Tag: ಖಾಸಗಿ ಫೋಟೋ

  • ನಿರ್ಮಾಪಕನ ಜೊತೆ ಸರಸಕ್ಕೆ ಸೈ ಎಂದು ಸಂಕಟ ಪಡ್ತಿದ್ದಾರಂತೆ ನಟಿ ಶೀತಲ್

    ನಿರ್ಮಾಪಕನ ಜೊತೆ ಸರಸಕ್ಕೆ ಸೈ ಎಂದು ಸಂಕಟ ಪಡ್ತಿದ್ದಾರಂತೆ ನಟಿ ಶೀತಲ್

    ನಿರ್ಮಾಪಕರೊಬ್ಬರ ಮೇಲೆ ನಟಿ ಶೀತಲ್ (Sheetal) ಗಂಭೀರ ಆರೋಪ ಮಾಡಿದ್ದಾರೆ. ನಿರ್ಮಾಪಕನ ಜೊತೆ ಮಂಚ ಹಂಚಿಕೊಂಡಿದ್ದರ ಪರಿಣಾಮ, ಇಂದು ತಮಗೆ ಕಣ್ಣೀರಿಡುವಂತಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಆ ನಿರ್ಮಾಪಕನ ವಿರುದ್ಧ ಪೊಲೀಸರಿಗೆ ದೂರು ಕೂಡ ಅವರು ನೀಡಿದ್ದಾರೆ.

    ಒಡಿಶಾ ಚಿತ್ರೋದ್ಯಮದಲ್ಲಿ ನಟಿ ಶೀತಲ್ ಅವರಿಗೆ ತಮ್ಮದೇ ಆದ ಹೆಸರಿದೆ. ದಯಾನಿಧಿ ಎಂಟರ್ ಟೇನ್ಮೆಂಟ್ ಮಾಲೀಕ ಹಾಗೂ ನಿರ್ಮಾಪಕ ದಯಾನಿಧಿ ದಹಿಮಾ (Dayanidhi Dahima) ಅವರೊಂದಿಗೆ ನಟಿ ಶೀತಲ್ ಸಂಬಂಧದಲ್ಲಿ ಇದ್ದಳಂತೆ. ದಯಾನಿಧಿ ಬ್ಯಾನರ್ ನಲ್ಲಿ ಮೂಡಿ ಬಂದ ಹಲವು ಚಿತ್ರಗಳಲ್ಲೂ ಅವರು ನಟಿಸಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರೂ ಖಾಸಗಿ ಕ್ಷಣಗಳನ್ನು ಕಳೆದಿದ್ದಾರೆ. ಇದನ್ನೂ ಓದಿ:‘ಸಲಾರ್’ ಚಿತ್ರಕ್ಕೆ ಹಿನ್ನೆಲೆ ಸಂಗೀತ : ಬಸ್ರೂರಿನಲ್ಲಿ ಬೀಡುಬಿಟ್ಟ ಪ್ರಶಾಂತ್ ನೀಲ್

    ದಯಾನಿಧಿ ಜೊತೆ ಸರಸ ಸಲ್ಲಾಪದ ಕ್ಷಣಗಳನ್ನು ನಟಿಯ ಅರಿವಿಗೆ ಬಾರದಂತೆ ಸೆರೆ ಹಿಡಿಯಲಾಗಿದೆಯಂತೆ. ಆ ವಿಡಿಯೋ (video) ಮತ್ತು ಫೋಟೋಗಳನ್ನು (private photo) ಇಟ್ಟುಕೊಂಡು ದಯಾನಿಧಿ ತಮಗೆ ಬೆದರಿಕೆ ಹಾಕುತ್ತಿದ್ದಾನೆ ಎಂದು ನಟಿ ಆರೋಪಿಸಿದ್ದಾಳೆ. ತನಗೆ ಮಾತ್ರವಲ್ಲ ತನ್ನ ತಾಯಿ ತಮ್ಮ ತಮ್ಮನಿಗೂ ತೊಂದರೆ ಕೊಡುತ್ತಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

     

    ಈವರೆಗೂ ತಾನು ಪಡೆದಿರುವ ಸಂಭಾವನೆಯನ್ನು ದಯಾನಿಧಿ ವಾಪಸ್ಸು ಕೇಳುತ್ತಿದ್ದಾನೆ ಎನ್ನುವುದು ಶೀತಲ್ ಆರೋಪ. ಅಷ್ಟೇ ಅಲ್ಲದೇ ಇತ್ತೀಚೆಗಷ್ಟೇ ತನ್ನೊಂದಿಗೆ ದಯಾನಿಧಿ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಆರೋಪ ಮಾಡಿದ್ದಾರೆ. ಸದ್ಯ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಖಾಸಗಿ ಫೋಟೋ ಹಂಚಿಕೊಂಡ ಮಲೈಕಾ: ನಟ ಅರ್ಜುನ್ ಗರಂ

    ಖಾಸಗಿ ಫೋಟೋ ಹಂಚಿಕೊಂಡ ಮಲೈಕಾ: ನಟ ಅರ್ಜುನ್ ಗರಂ

    ನ್ನೊಂದಿಗೆ ಸಹಜೀವನ ನಡೆಸುತ್ತಿರುವ ನಟ ಅರ್ಜುನ್ ಕಪೂರ್ ಅವರ ಅರೆಬೆತ್ತಲೆ ಫೋಟೋ (Private Photo) ಹಂಚಿಕೊಂಡು ಸಾಕಷ್ಟು ಟ್ರೋಲ್ ಆಗಿದ್ದರು ನಟಿ ಮಲೈಕಾ ಅರೋರಾ (Malaika Arora). ಅರ್ಜುನ್ ಕಪೂರ್ ತನ್ನ ಖಾಸಗಿ ಭಾಗವನ್ನು ದಿಂಬಿನಿಂದ ಮುಚ್ಚಿಕೊಂಡಿದ್ದ ಫೋಟೋ ಅದಾಗಿತ್ತು. ಇಂತಹ ಫೋಟೋ ಹಂಚಿಕೊಳ್ಳುವ ಹಿಂದಿನ ಉದ್ದೇಶವೇನು ಎಂದು ಅನೇಕರು ಮಲೈಕಾಗೆ ಪ್ರಶ್ನೆ ಮಾಡಿದ್ದರು. ಸಾಕಷ್ಟು ನೆಗೆಟಿವ್ ಟೀಕೆಗಳು ವ್ಯಕ್ತವಾಗಿದ್ದವು.

    ನೆಗೆಟಿವ್ ಕಾಮೆಂಟ್ ಗಳು ಹೆಚ್ಚಾಗುತ್ತಿದ್ದಂತೆಯೇ ಸ್ವತಃ ಅರ್ಜುನ್ ಕಪೂರ್ ಅವರೇ ಅಖಾಡಕ್ಕೆ ಇಳಿದಿದ್ದರು. ಮೌನವಾಗಿ ಸಂಭ್ರಮಿಸಿ. ಶಾಂತಿ ಕಾಪಾಡಿಕೊಳ್ಳಿ ಎನ್ನುವಂತೆ ಅವರು ಕಾಮೆಂಟ್ (Comment)  ಮಾಡಿದ್ದರು. ಪರೋಕ್ಷವಾಗಿ ಅವರು ಟ್ರೋಲ್ ಮಾಡುತ್ತಿರುವವರಿಗೆ ಟಾಂಗ್ ಕೊಟ್ಟಿದ್ದರು. ಈ ಮೂಲಕ ಮಲೈಕಾ ಅರೋರಾ ಪರವಾಗಿ ನಿಂತುಕೊಂಡಿದ್ದರು. ಆದರೂ, ನೆಗೆಟಿವ್ ಕಾಮೆಂಟ್ ಗಳು ನಿಂತಿಲ್ಲ. ಟ್ರೋಲ್ ಮಾಡುವವರ ವಿರುದ್ಧ ಗರಂ ಆಗಿದ್ದಾರೆ.

    ಈ ರೀತಿಯ ಫೋಟೋಗಳನ್ನು ಹಂಚಿಕೊಳ್ಳುವುದು ಮಲೈಕಾಗೆ ಹೊಸದೇನೂ ಅಲ್ಲ. ಆಗಾಗ ತಮ್ಮ ಗ್ಲ್ಯಾಮರಸ್ ಫೋಟೋ ಹಂಚಿಕೊಳ್ಳುವ ಮೂಲಕ ನಟಿ ಸದ್ದು ಮಾಡ್ತಿರುತ್ತಾರೆ. ಇದೀಗ ಗೆಳೆಯ ಅರ್ಜುನ್ ಕಪೂರ್ ಅವರ ಖಾಸಗಿ ಫೋಟೋವನ್ನ ನಟಿ ಶೇರ್ ಮಾಡಿದ್ದಾರೆ. ಈ ಫೋಟೋ ಇದೀಗ ಟ್ರೋಲಿಗರ ಬಾಯಿಗೆ ಆಹಾರವಾಗಿದೆ. ಇದನ್ನೂ ಓದಿ:ರಾಜಕಾರಣ ಬದಿಗಿಟ್ಟು ಪುತ್ರನ ಮದುವೆಗೆ ಮುಖ್ಯಮಂತ್ರಿಯನ್ನು ಆಹ್ವಾನಿಸಿದ ಸುಮಲತಾ

    ಸದಾ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಲ್ಲಿರುವ ಜೋಡಿ ಅಂದರೆ ಅರ್ಜುನ್- ಮಲೈಕಾ ಅರೋರಾ. ಸಿನಿಮಾಗಿಂತ ಖಾಸಗಿ ವಿಚಾರವಾಗಿಯೇ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಮಲೈಕಾ ಮಾಡಿದ ಒಂದು ಕೆಲಸದಿಂದ ಅರ್ಜುನ್ ಕಪೂರ್ (Arjun Kapoor) ಸಖತ್ ಟ್ರೋಲ್ (Troll) ಆಗುತ್ತಿದ್ದಾರೆ.

    ಮಲೈಕಾ- ಅರ್ಜುನ್ ಕಪೂರ್ ರಿಲೇಷನ್‌ಶಿಪ್ ಇದೀಗ ಗುಟ್ಟಾಗಿ ಏನು ಉಳಿದಿಲ್ಲ. ಅರ್ಬಾಜ್ ಖಾನ್ ಜೊತೆಗಿನ ದಾಂಪತ್ಯಕ್ಕೆ ಅಂತ್ಯ ಹಾಡಿದ ಮೇಲೆ ಮಲೈಕಾ, ಅರ್ಜುನ್ ಕಪೂರ್ ಜೊತೆ ಡೇಟ್ ಮಾಡುತ್ತಿದ್ದಾರೆ. ಲಿವಿಂಗ್ ರಿಲೇಷನ್‌ಶಿಪ್ನಲ್ಲೂ ಇದ್ದಾರೆ. ಆಗಾಗ ಇಬ್ಬರೂ ವಿದೇಶಕ್ಕೆ ಹೋಗಿ ಬರುತ್ತಾರೆ. ಅಷ್ಟರ ಮಟ್ಟಿಗೆ ಇಬ್ಬರ ಬಂಧ ಗಟ್ಟಿಯಾಗಿದೆ.

    ಇದೀಗ ‘ನನ್ನ ಲೇಝಿ ಬಾಯ್’ ಎಂದು ಅರ್ಜುನ್ ಖಾಸಗಿ ಫೋಟೋವನ್ನ ನಟಿ ಶೇರ್ ಮಾಡಿದ್ದಾರೆ. ಅರ್ಜುನ್ ಕಪೂರ್ ಮೈ ಮೇಲೆ ಬಟ್ಟೆ ಇಲ್ಲದೆ ಕಪ್ಪು ಬಣ್ಣದ ತಲೆದಿಂಬು ಇಟ್ಟುಕೊಂಡು ಕ್ಲಿಕ್ಕಿಸಿದ ಫೋಟೋವನ್ನು ಮಲೈಕಾ ಶೇರ್ ಮಾಡಿದ್ದಾರೆ. ಈ ಫೋಟೋ ಇದೀಗ ಟ್ರೋಲಿಗರ ಬಾಯಿಗೆ ಆಹಾರವಾಗಿದೆ. ನಟನ ಲುಕ್‌ಗೆ ನಾಚಿಕೆಗೇಡಿನ ಸಂಗತಿ ಎಂದು ನೆಟ್ಟಿಗರು ಕಾಮೆಂಟ್ ಮಾಡ್ತಿದ್ದಾರೆ.

  • ಶಾಸಕಿ ನಯನಾ ಖಾಸಗಿ ಫೋಟೋಗಳ ವಿಚಾರ : ನಟ ಚೇತನ್ ಬೇಸರ

    ಶಾಸಕಿ ನಯನಾ ಖಾಸಗಿ ಫೋಟೋಗಳ ವಿಚಾರ : ನಟ ಚೇತನ್ ಬೇಸರ

    ಚಿಕ್ಕಮಗಳೂರು ಮೀಸಲು ಕ್ಷೇತ್ರದ ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ (Nayana Motamma) ಅವರ ಖಾಸಗಿ ಫೋಟೋಗಳನ್ನು (Private Photo) ವಿರೋಧಿಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿದ್ದರು. ಸ್ವತಃ ನಯನಾ ಅವರೇ ತಮ್ಮ ಎದುರಾಳಿಗಳಿಗೆ ತಿರುಗೇಟು ನೀಡುವ ಮೂಲಕ ಆ ಫೋಟೋಗಳನ್ನು ತಮ್ಮದೇ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಪ್ರತ್ಯುತ್ತರ ನೀಡಿದ್ದರು. ಈ ವಿಚಾರವಾಗಿ ನಟ ಚೇತನ್ ಅಹಿಂಸಾ (Chetan Ahimsa) ಪ್ರತಿಕ್ರಿಯಿಸಿದ್ದಾರೆ. ನಯನಾ ಬೆಂಬಲಕ್ಕೆ ಚೇತನ್ ನಿಂತಿದ್ದಾರೆ.

    ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಚೇತನ್, ‘ಹೊಸದಾಗಿ ಚುನಾಯಿತ ಶಾಸಕಿ ನಯನಾ ಮೋಟಮ್ಮ ಅವರ ಖಾಸಗಿ ಚಿತ್ರಗಳನ್ನು ಪ್ರಕಟಿಸುವ ಮೂಲಕ ರಾಜಕೀಯ ಪ್ರತಿಸ್ಪರ್ಧಿಗಳು ಅವರ ಮರ್ಯಾದೆ ಹತ್ಯೆಗೆ ಯತ್ನಿಸಿದ್ದಾರೆ. ಭಾರತದಲ್ಲಿನ ಎಲ್ಲಾ ಮಹಿಳೆಯರು ವಿವಿಧ ಹಂತಗಳಲ್ಲಿ ಪುರುಷ ಪ್ರಧಾನ ವ್ಯವಸ್ಥೆಗೆ ಬಲಿಪಶುಗಳಾಗಿದ್ದಾರೆ/ ಬಲಿಪಶುಗಳಾಗುತ್ತಿದ್ದಾರೆ. ಅಧಿಕಾರದ ಉನ್ನತ ಸ್ಥಾನಗಳಿಗೆ ಏರುವ ಮಹಿಳೆಯರು ಅದನ್ನು ಸಾರ್ವಜನಿಕ ರೀತಿಯಲ್ಲಿ ಎದುರಿಸುತ್ತಾರೆ. ದೃಢವಾಗಿ ನಿಂತಿರುವ ಶಾಸಕರಿಗೆ ಅಭಿನಂದನೆಗಳು. ಪೊಲೀಸರು ತಪ್ಪು ಮಾಡಿದವರ ವಿರುದ್ಧ ಕ್ರಮ ತಗೆದುಕೊಳ್ಳಬೇಕು’ ಎಂದು ಬರೆದಿದ್ದಾರೆ. ಇದನ್ನೂ ಓದಿ:ನಂದಮೂರಿ ಬಾಲಯ್ಯ ಸಿನಿಮಾದಲ್ಲಿ ಹ್ಯಾಟ್ರಿಕ್‌ ಹೀರೋ ಶಿವಣ್ಣ

