Tag: ಖಲಿಸ್ತಾನಿ ಭಯೋತ್ಪಾದಕ

  • ಖಲಿಸ್ತಾನಿ ಭಯೋತ್ಪಾದಕ ಹ್ಯಾಪಿ ಪಾಸಿಯಾ ಭಾರತಕ್ಕೆ ಹಸ್ತಾಂತರ ಪ್ರಕ್ರಿಯೆ ಶುರು

    ಖಲಿಸ್ತಾನಿ ಭಯೋತ್ಪಾದಕ ಹ್ಯಾಪಿ ಪಾಸಿಯಾ ಭಾರತಕ್ಕೆ ಹಸ್ತಾಂತರ ಪ್ರಕ್ರಿಯೆ ಶುರು

    – ಪಂಜಾಬ್‌ನಾದ್ಯಂತ 16 ಕಡೆ ಬಾಂಬ್‌ ಸ್ಫೋಟ ಪ್ರಕರಣ ಪ್ರಮುಖ ಆರೋಪಿ ಪಾಸಿಯಾ

    ನವದೆಹಲಿ: ಪಂಜಾಬ್‌ನಾದ್ಯಂತ ಕನಿಷ್ಠ 16 ಭಯೋತ್ಪಾದಕ ದಾಳಿಗಳ ಪ್ರಮುಖ ಆರೋಪಿ ಖಲಿಸ್ತಾನಿ ಉಗ್ರ (Khalistani Terrorist) ಹ್ಯಾಪಿ ಪಾಸಿಯಾನನ್ನು (Happy Passia) ಅಮೆರಿಕದಿಂದ ಭಾರತಕ್ಕೆ ಗಡೀಪಾರು ಮಾಡಲು ಪ್ರಕ್ರಿಯೆ ಶುರುವಾಗಿದೆ ಎಂದು ವಿಶ್ವಾಸಾರ್ಹ ಮೂಲಗಳು ತಿಳಿಸಿವೆ. ಭಾರತೀಯ ಭದ್ರತಾ ಸಂಸ್ಥೆಗಳಿಗೆ ಈ ಬಗ್ಗೆ ಮಾಹಿತಿ ಲಭಿಸಿದ್ದು, ಈ ಕಾರ್ಯಾಚರಣೆ ಯಶಸ್ವಿಗೊಳಿಸಲು ಶತ ಪ್ರಯತ್ನಗಳು ನಡೆಯುತ್ತಿವೆ.

    ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ISI) ಜೊತೆಗೆ ಮತ್ತು ಭಯೋತ್ಪಾದಕ ಗುಂಪು ಬಬ್ಬರ್ ಖಲ್ಸಾ ಇಂಟರ್ನ್ಯಾಷನಲ್ (BKI)ನಲ್ಲಿ ಗುರುತಿಸಿಕೊಂಡಿದ್ದ ಹ್ಯಾಪಿ ಪಾಸಿಯಾ 2016-17ರ ಸಮಯದಲ್ಲಿ ಪಂಜಾಬ್‌ನಾದ್ಯಂತ ನಡೆದ 16 ಬಾಂಬ್‌ ಸ್ಫೋಟಕ ಪ್ರಕರಣದ ಪ್ರಮುಖ ಆರೋಪಿ ಆಗಿದ್ದ. ಆ ಸಂದರ್ಭದಲ್ಲಿ ಗುರ್ದಾಸ್‌ಪುರ, ದಿನಾನಗರ ಮತ್ತು ಇತರ ಕಡೆಗಳಲ್ಲಿ ನಡೆದ ಗ್ರೆನೇಡ್ ದಾಳಿಗಳ ರುವಾರಿಯೂ ಈತನಾಗಿದ್ದ. ಈ ದಾಳಿಗಳು ಭಾರತದ ಭದ್ರತೆಗೆ ಧಕ್ಕೆಯನ್ನುಂಟುಮಾಡಿದ್ದವು. ಈತನ ವಿರುದ್ಧ ಭಾರತದಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ, ಮತ್ತು ಇಂಟರ್‌ಪೋಲ್‌ನಿಂದ ರೆಡ್ ಕಾರ್ನರ್ ನೋಟಿಸ್ ಕೂಡ ಜಾರಿಯಲ್ಲಿದೆ.

    ಮೂಲಗಳ ಪ್ರಕಾರ, ಅಮೆರಿಕ ಪಾಸಿಯಾನನ್ನು ಗುರುತಿಸಲಾಗಿದ್ದು, ಭಾರತೀಯ ಗುಪ್ತಚರ ಸಂಸ್ಥೆಗಳ ಸಹಕಾರದೊಂದಿಗೆ ಈತನನ್ನು ವಶಕ್ಕೆ ತೆಗೆದುಕೊಂಡಿವೆ. ಪಂಜಾಬ್‌ನ ಅಮೃತಸರದ ನಿವಾಸಿಯಾದ ಪಾಸಿಯಾನನ್ನು ಕಳೆದ ಏಪ್ರಿಲ್ 18 ರಂದು ಅಮೆರಿಕದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (FBI) ಮತ್ತು ICE ತಂಡಗಳು ಬಂಧಿಸಿರುವುದಾಗಿ FBI ನಿರ್ದೇಶಕ ಕಾಶ್ ಪಟೇಲ್ ತಿಳಿಸಿದ್ದರು. ಇದನ್ನೂ ಓದಿ: ಬಾಹ್ಯಾಕಾಶದಲ್ಲಿ ಶುಭಾಂಶು ಶುಕ್ಲಾರಿಂದ ಬೆಂಗಳೂರು ನೀರುಕರಡಿ ಪ್ರಯೋಗ ಪೂರ್ಣ

    ಇದೀಗ ಗಡೀಪಾರು ಪ್ರಕ್ರಿಯೆಯು ಈಗ ರಾಜತಾಂತ್ರಿಕ ಮತ್ತು ಕಾನೂನಾತ್ಮಕ ಹಂತದಲ್ಲಿ ಮುಂದುವರೆದಿದೆ. ಭಾರತ ಮತ್ತು ಅಮೆರಿಕ ನಡುವಿನ ಗಡೀಪಾರು ಒಪ್ಪಂದದ ಅಡಿಯಲ್ಲಿ ಈ ಕಾರ್ಯಾಚರಣೆ ನಡೆಯುತ್ತಿದ್ದು, ಶೀಘ್ರದಲ್ಲೇ ಈತನನ್ನು ಭಾರತಕ್ಕೆ ಕರೆತರುವ ಸಾಧ್ಯತೆ ಇದೆ. ಇದನ್ನೂ ಓದಿ: ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಕ್‌ ವಿರುದ್ಧ ಮೋದಿ ಕಟು ವಾಗ್ದಾಳಿ – ಬುದ್ಧನ ಶಾಂತಿ ತತ್ವ ಪ್ರತಿಪಾದಿಸಿದ ಪ್ರಧಾನಿ

    ಈ ಬೆಳವಣಿಗೆಯನ್ನು ಭಾರತೀಯ ಭದ್ರತಾ ಸಂಸ್ಥೆಗಳು ಒಂದು ಪ್ರಮುಖ ಯಶಸ್ಸಾಗಿ ಪರಿಗಣಿಸಿವೆ. ಹ್ಯಾಪಿ ಪಾಸಿಯಾನಂತಹ ಆರೋಪಿಗಳನ್ನು ನ್ಯಾಯಂಗದ ಮುಂದೆ ತಂದು ನಿಲ್ಲಿಸೋದು ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಪ್ರಮುಖ ಹೆಜ್ಜೆಯಾಗಿದೆ ಎಂದು ಭದ್ರತಾ ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಬ್ರಿಕ್ಸ್‌ ಅಮೆರಿಕ ವಿರೋಧಿ ಒಕ್ಕೂಟ – 10% ಹೆಚ್ಚುವರಿ ತೆರಿಗೆ ಹಾಕ್ತೀನಿ: ಟ್ರಂಪ್‌ ವಾರ್ನಿಂಗ್‌

  • ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ನಿಜ್ಜರ್ ಹತ್ಯೆ ಕೇಸ್‌ – ಕೆನಡಾದಲ್ಲಿ 4ನೇ ಭಾರತೀಯ ಪ್ರಜೆ ಬಂಧನ

    ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ನಿಜ್ಜರ್ ಹತ್ಯೆ ಕೇಸ್‌ – ಕೆನಡಾದಲ್ಲಿ 4ನೇ ಭಾರತೀಯ ಪ್ರಜೆ ಬಂಧನ

    ಒಟ್ಟಾವಾ: ಖಲಿಸ್ತಾನ್‌ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ (Hardeep Singh Nijjar) ಹತ್ಯೆಯಲ್ಲಿ ಪಾತ್ರವಹಿಸಿದ್ದ ನಾಲ್ಕನೇ ಭಾರತೀಯನನ್ನು ಕೆನಡಾ (Canada) ಅಧಿಕಾರಿಗಳು ಬಂಧಿಸಿದ್ದಾರೆ.

    ಕೆನಡಾದ ಬ್ರಾಂಪ್ಟನ್, ಸರ್ರೆ ಮತ್ತು ಅಬಾಟ್ಸ್‌ಫೋರ್ಡ್ ಪ್ರದೇಶಗಳ ನಿವಾಸಿ ಅಮರ್‌ದೀಪ್ ಸಿಂಗ್ (22) ವಿರುದ್ಧ ಕೊಲೆ ಮತ್ತು ಕೊಲೆಗೆ ಸಂಚು ರೂಪಿಸಿದ ಆರೋಪ ಹೊರಿಸಲಾಗಿದೆ. ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಭೀಕರ ಪ್ರವಾಹ – 330 ಜನರ ದುರ್ಮರಣ

    ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿನ ಪಾತ್ರಕ್ಕಾಗಿ ಅಮರದೀಪ್ ಸಿಂಗ್‌ನನ್ನು ಮೇ 11 ರಂದು ಬಂಧಿಸಲಾಯಿತು ಎಂದು IHIT ತಿಳಿಸಿದೆ. ದಾಖಲೆ ಇಲ್ಲದ ಬಂದೂಕು ಹೊಂದಿದ್ದ ಆರೋಪಕ್ಕಾಗಿ ಆತ ಈಗಾಗಲೇ ಪೀಲ್ ಪ್ರಾದೇಶಿಕ ಪೊಲೀಸರ ವಶದಲ್ಲಿದ್ದ.

