Tag: ಖಾಸಗಿ ಶಾಲೆ

  • ದೆಹಲಿಯ 50, ಬೆಂಗ್ಳೂರಿನ 40 ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ

    ದೆಹಲಿಯ 50, ಬೆಂಗ್ಳೂರಿನ 40 ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ

    ನವದೆಹಲಿ/ಬೆಂಗಳೂರು: ದೆಹಲಿಯಲ್ಲಿ (Delhi) 50 ಹಾಗೂ ಬೆಂಗಳೂರಿನ (Bengaluru) 40 ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ (Bomb Threat) ಬಂದಿದೆ.

    ದೆಹಲಿಯ ಪಶ್ಚಿಮ ವಿಹಾರ್‌ನಲ್ಲಿರುವ ರಿಚ್‌ಮಂಡ್ ಶಾಲೆಗೆ ಬೆದರಿಕೆ ಸಂದೇಶ ಬಂದಿದ್ದು, ಸ್ಥಳಕ್ಕೆ ಅಗ್ನಿಶಾಮಕ ದಳವು ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಸದ್ಯ ಶಾಲೆಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ. ಒಟ್ಟು ದೆಹಲಿಯ 50ಕ್ಕೂ ಅಧಿಕ ಶಾಲೆಗಳಲ್ಲಿ ಬಾಂಬ್ ಬೆದರಿಕೆ ಮೇಲ್ ಹಾಗೂ ಕರೆ ಬಂದಿದ್ದು, ಬಾಂಬ್ ನಿಷ್ಕ್ರಿಯ ದಳದಿಂದ ಶೋಧ ಕಾರ್ಯ ನಡೆಯುತ್ತಿದೆ. ಇನ್ನೂ ಬೆಂಗಳೂರಿನ ಆರ್‌ಆರ್ ನಗರ, ಕೆಂಗೇರಿ ಸೇರಿದಂತೆ ಒಟ್ಟು 40 ಶಾಲೆಗಳಿಗೆ ಬಾಂಬ್ ಬೆದರಿಕೆ ಬಂದಿದೆ.ಇದನ್ನೂ ಓದಿ: ಬಂದ್‌ಗೆ ಮುಂದಾಗಿದ್ದ ಸಾರಿಗೆ ಸಂಘಟನೆಗಳಿಗೆ ಶಾಕ್‌ – ಎಸ್ಮಾ ಜಾರಿ, 6 ತಿಂಗಳು ಪ್ರತಿಭಟನೆಗೆ ನಿಷೇಧ

    ಬಾಂಬ್ ಬೆದರಿಕೆ ಬಂದ ಹಿನ್ನೆಲೆ ಮಕ್ಕಳನ್ನು ಹೊರಗೆ ಕಳುಹಿಸಿ ತಪಾಸಣೆ ನಡೆಸಲಾಗುತ್ತಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಬಾಂಬ್ ನಿಷ್ಕ್ರಿಯ ದಳದಿಂದಲೂ ಪರಿಶೀಲನೆ ನಡೆದಿದೆ.

    ಈ ಕುರಿತು ಸೈಂಟ್ ಜರ್ಮನ್ ಶಾಲೆಯ ಪ್ರಿನ್ಸಿಪಲ್ ಮೋನಿಕಾ ಅಂಟೋನಿ ಮಾತನಾಡಿ, ಇಂದು ಬೆಳಿಗ್ಗೆ 7:30ರ ಸುಮಾರಿಗೆ ನಮಗೆ ಮೇಲ್ ಬಂದಿದೆ. ನಾವು ಕೂಡಲೇ ನಾವು ಪೊಲೀಸರಿಗೆ ಕರೆ ಮಾಡಿ, ಮಾಹಿತಿ ನೀಡಿದ್ದೆವು. ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ. ಯಾರೋ ಮಾನಸಿಕ ಪ್ರಭಾವಿತ ವ್ಯಕ್ತಿ ಮೇಲ್ ಮಾಡಿದ್ದಾನೆ, ಸದ್ಯ ಮಕ್ಕಳಿಗೆ ಎಕ್ಸಾಂ ಇದ್ದು, ಘಟನೆ ಬಗ್ಗೆ ದೂರು ಕೊಡಲಾಗಿದೆ ಎಂದು ತಿಳಿಸಿದ್ದಾರೆ.

    ಚಾಮರಾಜಪೇಟೆ ವಿಸ್ಡಮ್ ಅಂತಾರಾಷ್ಟ್ರೀಯ ಶಾಲೆಗೆ ಬಾಂಬ್ ಬೆದರಿಕೆ ಕರೆ ಬಂದಿದ್ದು, ಶಾಲೆಯಲ್ಲಿದ್ದ 800 ಮಕ್ಕಳನ್ನು ಬೇರೆ ಕಟ್ಟಡಕ್ಕೆ ಶಿಫ್ಟ್ ಮಾಡಲಾಗಿದೆ.ಇದನ್ನೂ ಓದಿ: ಚಾಮುಂಡಿ ಬೆಟ್ಟಕ್ಕೆ ಬಂದು ದೇವಿ ದರ್ಶನ ಪಡೆದ ಸಿಎಂ ಪತ್ನಿ, ಸೊಸೆ

  • ಖಾಸಗಿ ಶಾಲೆಗಳ ದಾಖಲಾತಿಗೆ ಸರ್ಕಾರದಿಂದ ರೂಲ್ಸ್ – ಪೋಷಕರ ಸಂದರ್ಶನ, ಮನಸೋ ಇಚ್ಛೆ ಫೀಸ್‌ಗೆ ಬ್ರೇಕ್

    ಖಾಸಗಿ ಶಾಲೆಗಳ ದಾಖಲಾತಿಗೆ ಸರ್ಕಾರದಿಂದ ರೂಲ್ಸ್ – ಪೋಷಕರ ಸಂದರ್ಶನ, ಮನಸೋ ಇಚ್ಛೆ ಫೀಸ್‌ಗೆ ಬ್ರೇಕ್

    – 25% ಆರ್‌ಟಿಇ ಸೀಟು ಮೀಸಲಿಡುವುದು ಕಡ್ಡಾಯ

    ಬೆಂಗಳೂರು: ಖಾಸಗಿ ಶಾಲೆಗಳ ದಾಖಲಾತಿಗಾಗಿ ಶಿಕ್ಷಣ ಇಲಾಖೆ (Education Department) ಹೊಸ ನಿಯಮಗಳನ್ನು ಬಿಡುಗಡೆ ಮಾಡಿದೆ. ಈ ಮೂಲಕ ಮೊದಲಿದ್ದ ಕೆಲವು ನಿಯಮಗಳಿಗೆ ಬ್ರೇಕ್ ಹಾಕಿದೆ.

