Tag: ಖಾಸಗಿ ಬಸ್

  • ಗಾಂಜಾ ಸಾಗಾಟ ಎಂದು ತನಿಖೆ ಮಾಡಿದ ಪೊಲೀಸರಿಗೆ ತಿಳಿಯಿತು ಕೊಲೆ ರಹಸ್ಯ

    ಗಾಂಜಾ ಸಾಗಾಟ ಎಂದು ತನಿಖೆ ಮಾಡಿದ ಪೊಲೀಸರಿಗೆ ತಿಳಿಯಿತು ಕೊಲೆ ರಹಸ್ಯ

    ಶಿವಮೊಗ್ಗ: ಖಾಸಗಿ ಬಸ್‍ನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ಮಾಡಿದಾಗ ಕೊಲೆ ರಹಸ್ಯ ಬಯಲಾಗಿದೆ ಎಂದು ಶಿವಮೊಗ್ಗ ಪೊಲೀಸರು ತಿಳಿಸಿದ್ದಾರೆ.

    ಖಚಿತ ಮಾಹಿತಿ ಮೇರೆಗೆ ತೀರ್ಥಹಳ್ಳಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಖಾಸಗಿ ಬಸ್‍ನಲ್ಲಿ ಗಾಂಜಾ ಸಾಗಿಸುತ್ತಿದ್ದ ವ್ಯಕ್ತಿಗಳನ್ನು ಬಂಧಿಸಿದ್ದಾರೆ. ಈ ವೇಳೆ 2 ಕೆಜಿ 300 ಗ್ರಾಂ ಗಾಂಜಾ ವಶಕ್ಕೆ ಪಡೆದುಕೊಂಡಿದ್ದು, ಕೇರಳ ಮೂಲದ ಅಜೀಲ್‍ನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಗಡಿ ಬಳಿ ಯುದ್ಧ ವಿಮಾನ ಹಾರಿಸಿ ಭಾರತವನ್ನು ಕೆಣಕುತ್ತಿದೆ ಚೀನಾ

    ವಿಚಾರಣೆ ವೇಳೆ ಶಾಕ್
    ಪೊಲೀಸರು ಬಂಧಿತ ಆರೋಪಿಯನ್ನು ವಿಚಾರಣೆ ನಡೆಸಿದ ಹಿನ್ನೆಲೆ ಫುಲ್ ಶಾಕ್ ಆಗಿದ್ದಾರೆ. ಗಾಂಜಾ ಸಾಗಾಟದ ಕಿಂಗ್ ಪಿನ್ ವಿಲ್ಸನ್‍ನ್ನು ಬಂಧಿಸಿದ ಪೊಲೀಸರು ಬೆಂಗಳೂರು ಮೂಲದ ಮತ್ತೊಬ್ಬ ಆರೋಪಿ ಅಲೆಕ್ಸ್‌ನನ್ನು ಬಂಧಿಸಿದ್ದಾರೆ.

    CRIME 2

    ಪೊಲೀಸೇ ಭಾಗಿ
    ಗೃಹ ಸಚಿವರ ತವರು ಜಿಲ್ಲೆಯಲ್ಲಿ ಪೊಲೀಸ್ ಸಿಬ್ಬಂದಿಯೇ ಗಾಂಜಾ ಪ್ರಕರಣದಲ್ಲಿ ಭಾಗಿಯಾಗಿರುವುದು ವಿಚಾರಣೆ ವೇಳೆ ಪತ್ತೆಯಾಗಿದೆ. ಅದು ಅಲ್ಲದೇ ಕೇವಲ ಗಾಂಜಾ ಪ್ರಕರಣವಷ್ಟೇ ಅಲ್ಲದೆ ವಿಲ್ಸನ್ ಮತ್ತು ಅಲೆಕ್ಸ್ ಓರ್ವನ ಕೊಲೆಗೂ ಸುಪಾರಿ ನೀಡಿದ್ದರು. ಕೊಲೆ ಮಾಡಲು ಅಪ್ರೋಜ್ ಅಹಮ್ಮದ್‍ಗೆ 80 ಸಾವಿರ ರೂ. ಸುಪಾರಿ ನೀಡಲಾಗಿತ್ತು ಎಂಬುದು ತನಿಖೆ ವೇಳೆ ಪತ್ತೆಯಾಗಿದೆ. ಇದನ್ನೂ ಓದಿ: ಅಕ್ಷರ್ ಪಟೇಲ್ ಸ್ಫೋಟಕ ಬ್ಯಾಟಿಂಗ್ – ಭಾರತಕ್ಕೆ ವಿಶ್ವದಾಖಲೆಯ ಸರಣಿ ಜಯ

    ಪೊಲೀಸರು ಅಪ್ರೋಜ್ ಅಹಮ್ಮದ್‍ನನ್ನು ಬಂಧಿಸಿದ್ದಾರೆ. ಪ್ರಸ್ತುತ ಪೊಲೀಸರು ವಿಲ್ಸನ್, ಅಲೆಕ್ಸ್ ಮತ್ತು ಅಪ್ರೋಜ್ ಅಹಮ್ಮದ್‍ನನ್ನು ಬಂಧಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪಿಯುಸಿ ಅಡ್ಮಿಷನ್‍ಗೆ ಹೊರಟಿದ್ದ ಪ್ರತಿಭಾವಂತ ವಿದ್ಯಾರ್ಥಿ ಅಪಘಾತದಲ್ಲಿ ಸಾವು

    ಪಿಯುಸಿ ಅಡ್ಮಿಷನ್‍ಗೆ ಹೊರಟಿದ್ದ ಪ್ರತಿಭಾವಂತ ವಿದ್ಯಾರ್ಥಿ ಅಪಘಾತದಲ್ಲಿ ಸಾವು

    ಹುಬ್ಬಳ್ಳಿ: ತಾರಿಹಾಳ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಖಾಸಗಿ ಬಸ್-ಲಾರಿ ನಡುವೆ ಮುಖಾಮುಖಿ ಡಿಕ್ಕಿಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಯೊಬ್ಬ ಮೃತಪಟ್ಟಿದ್ದಾನೆ.

    ಪಿಯುಸಿ ಅಡ್ಮಿಷನ್‍ಗೆ ಹೊರಟಿದ್ದ ವಿದ್ಯಾರ್ಥಿ ಮೊಹಮ್ಮದ್ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ. ಈತ ಮೈಸೂರಿನಿಂದ ಕೊಲ್ಲಾಪುರದಲ್ಲಿರುವ ಚಿಕ್ಕಪ್ಪನ ಮನೆಗೆ ರಜೆಗೆ ತೆರಳಿದ್ದ. ಹೀಗೆ ಬಸ್ಸಿನಲ್ಲಿ ಹೊರಟಿದ್ದ ಮೊಹಮ್ಮದ್ ಇದೀಗ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾನೆ. ಇದನ್ನೂ ಓದಿ: ಹುಬ್ಬಳ್ಳಿ ಅಪಘಾತ ಪ್ರಕರಣ- ಇನ್ನೂ ಐದಾರು ಜನರ ಸ್ಥಿತಿ ಚಿಂತಾಜನಕವಾಗಿದೆ: ಕಿಮ್ಸ್ ನಿರ್ದೇಶಕ

    ಮೊಹಮ್ಮದ್ ಎಸ್‍ಎಸ್‍ಎಲ್‍ಸಿಯಲ್ಲಿ 450 ಅಂಕಗಳನ್ನ ಗಳಿಸಿದ್ದ. ಹೀಗಾಗಿ ಪಿಯುಸಿ ಆಡ್ಮಿಷನ್ ಮಾಡಿಸಲು ಸೋಮವಾರ ಕೊಲ್ಲಾಪುರಿಂದ ಹೊರಟಿದ್ದ. ಆದರೆ ವಿಧಿಯಾಟಕ್ಕೆ ಮೊಹಮ್ಮದ್ ಬಲಿಯಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

  • ಎಮ್ಮೆಗೆ ಡಿಕ್ಕಿ ಹೊಡೆಯುವುದನ್ನ ತಪ್ಪಿಸಲು ಬಸ್ ಪಲ್ಟಿ

    ಎಮ್ಮೆಗೆ ಡಿಕ್ಕಿ ಹೊಡೆಯುವುದನ್ನ ತಪ್ಪಿಸಲು ಬಸ್ ಪಲ್ಟಿ

    ರಾಯಚೂರು: ರಸ್ತೆಯಲ್ಲಿ ಅಡ್ಡ ಬಂದ ಎಮ್ಮೆಗೆ ಡಿಕ್ಕಿ ಹೊಡೆಯುವುದನ್ನ ತಪ್ಪಿಸಲು ಹೋಗಿ ಖಾಸಗಿ ಬಸ್ ಪಲ್ಟಿ ಹೊಡೆದಿರುವ ಘಟನೆ ರಾಯಚೂರು-ತೆಲಂಗಾಣ ಗಡಿಯ ಕೃಷ್ಣಾ ಸೇತುವೆ ಬಳಿ ನಡೆದಿದೆ.

    ಹುಬ್ಬಳ್ಳಿಯಿಂದ ಹೈದ್ರಾಬಾದ್‍ಗೆ ಹೊರಟಿದ್ದ ಖಾಸಗಿ ಬಸ್ ಪಲ್ಟಿ ಹೊಡೆದು ಜಖಂಗೊಂಡಿದೆ. ಘಟನೆಯಲ್ಲಿ ಹತ್ತಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿವೆ. ಇದನ್ನೂ ಓದಿ: ಮಹಿಳೆ ಕತ್ತು ಹಿಸುಕಿ ಸಮಾಧಿ ಮಾಡಲು ಹೋಗಿ ತಾನೇ ಸತ್ತ

    ರಸ್ತೆಗೆ ಅಡ್ಡ ಬಂದ ಎಮ್ಮೆಗೆ ಬಸ್ ಡಿಕ್ಕಿ ಹೊಡೆಯುವುದನ್ನ ತಪ್ಪಿಸಲು ಸಾಧ್ಯವಾಗದ ಹಿನ್ನೆಲೆ ಎಮ್ಮೆ ಸ್ಥಳದಲ್ಲೇ ಸಾವನ್ನಪ್ಪಿದೆ. ಬೆಳಗಿನ ಜಾವ 4 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಗಾಯಾಳುಗಳನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

  • ಖಾಕಿ ಶರ್ಟ್ ಧರಿಸಿ ಸ್ಟೇರಿಂಗ್ ಹಿಡಿದು ರಸ್ತೆಯಲ್ಲಿ ಸಂಚಾರ – ನೋವಿನ ಹಿಂದಿದೆ ಇಂಟರೆಸ್ಟಿಂಗ್ ಸ್ಟೋರಿ

    ಖಾಕಿ ಶರ್ಟ್ ಧರಿಸಿ ಸ್ಟೇರಿಂಗ್ ಹಿಡಿದು ರಸ್ತೆಯಲ್ಲಿ ಸಂಚಾರ – ನೋವಿನ ಹಿಂದಿದೆ ಇಂಟರೆಸ್ಟಿಂಗ್ ಸ್ಟೋರಿ

    ಚಿಕ್ಕಬಳ್ಳಾಪುರ: ಖಾಸಗಿ ಬಸ್‍ನಲ್ಲಿ ಕ್ಲೀನರ್ ಆಗಿದ್ದವ, ಮುಂದೆ ಅದೇ ಬಸ್‍ನ ಚಾಲಕನಾಗಬೇಕು ಎಂಬ ಆಸೆ ಹೊಂದಿದ್ದನು. ಆದರೆ ಆತನ ಜೀವನದಲ್ಲಿ ನಡೆದ ಒಂದು ಘಟನೆ ಆತನ ಜೀವನ ದಿಕ್ಕನ್ನೆ ಬದಲಾಯಿಸಿ ಬಿಟ್ಟಿದೆ.

    ನಡೆದಿದ್ದೇನು?: ಮಂಜುನಾಥ್ ಖಾಸಗಿ ಬಸ್‍ನಲ್ಲಿ ಕ್ಲೀನರ್ ಆಗಿದ್ದನು. ಮುಂದೆ ಅದೇ ಬಸ್‍ನ ಚಾಲಕನಾಗಬೇಕು ಎಂದು ಕನಸು ಕಂಡಿದ್ದನು. ಆದರೆ ಅಪಘಾತವೊಂದರಲ್ಲಿ ಗಾಯಗೊಂಡು ಮಾನಸಿಕ ಅಸ್ವಸ್ಥತೆಗೆ ತುತ್ತಾದನು. ಈಗ ಯುವಕ ಈಗಲೂ ತಾನು ಬಸ್ ಚಾಲಕ ಎಂಬಂತೆ ಪ್ರತಿದಿನ ಬಸ್‍ನ ಸ್ಟೇರಿಂಗ್, ವ್ಹೀಲ್‍ಗೆ ಪೂಜೆ ಪುನಸ್ಕಾರ ಮಾಡಿ ಪ್ರತಿ ದಿನ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ವಿಚಿತ್ರವಾಗಿ ವರ್ತನೆ ಮಾಡುತ್ತಾ ಬಸ್ ಚಾಲನೆ ಮಾಡುವವನಂತೆ ಒಡಾಡುತ್ತಿದ್ದಾನೆ.

    ಮೇಲ್ನೋಟಕ್ಕೆ ನೋಡಲು ಆರೋಗ್ಯವಾಗಿರೋ ಯುವಕ ಪ್ರತಿ ದಿನ ಖಾಕಿ ಶರ್ಟ್ ಧರಿಸಿ, ಬೆಳಿಗ್ಗೆ ಹೂ ಇಟ್ಟು ಪೂಜೆ ಮಾಡಿ ಬಸ್ ಚಾಲನೆ ಮಾಡೋವನ ತರ ಪ್ರಮುಖ ರಸ್ತೆಗಳಲ್ಲಿ ಓಡಾಡುತ್ತಿರುತ್ತಾನೆ. ಬಸ್‍ನ ಸ್ಟೇರಿಂಗ್ ವ್ಹೀಲ್‍ಗೆ ಮಿರರ್ ಹಾಗೂ ಹಾರ್ನ್ ಸಹ ಆಳವಡಿಕೆ ಮಾಡಿಕೊಂಡಿದ್ದಾನೆ. ಮಿರರ್ ಮೇಲೆ ಚಿಂತಾಮಣಿ-ಮುರಗಮಲ್ಲ-ಬೆಂಗಳೂರು ಮಾರ್ಗದ ಜಿ.ಆರ್ ಟ್ರಾವೆಲ್ಸ್ ಬಸ್ ಎಂದು ಹೆಸರು ಹಾಕಿಸಿಕೊಂಡಿದ್ದಾನೆ.

    ಮುರಗಮಲ್ಲ ಕಡೆಯಿಂದ ಚಿಂತಾಮಣಿ ನಗರದ ಕಡೆಗೆ, ಕಾಲ್ನಡಿಗೆಯಲ್ಲಿ ಕೈಯಲ್ಲಿ ಸ್ಟೇರಿಂಗ್ ವ್ಹೀಲ್ ಹಿಡಿದು ಬಸ್ ಚಾಲನೆ ಮಾಡುವವನಂತೆ ನಟನೆ ಮಾಡುತ್ತಾನೆ. ಗೇರ್ ಬದಲಾಯಿಸೋದು, ನಿಲ್ದಾಣಗಳ ಬಳಿ ಬಂದು ಬ್ರೇಕ್ ಹಾಕಿ ಬಸ್ ನಿಲ್ಲಿಸೋದು, ಪ್ರಯಾಣಿಕರನ್ನ ಹತ್ತಿಸಿಕೊಳ್ಳುವಂತೆ ನಟನೆ ಮಾಡ್ತಾನೆ. ಚಿಂತಾಮಣಿ ನಗರದ ಪ್ರಮುಖ ರಸ್ತೆಗಳಲ್ಲಿ ಈ ಯುವಕ ವಿಚಿತ್ರವಾಗಿ ಒಡಾಡುತ್ತಾ ಜನರ ಗಮನ ಸೆಳೆಯುತ್ತಿದ್ದಾನೆ. ಇದನ್ನೂ ಓದಿ: ಬಪ್ಪನಾಡಿನಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ – ಸಾಮರಸ್ಯ ಎತ್ತಿಹಿಡಿದ ಕ್ಷೇತ್ರದ ಆಡಳಿತ ಮಂಡಳಿ

  • ಪಾವಗಡ, ಬೀದರ್ ಬಳಿಕ ಚಾಮರಾಜನಗರದಲ್ಲೂ ಖಾಸಗಿ ಬಸ್ ಪಲ್ಟಿ

    ಪಾವಗಡ, ಬೀದರ್ ಬಳಿಕ ಚಾಮರಾಜನಗರದಲ್ಲೂ ಖಾಸಗಿ ಬಸ್ ಪಲ್ಟಿ

    ಚಾಮರಾಜನಗರ: ಶನಿವಾರ ಪಾವಗಡ ಹಾಗೂ ಬೀದರ್‌ನಲ್ಲಿ ಬಸ್‌ಗಳು ಪಲ್ಟಿಯಾಗಿ 8ಕ್ಕೂ ಹೆಚ್ಚು ಮಂದಿ ದಾರುಣ ಸಾವನ್ನಪ್ಪಿದ್ದರು. ಅನೇಕರಿಗೆ ಗಂಭೀರ ಗಾಯವಾಗಿ, ಶನಿವಾರ ಕರಾಳ ದಿನ ಎನಿಸಿಕೊಂಡಿತ್ತು. ಇದರ ಬೆನ್ನಲ್ಲೇ ಭಾನುವಾರವೂ ಮತ್ತೊಂದು ಬಸ್ ಪಲ್ಟಿಯಾಗಿದ್ದು, 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

    ಚಾಮರಾಜನಗರದ ಹನೂರು ತಾಲೂಕು ಮಂಗಲ-ಕಾಮಗೆರೆ ನಡುವಿನ ರಸ್ತೆಯಲ್ಲಿ ಚಲಿಸುತ್ತಿದ್ದ ಖಾಸಗಿ ಬಸ್ ಒಂದು ಎದುರಿನಿಂದ ಬರುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ರಸ್ತೆ ಬದಿಯ ಹಳ್ಳಕ್ಕೆ ಮಗುಚಿ ಬಿದ್ದಿದೆ. ಇದನ್ನೂ ಓದಿ: ರಂಗಭೂಮಿ ಕಲಾವಿದೆ ಮೇಲೆ ಆ್ಯಸಿಡ್ ದಾಳಿ – ಮೂವರು ಆರೋಪಿಗಳ ಬಂಧನ

    ಅದೃಷ್ಟವಶಾತ್ ಅವಘಡದಲ್ಲಿ ಯಾವುದೇ ಪ್ರಾಣಾಪಾಯವಾಗಿಲ್ಲ. ಬಸ್ ಪಲ್ಟಿಯಾದಾಗ 10 ಮಂದಿ ಗಾಯಗೊಂಡಿದ್ದು, ಗಾಯಾಳುಗಳನ್ನು ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ಫ್ರೀ ಲಿಂಕ್ ಬಗ್ಗೆ ಇರಲಿ ಎಚ್ಚರ – ಮಂಗಳೂರಿನಲ್ಲೂ ಸೈಬರ್ ವಂಚನೆ ಬೆಳಕಿಗೆ

    ಹನೂರು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

  • ಖಾಸಗಿ ಬಸ್‍ಗಳ ಲೈಸನ್ಸ್ ರದ್ದು ಮಾಡುತ್ತೇವೆ: ಶ್ರೀರಾಮುಲು

    ಖಾಸಗಿ ಬಸ್‍ಗಳ ಲೈಸನ್ಸ್ ರದ್ದು ಮಾಡುತ್ತೇವೆ: ಶ್ರೀರಾಮುಲು

    ತುಮಕುರು: ಜನರ ಜೀವವನ್ನು ಕಾಪಾಡುವುದು ನಮ್ಮ ಮೊದಲ ಆದ್ಯತೆಯಾಗಿದೆ. ಪಾವಗಡದಿಂದ ತುಮಕೂರು ಮಾರ್ಗವಾಗಿ ಸಂಚರಿಸುವ ಖಾಸಗಿ ಬಸ್‍ಗಳನ್ನು ರದ್ದು ಮಾಡುತ್ತೇವೆ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ.

    ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ಖಾಸಗಿ ಬಸ್ ಪಲ್ಟಿಯಾಗಿ 6 ಮಂದಿ ಸಾವನ್ನಪ್ಪಿದ್ದಾರೆ. ಈ ಸ್ಥಳಕ್ಕೆ ಉನ್ನತ ಮಟ್ಟದ ಅಧಿಕಾರಿಗಳನ್ನು ನಾನು ತನಿಖೆಗೆ ಕಳುಹಿಸಿಕೊಟ್ಟಿದ್ದೆ. ತನಿಖೆಯ ಪ್ರಾಥಮಿಕ ಹಂತದಲ್ಲಿ ನನಗೆ ಬಂದಿರುವ ವರದಿಯ ಪ್ರಕಾರ ಲೋಡ್ ಹೆಚ್ಚಾಗಿತ್ತು ಎನ್ನಲಾಗಿದೆ. ಬಸ್ ಟಾಪ್ ಮೇಲೆ ಕೂಡಾ ಜನರು ಕುಳಿತುಕೊಂಡಿದ್ದರು. ಈ ವೇಳೆ ಬಸ್ ಯಾವ ಸ್ಪೀಡ್‍ನಲ್ಲಿ ಓಡಿಸಬೇಕು ಎನ್ನುವ ಜ್ಞಾನ ಚಾಲಕನಿಗೆ ಇರಬೇಕಾಗಿತ್ತು. ಚಾಲಕನೊಬ್ಬನಿಗೆ ಶಿಕ್ಷೆ ಆಗಬೇಕಾದದ್ದು ಅಲ್ಲ, ಖಾಸಗಿ ಬಸ್ ಮಾಲೀಕರು ಇದಕ್ಕೆ ಹೊಣೆಯಾಗಿರುತ್ತಾರೆ. ಆ ಭಾಗದಲ್ಲಿ ಸಂಚರಿಸುವ ಖಾಸಗಿ ಬಸ್‍ಗಳ ಲೈಸನ್ಸ್ ರದ್ದು ಮಾಡಿದರೆ ಮಾತ್ರ ಅವರಿಗೆ ಬುದ್ದಿ ಬರುತ್ತದೆ ಎಂದಿದ್ದಾರೆ. ಇದನ್ನೂ ಓದಿ: ಮುಂದಿನ ಮೂರು ದಿನ ಹಲವು ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ

    ಇಷ್ಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದಕ್ಕೆಲ್ಲ ಹೊಣೆ ಯಾರು? ಬೇಜವಬ್ದಾರಿತನದಿಂದ ಕಾನೂನನ್ನು ಉಲ್ಲಂಘಿಸಲು ಅವರಿಗೆ ಯಾರು ಅಧಿಕಾರ ಕೊಟ್ಟಿದ್ದಾರೆ. ನಾನು ಆ ಭಾಗದಲ್ಲಿ ಸಂಚರಿಸುವ ಬಸ್‍ಗಳ ಲೈಸನ್ಸ್ ರದ್ದು ಮಾಡುತ್ತೇನೆ ಎಂದು ಹೇಳಿದ್ದಾರೆ.  ಇದನ್ನೂ ಓದಿ:  ವೈ.ಎನ್. ಹೊಸಕೋಟೆಯಿಂದ ಪಾವಗಡಕ್ಕೆ ಬರುತ್ತಿದ್ದ ಬಸ್ ಪಲ್ಟಿ:8 ಮಂದಿ ಸಾವು

    ಖಾಸಗಿ ಅವರು ಬದುಕಬೇಕು. ಸರ್ಕಾರಿ ಬಸ್ ವ್ಯವಸ್ಥೆ ಇಲ್ಲದ ಭಾಗಗಳಿಗೆ ಸಂಚರಿಸಬೇಕು. ಅವರು ಸರ್ಕಾರದ ನಿಯಮಾನುಸಾರ ಸಂಚರ ಮಾಡಬೇಕು. ಆದರೆ ಕೇವಲ ಲಾಭದಾಯಕ ಕಾರಣದಿಂದ ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ಜನರ ಪ್ರಾಣಕ್ಕೆ ಕುತ್ತು ತರುವಂತೆ ಮಾಡಿದರೆ, ಕ್ಷಮಿಸುವ ಮಾತಿಲ್ಲ ಎಂದು ಖಾಸಗಿ ಬಸ್ ಮಾಲೀಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

