Tag: ಖಾಸಗಿ ಹೋಟೆಲ್

  • ಬಾಯ್ ಫ್ರೆಂಡ್ ಜೊತೆ ಲಾಡ್ಜ್‌ಗೆ ಹೋಗಿದ್ದ ವಿದ್ಯಾರ್ಥಿನಿ ಹೆಣವಾದ್ಲು – ಕಾರಣ ಮಾತ್ರ ಸಸ್ಪೆನ್ಸ್

    ಬಾಯ್ ಫ್ರೆಂಡ್ ಜೊತೆ ಲಾಡ್ಜ್‌ಗೆ ಹೋಗಿದ್ದ ವಿದ್ಯಾರ್ಥಿನಿ ಹೆಣವಾದ್ಲು – ಕಾರಣ ಮಾತ್ರ ಸಸ್ಪೆನ್ಸ್

    ಮೈಸೂರು: ಆಕೆ ಬಿಸಿಎ ವಿದ್ಯಾರ್ಥಿನಿ, 15 ದಿನ ಕಳೆದಿದ್ರೆ ಪದವಿ ಮುಗಿಸಿ ಒಳ್ಳೆಯ ಕೆಲಸಕ್ಕೆ ಸೇರುತ್ತಿದ್ದಳು. ಆದ್ರೆ ವಿಧಿಯ ಆಟವೇ ಬೇರೆಯಾಗಿತ್ತು. ಸ್ನೇಹಿತನ ಜೊತೆ ಹೋಟೆಲ್ ಲಾಡ್ಜ್‌ಗೆ ಬಂದ ವಿದ್ಯಾರ್ಥಿನಿ ಹೆಣವಾಗಿದ್ದಾಳೆ. ಆಕೆಯ ಸಾವಿನ ಸುತ್ತಲೂ ಹಲವು ಅನುಮಾನಗಳು ಹುಟ್ಟುಕೊಂಡಿವೆ.

    ಪಿರಿಯಾಪಟ್ಟಣ ತಾಲೂಕಿನ ಹರಳಹಳ್ಳಿ ಗ್ರಾಮದ ನಿವಾಸಿ ರವಿ ಅವರ ಪುತ್ರಿ ಅಪೂರ್ವ ಶೆಟ್ಟಿ (21) ನಿನ್ನೆ ರಾತ್ರಿ ಲಾಡ್ಜ್ ಒಂದರಲ್ಲಿ ಮೃತಪಟ್ಟಿದ್ದಾರೆ. ಈಕೆ ಮೈಸೂರಿನ ಖಾಸಗಿ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಸಿಎ ವ್ಯಾಸಾಂಗ ಮಾಡುತ್ತಿದ್ದಳು. ಇನ್ನೂ 15 ದಿನಗಳಲ್ಲಿ ಪದವಿ ಮುಗಿಸಿ ಊರಿಗೆ ಹೋಗೋದ್ರಲ್ಲಿದ್ದಳು, ದುರದೃಷ್ಟವಶಾತ್ ಆಕೆ ಸಾವನ್ನಪ್ಪಿದ್ದಾಳೆ. ಇದನ್ನೂ ಓದಿ: ಹೂವುಗಳನ್ನ ದೇಹಕ್ಕೆ ಅಂಟಿಸಿ, ಪ್ಲಾಸ್ಟಿಕ್ ಕವರ್‌ನಲ್ಲಿ ಮೈಮುಚ್ಚಿಕೊಂಡು ಬಂದ ಉರ್ಫಿ

