Tag: ಖಾನಾಪೂರ

  • ನಿಂತಿದ್ದ ಲಾರಿಗೆ ಹಿಂಬದಿಯಿಂದ ಟ್ರಕ್ ಡಿಕ್ಕಿ – ಓರ್ವ ಸಾವು, ನಾಲ್ವರು ಗಂಭೀರ

    ನಿಂತಿದ್ದ ಲಾರಿಗೆ ಹಿಂಬದಿಯಿಂದ ಟ್ರಕ್ ಡಿಕ್ಕಿ – ಓರ್ವ ಸಾವು, ನಾಲ್ವರು ಗಂಭೀರ

    ಬೆಳಗಾವಿ: ನಿಂತಿದ್ದ ಲಾರಿಗೆ ಹಿಂಬದಿಯಿಂದ ಟ್ರಕ್ ಡಿಕ್ಕಿ (Accident) ಹೊಡೆದ ಪರಿಣಾಮ ಓರ್ವ ಮೃತಪಟ್ಟು ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಖಾನಾಪೂರದಲ್ಲಿ (Khanapur) ನಡೆದಿದೆ.

    ಮೃತನನ್ನು ಸಂಗರಗಾಳಿ ಗ್ರಾಮದ ನಾರಾಯಣ ಲಕ್ಷ್ಮೀಣ ಕಡೋಲ್ಕರ್ (65) ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡ ನಾಲ್ವರ ಗುರುತು ಪತ್ತೆಯಾಗಿಲ್ಲ. ಅವರನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಚೈತ್ರಾ ಡೀಲ್ ಕೇಸ್; ನನ್ನ ಹೆಸರು ಬಂದಿರೋದು ಬೇಸರವಾಗಿದೆ- ವಜ್ರದೇಹಿ ಮಠದ ಸ್ವಾಮೀಜಿ

    ಖಾನಾಪೂರ ತಾಲೂಕಿನ ನಾಯ್ಕಲ್ ಕತ್ರಿ ರಸ್ತೆ ಬಳಿ ಹತ್ತು ಚಕ್ರದ ಲಾರಿ ನಿಂತಿತ್ತು. ಈ ಲಾರಿಗೆ ಮಾಡಿಗುಂಜಿ ಕಡೆಯಿಂದ ಖಾನಾಪುರ ಕಡೆಗೆ ಬರುತ್ತಿದ್ದ ಮಿನಿ ಟ್ರಕ್ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಖಾನಾಪೂರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಹಳೇ ದ್ವೇಷಕ್ಕೆ ಮಚ್ಚಿನಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗ್ರಾಮದೇವತೆಗೆ ಉಡಿ ತುಂಬುವಾಗ ದಲಿತರಿಗೆ ಬಹಿಷ್ಕಾರ ಆರೋಪ

    ಗ್ರಾಮದೇವತೆಗೆ ಉಡಿ ತುಂಬುವಾಗ ದಲಿತರಿಗೆ ಬಹಿಷ್ಕಾರ ಆರೋಪ

    ಬೆಳಗಾವಿ: ಗ್ರಾಮ ದೇವತೆಗೆ ಉಡಿ ತುಂಬುವಾಗ ದಲಿತರಿಗೆ ಬಹಿಷ್ಕಾರ ಹಾಕಿದ ಆರೋಪ ಕೇಳಿ ಬಂದ ಘಟನೆ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಚಿಕ್ಕಮುನವಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.

    ಶುಕ್ರವಾರ ಗ್ರಾಮ ದೇವತೆ ಜಾತ್ರೆಯಲ್ಲಿ ಉಡಿ ತುಂಬುವ ಕಾರ್ಯಕ್ರಮವಿತ್ತು. ಈ ಸಂದರ್ಭದಲ್ಲಿ ದಲಿತ ಸಮುದಾಯದ ಮಹಿಳೆಯರಿಗೆ ದೇವಸ್ಥಾನದ ಗರ್ಭಗುಡಿಯೊಳಗೆ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಅಲ್ಲದೇ ದಲಿತರ ಹಣೆಗೆ ಅಂಗಾರ, ಭಂಡಾರ ಹಚ್ಚದ ಬಗ್ಗೆಯೂ ಆರೋಪ ಕೇಳಿ ಬಂದಿದೆ.

