Tag: ಖಾಸಗಿ ಶಾಲೆಗಳು

  • ಸರ್ಕಾರದ ನಿರ್ಲಕ್ಷ್ಯಕ್ಕೆ ಸರ್ಕಾರಿ ಶಾಲೆಗಳಿಗೆ ಆಪತ್ತು – ಜಿಲ್ಲೆಯಲ್ಲಿ 579 ಶಾಲೆಗಳಲ್ಲಿ 10ಕ್ಕಿಂತ ಕಡಿಮೆ ದಾಖಲಾತಿ

    ಸರ್ಕಾರದ ನಿರ್ಲಕ್ಷ್ಯಕ್ಕೆ ಸರ್ಕಾರಿ ಶಾಲೆಗಳಿಗೆ ಆಪತ್ತು – ಜಿಲ್ಲೆಯಲ್ಲಿ 579 ಶಾಲೆಗಳಲ್ಲಿ 10ಕ್ಕಿಂತ ಕಡಿಮೆ ದಾಖಲಾತಿ

    ಹಾಸನ: ಸರ್ಕಾರದ ನಿರ್ಲಕ್ಷ್ಯ, ಮೂಲ ಸೌಕರ್ಯಗಳ ಕೊರತೆ, ಪೋಷಕರ ಇಂಗ್ಲೀಷ್ ವ್ಯಾಮೋಹ, ಶಿಕ್ಷಕರ ಕೊರತೆಯಿಂದಾಗಿ ವರ್ಷದಿಂದ ವರ್ಷಕ್ಕೆ ಮಕ್ಕಳ ದಾಖಲಾತಿ ಸಂಖ್ಯೆ ಗಣನೀಯವಾಗಿ ಇಳಿಕೆಯಾಗುತ್ತಿರುವ ಪರಿಣಾಮ ಸರ್ಕಾರಿ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿವೆ.

    ಹಾಸನ ಜಿಲ್ಲೆಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 7 ಸಾವಿರ ಮಕ್ಕಳು ಸರ್ಕಾರಿ ಶಾಲೆಯಿಂದ ಹೊರನಡೆದಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಹಾಸನ ಜಿಲ್ಲೆಯಲ್ಲಿ 35 ಶಾಲೆಗಳನ್ನು ಬಂದ್‌ ಮಾಡಲಾಗಿದೆ. ಪ್ರಸಕ್ತ ವರ್ಷವೂ ಸಹ ಈ ಸಂಖ್ಯೆಯಲ್ಲಿ ಏರಿಕೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಹಾಸನ ಜಿಲ್ಲೆಯಲ್ಲಿ 1,249 ಕಿರಿಯ ಪ್ರಾಥಮಿಕ ಶಾಲೆ, 969 ಹಿರಿಯ ಪ್ರಾಥಮಿಕ ಶಾಲೆ, 241 ಪ್ರೌಢ ಶಾಲೆ ಸೇರಿ 2,249 ಸರ್ಕಾರಿ ಶಾಲೆಗಳಿವೆ. ಇವುಗಳಲ್ಲಿ 579 ಶಾಲೆಗಳಲ್ಲಿ 10ಕ್ಕಿಂತ ಕಡಿಮೆ ಮಕ್ಕಳು ದಾಖಲಾಗಿದ್ದರೆ, 681 ಶಾಲೆಯಲ್ಲಿ 20ಕ್ಕಿಂತ ಕಡಿಮೆ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇದನ್ನೂ ಓದಿ: 2002ರ ಗುಜರಾತ್‌ ಗಲಭೆಯೇ ದೇಶದ ಅತಿದೊಡ್ಡ ಗಲಭೆಯಲ್ಲ – ರೈಲು ದುರಂತ ಸ್ಮರಿಸಿದ ಮೋದಿ

    2023-24ನೇ ಸಾಲಿನಲ್ಲಿ ಜಿಲ್ಲಾದ್ಯಂತ 86,231 ವಿದ್ಯಾರ್ಥಿಗಳು ಸರ್ಕಾರಿ ಶಾಲೆಯಲ್ಲಿ ಪ್ರವೇಶ ಪಡೆದಿದ್ದಾರೆ. 2024-25ನೇ ಸಾಲಿಗೆ ಮಕ್ಕಳ ಸಂಖ್ಯೆ 79,283ಕ್ಕೆ ಇಳಿಕೆ ಕಂಡಿದ್ದು, ಒಂದು ವರ್ಷದಲ್ಲಿ 6,948 ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಕಡಿಮೆಯಾಗಿದೆ. ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿದ್ದು ಒಬ್ಬರೇ ಶಿಕ್ಷಕರಿರುವ ಶಾಲೆಗಳ ಸಂಖ್ಯೆ 150ಕ್ಕೂ ಹೆಚ್ಚಿದೆ. ಒಂದರಿಂದ 7ನೇ ತರಗತಿಯವರೆಗೆ ಒಬ್ಬ ಶಿಕ್ಷಕ ಅಥವಾ ಓರ್ವ ಶಿಕ್ಷಕಿ ಪಾಠ ಮಾಡುತ್ತಿದ್ದಾರೆ. ಇದರಿಂದಾಗಿ ಪೋಷಕರು ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಿದ್ದಾರೆ. ಸರ್ಕಾರಿ ಶಾಲೆಗಳ ಉಳಿವಿಗಾಗಿ ಸರ್ಕಾರ ಹತ್ತಾರು ಯೋಜನೆ ರೂಪಿಸುತ್ತಿದೆ. ಆದರೂ ವಿದ್ಯಾರ್ಥಿಗಳ ಹಾಜರಾತಿಯಲ್ಲಿ ಸುಧಾರಣೆಯಾಗದೆ ಜ್ಞಾನ ದೇಗುಲಗಳನ್ನು ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನೂ ಓದಿ: ಆರ್‌ಎಸ್‌ಎಸ್‌ಗಿಂತ ದೊಡ್ಡ ಸ್ವಯಂಸೇವ ಸಂಘ ವಿಶ್ವದಲ್ಲಿಲ್ಲ: ಮೋದಿ ಗುಣಗಾನ

