Tag: ಖಿನ್ನತೆ

  • ಪತ್ನಿ, ಇಬ್ಬರು ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ವೈದ್ಯ

    ಪತ್ನಿ, ಇಬ್ಬರು ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ವೈದ್ಯ

    ಲಕ್ನೋ: ವೈದ್ಯನೊಬ್ಬ (Doctor) ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಕೊಂದು ತಾನು ಕೂಡಾ ಆತ್ಮಹತ್ಯೆಗೆ (Suicide) ಶರಣಾಗಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ (Uttar Pradesh) ರಾಯ್‌ಬರೇಲಿಯಲ್ಲಿ (Rae Bareli) ನಡೆದಿದೆ.

    ಮಂಗಳವಾರ ತಡರಾತ್ರಿ ಈ ಘಟನೆ ವರದಿಯಾಗಿದೆ. ಆತ್ಮಹತ್ಯೆ ಮಾಡಿಕೊಂಡ ವೈದ್ಯನನ್ನು ಅರುಣ್ ಕುಮಾರ್ ಸಿಂಗ್ (45) ಎಂದು ಗುರುತಿಸಲಾಗಿದೆ. ಮಾಡರ್ನ್ ರೈಲ್ ಕೋಚ್ ಫ್ಯಾಕ್ಟರಿ ಆಸ್ಪತ್ರೆಯ ನೇತ್ರ ತಜ್ಞನಾಗಿದ್ದ ಸಿಂಗ್‌ಗೆ ತನ್ನ ಕುಟುಂಬದವರು ಹಾಗೂ ಸಹೋದ್ಯೋಗಿಗಳು ಕರೆ ಮಾಡಿದ್ದರು. ಕರೆಯನ್ನು ಸ್ವೀಕರಿಸದೇ ಹೋದಾಗ ಆಸ್ಪತ್ರೆಯ ಸಂಕೀರ್ಣದ ಒಳಗೆಯೇ ಇರುವ ಮನೆಯನ್ನು ಪರಿಶೀಲಿಸಿದ್ದಾರೆ. ಈ ವೇಳೆ ಘಟನೆ ಬೆಳಕಿಗೆ ಬಂದಿದೆ.

    ಮನೆಯ ಬಾಗಿಲನ್ನು ತೆರೆದಾಗ ಅರುಣ್ ಪತ್ನಿ ಅರ್ಚನಾ (40) ಮಕ್ಕಳಾದ ಅರಿಬಾ (12) ಹಾಗೂ ಆರವ್ (4) ಶವವಾಗಿ ಪತ್ತೆಯಾಗಿದ್ದಾರೆ. ಸಿಂಗ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಸಿಂಗ್ ಮಕ್ಕಳಿಗೆ ಚುಚ್ಚು ಮದ್ದು ನೀಡಿ, ಅವರನ್ನು ಪ್ರಜ್ಞಾಹೀನರನ್ನಾಗಿ ಮಾಡಿ ಬಳಿಕ ಕೊಂದಿದ್ದಾನೆ. ಅವರಿಬ್ಬರ ತಲೆಯಲ್ಲಿ ಬಲವಾಗಿ ಹೊಡೆದಿರುವ ಗಾಯಗಳಾಗಿವೆ. ನಂತರ ಆತ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದು ಮೇಲ್ನೋಟಕ್ಕೆ ತಿಳಿದುಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಚಂಡಮಾರುತಕ್ಕೆ ಬಾಲಿವುಡ್ ನಟ ಆಮೀರ್ ಸಿಲುಕಿದ್ದು ಹೇಗೆ?

    ವೈದ್ಯ ಖಿನ್ನತೆಯಿಂದ ಬಳಲುತ್ತಿದ್ದು, ಈ ಹಿನ್ನೆಲೆ ತನ್ನ ಪತ್ನಿ, ಮಕ್ಕಳನ್ನು ಕೊಂದು ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದ್ದಾಗಿ ಹೇಳಿದ್ದಾರೆ. ಸಿಂಗ್‌ನ ನೆರೆಹೊರೆಯವರ ಪ್ರಕಾರ ಆತನ ಕುಟುಂಬದವರು 2 ದಿನಗಳ ಹಿಂದೆ ಭಾನುವಾರ ಕೊನೆಯದಾಗಿ ಕಾಣಿಸಿಕೊಂಡಿದ್ದರು ಎಂದು ತಿಳಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ಹೇಳಿದ್ದಾರೆ. ಇದನ್ನೂ ಓದಿ: ಬಿಜೆಪಿಯ 10 ಸಂಸದರಿಂದ ಸಂಸತ್ ಸ್ಥಾನಕ್ಕೆ ರಾಜೀನಾಮೆ

  • ‘ಬಿಗ್ ಬಾಸ್’ ಮನೆಯಲ್ಲಿ ಖಿನ್ನತೆಗೆ ಜಾರಿದ್ದಾರಂತೆ ನಟಿ ಸಂಗೀತಾ ಶೃಂಗೇರಿ

    ‘ಬಿಗ್ ಬಾಸ್’ ಮನೆಯಲ್ಲಿ ಖಿನ್ನತೆಗೆ ಜಾರಿದ್ದಾರಂತೆ ನಟಿ ಸಂಗೀತಾ ಶೃಂಗೇರಿ

    ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ಏನಾಗುತ್ತಿದೆ ಎನ್ನುವ ಆತಂಕ ನೋಡುಗರಿಗೆ ಎದುರಾಗಿದೆ. ಇಂದು ಬೆಳಗ್ಗೆ ವಾಹಿನಿಯು ಪ್ರೊಮೊವೊಂದನ್ನು ರಿಲೀಸ್ ಮಾಡಿದ್ದು, ಮನೆಮಂದಿ ಮೇಲೆ ವಿನಯ್ ಜೋರಾಗಿಯೇ ಕೂಗಾಡಿದ್ದಾರೆ. ಅವರು ಧ್ವನಿ ಬಿಗ್ ಬಾಸ್ ಮನೆಯನ್ನೇ ಬೀಳಿಸುವಷ್ಟು ದೊಡ್ಡದಾಗಿತ್ತು. ವಿನಯ್ ಹಾಗೆ ಕೂಗಾಡಲು ಕಾರಣ ನಟಿ ಸಂಗೀತಾ ಶೃಂಗೇರಿ (Sangeetha Sringeri). ಇಡೀ ಮನೆ ಸಂಗೀತಾ ಪರವಾಗಿ ಮಾತನಾಡುತ್ತಿದೆ. ವಿನಯ್ (Vinay) ಕಡೆ ಬೆಟ್ಟು ಮಾಡುತ್ತಿದೆ. ಇದರಿಂದಾಗಿ ವಿನಯ್ ರುದ್ರಾವತಾರ ತಾಳಿದ್ದಾರೆ.

