Tag: ಖಳನಟ

  • ಕನ್ನಡದ ಕಂಚಿನ ಕಂಠದ ನಟ ವಸಿಷ್ಠ ಸಿಂಹ ನಟನೆಯ ‘ಓದೆಲಾ ರೇಲ್ವೇ ಸ್ಟೇಷನ್’ ತೆಲುಗು ಸಿನಿಮಾಗೆ ಪ್ರೇಕ್ಷಕ ಫಿದಾ

    ಕನ್ನಡದ ಕಂಚಿನ ಕಂಠದ ನಟ ವಸಿಷ್ಠ ಸಿಂಹ ನಟನೆಯ ‘ಓದೆಲಾ ರೇಲ್ವೇ ಸ್ಟೇಷನ್’ ತೆಲುಗು ಸಿನಿಮಾಗೆ ಪ್ರೇಕ್ಷಕ ಫಿದಾ

    ತೀಕ್ಷ್ಣ ನೋಟ, ಗಮನ ಸೆಳೆಯುವ ಅಭಿನಯ, ಕೇಳುಗರನ್ನು ಮಂತ್ರ ಮುಗ್ದರನ್ನಾಗಿ ಮಾಡುವ ಕಂಚಿನ ಕಂಠದ ಗಾಯಕ ಕಂ ನಾಯಕ ವಸಿಷ್ಠ ಸಿಂಹ ‘ಓದೆಲಾ ರೇಲ್ವೇ ಸ್ಟೇಷನ್’ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿರೋದು ಗೊತ್ತೇ ಇದೆ. ಈ ಚಿತ್ರ ಈಗ ಆಹಾ ಒಟಿಟಿಯಲ್ಲಿ ಬಿಡುಗಡೆಯಾಗಿದ್ದು, ಚಿಟ್ಟೆ ಅಭಿನಯಕ್ಕೆ ತೆಲುಗು ಸಿನಿ ಪ್ರೇಕ್ಷಕ ಫಿದಾ ಆಗಿದ್ದಾರೆ.

    ಈ ಸಿನಿಮಾದಲ್ಲಿ ವಸಿಷ್ಠ ಸಿಂಹ, ತಿರುಪತಿ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಧೋಬಿಯಾಗಿ ಮಿಂಚಿದ್ದಾರೆ. ಇದೂವರೆಗೂ ಮಾಡಿರದಂತಹ ವಿಶಿಷ್ಟ ಪಾತ್ರದಲ್ಲಿ ವಸಿಷ್ಠ ಅಮೋಘವಾಗಿ ಅಭಿನಯಿಸಿದ್ದು, ಚೊಚ್ಚಲ ತೆಲುಗು ಸಿನಿಮಾದಲ್ಲಿಯೇ ಸಿಂಹ ಗೆದ್ದಿದ್ದಾರೆ. ಈ ಚಿತ್ರದಲ್ಲಿ ವಸಿಷ್ಠ ನಾಯಕನಾಗಿಯೂ ಹಾಗೂ ಖಳನಾಯಕನಾಗಿ ಅಬ್ಬರಿಸಿದ್ದಾರೆ. ಅಂದಹಾಗೇ ‘ಓದೆಲಾ ರೇಲ್ವೇ ಸ್ಟೇಷನ್’ ನೈಜ ಘಟನೆಯಾಧಾರಿತ ಚಿತ್ರವಾಗಿದ್ದು, ಖರೀಮ್ ನಗರದಲ್ಲಿ ನಡೆದ ಘಟನೆಯೊಂದನ್ನು ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಯುವ ನಿರ್ದೇಶಕ ಅಶೋಕ್ ತೇಜ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಹೆಬಾ ಪಟೇಲ್ ವಸಿಷ್ಠನಿಗೆ ಜೋಡಿಯಾಗಿ ನಟಿಸಿದ್ದಾರೆ. ಇದನ್ನೂ ಓದಿ:ಅವಳು ನನ್ನನ್ನ ಯೂಸ್ ಮಾಡೋಕೆ ಟಿಶ್ಯೂ ಪೇಪರ್ ಅಲ್ಲ ಎನ್ನುವ ಮಾತಿಗೆ ಗಳಗಳನೆ ಅತ್ತ ಸಾನ್ಯ