    ದಾಖಲಾತಿ ಹೆಸರಲ್ಲಿ ಮಕ್ಕಳು, ಪೋಷಕರಿಗೆ ಕೊಡುತ್ತಿದ್ದ ಕಿರುಕುಳ, ಮಕ್ಕಳನ್ನು ದಾಖಲಾತಿ ಮಾಡಿಕೊಳ್ಳಲು ಪೋಷಕರಿಗೆ ಎಕ್ಸಾಂ ಹಾಗೂ ಮನಸೋ ಇಚ್ಛೆ ಫೀಸ್ ಕೇಳುತ್ತಿದ್ದ ನಿಯಮಗಳಿಗೆ ಇದೀಗ ಶಿಕ್ಷಣ ಇಲಾಖೆ ಕಡಿವಾಣ ಹಾಕಿದೆ.ಇದನ್ನೂ ಓದಿ: UK | ರಾಯಲ್ ಕಾಲೇಜ್ ಆಫ್ ಫಿಸಿಶಿಯನ್ಸ್‌ನ 123ನೇ ಅಧ್ಯಕ್ಷರಾಗಿ ಭಾರತೀಯ ಮೂಲದ ಮುಮ್ತಾಜ್‌ ಆಯ್ಕೆ

    ಇನ್ಮುಂದೆ ಶಾಲೆಯವರು ಪೋಷಕರಿಗೆ ಸಂದರ್ಶನ ಮಾಡುವಂತಿಲ್ಲ. ಮನಸೋ ಇಚ್ಛೆ ಶುಲ್ಕ ನಿಗದಿ ಮಾಡುವಂತೆಯೂ ಇಲ್ಲ. ಫೀಸ್ ಫಿಕ್ಸ್ ಮಾಡೋದಕ್ಕೂ ಕೂಡ ಇದೀಗ ಸರ್ಕಾರ ಹೊಸ ನಿಯಮ ಘೋಷಣೆ ಮಾಡಿದ್ದು, ಕಡ್ಡಾಯವಾಗಿ ಖಾಸಗಿ ಶಾಲೆಗಳು ನಿಯಮವನ್ನು ಪಾಲನೆ ಮಾಡಬೇಕು ಎಂದು ಎಚ್ಚರಿಕೆ ನೀಡಿದೆ. ನಿಯಮ ಪಾಲನೆ ಮಾಡದಿದ್ದಲ್ಲಿ ಅಂತಹ ಶಾಲೆಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ವಾರ್ನಿಂಗ್ ನೀಡಿದೆ.

    ಖಾಸಗಿ ಶಾಲೆಗಳಿಗೆ ರೂಲ್ಸ್ ಏನು?
    > ಶಾಲಾ ಪ್ರವೇಶಕ್ಕಾಗಿ ವಿದ್ಯಾರ್ಥಿಯನ್ನಾಗಲಿ ಅಥವಾ ಅವರ ಪೋಷಕರನ್ನಾಗಲಿ ಪರೀಕ್ಷಿಸುವಂತಿಲ್ಲ
    > ಪೋಷಕರು ಅಥವಾ ವಿದ್ಯಾರ್ಥಿಗಳಿಗೆ ಸಂದರ್ಶನ ಮಾಡುವಂತಿಲ್ಲ.
    > ಶಾಲೆಗಳು ತಮ್ಮ ಶಾಲಾ ಶುಲ್ಕವನ್ನು ಕಡ್ಡಾಯವಾಗಿ ನೋಟಿಸ್, ಶಾಲಾ ಜಾಲತಾಣ, ಎಸ್‌ಎಟಿಎಸ್‌ನಲ್ಲಿ ಪ್ರಕಟಿಸಬೇಕು.
    > ಶುಲ್ಕದ ಸಂಪೂರ್ಣ ಮಾಹಿತಿಯನ್ನು ಶಾಲೆಯ ಮಾಹಿತಿ ಪುಸ್ತಕದಲ್ಲಿ ಮುದ್ರಿಸಬೇಕು.
    > ಶಾಲಾ ಆಡಳಿತ ಮಂಡಳಿಯೂ ತಾವು ಅಧಿಸೂಚಿಸಿದ ಶುಲ್ಕವನ್ನು ಹೊರತುಪಡಿಸಿ ವಿದ್ಯಾರ್ಥಿಗಳು ಅಥವಾ ಪೋಷಕರಿಂದ ಇತರೇ ಯಾವುದೇ ಶುಲ್ಕ ಪಡೆಯುವಂತೆ ಇಲ್ಲ.
    > ಖಾಸಗಿ ಶಾಲೆಗಳು ಕಡ್ಡಾಯವಾಗಿ 25% ಆರ್‌ಟಿಇ ಸೀಟು ಮೀಸಲಿಡಬೇಕು.
    > ಎಸ್‌ಸಿ-ಎಸ್‌ಟಿ ವರ್ಗದ ಆಡಳಿತ ಮಂಡಳಿಯ ಶಾಲೆಗಳಲ್ಲಿ ಕಡ್ಡಾಯ 50% ಎಸ್‌ಸಿ-ಎಸ್‌ಟಿ ವಿದ್ಯಾರ್ಥಿಗಳು ಇರಬೇಕು.
    > ಸಹ ಶಿಕ್ಷಣ ಹೊಂದಿರುವ ಶಾಲೆಗಳಲ್ಲಿ ಕಡ್ಡಾಯವಾಗಿ ಮೀಸಲಾತಿ ಅನ್ವಯ ಒಟ್ಟು ಪ್ರದೇಶದಲ್ಲಿ 50% ಹೆಣ್ಣುಮಕ್ಕಳಿಗೆ ಕಡ್ಡಾಯವಾಗಿ ನೀಡಬೇಕು.ಇದನ್ನೂ ಓದಿ: KRIDLನಲ್ಲಿ ಬಹುಕೋಟಿ ಹಗರಣ – ಬಿಜೆಪಿ ಮಾಜಿ ಶಾಸಕನ ವಿರುದ್ಧ ಅಕ್ರಮ ಆರೋಪ

  • ಖಾಸಗಿ ಶಾಲೆ ಬಸ್‌ನ ಮಹಿಳಾ ಕಂಡಕ್ಟರ್‌ ತಲೆಮೇಲೆ ಕಲ್ಲು ಎತ್ತಿಹಾಕಿ ಬರ್ಬರ ಹತ್ಯೆ

    ಖಾಸಗಿ ಶಾಲೆ ಬಸ್‌ನ ಮಹಿಳಾ ಕಂಡಕ್ಟರ್‌ ತಲೆಮೇಲೆ ಕಲ್ಲು ಎತ್ತಿಹಾಕಿ ಬರ್ಬರ ಹತ್ಯೆ

    ಚಿತ್ರದುರ್ಗ: ಖಾಸಗಿ ಶಾಲೆಯ ಬಸ್ ನಿರ್ವಾಹಕಿಯ (Women conductors )ತಲೆಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಚಿತ್ರದುರ್ಗ (Chitradurga) ಜಿಲ್ಲೆ ಹೊಳಲ್ಕೆರೆ ತಾಲೂಕಿನ ಕೆಂಗುಂಟೆ ಗ್ರಾಮದ ಅರಣ್ಯದಲ್ಲಿ ನಡೆದಿದೆ.

