Tag: ಖಾಸಗಿ ಬಸ್

  • ಮಕ್ಕಳಿಗೆ ಬೇಡವಾದ ಹೆತ್ತ ತಾಯಿ – ಗಂಗಾವತಿಯಲ್ಲೊಂದು ಹೃದಯವಿದ್ರಾವಕ ಘಟನೆ

    ಮಕ್ಕಳಿಗೆ ಬೇಡವಾದ ಹೆತ್ತ ತಾಯಿ – ಗಂಗಾವತಿಯಲ್ಲೊಂದು ಹೃದಯವಿದ್ರಾವಕ ಘಟನೆ

    ಕೊಪ್ಪಳ: ಹೆತ್ತ ತಾಯಿಯನ್ನು ಮಕ್ಕಳಿಬ್ಬರು ದೂರ ಮಾಡಿರುವ ಹೃದಯವಿದ್ರಾವಕ ಘಟನೆ ಗಂಗಾವತಿಯಲ್ಲಿ ನಡೆದಿದೆ.

    ಬೆಂಗಳೂರಿನಲ್ಲಿರುವ ಗುರುನಾಥ್ ತನ್ನ ತಾಯಿ 95 ವರ್ಷದ ಶಾರದಾಬಾಯಿಯನ್ನು ಖಾಸಗಿ ಬಸ್ ಮೂಲಕ ಗಂಗಾವತಿ ಗೆ ಕಳುಹಿಸಿದ್ದಾರೆ. ಈ ವೇಳೆ ಗಂಗಾವತಿಯಲ್ಲಿರುವ ಸಹೋದರ ಸುರೇಶ್ ತಾಯಿಯನ್ನು ಕರೆದುಕೊಂಡು ಹೋಗುತ್ತಾರೆ ಎಂದು ತಿಳಿಸಿದ್ದಾರೆ.

    ಬಸ್ ಗಂಗಾವತಿಗೆ ನಿಲ್ದಾಣಕ್ಕೆ ಆಗಮಿಸಿದಾಗ ಸುರೇಶ್ ಸ್ಥಳದಲ್ಲಿ ಇರಲಿಲ್ಲ. ಈ ವೇಳೆ ಬಸ್ ಸಿಬ್ಬಂದಿ ಸುರೇಶ್ ಅವರಿಗೆ ಕರೆ ಮಾಡಿದಾಗ ನನಗೆ ಆ ಮಹಿಳೆ ಯಾರು ಎನ್ನುವುದೇ ಗೊತ್ತಿಲ್ಲ ಎಂದು ಹೇಳಿದ್ದಾರೆ.

    ವೃದ್ಧೆ ತಾಯಿ ಖಾಸಗಿ ಬಸ್ ನಲ್ಲೇ ಕಳೆದ ಐದು ಗಂಟೆಗಳಿಂದ ಪರದಾಡಿದ್ದಾರೆ. ಇದನ್ನು ಗಮನಿಸಿದ ಖಾಸಗಿ ಬಸ್ ಚಾಲಕರು ವೃದ್ಧೆಗೆ ಉಪಹಾರ ಕೊಟ್ಟು ಮಾನವೀಯತೆ ತೋರಿದ್ದಾರೆ. ವೃದ್ಧೆ ಅಸ್ವಸ್ಥಗೊಂಡಿದ್ದು, ಗಂಗಾವತಿ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದಾರೆ.

    ಗುರುನಾಥ್ ಮತ್ತು ಸುರೇಶ್ ಅವರಿಗೆ ಫೋನ್ ಮಾಡಿದಾಗ ಇಬ್ಬರ ಮೊಬೈಲ್ ಸ್ವಿಚ್ ಆಫ್ ಆಗಿದೆ ಎಂದು ಚಾಲಕ ಕಳಕಪ್ಪ ಹೇಳಿದ್ದಾರೆ.

  • ದೀಪಾವಳಿ ಪ್ರಯುಕ್ತ ಊರಿಗೆ ಹೊರಟ ಪ್ರಯಾಣಿಕರಿಂದ ಬಸ್, ರೈಲು ನಿಲ್ದಾಣ ಜಾಮ್

    ದೀಪಾವಳಿ ಪ್ರಯುಕ್ತ ಊರಿಗೆ ಹೊರಟ ಪ್ರಯಾಣಿಕರಿಂದ ಬಸ್, ರೈಲು ನಿಲ್ದಾಣ ಜಾಮ್

    ಬೆಂಗಳೂರು: ದೇಶಾದ್ಯಂತ ಸಂಭ್ರಮದಿಂದ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತಿದೆ. ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಮಂಗಳವಾರ ಸಿಲಿಕಾನ್ ಸಿಟಿಯಿಂದ ಜನರು ಊರಿನ ಕಡೆ ಹೊರಟ ಪರಿಣಾಮ ನಗರದ ಬಸ್ ನಿಲ್ದಾಣ ಮತ್ತು ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ತುಂಬಿದ್ದರು.

    ಪ್ರಯಾಣಿಕರು ಹಾಗೂ ಬಸ್ ಗಳಿಂದ ನಗರದಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿತ್ತು. ಹೀಗಾಗಿ ಜನರು ನಿಲ್ದಾಣ ತಲುಪಲು ಹರಸಾಹಸ ಪಡಬೇಕಾಯಿತು. ಕಳೆದ ಕೆಲ ದಿನಗಳಿಂದ ಮಳೆ ಸುರಿಯುತ್ತಿದ್ದು, ಮಂಗಳವಾರ ರಾತ್ರಿ ಮಳೆ ಇಲ್ಲದಿದ್ದರಿಂದ ಪ್ರಯಾಣಿಕರು ನೆಮ್ಮದಿಯ ನಿಟ್ಟಿಸುರು ಬಿಟ್ಟಿದ್ದರು. ಆದ್ರೆ ಸಂಜೆಯಿಂದಲೇ ಬಸ್ ನಿಲ್ದಾಣಕ್ಕೆ ಪ್ರಯಾಣಿಕರು ಮುಗಿಬೀಳೂತ್ತಿದ್ದು, ಇದರಿಂದ ಸಂಚಾರ ದಟ್ಟಣೆ ಅಧಿಕವಾಗಿತ್ತು.

    ಮೈಸೂರು ರಸ್ತೆಯ ಬಾಪೂಜಿನಗರ, ಯಶವಂತಪುರ, ಪೀಣ್ಯ, ಹೊಸೂರು ರಸ್ತೆ ಹಾಗೂ ಶಾಂತಿನಗರ ಆನಂದರಾವ್ ಸರ್ಕಲ್ ಸೇರಿದಂತೆ ಮೆಜೆಸ್ಟಿಕ್ ಸುತ್ತಮುತ್ತ ವಾಹನಗಳು ಸಾಲುಗಟ್ಟಿ ನಿಂತಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು.

    ಹಬ್ಬದ ಹಿನ್ನೆಲೆಯಲ್ಲಿ ಸುಮಾರು 1500 ಹೆಚ್ಚುವರಿ ಬಸ್ ವ್ಯವಸ್ಥೆಯನ್ನು ಕೆಎಸ್‍ಆರ್‍ಟಿಸಿ ಮಾಡಿದೆ. ಸರ್ಕಾರಿ ಬಸ್ ಮಾತ್ರವಲ್ಲದೇ ಖಾಸಗಿ ಬಸ್ ಗಳು ಕೂಡ ಅಧಿಕವಾಗಿದ್ದವು. ಈ ಹಿನ್ನೆಲೆಯಲ್ಲಿ ವಾಹನ ಸಂಚಾರ ದಟ್ಟಣೆ ಮತ್ತಷ್ಟು ಹೆಚ್ಚಲು ಕಾರಣವಾಗಿತ್ತು. ಕೆ.ಜಿ ರಸ್ತೆ, ಯಶವಂತಪುರ, ಆನಂದ ರಾವ್ ಸರ್ಕಲ್, ಮೌರ್ಯ ವೃತ್ತ, ಶಾಂತಿ ನಗರ, ವಿಜಯನಗರ ಮೊದಲಾದ ಕಡೆಗಳಲ್ಲಿ ಖಾಸಗಿ ಬಸ್ ಏಜೆನ್ಸಿಗಳ ಕಚೇರಿ ಬಳಿ ಪ್ರಯಾಣಿಕರ ದಂಡೇ ನೆರೆದಿತ್ತು.

    ಖಾಸಗಿ ಬಸ್‍ಗಳು ರಸ್ತೆಯಲ್ಲಿಯೇ ನಿಂತಿದ್ದರಿಂದ ಪಾದಾಚಾರಿಗಳ ಓಡಾಟಕ್ಕೂ ತೊಂದರೆಯಾಗಿತ್ತು. ಅಲ್ಲದೇ ಇದರಿಂದ ವಾಹನ ಸವಾರರು ಕೂಡ ಪರದಾಡಬೇಕಾಯಿತು. ಒಟ್ಟಿನಲ್ಲಿ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಟ್ರಾಫಿಕ್ ಪೊಲೀಸರು ಹರಸಾಹಸಪಡಬೇಕಾಯಿತು.

    ಇನ್ನು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಯಶವಂತಪುರ ರೈಲು ನಿಲ್ದಾಣ, ಬೆಂಗಳೂರು ದಂಡು ನಿಲ್ದಾಣ, ಕೆಆರ್ ಪುರ ರೈಲು ನಿಲ್ದಾಣ ಸೇರಿದಂತೆ ಸಿಲಿಕಾನ್ ಸಿಟಿಯಲ್ಲಿರೋ ಎಲ್ಲಾ ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರು ಕಿಕ್ಕಿರಿದು ತುಂಬಿದ್ದರು.

  • ಬೈಕ್ ಗೆ ಖಾಸಗಿ ಬಸ್ ಡಿಕ್ಕಿ: 5ರ ಬಾಲಕ ಸೇರಿ ಮೂವರ ದುರ್ಮರಣ

    ಬೈಕ್ ಗೆ ಖಾಸಗಿ ಬಸ್ ಡಿಕ್ಕಿ: 5ರ ಬಾಲಕ ಸೇರಿ ಮೂವರ ದುರ್ಮರಣ

    ಕಲಬುರಗಿ: ಬೈಕ್‍ಗೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ದುರ್ಮರಣಕ್ಕೀಡಾದ ಘಟನೆ ತಾಲೂಕಿನ ಫರಹತ್ತಬಾದ್ ಗ್ರಾಮದ ಶಹಬಾದ್ ಕ್ರಾಸ್ ಬಳಿ ನಡೆದಿದೆ.

    ಬಾಬುರಾವ್(45), ಅನಿತಾ(40) ಹಾಗೂ ಐದು ವರ್ಷದ ಮೊಮ್ಮಗ ಶುಭಂ ಮೃತ ದುರ್ದೈವಿಗಳು. ಇವರು ಬಸವಕಲ್ಯಾಣದಿಂದ ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ತಿಂಥಣಿಗೆ ಬೈಕ್ ನಲ್ಲಿ ಹೊರಟಿದ್ದರು. ಈ ವೇಳೆ ಬೆಂಗಳೂರು ಮೂಲದ ಆರೆಂಜ್ ಟ್ರಾವೆಲ್ಸ್‍ಗೆ ಸೇರಿದ ಖಾಸಗಿ ಬಸ್, ಬೈಕ್ ಗೆ ಡಿಕ್ಕಿ ಹೊಡೆದಿದೆ. ಘಟನೆಯ ಬಳಿಕ ಬಸ್ ಚಾಲಕ ಪರಾರಿಯಾಗಿದ್ದಾನೆ ಎನ್ನಲಾಗಿದೆ.

    ಸ್ಥಳಕ್ಕೆ ಫರಹತ್ತಬಾದ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

     

  • ತುಮಕೂರಿನಲ್ಲಿ ಬೇಕರಿಯೊಳಗೆ ನುಗ್ಗಿದ ಖಾಸಗಿ ಬಸ್: ಇಬ್ಬರ ದುರ್ಮರಣ

    ತುಮಕೂರಿನಲ್ಲಿ ಬೇಕರಿಯೊಳಗೆ ನುಗ್ಗಿದ ಖಾಸಗಿ ಬಸ್: ಇಬ್ಬರ ದುರ್ಮರಣ

    ತುಮಕೂರು: ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್ಸೊಂದು ಬೇಕರಿಯೊಳಗೆ ನುಗ್ಗಿದ ಪರಿಣಾಮ ಇಬ್ಬರು ಸಾವನಪ್ಪಿ ಮೂವರು ಗಾಯಗೊಂಡ ಘಟನೆ ನಡೆದಿದೆ.

    ಕೊರಟಗೆರೆ ತಾಲೂಕಿನ ಕೋಳಾಲ ವೃತ್ತದಲ್ಲಿ ಈ ದುರಂತ ಸಂಭವಿಸಿದೆ. ಬನಶಂಕರಿ ಬೇಕರಿ ಮಾಲೀಕ ಕುಮಾರ್ ಹಾಗೂ ಬಸ್ ಗಾಗಿ ಕಾಯುತಿದ್ದ ಲಕ್ಷಮ್ಮ ಎಂಬ ಮಹಿಳೆ ಸಾವನಪ್ಪಿದ್ದಾರೆ.

    ಎಸ್ ಎಲ್ ಎನ್ ಬಸ್, ಕೊರಟಗೆರೆಯಿಂದ ಬೆಂಗಳೂರು ಕಡೆಗೆ ಹೊರಟಿತ್ತು. ಚಾಲಕನ ನಿಯಂತ್ರಣ ತಪ್ಪಿ ಏಕಾಏಕಿ ಬೇಕರಿ ಒಳಗೆ ನುಗ್ಗಿದೆ. ಮಹಿಳೆ ಸ್ಥಳದಲ್ಲೇ ಸಾವನಪ್ಪಿದ್ರೆ, ಬೇಕರಿ ಮಾಲೀಕ ಕುಮಾರ್ ಬೆಂಗಳೂರು ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಅಸುನೀಗಿದ್ದಾನೆ. ಉಳಿದಂತೆ ಚಾಲಕ ಸೇರಿ ಇಬ್ಬರು ಪ್ರಯಾಣಿಕರಿಗೆ ಗಾಯವಾಗಿದೆ.

    ಈ ಸಂಬಂಧ ಕೊರಟಗೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಕೆರೆಗೆ ಉರುಳಿ ಬಿದ್ದ ಖಾಸಗಿ ಬಸ್- 30ಕ್ಕೂ ಹೆಚ್ಚು ಜನರಿಗೆ ಗಾಯ

    ಕೆರೆಗೆ ಉರುಳಿ ಬಿದ್ದ ಖಾಸಗಿ ಬಸ್- 30ಕ್ಕೂ ಹೆಚ್ಚು ಜನರಿಗೆ ಗಾಯ

    ಹುಬ್ಬಳ್ಳಿ: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್‍ವೊಂದು ಕೆರೆಗೆ ಉರುಳಿ ಬಿದ್ದ ಘಟನೆ ಹುಬ್ಬಳ್ಳಿ ಹೊರವಲಯದ ಪುನಾ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ವರೂರ ಕ್ರಾಸ್ ಬಳಿ ನಡೆದಿದೆ.

    ವರೂರ ಕ್ರಾಸ್ ಬಳಿ ಇರುವ ಮಾಜಿ ಸಚಿವ ಬಸವರಾಜ ಹೊರಟ್ಟಿ ಅವರ ಫಾರ್ಮ್ ಹೌಸ್‍ನ ಕೆರೆಗೆ ಖಾಸಗಿ ಬಸ್‍ವೊಂದು ಉರುಳಿ ಬಿದ್ದಿದೆ. ಈ ಬಸ್ ಬೆಂಗಳೂರಿನಿಂದ ಮುಂಬೈಗೆ ಹೊರಟಿದ್ದ ವೇಳೆ ಈ ಘಟನೆ ಸಂಭವಿಸಿದೆ.

    ಘಟನೆಯಲ್ಲಿ ಬಸ್ ನಲ್ಲಿದ್ದ ಮೂವತ್ತಕ್ಕೂ ಹೆಚ್ಚು ಜನರಿಗೆ ಗಾಯವಾಗಿದ್ದು, ಗಾಯಾಳುಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹುಬ್ಬಳ್ಳಿಯ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಖಾಸಗಿ ಬಸ್ ಡಿಕ್ಕಿಯಾಗಿ ಅಂಬುಲೆನ್ಸ್ ಚಾಲಕ, ಸಹಾಯಕ ದುರ್ಮರಣ

    ಖಾಸಗಿ ಬಸ್ ಡಿಕ್ಕಿಯಾಗಿ ಅಂಬುಲೆನ್ಸ್ ಚಾಲಕ, ಸಹಾಯಕ ದುರ್ಮರಣ

    ಕಾರವಾರ: ಖಾಸಗಿ ಬಸ್ ಹಾಗೂ ಅಂಬುಲೆನ್ಸ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಆಂಬುಲೆನ್ಸ್ ನ ಚಾಲಕ ಹಾಗೂ ಸಹಾಯಕ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.

    ಸಿದ್ದಾಪುರ ಮೂಲದ ಅಂಬುಲೆನ್ಸ್ ಚಾಲಕ ಬಾಲಕೃಷ್ಣ ನಾಯಕ್, ಸಹಾಯಕ ಜಗದೀಶ್ ಚನ್ನಯ್ಯ ಮೃತ ದುರ್ದೈವಿಗಳು.

    ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಹುಬ್ಬಳ್ಳಿ ರಾಜ್ಯ ಹೆದ್ದಾರಿಯ ಬಿಸಲಕೊಪ್ಪದಲ್ಲಿ ಈ ಅವಘಡ ಸಂಭವಿಸಿದೆ. ಶವವನ್ನು ಸಿದ್ದಾಪುರದಲ್ಲಿರೋ ಗ್ರಾಮಕ್ಕೆ ತಲುಪಿಸಿ ವಾಪಾಸ್ಸಾಗುತ್ತಿದ್ದಾಗ ಅಂಬುಲೆನ್ಸ್ ಗೆ ಹಾವೇರಿ ಕಡೆ ಚಲಿಸುತ್ತಿದ್ದ ಬಸ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಅಂಬುಲೆನ್ಸ್ ಚಾಲಕ ಹಾಗೂ ಸಹಾಯಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಈ ಬಗ್ಗೆ ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


  • ಜಿದ್ದಿಗೆ ಬಿದ್ದು ಬಸ್ ಓಡಿಸಿದ ಡ್ರೈವರ್‍ಗಳು: ವೈರಲ್ ಆಗಿದೆ ತಮಿಳುನಾಡಿನ ರೇಸ್ ವಿಡಿಯೋ

    ಜಿದ್ದಿಗೆ ಬಿದ್ದು ಬಸ್ ಓಡಿಸಿದ ಡ್ರೈವರ್‍ಗಳು: ವೈರಲ್ ಆಗಿದೆ ತಮಿಳುನಾಡಿನ ರೇಸ್ ವಿಡಿಯೋ

    ಚೆನ್ನೈ: ರೇಸ್ ಟ್ರ್ಯಾಕ್ ನಲ್ಲಿ ಬಸ್ ಗಳು ಸ್ಪರ್ಧೆ ಮಾಡುವುದನ್ನು ನೀವು ನೋಡಿರಬಹುದು. ಆದರೆ ಈ ರೇಸ್ ಸ್ಪರ್ಧೆ ರಸ್ತೆಯಲ್ಲಿ ನಡೆದರೆ ಹೇಗಿರುತ್ತದೆ ಎನ್ನುವುದಕ್ಕೆ ತಮಿಳುನಾಡಿನ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಕೊಯಂಬತ್ತೂರು – ಪುಲೈಚ್ಚಿ ಹೈವೇಯಲ್ಲಿ ಎರಡು ಖಾಸಗಿ ಬಸ್‍ಗಳು ಸ್ಪರ್ಧೆಗೆ ಬಿದ್ದಂತೆ ಸಂಚರಿಸಿದೆ. ಇಬ್ಬರು ಡ್ರೈವರ್ ಗಳು ಓವರ್ ಟೇಕ್ ಮಾಡಲು ಕಾಮಗಾರಿ ನಡೆಯುತ್ತಿದ್ದ ರಸ್ತೆಯ ಮೇಲೆ ಬಸ್ ಹತ್ತಿಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

    ಈ ಬಸ್‍ಗಳ ಸ್ಪರ್ಧೆಯನ್ನು ಬೈಕಿನಲ್ಲಿ ಹೋಗುತ್ತಿದ್ದ ವ್ಯಕ್ತಿಗಳು ಸೆರೆ ಹಿಡಿದಿದ್ದಾರೆ. ಈ ವಿಡಿಯೋವನ್ನು ವೀಕ್ಷಿಸಿದ ಬಳಿಕ ಪುಲ್ಲೈಚ್ಚಿ ಜಿಲ್ಲಾಧಿಕಾರಿ ಗಾಯತ್ರಿ ಕೃಷ್ಣನ್ ಬಸ್ ಮಾಲೀಕರ ಸಭೆಯನ್ನು ಕರೆದಿದ್ದಾರೆ.

    ಮುಂದುಗಡೆ ವಾಹನಗಳು ಬರುತ್ತಿದ್ದರೂ ಜಿದ್ದಿಗೆ ಬಿದ್ದ ಡ್ರೈವರ್‍ಗಳು ಬಸ್ಸನ್ನು ಓಡಿಸಿರುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ.

    https://www.youtube.com/watch?v=3Qj39Ot1RGs

  • ಮಂಗಳೂರು: ಬಸ್ ಚಾಲಕನ ಕಿಸೆಯಲ್ಲೇ ಮೊಬೈಲ್ ಸ್ಫೋಟ!

    ಮಂಗಳೂರು: ಬಸ್ ಚಾಲಕನ ಕಿಸೆಯಲ್ಲೇ ಮೊಬೈಲ್ ಸ್ಫೋಟ!

    ಮಂಗಳೂರು: ಬಸ್ ಚಲಾಯುಸುತ್ತಿದ್ದ ಚಾಲಕನ ಶರ್ಟ್ ಕಿಸೆಯಲ್ಲೇ ಮೊಬೈಲ್ ಫೋನ್ ಸ್ಫೋಟಗೊಂಡು ಕೆಲ ಕಾಲ ಆತಂಕ ಸೃಷ್ಟಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪ ನಡೆದಿದೆ.

    ಮಡಂತ್ಯಾರಿನಿಂದ ಉಪ್ಪಿನಂಗಡಿಗೆ ಆಗಮಿಸುತ್ತಿದ್ದ ಖಾಸಗಿ ಬಸ್‍ವೊಂದರಲ್ಲಿ ಈ ಅವಘಡ ಸಂಭವಿಸಿದೆ. ಈ ರಸ್ತೆ ತುಂಬಾ ಕಿರಿದಾಗಿದ್ದರಿಂದ ಚಾಲಕನ ಗಮನವೆಲ್ಲಾ ಬಸ್ ಚಲಾಯಿಸುವ ಕಡೆ ಹಾಗೂ ಎದುರುಗಡೆಯಿಂದ ಬರುವ ವಾಹನಗಳತ್ತ ಇತ್ತು. ಮಾತ್ರವಲ್ಲದೇ ಬೆಳಗ್ಗಿನ ಸಮಯವಾಗಿದ್ದರಿಂದ ಪ್ರಯಾಣಿಕರಿಂದ ತುಂಬಿದ್ದ ಬಸ್ಸನ್ನು ಜಾಗರೂಕತೆಯಿಂದ ಚಲಾಯಿಸುತ್ತಿದ್ದ ಸಂದರ್ಭದಲ್ಲಿ ಚಾಲಕನ ಕಿಸೆಯಲ್ಲಿದ್ದ ಮೊಬೈಲ್ ಫೋನ್ ಇದ್ದಕ್ಕಿದ್ದಂತೆ ಸ್ಫೋಟಗೊಂಡಿದೆ. ಇದರಿಂದ ಚಾಲಕ ಮಾತ್ರವಲ್ಲದೇ ಅವರ ಪಕ್ಕದಲ್ಲಿದ್ದ ಪ್ರಯಾಣಿಕರೂ ಒಮ್ಮೆ ಕಕ್ಕಾಬಿಕ್ಕಿಯಾದ್ರು.

    ಇಂಟೆಕ್ಸ್ ಕಂಪೆನಿಗೆ ಸೇರಿದ ಈ ಮೊಬೈಲ್ ಸ್ಫೋಟಗೊಂಡಿದ್ದರಿಂದ ಒಂದು ಕ್ಷಣ ಆ ಬಸ್ಸಿನಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು. ಚಾಲಕನ ಜಾಗರೂಕತೆಯಿಂದ ಭಾರೀ ಅಪಾಯವೊಂದು ತಪ್ಪಿದರೂ, ಚಾಲಕ ಸಂದೇಶ್ ಬಂದಾರು ಅವರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಮಾತ್ರವಲ್ಲದೆ ಅವರ ಶರ್ಟ್ ಭಾಗಶಃ ಸುಟ್ಟು ಹೋಗಿದೆ ಎಂಬುವುದಾಗಿ ತಿಳಿದುಬಂದಿದೆ.