Tag: ಖೀರ್

  • ಸಿಹಿಯಾದ ಕ್ಯಾರೆಟ್ ಖೀರ್ ಮಾಡುವ ಸಿಂಪಲ್ ವಿಧಾನ

    ಸಿಹಿಯಾದ ಕ್ಯಾರೆಟ್ ಖೀರ್ ಮಾಡುವ ಸಿಂಪಲ್ ವಿಧಾನ

    ಕ್ಯಾರೆಟ್ ಬಳಸಿ ಮಾಡಲಾಗುವ ಎಲ್ಲಾ ರೀತಿಯ ಸಿಹಿಯೂ ಅದ್ಭುತವಾದ ರುಚಿ ನೀಡುತ್ತದೆ. ಕ್ಯಾರೆಟ್ ಜ್ಯೂಸ್, ಕ್ಯಾರೆಟ್ ಹಲ್ವಾ ಹೆಚ್ಚಾಗಿ ನೀವು ಮನೆಯಲ್ಲಿ ಟ್ರೈ ಮಾಡಿ ನೋಡಿರುತ್ತೀರಿ. ಎಂದಾದರೂ ಕ್ಯಾರೆಟ್ ಖೀರ್ (Carrot Kheer) ಮಾಡಿ ನೋಡಿದ್ದೀರಾ? ಇಲ್ಲ ಎಂದರೆ ರುಚಿಕರ ಹಾಗೂ ಸಿಂಪಲ್ ಆದ ಈ ರೆಸಿಪಿಯನ್ನೂ ಒಮ್ಮೆ ಮಾಡಿ ನೋಡಿ.

    ಬೇಕಾಗುವ ಪದಾರ್ಥಗಳು:
    ತುಪ್ಪ – 1 ಟೀಸ್ಪೂನ್
    ಗೋಡಂಬಿ – 10
    ಒಣ ದ್ರಾಕ್ಷಿ – 2 ಟೀಸ್ಪೂನ್
    ತುರಿದ ಕ್ಯಾರೆಟ್ – ಒಂದೂವರೆ ಕಪ್
    ಹಾಲು – 4 ಕಪ್
    ಕೇಸರಿ – ಕಾಲು ಟೀಸ್ಪೂನ್
    ಸಕ್ಕರೆ – ಕಾಲು ಕಪ್
    ಏಲಕ್ಕಿ ಪುಡಿ – ಕಾಲು ಟೀಸ್ಪೂನ್
    ಪಿಸ್ತಾ – 2 ಟೀಸ್ಪೂನ್
    ಖೋವಾ ತಯಾರಿಸಲು:
    ಬೆಣ್ಣೆ – 1 ಟೀಸ್ಪೂನ್
    ಹಾಲು – ಕಾಲು ಕಪ್
    ಹಾಲಿನ ಪುಡಿ – ಅರ್ಧ ಕಪ್ ಇದನ್ನೂ ಓದಿ: ರುಚಿಯಾದ ಡ್ರೈ ಫ್ರೂಟ್ಸ್ ಮಿಲ್ಕ್ ಶೇಕ್ ನೀವೊಮ್ಮೆ ಮಾಡಿ ಸವಿಯಿರಿ