    2023 ರ ಜೂನ್ 18 ರಂದು ಬ್ರಿಟಿಷ್ ಕೊಲಂಬಿಯಾದ ಸರ್ರೆಯ ಗುರುನಾನಕ್ ಸಿಖ್ ಗುರುದ್ವಾರದ ಹೊರಗೆ ಹರ್ದೀಪ್ ನಿಜ್ಜರ್ (45) ಹತ್ಯೆಯಾಗಿತ್ತು. IHIT ತನಿಖಾಧಿಕಾರಿಗಳು ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಸಂಬಂಧಿಸಿದಂತೆ ಮೂವರು ಭಾರತೀಯ ಪ್ರಜೆಗಳನ್ನು ಮೇ 3 ರಂದು ಬಂಧಿಸಿದ್ದಾರೆ. ಇದನ್ನೂ ಓದಿ: ಪಿಒಕೆ ನಿವಾಸಿಗಳ ಮೇಲೆ ಪಾಕ್ ದಬ್ಬಾಳಿಕೆ – ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ

    ಕರಣ್ ಬ್ರಾರ್ (22), ಕಮಲಪ್ರೀತ್ ಸಿಂಗ್ (22) ಮತ್ತು 28 ವರ್ಷದ ಕರಣ್‌ಪ್ರೀತ್ ಸಿಂಗ್ ಬಂಧಿತರು. ಎಲ್ಲಾ ಮೂರು ಆರೋಪಿಗಳು ಎಡ್ಮಂಟನ್‌ನಲ್ಲಿ ವಾಸಿಸುವ ಭಾರತೀಯ ಪ್ರಜೆಗಳಾಗಿದ್ದು, ಕೊಲೆ ಮತ್ತು ಕೊಲೆಗೆ ಸಂಚು ರೂಪಿಸಿದ ಆರೋಪ ಹೊತ್ತಿದ್ದಾರೆ.

  • ಭಾರತದ ವಿರುದ್ಧ ಉಗ್ರ ಚಟುವಟಿಕೆಗಳಲ್ಲಿ ಭಾಗಿ – ಖಲಿಸ್ತಾನಿ ಭಯೋತ್ಪಾದಕ ಪಾಕ್‌ನಲ್ಲಿ ಸಾವು

    ಭಾರತದ ವಿರುದ್ಧ ಉಗ್ರ ಚಟುವಟಿಕೆಗಳಲ್ಲಿ ಭಾಗಿ – ಖಲಿಸ್ತಾನಿ ಭಯೋತ್ಪಾದಕ ಪಾಕ್‌ನಲ್ಲಿ ಸಾವು

    ಇಸ್ಲಾಮಾಬಾದ್: ಖಲಿಸ್ತಾನಿ ಭಯೋತ್ಪಾದಕ (Khalistani Terrorist) ಲಖ್ಖೀರ್‌ ಸಿಂಗ್‌ ರೋಡ್‌ ಹೃದಯಾಘಾತದಿಂದ ಪಾಕಿಸ್ತಾನದಲ್ಲಿ ಸಾವನ್ನಪ್ಪಿದ್ದಾನೆ ಎಂದು ಗುಪ್ತಚರ ಸಂಸ್ಥೆಗಳ ಮೂಲಗಳು ತಿಳಿಸಿವೆ.

    ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆ ಅವರ ಸೋದರಳಿಯ ಖಲಿಸ್ತಾನಿ ಭಯೋತ್ಪಾದಕ ಲಖ್ಬೀರ್ ಸಿಂಗ್ ರೋಡ್ (72), ಭಿದ್ರಾನ್‌ವಾಲೆ ಸಾವಿನ ನಂತರ ಪಾಕಿಸ್ತಾನಕ್ಕೆ ಪಲಾಯನ ಮಾಡಿದ್ದ. ಡಿ.2 ರಂದು ಲಖ್ಖೀರ್‌ ಕೂಡ ಮೃತಪಟ್ಟಿದ್ದಾನೆ. ಇದನ್ನೂ ಓದಿ: ಗಾಜಾ ಸುರಂಗಗಳಲ್ಲಿ ಮಹಾ ಪ್ರವಾಹ ಸೃಷ್ಟಿಸಲು ಇಸ್ರೇಲ್‌ ಪ್ಲ್ಯಾನ್‌

    ಲಖ್ಖೀರ್‌ ಸಿಂಗ್‌ ರೋಡ್ (Lakhbir Singh Rode) ನಿಷೇಧಿತ ಸಂಘಟನೆ ‘ಖಲಿಸ್ತಾನ್ ಜಿಂದಾಬಾದ್ ಫೋರ್ಸ್’ ಮುಖ್ಯಸ್ಥನಾಗಿದ್ದ. ಭಾರತದ ವಿರುದ್ಧ ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ. ಗುಪ್ತಚರ ಸಂಸ್ಥೆಗಳ ಪ್ರಕಾರ, ಆತ ಲಾಹೋರ್‌ನಲ್ಲಿ ವಾಸಿಸುತ್ತಿದ್ದ.

    ಪಂಜಾಬ್‌ಗೆ ಡ್ರಗ್ಸ್, ಶಸ್ತ್ರಾಸ್ತ್ರಗಳು, ಸ್ಫೋಟಕಗಳು, ಬಾಂಬ್‌ಗಳನ್ನು ಕಳುಹಿಸುತ್ತಿದ್ದ ಎಂದು ಮೂಲಗಳು ತಿಳಿಸಿವೆ. ಈತ ರಾಜ್ಯದ ಪ್ರಮುಖ ವ್ಯಕ್ತಿಗಳ ಹತ್ಯೆಗೆ ಸಂಚು ರೂಪಿಸಿದ್ದ ಎಂದು ಶಂಕಿಸಲಾಗಿತ್ತು. ಒಮ್ಮೆ ಆತನನ್ನು ನೇಪಾಳದಲ್ಲಿ 20 ಕೆಜಿ ಸ್ಫೋಟಕ ಆರ್‌ಡಿಎಕ್ಸ್‌ನೊಂದಿಗೆ ಬಂಧಿಸಲಾಗಿತ್ತು. ಸ್ಫೋಟಕವನ್ನು ಪಾಕಿಸ್ತಾನದಿಂದ ತಂದಿದ್ದಾಗಿ ಪೊಲೀಸರಿಗೆ ತಿಳಿಸಿದ್ದ. ಇದನ್ನೂ ಓದಿ: ಭಾರತಕ್ಕೆ ಬೇಕಾಗಿದ್ದ ಉಗ್ರನಿಗೆ ಪಾಕ್‌ ಜೈಲಿನಲ್ಲೇ ವಿಷ ಪ್ರಾಶನ!

    ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಕ್ಟೋಬರ್‌ನಲ್ಲಿ ದಾಳಿ ನಡೆಸಿ ಪಂಜಾಬ್‌ನ ಮೊಗಾದಲ್ಲಿರುವ ಈತನ ಆಸ್ತಿಗಳನ್ನು ಜಪ್ತಿ ಮಾಡಿತ್ತು. 2021 ಮತ್ತು 2023 ರ ನಡುವೆ ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಕ್ಕಾಗಿ ರೋಡ್ ವಿರುದ್ಧದ ಆರು ಭಯೋತ್ಪಾದಕ ಪ್ರಕರಣಗಳಿಗೆ ಸಂಬಂಧಿಸಿದಂತೆ ದಾಳಿ ನಡೆಸಲಾಗಿತ್ತು.

  • ನ.19ಕ್ಕೆ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸಬೇಡಿ – ಖಲಿಸ್ತಾನಿ ಭಯೋತ್ಪಾದಕನ ಬೆದರಿಕೆ ವೀಡಿಯೋ

    ನ.19ಕ್ಕೆ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸಬೇಡಿ – ಖಲಿಸ್ತಾನಿ ಭಯೋತ್ಪಾದಕನ ಬೆದರಿಕೆ ವೀಡಿಯೋ

    ನವದೆಹಲಿ: ಖಲಿಸ್ತಾನಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಿಂದಾಗಿ ಭಾರತ ಮತ್ತು ಕೆನಡಾ ನಡುವಿನ ಸಂಬಂಧಗಳು ಹದಗೆಟ್ಟಿದೆ. ಇದೀಗ ಖಲಿಸ್ತಾನಿ ಭಯೋತ್ಪಾದಕ (Khalistani Terrorist) ಗುರುಪತ್ವಂತ್ ಸಿಂಗ್ ಪನ್ನುನ್ (Gurpatwant Singh Pannun) ಬೆದರಿಕೆ ವೀಡಿಯೋವೊಂದನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ನವೆಂಬರ್ 19 ರಂದು ಏರ್ ಇಂಡಿಯಾ ವಿಮಾನಗಳಲ್ಲಿ (Air India Flight) ಸಿಖ್ಖರು ಪ್ರಯಾಣಿಸದಂತೆ ಎಚ್ಚರಿಕೆ ನೀಡಿದ್ದಾನೆ.

    ಗುರುಪತ್ವಂತ್ ಪನ್ನುನ್‌ನ ಹೊಸ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದೆ. ನವೆಂಬರ್ 19 ರಂದು ನಿಮ್ಮ ಜೀವಕ್ಕೆ ಅಪಾಯವಿದೆ. ಏರ್ ಇಂಡಿಯಾ ವಿಮಾನಗಳಲ್ಲಿ ಸಿಖ್ ಸಮುದಾಯದ ಜನರು ಪ್ರಯಾಣಿಸಬೇಡಿ ಎಂದು ಎಚ್ಚರಿಕೆ ನೀಡಿದ್ದು, ಇದು ಏರ್ ಇಂಡಿಯಾ ವಿಮಾನಗಳ ಮೇಲೆ ದಾಳಿಯನ್ನು ಸೂಚಿಸುತ್ತದೆ.

    ವೈರಲ್ ಆಗಿರುವ ವೀಡಿಯೋದಲ್ಲಿ, ನಾವು ಸಿಖ್ ಜನರನ್ನು ನವೆಂಬರ್ 19 ರಂದು ಏರ್ ಇಂಡಿಯಾ ವಿಮಾನದ ಮೂಲಕ ಪ್ರಯಾಣಿಸಬೇಡಿ ಎಂದು ಕೇಳಿಕೊಳ್ಳುತ್ತೇವೆ. ಅಂದು ಜಾಗತಿಕ ದಿಗ್ಬಂಧನ ಇರುತ್ತದೆ. ನವೆಂಬರ್ 19 ರಂದು ಏರ್ ಇಂಡಿಯಾದಲ್ಲಿ ಪ್ರಯಾಣಿಸಬೇಡಿ, ಇಲ್ಲದಿದ್ದರೆ ನಿಮ್ಮ ಜೀವಕ್ಕೆ ಅಪಾಯವಿದೆ ಎಂದು ಖಲಿಸ್ತಾನಿ ಭಯೋತ್ಪಾದಕ ಹೇಳಿದ್ದಾನೆ. ಇದನ್ನೂ ಓದಿ: ಅರಣ್ಯ ಸಿಬ್ಬಂದಿ, ಬೇಟೆಗಾರರ ನಡುವೆ ಗುಂಡಿನ ಚಕಮಕಿ – ಓರ್ವ ಗುಂಡೇಟಿಗೆ ಬಲಿ