    ಗಾಯಕನಾಗಿ ತೆಲುಗು ಚಿತ್ರಕ್ಕೆ ಪರಿಚಿತರಾಗಿದ್ದ ವಸಿಷ್ಠ ಸಿಂಹ ಈಗ ನಾಯಕನಾಗಿ ತೆಲುಗು ಸಿನಿಮಂದಿಯ ಹೃದಯ ಗೆದ್ದಿದ್ದಾರೆ. ಈ ಮೂಲಕ ತೆಲುಗು ನೆಲದಲ್ಲಿ ಗಾಯನದ ಜೊತೆಗೆ ಕಲಾ ಸೇವೆಯನ್ನೂ ಮುಂದುವರೆಸಲಿದ್ದಾರೆ. ಸದ್ಯ ವಸಿಷ್ಠ Love..ಲಿ, ಹೆಡ್ ಬುಷ್, ಸಿಂಬಾ, ತಲ್ವಾರ್ ಪೇಟೆ, ಡೇವಿಲ್ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಗೆಳತಿಯ ಜೊತೆ ‘ಪಂಚತಂತ್ರ’ ಖ್ಯಾತಿಯ ಖಳನಟ ಎಂಗೇಜ್

    ಗೆಳತಿಯ ಜೊತೆ ‘ಪಂಚತಂತ್ರ’ ಖ್ಯಾತಿಯ ಖಳನಟ ಎಂಗೇಜ್

    ಬೆಂಗಳೂರು: ಸ್ಯಾಂಡಲ್‍ವುಡ್‍ನಲ್ಲಿ ಕೊರೊನಾ ನಡುವೆಯೂ ಮದುವೆ ಸಂಭ್ರಮ ಜೋರಾಗಿ ನಡೆಯುತ್ತಿದೆ. ಇದೀಗ ಪ್ರತಿಭಾವಂತ ಖಳನಟ ರಾಜ್ ದೀಪಕ್ ಶೆಟ್ಟಿ ತಮ್ಮ ಬಹುಕಾಲದ ಗೆಳತಿಯ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

    ದಕ್ಷಿಣ ಭಾರತದ ಹೆಸರಾಂತ ಖಳನಟ ರಾಜ್ ದೀಪಕ್ ಶೆಟ್ಟಿ ತಮ್ಮ ಗೆಳತಿ ಸೋನಿಯಾ ರಾಡ್ರಿಗಸ್ ಜೊತೆ ಎಂಗೇಜ್ ಆಗಿದ್ದಾರೆ. ದೀಪಕ್ ಮದುವೆ ಮೇ 17ಕ್ಕೆ ನಿಗದಿಯಾಗಿತ್ತು. ಆದರೆ ಕೊರೊನಾ ಕಾರಣದಿಂದಾಗಿ ವಿವಾಹ ಸಮಾರಂಭವನ್ನು ಮುಂದೂಡಲಾಗಿತ್ತು. ಇದೀಗ ಜೂನ್‍ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

    ಮಂಗಳೂರಿನಲ್ಲಿ ರಾಜ್ ದೀಪಕ್ ಶೆಟ್ಟಿ ಮತ್ತು ಸೋನಿಯಾ ರಾಡ್ರಿಗಸ್ ಇವರ ನಿಶ್ಚಿತಾರ್ಥ ಸಮಾರಂಭ ನೆರವೇರಿದೆ. ಕುಟುಂಬದವರು ಮತ್ತು ಆಪ್ತ ಸ್ನೇಹಿತರು ಮಾತ್ರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಜೋಡಿಗೆ ಶುಭ ಹಾರೈಸಿದ್ದಾರೆ.