    ಮಾಡುವ ವಿಧಾನ:
    * ಮೊದಲಿಗೆ ದೊಡ್ಡ ಕಡಾಯಿಯಲ್ಲಿ ತುಪ್ಪ ಬಿಸಿ ಮಾಡಿ ಗೋಡಂಬಿ ಮತ್ತು ಒಣದ್ರಾಕ್ಷಿಯನ್ನು ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಹುರಿದು ಪಕ್ಕಕ್ಕಿಡಿ.
    * ಅದೇ ಕಡಾಯಿಗೆ ತುರಿದ ಕ್ಯಾರೆಟ್ ಹಾಕಿ ಚೆನ್ನಾಗಿ ಹುರಿಯಿರಿ. ಕ್ಯಾರೆಟ್ ಬಣ್ಣ ಬದಲಾಗುವವರೆಗೆ ಹಾಗೂ ಪರಿಮಳ ಬರುವವರೆಗೆ ಫ್ರೈ ಮಾಡಿ.
    * ಈಗ ಹಾಲು, ಕೇಸರಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಮಧ್ಯಮ ಉರಿಯಲ್ಲಿ ಹಾಲನ್ನು 10 ನಿಮಿಷ ಕುದಿಸಿ.
    * ಈ ನಡುವೆ ನೀವು ಖೋವಾ ತಯಾರಿಸಿ. ಇದಕ್ಕಾಗಿ ಒಂದು ಸಣ್ಣ ಪ್ಯಾನ್‌ನಲ್ಲಿ ಬೆಣ್ಣೆ ಬಿಸಿ ಮಾಡಿ, ಅದಕ್ಕೆ ಕಾಲು ಕಪ್ ಹಾಲು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

    * ಬೆಣ್ಣೆ ಹಾಗೂ ಹಾಲು ಚೆನ್ನಾಗಿ ಮಿಶ್ರಣವಾದ ಬಳಿ ಹಾಲಿನ ಪುಡಿ ಸೇರಿಸಿ ಮಿಶ್ರಣ ಮಾಡಿ. ಮಿಶ್ರಣ ದಪ್ಪವಾಗಿ ಉಂಡೆಯಂತಾದ ಬಳಿಕ ಅದನ್ನು ತಣ್ಣಗಾಗಿಸಲು ಬದಿಗಿಡಿ. ಇದೀಗ ಖೋವಾ ತಯಾರಾಗಿದೆ.
    * ಈಗ ಖೋವಾವವನ್ನು ಪುಡಿ ಮಾಡಿ, ಹಾಲಿಗೆ (ಖೀರ್) ಸೇರಿಸಿ ಮಿಶ್ರಣ ಮಾಡಿ.
    * ಬಳಿಕ ಸಕ್ಕರೆ ಸೇರಿಸಿ ನಿಧಾನಕ್ಕೆ ಮಿಶ್ರಣ ಮಾಡಿ.
    * ಇದನ್ನು 10 ನಿಮಿಷ ಕುದಿಸಿ, ಬಳಿಕ ಏಲಕ್ಕಿ ಪುಡಿ, ಹುರಿದಿಟ್ಟಿದ್ದ ಗೋಡಂಬಿ ಹಾಗೂ ಒಣ ದ್ರಾಕ್ಷಿ ಸೇರಿಸಿ.
    * ಖೀರ್ ಅನ್ನು ತಣ್ಣಗಾಗಲು ಬಿಡಿ. ಬಳಿಕ ಪಿಸ್ತಾ ಸೇರಿಸಿ ರುಚಿಯಾದ ಕ್ಯಾರೆಟ್ ಖೀರ್ ಅನ್ನು ಸವಿಯಿರಿ. ಇದನ್ನೂ ಓದಿ: ಮನೆಯಲ್ಲಿ ಸ್ಟ್ರಾಬೆರಿ ಜಾಮ್ ಮಾಡುವುದು ಹೇಗೆ?

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಯಮ್ಮಿ ಯಮ್ಮಿ ಚಿಕ್ಕು ಖೀರ್ ಮಾಡಿ ಸವಿಯಿರಿ