    ಕಡಿಮೆ ದಾಖಲಾತಿ ಹೊಂದಿರುವ ಶಾಲೆಗಳ ಪಟ್ಟಿ ಸಿದ್ಧಪಡಿಸಿಕೊಂಡಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ಸರ್ಕಾರಕ್ಕೆ ವರದಿ ಸಲ್ಲಿಸಲು ಸಿದ್ಧತೆ ನಡೆಸಿದೆ. ಇದರ‌ ಜೊತೆಗೆ ಅವಶ್ಯವಿರುವ ಕಡೆ ಅಕ್ಕಪಕ್ಕದ ಶಾಲೆಗಳ ಸಂಯೋಜನೆಗೆ ಕ್ರಮ ಕೈಗೊಂಡಿದೆ. ಸರ್ಕಾರಿ ಶಾಲೆಗಳಲ್ಲಿ ಫಲಿತಾಂಶ ಸುಧಾರಣೆ ಹಾಗೂ ಮಕ್ಕಳ ಶೈಕ್ಷಣಿಕ ಪ್ರಗತಿಯಾಗದ ಹಿನ್ನಲೆಯಲ್ಲಿ ಪೋಷಕರು ಕಷ್ಟವಾದರೂ ಸರಿ ಖಾಸಗಿ ಶಾಲೆಯೇ ಉತ್ತಮ ಎನ್ನುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಿಗೆ ಪಾಠ ಬೋಧನೆ ಮಾತ್ರವಲ್ಲದೇ ಸರ್ಕಾರ ಅವರಿಗೆ ಸಂಬಂಧವಿಲ್ಲದ ಹೆಚ್ಚುವರಿ ಕೆಲಸಗಳನ್ನು ವಹಿಸುವುದರಿಂದ ಪಠ್ಯ ಬೋಧನೆಗೆ ಸಮಯ ನೀಡಲು ಸಾಧ್ಯವಾಗುತ್ತಿಲ್ಲ. ಕಾಟಾಚಾರಕ್ಕೆ ಎಂಬಂತೆ ಮಕ್ಕಳು ಶಾಲೆಗೆ ಹೋಗುತ್ತಾರೆ. ಆದ್ದರಿಂದ ಪೋಷಕರು ಗುಣಮಟ್ಟದ ಶಿಕ್ಷಣ ಸಿಗುತ್ತದೆ ಎಂಬ ಕಾರಣಕ್ಕೆ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ದಾಖಲಿಸುತ್ತಿದ್ದಾರೆ ಎಂಬುದು ಎಲ್ಲರ ಅಭಿಪ್ರಾಯವಾಗಿದೆ. ಇದನ್ನೂ ಓದಿ: ಇಂದಿರಾ ಗಾಂಧಿ ವಿರುದ್ಧ ಘೋಷಣೆ ಕೂಗಿದ್ದಕ್ಕೆ ನನ್ನನ್ನು 7 ದಿನ ಜೈಲಿಗೆ ಹಾಕಿದ್ದರು: ಅಮಿತ್‌ ಶಾ

  • ಸ್ವಾತಂತ್ರ್ಯ ದಿನಾಚರಣೆಯಂದು ಕರಾಳ ದಿನ ಆಚರಿಸಲು ಮುಂದಾದ ಖಾಸಗಿ ಶಾಲೆಗಳು

    ಸ್ವಾತಂತ್ರ್ಯ ದಿನಾಚರಣೆಯಂದು ಕರಾಳ ದಿನ ಆಚರಿಸಲು ಮುಂದಾದ ಖಾಸಗಿ ಶಾಲೆಗಳು

    ಬೆಂಗಳೂರು: ಸರ್ಕಾರ ಮತ್ತು ಶಿಕ್ಷಣ ಇಲಾಖೆ ಖಾಸಗಿ ಶಾಲೆಗಳನ್ನ ನಿಯಮಗಳ ಹೆಸರಿನಲ್ಲಿ ಹಿಂಸೆ ಮಾಡುತ್ತಿವೆ ಎಂದು ಆರೋಪಿಸಿ ಖಾಸಗಿ ಶಾಲೆಗಳು ಸರ್ಕಾರದ ವಿರುದ್ಧ ಹೋರಾಟ ನಡೆಸುವ ಘೋಷಣೆ ಮಾಡಿವೆ. ಆ.15 ರಂದು ಖಾಸಗಿ ಶಾಲೆಗಳಲ್ಲಿ ಕರಾಳ ಸ್ವಾತಂತ್ರ್ಯ ದಿನಾಚರಣೆ ಮಾಡುತ್ತೇವೆ ಎಂದು ಘೋಷಣೆ ಮಾಡಿವೆ.

    ಖಾಸಗಿ ಹೊಟೇಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕ್ಯಾಮ್ಸ್, ಕುಸ್ಮಾ, ಕುಂಸಾ, ಮಾಸ್ ಸೇರಿ ಹಲವು ಖಾಸಗಿ ಶಾಲೆಗಳ ಸಂಘಟನೆಗಳು ಭಾಗಿಯಾಗಿ ಸರ್ಕಾರದ ವಿರುದ್ಧ ಕಿಡಿಕಾರಿದವು. ಅಗ್ನಿಶಾಮಕ ಪ್ರಮಾಣ ಪತ್ರ, ಭೂನಕ್ಷೆ ಮಂಜೂರು, ಭೂ ಪರಿವರ್ತನೆ ಸೇರಿ ಹಲವು ಪ್ರಮಾಣ ಪತ್ರ ನೀಡಲು ಶಿಕ್ಷಣ ಇಲಾಖೆಯಲ್ಲಿ ಹಿಂಸೆ ಆಗ್ತಿದೆ. ಕೋರ್ಟ್ ನಿಯಮ ಮೀರಿ ಶಿಕ್ಷಣ ಇಲಾಖೆ ನಡೆದುಕೊಳ್ತಿದೆ. 2017-18ರ ಒಳಗೆ ನಿರ್ಮಾಣವಾದ ಶಾಲೆಗಳಿಗೂ ನಿಯಮಗಳನ್ನು ಹಾಕುತ್ತಿದ್ದಾರೆ. ಶಿಕ್ಷಣ ಇಲಾಖೆ ಅಧಿಕಾರಗಳು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದು, ಭ್ರಷ್ಟಾಚಾರ ಮಾಡಲೇ ಇಂತಹ ನಿಯಮ ಖಾಸಗಿ ಶಾಲೆಗಳ ಮೇಲೆ ಹೇರಲಾಗಿದೆ ಎಂದು ಖಾಸಗಿ ಶಾಲೆಗಳು ಆರೋಪಿಸಿದವು. ಇದನ್ನೂ ಓದಿ: ಪ್ರತಿದಿನ ಪೊಲೀಸ್ ಅಧಿಕಾರಿಗಳು ಕಲೆಕ್ಷನ್ ಮಾಡ್ಲೇಬೇಕು: ಭಾಸ್ಕರ್ ರಾವ್ ಬೇಸರ

    ಕ್ಯಾಮ್ಸ್ ಕಾರ್ಯದರ್ಶಿ ಶಶಿಕುಮಾರ್ ಮಾತನಾಡಿ, ಸಿಎಂ, ಶಿಕ್ಷಣ ಸಚಿವರಿಗೂ ಈ ಬಗ್ಗೆ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಿಲ್ಲ. ಮಧು ಬಂಗಾರಪ್ಪ ಅತ್ಯಂತ ದುರ್ಬಲ ಶಿಕ್ಷಣ ಸಚಿವ. ಕೂಡಲೇ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹ ಮಾಡಿದ್ದೆವು. ಸರ್ಕಾರಕ್ಕೆ ಈಗಾಗಲೇ ಎಲ್ಲಾ ಮಾಹಿತಿ ನೀಡಿದ್ದೇವೆ. ಹೀಗಿದ್ದರೂ ನಮ್ಮ ಮೇಲೆ ದಬ್ಬಾಳಿಕೆ ಮಾಡಲು ಮುಂದಾಗಿದ್ದು, ಸರ್ಕಾರ, ಶಿಕ್ಷಣ ಇಲಾಖೆ ನೀತಿ ಖಂಡಿಸಿ ಸ್ವಾತಂತ್ರ್ಯ ದಿನಾಚರಣೆಯನ್ನ ಕರಾಳ ದಿನಾಚರಣೆಯಾಗಿ ಆಚರಣೆ ಮಾಡ್ತೀವಿ‌ ಎಂದರು.