    ಸೋನಿಯಾ ರಾಡ್ರಿಗಸ್ ಇವೆಂಟ್ ಆರ್ಗನೈಸರ್ ಆಗಿದ್ದು, ಮಂಗಳೂರು ಫ್ಯಾಷನ್ ವೀಕ್‍ನ ಮಾಲಕಿ ಕೂಡ ಆಗಿದ್ದಾರೆ. ರಾಜ್ ದೀಪಕ್ ಶೆಟ್ಟಿ ಮತ್ತು ಸೋನಿಯಾ ಫೇಸ್ ಬುಕ್‍ನಲ್ಲಿ ಸ್ನೇಹಿತರಾಗಿ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ನಂತರ ಇಬ್ಬರು ತಮ್ಮ ಪ್ರೀತಿಯ ವಿಚಾರವನ್ನು ಮನೆಯಲ್ಲಿ ಹೇಳಿದ್ದಾರೆ. ಬಳಿಕ ಎರಡು ಮನೆಯವರು ಇವರ ಪ್ರೀತಿಗೆ ಒಪ್ಪಿಗೆ ಸೂಚಿಸಿ ನಿಶ್ಚಿತಾರ್ಥ ಮಾಡಿದ್ದಾರೆ.

    ಸದ್ಯಕ್ಕೆ ಅಕ್ಟೋಬರ್ ತಿಂಗಳಲ್ಲಿ ಮದುವೆ ಕಾರ್ಯಕ್ರಮವನ್ನು ಇಟ್ಟುಕೊಳ್ಳುವ ಯೋಚನೆ ಮಾಡಿದ್ದಾರೆ. ಅಕ್ಟೋಬರ್ 18 ರಂದು ದೀಪಕ್ ಶೆಟ್ಟಿ ಹುಟ್ಟುಹಬ್ಬ. ಹೀಗಾಗಿ ಅಂದಿನ ದಿನ ಮದುವೆಯಾಗಲಿದ್ದಾರೆ. ಸದ್ಯಕ್ಕೆ ಲಾಕ್‍ಡೌನ್‍ನಿಂದಾಗಿ ಸಿನಿಮಾ ಚಿತ್ರೀಕರಣ ಸಂಪೂರ್ಣ ಬಂದ್ ಆಗಿದೆ. ಹೀಗಾಗಿ ದೀಪಕ್ ರಾಜ್ ಮಂಗಳೂರಿನ ಸ್ವಗೃಹದಲ್ಲಿ ಕುಟುಂಬದೊಂದಿಗೆ ಕಾಲಕಳೆಯುತ್ತಿದ್ದಾರೆ.

    ರಾಜ್ ದೀಪಕ್ ಶೆಟ್ಟಿ ‘ಪಂಚತಂತ್ರ’, ‘ಗಡಿಯಾರ’, ‘ಭರ್ಜರಿ’, ‘ಕೋಟಿಗೊಬ್ಬ 3’, ಸೇರಿದಂತೆ 30ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡ ಮಾತ್ರವಲ್ಲದೇ ಎರಡು ತೆಲುಗು ಚಿತ್ರಗಳಲ್ಲಿ ನಟಿಸಿ ಹೆಸರು ಮಾಡಿದ್ದಾರೆ. ‘ಕೋಟಿಗೊಬ್ಬ-3’ ಸೇರಿದಂತೆ ದೀಪಕ್ ನಟನೆಯ ಕೆಲ ಸಿನಿಮಾಗಳೂ ರಿಲೀಸ್ ಆಗಬೇಕಿದೆ. ಈಗ ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ’ ಸಿನಿಮಾಗೆ ಆಯ್ಕೆ ಆಗಿದ್ದಾರೆ.

  • ಸಾವಿನಂಚಿನಲ್ಲಿದ್ದ ನಟ ಮತ್ತೆ ಬಣ್ಣ ಹಚ್ಚಿದ್ದಕ್ಕೆ ಕಾರಣ ಚಾಲೆಂಜಿಂಗ್ ಸ್ಟಾರ್!

    ಸಾವಿನಂಚಿನಲ್ಲಿದ್ದ ನಟ ಮತ್ತೆ ಬಣ್ಣ ಹಚ್ಚಿದ್ದಕ್ಕೆ ಕಾರಣ ಚಾಲೆಂಜಿಂಗ್ ಸ್ಟಾರ್!

