Tag: ಖಾಸಗಿ ವಾಹಿನಿ

  • ಚಿಕಿತ್ಸೆ ಫಲಿಸದೆ ಹಸೆಮಣೆ ಏರುವ ಮುನ್ನವೇ ಖಾಸಗಿ ವಾಹಿನಿಯ ಕ್ಯಾಮೆರಾಮನ್ ಸಾವು

    ಚಿಕಿತ್ಸೆ ಫಲಿಸದೆ ಹಸೆಮಣೆ ಏರುವ ಮುನ್ನವೇ ಖಾಸಗಿ ವಾಹಿನಿಯ ಕ್ಯಾಮೆರಾಮನ್ ಸಾವು

    ಹುಬ್ಬಳ್ಳಿ: ಅಪಘಾತದಲ್ಲಿ ತ್ರೀವವಾಗಿ ಗಾಯಗೊಂಡಿದ್ದ ಖಾಸಗಿ ವಾಹಿನಿ (ಪವರ್ ಟಿವಿ) ಕ್ಯಾಮೆರಾಮನ್ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

    ಸುನೀಲ್ ಮೃತ ಕ್ಯಾಮೆರಾಮನ್. ಸೆಪ್ಟೆಂಬರ್ 30 ರಂದು ರಾತ್ರಿ ಹುಬ್ಬಳ್ಳಿ ಚಾಟ್ನಿ ಕಾಂಪ್ಲೆಕ್ಸ್ ಬಳಿ ಎರಡು ಬೈಕ್‍ಗಳು ಮುಖಾಮುಖಿ ಡಿಕ್ಕಿಯಾಗಿತ್ತು. ಅಪಘಾತದಲ್ಲಿ ಹುಬ್ಬಳ್ಳಿಯ ಅಪ್ತಾಬ್ ಎಂಬಾತ ತ್ರೀವಗಾಗಿ ಗಾಯಗೊಂಡಿದ್ದ. ತಕ್ಷಣವೇ ಗಾಯಾಳುವನ್ನ ಕಿಮ್ಸ್‌ಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದನು.

    ಜೊತೆಗೆ ಖಾಸಗಿ ವಾಹಿನಿ ಕ್ಯಾಮೆರಾಮನ್ ಸುನೀಲ್‍ಗೂ ಸಹ ಗಂಭೀರವಾಗಿ ಗಾಯಗಳಾಗಿದ್ದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಸುನೀಲ್ ತಲೆ ಹಾಗೂ ಮುಖಕ್ಕೆ ಗಂಭೀರ ಗಾಯಗಳಾದ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೆ ಕ್ಯಾಮೆರಾಮನ್ ಸುನೀಲ್ ಮೃತಪಟ್ಟಿದ್ದಾರೆ.

    ಸದಾ ಚುರುಕಿನಿಂದಲೇ ಕೆಲಸ ಮಾಡುತ್ತಿದ್ದ ಸುನೀಲ್‍ಗೆ ಡಿಸೆಂಬರ್‌ನಲ್ಲಿ ವಿವಾಹ ಕೂಡ ನಿಗದಿಯಾಗಿತ್ತು. ಆದರೆ ಹಸೆಮಣೆ ಏರುವ ಮುನ್ನವೇ ಕ್ಯಾಮೆರಾಮನ್ ಸಾವನಪ್ಪಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

    ಕ್ಯಾಮೆರಾಮನ್ ಸಾವಿಗೆ ಧಾರವಾಡ ಜಿಲ್ಲಾ ಪತ್ರಕರ್ತರು ಸಂಘ ಕಂಬನಿ ಮಿಡಿದಿದ್ದು, ಮೃತನ ಆತ್ಮಕ್ಕೆ ಶಾಂತಿ ಕೋರಿದ್ದಾರೆ. ಈ ಘಟನೆಯ ಕುರಿತು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬೈಕ್ ಅಪಘಾತ- ಖಾಸಗಿ ವಾಹಿನಿಯ ಕ್ಯಾಮೆರಾಮನ್ ಸ್ಥಿತಿ ಗಂಭೀರ

    ಬೈಕ್ ಅಪಘಾತ- ಖಾಸಗಿ ವಾಹಿನಿಯ ಕ್ಯಾಮೆರಾಮನ್ ಸ್ಥಿತಿ ಗಂಭೀರ

    ಹುಬ್ಬಳ್ಳಿ: ಕಳೆದ ರಾತ್ರಿ ಸಂಭವಿಸಿದ ಎರಡು ಬೈಕ್ ಗಳ ನಡುವಿನ ಮುಖಾಮುಖಿ ಡಿಕ್ಕಿಯಲ್ಲಿ ಓರ್ವ ಮೃತಪಟ್ಟಿದ್ದು, ಖಾಸಗಿ ವಾಹಿನಿಯ ಕ್ಯಾಮೆರಾಮನ್ ಸ್ಥಿತಿ ಚಿಂತಾಜನಕವಾಗಿದೆ.

    ಹುಬ್ಬಳ್ಳಿ ಚಾಟ್ನಿ ಕಾಂಪ್ಲೆಕ್ಸ್ ಬಳಿ ಬುಧವಾರ ರಾತ್ರಿ ಬೈಕ್‍ಗಳ ನಡುವೆ ಅಪಘಾತ ಸಂಭವಿಸಿತ್ತು. ಈ ಘಟನೆಯಲ್ಲಿ ಹುಬ್ಬಳ್ಳಿಯ ಅಪ್ತಾಬ್ ಎಂಬ ಯುವಕನಿಗೆ ಗಂಭೀರ ಗಾಯಗಳಾಗಿತ್ತು. ಗಾಯಾಳುವನ್ನ ತಕ್ಷಣವೇ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಯಿತಾದರೂ ಚಿಕಿತ್ಸೆ ಫಲಿಸದೇ ಸಾವಿಗೀಡಾದ್ದಾರೆ.

    ಇನ್ನೊಂದು ಬೈಕಿನಲ್ಲಿದ್ದ ಖಾಸಗಿ ವಾಹಿನಿಯ ಹುಬ್ಬಳ್ಳಿ ಕ್ಯಾಮೆರಾಮನ್ ಸುನೀಲ್ ಎಂಬಾತನಿಗೂ ಗಂಭೀರ ಗಾಯಗಳಾಗಿವೆ. ಸದ್ಯ ಸುನೀಲ್ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಘಟನೆಯ ಕುರಿತು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಸ್ಯಾಂಡಲ್‍ವುಡ್ ಆಯ್ತು ಈಗ ಬಾಲಿವುಡ್‍ನಲ್ಲಿ ಸಂಯುಕ್ತ ಕಿರಿಕ್!

    ಸ್ಯಾಂಡಲ್‍ವುಡ್ ಆಯ್ತು ಈಗ ಬಾಲಿವುಡ್‍ನಲ್ಲಿ ಸಂಯುಕ್ತ ಕಿರಿಕ್!

    ಬೆಂಗಳೂರು: ಸ್ಯಾಂಡಲ್‍ವುಡ್ ಬಳಿಕ ಬಿಗ್ ಬಾಸ್ ಮನೆಯಲ್ಲಿ ಕಿರಿಕ್ ಮಾಡಿಕೊಂಡಿದ್ದ `ಕಿರಿಕ್ ಪಾರ್ಟಿ’ ಚಿತ್ರದ ನಟಿ ಸಂಯುಕ್ತ ಹೆಗ್ಡೆ ಈಗ ಬಾಲಿವುಡ್ ನಲ್ಲೂ ಕಿರಿಕ್ ಮಾಡಿಕೊಂಡಿದ್ದಾರೆ. ಎಂಟಿವಿಯ `ಸ್ಪ್ಲಿಟ್ಸ್ ವಿಲ್ಲಾ’ ಡೇಟಿಂಗ್ ರಿಯಾಲಿಟಿ ಶೋನಲ್ಲಿ ಸಂಯುಕ್ತ ಇತರೇ ಸ್ಪರ್ಧಿಗಳೊಂದಿಗೆ ಕಿರಿಕ್ ಮಾಡಿಕೊಂಡಿದ್ದಾರೆ.

    ಸಂಯುಕ್ತ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟ ಒಂದೇ ದಿನಕ್ಕೆ ಇತರ ಸ್ಪರ್ಧಿಗಳು ಅವರನ್ನು ಶೋದಿಂದ ಹೊರ ಕಳುಹಿಸಲು ಪ್ಲಾನ್ ಮಾಡುತ್ತಿದ್ದಾರೆ. ಸಂಯುಕ್ತ ಬಿಳಿ ಮತ್ತು ಕಪ್ಪು ಬಣ್ಣದ ಬಿಕಿನಿ ತೊಟ್ಟು ಕಾರ್ಯಕ್ರಮಕ್ಕೆ ಎಂಟ್ರಿಕೊಟ್ಟಿದ್ದರು. ಈ ಕಾರ್ಯಕ್ರಮದಲ್ಲಿ ಸಿಂಬಾ ಹಾಗೂ ಮೈರಾ ನಡುವೆ ಲ್ವವಿಡವಿ ನಡೆಯುತ್ತಿತ್ತು. ಇದೀಗ ಸಂಯುಕ್ತ ಅವರ ಎಂಟ್ರಿಯಿಂದ ಸಿಂಬಾ ಕಣ್ಣು ಸಂಯುಕ್ತ ಕಡೆಗೆ ಜಾರಿದೆ. ಇದರಿಂದಾಗಿ ಮೈರಾ ಸಿಟ್ಟು ಮಾಡಿಕೊಂಡಿದ್ದಾರೆ.

    ಇದೀಗ ಸಿಂಬಾ ಮತ್ತು ಸಂಯುಕ್ತ ನಡುವೆ ಸಂಥಿಂಗ್ ಸಂಥಿಂಗ್ ನಡೆಯುತ್ತಿದ್ದು, ಟೆಸ್ಟ್ ಯುವರ್ ಬಾಂಡ್ ಚಾಲೆಂಜ್‍ನಲ್ಲಿ ಸೋಲನ್ನು ಅನುಭವಿಸಿದ್ದರು. ಕಾರ್ಯಕ್ರಮಕ್ಕೆ ಎಂಟ್ರಿಕೊಟ್ಟ ಒಂದೇ ದಿನಕ್ಕೆ ಸಂಯುಕ್ತ ಹಲವು ಸ್ಪರ್ಧಿಗಳ ಕೆಂಗಣ್ಣಿಗೆ ಗುರಿಯಾಗಿದ್ದು, ಶೋನಿಂದ ಹೋರಬರುತ್ತಾರಾ ಇಲ್ಲ ಅಲ್ಲೇ ಉಳಿಯುತ್ತಾರಾ ಎಂಬುದು ಮುಂದಿನ ಎಫಿಸೋಡ್‍ನಲ್ಲಿ ಗೊತ್ತಾಗಲಿದೆ. ಬಾಲಿವುಡ್ ನಟಿ ಸನ್ನಿಲಿಯೋನ್ ಮತ್ತು ರಣ್‍ವಿಜಯ್ ಸಿಂಗಾ ಈ ಕಾರ್ಯಕ್ರಮವನ್ನ ನಿರೂಪಿಸುತ್ತಿದ್ದಾರೆ.

    ಕನ್ನಡ ಬಿಗ್‍ಬಾಸ್ 5ನೇ ಆವೃತ್ತಿಯಲ್ಲಿ ಸಂಯುಕ್ತಾ ವೈಲ್ಡ್ ಕಾರ್ಡ್ ಎಂಟ್ರಿ ಪಡೆದು ಮನೆಯನ್ನು ಪ್ರವೇಶಿಸಿದ್ದರು. ಅಲ್ಲೂ ಕೂಡ ಪ್ರತಿ ಸ್ಪರ್ಧಿಯಾಗಿದ್ದ ಸಮೀರ್ ಆಚಾರ್ಯ ಮೇಲೆ ಹಲ್ಲೆ ಮಾಡಿ ಕಿರಿಕ್ ಮಾಡಿ ಸುದ್ದಿಯಾಗಿದ್ದರು.

