Tag: ಖುಷಿ ಸಿನಿಮಾ

  • ರಾಜಕೀಯ ಅಖಾಡಕ್ಕೆ ನಟಿ ಸಮಂತಾ- ಯಾವ ಪಕ್ಷಕ್ಕೆ ಎಂಟ್ರಿ?

    ರಾಜಕೀಯ ಅಖಾಡಕ್ಕೆ ನಟಿ ಸಮಂತಾ- ಯಾವ ಪಕ್ಷಕ್ಕೆ ಎಂಟ್ರಿ?

    ಟಾಲಿವುಡ್ ನಟಿ ಸಮಂತಾ (Samantha) ಸದ್ಯ ನಟನೆಯಿಂದ ಬ್ರೇಕ್ ತೆಗೆದುಕೊಂಡಿದ್ದಾರೆ. ‘ಖುಷಿ’ ಸಿನಿಮಾ ಭರ್ಜರಿ ಕಲೆಕ್ಷನ್ ಕೂಡ ಮಾಡ್ತಿದೆ. ಹೀಗಿರುವಾಗ ಸ್ಯಾಮ್ ರಾಜಕೀಯಕ್ಕೆ (Politics) ಎಂಟ್ರಿ ಕೊಡುವತ್ತ ಗಮನ ವಹಿಸುತ್ತಿದ್ದಾರೆ. ಈ ಬಗ್ಗೆ ಈಗಾಗಲೇ ಬಿಸಿ ಬಿಸಿ ಚರ್ಚೆ ಶುರುವಾಗುತ್ತಿದೆ.

    ಅನಾರೋಗ್ಯದ ಹಿನ್ನಲೆ ಸಿನಿಮಾದಿಂದ ಬ್ರೇಕ್ ಪಡೆದುಕೊಂಡಿರುವ ಸಮಂತಾ ಈಗ ಪಾಲಿಟಿಕ್ಸ್‌ಗೆ ಎಂಟ್ರಿ ಕೊಡುವ ವಿಚಾರವಾಗಿ ಸಖತ್ ಸುದ್ದಿಯಲ್ಲಿದ್ದಾರೆ. ಚಿಕಿತ್ಸೆಯ ಜೊತೆಗೆ ರಾಜಕೀಯಕ್ಕೆ ಎಂಟ್ರಿ ಕೊಡುವ ಬಗ್ಗೆ ಸಮಂತಾ ಯೋಚಿಸಿದ್ದಾರಂತೆ. ತೆಲಂಗಾಣದ ಭಾರತ್ ರಾಷ್ಟ್ರ ಸಮಿತಿ ಪಕ್ಷದ ನಾಯಕರು ಸಮಂತಾರನ್ನ ಭೇಟಿಯಾಗಿ ಈ ಬಗ್ಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ:ಇಂಟರ್‌ನೆಟ್ ಬೆಂಕಿ ಹಚ್ಚಿದ ಸಂಯುಕ್ತಾ ಹೆಗ್ಡೆ ಬಿಕಿನಿ ಫೋಟೋಸ್

    ತಮ್ಮ ಪಕ್ಷದ ಪರವಾಗಿ ಪ್ರಚಾರ ಕಾರ್ಯಗಳಲ್ಲಿ ಭಾಗವಹಿಸಿ, ತಮ್ಮ ಪಕ್ಷದ ಬೆಂಬಲಕ್ಕೆ ನಿಲ್ಲಿ ಎಂದು ನಟಿಗೆ ಕೋರಿದ್ದಾರೆ. ಮುಂದಿನ ಎಲೆಕ್ಷನ್‍ಗೆ ಸಮಂತಾ ಕೂಡ ಬಿಆರ್‍ಎಸ್ ಪಕ್ಷದ ಪರವಾಗಿ ಪ್ರಚಾರದ ಅಖಾಡಕ್ಕೆ ಇಳಿಯುತ್ತಾರೆ ಎನ್ನಲಾಗುತ್ತಿದೆ. ತೆಲಂಗಾಣದಲ್ಲೂ ಸ್ಯಾಮ್‍ಗೆ ಫ್ಯಾನ್ ಬೇಸ್ ದೊಡ್ಡ ಮಟ್ಟದಲ್ಲಿರುವ ಕಾರಣ ರಾಜಕೀಯ ಪಾರ್ಟಿಗೆ ಪ್ಲಸ್ ಆಗುತ್ತೆ ಎಂಬುದು ಹಲವರ ಲೆಕ್ಕಚಾರ.

    ಅಷ್ಟಕ್ಕೂ ಇದೆಲ್ಲಾ ಇನ್‍ಸೈಡ್ ನ್ಯೂಸ್. ಆದರೆ ಸಮಂತಾ (Samantha) ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಈ ಬಗ್ಗೆ ಅಪ್‍ಡೇಟ್ ಸಿಗುವವೆರೆಗೂ ಕಾಯಬೇಕಿದೆ.

    ನಟಿ ಸಮಂತಾ ಮಯೋಸಿಟಿಸ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ಅದಕ್ಕಾಗಿ ಸೂಕ್ತ ಚಿಕಿತ್ಸೆ ಕೂಡ ಪಡೆಯುತ್ತಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಡ ಕುಟುಂಬಕ್ಕೆ 1 ಲಕ್ಷ ಘೋಷಣೆ ಮಾಡಿದ ಬೆನ್ನಲ್ಲೇ ವಿಜಯ್ ದೇವರಕೊಂಡ ಎಡವಟ್ಟು

    ಬಡ ಕುಟುಂಬಕ್ಕೆ 1 ಲಕ್ಷ ಘೋಷಣೆ ಮಾಡಿದ ಬೆನ್ನಲ್ಲೇ ವಿಜಯ್ ದೇವರಕೊಂಡ ಎಡವಟ್ಟು

    ವಿಜಯ್ ದೇವರಕೊಂಡ-ಸಮಂತಾ (Samantha) ಆಕಾಶ ನೋಡುವಂತಾಗಿದೆ. ಇನ್ನೇನು ಗೆದ್ದೇ ಬಿಟ್ಟೆವು ಎಂದು ಆಕಾಶಕ್ಕೇರಿದ್ದ ಜೋಡಿಯನ್ನು ದೇವರು ನೆಲಕ್ಕೆ ಇಳಿಸಿದ್ದಾನೆ. ಏಕಾಏಕಿ ಏನಾಯಿತು ಖುಷಿ(Kushi Fim) ಸಿನಿಮಾಗೆ ? ಎಪ್ಪತ್ತು ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ್ದ ಚಿತ್ರ ಅದ್ಯಾಕೆ ಡಿಸಾಸ್ಟರ್ ಪಟ್ಟಿ ಸೇರಿತು? ಏನಿದರ ಹಿಂದಿನ ಹಕೀಕತ್ತು? ಇಲ್ಲಿದೆ ಮಾಹಿತಿ.

