Tag: ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟ

  • ಉದ್ಯಮಿ ಮೋಹನ್ ದಾಸ್ ಪೈ ಮೇಲೆ FIR ಖಂಡನೀಯ – ಯಡಿಯೂರಪ್ಪ

    ಉದ್ಯಮಿ ಮೋಹನ್ ದಾಸ್ ಪೈ ಮೇಲೆ FIR ಖಂಡನೀಯ – ಯಡಿಯೂರಪ್ಪ

    ಬೆಂಗಳೂರು: ಉದ್ಯಮಿ ಮೋಹನ್ ದಾಸ್ ಪೈ (Mohan D ಮೇಲೆ ಎಫ್‌ಐಆರ್ ದಾಖಲಿಸಿರುವ ಸರ್ಕಾರದ ನಡೆಯನ್ನು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಖಂಡಿಸಿದ್ದಾರೆ.

    ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಮೋಹನ್ ದಾಸ್ ಅಂತಹ ಹಿರಿಯರ ಮೇಲೆ ಸುಳ್ಳು ಕಾರಣ ಹೇಳಿ, ಎಫ್‌ಐಆರ್ ಹಾಕುವ ಧೈರ್ಯ ಈ ಸರ್ಕಾರ ಮಾಡುತ್ತಿದೆ. ರಾಜಕೀಯದಿಂದ ದೂರ ಇರುವವರು ಈ ಸರ್ಕಾರದ ಬಗ್ಗೆ ಮಾತನಾಡಬಾರದು ಎನ್ನೋದು ಈ ಸರ್ಕಾರದ ಧೋರಣೆ ಎಂದು ದೂರಿದ್ದಾರೆ.ಇದನ್ನೂ ಓದಿ: ಬೈಕ್ ಟ್ಯಾಕ್ಸಿಗೆ ಬೆಂಬಲಿಸಿದ ಉದ್ಯಮಿ ಮೋಹನ್ ದಾಸ್ ಪೈ ವಿರುದ್ಧ ದೂರು

    ಸರ್ಕಾರದ ಬಗ್ಗೆ ಭಯ ಹುಟ್ಟಿಸುವ ವಾತಾವರಣ ತರುವ ಪ್ರಯತ್ನ ಈ ಸರ್ಕಾರ, ಸಿದ್ದರಾಮಯ್ಯ ಮಾಡುತ್ತಿದ್ದಾರೆ. ಇದಕ್ಕೆ ಡಿಕೆ ಶಿವಕುಮಾರ್ ಅವರು ಹೆಜ್ಜೆ ಹೆಜ್ಜೆಗೂ ಬೆಂಬಲ ಕೊಡುತ್ತಿದ್ದಾರೆ. ಇದನ್ನ ಖಂಡಿಸುತ್ತೇನೆ. ಈ ಎಲ್ಲಾ ಸಂಗತಿಗಳನ್ನು ಜನರಿಗೆ, ಕಾರ್ಯಕರ್ತರಿಗೆ ತಿಳಿಸಿ ರಾಜ್ಯಾದ್ಯಂತ ಹೋರಾಟ ರೂಪಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

    ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ನಿಷೇಧ ಸಂಬAಧ ಹೈಕೋರ್ಟ್ ಆದೇಶದ ಬಳಿಕ ಆರ್‌ಟಿಒ ಬೈಕ್ ಟ್ಯಾಕ್ಸಿ ವಿರುದ್ಧ ಸಮರ ಸಾರಿತ್ತು. ಆದರೆ ಬೈಕ್ ಟ್ಯಾಕ್ಸಿ ನಿಷೇಧ ವಿಚಾರವಾಗಿ ಪರ ವಿರೋಧ ಚರ್ಚೆಗಳು ಜೋರಾಗಿದ್ದು, ಈ ಮಧ್ಯೆ ಬೈಕ್ ಟ್ಯಾಕ್ಸಿ ಬೆಂಬಲಿಸಿ ಟ್ವೀಟ್ ಮಾಡಿದ್ದ ಉದ್ಯಮಿ ಮೋಹನ್ ದಾಸ್ ಪೈ ವಿರುದ್ಧ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟ ದೂರು ದಾಖಲಿಸಿತ್ತು.ಇದನ್ನೂ ಓದಿ: ದುಡ್ಡು ಕೊಟ್ಟರೆ ಮಾತ್ರ ವರ್ಕ್‌ ಆರ್ಡರ್‌: ಬಿಆರ್‌ ಪಾಟೀಲ್‌ ಬಳಿಕ ರಾಜು ಕಾಗೆ ದಂಗೆ