    ಅಂದು ಸುಮಾರು 8 ಸಾವಿರ ಖಾಸಗಿ ಶಾಲೆಗಳ ಶಿಕ್ಷಕರು ಕಪ್ಪು ಪಟ್ಟಿ ಧರಿಸಿ ಸ್ವಾತಂತ್ರ್ಯ ದಿನ ಆಚರಣೆ ಮಾಡುತ್ತೇವೆ ಎಂದರು. ಸರ್ಕಾರ ಸಮಸ್ಯೆಗೆ ಪರಿಹಾರ ನೀಡದೇ ಹೋದರೆ ಶಿಕ್ಷಕರ ದಿನಾಚರಣೆಯನ್ನು ಕರಾಳ ದಿನವಾಗಿ ಆಚರಿಸುವುದಾಗಿ ಎಚ್ಚರಿಕೆ ನೀಡಿದ್ದರು. ಇದನ್ನೂ ಓದಿ: ಇಂದಿನಿಂದ ಗೃಹಲಕ್ಷ್ಮಿಯರ ಖಾತೆಗೆ ಹಣ: ಲಕ್ಷ್ಮಿ ಹೆಬ್ಬಾಳ್ಕರ್‌ ಘೋಷಣೆ

  • ಹಣಕಾಸು ಕೊರತೆಯ ನೆಪ ಬೇಡ; 6 ಮತ್ತು 7ನೇ ವೇತನ ಆಯೋಗ ಶಿಫಾರಸಿನನ್ವಯ ಶಿಕ್ಷಕರಿಗೆ ವೇತನ ನೀಡಿ: ಹೈಕೋರ್ಟ್‌ ಆದೇಶ

    ಹಣಕಾಸು ಕೊರತೆಯ ನೆಪ ಬೇಡ; 6 ಮತ್ತು 7ನೇ ವೇತನ ಆಯೋಗ ಶಿಫಾರಸಿನನ್ವಯ ಶಿಕ್ಷಕರಿಗೆ ವೇತನ ನೀಡಿ: ಹೈಕೋರ್ಟ್‌ ಆದೇಶ

    ನವದೆಹಲಿ: ಖಾಸಗಿ ಶಾಲೆಗಳು ಆರನೇ ಮತ್ತು ಏಳನೇ ಕೇಂದ್ರ ವೇತನ ಆಯೋಗಗಳ (CPC) ಶಿಫಾರಸುಗಳನ್ನು ಜಾರಿಗೊಳಿಸಬೇಕು ಮತ್ತು ತಮ್ಮ ಬೋಧಕ, ಬೋಧಕೇತರ ಸಿಬ್ಬಂದಿಗೆ ಕಡ್ಡಾಯ ವೇತನ ಮತ್ತು ಇತರ ಪ್ರಯೋಜನಗಳನ್ನು ನೀಡಬೇಕು ಎಂದು ದೆಹಲಿ ಹೈಕೋರ್ಟ್ (Delhi HighCourt) ಆದೇಶಿಸಿದೆ.

    ರಾಷ್ಟ್ರ ರಾಜಧಾನಿಯ ವಿವಿಧ ಖಾಸಗಿ ಶಾಲೆಗಳ (Private Schools) ಬೋಧಕ ಮತ್ತು ಬೋಧಕೇತರ ಉದ್ಯೋಗಿಗಳು 6ನೇ ಮತ್ತು 7ನೇ ವೇತನ ಆಯೋಗಗಳ ಪ್ರಯೋಜನಗಳನ್ನು ಮತ್ತು ಬಡ್ಡಿಯೊಂದಿಗೆ ತಮ್ಮ ಬಾಕಿಗಳ ಪಾವತಿಸುವಂತೆ ಮತ್ತು ಇತರ ಪ್ರಯೋಜನಗಳನ್ನು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಆದೇಶ ನೀಡಿದ ನ್ಯಾಯಮೂರ್ತಿ ಚಂದ್ರ ಧಾರಿ ಸಿಂಗ್ ಅವರು ವೇತನ ಆಯೋಗಗಳ (Planning Commission of India) ಶಿಫಾರಸಿನ ಪ್ರಕಾರ ಖಾಸಗಿ ಶಾಲೆಗಳ ನೌಕರರು ವೇತನ ಪಡೆಯುವ ಹಕ್ಕನ್ನು ಹೊಂದಿದ್ದಾರೆ, ಶಾಲೆಗಳು ತಮ್ಮ ಸಿಬ್ಬಂದಿಗೆ ಈ ಪ್ರಯೋಜನಗಳನ್ನು ನಿರಾಕರಿಸಲು ಹಣದ ಕೊರತೆಯ ನೆಪವನ್ನು ಉಲ್ಲೇಖಿಸಬಾರದು ಎಂದು ತಾಕೀತು ಮಾಡಿದೆ. ಇದನ್ನೂ ಓದಿ: ಮತ್ತೆ ಅವಕಾಶ ಸಿಕ್ಕರೆ ಬಿಗ್ ಬಾಸ್ ಮನೆಗೆ ಹೋಗ್ತೀನಿ : ಇಶಾನಿ

    ವೇತನ ಆಯೋಗಗಳ ಶಿಫಾರಸುಗಳ ಪ್ರಕಾರ ಅನುದಾನರಹಿತ ಅಲ್ಪಸಂಖ್ಯಾತ ಶಾಲೆಗಳು ಸಹ ತಮ್ಮ ಉದ್ಯೋಗಿಗಳಿಗೆ ವೇತನ ಮತ್ತು ಇತರ ಸೌಲಭ್ಯಗಳನ್ನು ಪಾವತಿಸಬೇಕು ಎಂದು ನ್ಯಾಯಮೂರ್ತಿ ಸಿಂಗ್ ಸ್ಪಷ್ಟಪಡಿಸಿದರು. 6ನೇ ಮತ್ತು 7ನೇ ವೇತನ ಆಯೋಗಗಳು ಸೂಚಿಸಿದ ಶಿಫಾರಸುಗಳು ಮತ್ತು ಮಾರ್ಗಸೂಚಿಗಳ ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡಲು ಉನ್ನತ ಅಧಿಕಾರದ ಸಮಿತಿಗಳನ್ನು (ಎಚ್‌ಪಿಸಿ) ರಚಿಸುವಂತೆ ನ್ಯಾಯಾಲಯವು ದೆಹಲಿ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಇದನ್ನೂ ಓದಿ: ದೆಹಲಿಯಲ್ಲಿ ತಗ್ಗಿದ ವಾಯು ಮಾಲಿನ್ಯ – ಶಾಲೆ, ಕಾಲೇಜುಗಳು ಪುನಾರಂಭ

    ರಾಜ್ಯ ಮತ್ತು ಕೇಂದ್ರ ಮಟ್ಟದಲ್ಲಿ ಎಚ್‌ಪಿಸಿ ರಚನೆಯಾಗಲಿದೆ. ಕೇಂದ್ರ ಸಮಿತಿಯು ದೆಹಲಿಯ ಶಿಕ್ಷಣ ಕಾರ್ಯದರ್ಶಿಯ ನೇತೃತ್ವದಲ್ಲಿರುತ್ತದೆ. ಅಲ್ಲದೇ ಅದರ ಸದಸ್ಯರಲ್ಲಿ ಶಾಲೆಗಳ ಒಬ್ಬ ಪ್ರತಿನಿಧಿಯನ್ನು ಸಹ ಹೊಂದಿರುತ್ತದೆ. ವಲಯ ಸಮಿತಿಯು ವಲಯ ಶಿಕ್ಷಣಾಧಿಕಾರಿಗಳ ನೇತೃತ್ವದಲ್ಲಿದ್ದು, ಇದು ಶುಲ್ಕ ಹೆಚ್ಚಳ, ವೇತನಗಳು ಮತ್ತು ಇತರ ಪ್ರಯೋಜನಗಳ ಸಮಸ್ಯೆಯನ್ನು ಬಗೆಹರಿಸುತ್ತದೆ. ಈ ಸಮಿತಿಯು ತನ್ನ ಸಂಶೋಧನೆಗಳನ್ನು ಕೇಂದ್ರ ಸಮಿತಿಗೆ ಶಿಫಾರಸು ಮಾಡುತ್ತದೆ. ಇದನ್ನೂ ಓದಿ: ಗಾಜಾದ ಆಸ್ಪತ್ರೆಯನ್ನೇ ಉಗ್ರ ಚಟುವಟಿಕೆಗಳ ತಾಣವಾಗಿಸಿದ ಹಮಾಸ್- ಇಸ್ರೇಲ್ ವೀಡಿಯೋ ಸಾಕ್ಷಿ

    ವಿಚಾರಣೆ ವೇಳೆ ಖಾಸಗಿ ಶಾಲೆಗಳ ಮಾಲೀಕರು ವೇತನ ಆಯೋಗಗಳ ಶಿಫಾರಸಿನ ಪ್ರಕಾರ ಅರ್ಜಿದಾರರು ವೇತನ ಮತ್ತು ವೇತನಕ್ಕೆ ಅರ್ಹರಾಗಿದ್ದಾರೆ ಎಂದು ಒಪ್ಪಿಕೊಂಡಿದ್ದರೂ, ಹಣದ ಕೊರತೆಯಿಂದಾಗಿ ಪಾವತಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಶುಲ್ಕ ಹೆಚ್ಚಳದ ಪ್ರಸ್ತಾವನೆಯನ್ನು ಶಾಲೆಗಳು ಶಿಕ್ಷಣ ಇಲಾಖೆಗೆ ಕಳುಹಿಸಿದ್ದರೂ ಅದನ್ನು ತಿರಸ್ಕರಿಸಲಾಗಿದೆ ಎಂದು ವಾದಿಸಲಾಯಿತು. ಶುಲ್ಕ ಹೆಚ್ಚಿಸಲು ಅನುಮತಿ ನೀಡುವವರೆಗೆ ಶಿಕ್ಷಕರಿಗೆ, ಸಿಬ್ಬಂದಿಗೆ ಪರಿಷ್ಕೃತ ವೇತನ ನೀಡುವುದಿಲ್ಲ ಎಂದು ಅವರು ವಾದಿಸಿದರು. ಆದಾಗ್ಯೂ, ನ್ಯಾಯಾಲಯವು ಈ ವಾದಗಳನ್ನು ತಿರಸ್ಕರಿಸಿತು.

  • ಅನಧಿಕೃತ ಖಾಸಗಿ ಶಾಲೆಗಳ ತೆರವಿಗೆ ಕ್ರಮ- ಎಲ್ಲ ಶಾಲೆಗಳಿಗೂ ಈ ನಿಯಮ ಕಡ್ಡಾಯ

    ಅನಧಿಕೃತ ಖಾಸಗಿ ಶಾಲೆಗಳ ತೆರವಿಗೆ ಕ್ರಮ- ಎಲ್ಲ ಶಾಲೆಗಳಿಗೂ ಈ ನಿಯಮ ಕಡ್ಡಾಯ

    – 40 ಪರ್ಸೆಂಟ್ ಕಮಿಷನ್ ಆರೋಪದ ಬೆನ್ನಲ್ಲೇ ಎಚ್ಚೆತ್ತ ಸರ್ಕಾರ

    ಬೆಂಗಳೂರು: ಖಾಸಗಿ ಶಾಲೆಗಳಿಂದಲೂ 40 ಪರ್ಸೆಂಟ್ ಕಮಿಷನ್ ಪಡೆಯುತ್ತಿರುವುದಾಗಿ ಆರೋಪ ಕೇಳಿಬಂದ ಬೆನ್ನಲ್ಲೇ ಎಚ್ಚೆತ್ತ ರಾಜ್ಯಸರ್ಕಾರ ಅನಧಿಕೃತ ಖಾಸಗಿ ಶಾಲೆಗಳ ವಿರುದ್ಧ ಸಮರ ಸಾರಿದೆ.

    ಸಾಂದರ್ಭಿಕ ಚಿತ್ರ

    ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಆಪರೇಷನ್ ಕ್ಲೀನ್ ಅಭಿಯಾನ ಶುರು ಮಾಡಿದ್ದು, ಅನುಮತಿಯಿಲ್ಲದೇ ನಡೆಸುತ್ತಿರುವ ಖಾಸಗಿ ಶಾಲೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ. ರಾಜ್ಯದಲ್ಲಿ ನೂರಾರು ಅನಧಿಕೃತ ಖಾಸಗಿ ಶಾಲೆಗಳು ತಲೆ ಎತ್ತಿದ್ದು, ಅವುಗಳ ತೆರವಿಗೆ ಕ್ರಮ ಕೈಗೊಳ್ಳಲಾಗಿದೆ. ಇದನ್ನೂ ಓದಿ: ಬೆಂಗ್ಳೂರಿನ ಖಾಸಗಿ ಶಾಲೆಗಳಲ್ಲಿ ರಾಷ್ಟ್ರಗೀತೆಗೆ ಅಪಮಾನ

    ದಾಖಲಾತಿ ಇಲ್ಲದ ಹಾಗೂ ಅನುಮತಿ ಪಡೆಯದೇ ನಡೆಸುತ್ತಿರೋ ಅನಧಿಕೃತ ಶಾಲೆಗಳ ವಿರುದ್ಧ ವರದಿ ಸಿದ್ಧಪಡಿಸಲಾಗಿದ್ದು, ಅಂತಹ ಶಾಲೆಗಳನ್ನು ಬಂದ್ ಮಾಡಲು ಇಲಾಖೆ ದಿಟ್ಟ ನಡೆ ತೆಗೆದುಕೊಂಡಿದೆ.

