Tag: ಖುಲಾಸೆ

  • ಶಾಸಕ ಮುನಿರತ್ನಗೆ ಬಿಗ್ ರಿಲೀಫ್

    ಶಾಸಕ ಮುನಿರತ್ನಗೆ ಬಿಗ್ ರಿಲೀಫ್

    ಬೆಂಗಳೂರು: ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯ ಹಿನ್ನೆಲೆಯಲ್ಲಿ ಚುನಾವಣಾ ಅಕ್ರಮವೆಸಗಿದ್ದ ಪ್ರಕರಣದಿಂದ ಮುನಿರತ್ನ ಖುಲಾಸೆಗೊಂಡಿದ್ದಾರೆ.

    ಈ ಪ್ರಕರಣದ ವಿಚಾರಣೆ ನಡೆಸಿದ್ದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಕೇಸ್ ಖುಲಾಸೆಗೊಳಿಸಿ ಆದೇಶ ಪ್ರಕಟಿಸಿದೆ.

    2013ರಲ್ಲಿ ಚುನಾವಣಾ ಅಕ್ರಮ ಎಸಗಿ ಅಧಿಕಾರಿ ರವಿಕುಮಾರ್ ಅವರಿಗೆ ಜೀವ ಬೆದರಿಕೆ ಹಾಕಿದ್ದಾರೆ ಎನ್ನುವ ಆರೋಪ ಮುನಿರತ್ನ ಅವರ ಮೇಲೆ ಕೇಳಿ ಬಂದಿತ್ತು. ಆರೋಪ ಸಾಬೀತು ಪಡಿಸಲು ಸಾಕ್ಷ್ಯಾಧಾರಗಳು ಸಿಗದ ಹಿನ್ನೆಲೆಯಲ್ಲಿ ಪ್ರಕರಣದಿಂದ ಮುನಿರತ್ನ ಅವರು ಖುಲಾಸೆಗೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಪಾಕ್ ಧ್ವಜ ಹಾರಾಟ ಕೇಸ್- ಗೌರಿ ಹತ್ಯೆಯ ಆರೋಪಿ ವಾಗ್ಮೋರೆ ಖುಲಾಸೆ

    ಪಾಕ್ ಧ್ವಜ ಹಾರಾಟ ಕೇಸ್- ಗೌರಿ ಹತ್ಯೆಯ ಆರೋಪಿ ವಾಗ್ಮೋರೆ ಖುಲಾಸೆ

    ವಿಜಯಪುರ: ಜಿಲ್ಲೆಯ ಸಿಂಧಗಿ ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಪಾಕ್ ಧ್ವಜ ಹಾರಿಸಿದ ಪ್ರಕರಣದಲ್ಲಿ ಪರಶುರಾಮ ವಾಗ್ಮೋರೆ ಸೇರಿದಂತೆ ಆರು ಆರೋಪಿಗಳು ಖುಲಾಸೆಗೊಂಡಿದ್ದಾರೆ.

    2012ರ ಜನವರಿ 1 ರಂದು ಸಿಂಧಗಿ ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಪಾಕಿಸ್ತಾನ ಧ್ವಜ ಹಾರಿಸಲಾಗಿತ್ತು. ಈ ಪ್ರಕರಣದಲ್ಲಿ ಗೌರಿ ಲಂಕೇಶ್ ಹತ್ಯೆಯ ಪ್ರಮುಖ ಆರೋಪಿ ಪರಶುರಾಮ ಆರೋಪಿ ಸೇರಿ ಒಟ್ಟು 7 ಜನರನ್ನು ಆರೋಪಿಗಳನ್ನಾಗಿ ಮಾಡಲಾಗಿತ್ತು. ಬರೋಬ್ಬರಿ 6 ವರ್ಷಗಳ ಸುದೀರ್ಘ ವಿಚಾರಣೆ ನಂತರ ಇಂದು ಪರಶುರಾಮ ವಾಗ್ಮೋರೆ ಸೇರಿದಂತೆ 6 ಆರೋಪಿಗಳಿಗೆ ವಿಜಯಪುರದ 1ನೇ ಹೆಚ್ಚುವರಿ ನ್ಯಾಯಾಲಯ ಆರೋಪ ಮುಕ್ತಗೊಳಿಸಿದೆ.

    ತಾಂತ್ರಿಕ ದೋಷದಿಂದ ಆರೋಪ ಸಾಬೀತು ಮಾಡಲು ಸಾಧ್ಯವಾಗದೆ ಕೇಸ್ ಖುಲಾಸೆ ಆಗಿದೆ. ಅಲ್ಲದೇ ಪ್ರಕರಣದ ಮತ್ತೋರ್ವ ಆರೋಪಿ ಅಪ್ರಾಪ್ತ ಆಗಿದ್ದಾನೆ ಎಂದು ವಕೀಲರಾದ ಲಗಳಿ ಮಾಧ್ಯಮಗಳಿಗೆ ಸ್ಪಷ್ಟ ಪಡಿಸಿದರು.

    ಗೌರಿ ಹತ್ಯೆ ಪ್ರಕರಣದ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ ವಾಗ್ಮೋರೆ ಮೌನ ವಹಿಸಿದ್ದ, ಅಲ್ಲದೇ ಮಾಧ್ಯಮಗಳ ಕ್ಯಾಮೆರಾ ಕಂಡು ಮುಖ ಮುಚ್ಚಿಕೊಳ್ಳಲು ಯತ್ನಿಸಿದ್ದ. ವಿಷಯ ಎಲ್ಲರಿಗೂ ಗೊತ್ತಿರೋದೆ ಎಂದಾಗ ಕ್ಯಾಮೆರಾಗಳಿಗೆ ಮುಖ ದರ್ಶನ ಮಾಡಿದ್ದಾನೆ. ಅಲ್ಲದೇ ಸಾಕು ಹೋಗ್ರಿ ಎಂದು ಕ್ಯಾಮೆರಾ ಮೇನ್ ಗಳಿಗೆ ವಾಗ್ಮೋರೆ ಆವಾಜ್ ಹಾಕಿದ್ದಾನೆ.

    ತಾಯಿ ಜಾನಕಿಬಾಯಿಯವರು ಚಿತ್ರಿಕರಣಕ್ಕೆ ಅಡ್ಡಿ ಪಡೆಸಿದ್ದಲ್ಲದೇ, ಕಲ್ಲು ತೆಗೆದುಕೊಂಡು ಕ್ಯಾಮೆರಾಗೆ ಹೊಡೆಯೋಕೆ ಮುಂದಾಗಿದ್ದರು. ವಿನಾಕಾರಣ ಮಗನ ವಿಡಿಯೋ ಮಾಡಬೇಡಿ, ಅವನಿಗೆ ಟೆನ್ಷನ್ ಕೊಡಬೇಡಿ ಎಂದು ಮನವಿ ಮಾಡಿಕೊಂಡರು.