Tag: ಖುಷಿ ಕಪೂರ್

  • ಬಿಕಿನಿಯಲ್ಲಿ ಬೀಚ್ ಬಳಿ ನಟಿ ಖುಷಿ ಕಪೂರ್ ಚಿಲ್

    ಬಿಕಿನಿಯಲ್ಲಿ ಬೀಚ್ ಬಳಿ ನಟಿ ಖುಷಿ ಕಪೂರ್ ಚಿಲ್

    ಸಿನಿಮಾ ಫ್ಲಾಪ್ ಆದರೂ ಕ್ಯಾರೆ ಎನ್ನದೆ ಬಾಲಿವುಡ್ ನಟಿ ಖುಷಿ ಕಪೂರ್ (Kushi Kapoor) ವೆಕೇಷನ್‌ನಲ್ಲಿ ಬ್ಯುಸಿಯಾಗಿದ್ದಾರೆ. ಬಿಕಿನಿ (Bikini) ಧರಿಸಿ ಬೀಚ್ ಬಳಿ ನಟಿ ಖುಷಿ ಬೋಲ್ಡ್ ಆಗಿ ಪೋಸ್ ಕೊಟ್ಟಿದ್ದಾರೆ. ಬಿಕಿನಿಯಲ್ಲಿರುವ ನಟಿಯನ್ನು ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. ಇದನ್ನೂ ಓದಿ:‘ಲಕ್ಷ್ಮಿ ಬಾರಮ್ಮ’ ನಟನ ಅದ್ಧೂರಿ ಆರತಕ್ಷತೆ- ಸಿನಿ ತಾರೆಯರು ಭಾಗಿ

    ಫ್ರೆಂಡ್ಸ್ ಜೊತೆ ನಟಿ ವೆಕೇಷನ್‌ಗೆ ತೆರಳಿದ್ದಾರೆ. ಬಿಕಿನಿ ಧರಿಸಿ ಸಖತ್ ಹಾಟ್ ಆಗಿ ಖುಷಿ ಕಾಣಿಸಿಕೊಂಡಿದ್ದಾರೆ. ನಟಿ ವಿವಿಧ ಭಂಗಿಗಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅವರ ಫೋಟೋಗೆ ಬಗೆ ಬಗೆಯ ಕಾಮೆಂಟ್‌ಗಳು ಹರಿದು ಬರುತ್ತಿವೆ. ಇದನ್ನೂ ಓದಿ:‘ಸಿಕಂದರ್’ ಸೋಲಿನ ಬಳಿಕ ಆರ್ಮಿ ಆಫೀಸರ್ ಪಾತ್ರದಲ್ಲಿ ಸಲ್ಮಾನ್ ಖಾನ್?

    ಹಿರಿಯ ನಟಿ ಶ್ರೀದೇವಿ (Sridevi) ಪುತ್ರಿ ಖುಷಿಗೂ ನೆಪೋಟಿಸಂ ಕಿಡ್ ಎಂದು ಟೀಕಿಸುತ್ತಿದ್ದಾರೆ. ಇತ್ತೀಚೆಗೆ ತೆರೆಕಂಡ 2 ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಮಕಾಡೆ ಮಲಗಿವೆ. ಲವ್‌ಯಾಪಾ, ನಾದಾನಿಯಾ ಸಿನಿಮಾಗಳು ಸೋತಿವೆ. ಸೆಲೆಬ್ರಿಟಿ ಕಿಡ್‌ನ ಸಿನಿಮಾಗೆ ಹಾಕಿಕೊಂಡರೆ ಹೀಗೆ ಎಂದು ಟೀಕಿಸುತ್ತಿದ್ದಾರೆ. ಪ್ರತಿಭೆ ಇಲ್ಲದ ಹುಡುಗಿಗೆ ಯಾಕೆ ಚಾನ್ಸ್ ಕೊಡ್ತೀರಾ ಎಂದು ಫ್ಯಾನ್ಸ್ ಕಾಮೆಂಟ್ ಮಾಡ್ತಿದ್ದಾರೆ. ಹೀಗಿರುವಾಗ ಸಿನಿಮಾ ಸೋಲಿನ ಬಗ್ಗೆ ತಲೆ ಕೆಡಿಸಿಕೊಳ್ಳದೆ ವೆಕೇಷನ್ ಹೋಗಿರುವ ನಟಿಯನ್ನು ಫ್ಯಾನ್ಸ್ ತರಾಟೆಗೆ ತೆಗೆದುಕೊಂಡಿದ್ದಾರೆ.

    ಸಿನಿಮಾಗಳು ಸೋತಿದ್ರೂ ಖುಷಿಗೆ ಅವಕಾಶಗಳೇನು ಕಡಿಮೆಯಾಗಿಲ್ಲ. ಶ್ರೀದೇವಿ ಮತ್ತು ಬೋನಿ ಕಪೂರ್ ಮಗಳು ಅನ್ನೋ ಕಾರಣಕ್ಕೆ ನಟಿಗೆ ಚಾನ್ಸ್ ಸಿಕ್ತಿದೆ. ಜಾನ್ವಿ ಕಪೂರ್ ಸ್ಟಾರ್ ಕಿಡ್ ಆಗಿದ್ರೂ ಬ್ಯೂಟಿ ಜೊತೆ ಪ್ರತಿಭೆ ಇದೆ ಅನ್ನೋ ಕಾರಣಕ್ಕೆ ಫ್ಯಾನ್ಸ್ ಸುಮ್ಮನಿದ್ದಾರೆ.

  • ಸೈಫ್ ಅಲಿ ಖಾನ್ ಪುತ್ರನ ಸಿನಿಮಾಗೆ ಟೈಟಲ್ ಫಿಕ್ಸ್- ಪೋಸ್ಟರ್ ಔಟ್

    ಸೈಫ್ ಅಲಿ ಖಾನ್ ಪುತ್ರನ ಸಿನಿಮಾಗೆ ಟೈಟಲ್ ಫಿಕ್ಸ್- ಪೋಸ್ಟರ್ ಔಟ್

    ಬಾಲಿವುಡ್ ನಟ ಸೈಫ್ ಅಲಿ ಖಾನ್ (Saif Ali Khan) ಪುತ್ರ ಇಬ್ರಾಹಿಂ ಅಲಿ ಖಾನ್ ಚೊಚ್ಚಲ ಸಿನಿಮಾ ಮೂಲಕ ಸದ್ದು ಮಾಡುತ್ತಿದ್ದಾರೆ. ಇಬ್ರಾಹಿಂ ಅಲಿ ಖಾನ್ ಮತ್ತು ಖುಷಿ ಕಪೂರ್ (Kushi Kapoor) ನಟನೆಯ ಈ ಚಿತ್ರಕ್ಕೆ ಕರಣ್ ಜೋಹರ್ ಸಾಥ್ ನೀಡಿದ್ದಾರೆ. ಚಿತ್ರದ ಪೋಸ್ಟರ್ ರಿವೀಲ್ ಮಾಡುವ ಮೂಲಕ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.