    ಮೃತರನ್ನು ಹೊಳಲ್ಕೆರೆ ತಾಲ್ಲೂಕಿನ ರಾಮಘಟ್ಟ ಗ್ರಾಮದ ನಿವಾಸಿ ಆಶಾ (25) ಎಂದು ಗುರುತಿಸಲಾಗಿದೆ. ಈಕೆ ಹೊಳಲ್ಕೆರೆಯ ಖಾಸಗಿ ಶಾಲೆಯ ಬಸ್ ನಿರ್ವಾಹಕಿಯಾಗಿದ್ದರು. ಇದನ್ನೂ ಓದಿ: ಲಾರಿ ಮಾಲೀಕರ ಜೊತೆ ಸಿಎಂ ಸಂಧಾನ ಸಭೆ ವಿಫಲ – ಇಂದಿನಿಂದ ಪ್ರತಿಭಟನೆ ತೀವ್ರಗೊಳಿಸಲು ಸಜ್ಜಾದ ಲಾರಿ ಅಸೋಸಿಯೇಷನ್!

    ಈಕೆಯು ತನ್ನ ಸ್ನೇಹಿತನಾದ ಅನಿಲಾಸನ್‌ಗೆ ಸಾಲದ ರೂಪದಲ್ಲಿ 56,000 ರೂಪಾಯಿ ನೀಡಿದ್ದರು. ಆದರೆ ಸಾಲದ ಹಣ ಹಿಂತಿರುಗಿಸದೇ ಸತಾಯಿಸ್ತಿದ್ದ ಸ್ನೇಹಿತನೊಂದಿಗೆ ಜಗಳವಾಗಿದ್ದು, ಹಲವು ಬಾರಿ ಸ್ಥಳಿಯರ ಸಮ್ಮುಖದಲ್ಲಿ ರಾಜೀ, ಪಂಚಾಯ್ತಿಗಳು ನಡೆದಿದ್ದವು. ಇದನ್ನೂ ಓದಿ: ಬೆಟ್ಟಿಂಗ್ ಆಪ್ ಪ್ರಮೋಟ್ ಆರೋಪ – ಸೋನು ಗೌಡ ಸೇರಿ ಹಲವು ರೀಲ್ಸ್‌ ಸ್ಟಾರ್‌ಗಳಿಂದ ಕ್ಷಮೆಯಾಚನೆ

    ಕಳೆದ ಎರಡು ದಿನಗಳ ಹಿಂದೆ ಹಣ ನೀಡುವುದಾಗಿ ಕರೆ ಮಾಡಿದ್ದ ಅನಿಲಾಸನ್ ಕೆಂಗುಂಟೆ ಅರಣ್ಯ ಪ್ರದೇಶಕ್ಕೆ ಕರೆದೊಯ್ದು ಹತ್ಯೆ ಮಾಡಿದ್ದಾನೆ. ಅಲ್ಲದೇ ಅತ್ಯಾಚಾರ ಎಸಗಿರುವ ಶಂಕೆಯೂ ಇದೆ ಎಂದು ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಆರೋಪಿಸಿದ್ದಾರೆ.

    ಸದ್ಯ ಘಟನಾ ಸ್ಥಳಕ್ಕೆ ಡಿವೈಎಸ್ಪಿ ದಿನಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಯನ್ನು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ. ಈ ಸಂಬಂಧ ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ಧಾಖಲಾಗಿದೆ. ಇದನ್ನೂ ಓದಿ: ಬೆಂಗ್ಳೂರಿಗೆ ಸೆಡ್ಡು ಹೊಡೆಯಲು ಆಂಧ್ರ ಸರ್ಕಾರದಿಂದ ಭಾರೀ ಆಫರ್ – ಟಿಸಿಎಸ್‌ಗೆ 99 ಪೈಸೆಗೆ 21 ಎಕ್ರೆ ಭೂಮಿ

  • ಖಾಸಗಿ ಶಾಲೆಗಳಿಗೆ ದಸರಾಗೆ ಇಷ್ಟೇ ದಿನ ರಜೆ ಕೊಡಿ ಅಂತ ಒತ್ತಾಯ ಮಾಡ್ಬೇಡಿ: ಕ್ಯಾಮ್ಸ್ ಆಗ್ರಹ

    ಖಾಸಗಿ ಶಾಲೆಗಳಿಗೆ ದಸರಾಗೆ ಇಷ್ಟೇ ದಿನ ರಜೆ ಕೊಡಿ ಅಂತ ಒತ್ತಾಯ ಮಾಡ್ಬೇಡಿ: ಕ್ಯಾಮ್ಸ್ ಆಗ್ರಹ

    ಬೆಂಗಳೂರು: ಸರ್ಕಾರಿ ಶಾಲೆಗಳಿಗೆ ನೀಡಿದಷ್ಟೇ ಖಾಸಗಿ ಶಾಲೆಗಳಿಗೆ (Private Schools) ದಸರಾ ರಜೆ (Dasara Holidays) ನೀಡುವಂತೆ ಸರ್ಕಾರ ಒತ್ತಾಯ ಮಾಡಬಾರದು ಎಂದು ಖಾಸಗಿ ಶಾಲೆಗಳು ಸರ್ಕಾರಕ್ಕೆ ಆಗ್ರಹಿಸಿದೆ. ಈ ಸಂಬಂಧ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಕ್ಯಾಮ್ಸ್ (KAMS) ಸಂಘಟನೆ ಸರ್ಕಾರಕ್ಕೆ ಆಗ್ರಹ ಮಾಡಿದೆ.

    ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕ್ಯಾಮ್ಸ್ ಕಾರ್ಯದರ್ಶಿ ಶಶಿಕುಮಾರ್, ಸರ್ಕಾರ 15-20 ದಿನ ಸರ್ಕಾರಿ ಶಾಲೆಗಳಿಗೆ ದಸರಾ ರಜೆ ನೀಡಿದೆ. ಖಾಸಗಿ ಶಾಲೆಗಳಿಗೆ ಕಡ್ಡಾಯವಾಗಿ ಇಷ್ಟೇ ದಿನ ರಜೆ ಕೊಡಬೇಕು ಅಂತ ಒತ್ತಾಯ ಮಾಡೋದು ಸರಿಯಲ್ಲ. ದಸರಾದ ಪ್ರಮುಖ ಹಬ್ಬದ ದಿನಗಳಲ್ಲಿ ಶಾಲೆಗಳು ರಜೆ ನೀಡುತ್ತವೆ. ಆದರೆ 15-20 ದಿನ ರಜೆ ಕೊಡಿ ಅಂತ ಒತ್ತಾಯ ಮಾಡೋದು ಸರಿಯಲ್ಲ ಎಂದು ತಿಳಿಸಿದೆ. ಇದನ್ನೂ ಓದಿ: ಜರ್ಮನಿಯಲ್ಲಿ ಒನ್‌ಪ್ಲಸ್‌ ಫೋನ್‌ ಮಾರಾಟ ನಿಷೇಧ

    ಕೆಲವು ಶಾಲೆಗಳು ಕ್ರಿಸ್ಮಸ್‌ಗೆ ಹೆಚ್ಚು ದಿನ ರಜೆ ನೀಡುತ್ತವೆ. ಇನ್ನೂ ಕೆಲವು ಶಾಲೆಗಳು ಪಠ್ಯ ಬೋಧನೆ ಮುಕ್ತಾಯ ಮಾಡುವ ಹಿನ್ನೆಲೆಯಲ್ಲಿ ತರಗತಿ ನಡೆಸಲಿವೆ. ಹೀಗಾಗಿ ಆಯಾ ಶಾಲೆಗಳಿಗೆ ಅನುಕೂಲವಾಗುವ ರೀತಿ ದಸರಾ ರಜೆ ನೀಡಲು ಅವಕಾಶ ಕೊಡಬೇಕು ಎಂದು ಸರ್ಕಾರಕ್ಕೆ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಕ್ಯಾಮ್ಸ್ ಒತ್ತಾಯ ಮಾಡಿದೆ. ಇದನ್ನೂ ಓದಿ: ಕಳಂಕಿತ ಸಿಎಂ ದಸರಾ ಚಾಲನೆ ನೀಡಿದ್ದು ಸರಿಯಲ್ಲ: ಪಿ ರಾಜೀವ್ ವಾಗ್ದಾಳಿ

  • SSLC ವಿದ್ಯಾರ್ಥಿನಿಗೆ ತನ್ನ ಬೆತ್ತಲೆ ಫೋಟೋ ಕಳಿಸಿ ಕಿರುಕುಳ – ಕಾಮುಕ ಶಿಕ್ಷಕನ ವಿರುದ್ಧ ಕೇಸ್‌

    SSLC ವಿದ್ಯಾರ್ಥಿನಿಗೆ ತನ್ನ ಬೆತ್ತಲೆ ಫೋಟೋ ಕಳಿಸಿ ಕಿರುಕುಳ – ಕಾಮುಕ ಶಿಕ್ಷಕನ ವಿರುದ್ಧ ಕೇಸ್‌

    ಡೆಹ್ರಾಡೂನ್‌: 10ನೇ ತರಗತಿ ವಿದ್ಯಾರ್ಥಿನಿಯೊಬ್ಬರು (SSLC Girl Student) ಶಾಲಾ ಶಿಕ್ಷಕನಿಂದಲೇ ಲೈಂಗಿಕ ಕಿರುಕುಳ ಅನುಭವಿಸುತ್ತಿರುವುದಾಗಿ ದೂರು ದಾಖಲಿಸಿರುವ ಘಟನೆ ಉತ್ತರಾಖಂಡದಲ್ಲಿ ನಡೆದಿದೆ.

    ಉತ್ತರಾಖಂಡದ (Uttarakhand) ಹಲ್ದ್ವಾನಿಯಲ್ಲಿ ಘಟನೆ ನಡೆದಿದೆ. ತನ್ನ ಶಾಲೆಯ ಶಿಕ್ಷಕನೇ ತನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ. ವಾಟ್ಸಪ್‌ ಮತ್ತು ಸ್ನ್ಯಾಪ್‌ಚಾಟ್‌ನಲ್ಲಿ ತನಗೆ ಬೆತ್ತೆಲೆ ಫೋಟೋಗಳನ್ನು ಕಳಿಸಿದ್ದಾನೆ. ಈ ಬಗ್ಗೆ ತನ್ನ ಪೋಷಕರಿಗೆ ತಿಳಿಸಿದ ಬಳಿಕ ಪೊಲೀಸರಿಗೆ (Uttarakhand Police) ದೂರು ನೀಡಲಾಗಿದೆ. ಇದನ್ನೂ ಓದಿ: ಮುಡಾ ಪ್ರಕರಣದಲ್ಲಿ ರಾಯಚೂರು ಸಂಸದ ಜಿ.ಕುಮಾರ ನಾಯಕ್ ಹೆಸರು – ಅಕ್ರಮವಾಗಿ ಭೂಪರಿವರ್ತನೆ ಆರೋಪ

    ಇನ್ನೂ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹಲ್ದ್ವಾನಿ ವೃತ್ತ ನಿರೀಕ್ಷಕ ನಿತಿನ್ ಲೋಹಾನಿ ಮಾಹಿತಿ ನೀಡಿದ್ದು, ಹಲ್ದ್ವಾನಿಯ ಖಾಸಗಿ ಶಾಲೆಯೊಂದರ ಶಿಕ್ಷಕನೊಬ್ಬ ಸೋಷಿಯಲ್‌ ಮೀಡಿಯಾದಲ್ಲಿ ವಿದ್ಯಾರ್ಥಿನಿಗೆ ಅಶ್ಲೀಲ ಸಂದೇಶಗಳನ್ನ ಕಳಿಸಿದ್ದಾನೆ. ಈ ಬಗ್ಗೆ ದೂರು ಸ್ವೀಕರಿಸಿ, ಎಫ್‌ಐಆರ್‌ ದಾಖಲಿಸಿದ್ದು, ತನಿಖೆ ಪ್ರಾರಂಭಿಸಿದ್ದೇವೆ. ಆರೋಪಿಯನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹಮಾಸ್ ಬಂಡುಕೋರರ ದಾಳಿ- ಒತ್ತೆಯಾಳುಗಳ 6 ಶವ ಪತ್ತೆಹಚ್ಚಿ ವಶಪಡಿಸಿಕೊಂಡ ಇಸ್ರೇಲ್

