Tag: ಖರೀದಿ

  • ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿದ್ದ ಮನೆಯನ್ನೇ ಖರೀದಿಸಿದ ನಟಿ ಅದಾ

    ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿದ್ದ ಮನೆಯನ್ನೇ ಖರೀದಿಸಿದ ನಟಿ ಅದಾ

    ಬಾಲಿವುಡ್ ನ ಖ್ಯಾತ ನಟ ಸುಶಾಂತ್ ಸಿಂಗ್ (Sushant Singh) ಆತ್ಮಹತ್ಯೆ ಮಾಡಿಕೊಂಡಿದ್ದ ಮನೆಯನ್ನೇ ಖರೀದಿಸಿದ್ದಾರೆ ನಟಿ ಅದಾ ಶರ್ಮಾ (Adah Sharma). ಈ ಮೂಲಕ ನೀವು ನನ್ನ ಹೃದಯದಲ್ಲಿ ಇದ್ದೀರಿ ಎನ್ನುವಂತಹ ಸಂದೇಶವನ್ನೂ ಅವರು ಕೊಟ್ಟಿದ್ದಾರೆ.

    ಯುವ ನಟ ಸುಶಾಂತ್ ಸಿಂಗ್ ಮುಂಬೈನ ಮೋಂಟ್ ಬ್ಲ್ಯಾಂಕ್ ಅಪಾರ್ಟ್ ಮೆಂಟ್ ನಲ್ಲಿ ವಾಸವಿದ್ದರು. 2020 ಜೂನ್ 14ರಂದು ಅದೇ ಅಪಾರ್ಟ್ ಮೆಂಟ್ ನ ರೂಮ್ ನಲ್ಲಿ ಅವರು ಆತ್ಮಹತ್ಯೆಗೆ ಶರಣಾಗಿದ್ದರು. ಅಲ್ಲಿಂದ ಆ ಫ್ಲ್ಯಾಟ್ (Flat) ಖಾಲಿಯೇ ಉಳಿದಿತ್ತು. ಸುಶಾಂತ್ ಸಿಂಗ್ ಆತ್ಮ ಅಲ್ಲಿದೆ ಎಂದೂ ಹಬ್ಬಿಸಲಾಗಿತ್ತು.

     

    ಮುಂಬೈನ  ಆ ಫ್ಲ್ಯಾಟ್ ನಾಲ್ಕು ಕೋಣೆಗಳನ್ನು ಹೊಂದಿದ್ದು, ಸಮುದ್ರಕ್ಕೆ ಮುಖ ಮಾಡಿದ ಮನೆಯಾಗಿದೆ. ಒಟ್ಟು 2500 ಸ್ಕ್ವೇರ್ ಫೀಟ್ ವಿಸ್ತೀರ್ಣ ಹೊಂದಿದೆ. ಇಲ್ಲಿಯೇ ಹಲವಾರು ವರ್ಷಗಳಿಂದ ಸುಶಾಂತ್ ಸಿಂಗ್ ವಾಸವಿದ್ದರು. ಸಾವಿನ ನಂತರ ಯಾರೂ ಈ ಮನೆಯಲ್ಲಿ ಉಳಿದುಕೊಳ್ಳಲು ಇಷ್ಟ ಪಟ್ಟಿರಲಿಲ್ಲ.

  • ದುಬಾರಿ ಬೆಲೆಗೆ ತಮ್ಮ ಫ್ಲ್ಯಾಟ್ ಮಾರಿದ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್

    ದುಬಾರಿ ಬೆಲೆಗೆ ತಮ್ಮ ಫ್ಲ್ಯಾಟ್ ಮಾರಿದ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್

    ಬಾಲಿವುಡ್ ಖ್ಯಾತ ನಟಿ ದಿ.ಶ್ರೀದೇವಿ ಪುತ್ರಿ ದುಬಾರಿ ಬೆಲೆಯ ಫ್ಲ್ಯಾಟ್ ಮಾರಿದ್ದಾರೆ. ಅದು ಬರೋಬ್ಬರಿ 44 ಕೋಟಿ ರೂಪಾಯಿಗೆ ಎನ್ನುವುದು ಅಚ್ಚರಿಯ ಸಂಗತಿ. ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ 2020ರಲ್ಲಿ ಮುಂಬೈನ ಜುಹೂನಲ್ಲಿ ಒಟ್ಟು ಮೂರು ಫ್ಲ್ಯಾಟ್ ಖರೀದಿಸಿದ್ದರಂತೆ. ಆಗ ಇವುಗಳ ಒಟ್ಟು ಬೆಲೆ 39 ಕೋಟಿ ಆಗಿತ್ತಂತೆ. ಇದೀಗ 5 ಕೋಟಿ ರೂಪಾಯಿ ಲಾಭ ಇಟ್ಟುಕೊಂಡು ಮೂರು ಫ್ಲ್ಯಾಟ್ ಗಳನ್ನು ಅವರು ಮಾರಿದ್ದಾರಂತೆ.