    ಸ್ವತಃ ನಯನಾ ಅವರ ತಮ್ಮ ಫೋಟೋಗಳನ್ನು ಹೊಂದಿರುವ ವಿಡಿಯೋ ಶೇರ್ ಮಾಡಿ, ‘ಸೋಲಿನ ಹತಾಶೆ ನಿಮ್ಮನ್ನು ಇನ್ನಷ್ಟು ಕಾಡದಿರಲಿ. ಹೌದು, ರಾಜಕೀಯವಾಗಿ ನಾನು, ನನ್ನತನ, ನನ್ನ ವೈಯಕ್ತಿಕ ಜೀವನ ಇವೆಲ್ಲದರ ವ್ಯತ್ಯಾಸ ತಿಳಿಯದ ಅವಿವೇಕಿಗಳಿಗೆ ಉತ್ತರವಿದು’ ಎಂದು ವಿಡಿಯೋ ಜೊತೆ ಶರಾ ಬರೆದಿದ್ದಾರೆ.

    ಮಾಜಿ ಮಂತ್ರಿ ಮೋಟಮ್ಮ ಅವರ ಪುತ್ರಿಯಾಗಿ ನಯನಾ, ಇದೇ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಮೀಸಲು ಕ್ಷೇತ್ರದಿಂದ ಗೆದ್ದಿದ್ದಾರೆ. ಅನೇಕರ ವಿರೋಧಗಳ ನಡುವೆಯೂ ನಯನಾ ಗೆಲುವಿನ ಪತಾಕೆ ಹಾರಿಸಿದ್ದಾರೆ. ಇದನ್ನು ಸಹಿಸದವರು ಅವರು ಖಾಸಗಿ ಫೋಟೋಗಳನ್ನು ಹರಿಬಿಟ್ಟು ಚರ್ಚೆಗೆ ಕಾರಣವಾಗಿದ್ದಾರೆ.

  • ಸ್ನೇಹಿತನಿಂದಲೇ ಪರ್ಸನಲ್ ಫೋಟೋ ಲೀಕ್ – ವಿದ್ಯಾರ್ಥಿನಿ ಆತ್ಮಹತ್ಯೆ

    ಸ್ನೇಹಿತನಿಂದಲೇ ಪರ್ಸನಲ್ ಫೋಟೋ ಲೀಕ್ – ವಿದ್ಯಾರ್ಥಿನಿ ಆತ್ಮಹತ್ಯೆ

    ಹೈದರಾಬಾದ್: ತೆಲಂಗಾಣದಲ್ಲಿ (Telangana) ವೈದ್ಯಕೀಯ ವಿದ್ಯಾರ್ಥಿನಿಯೊಬ್ಬಳು (Student) ರ‍್ಯಾಂಗಿಂಗ್‌ಗೆ ಒಳಗಾಗಿ ಮನನೊಂದು ಆತ್ಮಹತ್ಯೆ (Suicide) ಮಾಡಿಕೊಂಡಿರುವ ಬೆನ್ನಲ್ಲೇ ಇನ್ನೊಬ್ಬ ವಿದ್ಯಾರ್ಥಿನಿ ತನ್ನ ವೈಯಕ್ತಿಕ ಫೋಟೋಗಳು (Private Photo) ಲೀಕ್ ಆಗಿರುವ ಹಿನ್ನೆಲೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

    ಮೂಲಗಳ ಪ್ರಕಾರ ವಾರಂಗಲ್‌ನಲ್ಲಿ ಎಂಜಿನಿಯರ್ ವಿದ್ಯಾರ್ಥಿನಿ ತನ್ನ ಸ್ನೇಹಿತನಿಂದಲೇ ಖಾಸಗಿ ಫೋಟೋಗಳು ಲೀಕ್ ಆಗಿರುವುದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ವಿದ್ಯಾರ್ಥಿನಿಗೆ ಯುವಕನೊಂದಿಗೆ ಕೇವಲ ಸ್ನೇಹ ಮಾತ್ರವೇ ಇದ್ದು, ಆತ ಮಾತ್ರ ಆಕೆಯನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ.

    ವಿದ್ಯಾರ್ಥಿನಿ ಕೆಲ ದಿನಗಳ ಹಿಂದೆ ಮತ್ತೊಬ್ಬ ಎಂಜಿನಿಯರ್ ವಿದ್ಯಾರ್ಥಿಯನ್ನು ಪರಿಚಯ ಮಾಡಿಕೊಂಡಿದ್ದಳು. ಇದರಿಂದ ಕೆರಳಿದ್ದ ಆಕೆಯ ಸ್ನೇಹಿತ ವಿದ್ಯಾರ್ಥಿನಿಯ ಖಾಸಗಿ ಫೋಟೋಗಳನ್ನು ತನ್ನ ಇತರ ಸ್ನೇಹಿತರೊಂದಿಗೆ ಹಂಚಿಕೊಂಡಿದ್ದಾನೆ. ಇದರಿಂದ ಮನನೊಂದ ವಿದ್ಯಾರ್ಥಿನಿ ಭಾನುವಾರ ಸಂಜೆ ತನ್ನ ಸಂಬಂಧಿಕರ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ರ‍್ಯಾಗಿಂಗ್‍ನಿಂದ ವೈದ್ಯಕೀಯ ವಿದ್ಯಾರ್ಥಿನಿ ಆತ್ಮಹತ್ಯೆ

    ಘಟನೆಯ ಬಳಿಕ ವಿದ್ಯಾರ್ಥಿನಿಯು ಇಬ್ಬರು ಯುವಕರಿಂದ ಕಿರುಕುಳ ಅನುಭವಿಸುತ್ತಿದ್ದಳು. ಇದರಿಂದ ಆಕೆ ಆತ್ಮಹತ್ಯೆಯ ನಿರ್ಧಾರ ಮಾಡಿಕೊಂಡಿದ್ದಾಳೆ ಎಂದು ಆಕೆಯ ಪೋಷಕರು ತಿಳಿಸಿದ್ದಾರೆ. ಇದೀಗ ಘಟನೆಗೆ ಸಂಬಂಧಿಸಿದಂತೆ ಆರೋಪಿಗಳು ಪೊಲೀಸರ ವಶದಲ್ಲಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: UP ಉಮೇಶ್ ಪಾಲ್ ಕೊಲೆ ಕೇಸ್ – ಎನ್‍ಕೌಂಟರ್‌ಗೆ ಆರೋಪಿ ಬಲಿ

  • ನನ್ನ ಧರ್ಮಪತ್ನಿಯ ತೇಜೋವಧೆ ಮಾಡಿದ್ದಾರೆ – ರೂಪಾ ವಿರುದ್ಧ ದೂರು ಕೊಟ್ಟ ಸಿಂಧೂರಿ ಪತಿ

    ನನ್ನ ಧರ್ಮಪತ್ನಿಯ ತೇಜೋವಧೆ ಮಾಡಿದ್ದಾರೆ – ರೂಪಾ ವಿರುದ್ಧ ದೂರು ಕೊಟ್ಟ ಸಿಂಧೂರಿ ಪತಿ

    ಬೆಂಗಳೂರು: ಐಪಿಎಸ್ ಅಧಿಕಾರಿ ಡಿ.ರೂಪಾ ಮೌದ್ಗಿಲ್ (D Roopa) ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ (Rohini Sindhuri) ಕಿತ್ತಾಟದ ನಡುವೆ ಇದೀಗ ರೋಹಿಣಿ ಪತಿ ಕಾನೂನು ಸಮರಕ್ಕೆ ಮುಂದಾಗಿದ್ದಾರೆ.

    `ನನ್ನ ಪತ್ನಿ ರೋಹಿಣಿ ಸಿಂಧೂರಿ ಅವರ ಖಾಸಗಿ ಫೋಟೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಡಿ. ರೂಪಾ ಮೌದ್ಗಿಲ್, ಸಿಂಧೂರಿ ಅವರ ತೇಜೋವಧೆ ಮಾಡಿದ್ದಾರೆ’ ಎಂದು ಆರೋಪಿಸಿ ಸಿಂಧೂರಿ ಅವರ ಪತಿ ಸುಧೀರ್‌ ರೆಡ್ಡಿ (Sudhir Reddy) ದೂರು ನೀಡಿದ್ದಾರೆ. ಇದನ್ನೂ ಓದಿ: ರೋಹಿಣಿ ಬಗ್ಗೆ ಮಾತನಾಡೋದಕ್ಕೆ ರೂಪಾ ಯಾರು?: ಸುಧೀರ್ ರೆಡ್ಡಿ ಆಕ್ರೋಶ

    ಐಪಿಎಸ್ ಅಧಿಕಾರಿ ಡಿ.ರೂಪಾ ವಿರುದ್ಧ ಸುಧೀರ್‌ ರೆಡ್ಡಿ ಬಾಗಲಗುಂಟೆ ಪೊಲೀಸ್ ಠಾಣೆಗೆ (Bagalagunte Police Station) ದೂರು ನೀಡಿದ್ದಾರೆ. ಇದನ್ನೂ ಓದಿ: ರೋಹಿಣಿ-ರೂಪಾ ವಿರುದ್ಧ ಕಾನೂನು ‌ಕ್ರಮಕ್ಕೆ ಸಿಎಂ ಬೊಮ್ಮಾಯಿ ಸೂಚನೆ

    ನನ್ನ ಧರ್ಮಪತ್ನಿ ರೋಹಿಣಿ ಸಿಂಧೂರಿ ಅವರ ಖಾಸಗಿ ಫೋಟೋಗಳನ್ನ ರೂಪಾ ಅವರು ಸಾಮಾಜಿಕ ಜಾಲಾತಾಣದಲ್ಲಿ (Social Media) ಹಾಕಿ ಸಿಂಧೂರಿ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ. ರೂಪಾ ಅವರು ವೈಯಕ್ತಿಕ ಫೋಟೋಗಳನ್ನ ಹಂಚಿಕೊಂಡಿರೋದು ನೋಡಿದ್ರೆ ಅವರೇ ಹ್ಯಾಕ್ ಮಾಡಿರುವ ಅನುಮಾನ ಗೋಚರಿಸುತ್ತಿದೆ. ಆದ್ದರಿಂದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿ ತೇಜೋವಧೆ ಮಾಡುತ್ತಿರುವ ರೂಪಾ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಜೊತೆಗೆ ಫೋಟೋಗಳು ಸಿಕ್ಕಿದ್ದರ ಹಿಂದಿನ ಸತ್ಯಾಸತ್ಯತೆಯನ್ನ ತನಿಖೆ ಮೂಲಕ ಬಹಿರಂಗಪಡಿಸಬೇಕು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಸದ್ಯ ಬಾಗಲಗುಂಟೆ ಪೊಲೀಸರು ಕೊಟ್ಟ ದೂರನ್ನ ಸ್ವೀಕರಿಸಿದ್ದು, ಕಾನೂನು ತಜ್ಞರ ಬಳಿ ಚರ್ಚಿಸಿ ಪ್ರಕರಣ ದಾಖಲಿಸುವುದಾಗಿ ಹೇಳಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: 9 ಪ್ರಶ್ನೆಗಳಿಗೆ ಉತ್ತರ ಕೊಡಿ: ರೂಪಾಗೆ ರೋಹಿಣಿ ಅಭಿಮಾನಿಗಳ ಪ್ರಶ್ನೆ

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಖಾಸಗಿ ಫೋಟೋಗಳನ್ನು ವೈರಲ್ ಮಾಡುವುದಾಗಿ ಅಪ್ರಾಪ್ತೆಗೆ ಕಿರುಕುಳ ನೀಡುತ್ತಿದ್ದ ಯುವಕ ಅರೆಸ್ಟ್

    ಖಾಸಗಿ ಫೋಟೋಗಳನ್ನು ವೈರಲ್ ಮಾಡುವುದಾಗಿ ಅಪ್ರಾಪ್ತೆಗೆ ಕಿರುಕುಳ ನೀಡುತ್ತಿದ್ದ ಯುವಕ ಅರೆಸ್ಟ್

    ಮುಂಬೈ: ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿದ್ದ ಅಪ್ರಾಪ್ತೆಗೆ ಕಿರುಕುಳ ನೀಡುತ್ತಿದ್ದ ಆರೋಪದ ಮೇರೆಗೆ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

    ಯಶ್ ಭಂಡಾರೆ(19) ಬಂಧಿತ ಆರೋಪಿ. ಯಶ್ ಮುಂಬೈನ ಚೆಂಬೂರ್ ಪ್ರದೇಶದ ನಿವಾಸಿ. ಈತ ಅಪ್ರಾಪ್ತೆಗೆ ಇನ್‍ಸ್ಟಾಗ್ರಾಮ್‍ನಲ್ಲಿ ಪರಿಚಯವಾಗಿದ್ದ. ಪರಿಚಯದ ಮೂಲಕವೇ ಬಾಲಕಿಯ ಖಾಸಗಿ ಫೋಟೋಗಳನ್ನು ಪಡೆದುಕೊಂಡಿದ್ದ. ನಂತರ ಇನ್‍ಸ್ಟಾಗ್ರಾಮ್‍ನಲ್ಲಿ ನಕಲಿ ಖಾತೆ ಮಾಡಿ ಫೋಟೋಗಳನ್ನು ಶೇರ್ ಮಾಡುವುದಾಗಿ ಬೆದರಿಸಿ ಆಕೆಗೆ ಕಿರುಕುಳ ನೀಡುತ್ತಿದ್ದ.

    ಈ ಕುರಿತು ಬಾಲಕಿಯು ತನ್ನ ತಾಯಿಗೆ ತಿಳಿಸಿದ್ದಾಳೆ. ಬಾಲಕಿಯ ತಾಯಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸೈಬರ್ ಪೊಲೀಸ್ ಠಾಣೆಯಲ್ಲಿ ಯುವಕನ ವಿರುದ್ಧ ದೂರು ದಾಖಲಿಸಿದ್ದಾರೆ. ಪೊಲೀಸರು ತಂತ್ರಜ್ಞಾನದ ಸಹಾಯದಿಂದ ಯಶ್ ಮುಂಬೈನಲ್ಲಿರುವುದನ್ನು ಪತ್ತೆ ಹಚ್ಚಿದ್ದಾರೆ. ನಂತರ ಪೊಲೀಸರ ತಂಡವೊಂದು ಮುಂಬೈಗೆ ತೆರಳಿ ಯಶ್‍ನನ್ನು ಬಂಧಿಸಿದೆ. ಇದನ್ನೂ ಓದಿ: ಯಾರನ್ನಾದರೂ ಮುಟ್ಟಲಿ ನೋಡೋಣ, ನಾವು ಪಾದಯಾತ್ರೆ ಮಾಡಿಯೇ ಮಾಡುತ್ತೇವೆ: ಡಿಕೆಶಿ

