Tag: ಖಾದಿ ಎಂಪೋರಿಯಂ

  • ಖಾದಿ ಎಂಪೋರಿಯಂನಲ್ಲಿ ಲೇಡಿಸ್ ಟಾಪ್ ಡ್ರೆಸ್ ಖರೀದಿಸಿದ ಸಿಎಂ

    ಖಾದಿ ಎಂಪೋರಿಯಂನಲ್ಲಿ ಲೇಡಿಸ್ ಟಾಪ್ ಡ್ರೆಸ್ ಖರೀದಿಸಿದ ಸಿಎಂ

    ಬೆಂಗಳೂರು: ಗಾಂಧೀಜಯಂತಿ (Gandhi Jayanti) ಅಂಗವಾಗಿ ಇಲ್ಲಿನ ಖಾದಿ ಎಂಪೋರಿಯಂಗೆ (Khadhi Emporium) ಭೇಟಿ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಲೇಡಿಸ್ ಡ್ರೆಸ್ ಕೋಲ್ ಟಾಪ್ (LadiesCowltop), ರೆಡಿಮೇಡ್ ಫುಲ್ ಶರ್ಟ್ ಸೇರಿದಂತೆ ಒಟ್ಟು 3,329 ರೂ. ಬೆಲೆಯ ಖಾದಿ ಬಟ್ಟೆ ಖರೀದಿಸಿದ್ದಾರೆ.

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರ ಜೊತೆಗೂಡಿ ಪೌರಾಡಳಿತ, ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಎಂಟಿಬಿ ನಾಗರಾಜು, ಸಚಿವ ಗೋವಿಂದ ಕಾರಜೋಳ ಬೆಂಗಳೂರಿನ ಗಾಂಧಿ ಭವನದ ಬಳಿ ಇರುವ ಖಾದಿ ಎಂಪೋರಿಯಂನಲ್ಲಿ ಖಾದಿ ಬಟ್ಟೆಗಳನ್ನು ಖರೀದಿಸಿದ್ದಾರೆ. ಇದನ್ನೂ ಓದಿ: ಫುಟ್ಬಾಲ್ ತಂಡ ಸೋತಿದಕ್ಕೆ ಸ್ಟೇಡಿಯಂನಲ್ಲೇ ಗಲಭೆ – ಸಾವಿನ ಸಂಖ್ಯೆ 174ಕ್ಕೆ ಏರಿಕೆ, 180 ಮಂದಿಗೆ ಗಾಯ

    ಸಂಕಷ್ಟದಲ್ಲಿರುವ ಖಾದಿ ಮತ್ತು ಗ್ರಾಮೋದ್ಯೋಗ ಸಂಘ-ಸಂಸ್ಥೆಗಳಿಗೆ ಆರ್ಥಿಕ ಬಲ ನೀಡುವ ದೃಷ್ಟಿಯಿಂದ ಸಿಎಂ ಭೇಟಿ ನೀಡಿ 3 ಸಾವಿರಕ್ಕೂ ಹೆಚ್ಚು ಮೌಲ್ಯದ ಖಾದಿ ಬಟ್ಟೆಗಳನ್ನು (Khadi Dress) ಖರೀದಿಸಿದ್ದಾರೆ.

    ಇದೇ ವೇಳೆ ಸಿಎಂಗೆ ಶಾಲು ಹೊದಿಸಿ, ಸನ್ಮಾನಿಸಿದ ಸಿಬ್ಬಂದಿ, ಹುಬ್ಬಳ್ಳಿಯ ಖಾದಿ ಎಂಪೋರಿಯಂಗೆ ಭೇಟಿ ನೀಡುವಂತೆ ಮನವಿ ಮಾಡಿದ್ದಾರೆ. ಕಳೆದ ಬಾರಿ ಆಶ್ವಾಸನೆ ನೀಡಿದ್ದೀರಿ ಇನ್ನೂ ಬಂದಿಲ್ಲ. ಒಂದು ಬಾರಿಯಾದರೂ ಭೇಟಿ ನೀಡಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಕೋರಿದ್ದಾರೆ. ಸಿಎಂ ಸಹ ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಇದನ್ನೂ ಓದಿ: ಮಹಿಳಾ ತಹಶೀಲ್ದಾರ್‌ಗೆ ಎಷ್ಟು ಮದುವೆ ಆಗಿದೆ?- RTI ಮಾಹಿತಿ ಕೇಳಿದ ಕಾರ್ಯಕರ್ತ ಅರೆಸ್ಟ್

    ಸಿಎಂ ಏನೇನು ಖರೀದಿಸಿದ್ರು?
    ಖಾದಿ ಎಂಪೋರಿಯಂನಲ್ಲಿ ಸಿಎಂ ಬೊಮ್ಮಾಯಿ 1 ಲೇಡಿಸ್ ಡ್ರೆಸ್ ಕೋಲ್ ಟಾಪ್, 1 ರೆಡಿಮೇಡ್ ಫುಲ್ ಶರ್ಟ್, 1 ರೆಡಿಮೇಡ್ ಟೀ ಶರ್ಟ್, 3 ಜುಬ್ಬಾ, ಸೇರಿದಂತೆ 8 ವಿವಿಧ ಬಟ್ಟೆಗಳನ್ನ ಖರೀದಿಸಿದರು.

    Live Tv
    [brid partner=56869869 player=32851 video=960834 autoplay=true]

  • ಸೀರೆ ಖರೀದಿ ಬಗ್ಗೆ ನನಗೆ ಗೊತ್ತಿಲ್ಲ, ದುಡ್ಡು ಕೊಟ್ಟು ಬೈಸಿಕೊಳ್ಳೋದು ಇದು: ಕಾರಜೋಳ

    ಸೀರೆ ಖರೀದಿ ಬಗ್ಗೆ ನನಗೆ ಗೊತ್ತಿಲ್ಲ, ದುಡ್ಡು ಕೊಟ್ಟು ಬೈಸಿಕೊಳ್ಳೋದು ಇದು: ಕಾರಜೋಳ

    – ಖಾದಿ ಎಂಪೋರಿಯಂನಲ್ಲಿ ಎಲೆಕ್ಷನ್ ಟಿಕೆಟ್ ಟಾಕ್

    ಬೆಂಗಳೂರು: ನನಗೆ ಸೀರೆ ಖರೀದಿ ಬಗ್ಗೆ ಗೊತ್ತಿಲ್ಲ. ಇದು ದುಡ್ಡು ಕೊಟ್ಟು ಬೈಸಿಕೊಳ್ಳುವ ಕೆಲಸ ಎಂದು ಸಚಿವ ಗೋವಿಂದ ಕಾರಜೋಳ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಳಿ ಕೆಲ ಕಾಲ ತಮಾಷೆಯ ಮಾತುಗಳನ್ನಾಡಿದ ಪ್ರಸಂಗ ಇಂದು ನಡೆದಿದೆ.

    ಗಾಂಧಿ, ನೆಹರೂ ಜಯಂತಿ ದಿನವಾದ ಇಂದು ಶಿವಾನಂದ ಸರ್ಕಲ್‍ನಲ್ಲಿರುವ ಖಾದಿ ಎಂಪೋರಿಯಂಗೆ ಸಿಎಂ ಭೇಟಿ ನೀಡಿದರು. ಅಲ್ಲದೆ ತಲಾ ಮೂರು ಮೀಟರ್ ಅಳತೆಯ 10 ಖಾದಿ ಜುಬ್ಬಾ ಪೀಸ್ ಖರೀದಿಸಿದರು. ಜೊತೆಗೆ ತಮ್ಮ ಪತ್ನಿಗೂ ಖಾದಿ ಸೀರೆ ಖರೀದಿಸಿದರು.

