Tag: ಖಾಸಗಿವಾಹಿನಿ

  • ಕುಟುಂಬದಲ್ಲಿ ಆದ ಗೊಂದಲ ಬಗೆಹರಿದಿದೆ: ಮೇಘಾ ಶೆಟ್ಟಿ

    ಕುಟುಂಬದಲ್ಲಿ ಆದ ಗೊಂದಲ ಬಗೆಹರಿದಿದೆ: ಮೇಘಾ ಶೆಟ್ಟಿ

    ಬೆಂಗಳೂರು: ಸ್ಯಾಂಡಲ್‍ವುಡ್‍ನ ಕಿರುತೆರೆ ನಟಿ ಮೇಘಾ ಶೆಟ್ಟಿ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಜೊತೆ ಜೊತೆಯಲಿ ಧಾರಾವಾಹಿಯಿಂದ ಹೊರ ಬಂದಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಈಗ ಮೇಘಾ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ.

    ನಾನು ಧಾರಾವಾಹಿಯಲ್ಲಿ ನಟಿಸುತ್ತಿಲ್ಲ ಎನ್ನುವ ಸುದ್ದಿ ನಾಲ್ಕೈದು ದಿನಗಳಿಂದ ಹರಿದಾಡಿತ್ತು. ಕುಟುಂಬ ಎಂದಾಗ ಗೊಂದಲ ಸಹಜವಾಗಿರುತ್ತದೆ. ಈಗ ಗೊಂದಲ ಬಗೆಹರಿದಿದೆ. ಜೊತೆ ಜೊತೆಯಲಿ ಧಾರಾವಾಹಿ ಮುಗಿಯುವ ತನಕ ಅನು ಸಿರಿಮನೆ ಪಾತ್ರವನ್ನು ನಾನೇ ಮಾಡುತ್ತೇನೆ. ಈ ಗೊಂದಲದಿಂದ ವೀಕ್ಷಕರಲ್ಲಿ ಆತಂಕ ಉಂಟಾಗಿತ್ತು. ಈ ಬಗ್ಗೆ ಎಲ್ಲ ವೀಕ್ಷಕರಲ್ಲೂ ಕ್ಷಮೆ ಕೇಳುತ್ತಿದ್ದೇನೆ. ಇನ್ನು ಮುಂದೆ ಈ ರೀತಿ ಆಗಲ್ಲ ಎಂದು ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದಾರೆ. ಇದನ್ನೂ ಓದಿ:  ಮುಂಬೈನಲ್ಲಿ ಮನೆ ಕಟ್ಟಿಸಿದ ಸನ್ನಿ ಲಿಯೋನ್

     

    View this post on Instagram

     

    A post shared by Megha Shetty (@meghashetty_officiall)

    ಮುಂದೆ ಈ ರೀತಿ ಸುದ್ದಿ ಕೇಳಿ ಬಂದರೆ ಅದಕ್ಕೆ ಗಮನಕೊಡಬೇಡಿ. ಮುಂದೆಯೂ ಇದೇ ರೀತಿ ಬೆಂಬಲಕೊಡಿ. ಜೊತೆ ಜೊತೆಯಲಿ ಧಾರಾವಾಹಿಯಿಂದ ನಾನು ಸಾಕಷ್ಟು ಪಡೆದುಕೊಂಡಿದ್ದೇನೆ. ಅದಕ್ಕೆ ನಾನು ಸದಾ ಚಿರಋಣಿ. ನಿಮ್ಮ ಪ್ರೀತಿ-ವಿಶ್ವಾಸ ಹೀಗೆ ಇರಲಿ ಎಂದು ಅಭಿಮಾನಿಗಳಲ್ಲಿ ಕೋರಿದ್ದಾರೆ ಅವರು.

     

    View this post on Instagram

     

    A post shared by Megha Shetty (@meghashetty_officiall)

    ಅನಿರುದ್ಧ ಹಾಗೂ ಮೇಘಾ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಭಿನ್ನ ಕಥಾಹಂದರದ ಮೂಲಕ ಈ ಧಾರಾವಾಹಿ ವೀಕ್ಷಕರನ್ನು ಸೆಳೆದುಕೊಂಡಿದೆ. ಮೇಘಾ ಶೆಟ್ಟಿ ಧಾರಾವಾಹಿಯಿಂದಹೊರ ನಡೆದಿದ್ದಾರೆ ಹಾಗೂ ಅವರು ಈ ಧಾರಾವಾಹಿಯಲ್ಲಿ ಮುಂದುವರಿಯುವುದಿಲ್ಲ ಎನ್ನುವ ಮಾತು ಕೇಳಿ ಬಂದಿತ್ತು.  ಈಗ ಮೇಘಾ ಸ್ಟಷ್ಟನೆ ನೀಡಿ ಈ ಮೂಲಕ ಧಾರಾವಾಹಿಯಲ್ಲಿ ಮುಂದುವರಿಯುತ್ತಿದ್ದೇನೆ ಎನ್ನುವ ಭರವಸೆಯನ್ನು ಅಭಿಮಾನಿಗಳಿಗೆ ನೀಡಿದ್ದಾರೆ.

  • ಬಿಗ್‍ಬಾಸ್ 8ಕ್ಕೆ ಕ್ಷಣಗಣನೆ- ಜೋಯಿಸರ ಅವತಾರದಲ್ಲಿ ಕಿಚ್ಚನ ಫೋಟೋ ವೈರಲ್

    ಬಿಗ್‍ಬಾಸ್ 8ಕ್ಕೆ ಕ್ಷಣಗಣನೆ- ಜೋಯಿಸರ ಅವತಾರದಲ್ಲಿ ಕಿಚ್ಚನ ಫೋಟೋ ವೈರಲ್

    ಬೆಂಗಳೂರು: ಕನ್ನಡದ ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗುವ ಬಿಗ್‍ಬಾಸ್ ರಿಯಾಲಿಟಿ ಶೋಗಾಗಿ ಕಾಯುತ್ತಿರುವ ಅಭಿಮಾನಿಗಳಿಗೆ ಕಿಚ್ಚ ಸುದೀಪ್ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳುವ ಮೂಲಕವಾಗಿ ಇನ್ನಷ್ಟು ಮಜಾ ನೀಡಲು ಬರುತ್ತಿದ್ದಾರೆ.

