Tag: ಖಾತೆ ಬದಲಾವಣೆ

  • ರಾಜ್ಯದಲ್ಲಿ ಸಮರ್ಥ ಮಂತ್ರಿ ಮಂಡಲವಿದೆ: ಶ್ರೀ ರಾಮುಲು

    ರಾಜ್ಯದಲ್ಲಿ ಸಮರ್ಥ ಮಂತ್ರಿ ಮಂಡಲವಿದೆ: ಶ್ರೀ ರಾಮುಲು

    ಚಿತ್ರದುರ್ಗ: ಸಚಿವರ ಖಾತೆ ಬದಲಾವಣೆ ಮಾಡಿದಾಗ ಎಲ್ಲರಿಗೂ ಅಸಮಾಧಾನ ಇದ್ದೇ ಇರುತ್ತೇ ಎಂದು ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಹೇಳಿದರು.

    ಇಂದು ಚಿತ್ರದುರ್ಗದಲ್ಲಿ ಮಾತನಾಡಿದ ಅವರು, ಸಚಿವ ಮಾಧುಸ್ವಾಮಿ ಹಾಗೂ ಆನಂದ್ ಸಿಂಗ್ ಅವರ ಖಾತೆ ಬದಲಾವಣೆಯಿಂದಾಗಿ ಸರ್ಕಾರಕ್ಕೆ ಕಂಟಕ ಎದುರಾಗಬಹುದಾ ಎಂಬ ಪ್ರಶ್ನೆಗೆ, ಈ ವಿಚಾರವಾಗಿ ಸಚಿವರ ಜೊತೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮಾತನಾಡಲಿದ್ದಾರೆ. ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ಹೇಳಿದರು.

    ರಾಜ್ಯದ ಅಭಿವೃದ್ಧಿಗಾಗಿ ಸಮರ್ಥ ಮಂತ್ರಿ ಮಂಡಲ ರಚನೆ ಮಾಡುವ ಉದ್ದೇಶದಿಂದ ಸಿಎಂ ಯಡಿಯೂರಪ್ಪ ಕೆಲ ಸಚಿವರ ಖಾತೆ ಬದಲಾವಣೆ ಮಾಡಲಾಗಿದೆ. ಸಮರ್ಥರಾದವರಿಗೆ ಖಾತೆ ನೀಡುವುದರಿಂದ ದೇಶ ಬದಲಾವಣೆಯಾಗಲಿದೆ ಎಂದು ಸ್ಪಷ್ಟನೆ ನೀಡಿದರು.

    ಹಾಗೆಯೇ ಸಚಿವರ ಖಾತೆ ಬದಲಾವಣೆಯ ತೀರ್ಮಾನವನ್ನು ಸಿಎಂ ಬಿಎಸ್ ವೈ ಅವರೇ ಮಾಡಲಿದ್ದು, ಭಾರತೀಯ ಜನತಾ ಪಾರ್ಟಿಯಲ್ಲಿ ಯಾರಿಗೂ ಯಾವುದೇ ಅಸಮಾಧಾನವಿಲ್ಲ. ಸದ್ಯ ರಾಜ್ಯದಲ್ಲಿ ಸಮರ್ಥವಾದ ಮಂತ್ರಿ ಮಂಡಲವಿದೆ. ಮಾಧುಸ್ವಾಮಿ ಹಾಗೂ ಆನಂದ್ ಸಿಂಗ್ ಗೆ ಖಾತೆ ವಿಚಾರವಾಗಿ ಸಮಾಧಾನವಾಗಿದ್ದಾರೆ. ಅವರಿಗೆ ಈ ವಿಚಾರವಾಗಿ ಯಾವುದೇ ಅಸಮಾಧಾನವಿಲ್ಲ ಎಂದು ಸಿಎಂ ಮುಂದೆ ಹೇಳಿದ್ದಾರೆ ಎಂದು ತಿಳಿಸುವ ಮೂಲಕ ಸಚಿವ ಸಂಪುಟದ ಎಲ್ಲಾ ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದರು.