    ಸಂಗೀತಾ ಮತ್ತು ವಿನಯ್ ನಡುವೆ ಇಷ್ಟೊಂದು ವೈಷಮ್ಯ ಬೆಳೆಯುತ್ತೆ ಎಂದು ಯಾರೂ ಊಹಿಸಿರಲಿಲ್ಲ. ಸೀರಿಯಲ್ ನಲ್ಲಿ ಒಟ್ಟಿಗೆ ಕೆಲಸ ಮಾಡಿದವರು. ಗುಡ್ ಫ್ರೆಂಡ್ಸ್.. ನೂರಾರು ದಿನಗಳ ಕಾಲ ಒಟ್ಟಿಗೆ ಕಳೆದಿದ್ದಾರೆ. ಒಬ್ಬರನೊಬ್ಬರು ಅರ್ಥ ಮಾಡಿಕೊಂಡು ನಟಿಸಿದ್ದಾರೆ. ಆದರೆ, ಬಿಗ್ ಬಾಸ್ ಮನೆಯಲ್ಲಿ ಬದ್ಧ ವೈರಿಗಳಂತೆ ಕಿತ್ತಾಡುತ್ತಿದ್ದಾರೆ. ನಾಮಿನೇಟ್ ವಿಚಾರದಲ್ಲಿ ಶುರುವಾದ ಇಬ್ಬರ ನಡುವಿನ ವಾಕ್ಸಮರ ಇದೀಗ ಮಾನಸಿಕ ಖಿನ್ನತೆಗೆ ಜಾರುವಂತೆ ಮಾಡಿದ್ದು ವಿಪರ್ಯಾಸ.

    ಹೌದು, ಬಿಗ್ ಬಾಸ್ ಮನೆಯಲ್ಲಿ ಸಂಗೀತಾ ಶೃಂಗೇರಿ ಖಿನ್ನತೆಗೆ (Depression) ಜಾರಿದ್ದಾರಂತೆ. ಹಾಗಂತ ಅವರೇ  ಈ ಮಾಹಿತಿಯನ್ನು ಇತರ ಕಂಟೆಸ್ಟೆಂಟ್ ಮುಂದೆ ಹೇಳಿಕೊಂಡಿದ್ದಾರೆ. ಸಂಗೀತಾ ಅವರು ಒಬ್ಬೊಬ್ಬರೇ ಕ್ಯಾಮೆರಾ ಮುಂದೆ ನಿಂತು ಮಾತನಾಡೋದನ್ನ, ಒಬ್ಬೊಬ್ಬರೇ ಕೂತು ಅಳೋದನ್ನು ಮನೆಮಂದೆ ನೋಡಿದ್ದಾರೆ. ಇಷ್ಟಕ್ಕೆಲ್ಲ ಕಾರಣ ವಿನಯ್ ಎನ್ನುವುದು ಎಲ್ಲರ ಆರೋಪವಾಗಿದೆ. ಹೀಗಾಗಿ ಸಂಗೀತಾ ವಿಷಯದಲ್ಲಿ ವಿನಯ್ ಟಾರ್ಗೆಟ್ ಆಗಿದ್ದಾರೆ.

    ಸಂಗೀತಾ ಮತ್ತು ವಿನಯ್ ನಡುವಿನ ಗಲಾಟೆಯಲ್ಲಿ ಭಾಗ್ಯಶ್ರೀ ಅವರು ಪ್ರಶ್ನಿಸುತ್ತಾರೆ. ಇಬ್ಬರ ಮಧ್ಯ ಏನಾಗುತ್ತಿದೆ ಎಂದು ವಿನಯ್‍ ನ ಕೇಳುತ್ತಾರೆ. ಭಾಗ್ಯಶ್ರೀ ಅವರ ಪ್ರಶ್ನೆಯನ್ನು ಕೇಳುತ್ತಿದ್ದಂತೆಯೇ ವಿನಯ್ ಗರಂ ಆಗುತ್ತಾರೆ. ‘ಅವಳನ್ನು ಸಮಾಧಾನ ಮಾಡೋಕೆ, ನನ್ನ ಲವ್ವರ್?’ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ತನ್ನ ಮತ್ತು ಸಂಗೀತಾ ಮಧ್ಯ ಏನಾಗುತ್ತಿದೆ ಎಂದು ಶಾಂತ ರೀತಿಯಲ್ಲಿ ಕೂತುಕೊಂಡು ಯೋಚಿಸಬೇಕಿದ್ದ ವಿನಯ್, ತಾಳ್ಮೆ ಕಳೆದುಕೊಂಡಿದ್ದಾರೆ. ಹಾಗಾಗಿ ಅವರು ಕೂಗಾಟ ಮನೆಮಂದಿಗೆಲ್ಲ ಆತಂಕ ಮೂಡಿಸಿದೆ.

     

    ಒಂದು ಕಡೆ ‘ನನಗೆ ಈ ಮನೆಯಲ್ಲಿ ಇರೋಕೆ ಭಯವಾಗುತ್ತಿದೆ’ ಎನ್ನುತ್ತಿದ್ದಾರೆ ಸಂಗೀತಾ. ಇನ್ನೊಂದು ಕಡೆ ‘ನನ್ನ ಧ್ವನಿ ಬಂದಾಗ ಕಿವಿ ಮುಚ್ಕೊಳ್ಳಿ’ ಎನ್ನುತ್ತಿದ್ದಾರೆ ವಿನಯ್. ಯಾರೇ ಹೇಳಿದರೂ, ವಿನಯ್ ಶಾಂತವಾಗುವಂತೆ ಕಾಣುತ್ತಿಲ್ಲ. ರಂಪಾಟ ಮನೆಯಲ್ಲಿ ಇನ್ನೂ ಜಾಸ್ತಿಯೇ ಆಗುತ್ತಿದೆ. ಮನೆಯಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ. ಈ ಕೋಪವನ್ನು ಬಿಗ್ ಬಾಸ್ ಹೇಗೆ ತಣ್ಣಗೆ ಮಾಡುತ್ತಾರೆ ಎನ್ನುವುದು ಸದ್ಯದ ಕುತೂಹಲ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಐಪಿಎಸ್ ಅಧಿಕಾರಿ ಜೊತೆಗಿನ ಕಿರಿಕ್ : ಖಿನ್ನತೆಗೆ ಜಾರಿದ ಡಿಂಪಲ್ ಹಯಾತಿ