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಷ್ಟದಲ್ಲಿರುವವರಿಗೆ ಸಹಾಯ ಮಾಡೋದರಲ್ಲಿ ಸದಾ ಮುಂದು. ಆದರೆ ಎಡಗೈಲಿ ಕೊಟ್ಟಿದ್ದು ಬಲಗೈಗೆ ಗೊತ್ತಾಗಬಾರದೆಂಬಂಥಾ ಸೂಕ್ಷ್ಮವಂತಿಕೆಯನ್ನೂ ಕೂಡಾ ಅವರು ಮೈಗೂಡಿಸಿಕೊಂಡಿದ್ದಾರೆ. ಯಾರಿಗೆ ಅದೆಷ್ಟೇ ಸಹಾಯ ಮಾಡಿದರೂ ತಾವಾಗೇ ಎಂದೂ ಹೇಳಿಕೊಳ್ಳುವ ಜಾಯಮಾನವೂ ಅವರದ್ದಲ್ಲ. ಆದರೆ, ಆಗಾಗ ದರ್ಶನ್ ಅವರ ದೊಡ್ಡತನಗಳು ಫಲಾನುಭವಿಗಳ ಕಡೆಯಿಂದಲೇ ಜಾಹೀರಾಗೋದಿದೆ. ಇದೀಗ ಅಂಥಾದ್ದೇ ಒಂದು ಮನಮಿಡಿಯುವ ವೃತ್ತಾಂತವನ್ನು ಹಿರಿಯ ಖಳನಟ ಭರತ್ ಅವರು ಹೇಳಿಕೊಂಡಿದ್ದಾರೆ.

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮಾನವೀಯ ಮನಸ್ಥಿತಿ, ಸಹಾಯಹಸ್ತದ ಗುಣವನ್ನು ತಮ್ಮ ಅನುಭವದ ಮೂಲಕವೇ ಭಹಿರಂಗಗೊಳಿಸಿರುವವರು ಹಿರಿಯ ಖಳನಟ ಭರತ್. ಈ ಬಣ್ಣದ ಲೋಕದಲ್ಲಿ ಅದೆಷ್ಟೇ ಮಿರುಗಿದವರಾದರೂ ಏಕಾಏಕಿ ಮರೆಯಾಗಿ ಬಿಟ್ಟರೆ ಜನ ಮರೆತು ಬಿಡುತ್ತಾರೆ. ಚಿತ್ರರಂಗದ ಮಂದಿಯೇ ತಮ್ಮ ಜೊತೆಗಿದ್ದ ಜೀವದ ಕಥೆ ಏನಾಯ್ತೆಂಬುದರ ಬಗ್ಗೆಯೂ ಆಲೋಚಿಸೋದಿಲ್ಲ. ತಲೆಗೆ ಸ್ಟ್ರೋಕ್ ಆಗಿದ್ದರಿಂದಾಗಿ ಬೇಡಿಕೆಯಲ್ಲಿರುವಾಗಲೇ ಮರೆಗೆ ಸರಿದಿದ್ದ ಭರತ್ ಕೂಡಾ ಅಂಥಾ ಅನೇಕ ಸಂಕಟಗಳನ್ನ ಅನುಭವಿಸಿದ್ದಾರೆ. ಹಾಸಿಗೆ ಹಿಡಿದ ಸಂದರ್ಭದಲ್ಲಿ ತಾವೇ ಸಹಾಯಕ್ಕಾಗಿ ಕೈ ಚಾಚಿದರೂ ಯಾರೋ ಮಾನವೀಯತೆ ತೋರಿಸದಿದ್ದರಿಂದಾಗಿ ಬದುಕಿದ್ದೂ ಸತ್ತಂಥಾ ಸ್ಥಿತಿಯಲ್ಲಿ ಒದ್ದಾಡಿದ್ದಾರೆ.

    ಹೀಗೆ ಯಾವ ಮನುಷ್ಯನೂ ತಲುಪ ಬಾರದ ಸ್ಥಿತಿಗಿಳಿದು ಇನ್ನೇನು ಸಾವಿನ ತೆಕ್ಕೆಗೆ ಶರಣಾಗಬೇಕೆಂಬಷ್ಟರಲ್ಲಿ ನಟ ಭರತ್ ಅವರತ್ತ ಸಹಾಯಹಸ್ತವೊಂದು ಚಾಚಿಕೊಂಡಿತ್ತು. ಅದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮಾನವೀಯ ನಡೆ!

