕೊಂಡಿದ್ದರು. ನಂತರ ಜನನಿ ಸಿನಿಮಾದಲ್ಲಿ ಅವರದ್ದು ಗೆಸ್ಟ್ ರೋಲ್. ಈ ಸಿನಿಮಾ ರಿಲೀಸ್ ಆಗಿದ್ದು 2010ರಲ್ಲಿ. ಬರೋಬ್ಬರಿ ಹನ್ನೆರಡು ವರ್ಷಗಳ ನಂತರ ಖುಷ್ಬು ಸ್ಯಾಂಡಲ್ ವುಡ್ ಗೆ ವಾಪಸ್ಸಾಗಿದ್ದಾರೆ. ಇದನ್ನೂ ಓದಿ : ಬೆಳಗಾವಿ ಭಾಗದ ದಿಟ್ಟ ಅಧಿಕಾರಿಯ ಪಾತ್ರದಲ್ಲಿ ಧನಂಜಯ್

    ಈಗಾಗಲೇ ರವಿಚಂದ್ರನ್ ಸುದೀಪ್, ದರ್ಶನ್ ಸೇರಿದಂತೆ ಹಲವು ನಟರ ಸಿನಿಮಾಗಳಲ್ಲಿ ತಂದೆಯಾಗಿ ನಟಿಸಿದ್ದಾರೆ. ಇದೇ ಮೊದಲ ಬಾರಿಗೆ ಹೊಸ ಹುಡುಗನ ಚಿತ್ರಕ್ಕೆ ತಂದೆಯಾಗಿ ಪಾತ್ರ ಮಾಡಲು ಒಪ್ಪಿಕೊಂಡಿದ್ದಾರೆ.

  • ಚಿಕ್ಕಬಳ್ಳಾಪುರದಲ್ಲಿ ನಟಿ ಖುಷ್ಬುರಿಂದ ಶುದ್ಧ ಕುಡಿಯುವ ನೀರಿನ ಘಟಕಗಳ ಉದ್ಘಾಟನೆ

    ಚಿಕ್ಕಬಳ್ಳಾಪುರದಲ್ಲಿ ನಟಿ ಖುಷ್ಬುರಿಂದ ಶುದ್ಧ ಕುಡಿಯುವ ನೀರಿನ ಘಟಕಗಳ ಉದ್ಘಾಟನೆ

    ಚಿಕ್ಕಬಳ್ಳಾಪುರ: ಶಾಸಕ ಕೆ.ಸುಧಾಕರ್ ಓಡೆತನದ ಶ್ರೀ ಸಾಯಿಕೃಷ್ಣ ಚಾರಿಟಬಲ್ ಟ್ರಸ್ಟ್ ವತಿಯಿಂದ ನಿರ್ಮಾಣಗೊಂಡಿದ್ದ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಬಹುಭಾಷಾ ತಾರೆ ಖ್ಯಾತ ನಟಿ ಖುಷ್ಬು ಉದ್ಘಾಟಿಸಿದ್ದಾರೆ.

    ಚಿಕ್ಕಬಳ್ಳಾಪುರಕ್ಕೆ ಆಗಮಿಸಿದ್ದ ನಟಿ ಖುಷ್ಬು ನಗರದ 5 ವಾರ್ಡ್‍ಗಳಲ್ಲಿ ನೂತನವಾಗಿ ನಿರ್ಮಾಣ ಮಾಡಲಾಗಿರುವ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಚಾಲನೆ ನೀಡಿದರು.

    ಶಾಸಕ ಸಾಯಿಕೃಷ್ಣ ಚಾರಿಟಬಲ್ ಟ್ರಸ್ಟ್ ವತಿಯಿಂದ ನಗರ 20 ವಾರ್ಡ್ ಗಳಲ್ಲಿ ಅಮೃತ ಗಂಗೆ ಎನ್ನುವ ಹೆಸರಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ.