Tag: ಖಾರದ ಪುಡಿ

  • ಕುದಿಯೋ ನೀರಿಗೆ ಖಾರದ ಪುಡಿ ಬೆರೆಸಿ ಪತಿ ಮೇಲೆ ಎರಚಿ ಬೆದರಿಕೆ ಹಾಕಿದ್ಳು!

    ಕುದಿಯೋ ನೀರಿಗೆ ಖಾರದ ಪುಡಿ ಬೆರೆಸಿ ಪತಿ ಮೇಲೆ ಎರಚಿ ಬೆದರಿಕೆ ಹಾಕಿದ್ಳು!

    ಉಡುಪಿ: ಪತ್ನಿಯೊಬ್ಬಳು ಕುದಿಯುತ್ತಿರುವ ನೀರಿಗೆ ಖಾರದ ಪುಡಿ ಬೆರೆಸಿ ಪತಿ ಮೇಲೆ ಎರಚಿದ ಪ್ರಸಂಗವೊಂದು ಉಡುಪಿಯಲ್ಲಿ (Udupi) ನಡೆದಿದೆ.

    ಈ ಘಟನೆ ಕಟಪಾಡಿಯ ಶಂಕರಪುರ (Shankarapura Katapadi) ಎಂಬಲ್ಲಿ ನಡೆದಿದೆ. ಪತಿ ಮೊಹಮ್ಮದ್ ಅಶ್ರಫ್ ಹಾಗೂ ಪತ್ನಿ ಅಫ್ರೀನ್ ನಡುವೆ ಹಲವು ಸಮಯದಿಂದ ವೈಮನಸ್ಸು ಎದ್ದಿತ್ತು. ಗಂಡನ ಅಕ್ರಮ ಸಂಬಂಧದ ಬಗ್ಗೆ ಹೆಂಡತಿಗೆ ಅನುಮಾನ ಇತ್ತು.

    ಅಕ್ಟೋಬರ್ ತಿಂಗಳಲ್ಲಿ ಅಫ್ರೀನ್ ಹಾಗೂ ಮೊಹಮ್ಮದ್ ಮದುವೆಯಾಗಿತ್ತು. ಮದುವೆಯಾದ ಬಳಿಕ ಅಫ್ರೀನ್ ಮನೆಯಲ್ಲೇ ಗಂಡ-ಹೆಂಡತಿ ಇದ್ದರು. ಅಫ್ರೀನ್‍ಳಿಗೆ ಮೊಹಮ್ಮದ್ ಆಸೀಫ್ ಬೇರೆ ಹುಡುಗಿಯೊಂದಿಗೆ ಸಂಬಂಧ ಹೊಂದಿರುವುದಾಗಿ ಅನುಮಾನ ವ್ಯಕ್ತವಾಗಿತ್ತು. ಇದನ್ನೂ ಓದಿ: ಮಾತುಬಾರದ ತಾಯಿ ನಾಪತ್ತೆ – ಸುಳಿವುಕೊಟ್ಟವರಿಗೆ 50 ಸಾವಿರ ರೂ. ಘೋಷಿಸಿದ ಮಗಳು

    ಇದೇ ವಿಚಾರಕ್ಕೆ ಮನೆಯಲ್ಲಿ ಇಬ್ಬರ ನಡುವೆ ಪದೇ ಪದೇ ಜಗಳ ನಡೆಯುತ್ತಿತ್ತು. ಜಗಳ ನಡೆದು ಪತಿ ಬಾತ್ ರೂಮ್‍ನಿಂದ ಹೊರ ಬರುವಾಗ ಮೆಣಸಿನ ಹುಡಿ ಮಿಶ್ರಿತ ಕುದಿಯುವ ನೀರನ್ನು ಪತ್ನಿ ಎರಚಿದ್ದಾಳೆ. ಬಳಿಕ ಗಾಯಗೊಂಡ ಪತಿಯನ್ನು ರೂಮಿನಲ್ಲಿಯೇ ಕೂಡಿ ಹಾಕಿದಾಳೆ. ಅಲ್ಲದೆ ಬೇರೆಯವರಿಗೆ ತಿಳಿಸಿದ್ರೆ ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿದ್ದಾಳೆ.

    ಈ ಬಗ್ಗೆ ಪತಿ ಮೊಹಮ್ಮದ್ ಆಸೀಫ್ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೊಲ್ಲಲು ಬಂದವ್ರ ಕಣ್ಣಿಗೆ ಖಾರದ ಪುಡಿ ಎರಚಿ ಪತಿಯನ್ನು ಬಚಾವ್ ಮಾಡಿದ್ಲು!

    ಕೊಲ್ಲಲು ಬಂದವ್ರ ಕಣ್ಣಿಗೆ ಖಾರದ ಪುಡಿ ಎರಚಿ ಪತಿಯನ್ನು ಬಚಾವ್ ಮಾಡಿದ್ಲು!

    ಹೈದರಾಬಾದ್: ಪತಿಯನ್ನು ಹತ್ಯೆ ಮಾಡಲು ಬಂದ ಕಿಡಿಗೇಡಿಗಳ ಕಣ್ಣಿಗೆ ಖಾರದ ಪುಡಿ ಎರಚಿದ ಮಹಿಳೆ, ಪತಿಯನ್ನು ಪ್ರಾಣಾಪಾಯದಿಂದ ಬಚಾವ್ ಮಾಡಿಕೊಂಡಿರುವ ಘಟನೆ ತೆಲಂಗಾಣದ ವಾರಂಗಲ್ ಜಿಲ್ಲೆಯಲ್ಲಿ ನಡೆದಿದೆ.

    ನಡೆದಿದ್ದೇನು?: ದಿ ವಾರಂಗಲ್ ಜಿಲ್ಲಾ ಲಾರಿ ಅಸೋಸಿಯೇಶನ್ ಅಧ್ಯಕ್ಷ ವೇಮುಲಾ ಭೂಪಾಲ್ ಅವರ ಮನೆಗೆ ಬುಧವಾರ ಮಧ್ಯರಾತ್ರಿ ನಾಲ್ಕು ಮಂದಿ ದುಷ್ಕರ್ಮಿಗಳು ಬಂದಿದ್ದಾರೆ. ಆಟೋದಲ್ಲಿ ಮೂವರು ವೇಮುಲಾ ಮನೆಗೆ ಒಳಗೆ ನುಗ್ಗಿ ಚಾಕುವಿನಿಂದ ಹಲ್ಲೆ ನಡೆಸಿ ಹತ್ಯೆ ಮಾಡಲು ಯತ್ನಿಸಿದ್ದಾರೆ. ಕೂಡಲೇ ಎಚ್ಚೆತ್ತ ವೇಮುಲಾ ಪತ್ನಿ ಕಲ್ಯಾಣಿ ಅಡುಗೆ ಮನೆಗೆ ಓಡಿ ಹೋಗಿ ಖಾರದ ಪುಡಿ ತಂದು ದುಷ್ಕರ್ಮಿಗಳ ಕಣ್ಣಿಗೆ ಎರಚಿದ್ದಾಳೆ. ಇದನ್ನೂ ಓದಿ: ಕೋವಿನ್ ಖಾಸಗಿ ಮಾಹಿತಿ ಸೋರಿಕೆ ಆಗಿಲ್ಲ: ಕೇಂದ್ರ

    ನಮ್ಮನ್ನು ಕಾಪಾಡಿ ಎಂದು ಜೋರಾಗಿ ಕೂಗಿದ್ದಾಳೆ. ಈಕೆಯ ಚೀರಾಟ ಕೇಳಿ ನೆರೆ ಹೊರೆಯವರು ಕೂಡಲೇ ಬಂದಿದ್ದಾರೆ. ಆರೋಪಿಗಳಲ್ಲಿ ಒಬ್ಬನಾದ ರಂಜಿತ್ ಕಣ್ಣಿಗೆ ಹೆಚ್ಚು ಖಾರದ ಪುಡಿ ಬಿದ್ದ ಪರಿಣಾಮ ಆತ ಅಲ್ಲಿಂದ ಪರಾರಿಯಾಗಲು ಸಾಧ್ಯವಾಗದೆ ಸಿಕ್ಕಿಬಿದ್ದಿದಾನೆ. ಉಳಿದ ಮೂವರು ಆರೋಪಿಗಳು ಆಟೋದಲ್ಲಿ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಆರೋಪಿ ರಂಜಿತ್‍ನನ್ನು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಜಾತಿ, ಧರ್ಮ, ದೇಶ ಗಡಿ ದಾಟಿದ ಪ್ರೇಮ ಕಥೆ

  • ಕಣ್ಣಿಗೆ ಖಾರದ ಪುಡಿ ಎರಚಿ ಯುವಕನ ಬರ್ಬರ ಕೊಲೆ

    ಕಣ್ಣಿಗೆ ಖಾರದ ಪುಡಿ ಎರಚಿ ಯುವಕನ ಬರ್ಬರ ಕೊಲೆ

    ರಾಯಚೂರು: ಕ್ಷುಲ್ಲಕ ಕಾರಣಕ್ಕೆ ಮಾರಕಾಸ್ತ್ರಗಳಿಂದ ಯುವಕನ ಮೇಲೆ ಹಲ್ಲೆ ಮಾಡಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹಟ್ಟಿಚಿನ್ನದಗಣಿ ಪಟ್ಟಣದಲ್ಲಿ ನಡೆದಿದೆ.

    ಹನೀಫ್ (30) ಕೊಲೆಯಾದ ಯುವಕನಾಗಿದ್ದಾನೆ. ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹಟ್ಟಿಚಿನ್ನದಗಣಿ ಪಟ್ಟಣದಲ್ಲಿ ಹಾಡಹಗಲೇ ಯುವಕನೋರ್ವನನ್ನ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಕಣ್ಣಿಗೆ ಖಾರದ ಪುಡಿ ಎರಚಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ.

    ಪಟ್ಟಣದ ಹೊಸ ಬಸ್ ನಿಲ್ದಾಣದ ಬಳಿ ಘಟನೆ ನಡೆದಿದ್ದು, ಕ್ಷುಲ್ಲಕ ಕಾರಣಕ್ಕೆ ನಡೆದ ಗಲಾಟೆಯಿಂದ ಯುವಕನ ಕೊಲೆ ನಡೆದಿದೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಹಟ್ಟಿ ಸಿಪಿಐ ಮಹಾಂತೇಶ್ ಸಜ್ಜನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಜನ್ಮದಿನಾಚರಣೆಯ ಸಂಭ್ರಮದಲ್ಲಿ ಸಿಂಪಲ್ ನಟಿ ಶ್ವೇತಾ ಶ್ರೀವಾತ್ಸವ್

     

    ಆಟೋಮೊಬೈಲ್ ಅಂಗಡಿ ನಡೆಸುತ್ತಿದ್ದ ಹನೀಫ್ ಜೊತೆ ಕೆಲ ಮೆಕಾನಿಕ್‍ಗಳು ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿಕೊಂಡಿದ್ದರು. ಜಗಳ ತಾರಕಕ್ಕೇರಿ ಕೊಲೆಯಲ್ಲಿ ಅಂತ್ಯವಾಗಿದೆ. ಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ.

  • ಸಿಬ್ಬಂದಿ ಮುಖಕ್ಕೆ ಖಾರದ ಪುಡಿ ಎರಚಿ 7 ಕೈದಿಗಳು ಪರಾರಿ

    ಸಿಬ್ಬಂದಿ ಮುಖಕ್ಕೆ ಖಾರದ ಪುಡಿ ಎರಚಿ 7 ಕೈದಿಗಳು ಪರಾರಿ

    ಇಟಾನಗರ್: ಜೈಲಿನಲ್ಲಿದ್ದ 7 ಮಂದಿ ವಿಚಾರಣಾಧೀನ ಕೈದಿಗಳು ಸೆಕ್ಯುರಿಟಿ ಗಾರ್ಡ್‍ಗಳ ಮುಖಕ್ಕೆ ಖಾರದ ಪುಡಿ ಎರಚಿ ಜೈಲಿನಿಂದ ತಪ್ಪಿಸಿಕೊಂಡಿರುವ ಘಟನೆ ಅರುಣಾಚಲ ಪ್ರದೇಶದಲ್ಲಿ ನಡೆದಿದೆ.