    ‘ನಾದನಿಯನ್’ ಎಂದು ಚಿತ್ರಕ್ಕೆ ಟೈಟಲ್ ಇಡಲಾಗಿದ್ದು, ಈ ಚಿತ್ರದ ಮೂಲಕ ಹೊಸ ಜೋಡಿಯನ್ನು ಕರಣ್ ಜೋಹರ್ ಪರಿಚಯಿಸಲು ಹೊರಟಿದ್ದಾರೆ. ಹದಿಹರೆಯದ ರೊಮ್ಯಾಂಟಿಕ್ ಕಥೆ ಈ ಸಿನಿಮಾದಲ್ಲಿ ಇರಲಿದೆ. ಇಬ್ರಾಹಿಂ ಮತ್ತು ಖುಷಿ ಕಪೂರ್ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ಫೆ.16ರಂದು ಹಸೆಮಣೆ ಏರಲು ಸಜ್ಜಾದ ‘ಪಾರು’ ನಟಿ ಮಾನಸಿ ಜೋಶಿ

     

    View this post on Instagram

     

    A post shared by Netflix India (@netflix_in)

    ಈ ಚಿತ್ರವನ್ನು ಶೌನಾ ಗೌತಮ್ ನಿರ್ದೇಶನ ಮಾಡಿದ್ದಾರೆ. ಸೈಫ್ ಪುತ್ರನ ಚಿತ್ರಕ್ಕೆ ಕರಣ್ ಜೋಹರ್ ಬಂಡವಾಳ ಹೂಡಿದ್ದಾರೆ. ಈ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಲಿದೆ. ಚಿತ್ರದ ರಿಲೀಸ್ ಡೇಟ್ ಇನ್ನೂ ರಿವೀಲ್ ಆಗಿಲ್ಲ. ಇದನ್ನೂ ಓದಿ:ಡಾಲಿ ನಿರ್ಮಾಣದ ‘ವಿದ್ಯಾಪತಿ’ಗೆ ಕೆಜಿಎಫ್ ವಿಲನ್ ಎಂಟ್ರಿ- ನಾಗಭೂಷಣ್ ಎದುರು ತೊಡೆತಟ್ಟಿದ ಗರುಡ ರಾಮ್

    ಅಂದಹಾಗೆ, ಇಬ್ರಾಹಿಂ ಈ ಚಿತ್ರದ ಜೊತೆಗೆ ಶ್ರೀಲೀಲಾ ಅವರೊಂದಿಗೆ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಅದಕ್ಕೆ ತೆರೆಮರೆಯಲ್ಲಿ ತಯಾರಿ ನಡೆಯುತ್ತಿದೆ. ಇತ್ತ ಖುಷಿ ಕಪೂರ್‌ ಅವರು ಆಮೀರ್‌ ಖಾನ್‌ ಪುತ್ರ ಜುನೈದ್‌ ಖಾನ್‌ ಜೊತೆ ‘ಲವ್‌ಯಾಪಾ’ ಎಂಬ ಸಿನಿಮಾ ಮಾಡಿದ್ದಾರೆ. ಈ ಸಿನಿಮಾ ಫೆ.7ರಂದು ರಿಲೀಸ್‌ ಆಗಲಿದೆ.

  • ಮಿಸ್ಟರಿ ಮ್ಯಾನ್ ಜೊತೆಗಿನ ರೊಮ್ಯಾಂಟಿಕ್ ಫೋಟೋ ಹಂಚಿಕೊಂಡ ಖುಷಿ ಕಪೂರ್

    ಮಿಸ್ಟರಿ ಮ್ಯಾನ್ ಜೊತೆಗಿನ ರೊಮ್ಯಾಂಟಿಕ್ ಫೋಟೋ ಹಂಚಿಕೊಂಡ ಖುಷಿ ಕಪೂರ್

    ಬಾಲಿವುಡ್ ಬೆಡಗಿ ಶ್ರೀದೇವಿ ಪುತ್ರಿ ಖುಷಿ ಕಪೂರ್ (Kushi Kapoor) ಅವರು ಮಿಸ್ಟರಿ ಹುಡುಗನ ಜೊತೆಗಿರುವ ಫೋಟೋ ಹಂಚಿಕೊಂಡಿದ್ದಾರೆ. ಈ ಬೆನ್ನಲ್ಲೇ ನಟಿ ಎಂಗೇಜ್ ಆಗಿರುವ ಕುರಿತು ಸುಳಿವು ನೀಡಿದ್ರಾ? ಎಂಬ ಅನುಮಾನ ಅಭಿಮಾನಿಗಳಲ್ಲಿ ಮೂಡಿದೆ. ಇದನ್ನೂ ಓದಿ:ರೆಟ್ರೋ ಗೆಟಪ್‌ನಲ್ಲಿ ಅಭಿಮಾನಿಗಳ ಮುಂದೆ ಬಂದ ಶ್ರೀಲೀಲಾ

    ಮಿಸ್ಟರಿ ಹುಡುಗನನ್ನು (Mistery Man) ಖುಷಿ ತಬ್ಬಿಕೊಂಡು ಕನ್ನಡಿ ಮುಂದೆ ಸೆಲ್ಫಿ ಕ್ಲಿಕಿಸಿರುವ ರೊಮ್ಯಾಂಟಿಕ್ ಫೋಟೋವನ್ನು ನಟಿ ಪೋಸ್ಟ್ ಮಾಡಿದ್ದಾರೆ. ಈ ಫೋಟೋದಲ್ಲಿರುವ ವ್ಯಕ್ತಿ ವೈದಾಂಗ್ ರೈನಾನಾ? ಎಂದೆಲ್ಲಾ ಫ್ಯಾನ್ಸ್ ಕಾಮೆಂಟ್ ಮಾಡುತ್ತಿದ್ದಾರೆ. ಬಾಯ್‌ಫ್ರೆಂಡ್ ಜೊತೆಗಿನ ಫೋಟೋ ಶೇರ್ ಮಾಡಿ ಡೇಟಿಂಗ್ ಕುರಿತು ನಟಿ ಸುಳಿವು ನೀಡಿದ್ದಾರೆ ಎಂದು ಫ್ಯಾನ್ಸ್ ಊಹಿಸಿದ್ದಾರೆ.

    ಇನ್ನೂ ಜುನೈದ್ ಖಾನ್ ಜೊತೆ ‘ಲವ್‌ಯಾಪಾ’ ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕಿಯಾಗಿ ಖುಷಿ ಕಪೂರ್ ನಟಿಸಿದ್ದಾರೆ. ಇದನ್ನೂ ಓದಿ:ರೆಟ್ರೋ ಗೆಟಪ್‌ನಲ್ಲಿ ಅಭಿಮಾನಿಗಳ ಮುಂದೆ ಬಂದ ಶ್ರೀಲೀಲಾ

    ಆಮೀರ್ ಖಾನ್ ಪುತ್ರನ ಜೊತೆಗಿನ ನಟಿಯ ಸಿನಿಮಾ ಫೆ.7ರಂದು ರಿಲೀಸ್ ಆಗಲಿದೆ. ಈ ಚಿತ್ರದ ಮೂಲಕ ನಟಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

  • ಆಮೀರ್ ಖಾನ್ ಪುತ್ರನ ಜೊತೆ ಖುಷಿ ಕಪೂರ್ ಡ್ಯುಯೆಟ್

    ಆಮೀರ್ ಖಾನ್ ಪುತ್ರನ ಜೊತೆ ಖುಷಿ ಕಪೂರ್ ಡ್ಯುಯೆಟ್

    ಬಾಲಿವುಡ್ ನಟ ಆಮೀರ್ ಖಾನ್ ಪುತ್ರ ಜುನೈದ್ (Junaid Khan) ಮತ್ತು ಶ್ರೀದೇವಿ ಪುತ್ರಿ ಖುಷಿ ಕಪೂರ್ (Kushi Kapoor) ಡ್ಯುಯೆಟ್ ಮೂಡ್‌ಗೆ ಜಾರಿದ್ದಾರೆ. ಹೊಸ ಸಿನಿಮಾದಲ್ಲಿ ಜೋಡಿಯಾಗಿ ನಟಿಸಿದ್ದು, ನೋಡುಗರಿಗೆ ಪ್ರೇಮ ಪಾಠ ಮಾಡಿದ್ದಾರೆ. ‘ಲವ್ಯಾಪಾ’ ಸಿನಿಮಾದ ಲವ್ಲಿ ಸಾಂಗ್‌ವೊಂದು ರಿಲೀಸ್ ಆಗಿದೆ.‌ ಇದನ್ನೂ ಓದಿ:ಬಾಲಿವುಡ್‌ನತ್ತ ನಟಿ- ಕಾರ್ತಿಕ್ ಆರ್ಯನ್‌ಗೆ ಶ್ರೀಲೀಲಾ ಜೋಡಿ?

    ಈ ಸಿನಿಮಾದ ಮೂಲಕ ಜುನೈದ್ ಖಾನ್ ಮತ್ತು ಖುಷಿ ಕಪೂರ್ ಬಣ್ಣದ ಬದುಕಿಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ‘ಲವ್ಯಾಪಾ ಹೋ ಗಯಾ’ ಎಂಬ ರೊಮ್ಯಾಂಟಿಕ್ ಸಾಂಗ್ ರಿಲೀಸ್ ಆಗಿದ್ದು, ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ. ಕಲರ್‌ಫುಲ್ ಸೆಟ್‌ನಲ್ಲಿ ಜುನೈದ್ ಮತ್ತು ಖುಷಿ ಮಸ್ತ್ ಆಗಿ ಹೆಜ್ಜೆ ಹಾಕಿದ್ದಾರೆ.

     

    View this post on Instagram

     

    A post shared by Phantom Studios (@fuhsephantom)

    ಇನ್ನೂ ಈ ಸಿನಿಮಾವನ್ನು ಅದ್ವೈತ್ ಚಂದನ್ ನಿರ್ದೇಶನ ಮಾಡಿದ್ದಾರೆ. ಈ ವರ್ಷ ಫೆ.7ರಂದು ರಿಲೀಸ್ ಆಗಲಿದೆ. ಹಾಡಿನ ಮೂಲಕ ಗಮನ ಸೆಳೆದಿರುವ ಈ ಜೋಡಿ, ಸಿನಿಮಾದಿಂದ ಕಮಾಲ್ ಮಾಡಿ ಗೆದ್ದು ಬೀಗ್ತಾರಾ? ಎಂದು ಕಾದುನೋಡಬೇಕಿದೆ.

  • ಆಮೀರ್ ಪುತ್ರನ ಚಿತ್ರಕ್ಕೆ ಶ್ರೀದೇವಿ 2ನೇ ಪುತ್ರಿ ನಾಯಕಿ

    ಆಮೀರ್ ಪುತ್ರನ ಚಿತ್ರಕ್ಕೆ ಶ್ರೀದೇವಿ 2ನೇ ಪುತ್ರಿ ನಾಯಕಿ

    ಬಾಲಿವುಡ್ ನಟ ಆಮೀರ್ ಖಾನ್ (Aamir Khan) ಪುತ್ರ ಜುನೈದ್ ಖಾನ್ ನಟನೆಯ ಮೂರನೇ ಸಿನಿಮಾಗೆ ಶ್ರೀದೇವಿ ಅವರ 2ನೇ ಪುತ್ರಿ ಖುಷಿ ಕಪೂರ್ (Khushi Kapoor) ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈಗಾಗಲೇ ಎರಡು ಚಿತ್ರಗಳಲ್ಲಿ ನಟಿಸಿರುವ ಜುನೈದ್ ಅವರಿಗೆ ಇದು ಮೂರನೇ ಸಿನಿಮಾ. ಈ ಸಿನಿಮಾವನ್ನು ಅದ್ವೈತ್ ಚಂದನ್ ನಿರ್ದೇಶನ ಮಾಡುತ್ತಿದ್ದಾರೆ.

    ಜುನೈದ್ ಖಾನ್ ಮೊದಲ ಸಿನಿಮಾ ರಿಲೀಸ್ ಆಗುವ ಮುನ್ನವೇ 2ನೇ ಸಿನಿಮಾದ ಶೂಟಿಂಗ್‌ ಕೂಡ ಮುಗಿಸಿ ಕೊಟ್ಟಿದ್ದಾರೆ. ಈ ಮೂಲಕ ಬಿಟೌನ್‌ನಲ್ಲಿ ಜುನೈದ್‌ ಗಮನ ಸೆಳೆಯುತ್ತಿದ್ದಾರೆ. ಈ ಎರಡೂ ಚಿತ್ರಗಳೂ ಇನ್ನೂ ರಿಲೀಸ್ ಆಗಿಲ್ಲ. ಆದರೂ, ಮೂರನೇ ಸಿನಿಮಾಗೆ ಆಫರ್ ಸಿಕ್ಕಿದೆ.