    ಐಪಿಎಸ್ ಅಧಿಕಾರಿ ಜೊತೆಗಿನ ಕಿರಿಕ್ : ಖಿನ್ನತೆಗೆ ಜಾರಿದ ಡಿಂಪಲ್ ಹಯಾತಿ

    ಪಾರ್ಕಿಂಗ್ ವಿಚಾರವಾಗಿ ಐಪಿಎಸ್ ಅಧಿಕಾರಿ ಜೊತೆ ಕಿರಿಕ್ ಮಾಡಿಕೊಂಡಿದ್ದ ನಟಿ ಡಿಂಪಲ್ ಹಯಾತಿ (Dimple Hayati) ಖಿನ್ನತೆಗೆ ಜಾರಿದ್ದಾರಂತೆ. ಅಧಿಕಾರಿ ಜೊತೆಗಿನ ಜಗಳದಿಂದಾಗಿ ನಟಿಗೆ ಬೆದರಿಕೆಯ ಕರೆಗಳು ಬರುತ್ತಿದ್ದು, ಅವುಗಳನ್ನು ಎದುರಿಸೋಕೆ ಆಗದೇ ಡಿಂಪಲ್ ಖಿನ್ನತೆಗೆ  (Depression) ಒಳಗಾಗಿದ್ದಾರೆ ಎಂದು ಮಾಧ್ಯಮಗಳ ವರದಿ ಮಾಡಿವೆ.

    ಸಿನಿಮಾಗಳಿಗಿಂತ ಕಿರಿಕ್ ಸುದ್ದಿಗಳಿಂದಲೇ ಹೆಚ್ಚೆಚ್ಚು ಸುದ್ದಿ ಮಾಡಿದವರು ಡಿಂಪತ್ ಹಯಾತಿ. ಈ ಹಿಂದೆಯೂ ನಾನಾ ರೀತಿಯ ವಿವಾದಗಳನ್ನು ಮೈಮೇಲೆ ಎಳೆದುಕೊಂಡವರು. ಮೊನ್ನೆಯಷ್ಟೇ ಐಪಿಎಸ್ ಅಧಿಕಾರಿ ಜೊತೆ ಡಿಂ ಕಿರಿಕ್ ಮಾಡಿಕೊಂಡು ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ. ಇದನ್ನೂ ಓದಿ:ಭಾರತದ ಮಣ್ಣಿಗೆ ಘನತೆಯಿದೆ- G20 ಸಭೆಯಲ್ಲಿ ರಾಮ್ ಚರಣ್‌ ಮಾತು

    ಪೊಲೀಸ್ ಅಧಿಕಾರಿ ರಾಹುಲ್ ಹೆಗ್ಡೆ(Rahul Hegde)- ಸೌತ್ ನಟಿ ಡಿಂಪಲ್ ಹಯಾತಿ ನಡುವಿನ ಜಗಳ ತಾರಕಕ್ಕೇರಿದೆ. ಪಾರ್ಕಿಂಗ್ ವಿಚಾರಕ್ಕೆ ಶುರುವಾದ ಕಿತ್ತಾಟ ಈಗ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಪೊಲೀಸ್ ಅಧಿಕಾರಿಯ ಕಾರನ್ನು ಡ್ಯಾಮೇಜ್ ಮಾಡಿದ ಆರೋಪದ ಮೇಲೆ ನಟಿ ಡಿಂಪಲ್ ಹಯಾತಿ ವಿರುದ್ಧ ಪೊಲೀಸರು ಕೇಸ್ ದಾಖಲಿಸಿದ್ದಾರೆ.

    ನಟಿ ಡಿಂಪಲ್ ಹಾಗೂ ಅವರ ಗೆಳೆಯ ವಿಕ್ಟರ್ (Victor) ಹೈದರಾಬಾದ್‌ನ ಅಪಾರ್ಟ್ಮೆಂಟ್ ಒಂದರಲ್ಲಿ ವಾಸವಾಗಿದ್ದಾರೆ. ಇದೇ ಅಪಾರ್ಟ್ಮೆಂಟ್‌ನಲ್ಲಿ ಹೈದರಾಬಾದ್‌ನ ಟ್ರಾಫಿಕ್ ಪೊಲೀಸ್ ಡೆಪ್ಯೂಟಿ ಕಮೀಷನರ್, ಐಪಿಎಸ್ ಅಧಿಕಾರಿ ರಾಹುಲ್ ಹೆಗ್ಡೆ ಕೂಡ ವಾಸವಾಗಿದ್ದಾರೆ. ಇವರ ಮಧ್ಯೆ ಕೆಲ ಸಮಯದಿಂದ ಪಾರ್ಕಿಂಗ್ ವಿಚಾರದಲ್ಲಿ ಕಿತ್ತಾಟ ನಡೆದಿದೆ. ನಟಿ ಈ ವಿಚಾರದಲ್ಲಿ ರಿವೇಂಜ್ ತೆಗೆದುಕೊಂಡಿದ್ದಾರೆ.

    ಮೇ ೧೪ರಂದು ಡಿಂಪಲ್ ಹಯಾತಿ ಅವರು ರಾಹುಲ್ ಕಾರಿಗೆ ಡ್ಯಾಮೇಜ್ ಮಾಡಿದ್ದಾರೆ. ಇದು ಉದ್ದೇಶಪೂರ್ವಕವಾಗಿತ್ತು ಎಂಬುದಕ್ಕೆ ಸಿಸಿಟಿವಿ ದೃಶ್ಯಗಳು ಸಾಕ್ಷ್ಯ ಸಿಕ್ಕಿದೆ. ಇದನ್ನು ಆಧರಿಸಿ ನಟಿ ಡಿಂಪಲ್ ವಿರುದ್ಧ ರಾಹುಲ್ ಅವರ ಕಾರು ಡ್ರೈವರ್ ದೂರು ದಾಖಲಿಸಿದ್ದರು. ಸದ್ಯ ಪೊಲೀಸರು ಕೇಸ್ ದಾಖಲು ಮಾಡಿಕೊಂಡಿದ್ದಾರೆ. ಡಿಂಪಲ್ ಹಯಾತಿಗೆ ಸಮನ್ಸ್ ನೀಡಲಾಗಿದೆ. ಸೋಮವಾರ (ಮೇ 29) ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ.

  • ಕೆಲಸದಿಂದ ವಜಾ –  ಮನನೊಂದು ಬಿಎಂಟಿಸಿ ನೌಕರ ಆತ್ಮಹತ್ಯೆ

    ಕೆಲಸದಿಂದ ವಜಾ – ಮನನೊಂದು ಬಿಎಂಟಿಸಿ ನೌಕರ ಆತ್ಮಹತ್ಯೆ

    ರಾಯಚೂರು: ಕೆಲಸ ಕಳೆದುಕೊಂಡಿದ್ದಕ್ಕೆ ಮನನೊಂದು ವ್ಯಕ್ತಿಯೊಬ್ಬರು ನೇಣಿಗೆ ಶರಣಾಗಿರುವ ಘಟನೆ ಜಿಲ್ಲೆಯ ಲಿಂಗಸುಗೂರು ತಾಲೂಕಿನ ವೀರಾಪೂರ ಗ್ರಾಮದಲ್ಲಿ ನಡೆದಿದೆ.