    ಯಮ್ಮಿ ಯಮ್ಮಿ ಚಿಕ್ಕು ಖೀರ್ ಮಾಡಿ ಸವಿಯಿರಿ

    ಚಿಕ್ಕು ಅಥವಾ ಸಪೋಟಾ ಹಣ್ಣಿನ ಹೆಸರು ಕೇಳಿದಾಗಲೇ ಬಾಯಲ್ಲಿ ನೀರೂರುತ್ತದೆ ಅಲ್ವಾ? ನಾವಿಂದು ಚಿಕ್ಕು ಬಳಸಿ ಸಿಹಿಯಾದ ಖೀರ್ ಮಾಡುವುದು ಹೇಗೆ ಎಂದು ಹೇಳಿಕೊಡುತ್ತೇವೆ. ಚಿಕ್ಕುವಿನ ಸ್ವಾದ ಒಂದು ಬಾರಿ ಖೀರ್ ರೂಪದಲ್ಲೂ ಸವಿದು ನೋಡಿ. ಚಿಕ್ಕು ಖೀರ್ (Chikoo Kheer)ಮಾಡುವ ವಿಧಾನ ಹೀಗಿದೆ.

    ಬೇಕಾಗುವ ಪದಾರ್ಥಗಳು:
    ಚಿಕ್ಕು ಹಣ್ಣುಗಳು – 4
    ಹಾಲು – ಒಂದೂವರೆ ಲೀಟರ್
    ಅಕ್ಕಿ – 3 ಟೀಸ್ಪೂನ್
    ಸಕ್ಕರೆ – 2 ಟೀಸ್ಪೂನ್
    ಕತ್ತರಿಸಿದ ಒಣ ಹಣ್ಣುಗಳು – 4 ಟೀಸ್ಪೂನ್ (ಗೋಡಂಬಿ, ಪಿಸ್ತಾ, ಬಾದಾಮಿ ಯಾವುದಾದರೂ ಬಳಸಬಹುದು) ಇದನ್ನೂ ಓದಿ: ಸಿಂಪಲ್ ಆಗಿ ಮಾಡಿ ಬ್ರೆಡ್ ಹಲ್ವಾ

    ಮಾಡುವ ವಿಧಾನ:
    * ಮೊದಲಿಗೆ ಅಕ್ಕಿಯನ್ನು ತೊಳೆದು, ಅರ್ಧ ಕಪ್ ನೀರಿನಲ್ಲಿ ಹಾಕಿ ನೆನೆಸಿಡಿ.
    * ಚಿಕ್ಕು ಹಣ್ಣುಗಳನ್ನು ಸಿಪ್ಪೆಯಿಂದ ಬೇರ್ಪಡಿಸಿ, ಅರ್ಧಕ್ಕೆ ಕತ್ತರಿಸಿ, ಬೀಜಗಳನ್ನು ತೆಗೆದು ಹೋಳುಗಳನ್ನು ಮಿಕ್ಸರ್ ಜಾರ್‌ಗೆ ಹಾಕಿ ನುಣ್ಣಗೆ ಪೇಸ್ಟ್ ಆಗಿ ರುಬ್ಬಿಕೊಳ್ಳಿ.
    * ಈಗ ತಳವಿರುವ ಪ್ಯಾನ್‌ನಲ್ಲಿ ಹಾಲನ್ನು ಬಿಸಿ ಮಾಡಿ, ತಳ ಸುಡದಂತೆ ಆಗಾಗ ಚಮಚದಿಂದ ಕೈಯಾಡಿಸಿ.
    * ಹಾಲು ಕುದಿ ಬಂದ ಬಳಿಕ ಉರಿಯನ್ನು ಕಡಿಮೆ ಮಾಡಿ.
    * ಈಗ ನೆನೆಸಿಟ್ಟ ಅಕ್ಕಿಯನ್ನು ನೀರಿನಿಂದ ಬೇರ್ಪಡಿಸಿ, ಕುದಿಯುತ್ತಿರುವ ಹಾಲಿಗೆ ಹಾಕಿ.
    * ಅಕ್ಕಿ ಚೆನ್ನಾಗಿ ಬೇಯುವವರೆಗೆ ಸುಮಾರು 35-40 ನಿಮಿಷಗಳ ವರೆಗೆ ಕುದಿಸಿಕೊಳ್ಳಿ. (ಆಗಾಗ ಚಮಚದಿಂದ ಕೈಯಾಡಿಸುವುದನ್ನು ಮರೆಯಬೇಡಿ)
    * ಈಗ ಸಕ್ಕರೆ ಸೇರಿಸಿ, 5 ನಿಮಿಷ ಬೇಯಿಸಿ.
    * ಉರಿಯನ್ನು ಆಫ್ ಮಾಡಿ, ಖೀರ್ ಅನ್ನು ತಣ್ಣಗಾಗಲು ಬಿಡಿ.
    * ಖೀರ್ ಸಂಪೂರ್ಣ ತಣ್ಣಗಾದ ಬಳಿಕ ಚಿಕ್ಕು ಪ್ಯೂರಿಯನ್ನು ಸೇರಿಸಿ ಮಿಶ್ರಣ ಮಾಡಿ.
    * ಖೀರ್ ಅನ್ನು ಬೇಕೆಂದರೆ ನೀವು ಫ್ರಿಡ್ಜ್‌ನಲ್ಲಿ 3-4 ಗಂಟೆಗಳ ವರೆಗೆ ಇಡಬಹುದು.
    * ಖೀರ್ ಅನ್ನು ಬೌಲ್‌ಗಳಿಗೆ ಸುರಿದು, ಒಣ ಹಣ್ಣುಗಳಿಂದ ಅಲಂಕರಿಸಿ ಸವಿಯಿರಿ. ಇದನ್ನೂ ಓದಿ: ಬೆಳಗ್ಗಿನ ತಿಂಡಿಗೆ ಮಾಡಿ ರುಚಿಕರವಾದ ಬೆಲ್ಲದ ಪರೋಟ