    ಶಾಸಗಿ ಶಾಲೆಗಳಿಗೆ ಈ ನಿಯಮ ಕಡ್ಡಾಯ: ಖಾಸಗಿ ಶಾಲೆಗಳನ್ನು ಪ್ರಾರಂಭಿಸಲು ಕಡ್ಡಾಯವಾಗಿ ಶಿಕ್ಷಣ ಇಲಾಖೆಯಿಂದ ಅನುಮತಿ ಪಡೆದಿರಬೇಕು. ಎನ್‌ಒಸಿ, ಕಟ್ಟಡ ಗುಣಮಟ್ಟದ ಪ್ರಮಾಣಪತ್ರ ಪಡೆದಿರಬೇಕು. ಶಿಕ್ಷಣ ಇಲಾಖೆ ನಿಯಮಗಳನ್ನ ಪಾಲನೆ ಮಾಡಬೇಕು. ಒಂದು ವೇಳೆ ಪಾಲನೆ ಮಾಡದೇ ಇರುವ ಯಾವುದೇ ಶಾಲೆಯಾದರೂ ಅವು ಅನಧಿಕೃತ ಶಾಲೆಗಳು ಎಂದೇ ಪರಿಗಣಿಸಲಾಗುತ್ತದೆ. ಇದನ್ನೂ ಓದಿ: ಖಾಸಗಿ ಶಾಲೆಗಳಿಗೆ ನಮ್ಮ ಶಾಲೆಗಳು ಪೈಪೋಟಿ ಕೊಡುವಂತೆ ಕೆಲಸ ಮಾಡುತ್ತೇವೆ: ಶ್ರೀರಾಮುಲು

    ಸಾಂದರ್ಭಿಕ ಚಿತ್ರ

    ಸಿಬಿಎಸ್‌ಇ-ಐಸಿಎಸ್‌ಇ ಶಾಲೆಗಳು ಕಡ್ಡಾಯವಾಗಿ ಎನ್‌ಒಸಿ ರಾಜ್ಯ ಸರ್ಕಾರದಿಂದ ಪಡೆದಿರಬೇಕು. ಇಲ್ಲದೇ ಹೋದ್ರೆ ಅದು ಅನಧಿಕೃತ ಶಾಲೆಯಾಗುತ್ತದೆ. ಶಿಕ್ಷಣ ಇಲಾಖೆ ಕಾಲ ಕಾಲಕ್ಕೆ ಹೊರಡಿಸಿರೋ ನಿಯಮ ಅಳವಡಿಸಿಕೊಳ್ಳದೇ ಇದ್ದರೇ ಅಂತಹ ಶಾಲೆಗಳ ಮೇಲೂ ಕ್ರಮ. ಅನಧಿಕೃತ ಶಾಲೆಗಳ ಕುರಿತು ಪ್ರತಿ ಜಿಲ್ಲೆಗಳಲ್ಲಿ ವರದಿ ಸಿದ್ಧತೆ ಮಾಡಲಾಗುತ್ತಿದೆ. ವರದಿ ಬಂದ ಕೂಡಲೇ ಆ ಶಾಲೆಯ ಮುಂದೆ ಶಿಕ್ಷಣ ಇಲಾಖೆಯಿಂದ ಇದು ಅನಧಿಕೃತ ಶಾಲೆ ಎಂದು ಬೋರ್ಡ್ ಅಳವಡಿಸಲಾಗುತ್ತದೆ.

    ಅಂತಹ ಶಾಲೆಗಳಿಗೆ ಮಕ್ಕಳನ್ನು ಸೇರಿಸಬೇಡಿ ಎಂದೂ ಇಲಾಖೆ ಅಭಿಯಾನ ನಡೆಸಲಿದೆ. ಜೊತೆಗೆ ಅನಧಿಕೃತ ಶಾಲೆಗಳ ಸಂಸ್ಥೆಗಳನ್ನ ಕಪ್ಪುಪಟ್ಟಿಗೆ ಸೇರಿಸಲಿದೆ. ಕಾನೂನಾತ್ಮಕವಾಗಿ ಅನಧಿಕೃತ ಶಾಲೆಗಳ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸುವ ಬಗ್ಗೆಯೂ ಚಿಂತನೆ ನಡೆಸಲಾಗುತ್ತಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಯುಕ್ತರು ಹಾಗೂ ಶಿಕ್ಷಣ ಸಚಿವರು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಮಾತ್ರ, ಹಿಜಬ್, ಕೇಸರಿ ತಿಕ್ಕಾಟ ನಡೆಯುತ್ತಿದೆ : ಹೆಚ್‍ಡಿಕೆ

    ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಮಾತ್ರ, ಹಿಜಬ್, ಕೇಸರಿ ತಿಕ್ಕಾಟ ನಡೆಯುತ್ತಿದೆ : ಹೆಚ್‍ಡಿಕೆ

    ಚಿಕ್ಕಬಳ್ಳಾಪುರ: ಸರ್ಕಾರಿ ಶಾಲೆಗಳಲ್ಲಷ್ಟೇ ಹಿಜಬ್ ವಿವಾದ ನಡೆಯುತ್ತಿದ್ದು, ಇದು ಬಡ ಮಕ್ಕಳ ಭವಿಷ್ಯವನ್ನು ಬಲಿ ಪಡೆಯುವ ರಾಜಕೀಯ ದುರುದ್ದೇಶವಾಗಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಹಿಜಬ್ ವಿವಾದದ ಕುರಿತು ಜಿಲ್ಲೆಯ ಚಿಂತಾಮಣಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇದು ಬಡ ಮಕ್ಕಳ ಭವಿಷ್ಯವನ್ನು ಬಲಿ ಪಡೆಯುವ ರಾಜಕೀಯ ದುರುದ್ದೇಶವಾಗಿದೆ. ಶ್ರೀಮಂತರ ಮಕ್ಕಳು ಓದುತ್ತಿರುವ ಖಾಸಗಿ ಶಾಲೆಗಳಲ್ಲಿ ಈ ವಿವಾದ ನಡೆಯುತ್ತಿಲ್ಲ. ಹಾಲಿ ಮಾಜಿ ಮಂತ್ರಿಗಳು ಶಾಸಕರ ಮಕ್ಕಳು ಓದುತ್ತಿರುವ ಶಾಲೆಗಳಲ್ಲಿ ವಿವಾದ ಇಲ್ಲ. ಅಮಾಯಕ ಮಕ್ಕಳಲ್ಲಿ ದ್ವೇಷದ ಭಾವನೆ ಹುಟ್ಟುಹಾಕುವುದು ಕೆಲವು ರಾಜಕೀಯ ಪಕ್ಷಗಳು ಬಲವರ್ಧನೆಗೆ ಷಡ್ಯಂತ್ರ ಮಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಸಣ್ಣ ಸುಳಿವು ಸಿಗದಂತೆ ಹತ್ಯೆ ಮಾಡಿದ್ದ ಹಂತಕ ಕೊನೆಗೂ ಖಾಕಿ ಬಲೆಗೆ!