    ದೇಶವಿರೋಧಿ ಚಟುವಟಿಕೆಗಳಿಗಾಗಿ ಭಾರತದಲ್ಲಿ ಬೇಕಾಗಿರುವ ಗುರುಪತ್ವಂತ್ ಪನ್ನುನ್ ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ (ಐಜಿಐ) ವಿಮಾನ ನಿಲ್ದಾಣವನ್ನು ನವೆಂಬರ್ 19 ರಂದು ಮುಚ್ಚಿ, ಅದರ ಹೆಸರನ್ನು ಬದಲಾಯಿಸುವುದಾಗಿ ಹೇಳಿದ್ದಾನೆ. ಐಸಿಸಿ ವಿಶ್ವಕಪ್ 2023 ರ ಅಂತಿಮ ಪಂದ್ಯವೂ ಕೂಡಾ ಅದೇ ದಿನ ನಡೆಯಲಿದೆ. ಅಂದೇ ದಾಳಿಯ ಕುರಿತು ಪನ್ನುನ್ ವೀಡಿಯೋದಲ್ಲಿ ಸೂಚಿಸಿ ಎಚ್ಚರಿಕೆ ನೀಡಿದ್ದಾನೆ.

    ತನ್ನ ವಿರುದ್ಧ ಎಲ್ಲಾ ಬಂಧನ ವಾರಂಟ್‌ಗಳ ಹೊರತಾಗಿಯೂ ಪನ್ನುನ್ ಖಲಿಸ್ತಾನಿ ಅಜೆಂಡಾವನ್ನು ಮುಂದುವರಿಸುತ್ತೇನೆ ಎಂದು ಹೇಳಿದ್ದಾನೆ. ನಾವು ಭಾರತದ ಆರ್ಥಿಕ ವ್ಯವಸ್ಥೆಯ ಬೆನ್ನೆಲುಬನ್ನು ಮುರಿಯಲಿದ್ದೇವೆ ಎಂದಿದ್ದು ಮಾತ್ರವಲ್ಲದೇ ವಿಶ್ವಕಪ್ 2023 ಅನ್ನು ‘ವಿಶ್ವ ಭಯೋತ್ಪಾದಕ ಕಪ್’ ಎಂದು ಕರೆದಿದ್ದಾನೆ. ಇದನ್ನೂ ಓದಿ: ದೇಶದಲ್ಲಿ ಫಸ್ಟ್‌ – ಶಂಕಿತ ಉಗ್ರರ ಕಾಲಿಗೆ ಜಿಪಿಎಸ್‌ ಬಳೆ

    ಈ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ದಾಳಿ ನಡೆಸುವುದಾಗಿ ಭಯೋತ್ಪಾದಕ ಬೆದರಿಕೆ ಹಾಕಿದ್ದು, ಇಸ್ರೇಲ್-ಪ್ಯಾಲೆಸ್ತೀನ್ ಯುದ್ಧದ ರೀತಿಯ ಪರಿಸ್ಥಿತಿ ಭಾರತದಲ್ಲೂ ಉಂಟಾಗಬಹುದು ಎಂದು ಹೇಳಿದ್ದ.

  • ಭಯೋತ್ಪಾದಕರಿಗೆ ಕೆನಡಾದಲ್ಲಿ ಸುರಕ್ಷಿತ ನೆಲೆ ಸಿಕ್ಕಿದೆ: ಟ್ರುಡೊ ವಿರುದ್ಧ ಲಂಕಾ ಸಚಿವ ವಾಗ್ದಾಳಿ

    ಭಯೋತ್ಪಾದಕರಿಗೆ ಕೆನಡಾದಲ್ಲಿ ಸುರಕ್ಷಿತ ನೆಲೆ ಸಿಕ್ಕಿದೆ: ಟ್ರುಡೊ ವಿರುದ್ಧ ಲಂಕಾ ಸಚಿವ ವಾಗ್ದಾಳಿ

    ನವದೆಹಲಿ: ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ (Hardeep Singh Nijjar) ಹತ್ಯೆಯ ಕುರಿತು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ (Justin Trudeau) ಭಾರತದ ವಿರುದ್ಧ ನೀಡಿದ ಹೇಳಿಕೆ ಎರಡು ದೇಶಗಳ ರಾಜತಾಂತ್ರಿಕ ಬಿರುಕಿಗೆ ಕಾರಣವಾಗಿದೆ. ಕೆಲವು ಭಯೋತ್ಪಾದಕರಿಗೆ (Terrorist) ಕೆನಡಾದಲ್ಲಿ (Canada) ಸುರಕ್ಷಿತ ನೆಲೆ ಸಿಕ್ಕಿದೆ ಎಂದು ಶ್ರೀಲಂಕಾದ (Sri Lanka) ವಿದೇಶಾಂಗ ಸಚಿವ ಅಲಿ ಸೆಬ್ರಿ (Ali Sabry) ಹೇಳುವ ಮೂಲಕ ಭಾರತವನ್ನು ಬೆಂಬಲಿಸಿದ್ದಾರೆ.

    ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ವಿರುದ್ಧ ವಾಗ್ದಾಳಿ ನಡೆಸಿದ ಸೆಬ್ರಿ, ಭಯೋತ್ಪಾದಕರಿಗೆ ಕೆನಡಾದಲ್ಲಿ ಸುರಕ್ಷಿತ ನೆಲೆ ಸಿಕ್ಕಂತಾಗಿದೆ. ಕೆನಡಾದ ಪ್ರಧಾನಿ ಯಾವುದೇ ಆಧಾರಗಳಿಲ್ಲದೆ ಭಾರತದ ವಿರುದ್ಧ ಅತಿರೇಕದ ಆರೋಪಗಳನ್ನು ಮಾಡಿದ್ದಾರೆ ಎಂದು ಹೇಳಿದ್ದಾರೆ.