    ಬಿಎಂಟಿಸಿ ನೌಕರನಾಗಿದ್ದ ವಿನೋದ್ ಕುಮಾರ್ ಪತ್ರಿ (42) ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ. ಮನೆಯಲ್ಲಿ ಬೆಳಗಿನ ಜಾವ ಎಲ್ಲರೂ ಮಲಗಿದ್ದಾಗ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಇದನ್ನೂ ಓದಿ: ದೂರು ನೀಡಿದ್ದಕ್ಕೆ ಅಪ್ರಾಪ್ತೆಯ ಮೇಲೆ ಗ್ಯಾಂಗ್‍ರೇಪ್- ಮೂವರು ಅರೆಸ್ಟ್

    ಬಿಎಂಟಿಸಿಯಲ್ಲಿ ಚಾಲಕ ಹಾಗೂ ನಿರ್ವಾಹಕನಾಗಿದ್ದ ವಿನೋದ್ ಕಳೆದ ವರ್ಷ ನೌಕರಿಯಿಂದ ವಜಾಗೊಂಡ ಹಿನ್ನೆಲೆ ಖಿನ್ನತೆಗೆ ಒಳಗಾಗಿದ್ದರು. ಇದನ್ನೂ ಓದಿ: ಮರ್ಯಾದಾ ಹತ್ಯೆ – ತಹಶೀಲ್ದಾರ್ ಕಚೇರಿಯಲ್ಲೇ ಚಾಕುವಿನಿಂದ ಇರಿದು ವ್ಯಕ್ತಿ ಬರ್ಬರ ಕೊಲೆ

    ಅವರನ್ನು ಈ ಹಿಂದೆ ಸಾರಿಗೆ ನೌಕರರ ಮುಷ್ಕರದಲ್ಲಿ ಪಾಲ್ಗೊಂಡಿದ್ದಕ್ಕೆ ಕಳೆದ ಮಾರ್ಚ್‍ವಜಾಗೊಳಿಸಲಾಗಿತ್ತು. ಮರಳಿ ಕೆಲಸ ಸಿಗದ ಹಿನ್ನೆಲೆ ಮನನೊಂದಿದ್ದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಮಕ್ಕಳಿಲ್ಲವೆಂಬ ಕೊರಗಿಗೆ ಆರನೇ ಮಹಡಿಯಿಂದ ಜಿಗಿದ ಮಹಿಳೆ

    ಮಕ್ಕಳಿಲ್ಲವೆಂಬ ಕೊರಗಿಗೆ ಆರನೇ ಮಹಡಿಯಿಂದ ಜಿಗಿದ ಮಹಿಳೆ

    ಭೋಪಾಲ್: ಮಕ್ಕಳಿಲ್ಲ ಎಂದು ಖಿನ್ನತೆಗೆ ಒಳಗಾಗಿದ್ದ ಮಹಿಳೆ ಆರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಧ್ಯಪ್ರದೇಶದ ಇಂದೋರ್‍ನಲ್ಲಿ ನಡೆದಿದೆ.

    ಸಂಗೀತಾ(53) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಸಂಗೀತಾ ಉದ್ಯಮಿಯನ್ನು ಮದುವೆಯಾಗಿದ್ದು, ಹಲವು ವರ್ಷಗಳಿಂದ ಮಗುವಿಗೆ ಜನ್ಮ ನೀಡಲು ಸಾಧ್ಯವಾಗಿಲ್ಲ ಎಂಬ ಕಾರಣಕ್ಕೆ ಮನನೊಂದಿದ್ದರು. ಹೀಗಾಗಿ ವಸತಿ ಕಟ್ಟಡವೊಂದರ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರಬಹದು ಎಂದು ಶಂಕಿಸಲಾಗಿದೆ.

    ಮಹಿಳೆ ಬೆಳಗ್ಗೆ 6:30ರ ಹೊತ್ತಿಗೆ ಶ್ಯಾಮ್ ಹೈಟ್ಸ್ ಅಪಾರ್ಟ್‍ಮೆಂಟ್‍ನ 6ನೇ ಮಹಡಿಯಿಂದ ಜಿಗಿದಿದ್ದಾರೆ. ಹೊರಗಡೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಹಿಳೆಯನ್ನು ಗಮನಿಸಿದ ಭದ್ರತಾ ಸಿಬ್ಬಂದಿಗಳು, ತಕ್ಷಣ ಆಕೆಯ ಪತಿಗೆ ಮಾಹಿತಿ ನೀಡಿ, ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಮಹಿಳೆ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: 10 ರೂಪಾಯಿ ಕೋಳಿ ಮರಿಗೆ 52 ರೂ. ಟಿಕೆಟ್!

    POLICE JEEP

    ಸಂಗೀತಾ ಮಕ್ಕಳನ್ನು ಪಡೆಯಲು ಕಳೆದ 6 ವರ್ಷಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ನಿದ್ರಾ ಹೀನತೆಯಿಂದಲೂ ಬಳಲುತ್ತಿದ್ದ ಮಹಿಳೆ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರು. ಮದುವೆಯಾಗಿ 25 ವರ್ಷಗಳಾಗಿದ್ದರೂ ದಂಪತಿಗೆ ಮಕ್ಕಳಾಗಿರಲಿಲ್ಲ. ಹೀಗಾಗಿ ಆಕೆ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಇದನ್ನೂ ಓದಿ: ಪಾರ್ಟಿ ಮಾಡ್ತಿದ್ದವರಿಂದ ಪೊಲೀಸರ ಮೇಲೆ ಹಲ್ಲೆ ಪ್ರಕರಣ – ಆರೋಪಿಗಳಿಗೆ ಷರತ್ತು ಬದ್ದ ಜಾಮೀನು ಮಂಜೂರು

    ಮಹಿಳೆಯ ಆತ್ಮಹತ್ಯೆಯ ಬಗ್ಗೆ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆಗೆ ಆಕೆಯ ಮೊಬೈಲ್ ಫೋನ್ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆ ಇಂದೋರ್‍ನ ಕನಾಡಿಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

  • ಕೋವಿಡ್‌ನಿಂದ ಪತ್ನಿ ಸಾವು, ಪತಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ

    ಕೋವಿಡ್‌ನಿಂದ ಪತ್ನಿ ಸಾವು, ಪತಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ

    ಹಾವೇರಿ: ಕೊರೊನಾ ಸೋಂಕಿನಿಂದ ಪತ್ನಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಪತಿ ವಿಷ ಸೇವಿಸಿ ಆತ್ಮಹತ್ಯೆಗೆಯತ್ನಿಸಿದ ಘಟನೆ ಹಾವೇರಿ ನಗರದ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.