  • ತುಮಕೂರು ಬಸ್ ದುರಂತ- ಸರಣಿ ಟ್ವೀಟ್ ಮಾಡಿ ಕಂಬನಿ ಮಿಡಿದ ಎಚ್‍ಡಿಕೆ

    ತುಮಕೂರು ಬಸ್ ದುರಂತ- ಸರಣಿ ಟ್ವೀಟ್ ಮಾಡಿ ಕಂಬನಿ ಮಿಡಿದ ಎಚ್‍ಡಿಕೆ

    ಬೆಂಗಳೂರು: ಖಾಸಗಿ ಬಸ್ ಪಲ್ಟಿಯಾಗಿ 8 ಮಂದಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಪಾವಗಡ ತಾಲೂಕಿನಲ್ಲಿ ಪಳವಳ್ಳಿ ಕಟ್ಟೆ ಮೇಲೆ ನಡೆದಿದೆ. ಈ ಬಸ್ ದುರಂತಕ್ಕೆ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಸರಣಿ ಟ್ವೀಟ್ ಮಾಡಿ ಕಂಬನಿ ಮಿಡಿದಿದ್ದಾರೆ.

    ತುಮಕೂರು ಜಿಲ್ಲೆಯ ಪಳವಳ್ಳಿ ಕಟ್ಟೆ ಬಳಿ ಖಾಸಗಿ ಬಸ್ ಅಪಘಾತಕ್ಕೀಡಾಗಿ ಎಂಟು ಪ್ರಯಾಣಿಕರು ಸಾವನ್ನಪ್ಪಿರುವುದು ನನಗೆ ತೀವ್ರ ಆಘಾತ ಉಂಟು ಮಾಡಿದೆ. ಸಾರಿಗೆ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ಕಾರ್ಯ ಕೈಗೊಳ್ಳಬೇಕು. ದುರಂತದಲ್ಲಿ ಸಾವನ್ನಪ್ಪಿದವರಿಗೆ ದೊಡ್ಡ ಪ್ರಮಾಣದ ಪರಿಹಾರ ನೀಡಬೇಕು. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಿ ಅವರಿಗೂ ಪರಿಹಾರ ಕೊಡಬೇಕು.

    ಖಾಸಗಿ ಬಸ್‍ಗಳ ಗುಣಮಟ್ಟ, ಪರವಾನಗಿ, ತಾಂತ್ರಿಕ ಕ್ಷಮತೆ, ವೇಗದ ಚಾಲನೆ ಇತ್ಯಾದಿಗಳ ಬಗ್ಗೆ ನಿರಂತರವಾಗಿ ದೂರು ಬರುತ್ತಲೇ ಇದ್ದರೂ ಸರ್ಕಾರವು ನಿರ್ಲಕ್ಷ್ಯ ಧೋರಣೆಯಲ್ಲೇ ಇದೆ. ಗ್ರಾಮೀಣ ಸಾರಿಗೆಯನ್ನು ಉತ್ತಮಪಡಿಸುವ ಸರ್ಕಾರದ ಮಾತುಗಳು ಕೇವಲ ಹೇಳಿಕೆಗಳಿಗೆ ಮಾತ್ರ ಸೀಮಿತವಾಗಿದೆ. ಅತಿವೇಗ ಹಾಗೂ ಚಾಲಕನ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿದೆ ಎಂಬ ಮಾಹಿತಿ ಸಿಕ್ಕಿದ್ದು, ಬಸ್ಸಿನ ಟಾಪ್ ಮೇಲೆಯೇ 40ಕ್ಕೂ ಹೆಚ್ಚು ಪ್ರಯಾಣಿಕರು ಕೂತಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ ಎಂದು ಟ್ವೀಟ್ ಮಾಡಿದ್ದಾರೆ. ವೈ.ಎನ್. ಹೊಸಕೋಟೆಯಿಂದ ಪಾವಗಡಕ್ಕೆ ಬರುತ್ತಿದ್ದ ಬಸ್ ಪಲ್ಟಿ:8 ಮಂದಿ ಸಾವು

    ಇದು ಸಾರಿಗೆ ಇಲಾಖೆ ನಿರ್ಲಕ್ಷ್ಯದ ಪರಮಾವಧಿ. ಈ ಬಗ್ಗೆ ಸರಕಾರ ಕಠಿಣ ಕ್ರಮ ವಹಿಸಬೇಕು. ಕರ್ತವ್ಯ ಲೋಪ ಎಸಗಿರುವ ಸಾರಿಗೆ ಇಲಾಖೆ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ದುರಂತದಲ್ಲಿ ಜೀವ ಕಳೆದುಕೊಂಡ ಎಲ್ಲ ಅಮೂಲ್ಯ ಜೀವಗಳಿಗೆ ನನ್ನ ಶ್ರದ್ಧಾಂಜಲಿ ಹಾಗೂ ಎಲ್ಲ ಗಾಯಾಳುಗಳು ಆದಷ್ಟು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ.