    ಜಾಹ್ನವಿ ಕಪೂರ್ ಕೂಡ ಹಲವಾರು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಒಂದೊಳ್ಳೆ ಸಂಭಾವನೆಯನ್ನೂ ಪಡೆಯುತ್ತಿದ್ದಾರಂತೆ. ಅಲ್ಲದೇ, ಅಪ್ಪ ಕೂಡ ಸಾಕಷ್ಟು ಶ್ರೀಮಂತ. ಹಾಗಾಗಿ ತಾವು ದುಡಿದ ಹಣದ ಜೊತೆಗೆ ತಂದೆಯೊಂದಿಗೂ ಒಂದಷ್ಟು ಹಣ ತಗೆದುಕೊಂಡಿದ್ದರಂತೆ. ಎಲ್ಲವನ್ನೂ ಒಟ್ಟಾಗಿಸಿ ಜುಹೂನಲ್ಲಿ ಇರುವ ಪ್ರತಿಷ್ಠಿತ ಅಪಾರ್ಟ್ಮೆಂಟ್ ನಲ್ಲಿ 14, 15 ಮತ್ತು 16ನೇ ಮಹಡಿಯಲ್ಲಿ ಮೂರು ಫ್ಲ್ಯಾಟ್ ಗಳನ್ನು ಅವರು ಖರೀದಿಸಿದ್ದರಂತೆ. ಇದನ್ನೂ ಓದಿ:ಕಿಚ್ಚ ಸುದೀಪ್- ರಕ್ಷಿತ್ ಶೆಟ್ಟಿ ನಡುವೆ ಏನಿದು ಕೋಲ್ಡ್ ವಾರ್!

    ಇದೀಗ ಜಾನ್ವಿ ಕಪೂರ್ ಫ್ಲ್ಯಾಟ್ ಅನ್ನು ಬಾಲಿವುಡ್ ನಟ ರಾಜ್ ಕುಮಾರ್ ರಾವ್ ಖರೀದಿಸಿದ್ದು, ಜುಲೈ 21ರಂದು ಮೂರು ಫ್ಲ್ಯಾಟ್ ಗಳನ್ನು ತಮ್ಮ ಹೆಸರಿಗೆ ರಿಜಿಸ್ಟ್ರೇಷನ್ ಮಾಡಿಸಿಕೊಂಡಿದ್ದಾರಂತೆ ನಟ. ಬರೋಬ್ಬರಿ 2.19 ಕೋಟಿ ರೂಪಾಯಿ ಅನ್ನು ಅವರು ಸ್ಟಾಂಪ್ ಡ್ಯೂಟಿ ಪಾವತಿಸಿದ್ದಾರಂತೆ. ಜೂಹೂನಲ್ಲಿ ಮನೆ ಹೊಂದಬೇಕು ಎನ್ನುವುದು ರಾಜ್ ಕುಮಾರ್ ರಾವ್ ಅವರ ಕನಸಾಗಿತ್ತಂತೆ. ಅದನ್ನು ಈಗ ನೆರವೇರಿಸಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ದಿಢೀರ್ ಭಾರೀ ಇಳಿಕೆಯಾಗಲಿದೆ ಫೋನ್ ಬೆಲೆ

    ದಿಢೀರ್ ಭಾರೀ ಇಳಿಕೆಯಾಗಲಿದೆ ಫೋನ್ ಬೆಲೆ

    ನವದೆಹಲಿ: ಅರ್ಜೆಂಟ್ ಆಗಿ ಮೊಬೈಲ್ ಕೊಳ್ಳುವ ಯೋಜನೆಯಲ್ಲಿ ನೀವಿದ್ದರೆ, ಈ ಪ್ಲ್ಯಾನ್ ಅನ್ನು ಸ್ವಲ್ಪ ದಿನಗಳ ವರೆಗೆ ಮುಂದೂಡುವುದು ನಿಮಗೂ ನಿಮ್ಮ ಜೇಬಿಗೂ ಒಳಿತಾಗುವ ಸಾಧ್ಯತೆ ಇದೆ. ಹಣಕಾಸು ವರ್ಷದ 2ನೇ ಅರ್ಧದಲ್ಲಿ ಮೊಬೈಲ್‌ಗಳ ಬೆಲೆ ಭಾರೀ ಕುಸಿಯುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