    ಘಟನೆ ಬೆಳಕಿಗೆ ಬಂದಿದ್ದು ಹೇಗೆ?
    ಇಲ್ಲಿನ ಖಾಸಗಿ ಶಾಲೆಯ ಶಿಕ್ಷಕ, ತನ್ನ ವಿದ್ಯಾರ್ಥಿನಿಗೆ ಆಗಾಗ್ಗೆ ಕಿರುಕುಳ ನೀಡಲು ಶುರು ಮಾಡಿದ್ದಾನೆ. ಆಕೆಗೆ ಅನುಚಿತ ಸಂದೇಶಗಳನ್ನ ಕಳಿಸಿದ್ದಾನೆ. ಮೆಸೇಜ್‌ ಜೊತೆಗೆ ಸ್ನ್ಯಾಪ್‌ ಚಾಟ್‌ ಮತ್ತು ವಾಟ್ಸಪ್‌ಗಳಲ್ಲಿ ತನ್ನ ಬೆತ್ತಲೆ ಫೋಟೋಗಳನ್ನ ವಿದ್ಯಾರ್ಥಿನಿಗೆ ಕಳಿಸಿದ್ದಾನೆ. ಇದರಿಂದ ಮಾನಸಿಕ ತೊಂದರೆಗೆ ಒಳಗಾದ ವಿದ್ಯಾರ್ಥಿನಿ ವಿಷಯವನ್ನು ಪೋಷಕರಿಗೆ ತಿಳಿಸಿದ್ದಾಳೆ. ನಂತರ ಪೋಷಕರು ಕೊತ್ವಾಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧ ತನಿಖೆ ಮುಂದುವರಿದಿದೆ. ಇದನ್ನೂ ಓದಿ: ಪಬ್ಲಿಕ್‌ ಟಿವಿ ವಿದ್ಯಾಮಂದಿರ ಶೈಕ್ಷಣಿಕ ಮೇಳಕ್ಕೆ 2ನೇ ದಿನವೂ ಉತ್ತಮ ಸ್ಪಂದನೆ – ಸಂಜೆ 6 ಗಂಟೆವರೆಗೂ ಇರಲಿದೆ ಮೇಳ

  • ಖಾಸಗಿ ಶಾಲೆಗಳಲ್ಲಿ ನಾಡಗೀತೆ ಕಡ್ಡಾಯವಲ್ಲ ವಿವಾದ – ಪಬ್ಲಿಕ್ ಟಿವಿ ಫಟಾಫಟ್ ಇಂಪ್ಯಾಕ್ಟ್ : ಮುದ್ರಣ ದೋಷ ಎಂದ ತಂಗಡಗಿ

    ಖಾಸಗಿ ಶಾಲೆಗಳಲ್ಲಿ ನಾಡಗೀತೆ ಕಡ್ಡಾಯವಲ್ಲ ವಿವಾದ – ಪಬ್ಲಿಕ್ ಟಿವಿ ಫಟಾಫಟ್ ಇಂಪ್ಯಾಕ್ಟ್ : ಮುದ್ರಣ ದೋಷ ಎಂದ ತಂಗಡಗಿ

    ಬೆಂಗಳೂರು: ಮುದ್ರಣ ದೋಷದಿಂದಾಗಿ ನಾಡಗೀತೆ (Nada Geethe) ವಿಚಾರದಲ್ಲಿ ಗೊಂದಲವಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಖಾತೆಯ ಸಚಿವ ಶಿವರಾಜ್‌ ತಂಗಡಗಿ (Shivaraj Tangadagi) ಸ್ಪಷ್ಟನೆ ನೀಡಿದ್ದಾರೆ.

    ಖಾಸಗಿ ಶಾಲೆಗಳಲ್ಲಿ (Private School) ನಾಡಗೀತೆ ಕಡ್ಡಾಯವಲ್ಲ ಎಂಬ ವಿವಾದಾತ್ಮಕ ಆದೇಶ ಹೊರಡಿಸಿದ ಸುದ್ದಿಯನ್ನು ಪಬ್ಲಿಕ್‌ ಟಿವಿ ಪ್ರಸಾರ ಮಾಡಿದ ಬೆನ್ನಲ್ಲೇ ಪ್ರತಿಕ್ರಿಯಿಸಿದ ಅವರು ಪ್ರಿಂಟ್ ಮಿಸ್ಟೇಕ್ ಆಗಿದೆ. ಆದೇಶ ಮಾಡುವಾಗ ಎಲ್ಲಾ ಶಾಲೆ ಎಂದು ಬದಲಾಗಲಿದೆ ಎಂದು ತಿಳಿಸಿದರು.  ಇದನ್ನೂ ಓದಿ: ಕೆರಗೋಡು ಹನುಮಧ್ವಜ ವಿವಾದ – ಅಯೋಧ್ಯೆ ರಾಮ ಮಂದಿರ ಮುಂದೆ ಪಣ ತೊಟ್ಟ ಹಿಂದೂ ಕಾರ್ಯಕರ್ತರು

     

    ಮನುಷ್ಯ ನಡೆಯುವಾಗ ಎಡವುತ್ತಾನೆ. ಹಾಗೆಯೇ ಇಲ್ಲಿ ಸಹಾ ಸಣ್ಣ ತಪ್ಪಾಗಿದೆ. ಅಧಿಕಾರಿಗಳು ಮನಸ್ಸೋ ಇಚ್ಛೆ ನಡೆದುಕೊಂಡಿಲ್ಲ. ಅಧಿಕಾರಿಗಳ ಮೇಲೆ ಸರ್ಕಾರದ ಲಂಗು ಲಗಾಮು ಎಲ್ಲಾ ಇದೆ. ಆದರೆ ಸಣ್ಣ ತಪ್ಪಿನಿಂದ ಈ ಗೊಂದಲ ಆಗಿದೆ. ಎಲ್ಲವನ್ನೂ ಸರಿಪಡಿಸಿ ಆದೇಶ ಹೊರಡಿಸುತ್ತೇವೆ ಎಂದು ತಿಳಿಸಿದರು.