    ಏನಿದು ಅಪೂರ್ವ ಸ್ಟೋರಿ?
    ಅಪೂರ್ವ ಶೆಟ್ಟಿ ಕಳೆದ ಹಲವು ವರ್ಷಗಳಿಂದ ಆಶಿಕ್ ಎಂಬ ಯುವಕನೊಂದಿಗೆ ಓಡಾಡುತ್ತಿದ್ದಳು. ಕಳೆದ ಎರಡು ದಿನಗಳ ಹಿಂದೆ ಮೈಸೂರು ಜಿಲ್ಲೆಯ ಹುಣಸೂರು ರಸ್ತೆಯಲ್ಲಿರುವ ಖಾಸಗಿ ಹೋಟೆಲ್‌ನಲ್ಲಿ ಆಶಿಕ್ ಜೊತೆಗೆ ಬಂದು ರೂಂ ಬಾಡಿಗೆ ಪಡೆದು ವಾಸ್ತಾವ್ಯ ಹೂಡಿದ್ದರು. ಆಶಿಕ್ ಆಗಾಗ್ಗೆ ಹೊರಗೆ ಹೋಗಿ ಮತ್ತೆ ಹೋಟೆಲ್‌ಗೆ ವಾಪಸ್ ಬರುತ್ತಿದ್ದ. ನಿನ್ನೆ ಬೆಳಗ್ಗೆ ಹೋಟೆಲ್ ನಿಂದ ಹೊರಟ ಆಶಿಕ್ ಮತ್ತೆ ವಾಪಸ್ ಹೋಟೆಲ್‌ಗೆ ಬಂದಿಲ್ಲ. ಆಕೆಯೂ ಸಹ ಹೋಟೆಲ್‌ನಿಂದಲೇ ಹೊರಬಂದಿರಲಿಲ್ಲ. ಇದರಿಂದ ಅನುಮಾನಗೊಂಡ ಹೋಟೆಲ್ ಸಿಬ್ಬಂದಿ ರೂಂನಲ್ಲಿದ್ದ ಇಂಟರ್ ಕಾಲ್‌ಗೆ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸಿದ್ದಾಗ ಆತಂಕಗೊಂಡು ತಕ್ಷಣ ದೇವರಾಜ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ದೇವರಾಜ ಠಾಣೆ ಪೊಲೀಸರು ಬಂದು ರೂಂ ತೆರೆದು ನೋಡಿದಾಗ ಅಪೂರ್ವ ಶೆಟ್ಟಿ ರೂಂನಲ್ಲಿ ಹೆಣವಾಗಿ ಬಿದ್ದಿದ್ದಾಳೆ. ಇದನ್ನೂ ಓದಿ: ಆಸ್ಪತ್ರೆ ದಾಖಲಾಗಿದ್ದ ಪದ್ಮಶ್ರೀ ಪುರಸ್ಕೃತೆಗೆ ಬಲವಂತವಾಗಿ ನೃತ್ಯ ಮಾಡಿಸಿದ ಸಾಮಾಜಿಕ ಕಾರ್ಯಕರ್ತೆ

    ಇನ್ನೂ ಅಪೂರ್ವ ಶೆಟ್ಟಿ ಸ್ನೇಹಿತರ ಮಾಹಿತಿ ಪ್ರಕಾರ ಆಶಿಕ್ ಮತ್ತು ಅಪೂರ್ವಶೆಟ್ಟಿ ಕಳೆದ ಹಲವು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು. ಕಳೆದ ಒಂದೂವರೆ ವರ್ಷದ ಹಿಂದೆ ಮನೆಯವರಿಗೆ ವಿಚಾರ ತಿಳಿದು ಜಗಳವಾಗಿತ್ತು. ಇಬ್ಬರಿಗೂ ಬುದ್ಧಿಮಾತು ಹೇಳಿ ದೂರ ಆಗುವಂತೆ ಹೇಳಿದ್ದರು. ಇದಾದ ಬಳಿಕವೂ ಆಕೆ ಆ ಹುಡುಗನ ಜೊತೆ ಸ್ನೇಹ ಮುಂದುವರಿಸಿದ್ದಾಳೆ. ಆಗಾಗ ಆತನ ಜೊತೆ ಸುತ್ತಾಡುತ್ತಿದ್ದಳು ಎಂದು ತಿಳಿದು ಬಂದಿರುವುದಾಗಿ ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಪ್ರದೀಪ್ ಗುಂಟಿ ತಿಳಿಸಿದ್ದಾರೆ.