    ಹಾವೇರಿ ಜಿಲ್ಲೆ ಬ್ಯಾಡಗಿ ತಾಲ್ಲೂಕು 23 ವರ್ಷದ ಮಹಿಳೆ ಕೊರೊನಾ ಸೋಂಕಿನಿಂದ ಮಹಿಳೆ ಮೃತಪಟ್ಟಿದ್ದಾರೆ. ಮೃತ ಮಹಿಳೆಗೆ ಎರಡೂವರೆ ತಿಂಗಳ ಹಿಂದೆ ಹೆರಿಗೆಯಾಗಿತ್ತು. ಹೆರಿಗೆ ನಂತರದ ಕೆಲವು ದಿನಗಳಲ್ಲಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಎರಡು ತಿಂಗಳ ಹಿಂದೆ ಹೆರಿಗೆ ನಂತರ ಕೆಲವು ದಿನಗಳಲ್ಲಿ  ಮಗು ಮೃತಪಟ್ಟಿತ್ತು. ಮಗು ಮತ್ತು ಪತ್ನಿಯನ್ನ ಕಳೆದುಕೊಂಡ ಪತಿ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎನ್ನಲಾಗುತ್ತಿದೆ.


    ಅಸ್ವಸ್ಥ ಪತಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಸದ್ಯ ಆರೋಗ್ಯ ಸ್ಥಿರವಾಗಿದೆ. ಮಹಿಳೆ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದನ್ನ ಜಿಲ್ಲಾ ಡಾ.ರಾಘವೇಂದ್ರಸ್ವಾಮಿ ಎಚ್.ಎಸ್ ದೃಡಪಡಿಸಿದ್ದಾರೆ. ಅಲ್ಲದೆ ಕೊವೀಡ್ ನಿಯಮಾನುಸಾರ ಮಹಿಳೆಯ ಅಂತ್ಯಕ್ರಿಯೆ ನೆರೆವೇರಿಸಲಾಗಿದೆ.

  • ಖಿನ್ನತೆಗೊಳಗಾದ ವ್ಯಕ್ತಿ ಕಾರು ಬಿಟ್ಟು ಕಣ್ಮರೆ- ಎರಡು ದಿನವಾದರೂ ಅಲ್ಲೇ ನಿಂತಿದೆ ಕಾರು

    ಖಿನ್ನತೆಗೊಳಗಾದ ವ್ಯಕ್ತಿ ಕಾರು ಬಿಟ್ಟು ಕಣ್ಮರೆ- ಎರಡು ದಿನವಾದರೂ ಅಲ್ಲೇ ನಿಂತಿದೆ ಕಾರು

    ಹಾಸನ: ಗೊರೂರು ಹೇಮಾವತಿ ಜಲಾಶಯದ ಹಿನ್ನೀರಿನ ಬಳಿ ಕಾರು ಬಿಟ್ಟು ಚಾಲಕ ನಾಪತ್ತೆಯಾಗಿರುವ ಅಪರೂಪದ ಘಟನೆ ನಡೆದಿದೆ.

    ಶೆಟ್ಟಿಹಳ್ಳಿ ಸೇತುವೆ ಮೇಲೆ ಕೆಎ-53 ಪಿ-3777 ನೋಂದಣಿ ಸಂಖ್ಯೆಯ ಕಾರು ನಿಂತಿದ್ದು, ಕಳೆದೆರಡು ದಿನಗಳಿಂದ ಚಾಲಕ ಮಾತ್ರ ಕಾಣಿಸುತ್ತಿಲ್ಲ. ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಅದರಲ್ಲಿದ್ದ ಚಾಲನಾ ಪರವಗಾನಗಿ (ಡಿಎಲ್) ಪರಿಶೀಲಿಸಿದ್ದು, ಈ ವೇಳೆ ಕಾರು ಬೆಂಗಳೂರಿನ ಹೆಬ್ಬಾಳ ಮೂಲದ ಹರೀಶ್ ಅವರದ್ದು ಎಂದು ಗೊತ್ತಾಗಿದೆ. ಕಾರು ನಿಲ್ಲಿಸಿ ಎರಡು ದಿನವಾದರೂ ಮಾಲೀಕ ಮಾತ್ರ ಇತ್ತ ಸುಳಿದಿಲ್ಲ.

    ಇಲ್ಲಿಗೆ ಹರೀಶ್ ಅವರೇ ಬಂದಿದ್ದಾರಾ ಅಥವಾ ಯಾರಾದರೂ ತಂದು ನಿಲ್ಲಿಸಿದ್ದಾರಾ? ಎಂಬುದರ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಹರೀಶ್ ಕನ್ಸ್‍ಟ್ರಕ್ಷನ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಒಂದೂವರೆ ತಿಂಗಳ ಹಿಂದೆ ಕೆಲಸಕ್ಕೆ ರಾಜೀನಾಮೆ ಸಲ್ಲಿಸಿದ್ದರು. ನಂತರ ಕೆಲಸಕ್ಕಾಗಿ ಹುಡುಕಾಟ ನಡೆಸಿದ್ದರು. ಆದರೆ ನಿರೀಕ್ಷೆಗೆ ತಕ್ಕ ಕೆಲಸ ಸಿಕ್ಕಿರಲಿಲ್ಲ. ಇದಕ್ಕೆ ಲಾಕ್‍ಡೌನ್ ಎಫೆಕ್ಟ್ ಕೂಡ ಕಾರಣ ಎಂದು ಹೇಳಲಾಗುತ್ತಿದೆ. ಇದರಿಂದಾಗಿ ಕೆಲವು ದಿನಗಳಿಂದ ಹರೀಶ್ ಖಿನ್ನತೆಗೆ ಒಳಗಾಗಿದ್ದರು ಎಂದು ಅವರ ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ.

    ಈ ಬಗ್ಗೆ ಹೆಚ್ಚಿನ ತನಿಖೆಗೆ ಮುಂದಾಗಿರುವ ಗೊರೂರು ಪೊಲೀಸರು ನಾಪತ್ತೆಯಾಗಿರುವ ಹರೀಶ್‍ಗಾಗಿ ಹುಡುಕಾಟ ನಡೆಸಿದ್ದಾರೆ. ಕಾರು ನಿಲ್ಲಿಸಿ ಎಲ್ಲಿಗೆ ಹೋಗಿರಬಹುದು? ಇಲ್ಲವೇ ಬೇರೆಯವರು ಕಾರು ತಂದು ನಿಲ್ಲಿಸಿದ್ದಾರಾ ಎಂಬ ಕುರಿತು ತನಿಖೆ ಮುಂದುವರಿಸಿದ್ದಾರೆ.