    ಇವರು ಸಮಾಜದಲ್ಲಿ ಕೋಮುಗಲಭೆ ಉಂಟುಮಾಡಿ ಅಶಾಂತಿ ಉಂಟುಮಾಡಲು ಹೊರಟಿದ್ದಾರೆ. ಹಿಜಬ್ ವಿವಾದ ಉದ್ಬವವಾದ ದಿನವೇ ಸರ್ಕಾರ ಸರಿಯಾದ ಕ್ರಮ ತೆಗದುಕೊಂಡಿಲ್ಲ. ಸರ್ಕಾರ ಸರಿಯಾದ ತೀರ್ಮಾನ ತೆಗೆದುಕೊಂಡಿದ್ದರೆ ರಾಷ್ಟ್ರೀಯ ಮಟ್ಟದ ಚರ್ಚೆಗೆ ಅವಕಾಶ ಇರುತ್ತಿರಲಿಲ್ಲ. ರಾಜಕೀಯ ತೆವಲಿಗೆ ರಾಷ್ಟ್ರೀಯ ಪಕ್ಷಗಳು ಬಡ ಮಕ್ಕಳನ್ನು ಬೀದಿಗೆ ತಂದಿದ್ದಾರೆ. ಹಿಜಾಬ್, ಕೇಸರಿ ಉಡುಪು ಧರಿಸುವ ವಿಚಾರದಲ್ಲಿ ಬಡಮಕ್ಕಳನ್ನ ಬಲಿ ಕೊಡುವ ಕೆಲಸ ನಡೆಯುತ್ತಿದೆ. ಸರ್ಕಾರಿ ಕಾಲೇಜುಗಳಲ್ಲಿ ಮಾತ್ರ, ಹಿಜಬ್, ಕೇಸರಿ ತಿಕ್ಕಾಟ ನಡೆಯುತ್ತಿದೆ ಎಂದು ಸಿಡಿದರು. ಇದನ್ನೂ ಓದಿ: ಸಂಸ್ಕೃತದಲ್ಲಿ 5 ಚಿನ್ನದ ಪದಕಗಳನ್ನ ಗೆದ್ದ ಮುಸ್ಲಿಂ ದಿನಗೂಲಿ ಕಾರ್ಮಿಕನ ಮಗಳು

    ಖಾಸಗಿ ಶಾಲಾ ಕಾಲೇಜುಗಳಲ್ಲಿ ಈ ವಿಚಾರವಾಗಿ ಯಾವುದೇ ಸಮಸ್ಯೆ ಇಲ್ಲ. ಶಾಸಕರು, ಮಂತ್ರಿಗಳು, ಮಾಜಿ ಶಾಸಕರು, ಮಂತ್ರಿಗಳ ಮಕ್ಕಳು ಖಾಸಗಿ ಶಾಲಾ ಕಾಲೇಜುಗಳಲ್ಲಿ ಓದುತ್ತಿದ್ದಾರೆ. ಬಡಪಾಯಿಗಳ ಮಕ್ಕಳು ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಸೇರುತ್ತಾರೆ. ಬಡಪಾಯಿಗಳ ಮಕ್ಕಳನ್ನು ಬೀದಿಗೆ ಬಿಟ್ಟು ರಾಜಕೀಯ ಪಕ್ಷಗಳು ಲೆಕ್ಕಾಚಾರ ಹಾಕುತ್ತಿವೆ ಎಂದರು.

  • ಸರ್ಕಾರ-ಖಾಸಗಿ ಶಾಲೆಗಳ ನಡುವೆ ಮುಂದುವರಿದ ಫೀಸ್ ಜಟಾಪಟಿ

    ಸರ್ಕಾರ-ಖಾಸಗಿ ಶಾಲೆಗಳ ನಡುವೆ ಮುಂದುವರಿದ ಫೀಸ್ ಜಟಾಪಟಿ

    -ಶಾಲಾ ಶುಲ್ಕ ಕಡಿತ ಆದೇಶ ವಾಪಸ್ಸಿಗೆ ಒಪ್ಪದ ಸರ್ಕಾರ

    ಬೆಂಗಳೂರು: ಸರ್ಕಾರ, ಖಾಸಗಿ ಶಾಲೆಗಳ ನಡುವೆ ಫೀಸ್ ಫೈಟ್ ಮತ್ತೆ ಮುಂದುವರಿದಿದೆ. 30% ಶುಲ್ಕ ಕಡಿತದ ಸರ್ಕಾರದ ನಿರ್ಧಾರಕ್ಕೆ ಖಾಸಗಿ ಶಾಲೆಗಳು ವಿರೋಧ ವ್ಯಕ್ತಪಡಿಸಿದ್ದು, ಆದೇಶ ವಾಪಸ್ ಪಡೆಯಲು ಡೆಡ್ ಲೈನ್ ಕೊಟ್ಟು ಪ್ರತಿಭಟನೆ ಎಚ್ಚರಿಕೆ ಕೊಟ್ಟಿವೆ. ಆದ್ರೆ ಇದಕ್ಕೆ ಡೋಂಟ್ ಕೇರ್ ಎಂದಿರೋ ಸರ್ಕಾರ ಮಾತುಕತೆ ಬನ್ನಿ ಅಂತ ಆಹ್ವಾನ ನೀಡಿದೆ.

    ಶಾಲೆಯ ಶುಲ್ಕ ಗೊಂದಲ ಎಲ್ಲಾ ಮುಗೀತು ಅಂದುಕೊಳ್ಳುವಾಗಲೇ ಮತ್ತೆ ಖಾಸಗಿ ಶಾಲೆಗಳು ತಮ್ಮ ವರಸೆ ಪ್ರಾರಂಭ ಮಾಡಿವೆ. ಸರ್ಕಾರ ಹೊರಡಿಸಿರೋ ಶೇ.30 ಶುಲ್ಕ ಕಡಿತ ಆದೇಶ ವಾಪಸ್ ಪಡಯಬೇಕು ಅಂತ ಖಾಸಗಿ ಶಾಲೆಗಳು ಆಗ್ರಹ ಮಾಡಿವೆ. ಸರ್ಕಾರದ ಆದೇಶದ ಮರು ಪರಿಶೀಲನೆ ಮಾಡಬೇಕು ಅಂತ ಒತ್ತಾಯಿಸಿವೆ. ಸರ್ಕಾರ ಆದೇಶ ವಾಪಸ್ ಪಡಯದೇ ಹೋದ್ರೆ ಫೆಬ್ರವರಿ 23 ರಂದು ಹೋರಾಟ ಮಾಡೋ ಎಚ್ಚರಿಕೆ ಕೊಟ್ಟಿವೆ. ಕ್ಯಾಮ್ಸ್, ಕುಸ್ಮಾ, ಮಿಕ್ಸಾ, ಮಾಸ್, ಕುಮ್ಸಾ, ಎಬಿಇ ಸೇರಿ ಹಲವು ಸಂಘಟನೆಗಳು ಸರ್ಕಾರದ ಆದೇಶ ಶೇ.30 ಆಗಲ್ಲ. ಶೇ.50-60 ಕಡಿತ ಆಗುತ್ತೆ ಅಂತ ಹೊಸ ಲೆಕ್ಕ ಹೇಳ್ತಿವೆ. ಆದೇಶ ವಾಪಸ್ ಪಡೆಯದೇ ಹೋದ್ರೆ ಪ್ರತಿಭಟನೆ ಮಾಡ್ತೀವಿ ಅಂತ ಎಚ್ಚರಿಕೆ ಕೊಟ್ಟಿವೆ.