    ಸಾಯಿ ಪಲ್ಲವಿ ಜೊತೆಗಿನ ಚೊಚ್ಚಲ ಸಿನಿಮಾದ ಶೂಟಿಂಗ್‌ ಕೂಡ ಕಂಪ್ಲೀಟ್‌ ಆಗಿದೆ. ಜಪಾನ್‌ ಸೇರಿದಂತೆ ಹಲವು ಕಡೆ ಸಿನಿಮಾದ ಶೂಟಿಂಗ್ ನಡೆದಿದೆ. ಜುನೈದ್ ಮತ್ತು ಸಾಯಿ ಪಲ್ಲವಿ ಕಾಂಬಿನೇಷನ್‌ನ ‘ಮಹಾರಾಜ’ (Maharaja Film) ಸಿನಿಮಾ ನೋಡೋಕೆ ಕಾಯುತ್ತಿರುವ ಫ್ಯಾನ್ಸ್‌ಗೆ ಈಗ ಸಿಹಿಸುದ್ದಿ ಸಿಕ್ಕಿದೆ.

     

    ಪ್ರತಿಷ್ಠಿತ ಸಂಸ್ಥೆಯ ಜೊತೆ ಜುನೈದ್ ಖಾನ್ (Junaid Khan) ಕೈ ಜೋಡಿಸಿದ್ದಾರೆ. 58 ದಿನಗಳ ಕಾಲ ಶೂಟಿಂಗ್ ಮಾಡಿ ಮುಗಿಸಿದ್ದಾರೆ. ಮೊದಲ ಸಿನಿಮಾಗಿಂತ 2ನೇ ಚಿತ್ರದ ಕಥೆ ಭಿನ್ನವಾಗಿದೆ. ಮೊದಲ ಸಿನಿಮಾ ರಿಲೀಸ್‌ ಆಗುವ ಮುಂಚೆಯೇ ಆಮೀರ್‌ ಪುತ್ರನಿಗೆ ಭಾರೀ ಬೇಡಿಕೆಯಿದೆ.

  • ಬಾಲಿವುಡ್‌ನಲ್ಲಿ ರಿಮೇಕ್ ಆಗಲಿದೆ ‘ಉಪ್ಪೇನಾ’ ಚಿತ್ರ- ನಾಯಕಿ ಯಾರು?

    ಬಾಲಿವುಡ್‌ನಲ್ಲಿ ರಿಮೇಕ್ ಆಗಲಿದೆ ‘ಉಪ್ಪೇನಾ’ ಚಿತ್ರ- ನಾಯಕಿ ಯಾರು?

    ತೆಲುಗಿನ ಸೂಪರ್ ಹಿಟ್ ‘ಉಪ್ಪೇನಾ’ (Uppena) ಸಿನಿಮಾ ಬಾಲಿವುಡ್‌ಗೆ (Bollywood) ರಿಮೇಕ್ ಮಾಡಲು ನಿರ್ಮಾಪಕ ಬೋನಿ ಕಪೂರ್ (Boney Kapoor) ನಿರ್ಧರಿಸಿದ್ದಾರೆ. ಕೃತಿ ಶೆಟ್ಟಿ-ವೈಷ್ಣವ್ ತೇಜ್ ನಟಿಸಿದ ಈ ಚಿತ್ರವನ್ನು ಹಿಂದಿ ವರ್ಷನ್‌ನಲ್ಲಿ ತೋರಿಸಲು ಯೋಚಿಸಿದ್ದಾರೆ. ನಾಯಕಿಯಾಗಿ ಕೃತಿ ಶೆಟ್ಟಿ (Krithi Shetty) ನಟಿಸಿದ್ದ ಪಾತ್ರಕ್ಕೆ ಸ್ಟಾರ್ ನಟಿಯ ಮಗಳನ್ನೇ ಆಯ್ಕೆ ಮಾಡಿದ್ದಾರೆ.

    ಬುಚ್ಚಿಬಾಬು ಸನಾ ಅವರು ‘ಉಪ್ಪೇನಾ’ (Uppena) ಸಿನಿಮಾ ನಿರ್ದೇಶನ ಮಾಡಿ ಗೆದ್ದು ಬೀಗಿದ್ದರು. ಈ ಚಿತ್ರದಿಂದ ಕೃತಿ ಶೆಟ್ಟಿಗೆ ಬಂಪರ್ ಅವಕಾಶಗಳು ಸಿಕ್ಕಿದ್ದವು. ಈ ಕಥೆಯನ್ನು ಪ್ರೇಕ್ಷಕರು ನೋಡಿ ಗೆಲ್ಲಿಸಿದ್ದರು. ದಕ್ಷಿಣದ ಚಿತ್ರಗಳೇ ಸಿನಿಮಾರಂಗದಲ್ಲಿ ಕ್ಲಿಕ್ ಆಗುತ್ತಿರೋ ಕಾರಣ, ಇದೇ ಸಿನಿಮಾವನ್ನು ರಿಮೇಕ್ ಮಾಡಲು ನಿರ್ಮಾಪಕ ಬೋನಿ ಕಪೂರ್ ಮನಸ್ಸು ಮಾಡಿದ್ದಾರೆ.