    ಯಾವುದೇ ಪ್ರಚಾರವನ್ನೂ ಬಯಸದೇ ದರ್ಶನ್ ಹಿರಿಯ ಖಳನಟ ಭರತ್ ಅವರ ಚಿಕಿತ್ಸೆಗೆ ನೆರವಾಗಿದ್ದರು. ಇದರಿಂದಾಗಿಯೇ ಭರತ್ ಎಲ್ಲ ಥರದ ಚಿಕಿತ್ಸೆ ಪಡೆದು ಮೆಲ್ಲಗೆ ಚೇತರಿಸಿಕೊಂಡು ಮೇಲೆದ್ದು ನಿಂತಿದ್ದಾರೆ. ದರ್ಶನ್ ಅವರ ಸಹಾಯವೇ ಅವರಿಗೆ ಮರುಹುಟ್ಟು ನೀಡಿದೆ. ಹೀಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕರ್ಣನಂಥಾ ಗುಣವನ್ನು ನೆನಪಿಸಿಕೊಂಡಿರೋ ಭರತ್ ಟೈಗರ್ ಪ್ರಭಾಕರ್, ಮಾಲಾಶ್ರೀ, ಶಿವರಾಜ್ ಕುಮಾರ್ ಸೇರಿದಂತೆ ಘಟಾನುಘಟಿಗಳ ಚಿತ್ರಗಳಲ್ಲಿ ಖಳ ನಟನಾಗಿ ಅಬ್ಬರಿಸಿದ್ದವರು. ಥರ ಥರದ ಪಾತ್ರಗಳನ್ನು ನಿರ್ವಹಿಸುತ್ತಲೇ ಪ್ರತಿಭಾವಂತ ನಟನಾಗಿ ಕೈ ತುಂಬಾ ಅವಕಾಶಗಳನ್ನು ಪಡೆದುಕೊಂಡಿದ್ದವರು.

    ಅವರೀಗ ಅನಾರೋಗ್ಯದ ವನವಾಸ ಮುಗಿಸಿಕೊಂಡಿದ್ದಾರೆ. ಮತ್ತೆ ಹಳೆಯ ರೀತಿಯಲ್ಲಿ ದೇಹವನ್ನು ಹುರಿಗೊಳಿಸಿಕೊಂಡು ಜಲ್ಲಿಕಟ್ಟು ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಹೀಗೆ ತಾನು ಮರು ಹುಟ್ಟು ಪಡೆಯಲು ಕಾರಣವಾಗಿರೋ ದರ್ಶನ್ ಅವರನ್ನು ಕಂಡು ಮಾತಾಡಿಸಿ ಧನ್ಯವಾದ ಹೇಳಬೇಕೆಂಬ ಆಸೆ ಭರತ್ ಅವರದ್ದು.

  • 90ರ ದಶಕದ ಬಾಲಿವುಡ್ ಖಳನಟನ ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ

    90ರ ದಶಕದ ಬಾಲಿವುಡ್ ಖಳನಟನ ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ

    ಮುಂಬೈ: 90ರ ದಶಕದ ಬಾಲಿವುಡ್ ಖಳನಟ ಮಹೇಶ್ ಆನಂದ್ ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

    ಮಹೇಶ್ ಆನಂದ್ 80 ಹಾಗೂ 90ರ ದಶಕದಲ್ಲಿ ಹಿಂದಿ ಚಿತ್ರಗಳಲ್ಲಿ ಖಳನಟರಾಗಿ ಅಭಿನಯಿಸಿದ್ದಾರೆ. ಮಹೇಶ್ ಅವರ ಸಾವಿನ ವಿಷಯ ಅಧಿಕೃತವಾಗಿ ತಿಳಿದು ಬಂದಿಲ್ಲ. ಸದ್ಯ ಅವರ ಮೃತದೇಹವನ್ನು ಕೋಪರ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ನಂತರ ಇದು ಆತ್ಮಹತ್ಯೆಯೋ ಅಥವಾ ಸಹಜ ಸಾವೋ ಎಂಬುದು ತಿಳಿದು ಬರಲಿದೆ.