    https://www.facebook.com/mtvindia/videos/2188718738122121/

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಿಯಾಲಿಟಿ ಶೋ ಆಡಿಷನ್ ನಲ್ಲಿ ಸೆಕ್ಸ್ ಮಾಡೋಕೆ ಬರುತ್ತಾ ಪ್ರಶ್ನೆ ಕಿರಿಕ್: ಆಯೋಜಕರ ಪರ, ವಿರುದ್ಧ ನಿಂತ ಹುಡುಗಿಯರು

    ರಿಯಾಲಿಟಿ ಶೋ ಆಡಿಷನ್ ನಲ್ಲಿ ಸೆಕ್ಸ್ ಮಾಡೋಕೆ ಬರುತ್ತಾ ಪ್ರಶ್ನೆ ಕಿರಿಕ್: ಆಯೋಜಕರ ಪರ, ವಿರುದ್ಧ ನಿಂತ ಹುಡುಗಿಯರು

    ಬೆಂಗಳೂರು: ಖಾಸಗಿ ವಾಹಿನಿಯ ರಿಯಾಲಿಟಿ ಶೋ ಕಾರ್ಯಕ್ರಮ ಆಡಿಷನ್ ವೇಳೆ ಆಯೋಜಕರು ವಿದ್ಯಾರ್ಥಿನಿಯರಿಗೆ ಅಶ್ಲೀಲ ಪ್ರಶ್ನೆ ಕೇಳಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

    ನಗರದ ಮಹಾರಾಣಿ ಅಮ್ಮಣ್ಣಿ ಕಾಲೇಜಿನಲ್ಲಿ ಖಾಸಗಿ ವಾಹಿನಿಯೊಂದು ರಿಯಾಲಿಟಿ ಶೋಗಾಗಿ ಆಡಿಶನ್ ಆಯೋಜಿಸಿತ್ತು. ಈ ಆಡಿಶನ್ ಗೆ ರಾಜ್ಯಾದ್ಯಂತ ಸಾವಿರಕ್ಕೂ ಹೆಚ್ಚು ಹುಡುಗಿಯರು ಆಗಮಿಸಿದ್ದರು. ಈ ಸಂದರ್ಭದಲ್ಲಿ ಆಯೋಜಕರು ಸೆಕ್ಸ್ ಮಾಡೋಕೆ ಬರುತ್ತಾ? ಬಾಯ್ ಫ್ರೆಂಡ್ ಇದ್ದಾರಾ ಎನ್ನುವ ಪ್ರಶ್ನೆ ಮಾಡಿದ್ದು ಅಲ್ಲದೇ ಹುಡುಗನಿಗೆ ಕಿಸ್ ಮಾಡು ಅಂತಾ ಒತ್ತಾಯ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

    ಆಡೀಶನ್ ನಲ್ಲಿ ಭಾಗವಹಿಸಿದ್ದ ಸ್ಪರ್ಧಿ ಶರ್ಲಿನ್ ಪ್ರತಿಕ್ರಿಯಿಸಿ, ನಾನು ಚಿತ್ರರಂಗದಲ್ಲಿ ಸೇರಬೇಕೆಂದು ಆಸೆ ಇಟ್ಟುಕೊಂಡು ಈ ಆಡಿಶನ್ ನಲ್ಲಿ ಭಾಗವಹಿಸಿದ್ದೆ. ಆದರೆ ಇಲ್ಲಿ ಅಲ್ಲಿಂದ ಹುಡುಗನಿಗೆ ಕಿಸ್ ಮಾಡು ಎಂದು ಕೇಳಿದ್ರು. ಅಷ್ಟೇ ಅಲ್ಲದೇ ಎಲ್ಲರ ಮುಂದೆ ಡ್ರೆಸ್ ಚೆಂಜ್ ಮಾಡು ಎಂದು ಪ್ರಶ್ನೆ ಕೇಳಿದ್ರು. ಒಂದು ವೇಳೆ ಅವರು ಹೇಳಿದಂತೆ ಕೇಳದೇ ಇದ್ದಲ್ಲಿ ಅಲ್ಲೇ ನಮ್ಮನ್ನು ರಿಜೆಕ್ಟ್ ಮಾಡುತ್ತಾರೆ. ನಾವು ಏನೋ ಕನಸು ಇಟ್ಟುಕೊಂಡು ಬಂದಿರುತ್ತೇವೆ. ಹೀಗಿರುವಾಗ ಈ ರೀತಿ ಅಸಭ್ಯ ಪ್ರಶ್ನೆ ಕೇಳುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದಾರೆ.