    ಅಭಿಜಿತ್ ಗೊಗೋಯ್, ತಾರೋ ಹಮಾಮ್, ಕಲಾಂ ಅಪಂಗ್, ತಾಲುಮ್ ಪನೀಯಿಂಗ್, ಸುಭಾಷ್ ಮಂಡಲ್, ರಾಜಾ ತಾಯೆಂಗ್ ಮತ್ತು ದನಿ ಗಮ್ಲಿನ್ ಜೈಲಿನಿಂದ ಪರಾರಿಯಾಗಿರುವ ಕೈದಿಗಳಾಗಿದ್ದಾರೆ. ಅರುಣಾಚಲಪ್ರದೇಶದ ಪೂರ್ವ ಸಿಯಾಂಗ್ ಜಿಲ್ಲೆಯಲ್ಲಿರುವ ಪಾಸಿಘಾಟ್ ಜೈಲಿನಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ:  ಬಡ-ಮಧ್ಯಮ ವರ್ಗದವರಿಗೆ ದುಬಾರಿಯಾದ ನಂದಿಬೆಟ್ಟ – ಊಟ, ತಿಂಡಿ, ಕಾಫಿ ಸೇರಿದಂತೆ ಪ್ರವೇಶ ಶುಲ್ಕವೂ ಬಲು ದುಬಾರಿ

    ಈ ಜೈಲಿನಲ್ಲಿದ್ದ 7 ಮಂದಿ ವಿಚಾರಣಾಧೀನ ಕೈದಿಗಳು ಭಾನುವಾರ ರಾತ್ರಿ ಸೆಕ್ಯುರಿಟಿ ಗಾರ್ಡ್‍ಗಳ ಮುಖಕ್ಕೆ ಖಾರದ ಪುಡಿ ಎರಚಿ ಜೈಲಿನಿಂದ ತಪ್ಪಿಸಿಕೊಂಡಿದ್ದಾರೆ. ಆ ಜೈಲಿನಲ್ಲಿ 94 ಕೈದಿಗಳಿದ್ದರು. ಭಾನುವಾರ ರಾತ್ರಿ 7.30ರ ವೇಳೆಗೆ 7 ಕೈದಿಗಳು ಜೈಲಿನ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಅವರ ಕಣ್ಣಿಗೆ ಖಾರದ ಪುಡಿ ಹಾಕಿದ್ದಾರೆ. ಈ ದಾಳಿಯಲ್ಲಿ ಐದಕ್ಕೂ ಹೆಚ್ಚು ಸೆಕ್ಯುರಿಟಿ ಗಾರ್ಡ್‍ಗಳಿಗೆ ಗಾಯಗಳಾಗಿವೆ.

    ಈ ದಾಳಿ ನಡೆದ ವೇಳೆ ಕೇವಲ 10 ಮಂದಿ ಸೆಕ್ಯುರಿಟಿ ಗಾರ್ಡ್‍ಗಳು ಕಾರ್ಯ ನಿರ್ವಹಿಸುತ್ತಿದ್ದರು. ಪರಾರಿಯಾಗಿರುವ ಕೈದಿಗಳ ಮಾಹಿತಿಯನ್ನು ಎಲ್ಲ ಪೊಲೀಸ್ ಠಾಣೆಗಳಿಗೂ ಕಳುಹಿಸಲಾಗಿದ್ದು, ಅವರನ್ನು ಹುಡುಕಲು ಪೊಲೀಸರು ಮುಂದಾಗಿದ್ದಾರೆ.

  • ನ್ಯಾಯಾಲಯಕ್ಕೆ ಖಾರದ ಪುಡಿ ತಂದ ಖೈದಿ

    ನ್ಯಾಯಾಲಯಕ್ಕೆ ಖಾರದ ಪುಡಿ ತಂದ ಖೈದಿ

    ಧಾರವಾಡ/ಹುಬ್ಬಳ್ಳಿ: ವಿಚಾರಣಾಧೀನ ಖೈದಿಯೊಬ್ಬ ನ್ಯಾಯಾಲಯಕ್ಕೆ ಖಾರದ ಪುಡಿ ಹಾಗೂ ಬೆಂಕಿ ಪೊಟ್ಟಣ ತಗೆದುಕೊಂಡು ಬಂದು ಕೆಲ ಕಾಲ ಆತಂಕ ಸೃಷ್ಟಿಸಿದ ಘಟನೆ ನಗರದ ಹೊಸ ಕೋರ್ಟ್ ನಲ್ಲಿ ನಡೆದಿದೆ.

    ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಹಾನಗಲ್ ಮೂಲದ ನಾಗರಾಜ್ ಎಂಬಾತನೇ ಖಾರದ ಪುಡಿ ಹಾಗೂ ಬೆಂಕಿ ಪೊಟ್ಟಣವನ್ನು ಕಿಸೆಯಲ್ಲಿ ಇಟ್ಟುಕೊಂಡು ನ್ಯಾಯಾಲಯಕ್ಕೆ ಆಗಮಿಸಿದ ಆರೋಪಿ. ಹಾವೇರಿ ಟೌನ್ ಠಾಣೆ ಪೊಲೀಸರು ಮನೆಗಳ್ಳತನ ಪ್ರಕರಣದಲ್ಲಿ ಈತನನ್ನು ಬಂಧಿಸಿ ಬಳ್ಳಾರಿ ಸೆಂಟ್ರಲ್ ಜೈಲಿಗೆ ಕಳುಹಿಸಿದ್ದರು. ಇಂದು ಬಳ್ಳಾರಿ ಜೈಲಿನಿಂದ ಹುಬ್ಬಳ್ಳಿ ಕೋರ್ಟ್ ಗೆ ವಿಚಾರಣೆಗಾಗಿ ಕರೆ ತರಲಾಗಿತ್ತು. ಆದ್ರೆ ಕೋರ್ಟ್ ಆವರಣ ಪ್ರವೇಶಕ್ಕೂ ಮುನ್ನ ಭದ್ರತಾ ಸಿಬ್ಬಂದಿ ಈತನನ್ನು ತಪಾಸಣೆ ಮಾಡಿದಾಗ ಈತನ ಬಳಿ ಖಾರದ ಪುಡಿ ಹಾಗೂ ಬೆಂಕಿ ಪೊಟ್ಟಣ ಪತ್ತೆಯಾಗಿದೆ. ಇದರಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣಗೊಂಡಿತ್ತು.

    ಜೈಲಿನಲ್ಲಿ ಈತನಿಗೆ ಖಾರದ ಪುಡಿ ಹಾಗೂ ಬೆಂಕಿ ಪೊಟ್ಟಣ ಕೊಟ್ಟವರು ಯಾರು ಎಂಬ ಅನುಮಾನ ಕಾಡುತ್ತಿದೆ. ಅದರ ಜೊತೆಗೆ ಈ ವಸ್ತುಗಳನ್ನು ನ್ಯಾಯಾಲಯಕ್ಕೆ ಏಕೆ ತಗೆದುಕೊಂಡ ಬಂದ. ಈತನ ಉದ್ದೇಶ ಏನಾಗಿತ್ತು ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ. ಪೊಲೀಸರು ಈತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

    ಈತನ ಬಳಿ ಇಂತಹ ವಸ್ತುಗಳು ಪತ್ತೆಯಾಗಿದ್ದು ಬಳ್ಳಾರಿ ಜೈಲಿನ ಭದ್ರತಾ ವೈಫಲ್ಯ ಎದ್ದು ಕಾಣುತ್ತಿದೆ. ಆದ್ರೆ ಕೋರ್ಟ್ ನ ಭದ್ರತಾ ಸಿಬ್ಬಂದಿ ಸಮಯ ಪ್ರಜ್ಞೆಯಿಂದ ಆಗಬಹುದಾದ ಅನಾಹುತ ತಪ್ಪಿದಂತಾಗಿದೆ.

  • ತಪ್ಪು ಮಾಡಿದಳೆಂದು ಬಾಲಕಿಯ ಗುಪ್ತಾಂಗಕ್ಕೆ ಖಾರದ ಪುಡಿ ಹಾಕಿದ್ರು..!

    ತಪ್ಪು ಮಾಡಿದಳೆಂದು ಬಾಲಕಿಯ ಗುಪ್ತಾಂಗಕ್ಕೆ ಖಾರದ ಪುಡಿ ಹಾಕಿದ್ರು..!

    ನವದೆಹಲಿ: ಸರ್ಕಾರೇತರ ಸಂಸ್ಥೆಯೊಂದು(ಎನ್‍ಜಿಓ) ನಡೆಸುವ ಬಾಲಕಿಯರ ಆಶ್ರಯ ನಿವಾಸದಲ್ಲಿ ಸಿಬ್ಬಂದಿ ತಪ್ಪು ಮಾಡಿದಳು ಅಂತ ಬಾಲಕಿಯೊಬ್ಬಳ ಗುಪ್ತಾಂಗಕ್ಕೆ ಖಾರದ ಪುಡಿ ಹಾಕಿ ಶಿಕ್ಷೆ ಕೊಟ್ಟ ಅಮಾನವಿಯ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ಶುಕ್ರವಾರದಂದು ದೆಹಲಿಯ ಮಹಿಳಾ ಆಯೋಗದ(ಡಿಡಬ್ಲ್ಯೂಸಿ) ಅಧಿಕಾರಿಗಳು ನೈಋತ್ಯ ದೆಹಲಿಯ ದ್ವಾರಕಾದಲ್ಲಿರುವ ಎನ್‍ಜಿಓವೊಂದು ನೋಡಿಕೊಳ್ಳುವ ಬಾಲಕಿಯರ ಆಶ್ರಯ ನಿವಾಸಕ್ಕೆ ದಿಢೀರ್ ಪರಿಶೀಲನೆ ನಡೆಸಲು ತೆರೆಳಿದ್ದರು. ಈ ವೇಳೆ ಆಶ್ರಯ ನಿವಾಸದಲ್ಲಿ ಇರುವ ಬಾಲಕಿಯರಿಗೆ ಅಲ್ಲಿನ ಸಿಬ್ಬಂದಿ ಕಿರುಕುಳ ಕೊಡುತ್ತಾರೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ.

    ಈ ಆಶ್ರಯ ನಿವಾಸದಲ್ಲಿ 6 ವರ್ಷದಿಂದ 15 ವರ್ಷ ವಯಸ್ಸಿನ ಒಟ್ಟು 22 ಬಾಲಕಿಯರು ಇರುತ್ತಾರೆ. ಇಲ್ಲಿ ಇರುವ ಬಾಲಕಿಯರ ಕೈಯಲ್ಲಿ ಸಿಬ್ಬಂದಿ ಮನೆಯ ಎಲ್ಲಾ ಕೆಲಸ ಮಾಡಿಸುತ್ತಾರೆ. ಅಲ್ಲದೆ ಕೋಣೆಗಳನ್ನು ನಾವು ಸ್ವಚ್ಛವಾಗಿ ಇಟ್ಟುಕೊಳ್ಳದೆ ಇದ್ದರೆ ನಮಗೆ ಶಿಕ್ಷೆ ನೀಡುತ್ತಾರೆ. ಸ್ಕೇಲ್‍ನಿಂದ ಹೊಡೆಯುತ್ತಾರೆ, ರಜಾ ದಿನಗಳಲ್ಲಿ ಪೋಷಕರ ಬಳಿ ಹೋಗಲು ಬಿಡುವುದಿಲ್ಲ. ಹಾಗೆಯೆ ಇಲ್ಲಿ ಸಿಬ್ಬಂದಿ ಕಡಿಮೆ ಇರುವುದರಿಂದ ಮಕ್ಕಳ ಕೈಯಲ್ಲೇ ಅಡುಗೆ ಮಾಡಸ್ತಾರೆ. ಶೌಚಾಲಯ ಹಾಗೂ ಮನೆಯನ್ನು ಸ್ವಚ್ಛ ಮಾಡಿಸ್ತಾರೆ. ಸರಿಯಾದ ಗುಣಮಟ್ಟದ ಊಟ ಕೂಡ ನೀಡಲ್ಲ ಅಂತ ಬಾಲಕಿಯರು ಅಧಿಕಾರಿಗಳಿಗೆ ತಿಳಿಸಿದ್ದಾರೆ.

    ಅಷ್ಟೆ ಅಲ್ಲದೆ ಕೆಲವು ದಿನಗಳ ಹಿಂದೆ ಬಾಲಕಿಯೊಬ್ಬಳು ಹೇಳಿದ ಮಾತನ್ನು ಕೇಳಿಲ್ಲ ಅಂತ ಸಿಬ್ಬಂದಿ ಅವಳ ಗುಪ್ತಾಂಗಕ್ಕೆ ಖಾರದ ಪುಡಿ ಹಾಕಿ ಕಿರುಕುಳ ಕೊಟ್ಟಿದ್ದಾರೆ. ಈ ವಿಷಯ ತಿಳಿಯುತ್ತಿದಂತೆ ಡಿಡಬ್ಲ್ಯೂಸಿ ಅಧಿಕಾರಿಗಳು ಆರೋಪಿಗಳ ಮೇಲೆ ದೆಹಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಸದ್ಯ ಮಕ್ಕಳ ರಕ್ಷಣೆ ಹಾಗೂ ಲೈಂಗಿಕ ಅಪರಾಧ ಕಾಯ್ದೆ ಹಾಗೂ ಜುವೆನೈಲ್ ನ್ಯಾಯಾಂಗ ಕಾಯ್ದೆ (Juvenile Justice Act) ಅಡಿಯಲ್ಲಿ ಆರೋಪಿಗಳ ವಿರುದ್ಧ ಎಫ್‍ಐಆರ್ ದಾಖಲಾಗಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅತ್ತೆಯ ಕಣ್ಣಿಗೆ ಖಾರದ ಪುಡಿ ಎರಚಿ ಚಿನ್ನದ ಒಡವೆಗಳನ್ನ ಕದ್ದ ಅಳಿಯ

    ಅತ್ತೆಯ ಕಣ್ಣಿಗೆ ಖಾರದ ಪುಡಿ ಎರಚಿ ಚಿನ್ನದ ಒಡವೆಗಳನ್ನ ಕದ್ದ ಅಳಿಯ

    ಹೈದರಾಬಾದ್: ವ್ಯಕ್ತಿಯೊಬ್ಬ ತನ್ನ ಅತ್ತೆಯ ಕಣ್ಣಿಗೆ ಖಾರದ ಪುಡಿ ಎರಚಿ ಚಿನ್ನದ ಒಡವೆಗಳನ್ನ ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದಾನೆ.

    ಹೈದರಾಬಾದ್‍ನ ಸಂಜೀವರೆಡ್ಡಿ ನಗರದ ತುಳಸಿ ನಗರದಲ್ಲಿ ಈ ಘಟನೆ ನಡೆದಿದೆ. ಪೊಲೀಸರು ಸದ್ಯ ಆರೋಪಿಯನ್ನ ಬಂಧಿಸಿದ್ದಾರೆ.

    ಪೊಲೀಸರ ಪ್ರಕಾರ ಈ ಘಟನೆ ಡಿಸೆಂಬರ್ 31ರಂದು ನಡೆದಿದೆ. ಆರೋಪಿ ಹ್ಯಾರಿ ತುಳಸಿ ನಗರದಲ್ಲಿನ ತನ್ನ ಅತ್ತೆಯ ಮನೆಗೆ ಕಳ್ಳನ ವೇಷದಲ್ಲಿ ನುಗ್ಗಿದ್ದಾನೆ. ನಂತರ ನಿದ್ದೆ ಮಾಡುತ್ತಿದ್ದ ತನ್ನ ಅತ್ತೆ ಅಂಟೋನಮ್ಮ ಅವರನ್ನ ಥಳಿಸಿದ್ದಾನೆ. ಇದನ್ನ ಅವರು ತಡೆಯಲು ಯತ್ನಿಸಿದಾಗ ಕಣ್ಣಿಗೆ ಖಾರದ ಪುಡಿ ಎರಚಿದ್ದಾನೆ. ನಂತರ ಮನೆಯಲ್ಲಿದ್ದ ಚಿನ್ನದ ಆಭರಣಗಳನ್ನ ತೆಗೆದುಕೊಂಡು ಸ್ಥಳದಿಂದ ಪರಾರಿಯಾಗಿದ್ದಾನೆ.

    ಈ ಹಿನ್ನೆಲೆಯಲ್ಲಿ ಅಂಟೋನಮ್ಮ ಮರುದಿನ ಬೆಳಗ್ಗೆ ಎಸ್‍ಆರ್ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ತನಿಖೆ ವೇಳೆ ಪೊಲೀಸರು ಹ್ಯಾರಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಹ್ಯಾರಿ ತನ್ನ ಕೃತ್ಯದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ.

  • ಯುವಕನ ಕಣ್ಣಿಗೆ ಖಾರದ ಪುಡಿ ಎರಚಿ ಮಗಳನ್ನ ಎಳೆದೊಯ್ದರು!

    ಯುವಕನ ಕಣ್ಣಿಗೆ ಖಾರದ ಪುಡಿ ಎರಚಿ ಮಗಳನ್ನ ಎಳೆದೊಯ್ದರು!

    ತಿರುಪತಿ: ತಮ್ಮ ಇಷ್ಟಕ್ಕೆ ವಿರುದ್ಧವಾಗಿ ಮದುವೆಯಾಗಿದ್ದಕ್ಕೆ ಯುವತಿಯ ಪೋಷಕರು ಯುವಕನ ಕಣ್ಣಿಗೆ ಖಾರದಪುಡಿ ಎರಚಿ ಮಗಳನ್ನು ಎಳೆದೊಯ್ದಿರುವ ಘಟನೆ ಸೋಮವಾರದಂದು ಚಿತ್ತೂರು ಜಿಲ್ಲೆಯ ತೋಂಡಿವಡ ಗ್ರಾಮದಲ್ಲಿ ನಡೆದಿದೆ.

    ಚಂದ್ರಗಿರಿ ಸರ್ಕಾರಿ ಆಸ್ಪತ್ರೆಯಲ್ಲಿ ಹೌಸ್ ಸರ್ಜನ್ ಆಗಿರೋ ನವೀನ್ ಕುಮಾರ್ ಹಾಗೂ ಮೆಡಿಕಲ್ ವಿದ್ಯಾರ್ಥಿನಿ ಶ್ರೀಚಂದನಾ ಸ್ನೇಹಿತರಾಗಿದ್ದರು. ನಂತರ ಸ್ನೇಹ ಪ್ರೀತಿಗೆ ತಿರುಗಿ, ಯುವತಿಯ ಪೋಷಕರ ಇಷ್ಟಕ್ಕೆ ವಿರುದ್ಧವಾಗಿ ಮದುವೆಯಾಗಿದ್ದರು. ಆಗಸ್ಟ್ 16 ಎಂದು ಇವರ ಮದುವೆ ನೆರವೇರಿತ್ತು. ಯುವಕ ಯುವತಿ ಇಬ್ಬರೂ ಬೇರೆ ಬೇರೆ ಜಾತಿಗೆ ಸೇರಿದವರಾಗಿದ್ದರಿಂದ ಯುವತಿಯ ಪೋಷಕರಿಂದ ವಿರೋಧ ವ್ಯಕ್ತವಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.

    ಸೋಮವಾರದಂದು ಶ್ರೀಚಂದನಾ ಪೋಷಕರು ಹಾಗೂ ಇತರೆ ಕೆಲವರು ವಾಹನಗಳಲ್ಲಿ ಬಂದು ಬೈಕ್‍ನಲ್ಲಿ ಹೋಗುತ್ತಿದ್ದ ನವೀನ್ ಮತ್ತು ಶ್ರಿಚಂದನಾರನ್ನ ತಡೆದಿದ್ದರು. ನಂತರ ನವೀನ್ ಕಣ್ಣಿಗೆ ಖಾರದ ಪುಡಿ ಎರಚಿ ಶ್ರೀಚಂದನಾರನ್ನ ಎಳೆದುಕೊಂಡು ಹೋಗಿದ್ದಾರೆ.

    ನಂತರ ನವೀನ್ ಚಂದ್ರಗಿರಿ ಪೊಲೀಸ್ ಠಾಣೆಸಗೆ ಹೋಗಿ ಶ್ರೀಚಂದನಾ ತಂದೆ ರಾಜಭೂಪಾಲ್ ರೆಡ್ಡಿ ಹಾಗೂ ಇತರರ ವಿರುದ್ಧ ದೂರು ದಾಖಲಿಸಿದ್ದಾರೆ. ಈ ಹಿಂದೆಯೂ ದಾಳಿಯ ಯತ್ನ ನಡೆದಿದ್ದು, ತನ್ನನ್ನು ರಕ್ಷಿಸಿಕೊಳ್ಳಲು ತಿರುಪತಿ ಪೊಲೀಸರ ಸಹಾಯ ಪಡೆದಿದ್ದಾಗಿ ಹೇಳಿದ್ದಾರೆ.