    Live Tv
    [brid partner=56869869 player=32851 video=960834 autoplay=true]

  • ಈದ್ ಮಿಲಾದ್ ದಿನ ನಿಮ್ಮ ಮನೆಯಲ್ಲಿರಲಿ ಸ್ಪೆಷಲ್ ಕ್ರೀಂ ಖೀರ್

    ಈದ್ ಮಿಲಾದ್ ದಿನ ನಿಮ್ಮ ಮನೆಯಲ್ಲಿರಲಿ ಸ್ಪೆಷಲ್ ಕ್ರೀಂ ಖೀರ್

    ಭಾನುವಾರ ಈದ್ ಮಿಲಾದ್ ಹಬ್ಬ. ಹಾಗಾಗಿ ಸಿಹಿ ತಿನಿಸು ತಯಾರಿಸಲು ಸಿದ್ಧತೆ ನಡೆಸಿಕೊಂಡಿರುತ್ತಾರೆ. ಹಬ್ಬದ ದಿನ ವಿಶೇಷವಾದ ಸಿಹಿ ಅಡುಗೆ ಇರಬೇಕು ಎಂಬುದು ಎಲ್ಲರ ಇಷ್ಟ. ಹಾಗಾಗಿ ಸ್ಪೆಷಲ್ ಮತ್ತು ಸರಳವಾಗಿ ಮಾಡುವ ಈದ್ ಖೀರ್ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಾಗ್ರಿಗಳು
    * ಹಾಲು- 1.5 ಲೀಟರ್
    * ಸಕ್ಕರೆ – 2 ಬಟ್ಟಲು
    * ಶಾವಿಗೆ – 1 ಬಟ್ಟಲು
    * ದ್ರಾಕ್ಷಿ, ಗೋಡಂಬಿ, ಪಿಸ್ತಾ, ಖರ್ಜೂರ, ಬದಾಮಿ – 1 ಬಟ್ಟಲು
    * ಫ್ರೆಶ್ ಕ್ರೀಂ
    * ಪ್ಲೇನ್ ಕೋವಾ – 2 ಸ್ಪೂನ್
    * ತುಪ್ಪ – 5-6 ಸ್ಪೂನ್
    * ಏಲಕ್ಕಿ ಪುಡಿ – ಅರ್ಧ ಸ್ಪೂನ್
    * ಕೇಸರಿ – ಚಿಟಿಕೆ