    ಯಶ್ ಭಂಡಾರೆ ವಿರುದ್ಧ ಭಾರತೀಯ ದಂಡ ಸಂಹಿತೆ, ಲೈಂಗಿಕ ಅಪರಾಧಗಳಿಂದ ಮಕ್ಕಳ ತಡೆಗಟ್ಟುವಿಕೆ ಕಾಯ್ದೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.  ಇದನ್ನೂ ಓದಿ: ಅಂಡರ್‌ಗ್ರೌಂಡ್‌ನಲ್ಲಿ ಕಂತೆ ಕಂತೆ ನೋಟು ಬಚ್ಚಿಟ್ಟಿದ್ದ ಉದ್ಯಮಿ – ಇವನ ಆಸ್ತಿ ಬಗ್ಗೆ ಮಾಹಿತಿ ನೀಡಿದ್ರೆ 10,000 ಬಹುಮಾನ

  • ಖಾಸಗಿ ವಿಡಿಯೋ ಅಪ್ಲೋಡ್ ಮಾಡ್ತೀನಿ: ದಂಪತಿಗೆ ಬೆದರಿಸಿದ ನಿರ್ದೇಶಕ ಅರೆಸ್ಟ್

    ಖಾಸಗಿ ವಿಡಿಯೋ ಅಪ್ಲೋಡ್ ಮಾಡ್ತೀನಿ: ದಂಪತಿಗೆ ಬೆದರಿಸಿದ ನಿರ್ದೇಶಕ ಅರೆಸ್ಟ್

    ಬೆಂಗಳೂರು: ದಂಪತಿಯ ಖಾಸಗಿ ಫೋಟೋ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ನೀಡಿದ ನಿರ್ದೇಶಕ ಸೇರಿ ನಾಲ್ಕು ಮಂದಿಯನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

    ನಿರ್ದೇಶಕ ಸಂತೋಷ್, ಪ್ರಶಾಂತ್, ಸುರೇಶ್ ಹಾಗೂ ಪ್ರದೀಪ್ ಬಂಧಿತ ಆರೋಪಿಗಳು. ದಂಪತಿಯ ಖಾಸಗಿ ಕ್ಷಣಗಳ ವಿಡಿಯೋ ಅಪ್ಲೋಡ್ ಮಾಡುವುದಾಗಿ ಆರೋಪಿಗಳು ಬೆದರಿಕೆ ನೀಡಿ, 5 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದರು.

    ದೂರುದಾರ ದಂಪತಿ ಜೊತೆ ಆರೋಪಿ ಹೊರ ರಾಜ್ಯಕ್ಕೆ ಪ್ರವಾಸ ಹೋಗಿದ್ದರು. ಪ್ರವಾಸದ ವೇಳೆ ಪರಸ್ಪರ ಫೋಟೋ ತೆಗೆದುಕೊಂಡಿದ್ದರು. ಪ್ರವಾಸದ ಬಳಿಕ ಶೇರ್ ಇಟ್ ಮೂಲಕ ಫೋಟೋ ಶೇರ್ ಮಾಡಿಕೊಳ್ಳಲಾಗಿತ್ತು. ಇದೇ ವೇಳೆ ದಂಪತಿಯ ಖಾಸಗಿ ಫೋಟೋ, ವಿಡಿಯೋಗಳು ಸಹ ಶೇರ್ ಆಗಿತ್ತು.

    ಆರೋಪಿ ಸಂತೋಷ್ ಈ ಫೋಟೋಗಳನ್ನು ಇಟ್ಟುಕೊಂಡು ದಂಪತಿಗೆ ಬೆದರಿಕೆ ಹಾಕುತ್ತಿದ್ದನು. 5 ಕೋಟಿ ರೂ. ಹಣಕ್ಕೆ ಬೇಡಿಕೆ ಇಟ್ಟು, ಹಣ ಕೊಡದಿದ್ದರೆ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಸುತ್ತಿದ್ದನು.

    ಆರೋಪಿ ಸಂತೋಷ್ ರಾಜಾ ರಾಣಿ ಚಲನಚಿತ್ರದ ನಿರ್ದೇಶನ ಮಾಡಲು ಪ್ರಯತ್ನಿಸುತ್ತಿದ್ದು, ಚಿತ್ರವನ್ನು ನಿರ್ಮಾಣ ಮಾಡಲು ದಂಪತಿ ಹತ್ತಿರ ಹಣ ಕೇಳಿದ್ದರು. ಆದರೆ ದಂಪತಿ ಹಣ ಕೊಡಲು ನಿರಾಕರಿಸಿದ್ದರು. ಆಗ ಅವರ ಮೊಬೈಲಿನಿಂದ ಖಾಸಗಿ ದೃಶ್ಯ ಕಳವು ಮಾಡಿದ್ದನು. ಬಳಿಕ ಆರೋಪಿ ಹಣ ನೀಡುವಂತೆ ಒತ್ತಾಯ ಮಾಡಿ ಬೆದರಿಕೆ ಹಾಕಿದ್ದನು.