    ಬಿಗ್‍ಬಾಸ್ ಕಾರ್ಯಕ್ರಮ ಪ್ರಸಾರವಾಗುವ ಖಾಸಗಿ ವಾಹಿನಿಯವರು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಕಿಚ್ಚ ಅವರ ಹೊಸ ಫೋಟೋವನ್ನು ಹಂಚಿಕೊಂಡು ಇನ್ನೊಂದು ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಸುದೀಪ್ ಜೋಯಿಸರ ಅವರತಾರದಲ್ಲಿರುವ ಫೋಟೋವನ್ನು ಹಂಚಿಕೊಂಡು ಲಾಕ್ ಡೌನ್ 8.0ಗೆ ಕಿಚ್ಚ ಜೋಯಿಸರು ಇಟ್ಟಿರೋ ಮುಹೂರ್ತ ಯಾವುದು? ಗೆಸ್ ಮಾಡಿ, ಕಮೆಂಟ್‍ನಲ್ಲಿ ಹೇಳಿ ಎಂದು ಬರೆದುಕೊಂಡು ಬಿಗ್ ಬಾಸ್ ತಂಡದಿಂದ ಹೊಸ ಮಾಹಿತಿಯನ್ನು ಹೊರಹಾಕಿದ್ದಾರೆ.

    ಪ್ರತಿ ಸೀಸನ್‍ನಲ್ಲಿಯೂ ವಿಭಿನ್ನವಾಗಿ ಕಾಣಿಸಿಕೊಳ್ಳುವ ಸುದೀಪ್ ಅವರು ಇದೀಗ ಜೋಯಿಸರ ಅವತಾರದಲ್ಲಿ ಕಾಣಿಸಿಕೊಳ್ಳುವ ಮೂಲಕವಾಗಿ ಇನ್ನಷ್ಟು ಕ್ಯೂರಾಸಿಟಿ ಬಿಗ್ ಬಾಸ್ ಕಾರ್ಯಕ್ರಮದ ಮೇಲಿದೆ.

    ಈಗಾಗಲೇ ಸಾಕಷ್ಟು ಅಭಿಮಾನಿಗಳು ಬಿಗ್‍ಬಾಸ್ ಸೀಸನ್ 8 ಗಾಗಿ ಕಾಯುತ್ತಿದ್ದಾರೆ. ಅದಕ್ಕೂ ಮುನ್ನ ಬಿಗ್ ಬಾಸ್ ತಂಡ ದಿನಕ್ಕೊಂದು ಮಾಹಿತಿಯನ್ನು ನೀಡುತ್ತಾ ಎಲ್ಲರ ಕೌತುಕವನ್ನು ಇನ್ನಷ್ಟು ಹೆಚ್ಚು ಮಾಡುತ್ತಿದೆ. ಸೀಸನ್ 8 ಕ್ಕೆ ಯಾವೆಲ್ಲ ಸೆಲೆಬ್ರಿಟಿಗಳು ಹೋಗಬಹುದು ಎಂಬ ಕುರಿತಾಗಿ ನಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ಕೆಲವು ಹೆಸರುಗಳನ್ನು ಹೇಳುತ್ತಿದ್ದಾರೆ.

    ಕೆಲ ದಿನಗಳ ಹಿಂದೆ ಪ್ರೋಮೋ ಶೂಟ್‍ನಲ್ಲಿ ಭಾಗವಹಿಸಿರುವ ಫೋಟೋವನ್ನು  ಟ್ವಿಟ್ಟರ್‌ನಲ್ಲಿ ಹಂಚಿಕೊಂಡು ಬಿಗ್ ಬಾಸ್ ಸೀಸನ್ 8ರ ಪ್ರೋಮೋ ನಡೆಯುತ್ತಿದೆ. ಸದ್ಯದಲ್ಲೇ ಕಾರ್ಯಕ್ರಮ ಆರಂಭವಾಗಲಿದೆ ಎಂದು ಸುದೀಪ್ ಬರೆದುಕೊಂಡಿದ್ದರು. ನಂತರ ಕೆಲವು ದಿನಗಳ ನಂತರ ಪ್ರೋಮೋ ಖಾಸಗಿ ವಾಹಿನಿ ಹೊರಬಿಟ್ಟಿದ್ದು, ಕಿಚ್ಚ ಅದನ್ನು ರೀ ಟ್ವೀಟ್ ಮಾಡಿ ಬಿಗ್‍ಬಾಸ್ ಕನ್ನಡ ಸೀಸನ್-8 ಬರ್ತಿದೆ. ನೀವು ಮುಂದಿನ 100 ದಿನದ ಮನರಂಜನೆಗಾಗಿ ತಯಾರಾಗಿ ಎಂದು ಬರೆದುಕೊಂಡಿದ್ದರು. ಈ ಮೂಲಕವಾಗಿ ಅಭಿಮಾನಿಗಳಿಗೆ ಸಿಹಿಸುದ್ದಿಯನ್ನು ಕೊಟ್ಟು ನೀರಿಕ್ಷೆಯ ಮಟ್ಟವನ್ನು ಇನ್ನಷ್ಟು ಹೆಚ್ಚಿಸಿದ್ದರು.