    ‘ಖುಷಿ’ ಸಿನಿಮಾ ಐದು ದಿನಗಳ ಹಿಂದೆ ದೇಶ ವಿದೇಶದಲ್ಲಿ ತೆರೆ ಕಂಡಿತ್ತು. ವಿಜಯ್(Vijay Devarakonda)- ಸಮಂತಾ ಜೋಡಿ ಪಕ್ಕಾ ಕ್ಲಿಕ್ ಆಗುತ್ತದೆ. ಇದನ್ನೇ ಎಲ್ಲರೂ ನಂಬಿದ್ದರು. ಸಮಂತಾ ಚಿಕಿತ್ಸೆಗಾಗಿ ಅಮೆರಿಕಾಕ್ಕೆ ಹೋಗಿದ್ದರು. ಅಲ್ಲೂ ಪ್ರಚಾರ ಮಾಡಿದರು. ಇಲ್ಲಿ ದೇವರಕೊಂಡ ಕಾಲಿಗೆ ಚಕ್ರ ಕಟ್ಟಿಕೊಂಡು ಸುತ್ತಿದರು. ಹಾಡು, ಟ್ರೈಲರ್ ಎಲ್ಲಾ ಮೋಡಿ ಮಾಡಿತು. ಸಿನಿಮಾ ತೆರೆ ಕಂಡ ದಿನ ಮೂವತ್ತು ಕೋಟಿ ಬಾಚಿತು. ಈಗ ಎಪ್ಪತ್ತು ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೆಯಿತು. ಗೆದ್ದೇ ಬಿಟ್ಟಿದ್ದರು. ಸೋಮವಾರ (ಸೆ.4) ಮಕಾಡೆ ಮಲಗಿತಲ್ಲ. ಚಿತ್ರದ ಕಲೆಕ್ಷನ್ ಈಗ ಕೊಂಚ ಡಲ್ ಆಗಿದೆ.‌ ಇದನ್ನೂ ಓದಿ:ರಶ್ಮಿಕಾ, ಶ್ರೀಲೀಲಾ ಬಳಿಕ ತೆಲುಗಿನಲ್ಲಿ ಬಂಪರ್ ಆಫರ್ ಗಿಟ್ಟಿಸಿಕೊಂಡ ಆಶಿಕಾ ರಂಗನಾಥ್

    ಇದು ಲವ್‌ಸ್ಟೋರಿ. ನಿರ್ದೇಶಕ ಅದಕ್ಕೆ ಹೊಸ ಬಣ್ಣ ಹಚ್ಚಿದ್ದು ಇಷ್ಟವಾಗಲಿಲ್ಲವಾ ? ವಿಜಯ್-ಸಮಂತಾ ಜೋಡಿಯನ್ನು ಜನ ಮೆಚ್ಚಲಿಲ್ಲವಾ? ಉತ್ತರ ಕಷ್ಟ. ಈಗ ಎಲ್ಲವೂ ಮುಗಿದಿದೆ. ಖುಷಿ ಅಟ್ಟರ್ ಫ್ಲಾಪ್ ಲಿಸ್ಟ್‌ಗೆ ಜಮೆಯಾಗಿದೆ. ಸಿನಿಮಾ ಗೆದ್ದಿತೆಂದು ವಿಜಯ್ ನೂರು ಬಡ ರೈತ ಕುಟುಂಬಕ್ಕೆ ತಲಾ 41 ಲಕ್ಷ ಹಂಚುವುದಾಗಿ ಘೋಷಿಸಿದ್ದರು. ಈಗ ಕ್ಲೈಮಾಕ್ಸ್ ಎಡವಟ್ಟಾಗಿದೆ. ಕೊಟ್ಟ ಮಾತು ಉಳಿಸಿಕೊಳ್ಳುತ್ತಾರಾ ರೌಡಿ ಬಾಯ್ ಎಂದು ಕಾಯಬೇಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವಿಜಯ್ ದೇವರಕೊಂಡ ಹಿಡಿದುಕೊಂಡಿರೋ ಹುಡುಗಿ ಕೈ ಯಾರದ್ದು? ಮನದನ್ನೆ ಬಗ್ಗೆ ಸುಳಿವು ಕೊಟ್ಟ ನಟ

    ವಿಜಯ್ ದೇವರಕೊಂಡ ಹಿಡಿದುಕೊಂಡಿರೋ ಹುಡುಗಿ ಕೈ ಯಾರದ್ದು? ಮನದನ್ನೆ ಬಗ್ಗೆ ಸುಳಿವು ಕೊಟ್ಟ ನಟ

    ಟಾಲಿವುಡ್‌ನ ರೊಮ್ಯಾಂಟಿಕ್ ಹೀರೋ ವಿಜಯ್ ದೇವರಕೊಂಡ (Vijay Devarakonda) ಮಹಿಳಾ ಅಭಿಮಾನಿಗಳಿಗೆ ಹಾರ್ಟ್ ಬ್ರೇಕ್ ಆಗುವಂತಹ ನ್ಯೂಸ್ ಕೊಟ್ಟಿದ್ದಾರೆ. ತನ್ನ ಕೈ ಹಿಡಿದಿರುವ ಮನದನ್ನೆ ಫೋಟೋ ಹಂಚಿಕೊಂಡು ಸದ್ಯದಲ್ಲೇ ಅನೌನ್ಸ್ ಆಗುತ್ತೆ ಎಂದಿದ್ದಾರೆ ವಿಜಯ್. ಈ ಮೂಲಕ ತನ್ನ ಲವ್ ಲೈಫ್ ಬಗ್ಗೆ ವಿಜಯ್ ಸುಳಿವು ನೀಡಿದ್ದಾರೆ. ಹಾಗಾದ್ರೆ ಆ ಹುಡುಗಿ (Girl) ಯಾರು?

    ವಿಜಯ್ ದೇವರಕೊಂಡ ಟಾಲಿವುಡ್‌ನ ಬೋಲ್ಡ್ ಹೀರೋ ತನಗನಿಸಿದ್ದನ್ನು ನೇರವಾಗಿ ಹೇಳುವ ನಟ. ವಿಜಯ್ ಒಪ್ಪಿಕೊಳ್ಳುವ ಸಿನಿಮಾಗಳು ಕೂಡ ಅಷ್ಟೇ ಬೋಲ್ಡ್ ಆಗಿರುತ್ತೆ. ನಿನ್ನೆ ರಾತ್ರಿ (ಆಗಸ್ಟ್ 29) ವಿಜಯ್ ದೇವರಕೊಂಡ ತನ್ನ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಹುಡುಗಿಯ ಕೈ ಮೇಲೆ ತನ್ನ ಕೈ ಇಟ್ಟಿದ್ದ ಫೋಟೊವನ್ನು ಶೇರ್ ಮಾಡಿದ್ದರು. ಈ ಫೋಟೊ ಪೋಸ್ಟ್ ಮಾಡುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದರೊಂದಿಗೆ ವಿಜಯ್ ದೇವರಕೊಂಡ ಬರೆದುಕೊಂಡ ಸಾಲುಗಳು ಅಷ್ಟೇ ಸದ್ದು ಮಾಡುತ್ತಿವೆ. ಇದನ್ನೂ ಓದಿ:ಶಾರುಖ್ ‘‌ಜವಾನ್ʼ ಕಾಳಗಕ್ಕೆ ಯಶ್- ಪೃಥ್ವಿರಾಜ್ ಸುಕುಮಾರನ್ ಸಾಥ್

    ಏನೋನೋ ನಡೆಯುತ್ತಿದೆ. ಆದರೆ, ಇದು ಮಾತ್ರ ನಿಜಕ್ಕೂ ವಿಶೇಷ ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಶೇರ್ ಆಗ್ತಿದ್ದಂತೆ ವಿಜಯ್, ಮದುವೆ (Wedding) ಬಗ್ಗೆ ಅನೌನ್ಸ್ ಮಾಡಬಹುದಾ? ಎಂದು ಲೆಕ್ಕಚಾರ ಹಾಕ್ತಿದ್ದಾರೆ. ಇತ್ತೀಚಿಗೆ ಸಮಂತಾ ಜೊತೆ ಕೂಡ ವಿಜಯ್ ಒಡನಾಟ ಚೆನ್ನಾಗಿರುವ ಕಾರಣ, ವಿಜಯ್ ಕೈ ಮೇಲಿರುವ ಆ ಕೈ ರಶ್ಮಿಕಾ ಮಂದಣ್ಣ ಅವರದ್ದಾ? (Rashmika Mandanna) ಅಥವಾ ಸಮಂತಾನಾ (Samantha) ಎಂದು ಫ್ಯಾನ್ಸ್ ತಲೆಕೆಡಿಸಿಕೊಂಡಿದ್ದಾರೆ. ಎಲ್ಲದಕ್ಕೂ ವಿಜಯ್ ದೇವರಕೊಂಡ ಉತ್ತರ ನೀಡುವವರೆಗೂ ಕಾಯಬೇಕಿದೆ.