    ಬೋನಿ ಕಪೂರ್- ಶ್ರೀದೇವಿ ಅವರ 2ನೇ ಪುತ್ರಿ ಖುಷಿ ಕಪೂರ್ (Kushi Kapoor) ಅವರನ್ನು ನಾಯಕಿಯಾಗಿ ಫೈನಲ್ ಮಾಡಿದ್ದಾರೆ. ಅವರ ಸಲುವಾಗಿಯೇ ಈ ಚಿತ್ರವನ್ನು ಬೋನಿ ಕಪೂರ್ ನಿರ್ಮಾಣ ಮಾಡುತ್ತಿದ್ದಾರೆ. ಈ ಸುದ್ದಿ ಕೇಳ್ತಿದ್ದಂತೆ ಬೋನಿ ಕಪೂರ್ ಅವರನ್ನು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ನೆಪೋಟಿಸಂ ಎಂದು ನೆಟ್ಟಿಗರು ಕುಟುಕಿದ್ದಾರೆ. ಇದನ್ನೂ ಓದಿ:ಮೊದಲ ಸಿನಿಮಾದಲ್ಲಿ ‘ಯುವ’ಗೆ ಓಡೋ ಶಾಟ್ ಇಟ್ಟಿದ್ದೇಕೆ? ಸೀಕ್ರೆಟ್‌ ಬಿಚ್ಚಿಟ್ಟ ಡೈರೆಕ್ಟರ್

    ಟ್ರೋಲ್ (Troll) ಮಾಡಲು ಕಾರಣ ಕೂಡ ಇದೆ. ಉಪ್ಪೇನಾ ಸಿನಿಮಾದ ಕಥೆ ‘ಧಡಕ್’ ಚಿತ್ರದ ಕಥೆಯ ರೀತಿಯೇ ಇದೆ. ಈ ಚಿತ್ರ ಮರಾಠಿಯ ‘ಸೈರಾಟ್’ ಚಿತ್ರದ ರಿಮೇಕ್. ಉಪ್ಪೇನಾ ಕ್ಲೈಮಾಕ್ಸ್‌ನಲ್ಲಿ ಬರುವ ಕೆಲವು ದೃಶ್ಯಗಳನ್ನು ಹೊರತುಪಡಿಸಿ ಬಹುತೇಕ ಕಥೆ ಅದೇ ರೀತಿ ಇತ್ತು. ಈಗ ಹಿಂದಿಯಲ್ಲಿ ‘ ಉಪ್ಪೇನಾ’ ರಿಮೇಕ್ ಮಾಡಿದರೆ ಹಿಂದಿ ಪ್ರೇಕ್ಷಕರು ಮತ್ತೊಮ್ಮೆ ಅದೇ ಕಥೆಯನ್ನು ನೋಡಬೇಕಾ ಎಂದು ನೆಟ್ಟಿಗರು ಟ್ರೋಲ್ ಮಾಡಲು ಆರಂಭಿಸಿದ್ದಾರೆ. ಈ ಬಗ್ಗೆ ಚಿತ್ರತಂಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

    ಬೋನಿ ಕಪೂರ್ ಮೊದಲ ಪುತ್ರಿ ಜಾನ್ವಿ ಕಪೂರ್ ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಜ್ಯೂ.ಎನ್‌ಟಿಆರ್ ಮತ್ತು ರಾಮ್ ಚರಣ್ ಸಿನಿಮಾಗಳಿಗೆ ಹೀರೋಯಿನ್ ಆಗಿದ್ದಾರೆ. 2ನೇ ಪುತ್ರಿ ಖುಷಿ ಕಪೂರ್ ಕೂಡ ಚಿತ್ರರಂಗದಲ್ಲಿ ಗಟ್ಟಿ ನೆಲೆ ಗಿಟ್ಟಿಸಿಕೊಳ್ಳಬೇಕು ಎಂಬ ದೃಷ್ಟಿಯಿಂದ ಶ್ರೀದೇವಿ ಪತಿ ನಿರ್ಮಾಣಕ್ಕೆ ಸಾಥ್‌ ನೀಡುತ್ತಿದ್ದಾರೆ.

  • ಬಂಪರ್‌ ಆಫರ್‌ ಗಿಟ್ಟಿಸಿಕೊಂಡ ಖುಷಿ ಕಪೂರ್

    ಬಂಪರ್‌ ಆಫರ್‌ ಗಿಟ್ಟಿಸಿಕೊಂಡ ಖುಷಿ ಕಪೂರ್

    ನಿರ್ಮಾಪಕ ಬೋನಿ ಕಪೂರ್- ನಟಿ ಶ್ರೀದೇವಿ (Sridevi) ದಂಪತಿ ಪುತ್ರಿ ಜಾನ್ವಿ ಕಪೂರ್ ಇದೀಗ ಬಾಲಿವುಡ್ ಮತ್ತು ಸೌತ್ ಸಿನಿಮಾಗಳಲ್ಲಿ ನಾಯಕಿಯಾಗಿ ಗುರುತಿಸಿಕೊಳ್ತಿದ್ದಾರೆ. ಇದೀಗ ಜಾನ್ವಿ ಸಹೋದರಿ ಖುಷಿ ಕಪೂರ್ (Kushi Kapoor) ಕೂಡ ಬಾಲಿವುಡ್‌ನಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಸ್ಟಾರ್‌ ನಟರ ಮಕ್ಕಳಿಗೆ ಖುಷಿ ನಾಯಕಿಯಾಗಿದ್ದಾರೆ. ಇದನ್ನೂ ಓದಿ:ಅಲ್ಲು ಅರ್ಜುನ್ ಹೊಸ ಚಿತ್ರಕ್ಕೆ ಕೀರ್ತಿ ಸುರೇಶ್ ನಾಯಕಿ

    ತಾಯಿ ಶ್ರೀದೇವಿಯಂತೆ ದೊಡ್ಡ ನಟಿಯಾಗಿ ಗುರುತಿಸಿಕೊಳ್ಳಬೇಕು ಅಂತ ಜಾನ್ವಿ, ಖುಷಿ ಕಪೂರ್ ಕೂಡ ಅದೇ ಹಾದಿಯಲ್ಲಿ ಹೆಜ್ಜೆ ಇಡ್ತಿದ್ದಾರೆ. ಸ್ಟಾರ್ ನಟರ ಮಕ್ಕಳ ಜೊತೆ ಖುಷಿ ಕಪೂರ್ ರೊಮ್ಯಾನ್ಸ್ ಮಾಡುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

    ‘ದಿ ಆರ್ಚೀಸ್’ ಸಿನಿಮಾ ಮೂಲಕ ನಟನೆಗೆ ಖುಷಿ ಕಪೂರ್ ಎಂಟ್ರಿ ಕೊಟ್ಟರು. ಈಗ ಸೈಫ್ ಅಲಿ ಖಾನ್ ಪುತ್ರ ಇಬ್ರಾಹಿಂ ಅಲಿ ಖಾನ್‌ಗೆ ಖುಷಿ ನಾಯಕಿಯಾಗಿದ್ದಾರೆ. ಆಮೀರ್ ಖಾನ್ ಪುತ್ರ ಜುನೈದ್ ಖಾನ್ (Junaid Khan) ನಟನೆಯ ಹೊಸ ಸಿನಿಮಾಗೂ ಖುಷಿ ಹೀರೋಯಿನ್ ಆಗಿ ಫೈನಲ್ ಆಗಿದ್ದಾರೆ.

    ಕರಣ್ ಜೋಹರ್ (Karan Johar) ನಿರ್ಮಾಣದ ‘ನಾದನಿಯಾನ್’ ಸಿನಿಮಾದಲ್ಲಿ ಇಬ್ರಾಹಿಂ ಅಲಿ ಖಾನ್- ಖುಷಿ ಕಪೂರ್ ಜೋಡಿಯಾಗಿ ನಟಿಸುತ್ತಿದ್ದಾರೆ. ಇದೊಂದು ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ಆಗಿದೆ.

    ತಮಿಳಿನ ‘ಲವ್ ಟುಡೇ’ ಎಂಬ ಸಿನಿಮಾ ಹಿಂದೆಗೆ ರಿಮೇಕ್ ಆಗುತ್ತಿದೆ. ಈ ಚಿತ್ರಕ್ಕೆ ಜುನೈದ್ ಖಾನ್- ಖುಷಿ ಕಪೂರ್ ಜೊತೆಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಮೂಲಕ ಎರಡು ಬಿಗ್ ಬಜೆಟ್ ಸಿನಿಮಾಗಳ ಆಫರ್ ಖುಷಿ ಕಪೂರ್ ಪಾಲಾಗಿದೆ.

    ಬಾಲಿವುಡ್‌ನಲ್ಲಿ ಖುಷಿ ಕಪೂರ್ ನಾಯಕಿಯಾಗಿ ಮುಂದಿನ ದಿನಗಳಲ್ಲಿ ಗಟ್ಟಿ ನೆಲೆ ಗಿಟ್ಟಿಸಿಕೊಳ್ತಾರಾ ಕಾದುನೋಡಬೇಕಿದೆ.

  • ಬಾಲಿವುಡ್‌ಗೆ ಅಮೀರ್‌ ಪುತ್ರ ಜುನೈದ್‌ ಖಾನ್‌ ಎಂಟ್ರಿ

    ಬಾಲಿವುಡ್‌ಗೆ ಅಮೀರ್‌ ಪುತ್ರ ಜುನೈದ್‌ ಖಾನ್‌ ಎಂಟ್ರಿ

    ಬಾಲಿವುಡ್ (Bollywood) ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ (Aamir Khan) `ಲಾಲ್ ಸಿಂಗ್ ಚಡ್ಡಾ’ (Lal Singh Chaddha) ಸಿನಿಮಾ ನಂತರ ಬ್ರೇಕ್ ತೆಗೆದುಕೊಂಡಿದ್ದಾರೆ. ಚಿತ್ರರಂಗದಿಂದ ಕೊಂಚ ಅಂತರ ಕಾಯ್ದುಕೊಂಡಿದ್ದಾರೆ. ಹೀಗಿರುವಾಗ ಅಮೀರ್ ಕುಟುಂಬದಿಂದ ಇದೀಗ ಸಿಹಿಸುದ್ದಿ ಸಿಕ್ಕಿದೆ.

    ಚಿತ್ರರಂಗಕ್ಕೆ ಸಾಕಷ್ಟು ಸ್ಟಾರ್ ಕಿಡ್‌ಗಳ ಎಂಟ್ರಿಯಾಗಿದೆ. ಇತ್ತೀಚಿಗೆ ಶಾರುಖ್ ಖಾನ್ ಮಗಳು ಸುಹಾನಾ ಬಿಗ್ ಬಿ ಮೊಮ್ಮಗ ಎಂಟ್ರಿ ಕೊಟ್ಟಿದ್ದರು. ಈ ಬೆನ್ನಲ್ಲೇ ಸಿನಿಮಾಗೆ ಅಮೀರ್ ಖಾನ್ ಪುತ್ರ ಜುನೈದ್ ಖಾನ್ ಎಂಟ್ರಿಯಾಗುತ್ತಿದೆ. ಮಾಜಿ ದಂಪತಿ ಅಮೀರ್-ರೀನಾ ದತ್ ಪುತ್ರ ಬಿಟೌನ್‌ಗೆ (Films)  ಪಾದಾರ್ಪಣೆ ಮಾಡ್ತಿದ್ದಾರೆ. ಇದನ್ನೂ ಓದಿ: ತಮಿಳು ಚಿತ್ರರಂಗಕ್ಕೆ ನಾಯಕಿಯಾಗಿ ವೀರಪ್ಪನ್ ಮಗಳು ಪಾದಾರ್ಪಣೆ

    ತಮಿಳಿನ ಸೂಪರ್ ಹಿಟ್ ಸಿನಿಮಾ `ಲವ್ ಟುಡೇ’ (Love Today) ಹಿಂದಿಗೆ ರಿಮೇಕ್ ಆಗುತ್ತಿದೆ. ಈ ಚಿತ್ರದಲ್ಲಿ ನಾಯಕನಾಗಿ ಜುನೈದ್ ಖಾನ್ ಎಂಟ್ರಿ ಕೊಡ್ತಿದ್ದಾರೆ. ಬಾಲಿವುಡ್‌ಗೆ ನಟನಾಗಿ ಎಂಟ್ರಿ ಕೊಡಲು ಸಕಲ ತಯಾರಿ ನಡೆಯುತ್ತಿದೆ. ಶ್ರೀದೇವಿ (Sridevi) ಪುತ್ರಿ ಖುಷಿ ಕಪೂರ್‌ (Kushi Kapoor) ಜೊತೆ ಜುನೈದ್‌ (Junaid Khan) ರೊಮ್ಯಾನ್ಸ್‌ ಮಾಡಲಿದ್ದಾರೆ.

     ಇನ್ನೀತರ ಪಾತ್ರಕ್ಕೆ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಸದ್ಯದಲ್ಲೇ ಸಿನಿಮಾ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳಲಿದೆ. ಜುನೈದ್ ಖಾನ್ ಎಂಟ್ರಿ ಹೇಗಿರಲಿದೆ ಎಂಬುದನ್ನ ತಿಳಿದುಕೊಳ್ಳಲು ಕಾದುನೋಡಬೇಕಿದೆ.