    ಆದೇಶ ವಾಪಸ್ ಇಲ್ಲ: ಖಾಸಗಿ ಶಾಲೆಗಳ ಡೆಡ್‍ಲೈನ್‍ಗೆ ಸರ್ಕಾರ ಕೂಡಾ ತಿರುಗೇಟು ಕೊಟ್ಡಿದೆ. ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್, ಯಾವುದೇ ಕಾರಣಕ್ಕೂ ಆದೇಶ ವಾಪಸ್ ಪಡೆಯೋದಿಲ್ಲ. ಸರ್ಕಾರ ಮಾತುಕತೆಗೆ ಸಿದ್ದ. ಚರ್ಚಿಸಿ ನಿರ್ಧಾರ ಮಾಡೋಣ ಬನ್ನಿ ಅಂತ ಚರ್ಚೆಗೆ ಆಹ್ವಾನ ನೀಡಿದ್ದಾರೆ. ಖಾಸಗಿ ಶಾಲೆಗಳ ಪ್ರತಿಭಟನೆ ತಂತ್ರಕ್ಕೆ ಸರ್ಕಾರದಿಂದಲೂ ಪ್ರತಿತಂತ್ರ ರೂಪಿಸ್ತಿದೆ. ಶುಲ್ಕ ಕಡಿತ ನಿರ್ಧಾರವನ್ನ ಕಾನೂನು ಅಡಿಯಲ್ಲೇ ಶಿಕ್ಷಣ ಇಲಾಖೆ ಮಾಡಿದೆ. ಯಾವುದೇ ಕಾರಣಕ್ಕೂ ಆದೇಶ ವಾಪಸ್ ಪಡೆಯಲ್ಲ ಅಂತ ಹೇಳಿದೆ.

    ಖಾಸಗಿ ತಂತ್ರಕ್ಕೆ ಸರ್ಕಾರದ ಪ್ರತಿತಂತ್ರ: ಸಾಂಕ್ರಾಮಿಕ ರೋಗಗಳ ಕಾಯ್ದೆ ನಿಯಮದಡಿ ಸರ್ಕಾರಕ್ಕೆ ಇರುವ ಅಧಿಕಾರ ಬಳಸಿ ಶುಲ್ಕ ಕಡಿತ ಮಾಡಲಾಗಿದೆ. ಕರ್ನಾಟಕ ಶಿಕ್ಷಣ ಕಾಯ್ದೆ ಅಡಿ ಸರ್ಕಾರ ತನ್ನ ಅಧಿಕಾರ ಬಳಸಿ ಈ ಆದೇಶ ನೀಡಿದೆ. ವಿಶೇಷ ಸಂದರ್ಭಗಳಲ್ಲಿ ಶುಲ್ಕ ನಿರ್ಧಾರ ಅಧಿಕಾರ ಸರ್ಕಾರಕ್ಕಿದೆ, ಇದರ ಅನ್ವಯ ಶುಲ್ಕ ಕಡಿತವಾಗಿದ್ದು, ಈ ಆದೇಶವನ್ನ ಎಲ್ಲಾ ಶಾಲೆಗಳು ಕಡ್ಡಾಯವಾಗಿ ಪಾಲನೆ ಮಾಡಲೇಬೇಕು. ಸರ್ಕಾರದ ಆದೇಶ ಪಾಲಿಸದಿದ್ರೆ, ಅಂತಹ ಶಾಲೆ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರವಿದೆ. ಸರ್ಕಾರದ ಆದೇಶ ಪಾಲನೆ ಮಾಡದಿದ್ರೆ, ಆ ಶಾಲೆಗಳ ಮಾನ್ಯತೆ ರದ್ದು ಮಾಡೋದು. ಶಾಲೆಗೆ ನೀಡಿರುವ ವಿವಿಧ ಸೌಲಭ್ಯ ಕಡಿತ ಮಾಡಲು ಸರ್ಕಾರ ನಿರ್ಧಾರ ಮಾಡಬಹುದು. ಈ ವರ್ಷ ತರಗತಿಯೇ ನಡೆಸಿಲ್ಲ. ಹೀಗಿರುವಾಗ ಹೆಚ್ಚು ಶುಲ್ಕ ಕೇಳುವ ಅಧಿಕಾರ ಖಾಸಗಿ ಶಾಲೆಗಳಿಗಿಲ್ಲ. ಆನ್‍ಲೈನ್ ತರಗತಿ ಇಡೀ ದಿನ ನಡೆದಿಲ್ಲ. ಹೀಗಾಗಿ ಪೂರ್ಣ ಪ್ರಮಾಣದ ಶುಲ್ಕ ಡಿಮ್ಯಾಂಡ್ ತಪ್ಪು ಎಂದು ಸರ್ಕಾರ ಕಾನೂನು ಹೋರಾಟಕ್ಕೆ ಮುಂದಾಗಬಹುದು.

    ರೂಪ್ಸಾ ಬೆಂಬಲ ಇಲ್ಲ: ಇತ್ತ ಹಲವು ಖಾಸಗಿ ಶಾಲೆಗಳ ಸಂಘಟನೆಗಳು ನೀಡಿರೋ ಪ್ರತಿಭಟನೆಗೆ ನಾವು ಬೆಂಬಲ ಕೊಡಲ್ಲ ಅಂತ ರೂಪ್ಸಾ ಸಂಘಟನೆ ಹೇಳಿದೆ. ಸರ್ಕಾರದ ಆದೇಶ ನಾವು ಸ್ವಾಗತ ಮಾಡ್ತೀವಿ. ಫೆಬ್ರವರಿ 23 ರ ಹೋರಾಟಕ್ಕೆ ನಾವು ಬೆಂಬಲ ಕೊಡೊಲ್ಲ ಅಂತ ರೂಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಸ್ಪಷ್ಟಪಡಿಸಿದ್ದಾರೆ.

    ಒಟ್ಟಾರೆ ಸರ್ಕಾರ ಹಾಗೂ ಖಾಸಗಿ ಶಾಲೆಗಳ ಶುಲ್ಕ ಜಟಾಪಟಿಗೆ ಪೋಷಕರು, ವಿದ್ಯಾರ್ಥಿಗಳು ಬಲಿ ಆಗ್ತಿದ್ದಾರೆ. ಸಚಿವ ಸುರೇಶ್ ಕುಮಾರ್ ಮುಕ್ತವಾಗಿ ಚರ್ಚೆಗೆ ಬನ್ನಿ ಅಂತಿದ್ದಾರೆ. ಖಾಸಗಿ ಶಾಲೆಗಳು ಸಚಿವರ ಜೊತೆ ಮಾತಾಡಿ ಸಮಸ್ಯೆ ಬಗೆಹರಿಸಿಕೊಳ್ತಾರಾ? ಅಥವಾ ಹೋರಾಟ ಮಾಡ್ತಾರಾ ಕಾದು ನೋಡಬೇಕು.