  • ಪಾವಗಡ ಬಳಿಕ ಬೀದರ್‌ನಲ್ಲೂ ಖಾಸಗಿ ಬಸ್ ಪಲ್ಟಿ

    ಪಾವಗಡ ಬಳಿಕ ಬೀದರ್‌ನಲ್ಲೂ ಖಾಸಗಿ ಬಸ್ ಪಲ್ಟಿ

    ಬೀದರ್: ಇಂದು ಬೆಳಗ್ಗೆಯೇ ತುಮಕೂರಿನ ಪಾವಗಡದಲ್ಲಿ ಬಸ್ ಪಲ್ಟಿಯಾಗಿ 8ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಈ ಬೆನ್ನಲ್ಲೇ ಗಡಿಜಿಲ್ಲೆ ಬೀದರ್‌ನಲ್ಲೂ ಖಾಸಗಿ ಟ್ರಾವೇಲ್ಸ್ ಪಲ್ಟಿಯಾಗಿ ಮೂವರ ಸ್ಥಿತಿ ಚಿಂತಾಜನಕವಾಗಿದೆ.

    ಬೆಂಗಳೂರಿನಿಂದ ಬೀದರ್‌ಗೆ ಬರುತ್ತಿದ್ದ ಖಾಸಗಿ ಟ್ರಾವೇಲ್ಸ್ ಬಸ್‍ಗೆ ಬೈಕ್ ಸವಾರ ಅಡ್ಡ ಬಂದಿದ್ದಾನೆ. ಈ ಹಿನ್ನೆಲೆ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಪಿಯಾಗಿದೆ. ಖಾಸಗಿ ಬಸ್‍ನಲ್ಲಿದ್ದ ಸುಮಾರು 6 ಮಂದಿಗೆ ಗಂಭೀರ ಗಾಯವಾಗಿದ್ದು, ಮೂವರ ಸ್ಥಿತಿ ಚಿಂತಾಜನಕವಾಗಿದೆ. ಸದ್ಯ ಯಾವುದೇ ರೀತಿಯ ಪ್ರಾಣಾಪಾಯವಾಗಿಲ್ಲ. ಇದನ್ನೂ ಓದಿ: ವೈ.ಎನ್. ಹೊಸಕೋಟೆಯಿಂದ ಪಾವಗಡಕ್ಕೆ ಬರುತ್ತಿದ್ದ ಬಸ್ ಪಲ್ಟಿ:8 ಮಂದಿ ಸಾವು

    ಈ ಘಟನೆ ಬೀದರ್ ತಾಲೂಕಿನ ಅಣದೂರು ಗ್ರಾಮದ ಬಳಿಯ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ. ಬಸ್ ಪಲ್ಟಿಯಾದ ಪರಿಣಾಮ ರಸ್ತೆ ಪಕ್ಕ ಬಿದ್ದಿತ್ತು. ಚಿಂತಾಜನಕವಾದ ಪ್ರಯಾಣಿಕರನ್ನು ಸ್ಥಳೀಯರ ಸಹಾಯದಿಂದ ಬ್ರೀಮ್ಸ್ ಅಸ್ಪತ್ರೆಗೆ ದಾಖಲು ಮಾಡಲಾಗಿದೆ.

    ಸುದ್ದಿ ತಿಳಿದ ಪ್ರಯಾಣಿಕರ ಸಂಬಂಧಿಗಳು ಬ್ರೀಮ್ಸ್ ಆಸ್ಪತ್ರೆಗೆ ಹೋಗಿದ್ದು, ಅವರ ಆಕ್ರಂದನ ಮುಗಿಲು ಮುಟ್ಟಿದೆ. ಈ ಮಾಹಿತಿಯನ್ನು ಸ್ಥಳೀಯರು ಜನವಾಡ ಪೊಲೀಸರಿಗೆ ತಿಳಿಸಿದ್ದಾರೆ. ಪ್ರಸ್ತುತ ಪೊಲೀಸರು ಘಟನೆ ನಡೆದ ಸ್ಥಳಕ್ಕೆ ಭೇಟಿ ಕೊಟ್ಟಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಇದನ್ನೂ ಓದಿ:  ವಾಯುಭಾರ ಕುಸಿತದಿಂದ ಬಂಗಾಳಕೊಲ್ಲಿಯಲ್ಲಿ ‘ಅಸನಿ’ ಚಂಡಮಾರುತ

  • ವೈ.ಎನ್. ಹೊಸಕೋಟೆಯಿಂದ ಪಾವಗಡಕ್ಕೆ ಬರುತ್ತಿದ್ದ ಬಸ್ ಪಲ್ಟಿ:8 ಮಂದಿ ಸಾವು

    ವೈ.ಎನ್. ಹೊಸಕೋಟೆಯಿಂದ ಪಾವಗಡಕ್ಕೆ ಬರುತ್ತಿದ್ದ ಬಸ್ ಪಲ್ಟಿ:8 ಮಂದಿ ಸಾವು

    ತುಮಕುರು: ಖಾಸಗಿ ಬಸ್ ಪಲ್ಟಿಯಾಗಿ 8 ಮಂದಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಪಾವಗಡ ತಾಲೂಕಿನಲ್ಲಿ ಪಳವಳ್ಳಿ ಕಟ್ಟೆ ಮೇಲೆ ನಡೆದಿದೆ.

    ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಪಳವಳ್ಳಿ ಕಟ್ಟೆ ಮೇಲೆ ವೈ.ಎನ್. ಹೊಸಕೋಟೆಯಿಂದ ಪಾವಗಡಕ್ಕೆ ಬರುತ್ತಿದ್ದ ಬಸ್ ಪಲ್ಟಿಯಾಗಿದೆ. ಅಪಘಾತದಲ್ಲಿ 8 ಮಂದಿ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.

    ಎಸ್.ವಿ.ಟಿ. ಎಂಬ ಖಾಸಗಿ ಬಸ್‍ನಲ್ಲಿ ಒಟ್ಟು 30ಕ್ಕೂ ಹೆಚ್ಚು  ಪ್ರಯಾಣಿಕರು ಇದ್ದರು. ಘಟನೆಯಲ್ಲಿ 25ಕ್ಕೂ ಹೆಚ್ಚು ಜನರಿಗೆ ಗಾಯವಾಗಿದ್ದು, ಪಾವಗಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಸ್ಥಳಕ್ಕೆ ಪಾವಗಡ ಪೊಲೀಸರು ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳೀಯರು ಆಸ್ಪತ್ರೆಗೆ ರವಾನಿಸುತ್ತಿದ್ದಾರೆ. ಗಾಯಾಳುಗಳು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಮುಂದಿನ ಮೂರು ದಿನ ಹಲವು ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ

  • ಪೆಟ್ರೋಲ್ ಬಂಕ್‌ನಲ್ಲಿ ನಿಂತಿದ್ದ ಬಸ್‌ಗೆ ಬೆಂಕಿ

    ಪೆಟ್ರೋಲ್ ಬಂಕ್‌ನಲ್ಲಿ ನಿಂತಿದ್ದ ಬಸ್‌ಗೆ ಬೆಂಕಿ

    ಚಿಕ್ಕಮಗಳೂರು: ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬಂಕ್‌ನಲ್ಲಿದ್ದ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತವೊಂದು ತಪ್ಪಿದ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ನಡೆದಿದೆ.

    ಕಳೆದ ರಾತ್ರಿ ಕೊಟ್ಟಿಗೆಹಾರದ ಪೆಟ್ರೋಲ್ ಬಂಕ್‌ನಲ್ಲಿ ಖಾಸಗಿ ಬಸ್ ನಿಂತಿತ್ತು. ಆದರೆ ಮಧ್ಯರಾತ್ರಿ ಸುಮಾರಿಗೆ ಖಾಸಗಿ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದೇ ವೇಳೆ ಪೆಟ್ರೋಲ್ ಬಂಕ್‌ನಲ್ಲೇ ಮಲಗಿದ್ದ ಸಿಬ್ಬಂದಿಗೆ ಎಚ್ಚರವಾಗಿದೆ. ಬೆಂಕಿಯನ್ನು ನೋಡಿದ ತಕ್ಷಣ ಅಕ್ಕಪಕ್ಕದವರನ್ನು ಕೂಗಿ ಎಬ್ಬಿಸಿದ್ದಾರೆ. ಕೂಡಲೇ ಸ್ಥಳೀಯರು ಬೆಂಕಿಯನ್ನು ನಂದಿಸಿದ್ದಾರೆ.

    ಪೆಟ್ರೋಲ್ ಬಂಕ್‌ನಲ್ಲಿ ಸಾವಿರಾರು ಲೀಟರ್ ಪೆಟ್ರೋಲ್ ಹಾಗೂ ಡಿಸೇಲ್ ಇತ್ತು. ಒಂದು ವೇಳೆ ಪೆಟ್ರೋಲ್ ಬಂಕ್ ಸಿಬ್ಬಂದಿ ಬಂಕ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದನ್ನು ನೋಡದಿದ್ದರೆ ಹೆಚ್ಚಿನ ಅನಾಹುತವಾಗುತ್ತಿತ್ತು. ಪೆಟ್ರೋಲ್ ಬಂಕ್ ನೌಕರನ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಸ್ಥಳೀಯರು ಬಸ್ಸಿಗೆ ತಾಗಿದ್ದ ಬೆಂಕಿಯನ್ನು ನಂದಿಸುವಷ್ಟರಲ್ಲಿ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ಸಂಪೂರ್ಣ ನಂದಿಸಿದ್ದಾರೆ. ಇದನ್ನೂ ಓದಿ: ದೇವಾಲಯದ ಪ್ರಸಾದ ಸೇವಿಸಿ 50ಕ್ಕೂ ಹೆಚ್ಚು ಜನ ಅಸ್ವಸ್ಥ