  • ಡೆಸರ್ಟ್ ಸಫಾರಿ ಬಳಿಕ ಬಿಕಿನಿಯಲ್ಲಿ ಜಾನ್ವಿ, ಖುಷಿ ಕಪೂರ್ ಮೋಜು, ಮಸ್ತಿ

    ಡೆಸರ್ಟ್ ಸಫಾರಿ ಬಳಿಕ ಬಿಕಿನಿಯಲ್ಲಿ ಜಾನ್ವಿ, ಖುಷಿ ಕಪೂರ್ ಮೋಜು, ಮಸ್ತಿ

    ಮುಂಬೈ: ಬಾಲಿವುಡ್ ನಟಿ ಜಾನ್ವಿ ಕಪೂರ್ ಸಹೋದರಿ ಖುಷಿ ಕಪೂರ್ ಜೊತೆ ಬಿಕಿನಿ ತೊಟ್ಟು ಹಾಟ್ ಆಗಿ ಫೋಟೋಗಳಿಗೆ ಪೋಸ್ ನೀಡುವ ಮೂಲಕ ಪಡ್ಡೆಹುಡುಗರ ನಿದ್ದೆಗೇಡಿಸುತ್ತಿದ್ದಾರೆ.

    ತಮ್ಮ ಬ್ಯುಸಿ ಶೆಡ್ಯೂಲ್‍ಗಳಿಂದ ಬ್ರೇಕ್ ಪಡೆದುಕೊಂಡು ದುಬೈನಲ್ಲಿ ಸಹೋದರಿ ಖುಷಿ ಕಪೂರ್ ಜೊತೆಗೆ ಡೆಸರ್ಟ್ ಸಫಾರಿ ಮಾಡಿ ಸಖತ್ ಎಂಜಾಯ್ ಮಾಡಿದ್ದ ಜಾನ್ವಿ ಕಪೂರ್ ಇದೀಗ ಕಡಲ ತೀರದಲ್ಲಿ ಬಿಕಿನಿ ತೊಟ್ಟು ಸಖತ್ ಹಾಟ್ ಆ್ಯಂಡ್ ಬೋಲ್ಡ್ ಲುಕ್‍ನಲ್ಲಿ ಮಿಂಚಿದ್ದಾರೆ.

    Janhvi Kapoor

    ಈ ಫೋಟೋಗಳನ್ನು ಜಾನ್ವಿ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದು, ಫೋಟೋ ಜೊತೆಗೆ ಲುಂಗಿ ಡ್ಯಾನ್ಸ್ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಈ ಪೋಸ್ಟ್‍ಗೆ ಸಹೋದರಿ ಖುಷಿ “ವಾವ್” ಎಂದು ಕಾಮೆಂಟ್ ಮಾಡಿದರೆ, ನಟಿ ಕಿಯಾರಾ ಅಡ್ವಾಣಿ “ಉಫ್” ಎಂದು ಕಾಮೆಂಟ್ ಮಾಡಿದ್ದಾರೆ. ಜೊತೆಗೆ ಜಾನ್ವಿಯ ಚಿಕ್ಕಮ್ಮ ಮಹೀಪ್ ಕಪೂರ್ ಫೈರ್ ಎಮೋಜಿಗಳನ್ನು ಕಳುಹಿಸಿದ್ದಾರೆ. ಇದನ್ನೂ ಓದಿ:  ಡೆಸರ್ಟ್ ಸಫಾರಿಯನ್ನು ಎಂಜಾಯ್ ಮಾಡ್ತಿರೋ ಜಾನ್ವಿ, ಖುಷಿ ಕಪೂರ್

    ಕಡಲ ತೀರದ ಕತ್ತಲಿನಲ್ಲಿ ಜಾನ್ವಿ, ಖುಷಿ ಜೊತೆಗೆ ಬಿಕಿನಿಯಲ್ಲಿ ಫೋಟೋಗೆ ಪೋಸ್ ನೀಡಿರುವುದನ್ನು ಹಾಗೂ ಸಮುದ್ರದ ನೀರಿನಲ್ಲಿ ಆಟ ಆಡಿರುವುದನ್ನು, ವಾಟರ್ ಬೈಕ್ ರೈಡ್ ಮಾಡಿರುವುದನ್ನು ಕಾಣಬಹುದಾಗಿದೆ.

    Janhvi Kapoor

    ಜಾನ್ವಿ ಕಪೂರ್ ಮತ್ತು ಖುಷಿ ಕಪೂರ್ ದಿವಂಗತ ನಟಿ ಶ್ರೀದೇವಿ ಮತ್ತು ನಿರ್ಮಾಪಕ ಬೋನಿ ಕಪೂರ್ ಅವರ ಪುತ್ರಿಯರು. ಜಾನ್ವಿ ಕಪೂರ್ ‘ಧಡಕ್’ ಚಿತ್ರದ ಮೂಲಕ ಬಾಲಿವುಡ್‍ಗೆ ಪಾದಾರ್ಪಣೆ ಮಾಡಿದ್ದರು. ಈ ಸಿನಿಮಾ ಮರಾಠಿ ಹಿಟ್ ಸಿನಿಮಾ ‘ಸೈರಾಟ್’ ಆಗಿದ್ದು, ಹಿಂದಿ ರಿಮೇಕ್‍ನಲ್ಲಿ ಇವರು ನಟಿಸಿದ್ದರು. ಜಾನ್ವಿ ಓಟಿಟಿಯಲ್ಲಿ ‘ಆಂಥಾಲಜಿ ಘೋಸ್ಟ್ ಸ್ಟೋರೀಸ್’ ಸಿನಿಮಾದಲ್ಲಿಯೂ ನಟಿಸಿದ್ದಾರೆ. ಈ ಸಿನಿಮಾಗೆ ಜೋಯಾ ಅಖ್ತರ್ ನಿರ್ದೇಶನ ಮಾಡಿದ್ದರು. ಇದನ್ನೂ ಓದಿ: ಚಿಕ್ಕವಯಸ್ಸಿನ ಹುಡುಗನ ಜೊತೆ ಡೇಟಿಂಗ್ ಮಾಡುವ ಬಗ್ಗೆ ರಶ್ಮಿಕಾ ಉತ್ತರ ಏನು ಗೊತ್ತಾ?

     

    View this post on Instagram

     

    A post shared by Janhvi Kapoor (@janhvikapoor)

    ಜಾನ್ವಿ ಕಪೂರ್ ಬೆಳ್ಳಿಪರದೆ ಮೇಲೆ ಕೊನೆಯದಾಗಿ ‘ರೂಹಿ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದು, ಈ ಚಿತ್ರದಲ್ಲಿ ರಾಜ್‍ಕುಮಾರ್ ರಾವ್ ಮತ್ತು ವರುಣ್ ಶರ್ಮಾ ನಟಿಸಿದ್ದರು. ಪ್ರಸ್ತುತ ಈ ನಟಿ ಕರಣ್ ಜೋಹರ್ ನಿರ್ದೇಶನದ ತಖ್ತ್, ಗುಡ್ ಲಕ್ ಜೆರ್ರಿ ಮತ್ತು ದೋಸ್ತಾನಾ 2 ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.