    ಸದ್ಯ ಹೋಟೆಲ್‌ನಲ್ಲಿ ಒಟ್ಟಿಗೇ ಇದ್ದ ವೇಳೆ ಜಗಳ ನಡೆದು ಮಗಳು ಕೊಲೆಯಾಗಿರಬಹುದೆಂದು ಅಪೂರ್ವಶೆಟ್ಟಿ ತಂದೆ ದೇವರಾಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಪೊಲೀಸರು ಸ್ನೇಹಿತ ಆಶಿಕ್ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪ್ರೇಮಿ ಆಶಿಕ್ ಸಹ ಘಟನೆ ನಂತರ ಆತ್ಮಹತ್ಯೆಗೆ ಯತ್ನಿಸಿದ್ದ ಎಂಬುದಾಗಿ ಪೊಲೀಸರ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • 60 ಬಾರಿ ಚುಚ್ಚಿ ಚುಚ್ಚಿ ಕೊಂದ ಪಾತಕಿಗಳು- ಬುಧವಾರ ಹುಬ್ಬಳ್ಳಿಯಲ್ಲೇ ಚಂದ್ರಶೇಖರ್ ಗುರೂಜಿ ಅಂತ್ಯಕ್ರಿಯೆ

    60 ಬಾರಿ ಚುಚ್ಚಿ ಚುಚ್ಚಿ ಕೊಂದ ಪಾತಕಿಗಳು- ಬುಧವಾರ ಹುಬ್ಬಳ್ಳಿಯಲ್ಲೇ ಚಂದ್ರಶೇಖರ್ ಗುರೂಜಿ ಅಂತ್ಯಕ್ರಿಯೆ

    ಹುಬ್ಬಳ್ಳಿ: ಸರಳವಾಸ್ತು, ಮಾನವಗುರು ಖ್ಯಾತಿಯ ಚಂದ್ರಶೇಖರ ಗುರೂಜಿ ಅವರನ್ನು ಹುಬ್ಬಳ್ಳಿಯ ಖಾಸಗಿ ಹೋಟೆಲ್‍ನಲ್ಲಿ ಭೀಕರವಾಗಿ ಕೊಲ್ಲಲಾಗಿದೆ. ನಾಳೆ ಹುಬ್ಬಳ್ಳಿಯಲ್ಲೇ ಅಂತ್ಯಕ್ರಿಯೆ ನಡೆಯಲಿದೆ.

    58 ವರ್ಷದ ಚಂದ್ರಶೇಖರ್ ಗುರೂಜಿಯನ್ನು ಭೇಟಿ ಮಾಡಲು ಬಂದ ಅವರ ಮಾಜಿ ಆಪ್ತ ಸಹಾಯಕರು ಈ ಕೃತ್ಯ ಎಸಗಿದ್ದಾರೆ. ಮಧ್ಯಾಹ್ನ 12.23ರ ಸಮಯಲ್ಲಿ ಹೋಟೆಲ್ ರೂಂನಿಂದ ರಿಸೆಪ್ಶನ್‍ಗೆ ಬಂದ ಚಂದ್ರಶೇಖರ ಗುರೂಜಿ ಪಾದಕ್ಕೆ ಒಬ್ಬ ನಮಸ್ಕರಿಸುವ ಹೊತ್ತಲ್ಲೇ ಅಲ್ಲೇ ನಿಂತಿದ್ದ ಇನ್ನೊಬ್ಬ ಗುರೂಜಿ ಎದೆಗೆ ಚಾಕು ಹಾಕಿದ್ದ. ನಂತ್ರ ಇಬ್ರು ಸೇರಿಕೊಂಡು ಕೇವಲ 40 ಸೆಕೆಂಡ್‍ಗಳ ಅಂತರದಲ್ಲಿ 60ಕ್ಕೂ ಹೆಚ್ಚು ಬಾರಿ ಚುಚ್ಚಿ, ಕತ್ತು ಕೊಯ್ದು ಭೀಕರವಾಗಿ ಕೊಂದಿದ್ದಾರೆ.

