Tag: ಖಾಸಗಿ ಬಸ್

  • ಬಸ್ಸಿಗೆ ಕಾಯುತ್ತಾ ನಿಂತಿದ್ದ ಶಾಲಾ ಮಕ್ಕಳ ಮೇಲೆ ಹರಿದ ಖಾಸಗಿ ಬಸ್- ಬಾಲಕಿ ಸಾವು

    ಬಸ್ಸಿಗೆ ಕಾಯುತ್ತಾ ನಿಂತಿದ್ದ ಶಾಲಾ ಮಕ್ಕಳ ಮೇಲೆ ಹರಿದ ಖಾಸಗಿ ಬಸ್- ಬಾಲಕಿ ಸಾವು

    ಚಿಕ್ಕಮಗಳೂರು: ಬಸ್ಸಿಗಾಗಿ ಕಾಯುತ್ತಾ ನಿಂತಿದ್ದ ಶಾಲಾ ಮಕ್ಕಳ ಮೇಲೆ ಏಕಾಏಕಿ ಖಾಸಗಿ ಬಸ್ (Private Bus) ಹರಿದ ಪರಿಣಾಮ ಬಾಲಕಿ ಸಾವನ್ನಪ್ಪಿದ್ದು, ಉಳಿದ ಮಕ್ಕಳು ಪಾರಾದ ಘಟನೆ ಚಿಕ್ಕಮಗಳೂರು (Chikkamagaluru) ಜಿಲ್ಲೆಯ ತರೀಕೆರೆ (Tarikere) ತಾಲೂಕಿನ ಕಾವಲ್ ದುಗ್ಲಾಪುರ ಗೇಟ್‌ನಲ್ಲಿ ನಡೆದಿದೆ.

    ಘಟನೆಯಿಂದ ಗಾಯಗೊಂಡಿದ್ದ ತುಳಸಿ (15) ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.  ಇನ್ನೋರ್ವ ಬಾಲಕಿ ನಿವೇದಿತ (14)  ಸ್ಥಿತಿ ಗಂಭೀರವಾಗಿದ್ದು, ಶಿವಮೊಗ್ಗದ (Shivamogga) ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಓವರ್ ಸ್ಪೀಡ್‌ನಿಂದ (Over Speed) ನಿಯಂತ್ರಣ ತಪ್ಪಿದ ಖಾಸಗಿ ಬಸ್ ಏಕಾಏಕಿ ರಸ್ತೆ ಬದಿಯ ಬಸ್ ನಿಲ್ದಾಣ ಹಾಗೂ ಮನೆಗಳತ್ತ ನುಗ್ಗಿದೆ. ನಿಯಂತ್ರಣ ತಪ್ಪಿದ ಬಸ್ ಕಂಡು ರಸ್ತೆ ಬದಿ ಪ್ರಯಾಣಿಕರು ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ. ಇದನ್ನೂ ಓದಿ:  ವೃದ್ಧೆಯನ್ನು ಸೆಕ್ಸ್‌ಗೆ ಪೀಡಿಸಿದ್ದ ಆರೋಪ- ಯುವಕ ಅರೆಸ್ಟ್

    ಐವರು ಮಕ್ಕಳು ಕೂದಲೆಳೆ ಅಂತರದಲ್ಲಿ ಪಾರಾಗಿದ್ದು, ಡಿಕ್ಕಿ ರಭಸಕ್ಕೆ ಮನೆಯ ಮುಂಭಾಗದ ಛಾವಣಿ ಸಂಪೂರ್ಣ ಜಖಂ ಆಗಿದೆ. ಅಧಿಕ ವೇಗದ ಖಾಸಗಿ ಬಸ್‌ಗಳ ವಿರುದ್ಧ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಬಸ್ಸಿನ ಮೇಲೆ ಕಲ್ಲು ತೂರಾಟ ಮಾಡಿ ಬಸ್‌ನ ಗಾಜು ಪುಡಿ ಪುಡಿ ಮಾಡಿದ್ದಾರೆ. ಸ್ಥಳಕ್ಕೆ ತರೀಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಲಿವಿಂಗ್ ಪಾರ್ಟ್ನರ್ ಮೇಲೆ ಸಂಶಯ- ಯುವತಿಯಿಂದ ಯುವಕನ ಹತ್ಯೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಉಡುಪಿ, ದ.ಕ, ಶಿವಮೊಗ್ಗದಲ್ಲಿ ಖಾಸಗಿ ಬಸ್‌ಗಳಲ್ಲೂ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸಿ: ಸುನಿಲ್ ಕುಮಾರ್

    ಉಡುಪಿ, ದ.ಕ, ಶಿವಮೊಗ್ಗದಲ್ಲಿ ಖಾಸಗಿ ಬಸ್‌ಗಳಲ್ಲೂ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸಿ: ಸುನಿಲ್ ಕುಮಾರ್

    ಉಡುಪಿ: ಸರ್ಕಾರಿ ಬಸ್‌ಗಳೊಂದಿಗೆ (Govt Bus) ಖಾಸಗಿ ಬಸ್‌ಗಳಲ್ಲಿಯೂ (Private Bus) ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯವನ್ನು (Free Travel Facility) ಕಲ್ಪಿಸಬೇಕೆಂದು ಶಾಸಕ ಸುನಿಲ್ ಕುಮಾರ್ (Sunil Kumar) ಆಗ್ರಹಿಸಿದ್ದಾರೆ.

    ಕಾಂಗ್ರೆಸ್ ಗ್ಯಾರಂಟಿಗಳಲ್ಲಿ (Congress Guarantee) ಒಂದಾದ ರಾಜ್ಯದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಅನುಷ್ಠಾನಕ್ಕೆ ಬರುವುದಾಗಿ ನೂತನ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಭರವಸೆ ನೀಡಿದ್ದಾರೆ. ಇದರ ಬೆನ್ನಲ್ಲೇ ಟ್ವೀಟ್ ಮಾಡಿರುವ ಸುನಿಲ್ ಕುಮಾರ್ ಉಡುಪಿ, ದಕ್ಷಿಣ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿನ ಜನರಿಗೆ ಇರಿಂದ ಅನ್ಯಾಯವಾಗಲಿದೆ ಎಂದು ಹೇಳಿದ್ದಾರೆ.

    ಟ್ವೀಟ್‌ನಲ್ಲೇನಿದೆ?
    ಉಡುಪಿ, ದಕ್ಷಿಣ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಯ ಬಹುತೇಕ ಭಾಗಗಳಿಗೆ ಸಾರಿಗೆ ಸಂಪರ್ಕ ಲಭ್ಯವಾಗುವುದು ಖಾಸಗಿ ಬಸ್‌ಗಳ ಮೂಲಕ. ಇಲ್ಲಿ ಸರ್ಕಾರಿ ಬಸ್ ಸೇವೆ ಲಭ್ಯವಿಲ್ಲ. ಆದರೆ ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ ನೀಡುವ ಉಚಿತ ಬಸ್ ಸೇವೆಯನ್ನು ಸರ್ಕಾರಿ ಸಾರಿಗೆ ಸಂಸ್ಥೆಗೆ ಮಾತ್ರ ಸೀಮಿತಗೊಳಿಸಲು ನಿರ್ಧರಿಸಿದೆ. ಇದರಿಂದ ಈ ಭಾಗದ ಜನರಿಗೆ ಅನ್ಯಾಯವಾಗಲಿದ್ದು, ಸರ್ಕಾರ ಈ ಮೂರು ಜಿಲ್ಲೆಗಳಲ್ಲಿ ಖಾಸಗಿ ಬಸ್‌ಗಳಲ್ಲೂ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸಬೇಕು ಎಂದು ಬರೆದಿದ್ದಾರೆ. ಇದನ್ನೂ ಓದಿ: ರಾಜ್ಯದ ಎಲ್ಲ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ – ರಾಮಲಿಂಗಾರೆಡ್ಡಿ ಭರವಸೆ

    ಎಲ್ಲಾ ಮಹಿಳೆಯರಿಗೆ ಬಸ್‌ನಲ್ಲಿ ಉಚಿತ ಪ್ರಯಾಣ ಎನ್ನುವುದು ಕಾಂಗ್ರೆಸ್ ಸರ್ಕಾರದ ಪ್ರಣಾಳಿಕೆಯಾಗಿತ್ತು. ಉಚಿತ ಬಸ್ ಪ್ರಯಾಣ ಗ್ಯಾರಂಟಿ ಜಾರಿಗೆ ಬರುವುದರಲ್ಲಿ ಅನುಮಾನವೇ ಇಲ್ಲ. ಜೂನ್ 1 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ಇದನ್ನೂ ಓದಿ: ಆರನೆಯ ಗ್ಯಾರಂಟಿ ಪಕ್ಕಾ: ಪ್ರಿಯಾಂಕ್ ಖರ್ಗೆ

  • ಮೈಸೂರಿನಲ್ಲಿ ನಡೆದ ಅಪಘಾತ ಪ್ರಕರಣ- ಗಾಯಾಳುಗಳಲ್ಲಿ ಓರ್ವನ ಸ್ಥಿತಿ ಗಂಭೀರ

    ಮೈಸೂರಿನಲ್ಲಿ ನಡೆದ ಅಪಘಾತ ಪ್ರಕರಣ- ಗಾಯಾಳುಗಳಲ್ಲಿ ಓರ್ವನ ಸ್ಥಿತಿ ಗಂಭೀರ

    – ಚಿಕಿತ್ಸೆಗೆ ಸ್ಪಂದಿಸುತ್ತಿರೋ ಮಕ್ಕಳು

    ಮೈಸೂರು: ಜಿಲ್ಲೆಯ ಕುರುಬೂರು (Kuruburu Accident) ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಗಾಯಗೊಂಡವರಲ್ಲಿ ಓರ್ವನ ಸ್ಥಿತಿ ಗಂಭೀರವಾಗಿದೆ. ಉಳಿದಂತೆ ಇಬ್ಬರು ಮಕ್ಕಳು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಮೈಸೂರಿನ ಕೆಆರ್ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ಮುಂದುವರಿದಿದೆ. ಗಾಯಾಳು ಶಶಿಕುಮಾರ್ ಹಾಗೂ ಜನಾರ್ಧನ್‍ಗೆ ಐಸಿಯು ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಇದರಲ್ಲಿ ಶಶಿಕುಮಾರ್ ಸ್ಥಿತಿ ಗಂಭೀರವಾಗಿದೆ. ಇನ್ನು ಕಾರಿನಲ್ಲಿದ್ದ ಮಗು ಪುನೀತ್ ಹಾಗೂ ಬಸ್‍ನಲ್ಲಿದ್ದ ಮಗುವಿಗೆ ಕೂಡ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಮಕ್ಕಳು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂಬುದಾಗಿ ವೈದ್ಯರು ತಿಳಿಸಿದ್ದಾರೆ.

    ಘಟನೆಯಲ್ಲಿ ಸಾವನ್ನಪ್ಪಿದ 10 ಮಂದಿಯ ಮೃತದೇಹಗಳನ್ನು ಆಸ್ಪತ್ರೆ ಸಿಬ್ಬಂದಿ ಮಧ್ಯರಾತ್ರಿ 3 ಗಂಟೆ ಸುಮಾರಿಗೆ ಬಳ್ಳಾರಿಗೆ ಕಳುಹಿಸಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿ ಅಂಬುಲೆನ್ಸ್ ಮೂಲಕ ರವಾನಿಸಲಾಗಿದೆ. ಮಂಜುನಾಥ್ (35), ಪೂರ್ಣಿಮಾ (30), ಪವನ್ (10), ಕಾರ್ತಿಕ್ (8), ಸಂದೀಪ್ (24), ಸುಜಾತ (40), ಕೊಟ್ರೇಶ್ (45), ಗಾಯಿತ್ರಿ (35), ಶ್ರೇಯಾ (3) ಮೃತದೇಹ ಕುಟುಬಸ್ಥರಿಗೆ ಹಸ್ತಾಂತರ ಮಾಡಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು.

    ನಡೆದಿದ್ದೇನು..?: ಮೈಸೂರಿಗೆ ರೈಲಿನಲ್ಲಿ ಬಂದಿದ್ದ ಸಂಗನಕಲ್ಲು ಗ್ರಾಮದ ಮೂರು ಕುಟುಂಬಗಳ ಮಂದಿ ಬೆಳಗ್ಗೆ ಇನ್ನೋವಾ ಕಾರು (Innova Car) ಬಾಡಿಗೆ ಮಾಡಿಕೊಂಡು ಚಾಮುಂಡಿ ಬೆಟ್ಟ, ಬಿಆರ್ ಹಿಲ್ಸ್‍ಗೆ ತೆರಳಿದ್ರು. ಅಲ್ಲಿಂದ 5 ಗಂಟೆಯ ರೈಲು ಹತ್ತಲು ಮೈಸೂರಿಗೆ ವಾಪಸ್ ಆಗುವಾಗ ಪಿಂಜಾರಪೋಲ್ ಸಮೀಪದ ತಿರುವಿನಲ್ಲಿ ಈ ದುರಂತ ಸಂಭವಿಸಿದೆ. ಡಿಕ್ಕಿಯ ತೀವ್ರತೆಗೆ ಇಡೀ ಇನ್ನೋವಾ ಕಾರ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಅಪ್ಪಚ್ಚಿಯಾದ ಕಾರಿನಲ್ಲಿ ಸಿಲುಕಿದ್ದ ಮೃತದೇಹಗಳನ್ನು ಹರಸಾಹಸ ಮಾಡಿ ಹೊರತೆಗೆಯಬೇಕಾಯಿತು. ಇದನ್ನೂ ಓದಿ: ಮೈಸೂರು ಬಳಿ ರಸ್ತೆ ಅಪಘಾತಕ್ಕೆ 10 ಬಲಿ – ಪರಿಹಾರ ಘೋಷಿಸಿದ ಸಿಎಂ

