Tag: ಖಾಲಿ

  • ನೀರು, ಊಟ, ನಿದ್ದೆ ಇಲ್ಲದೆ ಪರದಾಡಿದ ಸ್ಪರ್ಧಿಗಳು!

    ನೀರು, ಊಟ, ನಿದ್ದೆ ಇಲ್ಲದೆ ಪರದಾಡಿದ ಸ್ಪರ್ಧಿಗಳು!

    ಪ್ರತಿನಿತ್ಯದಂತೆ ನಿನ್ನೆ ಕೂಡ ಬೆಳಗ್ಗೆ ಬಿಗ್‍ಬಾಸ್ ಮನೆಯಲ್ಲಿ ಸಾಂಗ್ ಪ್ಲೇ ಆಗುತ್ತಿದ್ದಂತೆ ಮನೆಮಂದಿ ಏಳುತ್ತಾರೆ, ಎದ್ದ ಕೂಡಲೇ ರೂಮಿನಿಂದ ಹೊರಬಂದ ಮನೆ ಮನೆಮಂದಿಗೆ ಬಿಗ್‍ಬಾಸ್ ದೊಡ್ಡ ಶಾಕ್ ಅನ್ನೇ ನೀಡಿದ್ದಾರೆ.

    ಹೌದು, ನಿನ್ನೆ ಬಿಗ್‍ಬಾಸ್ ಕಾಣದಂತೆ ಮಾಯಾವಾದನೂ ಸಾಂಗ್ ಹಾಕಿ ಮನೆಮಂದಿಯನ್ನು ಎಚ್ಚರಗೊಳಿಸಿದರು. ಎದ್ದ ಕೂಡಲೇ ಲಿವಿಂಗ್ ಏರಿಯಾಗೆ ಬಂದ ಎಲ್ಲಾ ಸ್ಫರ್ದಿಗಳಿಗೆ ಮನೆಯಲ್ಲಿದ್ದ ವಸ್ತುಗಳೆಲ್ಲಾ ನಾಪತ್ತೆಯಾಗಿರುವುದನ್ನು ಕಂಡು ಅಚ್ಚರಿಗೊಳ್ಳುತ್ತಾರೆ.

    ನಂತರ ಕಿಚನ್ ರೂಮ್‍ಗೆ ಹೋಗಿ ನೋಡಿದಾಗ ಅಲ್ಲಿದ್ದ ಅಡುಗೆ ಸಾಮಗ್ರಿಗಳು, ಅಡುಗೆ ಪದಾರ್ಥಗಳು ಎಲ್ಲವೂ ಮಾಯವಾಗಿತ್ತು. ಬಳಿಕ ಅಲ್ಲಿಂದ ಗಾರ್ಡನ್ ಏರಿಯಾಗೆ ಹೋಗಿ ನೋಡಿದಾಗ ಜಿಮ್ ಐಟಮ್ಸ್ ಕೂಡ ಇರಲಿಲ್ಲ. ಇದಾದ ನಂತರ ಬಾತ್‍ರೂಮ್ ಏರಿಯಾಗೆ ಹೋಗಿ ನೋಡಿದಾಗ ಬ್ರಶ್ ಸೋಪ್ ಎಲ್ಲವು ನಾಪತ್ತೆಯಾಗಿತ್ತು. ಅಷ್ಟೇ ಅಲ್ಲದೇ ಮನೆಯಲ್ಲಿ ನೀರು ಕೂಡ ನಿಲ್ಲಿಸಿದರು.