  • ಬೈಕ್ ಟ್ಯಾಕ್ಸಿಗೆ ಬೆಂಬಲಿಸಿದ ಉದ್ಯಮಿ ಮೋಹನ್ ದಾಸ್ ಪೈ ವಿರುದ್ಧ ದೂರು

    ಬೈಕ್ ಟ್ಯಾಕ್ಸಿಗೆ ಬೆಂಬಲಿಸಿದ ಉದ್ಯಮಿ ಮೋಹನ್ ದಾಸ್ ಪೈ ವಿರುದ್ಧ ದೂರು

    ಬೆಂಗಳೂರು: ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ (Bike Taxi) ನಿಷೇಧ ಸಂಬಂಧ ಹೈಕೋರ್ಟ್ ಆದೇಶದ ಬಳಿಕ ಆರ್‌ಟಿಒ ಬೈಕ್ ಟ್ಯಾಕ್ಸಿ ವಿರುದ್ಧ ಸಮರ ಸಾರಿದೆ. ಆದರೆ ಬೈಕ್ ಟ್ಯಾಕ್ಸಿ ನಿಷೇಧ ವಿಚಾರವಾಗಿ ಪರ ವಿರೋಧ ಚರ್ಚೆಗಳು ಜೋರಾಗಿದ್ದು, ಈ ಮಧ್ಯೆ ಬೈಕ್ ಟ್ಯಾಕ್ಸಿ ಬೆಂಬಲಿಸಿ ಟ್ವೀಟ್ ಮಾಡಿದ್ದ ಉದ್ಯಮಿ ಮೋಹನ್ ದಾಸ್ ಪೈ (Mohan Das Pai) ವಿರುದ್ಧ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟ ದೂರು ದಾಖಲು ಮಾಡಿದೆ.

    ರಾಜ್ಯ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಟರಾಜ್ ಶರ್ಮಾ ಇಂದು ವಿಧಾನಸೌಧ ಠಾಣೆಗೆ ದೂರು ನೀಡಿದ್ದಾರೆ. ಬಳಿಕ ಮಾತನಾಡಿದ ಒಕ್ಕೂಟದ ಅಧ್ಯಕ್ಷ ನಟರಾಜ್ ಶರ್ಮಾ, ಕಳೆದ ಏಪ್ರಿಲ್‌ನಲ್ಲಿ ಹೈಕೋರ್ಟ್ ಬೈಕ್ ಟ್ಯಾಕ್ಸಿ ರದ್ದು ಮಾಡಿ ಆದೇಶ ಮಾಡಿದೆ. ಆದರೂ ಉಲ್ಲಂಘನೆ ಮಾಡಿ ಪರೋಕ್ಷವಾಗಿ ಬೈಕ್ ಟ್ಯಾಕ್ಸಿ ನಡೆಸಲಾಗುತ್ತಿದೆ. ಈ ಮಧ್ಯೆ ಮೋಹನ್ ದಾಸ್ ಪೈ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವವರು ಬೈಕ್ ಟ್ಯಾಕ್ಸಿ ಬೆಂಬಲಿಸಿ ಟ್ವೀಟ್ ಮಾಡಿದ್ದಾರೆ. ಇವರಿಗೆ ಕಾನೂನಿನ ಕನಿಷ್ಠ ಜ್ಞಾನ ಇಲ್ಲವೇ? ನ್ಯಾಯಾಲಯದ ಆದೇಶ ಇದ್ದರೂ ಬೈಕ್ ಟ್ಯಾಕ್ಸಿ ಪರ ಟ್ವೀಟ್ ಮಾಡಿ ಪ್ರವೋಕ್ ಮಾಡಿದ್ದಾರೆ. ಬನ್ನಿ ಚರ್ಚೆ ಮಾಡೋಣ. ಬೈಕ್ ಟ್ಯಾಕ್ಸಿಯಿಂದ ಏನೆಲ್ಲಾ ಸಮಸ್ಯೆಗಳು ಆಗುತ್ತೆ ಎಂದು ಹೇಳುತ್ತೇವೆ ಎಂದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: America Strikes | ನೊಬೆಲ್ ಶಾಂತಿ ಪ್ರಶಸ್ತಿಗೆ ಟ್ರಂಪ್ ಬೆಂಬಲಿಸಿದ್ದ ಪಾಕ್‌ನಿಂದ ಇರಾನ್‌ ಮೇಲಿನ ದಾಳಿ ಖಂಡನೆ