    ಮಹೇಶ್ ಆನಂದ್ ಮುಂಬೈನ ಮನೆಯಲ್ಲಿ ಒಬ್ಬರೇ ವಾಸಿಸುತ್ತಿದ್ದು, ಅವರ ಪತ್ನಿ ಮಾಸ್ಕೋದಲ್ಲಿ ವಾಸಿಸುತ್ತಿದ್ದಾರೆ. ವರದಿಗಳ ಪ್ರಕಾರ ಮಹೇಶ್ ಆರ್ಥಿಕವಾಗಿ ಕಷ್ಟಪಡುತ್ತಿದ್ದರು ಎಂದು ಹೇಳಲಾಗಿದೆ. ಸಂದರ್ಶನವೊಂದರಲ್ಲಿ ಮಹೇಶ್ ಅವರು, “ನನಗೆ 18 ವರ್ಷದಿಂದ ಯಾವುದೇ ಸಿನಿಮಾ ಆಫರ್ ಗಳು ಬರಲಿಲ್ಲ. ಕೆಲವು ಬಾರಿ ನಾನು ಊಟಕ್ಕಾಗಿ ವ್ರೆಸ್ಲಿಂಗ್ ಮ್ಯಾಚ್ ಆಡುತ್ತಿದೆ” ಎಂದು ಹೇಳಿಕೊಂಡಿದ್ದರು.

    ಮಹೇಶ್ ಕೊನೆಯದಾಗಿ ನಟ ಗೋವಿಂದ ಅವರ ‘ರಂಗೀಲಾ ರಾಜಾ’ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾ ಕಳೆದ ತಿಂಗಳು ಜನವರಿಯಲ್ಲಿ ಬಿಡುಗಡೆ ಆಗಿತ್ತು. ಈ ಸಿನಿಮಾ ಬಿಡುಗಡೆ ಆದ ನಂತರ ಮಹೇಶ್ ತಮ್ಮ ಫೇಸ್‍ಬುಕ್ ಖಾತೆಯಲ್ಲಿ, “18 ವರ್ಷಗಳ ನಂತರ ನನ್ನ ರಂಗೀಲಾ ರಾಜಾ ಸಿನಿಮಾ ಬಿಡುಗಡೆ ಆಗಿದೆ. ನಾನು ತುಂಬಾ ಖುಷಿ ಆಗಿದ್ದೇನೆ. ನಾನು ಆ ಸಿನಿಮಾದ ಕೊನೆಯಲ್ಲಿ ಕೇವಲ 6 ನಿಮಿಷ ನಟಿಸಿದ್ದೇನೆ. ನೀವು ನನ್ನನ್ನು ಮತ್ತೆ ಸ್ವಾಗತಿಸುತ್ತೀರಿ ಎಂದುಕೊಂಡಿದ್ದೇನೆ” ಎಂದು ಪೋಸ್ಟ್ ಮಾಡಿದ್ದರು.

    ಮಹೇಶ್ ಆನಂದ್ ಅವರು ಈ ಹಿಂದೆ ಕುರುಕ್ಷೇತ್ರ, ಸ್ವರ್ಗ್, ಕೂಲಿ ನಂ. 1, ವಿಜೇತ್, ಶೆಹೆನ್‍ಶಾ ಸೇರಿದಂತೆ ಹಲವು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಮಹೇಶ್ ಬಾಲಿವುಡ್ ಹಿರಿಯ ಕಲಾವಿದರಾದ ಧರ್ಮೆಂದ್ರ, ಸನ್ನಿ ಡಿಯೋಲ್, ಸಂಜಯ್ ದತ್, ಗೋವಿಂದ ಹಾಗೂ ಅಮಿತಾಬ್ ಬಚ್ವನ್ ಸೇರಿದಂತೆ ಹಲವು ಹಿಂದಿ ಸೂಪರ್ ಸ್ಟಾರ್‍ಗಳ ಜೊತೆ ನಟಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv