Tag: ಖಾಸಗಿ ವ್ಯಕ್ತಿ

  • ಸೋಮೇಶ್ವರ ದೇವಾಲಯ ಜಾಗಕ್ಕೆ ಕಿತ್ತಾಟ: ವ್ಯಕ್ತಿಯ ವಿರುದ್ಧ ತಿರುಗಿಬಿದ್ದ ಗ್ರಾಮಸ್ಥರು

    ಸೋಮೇಶ್ವರ ದೇವಾಲಯ ಜಾಗಕ್ಕೆ ಕಿತ್ತಾಟ: ವ್ಯಕ್ತಿಯ ವಿರುದ್ಧ ತಿರುಗಿಬಿದ್ದ ಗ್ರಾಮಸ್ಥರು

    ಆನೇಕಲ್: ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಮರಸೂರು ಮಡಿವಾಳ ಗ್ರಾಮದಲ್ಲಿ ಸೋಮೇಶ್ವರ ದೇವಾಲಯಕ್ಕೆ ಸೇರಿದ ಜಾಗದ ವಿವಾದ ಕೆಲ ಘಂಟೆಗಳ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು.

    ಇಲ್ಲಿನ ಖಾಸಗಿ ವ್ಯಕ್ತಿ ಮುನಿರಾಜು ಮರಸೂರು ಗ್ರಾಮ ಪಂಚಾಯ್ತಿಯಲ್ಲಿ ಅಕ್ರಮವಾಗಿ ಸೋಮೇಶ್ವರ ದೇವಾಲಯಕ್ಕೆ ಸೇರಿದ ಜಾಗವನ್ನು ಕಬಳಿಕೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಊರಿನ ಗ್ರಾಮಸ್ಥರು ಆತನ ವಿರುದ್ಧ ತಿರುಗಿಬಿದ್ದಿದ್ದರು. ಇದನ್ನೂ ಓದಿ: ಆಧಾರ್ ಕಾರ್ಡ್ ಇರೋರೆಲ್ಲ ಭಾರತೀಯರು: ವಚನಾನಂದ ಶ್ರೀ

    ಇದೇ ಜಾಗದಲ್ಲಿ ಮುಸ್ಲಿಮರ ಕಡೆಯಿಂದ ಇಲ್ಲಿನ ಸ್ಥಳೀಯ ವ್ಯಕ್ತಿಯಾದ ಮುನಿರಾಜುಗೆ ಮಾರಾಟ ಮಾಡಿರುವುದಾಗಿ ದಾಖಲೆಗಳಿವೆ. ಹೀಗಾಗಿ ಮುನಿರಾಜು ನನಗೆ ಸೇರಿದ ಜಾಗ ಅಂತ ಸರ್ವೆ ಮಾಡಿಕೊಂಡಿದ್ದರು. ಅದಕ್ಕಾಗಿ ಕೆಲ ಘಂಟೆಗಳ ಕಾಲ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಇದನ್ನೂ ಓದಿ: ಕಲಾವಿದನ ನಾಲಿಗೆಯಿಂದ ಅರಳಿತು ಅಂಬೇಡ್ಕರ್ ಚಿತ್ರ

    ಕೂಡಲೇ ಜಿಲ್ಲಾಧಿಕಾರಿಗಳು ಹಾಗೂ ದಂಡಾಧಿಕಾರಿಗಳು ಈ ಬಗ್ಗೆ ಗಮನಹರಿಸಿ ಸೋಮೇಶ್ವರ ದೇವಾಲಯದ ಜಾಗವನ್ನು ಬಿಟ್ಟುಕೊಡುವಂತೆ ಸೂಚಿಸಿದರು. ಈ ವೇಳೆ ಕೆಲ ಗಂಟೆಗಳ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