    ಮಾಡುವ ವಿಧಾನ
    * ಮೊದಲಿಗೆ ಒಂದು ದೊಡ್ಡದಾದ ಪ್ಯಾನ್‍ಗೆ ಹಾಲು ಹಾಕಿ ಚೆನ್ನಾಗಿ ಕುದಿಸಿ. 15 ರಿಂದ 20 ನಿಮಿಷ ಹಾಲು ಕುದಿದ ನಂತರ ಹಾಲು ಗಟ್ಟಿ ಆಗುತ್ತಾ ಬರುತ್ತದೆ. ಆಗ ಹಾಲಿಗೆ ಕೇಸರಿ ದಳಗಳನ್ನು ಸೇರಿಸಿ.
    * ಹಾಲು ಕುದಿಯುವಷ್ಟರಲ್ಲಿ ಒಂದು ಪ್ಯಾನ್‍ಗೆ ತುಪ್ಪ ಹಾಕಿ, ಸಣ್ಣಗೆ ಹೆಚ್ಚಿದ ಡ್ರೈ ಫ್ರೂಟ್ಸ್, ದ್ರಾಕ್ಷಿ, ಗೋಡಂಬಿ, ಪಿಸ್ತಾ, ಖರ್ಜೂರ, ಬದಾಮಿಯನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. (ಒಂದೊಂದೇ ಹಾಕಿ ಫ್ರೈ ಮಾಡಬಹುದು ಅಥವಾ ಒಟ್ಟಿಗೆ ಹಾಕಿನೂ ಫ್ರೈ ಮಾಡಬಹುದು)
    * ಅದೇ ಪ್ಯಾನ್‍ಗೆ ಸ್ವಲ್ಪ ತುಪ್ಪ ಹಾಕಿ ಬಿಸಿಯಾದ ಮೇಲೆ ಶಾವಿಗೆ ಹಾಕಿ ಗೋಲ್ಡನ್ ಬ್ರೌನ್ ಬರೋತನಕ ಫ್ರೈ ಮಾಡಿ.
    * ಈಗ ಕುದಿಯುತ್ತಿರುವ ಹಾಲಿಗೆ ಸಕ್ಕರೆ ಸೇರಿಸಿ ಕೈಯಾಡಿಸಿ. 2 ನಿಮಿಷ ಆದ್ಮೇಲೆ ಕೋವಾ ಸೇರಿಸಿ ಕುದಿಸಿ.
    * ಬಳಿಕ ಶಾವಿಗೆ ಸೇರಿಸಿ ಕುದಿಸಿ.
    * ಈಗ ಏಲಕ್ಕಿ ಪುಡಿ, ಫ್ರೈ ಮಾಡಿದ ಡ್ರೈಫ್ರೂಟ್ಸ್ ಸೇರಿಸಿ.
    * ಕೆಳಗೆ ಇಳಿಸುವಾಗ ಫ್ರೆಶ್ ಕ್ರೀಂ ಸೇರಿಸಿ. ಸ್ಟೌ ಆರಿಸಿ ಲಿಡ್ ಮುಚ್ಚಿಡಿ.
    * ಈ ಕೀರ್ ತುಂಬಾ ಗಟ್ಟಿಗೂ ಇರಬಾರದು, ತುಂಬಾ ತೆಳ್ಳಗೂ ಇರಬಾರದು. ಸರ್ವ್ ಮಾಡುವಾಗ ಮೇಲೆ ಡ್ರೈ ಫ್ರೂಟ್ಸ್ ಚೂರುಗಳನ್ನು ಉದುರಿಸಿ ಕೊಡಿ.

    ಇದನ್ನೂ ಓದಿ: ಈದ್ ಮಿಲಾದ್ ಆಚರಣೆಯ ವಿಶೇಷತೆ ಇಲ್ಲಿದೆ