    ನಾಡಗೀತೆ ವಿವಾದ ಕೋರ್ಟ್‌ನಲ್ಲಿ ಇತ್ತು. ಸಿ ಅಶ್ವಥ್ ಅವರ ಧ್ವನಿಯಲ್ಲಿ ನಾಡಗೀತೆ ಪ್ರಸಾರವಾಗಬೇಕು. ಮೈಸೂರು ಅನಂತ ಸ್ವಾಮಿ ಅವರ ಧ್ವನಿಯಲ್ಲಿ ಅಲ್ಲ ಎಂದು ಕಿಕ್ಕೇರಿ ಕೃಷ್ಣ ಮೂರ್ತಿ ಅವರು ಕೋರ್ಟ್ ಮೊರೆ ಹೋಗಿದ್ದರು. ನ್ಯಾಯಾಲಯಕ್ಕೆ ನಾವು ಮಾಹಿತಿ ನೀಡುವಾಗ ಈ ಆದೇಶ ಆಗಿದ್ದು ಅದರಲ್ಲಿ ಸಣ್ಣ ಮುದ್ರಣ ದೋಷವಾಗಿದೆ ಎಂದು ವಿವರಿಸಿದರು. ಇದನ್ನೂ ಓದಿ: ರಾಮನಗರ ವಕೀಲರ ಹೋರಾಟಕ್ಕೆ ಕೊನೆಗೂ ಮಣಿದ ಸರ್ಕಾರ – ಐಜೂರು ಠಾಣೆಯ ಪಿಎಸ್ಐ ಅಮಾನತು

     

    ನಮ್ಮ ಸರ್ಕಾರಕ್ಕೆ ಕನ್ನಡದ ಬಗ್ಗೆ ಕಾಳಜಿ ಇದೆ. ಈ ವಿಚಾರದಲ್ಲಿ ಬಹಳ ಸ್ಪಷ್ಟವಾಗಿ ಇದ್ದೇವೆ. ಮಾಧ್ಯಮ ಮಿತ್ರರಿಗೆ ಇದರ ಬಗ್ಗೆ ತಿಳಿಸಲೆಂದೇ ಬಂದಿದ್ದೇನೆ. ಸಹಜವಾಗಿ ನೋಟ್ ಶೀಟ್ ಒಳಗಡೆ ಸಣ್ಣಪುಟ್ಟ ಸಮಸ್ಯೆಯಾಗಿದೆ ಎಂದರು.

  • ಖಾಸಗಿ ಶಾಲೆಗಳಲ್ಲಿ ನಾಡಗೀತೆ ಕಡ್ಡಾಯವಲ್ಲ: ಸರ್ಕಾರದಿಂದ ಆದೇಶ

    ಖಾಸಗಿ ಶಾಲೆಗಳಲ್ಲಿ ನಾಡಗೀತೆ ಕಡ್ಡಾಯವಲ್ಲ: ಸರ್ಕಾರದಿಂದ ಆದೇಶ

    ಬೆಂಗಳೂರು: ಖಾಸಗಿ ಶಾಲೆಗಳಲ್ಲಿ (Private School) ಇನ್ನು ಮುಂದೆ ನಾಡಗೀತೆ (Nada Geethe) ಹಾಡುವುದು ಕಡ್ಡಾಯವಲ್ಲ ಎಂದು ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

    ಖಾಸಗಿ ಶಾಲೆಗಳಿಗೆ ನಾಡಗೀತೆ ಹಾಡುವುದಕ್ಕೆ ವಿನಾಯಿತಿ ನೀಡಿದ ಸರ್ಕಾರ ಸರ್ಕಾರಿ ಶಾಲೆಗಳು (Govt Schools) ಮತ್ತು ಅನುದಾನಿತ ಶಾಲೆಗಳಲ್ಲಿ (Aided school) ಮಾತ್ರ ನಾಡಗೀತೆ ಹಾಡಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿವಾದಿತ ಆದೇಶವನ್ನು ಹೊರಡಿಸಿದೆ. ಇದನ್ನೂ ಓದಿ: ವರ್ತೂರು ಸಂತೋಷ್ ಟೀಮ್ ವಿರುದ್ಧ ಜಗ್ಗೇಶ್ ದೂರು

    ಈ ಹಿಂದೆ ಎಲ್ಲಾ ಶಾಲೆಗಳಲ್ಲಿ ದೈನಂದಿನ ಚಟುವಟಿಕೆಗಳು ಆರಂಭವಾಗುವ ಮುನ್ನ ನಾಡಗೀತೆಯನ್ನು ಹಾಡಬೇಕಿತ್ತು. ಇದಲ್ಲದೆ ಸರ್ಕಾರಿ ಇಲಾಖೆ, ಕಚೇರಿ, ಪ್ರಾಧಿಕಾರಗಳು, ಸರ್ಕಾರದ ಸಂಸ್ಥೆಗಳ ಅಧಿಕೃತ ಕಾರ್ಯಕ್ರಮಗಳನ್ನು ಏರ್ಪಡಿಸುವ ಮುನ್ನ ನಾಡಗೀತೆ ಹಾಡಬೇಕು ಎಂದು ಆದೇಶಿಸಲಾಗಿತ್ತು. ಇದನ್ನೂ ಓದಿ: ರಾಮನಗರ ವಕೀಲರ ಹೋರಾಟಕ್ಕೆ ಕೊನೆಗೂ ಮಣಿದ ಸರ್ಕಾರ – ಐಜೂರು ಠಾಣೆಯ ಪಿಎಸ್ಐ ಅಮಾನತು

    ಹಿಂದಿನ ಆದೇಶವನ್ನು ಬದಲಾವಣೆ ಮಾಡಿದ ರಾಜ್ಯ ಸರ್ಕಾರ ಈಗ ಎಲ್ಲಾ ಶಾಲೆಗಳು ಎಂಬುದರ ಬದಲಾಗಿ ಸರ್ಕಾರಿ ಶಾಲೆಗಳು ಎಂದು ಬದಲಾವಣೆ ಮಾಡಿ ಆದೇಶ ಹೊರಡಿಸಿದೆ.

     

  • 14ರ ಹುಡುಗಿ ಮೇಲೆ ಪ್ರೀತಿ – ಶಾಲಾ ಬಸ್ ಡ್ರೈವರ್‌ ಪ್ರೇಮದಾಟಕ್ಕೆ ವಿದ್ಯಾರ್ಥಿನಿ ಬಲಿ

    14ರ ಹುಡುಗಿ ಮೇಲೆ ಪ್ರೀತಿ – ಶಾಲಾ ಬಸ್ ಡ್ರೈವರ್‌ ಪ್ರೇಮದಾಟಕ್ಕೆ ವಿದ್ಯಾರ್ಥಿನಿ ಬಲಿ

    ಚಿಕ್ಕಮಗಳೂರು: ಶಾಲಾ ಬಸ್ ಡ್ರೈವರ್‌ (School Bus Driver) ಜೊತೆಗಿನ ಪ್ರೇಮದಾಟಕ್ಕೆ 8ನೇ ತರಗತಿ ವಿದ್ಯಾರ್ಥಿನಿ ಬಲಿಯಾಗಿರುವ ಘಟನೆ ಚಿಕ್ಕಮಗಳೂರು (Chikkamagaluru) ಜಿಲ್ಲೆಯಲ್ಲಿ ನಡೆದಿದೆ.