  • ಡೆಸರ್ಟ್ ಸಫಾರಿಯನ್ನು ಎಂಜಾಯ್ ಮಾಡ್ತಿರೋ ಜಾನ್ವಿ, ಖುಷಿ ಕಪೂರ್

    ಡೆಸರ್ಟ್ ಸಫಾರಿಯನ್ನು ಎಂಜಾಯ್ ಮಾಡ್ತಿರೋ ಜಾನ್ವಿ, ಖುಷಿ ಕಪೂರ್

    ಮುಂಬೈ: ಬಾಲಿವುಡ್ ನಟಿ ಜಾನ್ವಿ ಕಪೂರ್ ಮತ್ತು ಅವರ ಸಹೋದರಿ ಖುಷಿ ಕಪೂರ್ ದುಬೈನಲ್ಲಿ ಡೆಸರ್ಟ್ ಸಫಾರಿಯನ್ನು ಎಂಜಾಯ್ ಮಾಡುತ್ತಿದ್ದಾರೆ.

    ದುಬೈನಲ್ಲಿ ಜಾನ್ವಿ ಮತ್ತು ಖುಷಿ ಕಪೂರ್ ಡೆಸರ್ಟ್ ಸಫಾರಿಗೆ ಹೋಗಿದ್ದು, ಕ್ವಾಡ್ ಬೈಕ್‍ನಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ಈ ಕುರಿತು ಜಾನ್ವಿ ತಮ್ಮ ಇನ್‍ಸ್ಟಾಗ್ರಾಮ್ ನಲ್ಲಿ, ‘ವೆಸ್ಸೆರ್ಟ್ ಇನ್ ದಿ ಡೆಸರ್ಟ್'(ಮರುಭೂಮಿಯಲ್ಲಿ ಸಿಹಿ ಕ್ಷಣ) ಎಂದು ಬರೆದು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

     

    View this post on Instagram

     

    A post shared by Janhvi Kapoor (@janhvikapoor)

    ಜಾನ್ವಿ ಮತ್ತು ಖುಷಿ ಕಪೂರ್ ಕಂದು ಬಣ್ಣದ ಕ್ರಾಪ್ ಟಾಪ್ ಮತ್ತು ಶಾರ್ಟ್ಸ್ ನಲ್ಲಿ ಹಾಕಿಕೊಂಡಿದ್ದು, ಅವಳಿಗಳಂತೆ ಕಾಣುತ್ತಿದ್ದಾರೆ. ಖುಷಿ ಕಪೂರ್ ಕೂಡ ತಮ್ಮ ಫೋಟೋವನ್ನು ಇನ್‌ಸ್ಟಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಖುಷಿ ಕಪೂರ್ ಫೋಟೋ ನೋಡಿ, ಅಂಶುಲಾ ಕಪೂರ್ ಫೈರ್ ಎಮೋಜಿಯನ್ನು ಹಾಕಿದ್ದು, ಆಲಿಯಾ ‘ಧೂಮ್ ಮಚಾಲೆ’ ಎಂದು ಕಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: ಅಪ್ಪು ನಟನೆಯ ಚಿತ್ರದ ಶೀರ್ಷಿಕೆಗಳಲ್ಲೇ ಗೀತೆ ರಚನೆ ಮಾಡಿದ ತಂದೆ, ಜೀವ ತುಂಬಿದ ಮಗಳು

    ಜಾನ್ವಿ ಕಪೂರ್ ಮತ್ತು ಖುಷಿ ಕಪೂರ್ ಸಿನಿಮಾ ನಿರ್ಮಾಪಕ ಬೋನಿ ಕಪೂರ್ ಮತ್ತು ದಿ.ನಟಿ ಶ್ರೀದೇವಿ ಅವರ ಪುತ್ರಿಯರು. ಜಾನ್ವಿ ಕಪೂರ್ ‘ಧಡಕ್’ ಚಿತ್ರದ ಮೂಲಕ ಬಾಲಿವುಡ್‍ಗೆ ಪಾದಾರ್ಪಣೆ ಮಾಡಿದ್ದರು. ಈ ಸಿನಿಮಾ ಮರಾಠಿ ಹಿಟ್ ಸಿನಿಮಾ ‘ಸೈರಾಟ್’ ಆಗಿದ್ದು, ಹಿಂದಿ ರಿಮೇಕ್ ನಲ್ಲಿ ಇವರು ನಟಿಸಿದ್ದರು. ಜಾನ್ವಿ ಓಟಿಟಿಯಲ್ಲಿ ‘ಆಂಥಾಲಜಿ ಘೋಸ್ಟ್ ಸ್ಟೋರೀಸ್’ ಸಿನಿಮಾದಲ್ಲಿಯೂ ನಟಿಸಿದ್ದಾರೆ. ಈ ಸಿನಿಮಾಗೆ ಜೋಯಾ ಅಖ್ತರ್ ನಿರ್ದೇಶನ ಮಾಡಿದ್ದರು.

    ಜಾನ್ವಿ ಕಪೂರ್ ಬೆಳ್ಳಿಪರದೆ ಮೇಲೆ ಕೊನೆಯದಾಗಿ ‘ರೂಹಿ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದು, ಈ ಚಿತ್ರದಲ್ಲಿ ರಾಜ್‍ಕುಮಾರ್ ರಾವ್ ಮತ್ತು ವರುಣ್ ಶರ್ಮಾ ನಟಿಸಿದ್ದರು. ಪ್ರಸ್ತುತ ಈ ನಟಿ ಕರಣ್ ಜೋಹರ್ ನಿರ್ದೇಶನದ ತಖ್ತ್, ಗುಡ್ ಲಕ್ ಜೆರ್ರಿ ಮತ್ತು ದೋಸ್ತಾನಾ 2 ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಇದನ್ನೂ ಓದಿ: ವೀರವನಿತೆ ಓಬವ್ವನನ್ನು ನೆನೆದ ಮೋದಿ – ಕನ್ನಡದಲ್ಲಿ ಟ್ವೀಟ್

    ಖುಷಿ ಕಪೂರ್ ಶೀಘ್ರದಲ್ಲೇ ಬಾಲಿವುಡ್‍ಗೆ ಪಾದಾರ್ಪಣೆ ಮಾಡಲಿದ್ದು, ಜೋಯಾ ಅಖ್ತರ್ ನಿರ್ದೇಶನದ ‘ದಿ ಆರ್ಚೀಸ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.