  • 78 ಎಕ್ರೆ ಅರಣ್ಯ ಭೂಮಿಯನ್ನು ಖಾಸಗಿಯವರ ಖಾತೆಗೆ ಮಾಡಿಕೊಟ್ಟ ಅಧಿಕಾರಿಗಳು

    78 ಎಕ್ರೆ ಅರಣ್ಯ ಭೂಮಿಯನ್ನು ಖಾಸಗಿಯವರ ಖಾತೆಗೆ ಮಾಡಿಕೊಟ್ಟ ಅಧಿಕಾರಿಗಳು

    -16 ವರ್ಷಗಳ ಬಳಿಕ ಪ್ರಕರಣ ಬೆಳಕಿಗೆ

    ತುಮಕೂರು: ಕಂದಾಯ ಅಧಿಕಾರಿಗಳು, ಸರ್ವೆ ಅಧಿಕಾರಿಗಳು ಸೇರಿಕೊಂಡು ಅರಣ್ಯ ಭೂಮಿಯನ್ನು ಖಾಸಗಿಯವರಿಗೆ ಖಾತೆ ಮಾಡಿಕೊಟ್ಟ ಪ್ರಕರಣ ತುಮಕೂರಿನಲ್ಲಿ ಬೆಳಕಿಗೆ ಬಂದಿದೆ.

    ಬರೋಬ್ಬರಿ 78 ಎಕರೆ ಅರಣ್ಯ ಭೂಮಿಯನ್ನು ಖಾಸಗಿ ವ್ಯಕ್ತಿಗಳ ಹೆಸರಿಗೆ ಖಾತೆ ಮಾಡಿಕೊಟ್ಟಿದ್ದಾರೆ. 16 ವರ್ಷಗಳ ಬಳಿಕ ಅಧಿಕಾರಿ ಕಳ್ಳಾಟ ಬಯಲಾಗಿದ್ದು, ಕಬಳಿಸಿದ ಜಾಗದಲ್ಲಿ ಸದ್ಯ ಪ್ರತಿಷ್ಠಿತ ರಿಲಯನ್ಸ್ ಕಂಪನಿಯ ಗೋಡಾನ್ ನಿರ್ಮಾಣವಾಗಿದೆ.

    ತಾಲೂಕಿನ ನಂದಿಹಳ್ಳಿ ಗ್ರಾಮದ ಸರ್ವೆ ನಂಬರ್ 42 ರಲ್ಲಿನ ಸುಮಾರು 78 ಎಕರೆ ಅರಣ್ಯ ಭೂಮಿ ಖಾಸಗಿ ಕಂಪನಿಗೆ ಅಧಿಕಾರಿಗಳು ಖಾತೆ ಮಾಡಿಕೊಡಲಾಗಿದೆ. ನಂದಿಹಳ್ಳಿಯ 42ನೇ ಸರ್ವೆ ನಂಬರಲ್ಲಿನ 73 ಹೆಕ್ಟೆರ್ ಜಾಗ ಅಂದರೆ ಸರಿಸುಮಾರು 181 ಎಕರೆ ಸರ್ಕಾರಿ ಖರಾಬು ಜಮೀನನ್ನು 1994ರಲ್ಲಿ ಅರಣ್ಯ ಇಲಾಖೆಗೆ ವರ್ಗಾವಣೆ ಮಾಡಲಾಗಿತ್ತು. ಅರಣ್ಯ ಇಲಾಖೆಗೆ ಸೇರಿದ್ದ ಭೂಮಿಯನ್ನು ಕಂದಾಯ ಅಧಿಕಾರಿಗಳು, ಸರ್ವೆ ಅಧಿಕಾರಿಗಳು ಸೇರಿಕೊಂಡು ಹಿಮಾದ್ರಿ ಎಂಟರ್ ಪ್ರೈಸಸ್ ಎಂಬ ಕಂಪನಿಗೆ 78 ಎಕರೆಯನ್ನು ಪರಭಾರೆ ಮಾಡಿದ್ದಾರೆ. ಈ 78 ಎಕರೆ ಜಾಗವನ್ನು ಮೊದಲು ಸುಮಾರು 13 ನಕಲಿ ರೈತರ ಹೆಸರಿಗೆ ಹರಿದು ಹಂಚಿ ಖಾತೆ ಮಾಡುತ್ತಾರೆ. ಬಳಿಕ ಆ ನಕಲಿ ರೈತರಿಂದ ಹಿಮಾದ್ರಿ ಕಂಪನಿಗೆ ಮಾರಿದಂತೆ ದಾಖಲೆ ಸೃಷ್ಟಿಸಿ ಅರಣ್ಯ ಭೂಮಿಯನ್ನು ಪಡೆದಿದ್ದಾರೆ.

    ವಿಪರ್ಯಾಸ ಎಂದರೇ 2004ರಲ್ಲಿ ಅರಣ್ಯ ಇಲಾಖೆಯ 78 ಎಕರೆ ಜಾಗ ಹಿಮಾದ್ರಿ ಕಂಪನಿಗೆ ಪರಭಾರೆಯಾಗಿದ್ದು, ಆ ಬಳಿಕ ಈ ಪ್ರದೇಶವನ್ನು 2011ರಲ್ಲಿ ಹಿಮಾದ್ರಿ ಕಂಪನಿ, ರಿಲಯನ್ಸ್ ಕಂಪನಿಗೆ ಮಾರಾಟ ಮಾಡುತ್ತದೆ. ಹೀಗೆ ಕಬಳಿಸಿದ ಅರಣ್ಯ ಭೂಮಿಯಲ್ಲಿ ರಿಲಯನ್ಸ್ ಕಂಪನಿಯ ಗೋಡಾನ್ ನಿರ್ಮಾಣ ಮಾಡಿದೆ. ಸುಮಾರು 16 ವರ್ಷಗಳ ನಂತರ ಸಾಮಾಜಿಕ ಕಾರ್ಯಕರ್ತ ಜಿ.ಎಸ್.ಬಸವರಾಜ್ ಈ ಪ್ರಕರಣವನ್ನು ಬಯಲಿಗೆ ಎಳೆದಿದ್ದಾರೆ. ನಕಲಿ ದಾಖಲೆ ಸೃಷ್ಟಿಸಿ ಅರಣ್ಯ ಭೂಮಿ ಮಾರಾಟ ಮಾಡಿದ್ದ ಅಂದಿನ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಎಸಿ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ.

    ಸ್ವತಃ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಮ್ಮ ಭೂಮಿ ಕಬಳಿಕೆ ಆಗಿರುವ ವಿಚಾರ ಗೊತ್ತಿಲ್ಲ. ಹಾಗಾಗಿ ಯಾವುದೇ ಪ್ರತಿಕ್ರಿಯೆ ನೀಡಲು ಮುಂದಾಗಿಲ್ಲ. ಈ ಪ್ರಕರಣ ಕೇವಲ ಒಂದು ಉದಾಹರಣೆ ಅಷ್ಟೇಯಾಗಿದ್ದು ಹೀಗೆ ಜಿಲ್ಲೆಯಲ್ಲಿ ಸಾವಿರಾರು ಎಕರೆ ಅರಣ್ಯ ಭೂಮಿ ಕಬಳಿಸಿದ ಪ್ರಕರಣ ಇದೆ. ಸರ್ಕಾರಿ ಭೂಮಿಯನ್ನು ಕಾಪಾಡಬೇಕಿದ್ದ ಅಧಿಕಾರಿಗಳು ಮಾತ್ರ ತಿಂಗಳ ಸಂಬಳ ಪಡೆದು ಮೌನವಹಿಸಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಪಂಚಾಯಿತಿ ಅಧಿಕಾರಿಗಳ ಗೋಲ್ಮಾಲ್ – ಬಡವರಿಗೆ ಸೇರಬೇಕಿದ್ದ ಜಮೀನು ಖಾಸಗಿ ವ್ಯಕ್ತಿ ಪಾಲು

    ಪಂಚಾಯಿತಿ ಅಧಿಕಾರಿಗಳ ಗೋಲ್ಮಾಲ್ – ಬಡವರಿಗೆ ಸೇರಬೇಕಿದ್ದ ಜಮೀನು ಖಾಸಗಿ ವ್ಯಕ್ತಿ ಪಾಲು

    – ಕೋಟ್ಯಂತರ ರೂ. ಜಮೀನು ಖಾಸಗಿಯವರಿಗೆ

    ಬೀದರ್: ಸರ್ಕಾರ ಬಡ ಫಲಾನುಭವಿಗಳಿಗೆ ನೀಡಿದ್ದ ಸಿ-ಫಾರ್ಮ್ ಜಮೀನನ್ನು ಪಂಚಾಯಿತಿ ಅಧಿಕಾರಿಗಳು ಖಾಸಗಿ ವ್ಯಕ್ತಿ ಬಳಿ ಕೋಟ್ಯಂತರ ರೂ. ಹಣ ಪಡೆದು ಮಾರಿದ್ದಾರೆ ಎನ್ನುವ ಆರೋಪ ಬಸವಕಲ್ಯಾಣ ತಾಲೂಕಿನಲ್ಲಿ ಕೇಳಿಬಂದಿದೆ.

    ಪಂಚಾಯತಿ ಅಧಿಕಾರಿಗಳ ಭಾರೀ ಗೋಲ್ಮಾಲ್ ನಿಂದ ಬಡ ಫಲಾನುಭವಿಗಳಿಗೆ ಸೇರಬೇಕಿದ್ದ ಸಿ-ಫಾರ್ಮ್ ಜಮೀನು ಖಾಸಗಿ ವ್ಯಕ್ತಿ ಪಾಲಾಗಿದ್ದು, ಪಂಚಾಯಿತಿ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸರ್ಕಾರದ ಸಿ-ಫಾರ್ಮ್ ಜಮೀನನ್ನು ಹಬೀಬಖಾನ್ ಎಂಬ ಖಾಸಗಿ ವ್ಯಕ್ತಿಗೆ ಪರಭಾರೆ ಮಾಡಿದ್ದು, ಬಸವಕಲ್ಯಾಣ ತಾಲೂಕಿನ ಸಸ್ತಾಪೂರ್ ಪಂಚಾಯತಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಜಮೀನು ರಾಷ್ಟ್ರೀಯ ಹೆದ್ದಾರಿ 9ರ ಬಳಿ ಇದ್ದು, ಕೋಟ್ಯಂತರ ಬೆಲೆ ಬಾಳುವ ಜಮೀನಾಗಿದೆ. ಹೀಗಾಗಿ ಪಿಡಿಓ ಚಂದ್ರಮ ಈ ಜಮೀನನ್ನು ಖಾಸಗಿ ವ್ಯಕ್ತಿ ಹೆಸರಿಗೆ ಪರಭಾರೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.

    ಖಾಸಗಿ ವ್ಯಕ್ತಿಗೆ ಪರಭಾರೆ ಮಾಡಿರುವ ಕುರಿತು ಪಹಣಿ ಕೂಡ ಲಭ್ಯವಾಗಿದ್ದು, ಸಿ- ಫಾರ್ಮ್ ನಲ್ಲಿ ಜಾಗ ಪಡೆದಿದ್ದ ಬಡ ಫಲಾನುಭವಿಗಳು ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗುತ್ತಿಲ್ಲ. ಹೀಗಾಗಿ ಬಡವರ ಜಮೀನು ಏಕಾಏಕಿ ಖಾಸಗಿ ವ್ಯಕ್ತಿ ಹೆಸರಿಗೆ ಮಾಡಿ ಅಧಿಕಾರಿಗಳು ಕೋಟ್ಯಂತರ ರೂ.ಗಳ ಗೋಲ್ಮಾಲ್ ಮಾಡಿದ್ದಾರೆ ಎಂದು ಫಲಾನುಭವಿಗಳು ನ್ಯಾಯ ಒದಗಿಸುವಂತೆ ಗೋಳಾಡುತ್ತಿದ್ದಾರೆ.