    ಅಸಲಿಗೆ ಇದು, ವಿಜಯ್ ಮದುವೆ ಮ್ಯಾಟರ್ ಅಲ್ಲ, ‘ಗೀತಾ ಗೋವಿಂದಂ’ (Geetha Govindam) ನಿರ್ದೇಶಕ, ರಶ್ಮಿಕಾ ಜೊತೆಗಿನ ಹೊಸ ಸಿನಿಮಾದ ಅನೌನ್ಸ್‌ಮೆಂಟ್ ವಿಚಾರ ಎಂದು ತೆಲುಗು ಮಾಧ್ಯಮಗಳು ವರದಿ ಮಾಡಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಮೆರಿಕಾದಲ್ಲಿ ದುಡ್ಡು ಪಡೆದು ಪ್ರಚಾರ ಮಾಡ್ತಿದ್ದಾರಾ ಸಮಂತಾ- ಏನಿದು ಸುದ್ದಿ?

    ಅಮೆರಿಕಾದಲ್ಲಿ ದುಡ್ಡು ಪಡೆದು ಪ್ರಚಾರ ಮಾಡ್ತಿದ್ದಾರಾ ಸಮಂತಾ- ಏನಿದು ಸುದ್ದಿ?

    ಸೌತ್ ನಟಿ ಸಮಂತಾ (Samantha) ಅಮೆರಿಕಾಕ್ಕೆ ಹೋಗಿದ್ದೇ ಹೋಗಿದ್ದು ನಿತ್ಯ ಒಂದು ಸುದ್ದಿ ಬರುತ್ತಿದೆ. ಇದೀಗ ಸಮಂತಾ ಅಲ್ಲೂ ಹವಾ ಎಬ್ಬಿಸಿದ್ದಾರೆ. ಖುಷಿ (Kushi) ಸಿನಿಮಾ ಪ್ರಮೋಷನ್ ಮಾಡುತ್ತಿದ್ದಾರೆ. ದುಡ್ಡು ಕೊಟ್ಟು ಸಮಂತಾ ಪ್ರಚಾರ ಕಾರ್ಯಕ್ರಮ ನೋಡೋಕೆ ಬರುತ್ತಿದ್ದಾರೆ. ಏನಿದು ಹೊಸ ಸುದ್ದಿ? ಇಲ್ಲಿದೆ ಮಾಹಿತಿ.

    ಮಯೋಸಿಟಿಸ್ ಖಾಯಿಲೆ ಚಿಕಿತ್ಸೆಗಾಗಿ ಅಮೆರಿಕಾಕ್ಕೆ (America) ಹೋಗಿದ್ದಾರೆ ಸಮಂತಾ. ಆದರೂ ಬಿಡುಗಡೆಯಾಗಲಿರುವ ‘ಖುಷಿ’ ಸಿನಿಮಾ ಪ್ರಚಾರವನ್ನು ಮಾಡುತ್ತಿದ್ದಾರೆ. ಮೊನ್ನೆ ಮೊನ್ನೆ ಇಂಡಿಯಾ ಡೇ ಪರೇಡ್‌ನಲ್ಲಿ ಭಾಗವಹಿಸಿದ್ದರು. ಇದೀಗ ಖುಷಿ ಸಿನಿಮಾದ ಮೀಟ್ ದಿ ಗ್ರೀಟ್‌ಗೆ ಸಜ್ಜಾಗುತ್ತಿದ್ದಾರೆ. 25ನೇ ತಾರೀಖು ಅಲ್ಲಿಯ ಡಲ್ಲಾಸ್ ಹಾಗೂ ಟೆಕ್ಸಾಸ್‌ನಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಮಜಾ ಅಂದರೆ ಇದು ಸ್ಯಾಮ್ (Samantha) ಸಿನಿಮಾ ಪ್ರಚಾರ. ಪುಕ್ಕಟೆ ಮಾಡಬೇಕು. ಭರ್ತಿ 30 ಲಕ್ಷ ರೂಪಾಯಿ ಸಮಂತಾ ಅಕೌಂಟ್‌ಗೆ ಸೇರಿಸಿದ್ದಾರೆ. ಇದನ್ನೂ ಓದಿ:ಎಸ್ತರ್ ನರೋನ ಈಗ ನಿರ್ದೇಶಕಿ-‘ದಿ ವೆಕೆಂಟ್ ಹೌಸ್‌’‌ ಮೂಲಕ ಹೊಸ ಹೆಜ್ಜೆ ಇಟ್ಟ ನಟಿ

    ಇದು ನೋಡಿ ಸಮಂತಾ ತಾಕತ್ತು. ಟಾಲಿವುಡ್ (Tollywood) ಹೀಗನ್ನುತ್ತಿದೆ. ಸ್ಯಾಮ್‌ಗೆ ಮೂವತ್ತು ಲಕ್ಷ ಕೊಟ್ಟಿದ್ದೇನೊ ಸರಿ. ಆದರೆ ಈ ಹಣವನ್ನು ಆರ್ಗನೈಸ್ ಮಾಡಿದವರು ಹೇಗೆ ಗಳಿಸುತ್ತಾರೆ? ಉತ್ತರವೂ ಇದೆ. ಡಲ್ಲಾಸ್-ಟೆಕ್ಸಾಸ್‌ನ ಈ ಕಾರ್ಯಕ್ರಮಕ್ಕೆ 150 ರುಪಾಯಿ ಟಿಕೆಟ್ ದರ. ಅದರ ಜೊತೆಗೆ ಬಂಪರ್ ಆಫರ್ ಇದೆ. 2500 ಡಾಲರ್ ಕೆಮ್ಮಿದರೆ ಸಮಂತಾ ಕೈ ಕುಲುಕಿ ಕ್ಲೋಸ್‌ಅಪ್‌ನಲ್ಲಿ ದರ್ಶನ. 2500 ಡಾಲರ್ ಅಂದ್ರೆ ಇಂಡಿಯಾ ಲೆಕ್ಕದಲ್ಲಿ 2 ಲಕ್ಷ. ಸಾಕಾ ಬೇಕಾ ಆಘಾತ.