    ಭಾರತದ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಶ್ರೀಲಂಕಾದ ವಿರುದ್ಧವೂ ಹಿಂದೆ ಇದೇ ರೀತಿಯ ಆರೋಪಗಳನ್ನು ಮಾಡಿದ್ದರು. ಶ್ರೀಲಂಕಾದಲ್ಲಿ ಭಯಾನಕ ನರಮೇಧವಾಗಿತ್ತು ಎಂಬ ಹೇಳಿಕೆ ಸಂಪೂರ್ಣ ಸುಳ್ಳು. ನಮ್ಮ ದೇಶದಲ್ಲಿ ಅಂತಹ ಯಾವುದೇ ನರಮೇಧ ನಡೆದಿಲ್ಲ ಎಂಬುದು ಎಲ್ಲರಿಗೂ ತಿಳಿದಿದೆ ಎಂದು ಹೇಳಿದರು. ಇದನ್ನೂ ಓದಿ: ಜಾಗರೂಕರಾಗಿರಿ! – ಭಾರತದಲ್ಲಿರುವ ತನ್ನ ಪ್ರಜೆಗಳಿಗೆ ಕೆನಡಾ ಎಚ್ಚರಿಕೆ

    ಟ್ರುಡೊ 2ನೇ ಮಹಾಯುದ್ಧದ ಸಮಯದಲ್ಲಿ ಹಿಂದೆ ನಾಜಿಗಳೊಂದಿಗೆ ಸಂಬಂಧ ಹೊಂದಿದ್ದ ವ್ಯಕ್ತಿಯೊಬ್ಬರಿಗೆ ಅದ್ದೂರಿ ಸ್ವಾಗತ ನೀಡಿದ್ದರು. ಇದು ಪ್ರಶ್ನಾರ್ಹ ವಿಚಾರ. ಕೆಲವೊಮ್ಮೆ ಟ್ರುಡೊ ಅತಿರೇಕದ ಹಾಗೂ ಆಧಾರರಹಿತ ಆರೋಪಗಳನ್ನು ಮಾಡುವ ವಿಚಾರ ಹೊಸದೇನಲ್ಲ ಎಂದಿದ್ದಾರೆ. ಇದನ್ನೂ ಓದಿ: ಪ್ರತಿನಿತ್ಯ 3 ಸಾವಿರ ಕ್ಯೂಸೆಕ್‌ ನೀರು ಹರಿಸಿ – ಕರ್ನಾಟಕಕ್ಕೆ CWRC ಆದೇಶ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಿಜ್ಜರ್‌ನಿಂದ ಕೆನಡಾದಲ್ಲಿ ಶಸ್ತ್ರಾಸ್ತ್ರ ತರಬೇತಿ, ಭಾರತದಲ್ಲಿ ದಾಳಿಗೆ ಧನ ಸಹಾಯ: ಗುಪ್ತಚರ ದಾಖಲೆ

    ನಿಜ್ಜರ್‌ನಿಂದ ಕೆನಡಾದಲ್ಲಿ ಶಸ್ತ್ರಾಸ್ತ್ರ ತರಬೇತಿ, ಭಾರತದಲ್ಲಿ ದಾಳಿಗೆ ಧನ ಸಹಾಯ: ಗುಪ್ತಚರ ದಾಖಲೆ

    ನವದೆಹಲಿ: ಖಲಿಸ್ತಾನಿ ಭಯೋತ್ಪಾದಕ (Khalistani Terrorist) ಹರ್ದೀಪ್ ಸಿಂಗ್ ನಿಜ್ಜರ್‌ನ (Hardeep Singh Nijjar) ಹತ್ಯೆ ಭಾರತ ಮತ್ತು ಕೆನಡಾದ (Canada) ನಡುವೆ ಭಾರೀ ರಾಜತಾಂತ್ರಿಕ ಬಿರುಕಿಗೆ ಕಾರಣವಾಗಿದೆ. ನಿಜ್ಜರ್ ಕೆನಡಾದಲ್ಲಿ ಶಸ್ತ್ರಾಸ್ತ್ರ ತರಬೇತಿ, ಭಾರತದಲ್ಲಿನ ದಾಳಿಗಳಿಗೆ ಹಣ ಸಹಾಯ ಮಾಡುವಲ್ಲಿ ಸಕ್ರಿಯನಾಗಿದ್ದ ಎಂದು ಭಾರತೀಯ ಗುಪ್ತಚರ ಸಂಸ್ಥೆಗಳು (Indian Intelligence Agency) ಸಿದ್ಧಪಡಿಸಿದ ದಾಖಲೆಗಳು ತಿಳಿಸಿವೆ.

    ನಿಜ್ಜರ್ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐಯ ಸಹಾಯದಿಂದ ಪಾಕಿಸ್ತಾನದಲ್ಲಿ ತರಬೇತಿ ಪಡೆದು ಮತ್ತು ದೇಶದ ಇತರ ಖಲಿಸ್ತಾನಿ ನಾಯಕರೊಂದಿಗೆ ಸಂಪರ್ಕವನ್ನು ಹೊಂದಿದ್ದ. ಆತ ಪಂಜಾಬ್ ಮತ್ತು ಭಾರತದ ಇತರ ಭಾಗಗಳಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಧನಸಹಾಯ ಮಾಡಿದ್ದ ಎಂದು ದಾಖಲೆಯಲ್ಲಿ ಉಲ್ಲೇಖವಾಗಿದೆ.

    ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕರಲ್ಲಿ ಒಬ್ಬ ಹಾಗೂ ನಿಷೇಧಿತ ಖಲಿಸ್ತಾನ್ ಟೈಗರ್ ಫೋರ್ಸ್ (KTF) ಮುಖ್ಯಸ್ಥನಾಗಿದ್ದ ನಿಜ್ಜರ್‌ನನ್ನು ಜೂನ್ 18 ರಂದು ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದ ಸರ್ರೆಯಲ್ಲಿ ಗುರುದ್ವಾರದ ಹೊರಗೆ ಇಬ್ಬರು ಅಪರಿಚಿತರು ಗುಂಡಿಕ್ಕಿ ಕೊಂದರು.

    ಗುಪ್ತಚರ ದಾಖಲೆಯಲ್ಲೇನಿದೆ?: ನಿಜ್ಜರ್ ಖಲಿಸ್ತಾನಿ ಚಟುವಟಿಕೆಗಳನ್ನು ಯಾವುದೇ ಮುಲಾಜಿಲ್ಲದೆ ನಡೆಸುತ್ತಿದ್ದ. ಆತ ಕೆನಡಾದಲ್ಲಿ ಶಸ್ತ್ರಾಸ್ತ್ರ ತರಬೇತಿ ಶಿಬಿರಗಳನ್ನು ಆಯೋಜಿಸಿ, ಅಲ್ಲಿ ಆತ ಎಕೆ-47, ಸ್ನೈಪರ್ ರೈಫಲ್‌ಗಳು ಮತ್ತು ಪಿಸ್ತೂಲ್‌ಗಳಂತಹ ಬಂದೂಕುಗಳನ್ನು ಬಳಸಲು ತರಬೇತಿ ನೀಡುತ್ತಿದ್ದ.

    1996 ರಲ್ಲಿ ರವಿ ಶರ್ಮಾ ಎಂಬ ಹೆಸರಿನ ನಕಲಿ ಪಾಸ್‌ಪೋರ್ಟ್ ಬಳಸಿ ನಿಜ್ಜರ್ ಕೆನಡಾಕ್ಕೆ ಪರಾರಿಯಾಗಿದ್ದ ಮತ್ತು ಟ್ರಕ್ ಡ್ರೈವರ್ ಮತ್ತು ಪ್ಲಂಬರ್ ಆಗಿ ಕೆಲಸ ಮಾಡುತ್ತಿದ್ದ. ಆತ ಕೆನಡಾದಲ್ಲಿ ಹಿಂಸಾತ್ಮಕ ಭಾರತ ವಿರೋಧಿ ಪ್ರತಿಭಟನೆಗಳನ್ನು ಆಯೋಜಿಸಿದ್ದ ಮಾತ್ರವಲ್ಲದೇ ಭಾರತೀಯ ರಾಜತಾಂತ್ರಿಕರಿಗೆ ಬೆದರಿಕೆ ಹಾಕಿದ್ದರು. ಇದನ್ನೂ ಓದಿ: ಕಾವೇರಿ ಕಿಚ್ಚು – ಬೆಂಗಳೂರು ಬಂದ್‌ಗೆ ಸಿದ್ಧತೆ

    ಕೆನಡಾದಲ್ಲಿ ಸ್ಥಳೀಯ ಗುರುದ್ವಾರಗಳು ಆಯೋಜಿಸುವ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳದಂತೆ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳನ್ನು ನಿಷೇಧಿಸುವಂತೆ ಆತ ಕರೆ ನೀಡಿದ್ದ. ಆತನಿಗೆ ಕೆನಡಾಗೆ ವಲಸೆ ಹೋಗಲು ಸಹಾಯ ಮಾಡಿದ್ದ ಮಹಿಳೆಯನ್ನು ಮದುವೆಯಾಗಿದ್ದ. ಆದರೆ ಆ ಮಹಿಳೆ 1997ರಲ್ಲಿ ಕೆನಡಾಕ್ಕೆ ಆಗಮಿಸಿ ಬೇರೊಬ್ಬ ಪುರುಷನನ್ನು ವಿವಾಹವಾಗಿದ್ದಾಳೆ ಎಂಬುದನ್ನು ಅಧಿಕಾರಿಗಳು ಗಮನಿಸಿದ್ದಾರೆ ಹಾಗೂ ಆಕೆ ತನ್ನ ಅನುಕೂಲಕ್ಕಾಗಿ ಮದುವೆ ಹಕ್ಕನ್ನು ತಿರಸ್ಕರಿಸಿದ್ದಾಳೆ.

    2001 ರಲ್ಲಿ ನಿಜ್ಜರ್ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿ, ಸೋತಿದ್ದ. ಆತ ಬಳಿಕ 2007 ರಲ್ಲಿ ಕೆನಡಾದ ಪ್ರಜೆಯಾದ ಎಂದು ದಾಖಲೆಯಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: ಕಾವೇರಿ ಹೋರಾಟಕ್ಕೆ ಬೆಂಬಲಿಸಿ ಮಂಡ್ಯ ಚಿತ್ರಮಂದಿರಗಳು ಬಂದ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಭಾರತಕ್ಕೆ ವಿಶೇಷ ವಿನಾಯ್ತಿ ಏನಿಲ್ಲ – ಖಲಿಸ್ತಾನಿ ಉಗ್ರ ಹತ್ಯೆ ವಿವಾದದ ಕುರಿತು ಅಮೆರಿಕ ಹೇಳಿಕೆ

    ಭಾರತಕ್ಕೆ ವಿಶೇಷ ವಿನಾಯ್ತಿ ಏನಿಲ್ಲ – ಖಲಿಸ್ತಾನಿ ಉಗ್ರ ಹತ್ಯೆ ವಿವಾದದ ಕುರಿತು ಅಮೆರಿಕ ಹೇಳಿಕೆ

    ವಾಷಿಂಗ್ಟನ್‌: ಕೆನಡಾದಲ್ಲಿ ಖಲಿಸ್ತಾನಿ ಭಯೋತ್ಪಾದಕ (Khalistani Terrorist) ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪದ ನಂತರ ಭಾರತ ಹಾಗೂ ಕೆನಡಾ (India And Canada) ಮಧ್ಯೆ ರಾಜತಾಂತ್ರಿಕ ಬಿಕ್ಕಟ್ಟು ಸೃಷ್ಟಿಯಾಗಿದೆ. ಈ ಬೆನ್ನಲ್ಲೇ ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ (Jake Sullivan) ಕೆನಡಾ ಬೆಂಬಲಿಸಿ ಹೇಳಿಕೆ ನೀಡಿದ್ದಾರೆ.

    ಅಮೆರಿಕದ (USA) ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ ಈ ಬಗ್ಗೆ ಮಾತನಾಡಿದ್ದು, ಈ ವಿಷಯದ ಬಗ್ಗೆ ಈಗಾಗಲೇ ನಡೆದಿರುವ ಹಾಗೂ ನಡೆಯಲಿರುವ ಖಾಸಗಿ ರಾಜತಾಂತ್ರಿಕ ಮಾತುಕತೆಯ ನಡುವೆ ನಾನು ಮಧ್ಯಪ್ರವೇಶಿಸುವುದಿಲ್ಲ. ಈ ವಿಷಯ ಬಗ್ಗೆ ಭಾರತದ ಉನ್ನಮಟ್ಟದ ಅಧಿಕಾರಿಗಳೊಂದಿಗೆ ಸಂಪರ್ಕದಲಿದ್ದೇವೆ ಮತ್ತು ಇರುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಯಾವುದೇ ಕಾರಣಕ್ಕೂ ಭಾರತವನ್ನ ಪ್ರಚೋದಿಸುವುದಿಲ್ಲ; ತಣ್ಣಗಾದ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೋ

    ಇದೇ ವೇಳೆ ಯುಎಸ್‌ ಅಧ್ಯಕ್ಷ ಜೋ ಬೈಡನ್‌ (Joe Beden) ಅವರು ರಾಜತಾಂತ್ರಿಕ ವಿವಾದದ ಕುರಿತು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರೊಂದಿಗೆ ಮಾತನಾಡಲು ಉದ್ದೇಶಿಸಿದ್ದಾರೆಯೇ? ಎಂಬ ಪ್ರಶ್ನೆಗೆ ಉತ್ತರಿಸಿ, ಬೈಡನ್‌ ಆಡಳಿವು ಕೆನಡಾದ ಆರೋಪಗಳನ್ನ ಗಂಭೀರವಾಗಿ ತೆಗೆದುಕೊಂಡಿದೆ. ಒಟ್ಟಾವಾದೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಭಾರತ ವಿರೋಧಿ ಪ್ರಚಾರಕ್ಕೆ ಖಲಿಸ್ತಾನ್ ಉಗ್ರರ ಜೊತೆ ಕೈ ಜೋಡಿಸಿದ ಪಾಕ್

    ನಾವು ಕೆನಡಾದ ನಮ್ಮ ಸಹವರ್ತಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದೇವೆ. ಯಾವುದೇ ದೇಶದ ಹೊರತಾಗಿಯೂ ಮೊದಲು ನಮ್ಮ ಮೂಲ ತತ್ವಗಳನ್ನ ರಕ್ಷಿಸುತ್ತೇವೆ. ಕೆನಡಾದಂತಹ ಮಿತ್ರ ರಾಷ್ಟ್ರಗಳು ತಮ್ಮ ಕಾನೂನು ಜಾರಿಗೊಳಿಸಲು ಮತ್ತು ರಾಜತಾಂತ್ರಿಕ ಪ್ರಕ್ರಿಯೆಯನ್ನು ಮುಂದುವರಿಸುವಾಗ ನಾವು ಅವರೊಂದಿಗೆ ನಿಕಟ ಸಂಪರ್ಕದಲ್ಲಿರುತ್ತೇವೆ. ಅಲ್ಲದೇ ಈ ವಿಚಾರದಲ್ಲಿ ಭಾರತಕ್ಕೆ ವಿಶೇಷ ವಿನಾಯ್ತಿ ಏನೂ ಇಲ್ಲ. ಕೆನಡಾ ಆರೋಪದ ಕುರಿತು ತನಿಖೆ ಮುಂದುವರಿಸಲು ಮತ್ತು ಅಪರಾಧಿಗಳನ್ನ ಗಣನೆಗೆ ತೆಗದುಕೊಳ್ಳಲು ಬಯಸುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕೆನಡಾದಲ್ಲಿ ಗ್ಯಾಂಗ್‌ವಾರ್‌ – ಖಲಿಸ್ತಾನಿ ಭಯೋತ್ಪಾದಕ ಹತ್ಯೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]