    ಅಲ್ಲದೇ ದಲಿತ ಸಮುದಾಯದವರಿಗೆ ಜಾತಿ ನಿಂದನೆ ಮಾಡಿ, ದಲಿತ ಯುವಕರ ಹೇರ್ ಕಟಿಂಗ್‍ಗೆ ನಿರಾಕರಣೆ ಮಾಡಲಾಗಿತ್ತು. ಸುದ್ದಿ ತಿಳಿಯುತ್ತಿದ್ದಂತೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದರು. ಬೆಳಗಾವಿ ಎಸಿ ರವೀಂದ್ರ ಕರಿಲಿಂಗಣ್ಣನವರ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಉಮಾ ಸಾಲಿಗೌಡರ್, ಡಿವೈಎಸ್‍ಪಿ ಶಿವಾನಂದ ಕಟಗಿ ಸೇರಿ ಹಲವರು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಸವರ್ಣೀಯರು ಹಾಗೂ ದಲಿತರ ಮುಖಂಡರ ಜೊತೆಗೆ ಸಂಧಾನ ಸಭೆ ಮಾಡಿದರು. ಇದನ್ನೂ ಓದಿ: ಕಾಂಗ್ರೆಸ್‍ಗೆ ಮುಖ್ಯಮಂತ್ರಿ ಚಂದ್ರು ಗುಡ್ ಬೈ

    ಅಧಿಕಾರಿಗಳ ಎದುರೇ ದಲಿತರು ಹಲವು ಗಂಭೀರ ಆರೋಪ ಮಾಡಿದರು. ಗ್ರಾಪಂನಲ್ಲಿ ಸಭೆ ಕರೆದ ವೇಳೆ ಸವರ್ಣೀಯರು ದಲಿತರನ್ನು ಪ್ರತ್ಯೇಕವಾಗಿ ಕೂರಿಸುತ್ತಾರೆ ಎಂದು ಆರೋಪಿಸಿದರು. ಆದರೆ ದಲಿತರ ಆರೋಪಗಳನ್ನು ಸವರ್ಣೀಯರು ಅಲ್ಲಗಳೆದರು. ಉಡಿ ತುಂಬಲು ನಾವು ಯಾವುದೇ ನಿಬರ್ಂಧ ಹೇರಿಲ್ಲ ಎಂದು ಸಮರ್ಥಿಸಿಕೊಂಡರು. ಇದನ್ನೂ ಓದಿ: ಬೆಳಗಾವಿಯಲ್ಲೂ ಪುರಾತನ ದೇವಾಲಯ ಒಡೆದು ಮಸೀದಿ ನಿರ್ಮಾಣ: ಅಭಯ್ ಪಾಟೀಲ್

    ಆದರೆ, ದಲಿತರು ಗ್ರಾಮದ ಇಬ್ಬರು ಮುಖಂಡರು, ಸಲೂನ್ ಶಾಪ್ ಮಾಲೀಕ ಹಾಗೂ ಈ ವಿಷಯ ಮೇಲಾಧಿಕಾರಿಗಳ ಗಮನಕ್ಕೆ ತರದ ಪಿಡಿಒ ವಿರುದ್ಧ ದೂರು ದಾಖಲಿಸುವಂತೆ ಪಟ್ಟು ಹಿಡಿದರು. ಎಫ್‍ಐಆರ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದರು. ಸದ್ಯ ಸಂಧಾನ ಸಭೆ ಸಫಲವಾಗಿದ್ದು, ಮುಂದೆ ಎರಡೂ ಸಮುದಾಯದವರು ಅನ್ಯೋನ್ಯವಾಗಿ ಬಾಳಲು ಸೂಚನೆ ನೀಡಲಾಯಿತು.