  • ಬಲವಂತವಾಗಿ ಪೋಷಕರಿಂದ ಶುಲ್ಕ ವಸೂಲು ಮಾಡುವಂತಿಲ್ಲ – ಖಾಸಗಿ ಶಾಲೆಗಳಿಗೆ ಖಡಕ್ ಸೂಚನೆ

    ಬಲವಂತವಾಗಿ ಪೋಷಕರಿಂದ ಶುಲ್ಕ ವಸೂಲು ಮಾಡುವಂತಿಲ್ಲ – ಖಾಸಗಿ ಶಾಲೆಗಳಿಗೆ ಖಡಕ್ ಸೂಚನೆ

    ಬೆಂಗಳೂರು: ಆರ್ಥಿಕವಾಗಿ ಸಮರ್ಥರಿರುವ ಪೋಷಕರು ಸ್ವಯಂಪ್ರೇರಿತವಾಗಿ ತಮ್ಮ ಮಕ್ಕಳ ಶಾಲಾ ಶುಲ್ಕ ಕಟ್ಟಿಲು ಮುಂದಾದರೆ, ಶುಲ್ಕ ವಸೂಲಾತಿಗೆ ಖಾಸಗಿ ಶಾಲೆಗಳಿಗೆ ಅವಕಾಶ ನೀಡಲಾಗುತ್ತಿದೆ ಎಂದು ನಿರ್ದೇಶನವನ್ನು ಹೊರಡಿಸುವಂತೆ ಸಚಿವ ಸುರೇಶ್ ಕುಮಾರ್ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.

    ಕೋವಿಡ್-19 ಲಾಕ್‍ಡೌನ್ ಅವಧಿಯ ಅನಿಶ್ಚಿತತೆಯು ಅನಿರ್ದಿಷ್ಟಾವಧಿಯವರೆಗೆ ಮುಂದುವರೆಯುತ್ತಿರುವುದರಿಂದ ತಮ್ಮ ಶಾಲೆಗಳಲ್ಲಿ ಕೆಲಸ ಮಾಡುವ ಶಿಕ್ಷಕ ಸಿಬ್ಬಂದಿ ವೇತನಕ್ಕೆ ಕೂಡಾ ತೊಂದರೆಯುಂಟಾಗಿದ್ದು, ಮಾನವೀಯ ನೆಲೆಗಟ್ಟಿನಲ್ಲಿ ಅನುಕೂಲ ಮಾಡಿಕೊಡುವಂತೆ ಹಲವು ಖಾಸಗಿ ಶಾಲಾ ಆಡಳಿತ ಮಂಡಳಿಗಳು, ಸಂಘಟನೆಗಳು ಶಿಕ್ಷಣ ಇಲಾಖೆಗೆ ಮನವಿಗಳನ್ನು ಸಲ್ಲಿಸಿದ್ದವು.

    ಈ ಹಿನ್ನೆಲೆಯಲ್ಲಿ ಯಾವ ಪೋಷಕರು ತಮ್ಮ ಮಕ್ಕಳ ಬೋಧನಾ ಶುಲ್ಕವನ್ನು ಕಟ್ಟಲು ಆರ್ಥಿಕವಾಗಿ ಸಮರ್ಥರಿದ್ದಾರೋ, ಯಾವ ಪೋಷಕರು ಸ್ವಯಂಪ್ರೇರಿತರಾಗಿ ಶುಲ್ಕ ಪಾವತಿಗೆ ಮುಂದಾಗುತ್ತಾರೋ ಅಂತಹ ಪೋಷಕರಿಂದ ಅವರು ಇಚ್ಛಿಸುವ ಸಂಖ್ಯೆಯ ಕಂತುಗಳಲ್ಲಿ ಶುಲ್ಕ ವಸೂಲಾತಿಗೆ ಖಾಸಗಿ ಶಾಲೆಗಳಿಗೆ ಅವಕಾಶ ನೀಡಲು ನಿರ್ಧರಿಸಲಾಗಿದೆ. ಶಿಕ್ಷಣ ಕಾಯ್ದೆಯ ಅವಕಾಶಗಳ ಅಡಿಯಲ್ಲಿ ಈ ನಿರ್ದೇಶನವನ್ನು ಹೊರಡಿಸುವಂತೆ ಸಚಿವರು ಶಿಕ್ಷಣ ಇಲಾಖೆಯ ಆಯುಕ್ತರಿಗೆ ಸೂಚಿಸಿದ್ದಾರೆ.

    ಯಾವ ಪೋಷಕರು ತಮ್ಮ ಮಕ್ಕಳ ಶುಲ್ಕವನ್ನು ಕಟ್ಟಲು ಅಸಹಾಯಕರೋ, ಸದ್ಯಕ್ಕೆ ತಮಗೆ ಸಾಧ್ಯವಿಲ್ಲವೆಂದು ನಿರಾಕರಿಸುತ್ತಾರೋ ಅಂತಹವರಿಂದ ಯಾವುದೇ ಕಾರಣಕ್ಕೂ ಶುಲ್ಕ ವಸೂಲು ಮಾಡುವ ಹಾಗಿಲ್ಲ. ಒಂದು ವೇಳೆ ಶುಲ್ಕ ಕಟ್ಟಲು ಸಾಧ್ಯವಾಗದ ಪೋಷಕರ ಮೇಲೆ ಒತ್ತಡ ಹೇರುವುದರ ಕುರಿತು ದೂರುಗಳು ಬಂದಲ್ಲಿ ಅಂತಹ ಶಾಲೆಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಶಿಸ್ತಿನ ಕ್ರಮ ತೆಗೆದುಕೊಳ್ಳಲಾಗುತ್ತೆ. ಪೋಷಕರು ನೀಡುವ ಹಣವನ್ನು ಈ ಖಾಸಗಿ ಶಾಲೆಗಳಲ್ಲಿ ಕೆಲಸ ಮಾಡುವ ಶಿಕ್ಷಕ ಸಿಬ್ಬಂದಿ ವೇತನಕ್ಕೆ ಬಳಸಿಕೊಳ್ಳಲು ಪ್ರಥಮ ಆದ್ಯತೆಯನ್ನು ನೀಡಬೇಕು. ಅಲ್ಲದೇ ಈ ಅಂಶವನ್ನು ಶಿಕ್ಷಣ ಇಲಾಖೆಯ ನಿರ್ದೇಶನದಲ್ಲಿ ಸ್ಪಷ್ಟಪಡಿಸಬೇಕೆಂಬ ಸೂಚನೆಯನ್ನು ಸಹ ಸುರೇಶ್ ಕುಮಾರ್ ನೀಡಿದ್ದಾರೆ.