  • ಕೊರೊನಾ ನಿಯಂತ್ರಣ ವೈಫಲ್ಯದ ಕಳಂಕ ಕಟ್ಟಬೇಡಿ – ಶ್ರೀರಾಮುಲು ಬೇಸರ

    ಕೊರೊನಾ ನಿಯಂತ್ರಣ ವೈಫಲ್ಯದ ಕಳಂಕ ಕಟ್ಟಬೇಡಿ – ಶ್ರೀರಾಮುಲು ಬೇಸರ

    ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ದಿಢೀರ್ ಬೆಳವಣಿಗೆಯ ಪರಿಣಾಮ ಆರೋಗ್ಯ ಸಚಿವ ಶ್ರೀರಾಮುಲು ಅವರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

    ತನ್ನ ಖಾತೆ ಬದಲಾವಣೆ ಸಂಬಂಧ ಶ್ರೀರಾಮುಲು ಅವರು ನಿನ್ನೆ ರಾತ್ರಿಯೇ ಮುಖ್ಯಮಂತ್ರಿಗೆ ದೂರವಾಣಿ ಕರೆ ಮಾಡಿ ಚರ್ಚೆ ನಡೆಸಿದ್ದಾರೆ. ಇಂದು ಬೆಳಗ್ಗೆ ಭೇಟಿ ಮಾಡುವಂತೆ ಶ್ರೀರಾಮುಲುಗೆ ಸಿಎಂ ಹೇಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ನಿನ್ನೆ ರಾತ್ರಿ ಸಿಎಂ ಜೊತೆಗಿನ ದೂರವಾಣಿ ಕರೆ ವೇಳೆ ಬೇಸರ ಹೊರಹಾಕಿರುವ ಸಚಿವ, ಕೊರೊನಾ ನಿರ್ವಹಣೆಯಲ್ಲಿ ವಿಫಲನಾಗಿದ್ದೇನೆಂಬ ಹಣೆ ಪಟ್ಟಿ ಬರೋದು ಬೇಡ. ಈ ಸಂದರ್ಭದಲ್ಲಿ ಖಾತೆ ಬದಲಾವಣೆ ಮಾಡಬೇಡಿ. ಸ್ವಲ್ಪ ಸಮಯ ಕೊಡಿ, ನಾನೇ ಆರೋಗ್ಯ ಇಲಾಖೆ ಬಿಟ್ಟು ಕೊಡುತ್ತೇನೆ ಎಂದು ಸಿಎಂ ಬಳಿ ರಾಮುಲು ಮನವಿ ಮಾಡಿದ್ದಾರೆಂದು ತಿಳಿದುಬಂದಿದೆ. ಇದನ್ನೂ ಓದಿ: ದಿಢೀರ್ ಬೆಳವಣಿಗೆ – ರಾಮುಲು ಬಳಿಯಿದ್ದ ಆರೋಗ್ಯ ಖಾತೆಗೆ ಕತ್ತರಿ?, ಯಾರಿಗೆ ಯಾವ ಖಾತೆ?

    ಇಂದು ಬೆಳಗ್ಗೆ ಸಿಎಂ ಬಿಎಸ್‍ವೈ ಅವರನ್ನು ಖುದ್ದು ಭೇಟಿ ಮಾಡಿ ಚರ್ಚೆ ನಡೆಸಲಿದ್ದು, ಶ್ರೀರಾಮುಲು ಮನವೊಲಿಕೆ ಮಾಡ್ತಾರಾ ಸಿಎಂ ಬಿಎಸ್‍ವೈ? ಅಥವಾ ತಮ್ಮ ನಿರ್ಧಾರದಂತೆ ಖಾತೆ ಬದಲಾವಣೆ ಮಾಡ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ಒಟ್ಟಿನಲ್ಲಿ ಶ್ರೀರಾಮುಲು ಹಾಗೂ ಸಿಎಂ ಅವರ ಇಂದಿನ ಭೇಟಿ ತೀವ್ರ ಕುತೂಹಲ ಹುಟ್ಟಿದೆ. ಇದನ್ನೂ ಓದಿ: ಖಾತೆ ಅದಲು, ಬದಲಿಗೆ ಅಸಮಾಧಾನ – ರಾತ್ರಿಯೇ ಬೆಂಗ್ಳೂರಿಗೆ ಧಾವಿಸಿದ ರಾಮುಲು