    ತಲೆ ಕೆಟ್ಟಿದೆಯಾ ಎರಡು ಲಕ್ಷ ಕೊಡೋದಿಕ್ಕೆ? ಹೀಗಂತ ನೀವು ಕೇಳಬಹುದು. ಆದರೆ ಅಷ್ಟು ಕಾಸನ್ನು ಜನರು ಸಾಲುಗಟ್ಟಿ ಕ್ರೆಡಿಟ್ ಕಾರ್ಡಿನಿಂದ ಉಜ್ಜುತ್ತಿದ್ದಾರೆ. ನೂಕುನುಗ್ಗಲು ಲಾಠಿ ಚಾರ್ಜ್ ಆಗಿಲ್ಲ. ಕಾರಣ ಅದು ಅಮೆರಿಕಾ. ಒಟ್ಟಾರೆಯಾಗಿ ಸಮಂತಾ ಅಲ್ಲಿಗೆ ಹೋಗಿದ್ದು ಚಿಕಿತ್ಸೆ ಪಡೆಯಲಿಕ್ಕಾ ಅಥವಾ ಹರೆಯದ ಹುಡುಗರ ಆರೋಗ್ಯವನ್ನು ಇಂಚಿಂಚಾಗಿ ಹಾಳು ಮಾಡಲಿಕ್ಕಾ? ಪ್ರಶ್ನೆ ಕೇಳುತ್ತಿದೆ ಟಾಲಿವುಡ್.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನ್ಯೂಯಾರ್ಕ್ ವೆಕೇಷನ್ ಮೂಡ್‌ನಲ್ಲಿದ್ದಾರೆ ಸಮಂತಾ

    ನ್ಯೂಯಾರ್ಕ್ ವೆಕೇಷನ್ ಮೂಡ್‌ನಲ್ಲಿದ್ದಾರೆ ಸಮಂತಾ

    ಸೌತ್ ಬ್ಯೂಟಿ ಸಮಂತಾ ‘ಖುಷಿ’ (Kushi) ಸಿನಿಮಾ ಪ್ರಚಾರ ಕಾರ್ಯ ಮುಗಿಯುತ್ತಿದ್ದಂತೆ ದೂರದ ನ್ಯೂಯಾರ್ಕ್‌ನಲ್ಲಿ ಬೀಡು ಬಿಟ್ಟಿದ್ದಾರೆ. ನ್ಯೂಯಾರ್ಕ್‌ನಲ್ಲಿ (Newyork) ಸ್ನೇಹಿತರ ಜೊತೆ ಮೋಜು- ಮಸ್ತಿ ಮಾಡ್ತಿದ್ದಾರೆ. ಈ ಕುರಿತ ಫೋಟೋಗಳನ್ನ ನಟಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ನ್ಯೂಯಾರ್ಕ್‌ಗೆ ಸಮಂತಾ (Samantha) ಹಾರಿದ್ದಾರೆ. ಅಲ್ಲಿ ಕಾಲ ಕಳೆಯುತ್ತಿದ್ದಾರೆ. ಉತ್ತಮ ಆರೋಗ್ಯಕ್ಕಾಗಿ ಮತ್ತು ಮಾನಸಿಕವಾಗಿ ರಿಲ್ಯಾಕ್ಸ್‌ ಆಗಲು ವಿದೇಶದಲ್ಲಿ ನಟಿ ಎಂಜಾಯ್‌ ಮಾಡ್ತಿದ್ದಾರೆ. ಸ್ಯಾಮ್‌ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ಈಗ ಸದ್ದು ಮಾಡುತ್ತಿವೆ.

    ಮೈಯೋಸಿಟಿಸ್ ಕಾಯಿಲೆಯಿಂದ ಬಳಲುತ್ತಿರುವ ಸಮಂತಾ ಒಂದು ವರ್ಷ ಸಿನಿಮಾದಿಂದ ಬ್ರೇಕ್ ಪಡೆದುಕೊಂಡಿದ್ದಾರೆ. ಸಂಪೂರ್ಣ ಗುಣಮುಖ ಆಗುವವರೆಗೂ ಸಿನಿಮಾ ಕೆಲಸದಿಂದ ಕೊಂಚ ದೂರವಿರುವ ಪ್ರಯತ್ನ ಮಾಡ್ತಿದ್ದಾರೆ. ಸದ್ಯ ನ್ಯೂಯಾರ್ಕ್‌ನಲ್ಲೂ ನಟಿ ವರ್ಕೌಟ್ ಮಾಡಿರುವ ಫೋಟೋ ಸೇರಿದಂತೆ ಟ್ರಾವೆಲಿಂಗ್ ಫೋಟೋ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಧನಂಜಯ್ ಹುಟ್ಟು ಹಬ್ಬಕ್ಕೆ ‘ಉತ್ತರಕಾಂಡ’ ಟೀಸರ್

    ‘ಖುಷಿ’ ಸಿನಿಮಾ ಕಾರ್ಯಕ್ರಮದಲ್ಲಿ ವಿಜಯ್ ದೇವರಕೊಂಡ ಜೊತೆ ಭರ್ಜರಿಯಾಗಿ ಕುಣಿದಿದ್ದರು. ಒಂದಲ್ಲ ಎರಡಲ್ಲ ಮೂರು ಮೂರು ಬಾರಿ ವೆರೈಟಿ ಡ್ರೆಸ್‌ಗಳಲ್ಲಿ ಮಿಂಚಿದ್ದರು. ಮಯೋಸಿಟಿಸ್ ಖಾಯಿಲೆ ಮರೆತು ಜನರು ಕೇಕೆ ಹಾಕುವಂತೆ ಮಾಡಿದ್ದರು. ನೋವನ್ನು ಒಳಗಿಟ್ಟುಕೊಂಡು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು. ಅಭಿಮಾನಿಗಳಿಗೆ ಐ ಟು ಲವ್ ಯೂ ನಿಮಗಾಗಿ ಸಿನಿಮಾ ಮಾಡ್ತೀನಿ. ನಟಿಸುತ್ತೀನಿ ಅಂತಾ ಫ್ಯಾನ್ಸ್‌ಗೆ ಪ್ರಾಮೀಸ್ ಮಾಡಿದ್ದರು. ವೇದಿಕೆಯ ಮೇಲೆ ಅಭಿಮಾನಿಗಳ ಪ್ರೀತಿ ನೋಡಿ ಭಾವುಕರಾದರು.

    ಇದೇ ಸೆಪ್ಟೆಂಬರ್ 1ರಂದು ‌’ಖುಷಿ’ ಸಿನಿಮಾ ರಿಲೀಸ್‌ ಆಗುತ್ತಿದೆ. ಬಹುಭಾಷೆಗಳಲ್ಲಿ ಸಮಂತಾ- ವಿಜಯ್ ದೇವರಕೊಂಡ ನಟನೆಯ ಸಿನಿಮಾ ತೆರೆ ಕಾಣಲಿದೆ. ಅದೆಷ್ಟರ ಮಟ್ಟಿಗೆ ಸಕ್ಸಸ್ ಕಾಣಲಿದೆ. ಮುಂದಿನ ದಿನಗಳವರೆಗೂ ಕಾಯಬೇಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಮಂತಾ ಜೊತೆ ವಿಜಯ್ ದೇವರಕೊಂಡ ರೊಮ್ಯಾನ್ಸ್

    ಸಮಂತಾ ಜೊತೆ ವಿಜಯ್ ದೇವರಕೊಂಡ ರೊಮ್ಯಾನ್ಸ್

    ಟಾಲಿವುಡ್ ನಟಿ ಸಮಂತಾ (Samantha) ಜೊತೆ ವಿಜಯ್ ದೇವರಕೊಂಡ (Vijay Devarakonda) ರೊಮ್ಯಾಂಟಿಕ್ ಆಗಿ ಹೆಜ್ಜೆ ಹಾಕಿದ್ದಾರೆ. ಸಮಂತಾ ನನ್ನ ಕ್ರಶ್ ಎಂದು ಹೇಳುವ ಮೂಲಕ ಸುದ್ದಿಯಾಗಿದ್ದ ವಿಜಯ್, ಈಗ ನೆಚ್ಚಿನ ನಟಿ ಜೊತೆ ಕುಣಿದು ಕುಪ್ಪಳಿಸಿದ್ದಾರೆ. ಇಬ್ಬರ ಲವ್- ರೊಮ್ಯಾನ್ಸ್ ನೋಡಿ ರಶ್ಮಿಕಾ(Rashmika Mandanna) ಫ್ಯಾನ್ಸ್ ತಲೆ ಕೆಡಿಸಿಕೊಂಡಿದ್ದಾರೆ. ಇದನ್ನೂ ಓದಿ:ಸ್ಪಂದನಾ ಪುಣ್ಯ ಸ್ಮರಣೆಯಲ್ಲಿ ಕುಂಟುತ್ತಲೇ ಎಂಟ್ರಿ ಕೊಟ್ಟ ನಟ- ಏನಾಯ್ತು ಶ್ರೀಮುರಳಿಗೆ?