    ಅಜ್ಜಂಪುರ ಸಮೀಪದ ಬಂಕನಕಟ್ಟೆ ಬಳಿ ಶಾಲಾ ಬಸ್ ಡ್ರೈವರ್‌ 8ನೇ ತರಗತಿ ವಿದ್ಯಾರ್ಥಿನಿಯೊಂದಿಗೆ ಚಲಿಸುತ್ತಿದ್ದ ರೈಲಿಗೆ (Train) ಸಿಲುಕಿ ತಾನೂ ಮಾಡಿಕೊಂಡಿದ್ದಾನೆ. ಡ್ರೈವರ್‌ ಸಂತೋಷ್ (38), ವಿದ್ಯಾರ್ಥಿನಿ ಜಾಹ್ನವಿ (14) ಸಾವಿಗೀಡಾದ ದುರ್ದೈವಿಗಳು. ಇದನ್ನೂ ಓದಿ: ಅಂದು ಹೋರಾಡಿದ್ದಕ್ಕೆ ಈಗ ರಾಮಭಕ್ತರನ್ನು ಬಂಧಿಸ್ತಿದ್ದಾರೆ, ನನ್ನನ್ನೂ ಬಂಧಿಸ್ತಾರಾ? – ಆರ್.ಅಶೋಕ್ ಕಿಡಿ

    ಅಜ್ಜಂಪುರ ತಾಲೂಕಿನ ಗಿರಿಯಾಪುರ ಗ್ರಾಮದ ಖಾಸಗಿ ಶಾಲೆಯಲ್ಲಿ (Private School) ಜಾಹ್ನವಿ 8ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು. ಅದೇ ಶಾಲೆಯಲ್ಲಿ ಸಂತೋಷ್ ಕಳೆದ ಮೂರು ವರ್ಷಗಳಿಂದ ಬಸ್ ಡ್ರೈವರ್‌ ಆಗಿದ್ದ. ವಿದ್ಯಾರ್ಥಿನಿಯನ್ನ ಪ್ರೀತಿಸುವಂತೆ ಪೀಡಿಸುತ್ತಿದ್ದ. ಬಸ್ ಡ್ರೈವರ್‌ ಕಿರುಕುಳ ನೀಡುತ್ತಿದ್ದ ಬಗ್ಗೆ ವಿದ್ಯಾರ್ಥಿನಿ ಪೋಷಕರು ಶಾಲಾ ಮುಖ್ಯಸ್ಥರ ಗಮನಕ್ಕೆ ತಂದಿದ್ದರು.

    ಭಾನುವಾರ ಸ್ನೇಹಿತರ ಜೊತೆ ನ್ಯೂಇಯರ್ ಪಾರ್ಟಿಗೆ ಹೋಗುವುದಾಗಿ ಜಾಹ್ನವಿ ಮನೆಯಿಂದ ಹೊರಟಿದ್ದಳು. ಆದ್ರೆ ಸಂತೋಷ್ ಆಕೆಯನ್ನ ತನ್ನೊಂದಿಗೆ ಕರೆದೊಯ್ದಿದ್ದ.

    ನಂತರ ಚಲಿಸುತ್ತಿದ್ದ ರೈಲಿಗೆ ಸಿಕ್ಕಿ ಇಬ್ಬರು ಸಾವಿಗೀಡಾಗಿದ್ದಾರೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಘಟನೆ ನಂತರ ದೂರು ನೀಡಿದರೂ ಕ್ರಮ ಕೈಗೊಳ್ಳದ ಶಾಲೆಯ ಮುಖ್ಯಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಚಿಕ್ಕಮಗಳೂರು ಮಲ್ಲೇಗೌಡ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಇದನ್ನೂ ಓದಿ: ರಾಷ್ಟ್ರೀಯ ಹೆದ್ದಾರಿ ಸಂಪಾಜೆ-ಕಾಟಕೇರಿ ಹೆದ್ದಾರಿ ಡಾಂಬರೀಕರಣ ಕಾಮಗಾರಿಗೆ ಪ್ರತಾಪ್ ಸಿಂಹ ಚಾಲನೆ

    ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ದೇಶದಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು – ಗ್ಯಾಂಗ್‌ಸ್ಟರ್ ಗೋಲ್ಡಿ ಬ್ರಾರ್‌ನನ್ನ ಭಯೋತ್ಪಾದಕ ಎಂದು ಘೋಷಿಸಿದ ಕೇಂದ್ರ

  • ಬೆಂಗಳೂರು ಹಾರರ್ – ಬಾಲಕಿಯ ಮೇಲೆ ರೂಮಿನಲ್ಲೇ ಪ್ರಾಂಶುಪಾಲನಿಂದ ಅತ್ಯಾಚಾರ

    ಬೆಂಗಳೂರು ಹಾರರ್ – ಬಾಲಕಿಯ ಮೇಲೆ ರೂಮಿನಲ್ಲೇ ಪ್ರಾಂಶುಪಾಲನಿಂದ ಅತ್ಯಾಚಾರ

    ಬೆಂಗಳೂರು: ನಗರದ ಖಾಸಗಿ ಶಾಲೆಯ (School) ಪ್ರಾಂಶುಪಾಲನೊಬ್ಬ 10 ವರ್ಷದ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿರುವ ಆರೋಪ ಕೇಳಿ ಬಂದಿದೆ.

    ವರ್ತೂರು (Varthur) ಸಮೀಪದ ಶಾಲೆಗೆ ಬಾಲಕಿ ಎಂದಿನಂತೆ ತೆರಳಿ ಮನೆಗೆ ವಾಪಸ್ ಆಗಿದ್ದಳು. ಮನೆಗೆ ಮರಳಿದ ವೇಳೆ ಬಾಲಕಿಯ ಆರೋಗ್ಯದಲ್ಲಿ ವ್ಯತ್ಯಯವಾಗಿದೆ. ವಿಪರೀತ ನೋವಿನಿಂದ ಬಳಲಿದ ಆಕೆಯನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈ ವೇಳೆ ತಪಾಸಣೆ ನಡೆಸಿದ ವೈದ್ಯರು ಬಾಲಕಿಯ ಮೇಲೆ ಅತ್ಯಾಚಾರ ನಡೆದಿರುವುದು ದೃಢಪಡಿಸಿದ್ದಾರೆ ಎಂದು ಪೋಷಕರು ಹೇಳಿದ್ದಾರೆ. ಇದನ್ನೂ ಓದಿ: ಅಣ್ಣ ಹೇಳಿದ್ದಾರೆ ತಮ್ಮ ಕೇಳುತ್ತಿರಬೇಕು: ಹೆಚ್‌ಡಿಕೆಗೆ ಡಿಕೆಶಿ ಟಾಂಗ್‌

    ಈ ಬಗ್ಗೆ ಬಾಲಕಿಯನ್ನು ವಿಚಾರಿಸಿದಾಗ ಶಾಲಾ ಸಂಸ್ಥಾಪಕ ಮತ್ತು ಪ್ರಾಂಶುಪಾಲನೇ ಆಕೆಯನ್ನು ಖಾಲಿ ರೂಮಿಗೆ ಕರೆದೊಯ್ದು ಕೃತ್ಯ ಎಸಗಿರುವುದಾಗಿ ತಿಳಿಸಿದ್ದಾಳೆ. ಈ ಸಂಬಂಧ ವರ್ತೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು (Police) ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಅಮಾಯಕ ವ್ಯಾಪಾರಿ ಮೇಲೆ ಕಳ್ಳತನ ಆರೋಪ ಹೊರಿಸಿ ಲಾಠಿಯಿಂದ ಹಲ್ಲೆ – ಹೆಡ್‌ಕಾನ್‌ಸ್ಟೇಬಲ್ ಅಮಾನತು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವಿದ್ಯಾರ್ಥಿನಿಗೆ ಕಿಸ್ ಕೊಟ್ಟು ಯಾರಿಗೂ ಹೇಳ್ಬೇಡ ಎಂದ ಶಿಕ್ಷಕನ ವಿರುದ್ಧ ಕೇಸ್

    ವಿದ್ಯಾರ್ಥಿನಿಗೆ ಕಿಸ್ ಕೊಟ್ಟು ಯಾರಿಗೂ ಹೇಳ್ಬೇಡ ಎಂದ ಶಿಕ್ಷಕನ ವಿರುದ್ಧ ಕೇಸ್

    ಚಿಕ್ಕೋಡಿ: ಸ್ಥಳೀಯ ಖಾಸಗಿ ಶಿಕ್ಷಣ ಸಂಸ್ಥೆಯ (Private Educational Institution) ಪ್ರೌಢ ಶಾಲೆಯ ವಿದ್ಯಾರ್ಥಿಗಳ ಜೊತೆಗೆ ಶಿಕ್ಷಕನೊಬ್ಬ (Teacher) ಅಸಭ್ಯವಾಗಿ ವರ್ತಿಸಿ, ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಬೆಳಗಾವಿ (Belagavi) ಜಿಲ್ಲೆಯ ಸಂಕೇಶ್ವರ ಪಟ್ಟಣದಲ್ಲಿ ನಡೆದಿದ್ದು, ಕಾಮುಕ ಶಿಕ್ಷಕನ ವಿರುದ್ಧ ಕೇಸ್ ದಾಖಲಾಗಿದೆ.

    ಪಟ್ಟಣದ ಖಾಸಗಿ ಪ್ರೌಢ ಶಾಲೆಯ ಕನ್ನಡ ಮಾಧ್ಯಮದ ಶಿಕ್ಷಕ ಬಿ.ಆರ್. ಬಾಡಕರ 10ನೇ ತರಗತಿಯ ವಿದ್ಯಾರ್ಥಿನಿಯರ ಮೈ, ಕೈ ಮುಟ್ಟಿ ಅಸಭ್ಯವಾಗಿ ವರ್ತಿಸುತ್ತಿದ್ದ ಎಂಬ ಕಾರಣಕ್ಕೆ ವಿದ್ಯಾರ್ಥಿನಿ ಡಿ.23 ರಂದು ಶಿಕ್ಷಕನ ವಿರುದ್ಧ ದೂರು ನೀಡಿದ್ದಾಳೆ. ಇದನ್ನೂ ಓದಿ: ಹಾಸನ ಜೆಡಿಎಸ್ ಕಾರ್ಯಕರ್ತರಿಗೆ ಮೈಸೂರಿನಲ್ಲಿ ಭರ್ಜರಿ ಬಾಡೂಟ

    ಅಲ್ಲದೇ ಕಾಮುಕ ಶಿಕ್ಷಕ ಬಾಡಕರ ವಿದ್ಯಾರ್ಥಿಗಳ ಮೇಲೆ ಲೈಂಗಿಕ ದೌರ್ಜನ್ಯವನ್ನೂ ನಡೆಸಿದ್ದಾನೆ. ಈ ವಿಷಯ ಯಾರಿಗಾದ್ರೂ ಹೇಳಿದ್ರೆ ಇಂಟರ್‌ನಲ್ ಅಂಕಗಳನ್ನ ಕಡಿತಗೊಳಿಸೋದಾಗಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ಶಿಕ್ಷಕನ ಈ ಕೃತ್ಯಕ್ಕೆ ಸಹಕರಿಸಿದ ಮತ್ತೊಬ್ಬ ಶಿಕ್ಷಕ ಕೆ.ಎಂ ಕೋಳಿ ವಿರುದ್ಧವೂ ದೂರು ನೀಡಲಾಗಿತ್ತು. ಇದನ್ನೂ ಓದಿ: ವಿದ್ಯಾರ್ಥಿನಿಯರು ಹಾಜರಾಗದಿದ್ರೆ ನಮಗೂ ಉನ್ನತ ಶಿಕ್ಷಣ ಬೇಡ – ತಾಲಿಬಾನ್‌ಗೆ ವಿದ್ಯಾರ್ಥಿಗಳಿಂದ ಎಚ್ಚರಿಕೆ

    ಈ ಹಿನ್ನೆಲೆಯಲ್ಲಿ ಆರೋಪಿಗಳ (Accused) ವಿರುದ್ಧ ಸಂಕೇಶ್ವರ ಪೋಲಿಸ್ ಠಾಣೆಯಲ್ಲಿ (Police Station) ಐಪಿಸಿ (IPC) ಸೆಕ್ಷನ್ 354 (A), 109, 506 ಅಡಿಯಲ್ಲಿ, ಪೋಕ್ಸೋ (POCSO Act) ಹಾಗೂ ಎಸ್ಸಿ-ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆ-2015ರ ಅಡಿಯಲ್ಲಿ ಕೇಸ್‌ ದಾಖಲಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]