    ಸದ್ಯ ಸೈಬರ್ ಪೋಲೀಸರಿಗೆ ದೂರು ದಾಖಲಾಗಿತ್ತು. ಪ್ರಕರಣ ದಾಖಲಿಸಿದ ಪೊಲೀಸರು ನಾಲ್ಕು ಆರೋಪಿಗಳನ್ನು ಬಂಧಿಸಿದ್ದಾರೆ.

  • ಪ್ರೇಯಸಿ ಮಾತನಾಡದ್ದಕ್ಕೆ ಪ್ರಿಯಕರನಿಂದಲೇ ಆಕೆಯ ಖಾಸಗಿ ಫೋಟೋ ವೈರಲ್!

    ಪ್ರೇಯಸಿ ಮಾತನಾಡದ್ದಕ್ಕೆ ಪ್ರಿಯಕರನಿಂದಲೇ ಆಕೆಯ ಖಾಸಗಿ ಫೋಟೋ ವೈರಲ್!

    ಭುವನೇಶ್ವರ: ಯುವಕನೊಬ್ಬ ತನ್ನ ಪ್ರೇಯಸಿ ಮಾತನಾಡುತ್ತಿಲ್ಲವೆಂದು ಆಕೆಗೆ ಮದ್ಯ ಕುಡಿಸಿ ಆಕೆಯ ಮೇಲೆ ಅತ್ಯಾಚಾರವೆಸಗಿ ಅಶ್ಲೀಲ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಘಟನೆ ಒಡಿಶಾದ ರೈಮಾಲಾದಲ್ಲಿ ನಡೆದಿದೆ.

    ರುಶಿಕೇಶ್ ಬಿಸ್ವಾಲ್ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಾಕಿ ಬಂಧನಕ್ಕೆ ಒಳಗಾದ ಪ್ರಿಯಕರ. ಯುವತಿಗೆ ಮದ್ಯ ಕುಡಿಸಿ ಆಕೆಯ ಜೊತೆ ಅಶ್ಲೀಲ ಫೋಟೋ ತೆಗೆದುಕೊಂಡು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು, ಆ ಫೋಟೋಗಳು ಈಗ ಸಾಕಷ್ಟು ವೈರಲ್ ಆಗಿದೆ.

     

    ಸದ್ಯ ಪೊಲೀಸ್ ಆರೋಪಿಯನ್ನು ಬಂಧಿಸಿದ್ದಾರೆ. ರುಶಿಕೇಶ್ ಆಟೋ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದನು. ವಿಚಾರಣೆ ವೇಳೆ ತನ್ನ ಪ್ರೇಯಸಿ ಮೇಲೆ ಸೇಡು ತೀರಿಸಿಕೊಳ್ಳಲು ಈ ರೀತಿ ಮಾಡಿದ್ದೇನೆ ಎಂದು ಪೊಲೀಸರ ಹತ್ತಿರ ಒಪ್ಪಿಕೊಂಡಿದ್ದಾನೆ.

    ರಿಶಿಕೇಶ್ ಹಾಗೂ ಯುವತಿ ನಡುವೆ ಮಾರ್ಚ್ 31ರಿಂದ ವಾಗ್ವಾದ ನಡೆಯುತ್ತಿತ್ತು. ಹಾಗಾಗಿ ಆರೋಪಿ ಈ ರೀತಿ ಫೋಟೋ ತೆಗೆದು ವೈರಲ್ ಮಾಡಿದ್ದಾನೆ ಎಂದು ಹೇಳಲಾಗಿದೆ. ಆರೋಪಿ ಸಾಕಷ್ಟು ಸಿಮ್ ಗಳನ್ನು ಹೊಂದಿದ್ದ ವಿಚಾರ ತನಿಖೆ ವೇಳೆ ಬೆಳಕಿಗೆ ಬಂದಿದೆ.

    ನನ್ನ ಹಾಗೂ ಆಕೆಯ ಮಧ್ಯೆ ಸಂಬಂಧವಿತ್ತು. ಆಕೆ ನನ್ನ ಆಟೋವನ್ನು ಬಾಡಿಗೆಗೆಂದು ತೆಗೆದುಕೊಂಡು ಹೋಗುತ್ತಿದ್ದಳು ಹಾಗೂ ನನ್ನ ಹತ್ತಿರ ಹಣ ಕೂಡ ಪಡೆದಿದ್ದಳು. ಕೆಲವು ಕಾರಣಗಳಿಂದ ಆಕೆ ನನ್ನ ಜೊತೆ ಮಾತನಾಡುತ್ತಿರಲಿಲ್ಲ. ಹಾಗಾಗಿ ನಾನು ಆ ಫೋಟೋಗಳನ್ನು ಮಾರ್ಚ್ 31ರಂದೇ ವೈರಲ್ ಮಾಡಿದ್ದೆ ಎಂದು ಆರೋಪಿ ರಿಶಿಕೇಶ್ ತಿಳಿಸಿದ್ದಾನೆ.