    ರಕ್ತದ ಮಡುವಿನಲ್ಲಿ ವಿಲವಿಲ ಒದ್ದಾಡಿದ ಚಂದ್ರಶೇಖರ ಗುರೂಜಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹತ್ಯೆ ಬೆನ್ನಲ್ಲೇ ಇಬ್ಬರು ಹಂತಕರು ಅಲ್ಲಿಂದ ಹೊರಗೆ ಓಡಿದ್ದಾರೆ. ಈ ಎಲ್ಲಾ ಭೀಕರ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ತಕ್ಷಣ ಕಾರ್ಯಾಚರಣೆ ನಡೆಸಿದ ಪೊಲೀಸರು, ಕಾರಲ್ಲಿ ಮುಂಬೈಗೆ ಎಸ್ಕೇಪ್ ಆಗುತ್ತಿದ್ದ ಇಬ್ಬರು ಹಂತಕರಾದ ಧಾರವಾಡದ ಮಹಂತೇಶ್ ಶಿರೂರ ಮತ್ತು ಕಲಘಟಗಿಯ ಮಂಜುನಾಥ್‍ನನ್ನು ರಾಮದುರ್ಗ ಬಳಿ ಸಿನಿಮೀಯ ರೀತಿಯಲ್ಲಿ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಇದನ್ನೂ ಓದಿ: ಗುರೂಜಿ ಹತ್ಯೆ ಪ್ರಕರಣ- ರಸ್ತೆಯಲ್ಲಿ ಜೆಸಿಬಿ ಅಡ್ಡ ನಿಲ್ಲಿಸಿ, ಗನ್ ತೋರಿಸಿ ಹಂತಕರಿಗೆ ಬೇಡಿ ತೊಡಿಸಿದ ಖಾಕಿ

    ಮೊಬೈಲ್ ಲೋಕೇಷನ್ ಟವರ್ ಆಧರಿಸಿ ಬೆನ್ನಟ್ಟಿದ ಪೊಲೀಸರು ಆರೋಪಿಗಳು ಎಸ್ಕೇಪ್ ಆಗದಂತೆ ಸುತ್ತುವರೆದಿದ್ದಾರೆ. ರಸ್ತೆಗೆ ಅಡ್ಡಲಾಗಿ ಜೆಸಿಬಿ ನಿಲ್ಲಿಸಿ ಕಾರನ್ನು ತಡೆದ್ರು. ಆರೋಪಿಗಳು ಓಡಲು ಪ್ರಯತ್ನಿಸಿದಾಗ ರಾಮದುರ್ಗ ಡಿವೈಎಸ್ಪಿ ಶೂಟೌಟ್ ಮಾಡೋ ಎಚ್ಚರಿಕೆ ನೀಡಿ ಅರೆಸ್ಟ್ ಮಾಡಿದ್ರು. ಇದಕ್ಕೂ ಮುನ್ನ, ಮಹಂತೇಶ್ ಶಿರೂರ ಪತ್ನಿ ವನಜಾಕ್ಷಿಯನ್ನು ಪೊಲೀಸ್ರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ರು.

    ಹಂತಕರ ಬಂಧನ ನಂತ್ರ ವನಜಾಕ್ಷಿಯನ್ನು ಬಿಟ್ಟುಕಳಿಸಿದ್ರು. ಮುಂಬೈನಿಂದ ಕುಟುಂಬಸ್ಥರು ಹುಬ್ಬಳ್ಳಿಗೆ ಧಾವಿಸಿದ್ದು, ನಾಳೆ ಹುಬ್ಬಳ್ಳಿಯ ಸುಳ್ಳ ಗ್ರಾಮದ ರಸ್ತೆಯ ಫಾರಂಹೌಸ್‍ನಲ್ಲಿ ಚಂದ್ರಶೇಖರ್ ಗುರೂಜಿ ಅಂತ್ಯಕ್ರಿಯೆ ನಡೆಯಲಿದೆ. ಸರಳವಾಸ್ತು ಸಿಬ್ಬಂದಿ ಕಣ್ಣೀರಿಟ್ಟಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕೊಲೆ ಮಾಡಲು ಇಷ್ಟವಿಲ್ಲ, ಆದ್ರೆ ನಂಗೆ ಬೇರೆ ಆಯ್ಕೆ ಇಲ್ಲ – ಹೋಟೆಲಿನಲ್ಲಿ ಮಹಿಳೆಯ ಬರ್ಬರ ಹತ್ಯೆ