    ಅಪಘಾತದ ದೃಶ್ಯ ಬಸ್‍ನಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ದುರಂತಕ್ಕೆ ಟೋಲ್ ಮತ್ತು ಲೋಕೋಪಯೋಗಿ ಇಲಾಖೆಯೇ ನೇರ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಟೋಲ್ ವಸೂಲಿ ಮಾಡ್ತಾರೆ. ಆದರೆ ತಿರುವಿನಲ್ಲಿ ಒಂದು ಸೂಚನಾ ಫಲಕವನ್ನು ಅಳವಡಿಸಿಲ್ಲ. ಗಿಡಗಂಟೆಗಳನ್ನು ತೆರವು ಮಾಡಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ. ಸಂಗನಕಲ್ಲಿನಲ್ಲಿ ಮೃತರ ಬಂಧುಗಳ ಆಕ್ರಂದನ ಮುಗಿಲುಮುಟ್ಟಿದೆ. ಈ ಮಧ್ಯೆ, ದುರಂತಕ್ಕೆ ಪ್ರಧಾನಿ ಮೋದಿ (Narendra Modi) ಸಿಎಂ ಸಿದ್ದರಾಮಯ್ಯ (Siddaramaiah) ಸಂತಾಪ ಸೂಚಿಸಿದ್ದು, ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ಪರಿಹಾರ ಘೋಷಿಸಿದ್ದಾರೆ. ರಾಷ್ಟ್ರಪತಿ ಮುರ್ಮು (Droupadi Murmu) ಅವರು ಸಂತಾಪ ಸೂಚಿಸಿದ್ದಾರೆ.

     

  • ಖಾಸಗಿ ಬಸ್, ಇನ್ನೋವಾ ಭೀಕರ ಅಪಘಾತ- 10 ಮಂದಿ ದುರ್ಮರಣ

    ಖಾಸಗಿ ಬಸ್, ಇನ್ನೋವಾ ಭೀಕರ ಅಪಘಾತ- 10 ಮಂದಿ ದುರ್ಮರಣ

    ಮೈಸೂರು: ಖಾಸಗಿ ಬಸ್ (Private Bus) ಹಾಗೂ ಇನ್ನೋವಾ (Innova Car) ನಡುವೆ ನಡೆದ ಅಪಘಾತದಲ್ಲಿ 10 ಮಂದಿ ದುರ್ಮರಣಕ್ಕೀಡಾದ ಘಟನೆ ಮೈಸೂರಿನಲ್ಲಿ ನಡೆದಿದೆ.

    ಕೊಳ್ಳೇಗಾಲದ ಟಿ.ನರಸೀಪುರ (T- Narasipura) ಮುಖ್ಯ ರಸ್ತೆಯ ಕುರುಬೂರು ಗ್ರಾಮದ ಪಿಂಜರ ಪೋಲ್ ಬಳಿ ಈ ಭೀಕರ ಅಪಘಾತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಇನ್ನೋವಾ ಕಾರು ಗುರುತಿ ಸಿಗದಂತೆ ಸಂಪೂರ್ಣ ನಜ್ಜುಗುಜ್ಜಾಗಿದೆ.

    ಕಾರಿನಲ್ಲಿ ಸಿಲುಕಿರುವ ವ್ಯಕ್ತಿಗಳನ್ನು ಸ್ಥಳೀಯರು ರಕ್ಷಿಸುವ ಕಾರ್ಯ ಮಾಡಿದ್ದಾರೆ. ಮಗು ಸೇರಿ ಹಲವರನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಇದನ್ನೂ ಓದಿ: ಪ್ರಿಯಕರನಿಂದ 16 ವರ್ಷದ ಹುಡುಗಿಯ ಬರ್ಬರ ಹತ್ಯೆ

    ಕಾರ್ ನಲ್ಲಿದ್ದವರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ನರಸೀಪುರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಇನ್ನಷ್ಟು ಮಾಹಿತಿ ತಿಳಿದು ಬರಬೇಕಿದೆ..

  • ನಿಂತಿದ್ದ ಬಸ್‌ಗೆ ಟಿಟಿ ಡಿಕ್ಕಿ – ಇಬ್ಬರು ಸಾವು, ನಾಲ್ವರಿಗೆ ಗಾಯ

    ನಿಂತಿದ್ದ ಬಸ್‌ಗೆ ಟಿಟಿ ಡಿಕ್ಕಿ – ಇಬ್ಬರು ಸಾವು, ನಾಲ್ವರಿಗೆ ಗಾಯ

    ತುಮಕೂರು: ನಿಂತಿದ್ದ ಬಸ್‌ಗೆ ಟಿಟಿ (TT) ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟಿದ್ದು, ನಾಲ್ಕು ಮಂದಿ ಗಾಯಗೊಂಡಿರುವ ಘಟನೆ ತುಮಕೂರಿನಲ್ಲಿ (Tumakuru) ನಡೆದಿದೆ.

    ಕುಣಿಗಲ್ (Kunigal) ತಾಲೂಕಿನ ರಾಜ್ಯ ಹೆದ್ದಾರಿ 33 ಹುಲಿಯೂರು ದುರ್ಗ ಹೋಬಳಿಯ ಡಿ.ಹೊಸಹಳ್ಳಿ ಗ್ರಾಮದ ಬಳಿ ಘಟನೆ ನಡೆದಿದೆ. ಗುರುವಾರ ಬೆಳಗ್ಗೆ ಘಟನೆ ಸಂಭವಿಸಿದ್ದು, ರಾಯಚೂರು (Raichur) ಜಿಲ್ಲೆ ಸಿಂಧನೂರು (Sindhanur) ನಿವಾಸಿ ಟಿಟಿ ಚಾಲಕ ವೀರೇಶ್ (30), ಶಶಿಕಲಾ (69) ಸಾವನ್ನಪ್ಪಿದ್ದಾರೆ. ದಿಲೀಪ್ ಕುಮಾರ್, ಆನಂದ್ ಕುಮಾರ್, ಪ್ರಿಯಾ ಹಾಗೂ ಪ್ರತೀಕ್ಷ ಎಂಬವರು ಗಾಯಗೊಂಡಿದ್ದು, ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ- ಸವಾರನ ಕಾಲು ಮುರಿತ, ತಲೆಗೆ ಗಂಭೀರ ಗಾಯ

    ಶಶಿಕಲಾ ಹಾಗೂ ಅವರ ಕುಟುಂಬದ 11 ಮಂದಿ ಸದಸ್ಯರು ಸಿಂಧನೂರಿನಿಂದ ಮೈಸೂರಿಗೆ ಪ್ರವಾಸಕ್ಕೆಂದು ರಾತ್ರಿ ಹೊರಟಿದ್ದರು. ಕುಣಿಗಲ್ ಮಾರ್ಗವಾಗಿ ಮೈಸೂರಿಗೆ (Mysuru) ಹೋಗುತ್ತಿದ್ದ ಸಂದರ್ಭ ಗುರುವಾರ ಬೆಳಗ್ಗೆ ಡಿ.ಹೊಸಹಳ್ಳಿ (D.Hosahalli) ಗ್ರಾಮದ ಬಳಿ ನಿಂತಿದ್ದ ಖಾಸಗಿ ಬಸ್‌ಗೆ ಟಿಟಿ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಅಪಘಾತದಿಂದ ಟಿಟಿ ಚಾಲಕ ವೀರೇಶ್ ಸ್ಥಳದಲ್ಲೇ ಮೃತಪಟ್ಟಿದ್ದು, ಶಶಿಕಲಾ ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯದಲ್ಲಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಜಾತ್ರೆಯಲ್ಲಿ ಆಟವಾಡಿ ಮನೆಗೆ ತೆರಳಿದ್ದ ಬಾಲಕ ಹಠಾತ್ ಸಾವು

    ಈ ಕುರಿತು ಹುಲಿಯೂರು ದುರ್ಗ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಬೈಕ್ ಅಪಘಾತದಲ್ಲಿ ಕಾಫಿನಾಡಿನ ಎನ್‌ಎಸ್‌ಜಿ ಬ್ಲ್ಯಾಕ್ ಕ್ಯಾಟ್ ಕಮಾಂಡೋ ಸಾವು 

  • ಖಾಸಗಿ ಬಸ್‌ ಹರಿದು ನರಳಾಡಿ ಪ್ರಾಣಬಿಟ್ಟ ಮಹಿಳೆ

    ಖಾಸಗಿ ಬಸ್‌ ಹರಿದು ನರಳಾಡಿ ಪ್ರಾಣಬಿಟ್ಟ ಮಹಿಳೆ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಫುಟ್ ಬೋರ್ಡ್‍ನಲ್ಲಿ ವಿದ್ಯಾರ್ಥಿಗಳ ಪ್ರಯಾಣ – ಬಸ್ ಸಿಬ್ಬಂದಿಗೆ 25 ಸಾವಿರ ರೂ. ದಂಡ

    ಫುಟ್ ಬೋರ್ಡ್‍ನಲ್ಲಿ ವಿದ್ಯಾರ್ಥಿಗಳ ಪ್ರಯಾಣ – ಬಸ್ ಸಿಬ್ಬಂದಿಗೆ 25 ಸಾವಿರ ರೂ. ದಂಡ

    ಚೆನ್ನೈ: ಸೀಟ್‍ಗಳು ಖಾಲಿ ಇದ್ದರೂ, ಫುಟ್‍ಬೋರ್ಡ್‍ನಲ್ಲಿ ನಿಂತು ಪ್ರಯಾಣಿಸಿ ವಿದ್ಯಾರ್ಥಿಗಳನ್ನು ನಿರ್ಲಕ್ಷಿಸಿದಕ್ಕೆ ಖಾಸಗಿ ಬಸ್ ಸಿಬ್ಬಂದಿಗೆ ತಮಿಳುನಾಡಿನ (Tamil Nadu) ವಿಲ್ಲುಪುರಂ (Villupuram) ಜಿಲ್ಲೆಯ ಜಿಲ್ಲಾಧಿಕಾರಿ ಡಿ ಮೋಹನ್ 25,000 ರೂ. ದಂಡ ವಿಧಿಸಿದ್ದಾರೆ.

    ಸರ್ಕಾರಿ ಕಾರ್ಯಕ್ರಮ ನಿಮಿತ್ತ ವಿಲ್ಲುಪುರಂನಿಂದ ಗಿಣಗಿಗೆ (Gingee) ಮೋಹನ್ ಅವರು ತೆರಳುತ್ತಿದ್ದರು. ಈ ವೇಳೆ ಕಾಲೇಜು ಹಾಗೂ ಶಾಲಾ ವಿದ್ಯಾರ್ಥಿಗಳು ಖಾಸಗಿ ಬಸ್ ಫುಟ್‍ಬೋರ್ಡ್ ತುದಿಯಲ್ಲಿ ಪ್ರಯಾಣಿಸುತ್ತಿದ್ದನ್ನು ಗಮನಿಸಿದ್ದಾರೆ. ಕೂಡಲೇ ಜಿಲ್ಲಾಧಿಕಾರಿ ಬಸ್ ತಡೆದು ಖಾಸಗಿ ಬಸ್ ಸಿಬ್ಬಂದಿಗೆ 25 ಸಾವಿರ ರೂ. ದಂಡ ವಿಧಿಸಿದ್ದಾರೆ. ಇದನ್ನೂ ಓದಿ: ತಿಹಾರ್ ಜೈಲಿನ ಬಳಿಯೇ ಕೈ ನಾಯಕಿಯ ಕಾರು ಕಳ್ಳತನ – ವೀಡಿಯೋ ಪೋಸ್ಟ್ ಮಾಡಿ ಪಂಖೂರಿ ಪಾಠಕ್ ಕಿಡಿ

    ನಂತರ ಫುಟ್‍ಬೋರ್ಡ್‍ನಲ್ಲಿ ನಿಂತು ಪ್ರಯಾಣಿಸುವುದು ಅಪಾಯಕಾರಿಯಾಗಿದೆ. ಹೀಗಾಗಿ ಇನ್ಮುಂದೆ ಫುಡ್‍ಬೋರ್ಡ್ ಮೇಲೆ ನಿಂತು ಪ್ರಯಾಣಿಸಬೇಡಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದಾರೆ ಮತ್ತು ವಿದ್ಯಾರ್ಥಿಗಳು ಈ ರೀತಿ ನಿಂತು ಪ್ರಯಾಣಿಸಲು ಅವಕಾಶ ನೀಡಿದ್ದಕ್ಕಾಗಿ ಬಸ್ ಕಂಡಕ್ಟರ್ ಅನ್ನು ನಿಂದಿಸಿದ್ದಾರೆ. ಇದನ್ನೂ ಓದಿ: ಕದ್ರಿ ದೇಗುಲಕ್ಕೆ IRCಯಿಂದ ಬೆದರಿಕೆ ಪತ್ರ – ದೇಗುಲದ ಮಂಡಳಿಯಿಂದ ದೂರು

    Live Tv
    [brid partner=56869869 player=32851 video=960834 autoplay=true]

  • ಪ್ಯಾಂಟ್ ಜಿಪ್ ತೆಗೆದು ಬಸ್‍ನಲ್ಲಿ ವೈದ್ಯೆ ಜೊತೆ ಅಸಭ್ಯ ದುರ್ವತನೆ – ಕ್ಲೀನರ್ ಅರೆಸ್ಟ್

    ಪ್ಯಾಂಟ್ ಜಿಪ್ ತೆಗೆದು ಬಸ್‍ನಲ್ಲಿ ವೈದ್ಯೆ ಜೊತೆ ಅಸಭ್ಯ ದುರ್ವತನೆ – ಕ್ಲೀನರ್ ಅರೆಸ್ಟ್

    ಮಂಗಳೂರು: ಖಾಸಗಿ ಬಸ್‍ನಲ್ಲಿ ಬೆಂಗಳೂರಿನಿಂದ (Bengaluru) ಮಂಗಳೂರಿಗೆ (Mangaluru) ಪ್ರಯಾಣಿಸುತ್ತಿದ್ದ ಮಹಿಳಾ ಪ್ರಯಾಣಿಕರೊಬ್ಬರ ಜೊತೆ ಅಸಭ್ಯವಾಗಿ ವರ್ತಿಸಿದ ಬಸ್‍ ಕ್ಲೀನರ್ ಅನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ಆರೋಪಿಯನ್ನು ಮಂಗಳೂರಿನ ಬಜ್ಪೆ ಕೆಂಜಾರು ನಿವಾಸಿ ಮಹಮ್ಮದ್ ಇಮ್ರಾನ್ (26) ಎಂದು ಗುರುತಿಸಲಾಗಿದೆ. ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ಖಾಸಗಿ ಆಸ್ಪತ್ರೆಯೊಂದರ ವೈದ್ಯೆಗೆ, ತನ್ನ ಪ್ಯಾಂಟ್ ಜಿಪ್ ಓಪನ್ ಮಾಡಿ ಖಾಸಗಿ ಬಸ್ ಕ್ಲೀನರ್ ಅಸಭ್ಯವಾಗಿ ವರ್ತಿಸಿದ್ದಾನೆ. ಇದನ್ನೂ ಓದಿ: ವಿರೋಧದ ನಡುವೆಯೂ ಅಧಿಕೃತ ಅನುಮತಿಯೊಂದಿಗೆ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ

    ಮಂಗಳೂರಿನ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯ ವೈದ್ಯರಾಗಿರುವ ದೂರುದಾರರು, ಪ್ಯಾಂಟ್ ಜಿಪ್ ಓಪನ್ ಮಾಡಿ ಅಸಭ್ಯ ನಡವಳಿಕೆ ತೋರಿದ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೇ ಪೊಲೀಸರಿಗೆ ದೂರು ನೀಡುವ ವಿಚಾರ ತಿಳಿದ ಆರೋಪಿ ಮಹಿಳೆಗೆ ಬೆದರಿಕೆಯೊಡ್ಡಿದ್ದಾನೆ.

    ಇದೀಗ ಪೊಲೀಸರು ಆರೋಪಿ ಇಮ್ರಾನ್ ಅನ್ನು ಬಂಧಿಸಿದ್ದು, ಐಪಿಸಿ ಸೆಕ್ಷನ್ 151/2022 U/s 354ರಡಿ ಕೇಸ್ ದಾಖಲಿಸಿಕೊಂಡಿದ್ದಾರೆ. ಖಾಸಗಿ ಬಸ್ ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿತ್ತು. ಇದನ್ನೂ ಓದಿ: ಟಿಪ್ಪು ಜಯಂತಿ ವಿರೋಧಿಸಿ ಹೈಕೋರ್ಟ್‌ನಲ್ಲಿ ಪಿಐಎಲ್ ಸಲ್ಲಿಸುತ್ತೇನೆ: ಮುತಾಲಿಕ್

    Live Tv
    [brid partner=56869869 player=32851 video=960834 autoplay=true]

  • ಹಳೇ ಚಾಳಿಯನ್ನೇ ಮುಂದುವರಿಸಿದ ಖಾಸಗಿ ಬಸ್‍ಗಳು- ಫ್ಲೈಟ್ ದರಕ್ಕಿಂತಲೂ ದುಬಾರಿ ಟಿಕೆಟ್

    ಹಳೇ ಚಾಳಿಯನ್ನೇ ಮುಂದುವರಿಸಿದ ಖಾಸಗಿ ಬಸ್‍ಗಳು- ಫ್ಲೈಟ್ ದರಕ್ಕಿಂತಲೂ ದುಬಾರಿ ಟಿಕೆಟ್

    ಬೆಂಗಳೂರು: ಖಾಸಗಿ ಬಸ್‍ (Private Bus) ಗಳು ತಮ್ಮ ಹಳೆ ಚಾಳಿಯನ್ನ ಮತ್ತೆ ಮುಂದುವರಿಸಿವೆ. ಇತಿಹಾಸದಲ್ಲಿಯೇ ಮೊದಲ ಬಾರಿಗೆ ಫ್ಲೈಟ್ ಟಿಕೆಟ್ (Flight Ticket) ದರಕ್ಕಿಂತಲೂ ಹೆಚ್ಚು ದರವನ್ನ ನಿಗದಿಪಡಿಸಿವೆ.

    ದೀಪಾವಳಿ (Deepavali) ಹಬ್ಬಕ್ಕೆ ಖಾಸಗಿ ಬಸ್‍ಗಳು ತಮ್ಮ ಆಟಾಟೋಪ ಶುರುಮಾಡಿದ್ದು, ಲೂಟಿಕೋರ ಬಸ್‍ಗಳನ್ನ ಸೀಸ್ ಮಾಡಲು ಸಾರಿಗೆ ಇಲಾಖೆ ಮುಂದಾಗಿದೆ. ಇಂದಿನಿಂದ ದುಪ್ಪಟ್ಟು ಹಣ ಪೀಕುವ ಬಸ್‍ಗಳನ್ನ ಹಾಗೂ ಟ್ರಾವೆಲ್ ಏಜೆನ್ಸಿ (Travel Agency) ಗಳ ಪರಿಶೀಲನೆ ನಡೆಸಲಿದ್ದಾರೆ. ಇದನ್ನೂ ಓದಿ: ಕೋರ್ಟ್‌ ನೋಟಿಸ್‌ಗೆ ಥಂಡಾ – ಕರೆ ಮಾಡಿ ಹೆಚ್ಚುವರಿ ಅಂಕ ನೀಡ್ತೀವಿ ಎಂದ ಪಿಯು ಬೋರ್ಡ್‌

    ಬೆಂಗಳೂರಿನಿಂದ ಹುಬ್ಬಳ್ಳಿಗೆ ಕೆಲ ಬಸ್‍ಗಳಲ್ಲಿ ಒಂದು ಸೀಟಿಗೆ ಬರೋಬ್ಬರಿ 5 ಸಾವಿರದಿಂದ, 6 ಸಾವಿರ ಹಣ ನಿಗದಿ ಮಾಡಲಾಗಿದೆ. ಫ್ಲೈಟ್ ಟಿಕೆಟ್ ದರ 4,849 ರೂ. ಇದೆ. ಬೆಂಗಳೂರಿನಿಂದ ಮಂಗಳೂರಿಗೆ 3 ಸಾವಿರದ 600 ರೂ. ಬಸ್ ಟಿಕೆಟ್ (Bus Ticket) ದರ ಇದ್ರೆ, ಫ್ಲೈಟ್ ಟಿಕೆಟ್ ದರ 3 ಸಾವಿರದ 700 ರೂ. ಇದೆ. ಇಷ್ಟೊಂದು ದುಬಾರಿ ಹಣ ಪೀಕುವ, ಖಾಸಗಿ ಬಸ್ ಮಾಲೀಕರ ಜೊತೆ ಒಂದು ಸುತ್ತಿನ ಮಾತುಕತೆಗೂ ಸಾರಿಗೆ ಇಲಾಖೆ ಮುಂದಾಗಿದೆ.

    ಇಲಾಖೆಯ ಎಚ್ಚರಿಗೂ ಬಗ್ಗದಿದ್ರೆ, ದಂಡಂ ದಶಗುಣಂ ಅಸ್ತ್ರ ಪ್ರಯೋಗಕ್ಕೆ ಮುಂದಾಗಿದೆ. 22 ರಂದು 4ನೇ ಶನಿವಾರ ಸೇರಿ, ದೀಪಾವಳಿಗೆ ನಿರಂತರ 5 ದಿನ ರಜೆಯಿದೆ. ಶುಕ್ರವಾರ ಸಂಜೆಯಿಂದಲೇ ಸಾಕಷ್ಟು ಜನ, ತಮ್ಮೂರುಗಳಿಗೆ ತೆರಳುತ್ತಾರೆ. ಖಾಸಗಿ ಬಸ್ ಗಳಿಗೆ ಇಂತಿಷ್ಟೆ ದರ ತೆಗೆದುಕೊಳ್ಳಬೇಕು ಎಂಬ ಒಪ್ಪಂದ ಸಾರಿಗೆ ಇಲಾಖೆಯೊಂದಿಗೆ ಆಗಿಲ್ಲ. ಇದೇ ಕಾರಣಕ್ಕೂ ಯದ್ವಾತದ್ವ ಟಿಕೆಟ್ ದರ ಏರಿಕೆ ಮಾಡ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಖಾಸಗಿ ಬಸ್ ಪಲ್ಟಿ- ಆಂಧ್ರ ಮೂಲದ ದಂಪತಿ ದುರ್ಮರಣ

    ಖಾಸಗಿ ಬಸ್ ಪಲ್ಟಿ- ಆಂಧ್ರ ಮೂಲದ ದಂಪತಿ ದುರ್ಮರಣ

    ಕೋಲಾರ: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿಯಾಗಿದ್ದು, ಆಂಧ್ರಪ್ರದೇಶ ಮೂಲದ ದಂಪತಿ ಮೃತಪಟ್ಟಿದ್ದಾರೆ.

    ಇಂದು ಮುಂಜಾನೆ 5.30ರ ಸುಮಾರಿಗೆ ಕೋಲಾರ ಜಿಲ್ಲೆಯ ಮುಳಬಾಗಲು ತಾಲೂಕಿನ ವಿರೂಪಾಕ್ಷಿ ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಈ ದುರ್ಘಟನೆ ನಡೆದಿದೆ. ಬಸ್ ನಲ್ಲಿದ್ದ 15ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ. ಇದನ್ನೂ ಓದಿ: ಮಗಳ ಮದುವೆಗೆ ಖರೀದಿಸಿದ್ದ ಚಿನ್ನಾಭರಣ ಕಳವು!

    ವೇಮುರಿ ಹೆಸರಿನ ಖಾಸಗಿ ಬಸ್ ವಿಜಯವಾಡದಿಂದ ಬೆಂಗಳೂರಿಗೆ ಬರುತ್ತಿತ್ತು. ನಿದ್ದೆ ಮಂಪರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿರುವ ಸಾಧ್ಯತೆ ಇದೆ. ಗಾಯಾಳುಗಳು ಮುಳಬಾಗಿಲು ಸರ್ಕಾರಿ ಆಸ್ಪತ್ರೆ ಸೇರಿದಂತೆ ಕೋಲಾರ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ.

    ಮುಳಬಾಗಿಲು ಪೊಲೀಸರು ಸ್ಥಳಕ್ಕೆ ಭೇಟಿ ಗಾಯಾಳುಗಳ ರಕ್ಷಣೆ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]