    ಇನ್ನೂ ಕೆಲವು ಬೈಕ್ ಟ್ಯಾಕ್ಸಿ ಚಾಲಕರು, ಫ್ರೀಡಂ ಪಾರ್ಕ್ ಬಿಟ್ಟು ಬೇರೆಲ್ಲೂ ಪ್ರತಿಭಟನೆಗೆ ಅವಕಾಶ ಇಲ್ಲ ಎಂಬುದು ಗೊತ್ತಿದ್ದರೂ, ವಿಧಾನಸೌಧದ ಮುಂದೆ ಪ್ರತಿಭಟನೆ ಮಾಡಿದ್ದಾರೆ. ಇದು ಕಾನೂನಿನ ಉಲ್ಲಂಘನೆ. ಟ್ವೀಟ್ ಮಾಡಿದ ಮೋಹನ್ ದಾಸ್ ಪೈ ಹಾಗೂ ಪ್ರತಿಭಟನೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲು ದೂರು ನೀಡಿದ್ದೇನೆ. ಈಗಾಗಲೇ ಪೊಲೀಸರು ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದರು. ಇದನ್ನೂ ಓದಿ: ಮಳೆ ಅಬ್ಬರ – ಮುರುಡೇಶ್ವರದಲ್ಲಿ ಕಡಲ ತೀರಕ್ಕೆ ನಿಷೇಧ

    ಬೈಕ್ ಟ್ಯಾಕ್ಸಿ ನಿಂತಮೇಲೆ ಆಟೋದವರು ಹೆಚ್ಚು ಹಣ ಪಡೆಯುತ್ತಿದ್ದಾರೆ ಎಂದು ಸುದ್ದಿ ಹಬ್ಬಿಸಲಾಗುತ್ತಿದೆ. ಈ ರೀತಿ ಇದ್ದರೆ ರಿಯಾಲಿಟಿ ಚೆಕ್ ಆಗಲಿ, ಅವರ ವಿರುದ್ಧ ಕ್ರಮ ಆಗಲಿ. ದರ ನಿಗದಿ ಡ್ರೈವರ್‌ಗಳ ಕೈಯಲ್ಲಿ ಇಲ್ಲ. ಎಲ್ಲವೂ ಆಪ್ ಕಾರ್ಪೋರೇಟ್ ಕಂಪನಿಗಳ ಕೈಯಲ್ಲಿದೆ. ಸರ್ಕಾರದ ದರವನ್ನ ಆರ್‌ಟಿಒ ಜಾರಿ ಮಾಡಲಿ. ಅದರ ಉದ್ದೇಶ ನಿಜಕ್ಕೂ ಇದ್ದರೆ ಸಾರಿಗೆ ಇಲಾಖೆ ಕಾರ್ಪೋರೇಟ್ ಕಂಪನಿಗಳ ವಿರುದ್ಧ ದೂರು ನೀಡಲಿ. ಕಾನೂನು ವಿರುದ್ಧ ಹೇಳಿಕೆ ಕೊಡುವವರ ವಿರುದ್ಧ ಕ್ರಮ ಆಗಬೇಕು. ನ್ಯಾಯಾಲಯದ ಆದೇಶ ಇರುವುದರಿಂದ ಯಾವ ಪ್ರತಿಭಟನೆ ಆಗಿಲ್ಲ. ಈಗ ಪ್ರಕರಣ ನ್ಯಾಯಾಲಯದಲ್ಲಿ ಇದೆ. ಬೈಕ್ ಟ್ಯಾಕ್ಸಿಯವರು ಸುಪ್ರೀಂ ಕೋರ್ಟ್‌ಗೆ ಹೋಗಲಿ, ಅಲ್ಲಿ ಡಿಸೈಡ್ ಆಗಲಿ. ಆದರೆ ಕಾರ್ಪೋರೇಟ್ ಕಂಪನಿಯವರ ಮಾತು ಕೇಳಿ ಬೈಕ್ ಟ್ಯಾಕ್ಸಿ ಓಡಿಸೋರು ಪ್ರತಿಭಟನೆ ಮಾಡುತ್ತಿದ್ದಾರೆ. ಬೈಕ್ ಟ್ಯಾಕ್ಸಿ ಓಡಿಸುವವರು ಹುಷಾರಾಗಿರಿ. ಕಂಪನಿಯವರು ಪ್ರೇರಣೆ ಕೊಟ್ಟು ನಿಮ್ಮನ್ನು ಕ್ರಿಮಿನಲ್‌ಗಳನ್ನಾಗಿ ಮಾಡುತ್ತಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ರಾಜ್ಯ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಜನ ಬೀದಿ-ಬೀದಿಗಳಲ್ಲಿ ಮಾತಾಡ್ತಿದ್ದಾರೆ: ಹೆಚ್‌ಡಿಕೆ