  • ಮುಂಬೈನ ಯುವ ಕ್ರಿಕೆಟಿಗ ನೇಣಿಗೆ ಶರಣು

    ಮುಂಬೈನ ಯುವ ಕ್ರಿಕೆಟಿಗ ನೇಣಿಗೆ ಶರಣು

    ಮುಂಬೈ: 27 ವರ್ಷದ ಯುವ ಕ್ರಿಕೆಟ್ ಆಟಗಾರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಮುಂಬೈನ 27 ವರ್ಷದ ಕ್ರಿಕೆಟಿಗ ಕರಣ್ ತಿವಾರಿ ಸೋಮವಾರ ರಾತ್ರಿ ತಮ್ಮ ಮಲಾಡ್ ಪ್ರದೇಶದಕ್ಕಿರುವ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕರಣ್ ತಿವಾರಿ ಮುಂಬೈ ವೃತ್ತಿಪರ ಕ್ರಿಕೆಟ್ ತಂಡದ ಭಾಗವಾಗಿರಲಿಲ್ಲ. ಆದರೆ ಅವರು ಅವರಿಗೆ ನೆಟ್ ಬೌಲರ್ ಆಗಿದ್ದರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆದರೆ ತಿವಾರಿ ವೃತ್ತಿಜೀವನದಲ್ಲಿ ಯಶಸ್ಸು ಸಿಗದೆ ಖಿನ್ನತೆಯಿಂದ ಬಳಲಿ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಶಂಕಿಸಲಾಗಿದೆ.

    ಕರಣ್ ತಿವಾರಿ ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ್ದು, ತನ್ನ ತಾಯಿ ಮತ್ತು ಸಹೋದರನೊಂದಿಗೆ ಮುಂಬೈನ ಮಲಾಡ್ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಜೊತೆಗೆ ಕ್ರಿಕೆಟರ್ ಆಗಬೇಕು ಎಂಬ ಕನಸು ಕಂಡಿದ್ದ ತಿವಾರಿ ಮುಂಬೈನ ಹಲವಾರು ಕ್ಲಬ್‍ಗಳಿಗೆ ಆಡಿದ್ದರು. ಜೊತೆಗೆ ದೇಶೀಯ ಕ್ರಿಕೆಟ್ ಆಟಗಾರಿಗೆ ನೆಟ್ ಬಾಲ್ ಬೌಲರ್ ಆಗಿದ್ದರು. ಇದರಿಂದ ಮನನೊಂದಿದ್ದ ತಿವಾರಿ ತಮ್ಮ ಪ್ರತಿಭೆಯನ್ನು ತೋರಿಸಲು ಸರಿಯಾದ ಅವಕಾಶ ಸಿಗುತ್ತಿಲ್ಲ ಎಂದು ತಮ್ಮ ಆಪ್ತರಲ್ಲಿ ಹೇಳಿಕೊಂಡಿದ್ದರು.

    ಕೊರೊನಾ ಲಾಕ್‍ಡೌನ್ ನಂತರ ತಿವಾರಿ ಮನೆಯಿಂದ ಹೊರಗೆ ಬಾರದೇ ಖಿನ್ನತೆಗೆ ಒಳಗಾಗಿದ್ದರು. ಜೊತೆಗೆ ತನ್ನ ರಾಜಸ್ಥಾನದಲ್ಲಿರುವ ಗೆಳೆಯರಿಗೆ ಕರೆ ಮಾಡಿ ನಾನು ಏನನ್ನೂ ಸಾಧಿಸಲು ಆಗಲಿಲ್ಲ. ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ನಂತರ ಸ್ನೇಹಿತರು ತಿವಾರಿ ಸಹೋದರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಆದರೆ ಸೋಮವಾರ ರಾತ್ರಿ 10.30ರ ಸುಮಾರಿಗೆ ಕರಣ್ ತಿವಾರಿ ತನ್ನ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾರೆ. ಬಾಗಿಲು ಒಡೆದು ನೋಡಿದಾಗ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಸಂಬಂಧ ಕುರಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಹೇರ್ ಕಟ್ ಮಾಡಿಸಿದರೆ ಖಿನ್ನತೆಗೆ ಒಳಗಾಗಿದ್ದೇನೆಂಬ ಅರ್ಥವಲ್ಲ: ಸಿಂಧು ಲೋಕನಾಥ್ ಕಿಡಿ

    ಹೇರ್ ಕಟ್ ಮಾಡಿಸಿದರೆ ಖಿನ್ನತೆಗೆ ಒಳಗಾಗಿದ್ದೇನೆಂಬ ಅರ್ಥವಲ್ಲ: ಸಿಂಧು ಲೋಕನಾಥ್ ಕಿಡಿ

    ಬೆಂಗಳೂರು: ನಾನು ಬಾಯ್ಸ್ ರೀತಿಯ ಹೇರ್ ಕಟ್ ಮಾಡಿಸಿದ್ದೇನೆ ಹೊರತು ಖಿನ್ನತೆ ಒಳಗಾಗಿ ಕೂದಲನ್ನು ಕತ್ತರಿಸಿಕೊಂಡಿಲ್ಲ ಎಂದು ನಟಿ ಸಿಂಧು ಲೋಕನಾಥ್ ಅವರು ಹೇಳಿದ್ದಾರೆ.

    ಇತ್ತೀಚೆಗೆ ಸಿಂಧು ಲೋಕನಾಥ್ ಅವರು ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಬಾಯ್ ಹೇರ್ ಕಟ್ ಮಾಡಿಸಿಕೊಂಡಿರುವ ಫೋಟೋ ಹಾಕಿ ಕೆಲ ಭಾವನಾತ್ಮಕ ಸಾಲುಗಳನ್ನು ಬರೆದುಕೊಂಡಿದ್ದರು. ಇದನ್ನು ನೋಡಿದ ಕೆಲವರು ಸಿಂಧು ಖಿನ್ನತೆಗೆ ಒಳಗಾಗಿದ್ದಾರೆ. ಅನಾರೋಗ್ಯಕ್ಕೆ ತುತ್ತಾಗಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದರು.

    https://www.facebook.com/SindhuLoknath/posts/2625571134327685

    ಈಗ ಈ ವಿಚಾರವಾಗಿ ಮತ್ತೆ ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕುವ ಮೂಲಕ ಸುಳ್ಳು ಸುದ್ದಿ ಹಬ್ಬಿಸಿದವರಿಗೆ ಕ್ಲಾಸ್ ತೆಗೆದುಕೊಂಡಿರುವ ಸಿಂಧು ಲೋಕನಾಥ್, ನಾನು ಕೂದಲನ್ನು ಕತ್ತರಿಸಿದ್ದೇನೆ ಎಂದರೆ ನಾನು ಅನಾರೋಗ್ಯಕ್ಕೆ ತುತ್ತಾಗಿದ್ದೇನೆ ಅಥವಾ ನಾನು ಖಿನ್ನತೆ ಒಳಗಾಗಿದ್ದೇನೆ ಎಂಬ ಅರ್ಥವಲ್ಲ. ನಾನು ಬೇರೆ ರೀತಿಯ ಹೇರ್ ಸ್ಟೈಲ್ ಮಾಡಲು ಇಷ್ಟಪಡುತ್ತೇನೆ ಅದಕ್ಕೆ ಬಾಯ್ ಕಟ್ ಮಾಡಿಸಿದ್ದೇನೆ ಎಂದಿದ್ದಾರೆ.

    https://www.facebook.com/SindhuLoknath/posts/2633693606848771

    ಪೋಸ್ಟ್‌ನಲ್ಲಿ ಏನಿದೆ?
    ನಾನು ಇಲ್ಲಿ ಪೋಸ್ಟ್ ಮಾಡಿರುವ ಕೆಲ ಫೋಟೋಗಳು ನನ್ನ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದವರಿಗೆ, ನಾನು ಅನಾರೋಗ್ಯದಿಂದ ಬಳಲುತ್ತಿದ್ದೇನೆ ಎಂದು ತೋರಿಸಿದವರಿಗೆ. ಅಂಥವರಿಗೆ ನಾನು ಕೆಲ ಮಾತುಗಳನ್ನು ಹೇಳಲು ಬಯಸುತ್ತೇನೆ. ನಾನು ಕೂದಲನ್ನು ಕತ್ತರಿಸಿದ್ದೇನೆ ಎಂದರೆ ಅದರ ಅರ್ಥ ನಾನು ಅನಾರೋಗ್ಯಕ್ಕೆ ತುತ್ತಾಗಿದ್ದೇನೆ ಎಂಬುದಲ್ಲ. ನಾನು ಹೇರ್ ಕಟ್ ಮಾಡಿಸಿದರೆ ಖಿನ್ನತೆ ಒಗಾಗಿದ್ದೇನೆ ಎಂಬ ಅರ್ಥವಲ್ಲ ಅಥವಾ ಲಿಂಗ ಪಕ್ಷಪಾತ ಮಾಡುತ್ತೇನೆ ಎಂದಲ್ಲ. ನಾನು ಹೇರ್ ಕಟ್ ಮಾಡಿಸಿರುವುದು ಬೇರೆ ಸ್ಟೈಲ್‍ಗಾಗಿ ಎಂದು ಸಿಂಧು ಕಿಡಿಕಾರಿದ್ದಾರೆ.

    ನನ್ನ ಕತ್ತರಿಸಿದ ಕೂದಲ ಮೇಲೆ ವಿವಾದವನ್ನು ಹುಟ್ಟು ಹಾಕಿದವರಿಗೆ ನಾನು ಹೇಳುವುದೆನೆಂದರೆ. ನನ್ನ ಕೂದಲು ಮುಂಚೆಗಿಂತಲೂ ತುಂಬ ಚೆನ್ನಾಗಿ ಬೆಳೆಯುತ್ತದೆ. ನಾನು ಹಿಂದೆ ಹಾಕಿರುವ ಪೋಸ್ಟ್ ಅನ್ನು 10 ಬಾರಿ ಸರಿಯಾಗಿ ಓದಿ ಆಗ ನಿಮಗೆ ನಾನು ಏನನ್ನು ಬರೆದಿದ್ದೇನೆ ಎಂಬುದು ಅರ್ಥವಾಗುತ್ತದೆ. ನಿಮ್ಮ ಒಂದು ಉಪಯೋಗಕ್ಕಾಗಿ ಬೇರೆಯವರನ್ನು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಖಿನ್ನತೆಗೆ ಒಳಗಾಗಿದ್ದಾರೆ ಎಂದು ಇನ್ನೊಬ್ಬರ ವೈಯಕ್ತಿಕ ಜೀವನಕ್ಕೆ ತಲೆ ಹಾಕಬೇಡಿ. ಅದು ಅವರ ಇಮೇಜ್ ಅನ್ನು ಹಾಳು ಮಾಡುತ್ತದೆ ಎಂದು ಸಿಂಧು ತಿಳಿಸಿದ್ದಾರೆ.

    ಈ ರೀತಿ ಸುಳ್ಳು ಸುದ್ದಿ ಹಬ್ಬಿಸಿ ವ್ಯಕ್ತಿಗಳನ್ನು ಖಿನ್ನತೆಯ ಕಡೆಗೆ ತಳ್ಳುವುದನ್ನು ಬಿಡಿ. ನಾನು ಮೌನವಾಗಿದ್ದೇನೆ ಎಂದು ನೀವು ನನ್ನ ಬಗ್ಗೆ ಸುಳ್ಳು ಸುದ್ದಿ ಮಾಡುವ ಸ್ವಾತಂತ್ರ್ಯವನ್ನು ತೆಗೆದುಕೊಂಡರೆ, ಅದರ ವಿರುದ್ಧ ಧ್ವನಿ ಎತ್ತುವ ಸ್ವಾಂತತ್ರ್ಯ ನನಗೂ ಇದೆ. ಈ ಕೊರೊನಾ ರೀತಿಯ ಸಮಯದಲ್ಲಿ ಒಳ್ಳೆಯ ಸುದ್ದಿಗಳನ್ನು ನೀಡಲು ಮುಂದಾಗಿ. ನಾನೂ ಕೂಡ ನನ್ನ ಒಳ್ಳೆಯ ವಿಚಾರವನ್ನು ಸುದ್ದಿ ಮಾಡಲು ಅನುಮತಿ ಕೊಟ್ಟಿದ್ದೇನೆ. ಆದರೆ ಸುಳ್ಳು ಸುದ್ದಿಗಳನ್ನು ಹಬ್ಬಿಸಬೇಡಿ ಎಂದು ಸಿಂಧು ಖಾರವಾಗಿ ಪೋಸ್ಟ್ ಹಾಕಿದ್ದಾರೆ.

    ಇದರ ಜೊತೆಗೆ ಈ ಸುಳ್ಳು ಸುದ್ದಿಯನ್ನು ನಂಬಿ, ನನ್ನ ಆರೋಗ್ಯವನ್ನು ವಿಚಾರಿಸಲು ಕರೆ ಮಾಡಿದ ಜನರಿಗೆ ಮತ್ತು ನನ್ನ ಆರೋಗ್ಯದ ಬಗ್ಗೆ ಕಾಳಜಿ ಇರುವ ಎಲ್ಲರಿಗೂ ಧನ್ಯವಾದ. ನಾನೂ ಚೆನ್ನಾಗಿ ಇದ್ದೇನೆ ಎಂದು ಸಿಂಧು ಫುಟ್ ಬಾಲ್ ಆಡುತ್ತಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.