    ಕೊಲೆ ಮಾಡಲು ಇಷ್ಟವಿಲ್ಲ, ಆದ್ರೆ ನಂಗೆ ಬೇರೆ ಆಯ್ಕೆ ಇಲ್ಲ – ಹೋಟೆಲಿನಲ್ಲಿ ಮಹಿಳೆಯ ಬರ್ಬರ ಹತ್ಯೆ

    ಕೋಲ್ಕತ್ತಾ: ಖಾಸಗಿ ಹೋಟೆಲೊಂದರಲ್ಲಿ 20 ವರ್ಷದ ಮಹಿಳೆಯೊಬ್ಬಳು ಕೊಲೆಯಾಗಿರುವ ಘಟನೆ ಕೋಲ್ಕತ್ತಾದ ಪೂರ್ವ ಹೊರವಲಯದಲ್ಲಿ ನಡೆದಿದೆ.

    ಕೊಲೆಯಾಗಿರುವ ಮಹಿಳೆ ಕೊಠಡಿಯಲ್ಲಿ ಪೊಲೀಸರಿಗೆ ಬೆಂಗಾಲಿ ಭಾಷೆಯಲ್ಲಿ ಬರೆದ ಪತ್ರವೊಂದು ದೊರೆತಿದೆ. ನಿನ್ನನ್ನು ಕೊಲೆ ಮಾಡಲು ನನಗೆ ಇಷ್ಟವಿರಲಿಲ್ಲ, ಆದ್ರೆ ನನಗೆ ಬೇರೆ ಆಯ್ಕೆ ಇಲ್ಲ ಎಂದು ಸ್ಪಷ್ಟವಾಗಿ ಬರೆಯಲಾಗಿದೆ. ಅಲ್ಲದೆ ಹೊಡೆದು ಹೋದ ಮದ್ಯದ ಬಾಟ್ಲಿ ಕೂಡ ರೂಮ್‍ನಲ್ಲಿ ಪತ್ತೆಯಾಗಿದೆ.

    ಮಹಿಳೆ ತಂಗಿದ್ದ ಕೊಠಡಿಗೆ ಹೋಟೆಲ್ ಸಿಬ್ಬಂದಿಯೊಬ್ಬರು ಬಂದಿದ್ದು, ಮಹಿಳೆ ಹೆಣವಾಗಿ ಬಿದ್ದಿರುವುದನ್ನು ನೋಡಿದ್ದಾರೆ. ಕೂಡಲೇ ಪೊಲೀಸರಿಗೆ ಘಟನೆ ಕುರಿತಂತೆ ಮಾಹಿತಿ ನೀಡಿದ್ದಾರೆ.

    ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ತನಿಖೆ ನಡೆಸಿದಾಗ ವ್ಯಕ್ತಿಯೊಬ್ಬರ ಜೊತೆ ಮಹಿಳೆ ಹೋಟೆಲ್‍ಗೆ 1 ಗಂಟೆ ಸುಮಾರಿಗೆ ಬಂದಿದ್ದು, ಮಧ್ಯಾಹ್ನ 2 ಗಂಟೆ ಹೊತ್ತಿಗೆ ಊಟವನ್ನು ಆರ್ಡರ್ ಮಾಡಿದ್ದಾರೆ. ಹಾಗೂ 4 ಗಂಟೆಯ ಹೊತ್ತಿಗೆ ವ್ಯಕ್ತಿ ಹೋಟೆಲ್‍ನಿಂದ ಹೊರಟಿದ್ದಾನೆ. ಮಹಿಳೆ ಇದ್ದ ರೂಮ್‍ನಿಂದ ವ್ಯಕ್ತಿ ಹೊರಬಂದದ್ದನ್ನು ಮಹಿಳೆಯ ಪತಿ ನೋಡಿದ್ದಾರೆ.

    ಕೊಲೆಯಾದ ಮಹಿಳೆ ಹಾಗೂ ಆಕೆಯ ಪತಿ ಪಶ್ಚಿಮ ಮಿಡ್ನಾಪೋರ್ ಜಿಲ್ಲೆಯ ನಿವಾಸಿಗಳು ಎಂಬ ಮಾಹಿತಿ ದೊರೆತಿದ್ದು ಸದ್ಯ ಪೊಲೀಸರು ತನಿಖೆ ಆರಂಭಿಸಿದ್ದಾರೆ.