  • ಮಹಿಳೆ ಮೇಲೆ ಅತ್ಯಾಚಾರ ಮಾಡಿ ಎಸ್ಕೇಪ್ ಆಗಿದ್ದ ಆರೋಪಿ ಪೊಲೀಸರ ವಶ

    ಮಹಿಳೆ ಮೇಲೆ ಅತ್ಯಾಚಾರ ಮಾಡಿ ಎಸ್ಕೇಪ್ ಆಗಿದ್ದ ಆರೋಪಿ ಪೊಲೀಸರ ವಶ

    ಬೆಳಗಾವಿ: ಎರಡು ತಿಂಗಳ ಹಿಂದೆ ಅತ್ಯಾಚಾರ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಖಾನಾಪೂರ ಪೊಲೀಸರು ಜಾಂಬೋಟಿಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಖಾನಾಪೂರ ತಾಲೂಕಿನ ಸಂಗರಗಾಳಿ ಗ್ರಾಮದ ನಿವಾಸಿ ಆಸ್ಟಿನ್ ಡುಮಿಂಗ್ ಮಸ್ಕರೇನ್ ಬಂಧಿತ. ಕಳೆದ ಎರಡು ತಿಂಗಳ ಹಿಂದೆ ಆಸ್ಟಿನ್ ವಿರುದ್ಧ ಮಹಿಳೆ ಮೇಲೆ ಅತ್ಯಾಚಾರವೆಸಗಿದ ಪ್ರಕರಣ ವರದಿಯಾಗಿತ್ತು. ಪ್ರಕರಣ ದಾಖಲಾಗುತ್ತಿದ್ದಂತೆ ಆಸ್ಟಿನ್ ಪರಾರಿಯಾಗಿದ್ದನು. ಆತನ ಪತ್ತೆಗೆ ಬಲೆ ಬೀಸಿದ್ದ ಪೊಲೀಸರು ಹರಸಾಹಸಪಟ್ಟಿದ್ದರು. ಇದನ್ನೂ ಓದಿ: ಸಿನಿಮೀಯ ರೀತಿ ದರೋಡೆಕೋರನನ್ನೇ ಹಿಡಿದ ಮನೆಯವರು

    CRIME 2

    ಜಾಂಬೋಟಿ ಗ್ರಾಮದಲ್ಲಿರುವ ಖಚಿತ ಮಾಹಿತಿ ಮೇರೆಗೆ ಇನ್ಸ್‌ಪೆಕ್ಟರ್ ಸುರೇಶ್ ನೇತೃತ್ವದಲ್ಲಿ ಖಾನಾಪುರ ಠಾಣೆಯ ಸಿಬ್ಬಂದಿ ಎಸ್.ಎಸ್.ತುರಮುಂದಿ, ಎಸ್.ಎಂ.ಸಾತಪ್ಪ ಅವರ, ಪ್ರಕಾಶ್ ಗಾಡಿವಡ್ಡರ ಮತ್ತು ಮಂಜುನಾಥ್ ಮುಸಳಿ ಅವರಿದ್ದ ಪೊಲೀಸರ ತಂಡ ಆಸ್ಟಿನ್‍ನನ್ನು ಬಂಧಿಸಿದ್ದು, ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

    ಆಸ್ಟಿನ್ ವಿರುದ್ಧ ಅತ್ಯಾಚಾರದ ಜೊತೆಗೆ ಒಂದು ಕೊಲೆ ಹಾಗೂ ಅಕ್ರಮ ಗಾಂಜಾ ಸಾಗಾಟ ಪ್ರಕರಣವೂ ದಾಖಲಾಗಿದ್ದರಿಂದ ನ್ಯಾಯಾಧೀಶರು ಆತನಿಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದಾರೆ. ಮೂರೂ ಪ್ರಕರಣಗಳ ವಿಚಾರಣೆ ಮುಂದುವರೆದಿದೆ. ಇದನ್ನೂ ಓದಿ: PSI ನೇಮಕಾತಿ ಅಕ್ರಮ – ಬಿಜೆಪಿ ಮುಖಂಡೆ ದಿವ್ಯಾ ಹಾಗರಗಿ ಮನೆಗೆ ಸಿಐಡಿ ದಾಳಿ