    ಇದೇ ವೇಳೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಕೂಡ ಅಲ್ಲಿಗೆ ಆಗಮಿಸಿದರು. ಏನ್ ಸೀರೆ ಖರೀದಿ ಜೋರಾ ಎಂದು ಸಿಎಂಗೆ ವಿಜಯೇಂದ್ರ ಹೇಳಿದರು. ಈ ವೇಳೆ ಸಿಎಂ, ನಮ್ಮದು ಮುಗೀತು ಈಗ ನೀವು ತಗೊಳ್ಳಿ ಎಂದರು. ಸಿಎಂ ಮಾತಿನಂತೆ ವಿಜಯೇಂದ್ರ ಕೂಡ ಮಡದಿಗೆ ಸೀರೆ ಖರೀದಿಸಿದರು. ಇತ್ತ ಸಿಎಂ ಅವರು ಗೋವಿಂದ ಕಾರಜೋಳ ಅವರಿಗೂ, ಸಾಹೇಬ್ರೆ ನೀವು ಸೀರೆ ಖರೀದಿಸಿ ಎಂದು ಹೇಳಿದರು. ಆಗ ಕಾರಜೋಳ ಅವರು ಬೇಡ, ಸೀರೆ ಖರೀದಿ ಬಗ್ಗೆ ನನಗೆ ಗೊತ್ತಿಲ್ಲ. ದುಡ್ಡು ಕೊಟ್ಟು ಬೈಸಿಕೊಳ್ಳೋದು ಇದು ಅಂದ್ರು. ಇತ್ತ ಸಿಎಂ ಕೂಡ ಕಾರಜೋಳ ಮಾತಿಗೆ ದನಿಗೂಡಿಸಿದ್ದು, ನಮಗೆ ಸೆಲೆಕ್ಷನ್ ಗೊತ್ತಾಗಲ್ಲ ಎಂದ ತಮಾಷೆಯಾಗಿ ಮಾತಾಡಿದರು. ಇದನ್ನೂ ಓದಿ: ಗೋವಾದಲ್ಲಿ ಮನೆ ಖರೀದಿಸಿದ ರಶ್ಮಿಕಾ – ಹೊಟ್ಟೆ ಕಿಚ್ಚಾಯ್ತಾ ಅಂತ ಪ್ರಶ್ನಿಸಿದ್ಯಾರಿಗೆ?

    ಕೊನೆಗೆ ಸಿಎಂ ಮಾತಿಗೆ ಕಟ್ಟು ಬಿದ್ದು ಇರಲಿ, ನನಗೊಂದು ಸೀರೆ ಕೊಡಿ ಅಂತ ಗೋವಿಂದ ಕಾರಜೋಳ ಸೀರೆ ಖರೀದಿ ಮಾಡಿದರು. ಇತ್ತ ಸಚಿವ ಎಂಟಿಬಿಯಿಂದಲೂ ಖಾದಿ ಬಟ್ಟೆ ಖರೀದಿಸಿದರು. ಇದನ್ನೂ ಓದಿ:  ಹಾನಗಲ್, ಸಿಂದಗಿ ಉಪ ಚುನಾವಣೆಗೆ ನಾಳೆ ಅಭ್ಯರ್ಥಿಗಳ ಆಯ್ಕೆ: ಈಶ್ವರಪ್ಪ

    ಎಲೆಕ್ಷನ್ ಟಿಕೆಟ್ ಟಾಕ್:
    ಖಾದಿ ಎಂಪೋರಿಯಂನಲ್ಲಿ ಚುನಾವಣೆಗೆ ಟಿಕೆಟ್ ಬಗ್ಗೆ ಚರ್ಚೆ ನಡೆದಿದೆ. ಖಾದಿ ಎಂಪೋರಿಯಂ ಒಳಗೇ ಪ್ರತ್ಯೇಕವಾಗಿ ಹಾನಗಲ್ ಕ್ಷೇತ್ರದ ಉಪಚುನಾವಣೆ ಟಿಕೆಟ್ ಬಗ್ಗೆ ಸಿಎಂ ಜೊತೆ ಸಂಸದ ಶಿವಕುಮಾರ್ ಉದಾಸಿ ಮತ್ತು ಬಿಜೆಪಿ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಚರ್ಚಿಸಿದರು. ತಮ್ಮ ಪತ್ನಿಗೆ ಟಿಕೆಟ್ ಗಾಗಿ ಸಿಎಂ ಹಿಂದೆ ಬಿದ್ದಿರುವ ಸಂಸದ ಶಿವಕುಮಾರ್ ಉದಾಸಿ, ಮೂರ್ನಾಲ್ಕು ದಿನಗಳಿಂದ ಪದೇ ಪದೇ ಸಿಎಂ ಭೇಟಿಯಾಗುತ್ತಿದ್ದಾರೆ. ಇಂದು ವಿಧಾನಸೌಧದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಸಿಎಂ ಜೊತೆಯೇ ಇದ್ದರು. ನಾಳೆ ಅರುಣ್ ಸಿಂಗ್ ಬಂದ ಬಳಿಕ ಟಿಕೆಟ್ ಫೈನಲ್ ಆಗುವ ಹಿನ್ನೆಲೆಯಲ್ಲಿ ತಮ್ಮ ಪತ್ನಿಗೆ ಟಿಕೆಟ್ ಕೊಡಿಸುವ ಸಂಬಂಧ ಉದಾಸಿ ಲಾಬಿ ನಡೆಸುತ್ತಿದ್ದಾರೆ.