    ಆದರೆ ಈ ಆಡಿಶನ್ ನಲ್ಲಿ ಭಾಗವಹಿಸಿದ್ದ ಹುಡುಗಿಯರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಆಯೋಜಕರು ಈ ರೀತಿಯ ಯಾವುದೇ ಪ್ರಶ್ನೆಯನ್ನು ಕೇಳಿಲ್ಲ. ಆಡಿಶನ್ ನಲ್ಲಿ ಸೆಲೆಕ್ಟ್ ಆಗದೇ ಇರುವುದಕ್ಕೆ ಈ ರೀತಿಯ ಆರೋಪ ಮಾಡಲಾಗಿದೆ. ಸೆಕ್ಸ್ ವಿಚಾರವನ್ನು ಆಯೋಜಕರು ಪ್ರಶ್ನಿಸಿಲ್ಲ. ಬಾಯ್ ಫ್ರೆಂಡ್ ಇದ್ದಾರಾ ಎಂದು ಕೇಳಿದ್ದಾರೆ. ಅಶ್ಲೀಲವಾಗಿ ಬೇರೆ ಏನು ಪ್ರಶ್ನಿಸಿಲ್ಲ. ಒಂದು ವೇಳೆ ರೀತಿ ಪ್ರಶ್ನೆ ಕೇಳಿದ್ದರೆ ಮೊದಲೇ ಹೇಳಬಹುದಿತ್ತು. ಆಡಿಷನ್ ಮುಗಿದು ಎರಡನೇ ಹಂತಕ್ಕೆ ಸೆಲೆಕ್ಟ್ ಆದ ಮೇಲೆ ವಿವಾದ ಸೃಷ್ಟಿಯಾಗಿದೆ. ಈಗ ಆಡಿಷನ್ ರದ್ದಾಗಿದ್ದರಿಂದ ನಮಗೆಲ್ಲ ಬೇಸರವಾಗಿದೆ ಎಂದು ಹೇಳಿದ್ದಾರೆ.

    ಈ ಆರೋಪದ ಬಗ್ಗೆ ಆಯೋಜಕರನ್ನು ಪ್ರಶ್ನಿಸಿದ್ದಾಗ, ನಾವು ಸಾಕಷ್ಟು ರಿಯಾಲಿಟಿ ಶೋಗಳನ್ನು ನಡೆಸಿದ್ದೇವೆ. ಈ ರೀತಿಯ ಪ್ರಶ್ನೆಗಳನ್ನು ನಾವು ಕೇಳಿಲ್ಲ. ಆಕೆ ಸುಳ್ಳು ಹೇಳುತ್ತಿದ್ದಾಳೆ. ಈ ರೀತಿಯ ಪ್ರಶ್ನೆ ಕೇಳಿದ ವ್ಯಕ್ತಿ ಯಾರು ಎಂದು ನಾವು ಆಕೆಯಲ್ಲಿ ಪಾಯಿಂಟ್ ಮಾಡಿ ತೋರಿಸಿ ಎಂದು ಕೇಳಿದಾಗ ಆಕೆ ಯಾರನ್ನು ತೋರಿಸಲಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

     