  • ಸುಶಾಂತ್ ಸಾವಿನಿಂದ ಪ್ರೇರಣೆ – ಆತ್ಮಹತ್ಯೆ ಮಾಡಿಕೊಂಡ 16ರ ಬಾಲಕ

    ಸುಶಾಂತ್ ಸಾವಿನಿಂದ ಪ್ರೇರಣೆ – ಆತ್ಮಹತ್ಯೆ ಮಾಡಿಕೊಂಡ 16ರ ಬಾಲಕ

    – ಡೆತ್‍ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡ ಪೋರ

    ಲಕ್ನೋ: ಕಳೆದ ಭಾನುವಾರ ಮೃತಪಟ್ಟ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನಿಂದ ಪ್ರೇರಣೆ ಪಡೆದು 16 ವರ್ಷದ ಬಾಕಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಬರೇಲಿಯ ಸುಭಾಷ್ ನಗರದಲ್ಲಿ ನಡೆದಿದೆ.

    10ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕ ತನ್ನ ರೂಮಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಜೊತೆ ಬಾಲಕ ನಾನು ಹುಡುಗಿಯರ ತರ ಕಾಣುತ್ತೇನೆ ಎಂದು ಖಿನ್ನತೆಗೆ ಒಳಗಾಗಿದ್ದ ಎನ್ನಲಾಗಿದೆ ಹಾಗೂ ಆತನನ್ನು ಸ್ನೇಹಿತರು ಮತ್ತು ಸಂಬಂಧಿಕರು ಈ ವಿಚಾರವಾಗಿಯೇ ಆತನನ್ನು ನಿಂದಿಸುತ್ತಿದ್ದರು ಎನ್ನಲಾಗಿದೆ.

    ಮೃತ ಬಾಲಕ ಶುಭಾಷ್ ನಗರದಲ್ಲಿ ತನ್ನ ತಮ್ಮ ಮತ್ತು ತಂದೆಯ ಜೊತೆ ವಾಸವಾಗಿದ್ದ. ಹುಟ್ಟಿದಾಗಲಿನಿಂದ ಆತನ ನಡುವಳಿಕೆ ಹೆಣ್ಣು ಮಕ್ಕಳ ರೀತಿ ಇತ್ತು ಹಾಗೂ ಅವನು ಮೆಕಪ್ ಮಾಡಿಕೊಳ್ಳುತ್ತಿದ್ದ, ಹುಡುಗಿಯರ ರೀತಿ ಡ್ಯಾನ್ಸ್ ಮಾಡುತ್ತಿದ್ದ. ಇದನ್ನೇ ಗುರಿಯಾಗಿಸಿಕೊಂಡು ಆತನ ಸ್ನೇಹಿತರು ಅವನನ್ನು ಅವಮಾನ ಮಾಡುತ್ತಿದ್ದರು. ಇದರಿಂದ ಮನನೊಂದ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಡೆತ್‍ನೋಟ್‍ನಲ್ಲಿ ಏನಿದೆ?
    ಸಾಯುವ ಮುನ್ನಾ ಡೆತ್‍ನೋಟ್ ಬರೆದಿರುವ ಬಾಲಕ, ತನ್ನ ತಂದೆಗೆ ಕ್ಷೆಮೆ ಕೇಳಿದ್ದಾನೆ. ನನಗೆ ಹುಡುಗಿಯರ ತರ ಮುಖವಿದೆ. ಜನರು ಅದನ್ನು ನೋಡಿ ನಗುತ್ತಾರೆ. ನನಗೇ ನಾನು ಹುಡುಗಿ ಎಂದು ಭಾಸವಾಗುತ್ತಿದೆ. ನನ್ನ ಜೀವನ ಕತ್ತಲೆ ಅನಿಸುತ್ತಿದೆ. ಅದಕ್ಕೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನಾನು ಮುಂದಿನ ಜನ್ಮದಲ್ಲಿ ಹೆಣ್ಣಾಗಿ ಹುಟ್ಟಲಿ ಎಂದು ಆಶೀರ್ವಾದ ಮಾಡಿ. ನಮ್ಮ ಮನೆಯಲ್ಲಿ ಮುಂದೆ ಹೆಣ್ಣು ಮಗು ಜನಿಸಿದರೆ ಅದು ನಾನೇ ಎಂದು ತಿಳಿದುಕೊಳ್ಳಿ ಎಂದು ಬರೆದಿದ್ದಾನೆ.

    ಈ ವಿಚಾರದ ಬಗ್ಗೆ ಮೃತನ ಚಿಕ್ಕ ತಮ್ಮ ಮಾಹಿತಿ ನೀಡಿದ್ದು, ನಟ ಸುಶಾಂತ್ ಅವರು ಸಾವಿನ ಬಳಿಕ ಅಣ್ಣ ಅದರ ಬಗ್ಗೆಯೇ ಹೆಚ್ಚು ಮಾತನಾಡುತ್ತಿದ್ದ. ಅವನು ಈ ರೀತಿ ಮಾಡಿಕೊಳ್ಳುವ ಹಿಂದಿನ ದಿನ ನನ್ನ ಬಳಿ ಸುಶಾಂತ್ ರೀತಿಯ ಒಳ್ಳೆಯ ನಟರೇ ಆತ್ಮಹತ್ಯೆ ಮಾಡಿಕೊಳ್ಳುವಾಗ ನಾವು ಯಾಕೆ ಮಾಡಿಕೊಳ್ಳಬಾರದು ಎಂದು ಹೇಳುತ್ತಿದ್ದ ಎಂದು ಹೇಳಿದ್ದಾನೆ.

    ನನ್ನ ಮಗ ಹೆಚ್ಚು ಅವನ ತಮ್ಮನ ಜೊತೆಯೇ ಇರುತ್ತಿದ್ದ. ನನ್ನ ಮಗ ಎಲ್ಲ ಹುಡುಗರಂತೆ ಸಾಮಾನ್ಯವಾಗಿಯೇ ಇದ್ದ. ಆದರೆ ನಮ್ಮ ಸಂಬಂಧಿಕರು ಸೇರಿದಂತೆ ಕೆಲವರು ಅವನು ಹುಡುಗಿಯ ತರ ಆಡುತ್ತಾನೆ ಎಂದು ತುಂಬ ಕಮೆಂಟ್ ಮಾಡುತ್ತಿದ್ದರು ಎಂದು ತಿಳಿಸಿದ್ದಾರೆ.