    ಕಳೆದ ಕೆಲವು ವರ್ಷಗಳಿಂದ ವಿಜಯ್- ರಶ್ಮಿಕಾ ಲವ್ವಿ ಡವ್ವಿ ಸ್ಟೋರಿ ನಡೆಯುತ್ತಿತ್ತು. ಈಗ ಕಹಾನಿ ಮೇ ಟ್ವಿಸ್ಟ್ ಎಂಬಂತೆ ಸಮಂತಾ ನನ್ನ ಕ್ರಶ್, ನನ್ನ ನೆಚ್ಚಿನ ನಟಿ ಎಂದು ‘ಖುಷಿ’ (Kushi) ಸಿನಿಮಾ ಟ್ರೈಲರ್ ಇವೆಂಟ್‌ನಲ್ಲಿ ವಿಜಯ್ ವರಸೆ ಬದಲಿಸಿದ್ದರು. ಈಗ ಅದು ನಿಜ ಎಂಬುದನ್ನ ಹೈದರಾಬಾದ್‌ನಲ್ಲಿ ನಡೆದ ಖುಷಿ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಪ್ರೂವ್ ಮಾಡಿದ್ದಾರೆ. ವೇದಿಕೆಯಲ್ಲಿ ಸಮಂತಾರನ್ನು ವಿಜಯ್ ಮುದ್ದಾಡಿದ್ದಾರೆ.

    ವೇದಿಕೆಯಲ್ಲಿ ನೃತ್ಯಕ್ಕೂ ಮುನ್ನ ವಿಜಯ್ ದೇವರಕೊಂಡ ಅವರು ತಮ್ಮ ಶರ್ಟ್ ಅನ್ನು ತೆಗೆದು ಕೇವಲ ಬನಿಯನ್‌ನಲ್ಲಿ ಮಿಂಚಿದರು. ಹೀಗಾಗುತ್ತಿದ್ದಂತೆಯೇ ಶಿಳ್ಳೆಗಳ ಸುರಿಮಳೆಯಾಗಿದೆ. ನಂತರ ವಿಜಯ್ ಅವರು, ಸಮಂತಾರನ್ನು ಎತ್ತುಕೊಂಡು ಗರಗರನೆ ತಿರುಗಿದರು. ನಂತರ ಇವರಿಬ್ಬರ ರೊಮ್ಯಾನ್ಸ್ ಮುಂದುವರೆಯಿತು. ಕೆಲವರು ವಿಜಯ್ ಅವರ ಡ್ರೆಸ್ಸಿಂಗ್ ಬಗ್ಗೆ ಕಾಮೆಂಟ್ ಮಾಡುತ್ತಿದ್ದರೆ, ಸಮಂತಾ ಈ ನೃತ್ಯದಲ್ಲಿ ತೊಡಗಿಸಿಕೊಂಡಿರುವ ಪರಿಗೆ ಫ್ಯಾನ್ಸ್ ಅಚ್ಚರಿಗೊಂಡಿದ್ದಾರೆ. ಇಬ್ಬರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ‌ ಈಗ ಸದ್ದು ಮಾಡುತ್ತಿದೆ.

    ಆರೋಗ್ಯ (Health) ವಿಚಾರವಾಗಿ ಸಮಂತಾ ಸಿನಿಮಾಗಳಿಂದ ದೂರವಿದ್ರು. ಆದರೆ ವಿಜಯ್ ಒಬ್ಬರೇ ಖುಷಿ ಸಿನಿಮಾಗೆ ಪ್ರಚಾರ ಮಾಡ್ತಿರೋದು ನೋಡಿ ಸ್ಯಾಮ್ ಕೂಡ ಸಾಥ್ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಬರೋಬ್ಬರಿ ಮೂರು ಬಗೆಯ ಡ್ರೆಸ್ ಚೇಂಜ್ ಮಾಡಿ ಮಿಂಚಿದ್ದಾರೆ. ಸಮಂತಾ ಸಖತ್ ಹಾಟ್ & ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಸಮಂತಾ ಜೊತೆಗಿನ ವಿಜಯ್‌ ಸಲುಗೆ ನೋಡಿ, ರಶ್ಮಿಕಾ ಕಥೆ ಮುಂದೇನು ಅಂತಾ ಫ್ಯಾನ್ಸ್ ತಲೆಬಿಸಿ ಮಾಡಿಕೊಂಡಿದ್ದಾರೆ.

    ವಿಜಯ್-‌ ಸಮಂತಾ ನಟನೆಯ ಖುಷಿ (Kushi) ಸಿನಿಮಾ ಇದೇ ಸೆಪ್ಟೆಂಬರ್‌ 1ಕ್ಕೆ ಬಹುಭಾಷೆಗಳಲ್ಲಿ ರಿಲೀಸ್‌ ಆಗುತ್ತಿದೆ. ದಾಂಪತ್ಯ ಬದುಕಿನ ಸುಂದರ ಕಥೆಯನ್ನ ಹೇಳೋಕೆ ಖುಷಿ ಸಿನಿಮಾದ ಜೋಡಿ ರೆಡಿಯಾಗಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಮಂತಾ ಬ್ಯಾಕ್ ಟು ಶೂಟ್- ಹೊಸ ಲುಕ್‌ನಲ್ಲಿ ಕಂಗೊಳಿಸಿದ ನಟಿ

    ಸಮಂತಾ ಬ್ಯಾಕ್ ಟು ಶೂಟ್- ಹೊಸ ಲುಕ್‌ನಲ್ಲಿ ಕಂಗೊಳಿಸಿದ ನಟಿ

    ಪ್ರವಾಸ ಮತ್ತು ಚಿಕಿತ್ಸೆ ಎಂದು ದೇಶ ವಿದೇಶ ಸುತ್ತುತ್ತಿದ್ದ ಸಮಂತಾ (Samantha) ಕೊನೆಗೂ ಮತ್ತೆ ಕ್ಯಾಮೆರಾ ಮುಂದೆ ಬಂದಿದ್ದಾರೆ. ಸಮಂತಾಗೆ ಮನಸಿತ್ತೋ ಇಲ್ವೋ ಒಂದರ್ಥದಲ್ಲಿ ಜಾಲತಾಣದಲ್ಲಿ ಟೀಕೆಗಳೇ ಸಮಂತಾರನ್ನ ಇವತ್ತು ಕ್ಯಾಮೆರಾ ಮುಂದೆ ಕೂರಿಸಿದೆ. ಸ್ಯಾಮ್ ನಯಾ ಗೆಟಪ್‌ನಲ್ಲಿ ಮಿರ ಮಿರ ಅಂತಾ ಮಿಂಚಿದ್ದಾರೆ.

    6 ತಿಂಗಳು ಬಣ್ಣ ಹಚ್ಚಲ್ಲ ಎಂದು ಹೇಳಿ ಹೊರಟ ಸ್ಯಾಮ್ ಮಯೋಸಿಟಿಸ್ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ರು. ಸ್ನೇಹಿತೆ ಜೊತೆ ಬಾಲಿ(Baali) ಟ್ರಿಪ್ ಎಂಜಾಯ್ ಮಾಡಿಬಂದ್ರು. ದೇಶ ವಿದೇಶ ಸುತ್ತುತ್ತಿದ್ರು. ದೇವಸ್ಥಾನ-ಧ್ಯಾನ ಎಂದೆಲ್ಲಾ ಸಮಯ ಕಳೆದ್ರು. ಕೊನೆಗೂ ಆಗಸ್ಟ್ 15ರಿಂದ ಬಣ್ಣ ಹಚ್ಚಿದ್ದಾರೆ. ಶ್ವೇತಬಣ್ಣದ ಜಂಪ್‌ಸೂಟ್‌ನಲ್ಲಿ ಬೋಲ್ಡ್ ಪೋಸ್ ಕೊಟ್ಟಿದ್ದಾರೆ. ವಿವಿಧ ಬಗೆಯ ಹರಳುಗಳಿಂದ ಮಾಡಿದ ಸುಂದರವಾದ ನೆಕ್ಲೇಸ್ ಧರಿಸಿರುವ ಸ್ಯಾಮ್ ಮತ್ತೆ ಕ್ಯಾಮೆರಾ ಮುಂದೆ ಬಂದಿದ್ದಾರೆ. ಅಷ್ಟೇ ಅಲ್ಲ, ಬ್ಲ್ಯಾಕ್ & ವೈಟ್ ಡ್ರೆಸ್‌ಗೆ ಕೂಲಿಂಗ್ ಗ್ಲಾಸ್ ಧರಿಸಿ ಸಮಂತಾ ಮಿಂಚಿದ್ದಾರೆ. ಸಮಂತಾರ ಎರಡು ಬಗೆಯ ಫೋಟೋಶೂಟ್ ಈಗ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ.‌ ಇದನ್ನೂ ಓದಿ:ಇಂದು ಸ್ಪಂದನಾ ಉತ್ತರಕ್ರಿಯೆ ವಿಧಿವಿಧಾನ

    ಆರು ತಿಂಗಳು ಬಣ್ಣ ಹಚ್ಚೋಲ್ಲ ಎಂದಿದ್ದ ಸಮಂತಾ(Samantha)  ಈಗ ಕ್ಯಾಮೆರಾ ಎದುರಲ್ಲಿ ಕಾಣಿಸ್ಕೊಂಡಿರೋದು ಹೊಸ ಸಿನಿಮಾಕ್ಕಲ್ಲ. ಬದಲಿಗೆ ತಳ್ಳಿಕೊಂಡು ನಟಿಸಿದ್ದ ಸಿನಿಮಾಕ್ಕಾಗಿ. ಆ ಸಿನಿಮಾವೇ ಖುಷಿ. ವಿಜಯ್ ದೇವರಕೊಂಡ (Vijay Devarakonda) ಜೊತೆ ಅಭಿನಯಿಸಿರುವ ಖುಷಿ (Kushi) ಚಿತ್ರ. ಮೊನ್ನೆ ಮೊನ್ನೆ ತಾವೇ ಹೈದ್ರಾಬಾದ್‌ನಲ್ಲಿ ಖುಷಿ ಟ್ರೈಲರ್ ರಿಲೀಸ್ ಇವೆಂಟ್ ನಡೆದಿತ್ತು. ಈ ಅದ್ದೂರಿ ಕಾರ್ಯಕ್ರಮದಲ್ಲಿ ಸಮಂತಾ ಗೈರಾಗಿದ್ರು.

    ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯುತ್ತಿರುವ ಕಾರಣ ಕೊಟ್ಟು ಪ್ರಚಾರದಿಂದ ತಪ್ಪಿಸಿಕೊಂಡಿದ್ರು. ಇದೇ ಆಗಿದ್ದು ಎಡವಟ್ಟು. ಸಮಂತಾಗೆ ಪ್ರವಾಸ ಮೋಜು ಮಸ್ತಿ ಎಂದು ದೇಶವಿದೇಶ ಸುತ್ತೋದಕ್ಕೆ ಆಗುತ್ತೆ. ಪ್ರಚಾರಕ್ಕೆ ಬರೋದಕ್ಕಾಗಲ್ವೇ ಅನ್ನೋ ಟೀಕೆ ಕೇಳಿಬಂತು. ಈ ವಿಷಯ ಸಮಂತಾ ಕಿವಿಗೂ ಬಡಿದಂತೆ ಕಾಣುತ್ತದೆ. ಟೀಕೆ ಹೆಚ್ಚಾಗೋ ಮೊದಲೇ ಎಚ್ಚೆತ್ತುಕೊಂಡ ಸಮಂತಾ ಮರುದಿನವೇ ಕಾಸ್ಟ್ಯೂಮ್ ಡಿಸೈನರ್ ಕರೆಸಿ ಹಲವು ವಸ್ತ್ರಗಳನ್ನು ರೆಡಿ ಮಾಡಿಸಿಕೊಂಡು ಖುಷಿ ಸಿನಿಮಾದ ಪ್ರಚಾರದ ಅಖಾಡಕ್ಕೆ ಇಳಿದಿದ್ದಾರೆ. ವಿಜಯ್ ದೇವರಕೊಂಡ ಜೊತೆ ಸಿನಿಮಾ ಪ್ರಚಾರ ಕಾರ್ಯದಲ್ಲಿ ನಟಿ ಭಾಗಿಯಾಗಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Kushi Trailer: ವಿಜಯ್-ಸಮಂತಾ ಲವ್, ಮದುವೆ, ಜಗಳವೇ ಇಲ್ಲಿ ಹೈಲೈಟ್

    Kushi Trailer: ವಿಜಯ್-ಸಮಂತಾ ಲವ್, ಮದುವೆ, ಜಗಳವೇ ಇಲ್ಲಿ ಹೈಲೈಟ್

    ವಿಜಯ್ ದೇವರಕೊಂಡ (Vijay Devarakonda)- ಸಮಂತಾ (Samantha) ನಟನೆಯ ‘ಖುಷಿ’ (Kushi)  ಸಿನಿಮಾ ಇನ್ನೇನು ಕೆಲವೇ ದಿನಗಳಲ್ಲಿ ತೆರೆಗೆ ಅಬ್ಬರಿಸೋದಕ್ಕೆ ರೆಡಿಯಾಗಿದೆ. ಸದ್ಯ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು, ವಿಜಯ್- ಸಮಂತಾ ಪ್ರೀತಿ, ಗುದ್ದಾಟ, ಮುನಿಸು ಎಲ್ಲವೂ ಇಲ್ಲಿ ಮೋಡಿ ಮಾಡ್ತಿದೆ. ಹೆಂಡತಿಗೆ ಒಬ್ಬ ಗಂಡ ಹೇಗಿರಬೇಕು ಎಂದು ಎಂದು ತೋರಿಸೋದೇ ಸಿನಿಮಾದ ಜೀವಾಳ.

    ಖುಷಿ ಸಿನಿಮಾದ ಫಸ್ಟ್ ಲುಕ್, ಸಾಂಗ್ಸ್ ಎಲ್ಲವೂ ಈಗಾಗಲೇ ಅಭಿಮಾನಿಗಳನ್ನ ಮೋಡಿ ಮಾಡುತ್ತಿದೆ. ವಿಜಯ್- ಸ್ಯಾಮ್ ಕಾಂಬೋದ ಟ್ರೈಲರ್ ಝಲಕ್ ಫ್ಯಾನ್ಸ್ ಫಿದಾ ಆಗಿದ್ದಾರೆ. ಕಾಶ್ಮೀರಕ್ಕೆ ಹೋಗುವ ಕ್ರಿಶ್ಚಿಯನ್ ಯುವಕ ವಿಪ್ಲವ್ ಹಾಗೂ ಮುಸ್ಲಿಂ ಯುವತಿ ಬೇಗಂ ಭೇಟಿಯಾಗುತ್ತದೆ. ಆಕೆಯನ್ನು ನೋಡಿ ನಾಯಕ ವಿಜಯ್ ಪ್ರೀತಿಯಲ್ಲಿ ಬೀಳುತ್ತಾನೆ. ನಂತರ ನಾಯಕಿ ಸಮಂತಾ ಮುಸ್ಲಿಂ ಅಲ್ಲ ಬ್ರಾಹ್ಮಣ ಕುಟುಂಬದ ಯುವತಿ ಅನ್ನೋದು ಗೊತ್ತಾಗುತ್ತದೆ. ಅಂದರೆ ಇದು ಕ್ರಿಶ್ಚಿಯನ್ ಯುವಕ- ಹಿಂದೂ ಯುವತಿಯ ಪ್ರೇಮಕಥೆ ಅನ್ನೋದು ಅರ್ಥವಾಗುತ್ತದೆ. ಇಬ್ಬರ ಮನೆಯಲ್ಲೂ ಮದುವೆಗೆ ಒಪ್ಪುವುದಿಲ್ಲ.

    ನಾಯಕಿಯ ತಂದೆಯಂತೂ ಇವರಿಬ್ಬರು ಮದುವೆ ಆದರೆ ಭಾರೀ ಸಮಸ್ಯೆಗಳಾಗುತ್ತದೆ ಎಂದು ಭವಿಷ್ಯ ನುಡಿಯುತ್ತಾನೆ. ಆದರೆ ಅದನ್ನೆಲ್ಲಾ ಮೀರಿ ಇಬ್ಬರು ಮದುವೆ ಆಗಿ ಒಂದು ವರ್ಷ ನಾವು ಆದರ್ಶ ದಂಪತಿಗಳಾಗಿ ಬದುಕಿ ತೋರಿಸುತ್ತೇವೆ ಎಂದು ಸವಾಲು ಹಾಕಿ ಮದುವೆ ಆಗುತ್ತಾರೆ. ಮದುವೆ ನಂತರ ಇಬ್ಬರ ನಡುವೆ ನಡೆಯುವ ಕಿರಿಕ್, ಜಗಳ ಇದನ್ನೇ ತಮಾಷೆಯಾಗಿ ಕಟ್ಟಿಕೊಡುವ ಕೆಲಸ ಮಾಡಲಾಗಿದೆ. ಇವತ್ತಿನ ಯುವ ಜನತೆ ಮದುವೆಯಾಗಿ ಭಿನ್ನಾಭಿಪ್ರಾಯಗಳಿಂದ ಏನೆಲ್ಲಾ ರಾದ್ಧಾಂತ ಆಗುತ್ತದೆ ಅನ್ನೋದೇ ಖುಷಿ ಸಿನಿಮಾದ ಒನ್‌ಲೈನ್ ಕಥೆ. ಇದನ್ನೂ ಓದಿ:ಕಾಲಿನ ಶಸ್ತ್ರಚಿಕಿತ್ಸೆಯ ನಂತರ ಮತ್ತೆ ಶೂಟಿಂಗ್ ಮರಳಿದ ಪ್ರಭಾಸ್

    ‘ಖುಷಿ’ ಟ್ರೈಲರ್ ನೋಡಿದರೆ ಸಿನಿಮಾ ಕಥೆ ಏನು ಎನ್ನುವುದು ಅರ್ಥವಾಗಿ ಬಿಡುತ್ತದೆ.ವಿಜಯ್ ದೇವರಕೊಂಡ- ಸಮಂತಾ ಜೋಡಿ ‘ಖುಷಿ’ ಚಿತ್ರದ ಮೂಲಕ ರಿಲೀಸ್ ಆದ್ಮೇಲೆ ಅದೆಷ್ಟರ ಮಟ್ಟಿಗೆ ಮೋಡಿ ಮಾಡುತ್ತಾರೆ ಕಾದುನೋಡಬೇಕಿದೆ. ಸೆಪ್ಟೆಂಬರ್ 1ರಂದು ಕನ್ನಡ, ತೆಲುಗು, ತಮಿಳು ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಖುಷಿ ಸಿನಿಮಾ ರಿಲೀಸ್ ಆಗುತ್ತಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮತ್ತೆ ಪ್ರೀತಿಯಲ್ಲಿ ಬಿದ್ರಾ ಸಮಂತಾ- ಏನಿದು ಹೊಸ ಕಹಾನಿ?

    ಮತ್ತೆ ಪ್ರೀತಿಯಲ್ಲಿ ಬಿದ್ರಾ ಸಮಂತಾ- ಏನಿದು ಹೊಸ ಕಹಾನಿ?

    ಸೌತ್ ಬ್ಯೂಟಿ ಸಮಂತಾ (Samantha) ಸದ್ಯ ಸಿಂಗಲ್ ಆಗಿ ತಮ್ಮ ಲೈಫ್‌ನ ತಮ್ಮದೇ ಶೈಲಿಯಲ್ಲಿ ಎಂಜಾಯ್ ಮಾಡ್ತಿದ್ದಾರೆ. ನಟನೆಯಿಂದ ಬ್ರೇಕ್ ಪಡೆದು ಬಾಲಿಯಲ್ಲಿ ಕಾಲ ಕಾಳೆಯುತ್ತಿದ್ದಾರೆ. ಇದೀಗ ಅವರ ಬಗ್ಗೆ ಹೊಸ ವಿಚಾರವೊಂದು ಸದ್ದು ಮಾಡುತ್ತಿದೆ. ನಾಗಚೈತನ್ಯ ಜೊತೆಗಿನ ಡಿವೋರ್ಸ್ ಮತ್ತೆ ಪ್ರೀತಿಯಲ್ಲಿ ಬಿದ್ರಾ ಎಂಬ ಅನುಮಾನ ಅಭಿಮಾನಿಗಳನ್ನ ಕಾಡ್ತಿದೆ. ಅಷ್ಟಕ್ಕೂ ಏನಾಯ್ತು? ಇಲ್ಲಿದೆ ಡಿಟೈಲ್ಸ್.

    ನಟಿ ಸಮಂತಾ ಮೈಯೋಸಿಟೀಸ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ಅದಕ್ಕಾಗಿ ಸೂಕ್ತ ಚಿಕಿತ್ಸೆ ಕೂಡ ಪಡೆಯುತ್ತಿದ್ದಾರೆ. ಆರೋಗ್ಯ ಚೇತರಿಕೆಗಾಗಿಯೇ ಒಂದು ವರ್ಷ ನಟಿ ಬ್ರೇಕ್ ಪಡೆದುಕೊಂಡಿದ್ದಾರೆ. ಕಳೆದ ವರ್ಷ ನಾಗಚೈತನ್ಯ ಜೊತೆಗಿನ ದಾಂಪತ್ಯಕ್ಕೆ ವಿದಾಯ ಹೇಳಿದ ಮೇಲೆ ಸಿನಿಮಾಗಳಲ್ಲಿ ಸಮಂತಾ ಬ್ಯುಸಿಯಾದರು. ‘ಪುಷ್ಪ’ (Pushpa) ಸಿನಿಮಾ ಸಾಂಗ್, ಯಶೋದ ಸಿನಿಮಾದ ಸಕ್ಸಸ್ ಮೂಲಕ ಸದ್ದು ಮಾಡಿದ್ರು. ಇದನ್ನೂ ಓದಿ:ಪತಿಗೆ ಡಿವೋರ್ಸ್‌ ನೀಡಿದ್ಯಾಕೆ ಎಂದು ಅಸಲಿ ವಿಚಾರ ಬಿಚ್ಚಿಟ್ಟ ಆ್ಯಂಕರ್ ಚೈತ್ರಾ

    ಈಗ ತಮ್ಮ ವೈಯಕ್ತಿಕ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಡಿವೋರ್ಸ್ ನಂತರ ಈಗ ಮತ್ತೆ ಪ್ರೀತಿಯಲ್ಲಿ ಸಮಂತಾ ಬಿದ್ದಿದ್ದಾರಾ ಎಂಬ ಗುಮಾನಿ ಶುರುವಾಗಿದೆ. ಇದಕ್ಕೆಲ್ಲಾ ಕಾರಣ ಆಗಿರೋದು ಸಮಂತಾರ ನಯಾ ಪೋಸ್ಟ್. ಸಮಂತಾ ಪ್ರೀತಿಯ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಉಲ್ಲೇಖವನ್ನು ಹಂಚಿಕೊಂಡಿದ್ದಾರೆ. ಕೆಲವೊಮ್ಮೆ ನಿಮ್ಮನ್ನು ಹೆಚ್ಚು ದ್ವೇಷಿಸುವವರನ್ನು ನೀವು ನೋಡುತ್ತೀರಿ, ದ್ವೇಷದ ಮಾತುಗಳನ್ನು ಕೇಳುತ್ತೀರಿ, ಆದರೆ ಈ ಜಗತ್ತಿನಲ್ಲಿ ನಾವು ಕಲ್ಪಿಸಿಕೊಳ್ಳುವುದಕ್ಕಿಂತ ಹೆಚ್ಚಿನ ಪ್ರೀತಿ ಇದೆ ಎಂದು ಸಮಂತಾ ನೀಡಿದ ಇನಸ್ಟಾ ಸ್ಟೋರಿ ವೈರಲ್ ಆಗುತ್ತಿದೆ.

    ಆದರೆ ಇದು ಇನ್ನೊಬ್ಬ ವ್ಯಕ್ತಿಗೆ ತಾಗುವಂತೆ ಹಾಕಿದ್ದಾರಾ? ಅಥವಾ ನಿಸರ್ಗವನ್ನು ಆಸ್ವಾದಿಸುತ್ತಾ ತನ್ನ ಭಾವನೆಗಳನ್ನು ಹೀಗೆ ವ್ಯಕ್ತಪಡಿಸಿದ್ದಾರೋ ಎಂಬುದು ಸ್ಪಷ್ಟವಾಗಿಲ್ಲ. ಅದೇನೇ ಇರಲಿ, ಪ್ರೀತಿಯ ಬಗ್ಗೆ ಸಮಂತಾ ತುಂಬಾ ಪಾಸಿಟಿವ್ ಎಂದು ಈ ಪೋಸ್ಟ್‌ನಿಂದ ತಿಳಿದು ಬಂದಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಮಂತಾ ಜೊತೆಗಿನ ‘ಖುಷಿ’ಯ ಕ್ಷಣ ಹಂಚಿಕೊಂಡ ವಿಜಯ್‌ ದೇವರಕೊಂಡ

    ಸಮಂತಾ ಜೊತೆಗಿನ ‘ಖುಷಿ’ಯ ಕ್ಷಣ ಹಂಚಿಕೊಂಡ ವಿಜಯ್‌ ದೇವರಕೊಂಡ

    ಟಾಲಿವುಡ್ (Tollywood) ನಟ ವಿಜಯ್ ದೇವರಕೊಂಡ- ಸಮಂತಾ ರುತ್ ಪ್ರಭು ಅವರು ‘ಖುಷಿ’ (Kushi) ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದಾರೆ. ಸಮಂತಾ- ವಿಜಯ್ ನಡುವೆ ಆಪ್ತತೆ ಹೆಚ್ಚಾಗಿದೆ. ಈ ಕುರಿತ ಫೋಟೋ, ವೀಡಿಯೋ ಎಲ್ಲೆಡೆ ಸದ್ದು ಮಾಡ್ತಿದೆ.

     

    View this post on Instagram

     

    A post shared by Samantha (@samantharuthprabhuoffl)

    ‘ಲೈಗರ್’ (Liger) ಸಿನಿಮಾ ನಂತರ ವಿಜಯ್ ದೇವರಕೊಂಡ (Vijay Devarakonda) ತೆಲುಗಿನ ‘ಖುಷಿ’ ಸಿನಿಮಾದಲ್ಲಿ ನಟಿಸಿದ್ದಾರೆ. ಮೊದಲ ಬಾರಿಗೆ ವಿಜಯ್- ಸ್ಯಾಮ್ ಜೊತೆಯಾಗಿ ನಟಿಸಿದ್ದಾರೆ. ಶೂಟಿಂಗ್ ಸಂದರ್ಭದಲ್ಲಿ ಇಬ್ಬರ ಒಡನಾಟ ಹೇಗಿತ್ತು ಎಂದು ವಿಜಯ್ ರೀಲ್ಸ್ ವೀಡಿಯೋ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ತೋರಿಸಿದ್ದಾರೆ.

     

    View this post on Instagram

     

    A post shared by Samantha (@samantharuthprabhuoffl)

    ಸಮಂತಾ (Samantha) ಸಿಂಗಲ್ ಆಗಿದ್ದಾರೆ. ನಾಗ ಚೈತನ್ಯ ಜೊತೆಗಿನ ದಾಂಪತ್ಯಕ್ಕೆ ಅಂತ್ಯ ಹಾಡಿದ್ದಾರೆ. ಹಾಗಾಗಿ ಸಮಂತಾ ಗಮನವೆಲ್ಲಾ ಸಿನಿಮಾಗಳ ಮೇಲಿದೆ. ಸೌತ್- ಬಾಲಿವುಡ್ (Bollywood) ಸಿನಿಮಾಗಳಲ್ಲಿ ಸ್ಯಾಮ್ ಬ್ಯುಸಿಯಾಗಿದ್ದಾರೆ. ಇದನ್ನೂ ಓದಿ:ಕಸ್ಟಡಿಯಲ್ಲಿ ಪೊಲೀಸ್ ಕಾನ್ಸ್ ಟೇಬಲ್ ಆದ ನಾಗ ಚೈತನ್ಯ

     

    View this post on Instagram

     

    A post shared by Vijay Deverakonda (@thedeverakonda)

    ‘ಖುಷಿ’ ಸಿನಿಮಾ ಫಸ್ಟ್ ಸಾಂಗ್ ಇತ್ತೀಚಿಗಷ್ಟೇ ರಿಲೀಸ್ ಆಗಿತ್ತು. ಅಭಿಮಾನಿಗಳಿಂದ ಹಾಡಿಗೆ ಮೆಚ್ಚುಗೆ ವ್ಯಕ್ತವಾಗಿದೆ. ವಿಜಯ್- ಸಮಂತಾ (Samantha) ಖುಷಿಯ ಕ್ಷಣಗಳನ್ನ ನೋಡಿ, ಈ ಪರಿ ಸ್ನೇಹ ಹೆಚ್ಚಾಗಲು ಕಾರಣವೇನು? ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.