    ಈ ವೇಳೆ ಶುಭಾ ಪೂಂಜಾ ಬಿಗ್‍ಬಾಸ್ ಬ್ರಶ್ ಆದರೂ ಕೊಡಿ ಬಿಗ್‍ಬಾಸ್ ಎಂದು ಕೇಳಿಕೊಳ್ಳುತ್ತಾರೆ. ಈ ವೇಳೆ ದಿವ್ಯಾ ಉರುಡುಗ, ಮಂಜು ಸ್ಟಾರ್ಟ್ ಆಯ್ತು ಇವಳದ್ದು ಅಂತಾರೆ. ಇದಕ್ಕೆ ಶುಭಾ ನಾನು ನನ್ನ ಪಾಡಿಗೆ ನಾನು ಕೇಳುತ್ತಿದ್ದೇನೆ. ನಿಮಗೆಲ್ಲಾ ಬೇಕಾದರೆ ಶುಭಾ ಕೇಳು ಎಂದು ಹೇಳುತ್ತೀರಾ, ಆಗ ಮಾತ್ರ ನಾನು ನಿಮಗೆ ಬೇಕು ಎನ್ನುತ್ತಾರೆ. ಆಗ ದಿವ್ಯಾ ಉರುಡುಗ ಸರಿ ಈಗ ಎಲ್ಲರಿಗೂ ಕೇಳು ಎಂದಾಗ, ಶುಭಾ, ಬಿಗ್‍ಬಾಸ್ ಎಲ್ಲಾರಿಗೂ ಬೇಡ, ನನ್ನ ಬ್ರಶ್ ಮಾತ್ರ ಕಳುಹಿಸಿಕೊಡಿ ಎಂದು ಹೇಳುತ್ತಾರೆ.

    ಒಟ್ಟಾರೆ ಮನೆಯೆಲ್ಲಾ ಖಾಲಿ ಖಾಲಿಯಾಗಿರುವುದನ್ನು ನೋಡಿ ಮನೆ ಮಂದಿ ಸದ್ಯ ನೀರು, ಊಟ, ನಿದ್ದೆ ಇಲ್ಲದೆ  ಆತಂಕ್ಕೊಳಗಾಗಿದ್ದಾರೆ.

  • ವಿಜಯೇಂದ್ರನ ಮಾತು ಸತ್ಯಕ್ಕೆ ದೂರವಾದದ್ದು – ಬಿ.ವೈ.ರಾಘವೇಂದ್ರ

    ವಿಜಯೇಂದ್ರನ ಮಾತು ಸತ್ಯಕ್ಕೆ ದೂರವಾದದ್ದು – ಬಿ.ವೈ.ರಾಘವೇಂದ್ರ

    ಶಿವಮೊಗ್ಗ: ಸಹೋದರ ಮತ್ತು ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ ವಿಜಯೇಂದ್ರ ಹೇಳಿದ ಮಾತು ಸತ್ಯಕ್ಕೆ ದೂರವಾದದ್ದು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ರಾಜ್ಯದ ಖಜಾನೆ ಖಾಲಿಯಾಗಿದೆ ಎಂಬ ವಿಜಯೇಂದ್ರ ಅವರ ಹೇಳಿಕೆಯನ್ನು ಅಲ್ಲಗಳೆದರು. ನಾಲ್ಕು ಗೋಡೆ ನಡುವೆ ನಡೆಯಬೇಕಾದ ಮಾತುಗಳು ಸಾರ್ವಜನಿಕವಾಗಿ ಆಡಬಾರದು. ರಾಜ್ಯದ ಖಜಾನೆ ಖಾಲಿಯಾಗುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದ್ದಾರೆ.

    ಇದೇ ವೇಳೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಖಜಾನೆ ಖಾಲಿ ಎಂಬರ್ಥದಲ್ಲಿ ಹೇಳಿಲ್ಲ. ಅವರ ಹೇಳಿಕೆಯನ್ನು ಅಪಾರ್ಥ ಮಾಡಿಕೊಳ್ಳಬಾರದು. ದೇವರ ದಯೆಯಿಂದ ನಮ್ಮ ರಾಜ್ಯ ಸರ್ಕಾರದಲ್ಲಿ ಆ ಪರಿಸ್ಥಿತಿ ಇಲ್ಲ. ಯಾವುದೇ ಕ್ಷೇತ್ರಕ್ಕಾಗಲೀ, ಅದರ ಮಾನ್ಯತೆ ಮನಗಂಡು ಹಣ ಬಿಡುಗಡೆ ಮಾಡಬೇಕಾಗುತ್ತದೆ. ಅದರ ಬಗ್ಗೆ ಮುಖ್ಯಮಂತ್ರಿಗಳು ಹೇಳಿಕೆ ನೀಡಿದ್ದಾರಷ್ಟೆ ಎಂದು ತಂದೆಯ ಮಾತುಗಳನ್ನು ಸಮರ್ಥಿಸಿಕೊಂಡರು.

    ಕೇಂದ್ರ ಸರ್ಕಾರ ಯಾವುದೇ ವರದಿಯನ್ನು ತಿರಸ್ಕೃತ ಮಾಡಿಲ್ಲ. ಇದೊಂದು ತಪ್ಪು ತಿಳುವಳಿಕೆ. ಶುಕ್ರವಾರ ಮಧ್ಯಂತರ ಪರಿಹಾರವಾಗಿ 1200 ಕೋಟಿ ರೂ. ಕೇಂದ್ರ, ನೆರೆ ಪರಿಹಾರ ಬಿಡುಗಡೆ ಮಾಡಿದೆ. ಸರ್ವಪಕ್ಷ ನಿಯೋಗ ಕೊಂಡೊಯ್ಯುವ ಪರಿಸ್ಥಿತಿ ಈಗಿಲ್ಲ. ಈ ಹಿಂದೆ ಮನಮೋಹನ್ ಸಿಂಗ್ ಕಾಲದಲ್ಲಿ ಆ ಪರಿಸ್ಥಿತಿ ಇತ್ತು. ಆದರೆ ಈಗ ರೈತರ ಮನಸ್ಥಿತಿ ಅರ್ಥ ಮಾಡಿಕೊಳ್ಳುವ ಮುಖ್ಯಮಂತ್ರಿ ಮತ್ತು ಪ್ರಧಾನಮಂತ್ರಿಗಳು ಇದ್ದಾರೆ ಎಂದು ಹೇಳಿದರು.

  • ಹುದ್ದೆ ಖಾಲಿಯಿದ್ರೂ ಭರ್ತಿಗೆ ಮುಂದಾಗ್ತಿಲ್ಲ ಸರ್ಕಾರ! – ಎಷ್ಟು ಹುದ್ದೆ ಖಾಲಿಯಿದೆ ಗೊತ್ತೆ?

    ಹುದ್ದೆ ಖಾಲಿಯಿದ್ರೂ ಭರ್ತಿಗೆ ಮುಂದಾಗ್ತಿಲ್ಲ ಸರ್ಕಾರ! – ಎಷ್ಟು ಹುದ್ದೆ ಖಾಲಿಯಿದೆ ಗೊತ್ತೆ?

    ಬೆಂಗಳೂರು: ಸರ್ಕಾರಿ ಹುದ್ದೆಯ ಕನಸು ಕಾಣುತ್ತಿರೋರಿಗೆ ಹೊಸ ವರ್ಷದಲ್ಲಿ ಮೈತ್ರಿ ಸರ್ಕಾರದಿಂದ ಶಾಕಿಂಗ್ ಸುದ್ದಿ ಕಾದಿದೆ. ಯಾಕಂದ್ರೆ ದೋಸ್ತಿ ಸರ್ಕಾರದಲ್ಲಿ ಅಗತ್ಯ ನೌಕರರ ಕೊರತೆಯಿದ್ರೂ ಹುದ್ದೆಗಳ ಭರ್ತಿಗೆ ಸರ್ಕಾರ ಮುಂದಾಗ್ತಿಲ್ಲ.

    ಕುಮಾರಸ್ವಾಮಿ ಸರ್ಕಾರದ ವೆಚ್ಚ ಕಡಿತ ಪಾಲಿಸಿಯಿಂದಾಗಿ ಸರ್ಕಾರಿ ಹುದ್ದೆಗಳ ಭರ್ತಿಗೆ ಅಡ್ಡಿಯಾಗಿದೆ. ಅಲ್ಲದೆ ಸರ್ಕಾರದಲ್ಲಿ 1/3ರಷ್ಟು ನೌಕರರ ಕೊರತೆಯಿದ್ರೂ ಕೇವಲ ಹೈದರಾಬಾದ್ ಕರ್ನಾಟಕ ಉದ್ಯೋಗ ಮೀಸಲು 371(ಜೆ)ರಡಿ ಸ್ಥಳೀಯ ವೃಂದದ ಖಾಲಿ ಹುದ್ದೆಗಳ ಭರ್ತಿಗಷ್ಟೇ ಅನುಮತಿ ನೀಡಿದೆ.

    ಒಟ್ಟು ಸರ್ಕಾರಿ ಹುದ್ದೆಗಳ ಪ್ರಮಾಣ 7,79,439 ಆಗಿದ್ದು ಈಗ ಒಟ್ಟು 5,09,867 ಸರ್ಕಾರಿ ನೌಕರರು ಉದ್ಯೋಗದಲ್ಲಿದ್ದಾರೆ. ಆದ್ರೆ ಒಟ್ಟು 2,69,572 ಹುದ್ದೆಗಳು ಇನ್ನೂ ಖಾಲಿಯಿವೆ. ಶಿಕ್ಷಣ ಇಲಾಖೆಯಲ್ಲಿ 47,779, ಆರೋಗ್ಯ ಇಲಾಖೆಯಲ್ಲಿ 32,840 ಹಾಗೂ ಒಳಾಡಳಿತ ಇಲಾಖೆಯಲ್ಲಿ 32,366 ಹುದ್ದೆಗಳು ಖಾಲಿಯಿವೆ ಎಂಬುದಾಗಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಸಿಕ್ಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಜ್ಯೋತಿಷ್ಯಕ್ಕೆ ಹೆದರಿ ಅರ್ಧ ದಿನದಲ್ಲಿಯೇ ಚಿಕ್ಕಮಗಳೂರಿನ ಊರು ಖಾಲಿ ಖಾಲಿ!

    ಜ್ಯೋತಿಷ್ಯಕ್ಕೆ ಹೆದರಿ ಅರ್ಧ ದಿನದಲ್ಲಿಯೇ ಚಿಕ್ಕಮಗಳೂರಿನ ಊರು ಖಾಲಿ ಖಾಲಿ!

    ಚಿಕ್ಕಮಗಳೂರು: ಜ್ಯೋತಿಷ್ಯಕ್ಕೆ ಹೆದರಿ 15 ವರ್ಷಗಳಿಂದ ವಾಸವಿದ್ದ ಊರನ್ನು ಬಿಟ್ಟು ಬೇರೊಂದು ಕಡೆಗೆ ನೆಲೆ ಅರಸಿ ಹೊರಟು ಹೋದ ಘಟನೆ ಜಿಲ್ಲೆಯ ಎನ್.ಆರ್.ಪುರದ ಬಾಳೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ.

    ಶಿಗುವಾನಿ ಗ್ರಾಮಸ್ಥರೇ ಮೂಢನಂಬಿಕೆಗೆ ಒಳಗಾದವರು. ಈ ಗ್ರಾಮದಲ್ಲಿ 50ಕ್ಕೂ ಹೆಚ್ಚು ಹಾವುಗೊಲ್ಲರು, ಹಕ್ಕಿಪಿಕ್ಕಿ ಕುಟುಂಬಗಳು ವಾಸವಾಗಿದ್ದವು. ಆದರೆ ಕಳೆದ 8 ದಿನಗಳಿಂದ 25 ಪುರುಷರು, ನಾಲ್ವರು ಮಹಿಳೆಯರು ಮೃತಪಟ್ಟಿದ್ದರು.

    ನಿರಂತರ ಸಾವಿನ ಸಂಗತಿಗೆ ಹೆದರಿದ ಗ್ರಾಮಸ್ಥರು ಜ್ಯೋತಿಷಿಗಳ ಬಳಿ ಸಮಸ್ಯೆಗೆ ಪರಿಹಾರ ಕೇಳಿದ್ದರು. ಆಗ ಅವರು ಅಲ್ಲಿ ನಾಗ ದೋಷವಿದೆ, ನಾಗಪ್ಪನ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕು ಎಂದು ತಿಳಿಸಿದ್ದರಂತೆ. ಅದರಂತೆ ನಾಗ ದೋಷ ನಿವಾರಣೆಗೆ ಪೂಜೆ ಮಾಡಿ, ನಾಗ ಪ್ರತಿಷ್ಠಾಪನೆ ಮಾಡಲಾಗಿತ್ತು. ಇದಾದ ನಂತರವೂ ಕೆಲವರು ಸಾವನ್ನಪ್ಪಿದ್ದು, ಗ್ರಾಮಸ್ಥರಲ್ಲಿ ಮತ್ತಷ್ಟು ಭಯಕ್ಕೆ ಕಾರಣವಾಯಿತು.

    ಕೊನೆಯ ಪರಿಹಾರ ಎಂದರೇ ನೀವು ಗ್ರಾಮ ಬಿಟ್ಟು ಹೋಗುವುದೇ ಒಳಿತು ಎಂದು ಜ್ಯೋತಿಷಿ ಹೇಳಿದ್ದರಂತೆ. ಹೀಗಾಗಿ 50ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿದ್ದ ಗ್ರಾಮವು ಗುರುವಾರ ಸಂಜೆಯೊಳಗಾಗಿ ಖಾಲಿ ಖಾಲಿ ಆಗಿದೆ. ಗ್ರಾಮಸ್ಥರು ತಮ್ಮ ಬಟ್ಟೆ, ಪಾತ್ರೆ ಸೇರಿದಂತೆ ಬೆಲೆಪಾಳುವ ವಸ್ತುಗಳನ್ನು ಮಾತ್ರ ತೆಗೆದುಕೊಂಡು ಹೋಗಿದ್ದು, ಉಳಿದಂತೆ ಗುಡಿಸಲು, ಸಾಕು ನಾಯಿ, ಕೋಳಿ ಎಲ್ಲವನ್ನೂ ಅಲ್ಲಿಯೇ ಬಿಟ್ಟು ಹೋಗಿದ್ದಾರೆ.

    ಹಾವು ಹಿಡಿಯುವುದು, ಹಕ್ಕಿಪುಕ್ಕ ಸೇರಿಸಿ ಮಾರುವುದು ಶಿಗುವಾನಿ ಗ್ರಾಮಸ್ಥರ ಮೂಲ ವೃತ್ತಿಯಾಗಿತ್ತು. ಆದರೆ ಕಳೆದ ಕೆಲವು ದಿನಗಳಿಂದ ಗಾರೆ ಕೆಲಸ, ಕಾಫಿ ತೋಟ, ಅಡಿಕೆ ತೋಟದಲ್ಲಿ ಕೆಲಸ ಮಾಡುತ್ತಿದ್ದರು. ನಿರಂತರ ಸಾವಿನ ಸಂಗತಿಯಿಂದ ಬೆಚ್ಚಿಬಿದ್ದು ಗ್ರಾಮವನ್ನು ಬಿಟ್ಟು ಹೋಗುವ ನಿರ್ಧಾರ ಕೈಗೊಂಡಿದ್ದರು. ಸದ್ಯ ಅವರು ಕುದುರೆಮುಖ, ಕುದ್ರೆಗುಂಡಿ ಮಾರ್ಗವಾಗಿ ತೀರ್ಥಹಳ್ಳಿ ತಲುಪಿದ್ದಾರೆ ಎನ್ನಲಾಗುತ್ತಿದೆ.