  • ಉದ್ಯಮಿಗೆ ಹಣಕ್ಕಾಗಿ ಬೇಡಿಕೆ ಇಟ್ಟ ಖಾಸಗಿ ವಾಹಿನಿಯ ಸಿಇಒ ಬಂಧನ

    ಉದ್ಯಮಿಗೆ ಹಣಕ್ಕಾಗಿ ಬೇಡಿಕೆ ಇಟ್ಟ ಖಾಸಗಿ ವಾಹಿನಿಯ ಸಿಇಒ ಬಂಧನ

    ಬೆಂಗಳೂರು: ಉದ್ಯಮಿಯೊಬ್ಬರಿಂದ ಹಣಕ್ಕಾಗಿ ಬೇಡಿಕೆಯಿಟ್ಟ ಖಾಸಗಿ ವಾಹಿನಿಯ ಸಿಇಒ ಲಕ್ಷ್ಮಿ ಪ್ರಸಾದ್ ವಾಜಪೇಯಿ ಎಂಬವರನ್ನು ಕೋರಮಂಗಲ ಪೊಲೀಸರು ಇಂದು ಬಂಧಿಸಿದ್ದಾರೆ. ಲಕ್ಷ್ಮಿ ಪ್ರಸಾದ್ ವಾಜಪೇಯಿಗೆ ಸಹಕಾರ ನೀಡಿದ ಮಿಥುನ್ ಎಂಬಾತನನ್ನೂ ಕೂಡ ಕಮರ್ಷಿಯಲ್ ಸ್ಟ್ರೀಟ್, ಮಹಾಲಕ್ಷ್ಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ.

    ಸಿಕ್ಕಿಬಿದ್ದಿದ್ದು ಹೇಗೆ?: ಖಾಸಗಿ ವಾಹಿನಿಯಿಂದ ಬೆದರಿಕೆ ಇರುವ ಬಗ್ಗೆ ಉದ್ಯಮಿಯೊಬ್ಬರು ಕೋರಮಂಗಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನಲ್ಲಿ ಚಾನೆಲ್ ಸಿಇಒ ಲಕ್ಷ್ಮಿ ಪ್ರಸಾದ್ ವಾಜಪೇಯಿ 10 ಕೋಟಿ ರೂ. ಹಣಕ್ಕೆ ಬೇಡಿ ಇಟ್ಟಿದ್ದಾರೆ. ಹಣವನ್ನು ನೀಡದಿದ್ದರೆ ಚಾನೆಲ್‍ನಲ್ಲಿ ವರದಿ ಪ್ರಕಟ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಅಲ್ಲದೇ, ಕೆಲ ನಿಮಿಷಗಳ ಕಾಲ ಸುದ್ದಿ ಪ್ರಸಾರ ಮಾಡಿದ್ದರು. ಇದಾದ ಬಳಿಕ ಚಾನೆಲ್‍ನಿಂದ ಹಣಕ್ಕೆ ಡಿಮ್ಯಾಂಡ್ ಬಂದಿತ್ತು. ದೂರು ಸ್ವೀಕರಿಸಿದ ಪೊಲೀಸರು ವಾಹಿನಿ ಕಚೇರಿಯಲ್ಲೇ ಹಣ ಪಡೆಯುತ್ತಿದ್ದ ವೇಳೆ ದಾಳಿ ಮಾಡಿ ಲಕ್ಷ್ಮಿಪ್ರಸಾದ್ ಹಾಗೂ ಮಿಥುನ್ ಎಂಬವರನ್ನು ಬಂಧಿಸಿದ್ದಾರೆ.

    ಸಿಇಓ ವಿರುದ್ಧ ಮತ್ತಷ್ಟು ಪ್ರಕರಣ: ಇದೇ ಸಿಇಒ ವಿರುದ್ಧ ಕಮರ್ಷಿಯಲ್ ಸ್ಟ್ರೀಟ್ ಠಾಣೆಯಲ್ಲಿ ಮತ್ತೊಂದು ದೂರು ದಾಖಲಾಗಿದೆ. ಈ ಪ್ರಕರಣದಲ್ಲಿ ಉದ್ಯಮಿಯೊಬ್ಬರಿಂದ ಲಕ್ಷ್ಮಿಪ್ರಸಾದ್ ಅವರು 10 ಕೋಟಿ ನಗದು ಹಾಗೂ 30 ಲಕ್ಷ ರೂಪಾಯಿ ಮೌಲ್ಯದ ಆಭರಣಗಳನ್ನು ನೀಡುವಂತೆ ಬೇಡಿಕೆಯಿಟ್ಟಿದ್ದರು. ಇದರಲ್ಲಿ ವಾಜಪೇಯಿ ಅವರು ನೀಡಿದ ವಿವಿಧ ಖಾತೆಗಳಿಗೆ ಒಟ್ಟಾರೆ 10 ಕೋಟಿ ರೂಪಾಯಿಯನ್ನು ಜಮೆ ಮಾಡಿದ್ದರು. ಒಟ್ಟಾರೆಯಾಗಿ ಈ ಉದ್ಯಮಿಗೆ 15 ಕೋಟಿ ನೀಡುವಂತೆ ಬೆದರಿಕೆ ಹಾಕಿದ್ದರು ಎಂದು ದೂರು ದಾಖಲಾಗಿತ್ತು. ಮಹಾಲಕ್ಷ್ಮಿಪುರಂ ಠಾಣೆಯಲ್ಲಿ ಇಂಥದ್ದೇ ಮತ್ತೊಂದು ದೂರು ದಾಖಲಾಗಿದ್ದು ಈ ಪ್ರಕರಣದಲ್ಲೂ ಲಕ್ಷ್ಮಿಪ್ರಸಾದ್ ವಿರುದ್ಧ ಎಫ್‍ಐಆರ್ ದಾಖಲಾಗಿತ್ತು.

    ಬ್ಲ್ಯಾಕ್‍ಮೇಲ್ ಹೇಗೆ?: ಉದ್ಯಮಿಗಳನ್ನು ಕೇಂದ್ರವಾಗಿಟ್ಟುಕೊಂಡೇ ನಡೆಸುತ್ತಿದ್ದ ಕಾರ್ಯಾಚರಣೆಯಲ್ಲಿ ಆರಂಭದಲ್ಲಿ ಉದ್ಯಮಿಯ ಬಗ್ಗೆ ನೆಗೆಟಿವ್ ಸುದ್ದಿಗಳನ್ನು ಚಾನೆಲ್‍ನಲ್ಲಿ ಪ್ರಸಾರ ಮಾಡುತ್ತಿದ್ದರು. ಇದಾದ ಬಳಿಕ ಅದೇ ಉದ್ಯಮಿಗೆ ಕಾಲ್ ಮಾಡಿ ನಿಮ್ಮ ವಿರುದ್ಧ ನಮ್ಮ ಬಳಿ ಇನ್ನಷ್ಟು ಸಾಕ್ಷ್ಯಗಳಿವೆ. ನೀವು ನಮಗೆ ಹಣ ಕೊಡಿ ಇಲ್ಲದಿದ್ದರೆ ನಿಮ್ಮ ವಿರುದ್ಧ ಸುದ್ದಿ ಪ್ರಸಾರ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದರು. ಸದ್ಯ ಡಿಸಿಪಿ ಬೋರಲಿಂಗಯ್ಯ ನೇತೃತ್ವದಲ್ಲಿ ಬಂಧಿತರ ತನಿಖೆ ಮುಂದುವರೆದಿದೆ.

    ಇದೇ ಸಿಇಒ ಬಳಿ ಉತ್ತರಪ್ರದೇಶ ಮೂಲದ ನಾಲ್ವರು ಗನ್ ಮ್ಯಾನ್‍ಗಳಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ಹೀಗಾಗಿ ಗನ್ ಮ್ಯಾನ್ ಸೆಕ್ಯೂರಿಟಿ ಪಡೆಯುವ ಲೈಸೆನ್ಸ್ ಇದೆಯಾ ಎಂದು ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಆಂಧ್ರ ಪ್ರದೇಶ ಮೂಲದ ಚಾನೆಲ್ ಮೂಲಕ ಬಂದಿರುವ ಸಿಇಒ ಲಕ್ಷ್ಮಿಪ್ರಸಾದ್ ಅಲ್ಲೂ ಇದೇ ರೀತಿ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗುತ್ತಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ಹೇಳಿದ್ದಾರೆ.