    ಸ್ಮಾರ್ಟ್ ಫೋನ್ ಕಂಪನಿಗಳು ಈಗಾಗಲೇ ಭಾರೀ ಪ್ರಮಾಣದಲ್ಲಿ ಮೊಬೈಲ್‌ಗಳ ಸ್ಟಾಕ್‌ಗಳನ್ನು ಇಟ್ಟುಕೊಂಡಿದ್ದು, ಮಾರಾಟವಾಗದೇ ಹಾಗೆಯೇ ಉಳಿದುಹೋಗುವ ಭೀತಿಯಲ್ಲಿವೆ. ಇನ್ನೇನು ಹಬ್ಬದ ಸೀಸನ್ ಹತ್ತಿರದಲ್ಲಿದ್ದು, ಇದರ ರಿಯಾತಿಯಿಯೊಂದಿಗೆ ಕಂಪನಿಗಳು ಸ್ಟಾಕ್‌ಗಳನ್ನು ಖಾಲಿ ಮಾಡಲು ಬೆಲೆಯನ್ನು ಕಡಿತಗೊಳಿಸುವ ಸಾಧ್ಯತೆ ಇದೆ ಎಂದು ತಜ್ಞರು ತಿಳಿಸಿದ್ದಾರೆ. ಇದನ್ನೂ ಓದಿ: ಇದೇ ವರ್ಷ ಬರಲಿದೆ ಇ-ಪಾಸ್‌ಪೋರ್ಟ್ – ಹೇಗಿರಲಿದೆ? ಕೆಲಸ ಹೇಗೆ?

    ಮಾಹಿತಿ ಪ್ರಕಾರ ದಸರಾ, ದೀಪಾವಳಿ ಹಬ್ಬಗಳ ಸಮಯದಲ್ಲಿ ಮೊಬೈಲ್ ಫೋನ್‌ಗಳ ಬೆಲೆ ಇಳಿಕೆಯಾಗಲಿದೆ. ಈ ಅವಕಾಶಗಳನ್ನು ಕಂಪನಿಗಳು ಕೂಡಾ ಬಳಸಿಕೊಳ್ಳಲು ಸಜ್ಜಾಗಿದ್ದು, ತಮಗೂ ಲಾಭವಾಗುವಂತೆ ಇಎಂಐ ಮೂಲಕ ವೆಬ್‌ಸೈಟ್ ಹಾಗೂ ಆಫ್‌ಲೈನ್ ಸ್ಟೋರ್‌ಗಳಲ್ಲಿ ಮಾರಾಟ ಮಾಡಲು ಮುಂದಾಗಿವೆ.

    ಹಳೆ ಸ್ಟಾಕ್‌ಗಳನ್ನು ಖಾಲಿ ಮಾಡುವ ಉದ್ದೇಶದಿಂದ ಕಂಪನಿಗಳಿಗೆ ರಿಯಾಯಿತಿ ದರದಲ್ಲಿ ಮಾರಾಟ ಮಾಡುವುದು ಒಂದೇ ಪರಿಹಾರವಾಗಿದ್ದು, ಹೀಗಾಗಿ ಕಂಪನಿಗಳು ಈ ಹಾದಿಯನ್ನೇ ತುಳಿಯುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ. ಇದನ್ನೂ ಓದಿ: ವಿದ್ಯುತ್ ದರ ಹೆಚ್ಚಳ ಇಲ್ಲ: ಸುನಿಲ್ ಕುಮಾರ್ ಸ್ಪಷ್ಟನೆ

    ಅಂಜಾಜಿನ ಪ್ರಕಾರ 5-8 ಕೋಟಿಯಷ್ಟು ಮೊಬೈಲ್‌ಗಳ ದಾಸ್ತಾನು ಇದ್ದು, ಇದನ್ನು ಆದಷ್ಟು ಬೇಗ ಖಾಲಿ ಮಾಡುವ ಅನಿವಾರ್ಯತೆಯೂ ಇದೆ. ಮುಂದಿನ ತಿಂಗಳಿನಿಂದ ಸಾಲು ಸಾಲು ಹಬ್ಬಗಳು ಪ್ರಾರಂಭವಾಗುವುದರಿಂದ ಚೀನಾ ಮೂಲದ ಕಂಪನಿಗಳು ಸೇರಿದಂತೆ ಹಲವು ಕಂಪನಿಗಳು ಭಾರತದ ಮಾರುಕಟ್ಟೆಗೆ ಸ್ಟಾಕ್‌ಗಳನ್ನು ಸುರಿಯಬಹುದು ಎಂದು ವರದಿಯಾಗಿದೆ.

    Live Tv

  • 16 ವರ್ಷದ ಬಳಿಕ 200 ಹೊಸ ವಿಮಾನ ಖರೀದಿಗೆ ಮುಂದಾದ ಏರ್ ಇಂಡಿಯಾ

    16 ವರ್ಷದ ಬಳಿಕ 200 ಹೊಸ ವಿಮಾನ ಖರೀದಿಗೆ ಮುಂದಾದ ಏರ್ ಇಂಡಿಯಾ

    ನವದೆಹಲಿ: ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾ 200ಕ್ಕೂ ಹೆಚ್ಚು ಹೊಸ ವಿಮಾನಗಳನ್ನು ಖರೀದಿಸಲು ಮುಂದಾಗಿದೆ. ಅವುಗಳಲ್ಲಿ ಶೇ.70 ರಷ್ಟು ಸಣ್ಣ ದೇಹವುಳ್ಳ ವಿಮಾನಗಳನ್ನು ಖರೀದಿಸಲು ಯೋಜಿಸಿದೆ ಎಂದು ವರದಿಗಳು ತಿಳಿಸಿವೆ.

    ಏರ್‌ಬಸ್ ಎ350 ಅಗಲ ದೇಹದ ಏರ್‌ಕ್ರಾಫ್ಟ್ ಖರೀದಿಗೆ ಏರ್‌ಇಂಡಿಯಾ ಯೋಜನೆ ನಡೆಸಿದ್ದರೂ ಇಲ್ಲಿಯವರೆಗೆ ಖರೀದಿಸಲಾಗಿಲ್ಲ. ಇದೀಗ ಚಿಕ್ಕ ಗಾತ್ರದ ವಿಮಾನಗಳನ್ನು ಕೊಳ್ಳಲು ಏರ್ ಇಂಡಿಯಾ ವಿಮಾನ ತಯಾರಕರೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ತಿಳಿಸಿವೆ. ಇದನ್ನೂ ಓದಿ: ಮತದಾನಕ್ಕೆ ಅನುಮತಿ ನೀಡಿ- ಸುಪ್ರೀಂ ಮೊರೆ ಹೋದ ಮಲಿಕ್, ದೇಶಮುಖ್

    ಏರ್ ಇಂಡಿಯಾ 2006ರಲ್ಲಿ ಕೊನೆಯದಾಗಿ 111 ವಿಮಾನಗಳನ್ನು ಖರೀದಿಸಿತ್ತು. ಅಮೆರಿಕ ಮೂಲದ ಬೋಯಿಂಗ್ ಕಂಪನಿಯಿಂದ 86 ವಿಮಾನಗಳು ಹಾಗೂ ಏರ್‌ಬಸ್‌ನಿಂದ 43 ವಿಮಾನಗಳನ್ನು ಖರೀದಿಸಿತ್ತು. ಇದೀಗ 16 ವರ್ಷಗಳ ಬಳಿಕ ಮೊದಲ ಬಾರಿ ವಿಮಾನಗಳನ್ನು ಕೊಳ್ಳಲು ಮುಂದಾಗಿದೆ. ಇದನ್ನೂ ಓದಿ: ಮುಸ್ಲಿಂ ಹುಡುಗಿಯರು 16ನೇ ವಯಸ್ಸಿನಲ್ಲಿ ಮದುವೆಯಾಗಬಹುದು: ಹೈಕೋರ್ಟ್

    ಕಳೆದ ವರ್ಷ ಅಕ್ಟೋಬರ್ 8 ರಂದು ಏರ್‌ಲೈನ್ಸ್ ಬಿಡ್ ಅನ್ನು ಟಾಟಾ ಗ್ರೂಪ್ ಯಶಸ್ವಿಯಾಗಿ ಗೆದ್ದು, ಈ ವರ್ಷ ಜನವರಿ 27 ರಂದು ಏರ್ ಇಂಡಿಯಾವನ್ನು ನಿಯಂತ್ರಣಕ್ಕೆ ತೆಗೆದುಕೊಂಡಿತು. ಇದೀಗ 200 ಹೊಸ ವಿಮಾನಗಳನ್ನು ಕೊಳ್ಳಲು ಮುಂದಾಗಿದ್ದು, ಅದರಲ್ಲಿ ಶೇ.70 ರಷ್ಟು ಚಿಕ್ಕ ವಿಮಾನಗಳು ಹಾಗೂ ಶೇ.30 ರಷ್ಟು ದೊಡ್ಡ ವಿಮಾನಗಳನ್ನು ಕೊಳ್ಳುವುದಾಗಿ ತಿಳಿಸಿದೆ.

    Live Tv

  • 2 ವರ್ಷಗಳ ಬಳಿಕದ ದಾಖಲೆ – ಅಕ್ಷಯ ತೃತೀಯದಂದು ಭರ್ಜರಿ ಸೇಲ್

    2 ವರ್ಷಗಳ ಬಳಿಕದ ದಾಖಲೆ – ಅಕ್ಷಯ ತೃತೀಯದಂದು ಭರ್ಜರಿ ಸೇಲ್

    ನವದೆಹಲಿ: ಕೋವಿಡ್ ಸಂದರ್ಭದಲ್ಲಿ ಕುಸಿದಿದ್ದ ಆಭರಣ ಮಾರುಕಟ್ಟೆ 2 ವರ್ಷಗಳ ಬಳಿಕ ಈ ಬಾರಿಯ ಅಕ್ಷಯ ತೃತೀಯದಂದು ಮತ್ತೆ ಚೇತರಿಸಿಕೊಂಡಿದೆ.

    ದೇಶಾದ್ಯಂತ 2 ವರ್ಷಗಳ ಬಳಿಕ 2022ರ ಅಕ್ಷಯ ತೃತೀಯದಂದು 15,000 ಕೋಟಿ ರೂ. ಮೌಲ್ಯದ ಆಭರಣ ಮಾರಾಟವಾಗಿದೆ. ಇದು ಕೋವಿಡ್‌ನಿಂದ ವಿಧಿಸಲಾದ ಲಾಕ್‌ಡೌನ್ ಬಳಿಕದ ಅತಿ ದೊಡ್ಡ ಆಭರಣ ವ್ಯವಹಾರವಾಗಿದೆ ಎಂದು ಅಖಿಲ ಭಾರತ ವ್ಯಾಪರಗಳ ಒಕ್ಕೂಟ(ಸಿಎಐಟಿ) ತಿಳಿಸಿದೆ. ಇದನ್ನೂ ಓದಿ: ವಾಣಿಜ್ಯ, ಸರ್ಕಾರಿ ಬಳಕೆದಾರರಿಗೆ ಟ್ವಿಟ್ಟರ್‌ನಲ್ಲಿ ಶುಲ್ಕ ಸಾಧ್ಯತೆ: ಮಸ್ಕ್

    ಕೋವಿಡ್ ವಕ್ಕರಿಸಿಕೊಳ್ಳುತ್ತಿದ್ದಂತೆಯೇ ದೇಶಾದ್ಯಂತ ಚಿನ್ನದ ಮಾರಾಟದಲ್ಲಿ ಶೇ.80 ರಷ್ಟು ಭಾರೀ ಇಳಿಕೆ ಕಂಡು ಬಂದಿತ್ತು. ಈ ಬಾರಿ ಕೋವಿಡ್ ಹಾವಳಿ ಕಡಿಮೆಯಿರುವುದರಿಂದ ಹಾಗೂ ಹಬ್ಬದ ಪ್ರಯುಕ್ತ ರಜೆ ಇದ್ದಿದ್ದರಿಂದ ಚಿನ್ನ ಖರೀದಿಗೆ ಜನರು ಮುಗಿ ಬಿದ್ದಿದ್ದಾರೆ. ದೇಶಾದ್ಯಂತ ಒಂದೇ ದಿನ ಬರೋಬ್ಬರಿ 30 ಟನ್ ಚಿನ್ನ ಮಾರಾಟವಾಗಿದೆ.

    2 ತಿಂಗಳ ಹಿಂದೆ ಚಿನ್ನದ ಬೆಲೆ 55,000 ದಿಂದ 58,000 ರೂ. ವರೆಗೂ ತಲುಪಿತ್ತು. ಇದೀಗ ಚಿನ್ನದ ಬೆಲೆ 50,000 ರೂ.ಗೆ ಇಳಿಕೆಯಾಗಿರುವುದರಿಂದ ಹಾಗೂ ಇದು ಮದುವೆ ಸಮಾರಂಭಗಳಂತಹ ಸಮಯವಾಗಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಚಿನ್ನಾಭರಣ ಮಾರಟವಾಗಿದೆ ಎಂದು ಸಿಎಐಟಿ ಕಾರ್ಯದರ್ಶಿ ಪ್ರವೀಣ್ ಖಂಡೇವಾಲ್ ತಿಳಿಸಿದ್ದಾರೆ. ಇದನ್ನೂ ಓದಿ: ಬಿಸಿಲಿನ ತಾಪಕ್ಕೆ 25 ಬಲಿ, 100ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ

    ರಾಜ್ಯದಲ್ಲೂ ಭಾರೀ ಮಾರಾಟ:
    ಕರ್ನಾಟಕದಲ್ಲೂ ಅಕ್ಷಯ ತೃತೀಯ ಅಂಗವಾಗಿ ಜನರು ಚಿನ್ನಾಭರಣ ಖರೀದಿಗೆ ಮುಗಿಬಿದ್ದಿದ್ದಾರೆ. ಮಂಗಳವಾರ ಒಂದೇ ದಿನ ಸುಮಾರು 1,680 ಕೋಟಿ ರೂ. ವ್ಯವಹಾರ ನಡೆದಿದೆ. ಬೆಂಗಳೂರಿನಲ್ಲಿ 650 ಕೋಟಿ ರೂ. ವ್ಯಾಪಾರ ನಡೆದಿದೆ ಎಂದು ಕರ್ನಾಟಕ ಜ್ಯುವೆಲ್ಲರ್ಸ್ ಫೆಡರೇಷನ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಡಾ. ಜಿ ರಾನಚಾರಿ ತಿಳಿಸಿದ್ದಾರೆ.

  • ಪಾಕಿಸ್ತಾನದಲ್ಲಿ ಗನ್ ತರಿಸಿಕೊಳ್ಳುವುದು ಪಿಜ್ಜಾ ಆರ್ಡರ್ ಮಾಡಿದಷ್ಟೇ ಸುಲಭ!

    ಪಾಕಿಸ್ತಾನದಲ್ಲಿ ಗನ್ ತರಿಸಿಕೊಳ್ಳುವುದು ಪಿಜ್ಜಾ ಆರ್ಡರ್ ಮಾಡಿದಷ್ಟೇ ಸುಲಭ!

    ಇಸ್ಲಾಮಾಬಾದ್: ಸಾಮಾಜಿಕ ಮಾಧ್ಯಮದ ಮೂಲಕ ಗನ್‍ಗಳನ್ನು ತರಿಸಿಕೊಳ್ಳಬಹುದು ಹಾಗೂ ಈ ಸೇವೆ ಪಾಕಿಸ್ತಾನದಾದ್ಯಂತ ಚಾಲ್ತಿಯಲ್ಲಿದೆ ಎಂಬ ಆಘಾತಕಾರಿ ವಿಷಯವನ್ನು ಖಾಸಗಿ ಸುದ್ದಿ ವಾಹಿನಿಯೊಂದು ವರದಿ ಮಾಡಿದೆ.

    ಹೌದು, ಪಾಕಿಸ್ತಾನದಲ್ಲಿ ಗನ್‍ಗಳನ್ನು ಪಿಜ್ಜಾ ಆರ್ಡರ್ ಮಾಡಿದಷ್ಟೇ ಸುಲಭವಾಗಿ ತರಿಸಿಕೊಳ್ಳಬಹುದು ಎಂದು ತಿಳಿದು ಬಂದಿದೆ. ವರದಿಗಳ ಪ್ರಕಾರ ಪಾಕಿಸ್ತಾನದಲ್ಲಿ ಜನರು ಸಾಮಾಜಿಕ ಮಾಧ್ಯಮದ ಮೂಲಕ ತಮಗಿಷ್ಟದ ಗನ್‍ಗಳನ್ನು ಆಯ್ಕೆ ಮಾಡಿ, ವಿತರಕರಿಗೆ ಫೋನ್ ಕರೆ ಮಾಡಿ, ಬೆಲೆಯ ಬಗ್ಗೆ ಚರ್ಚಿಸಿ, ಅಡ್ವಾನ್ಸ್ ನೀಡಿದರಾಯ್ತು. ಕೆಲವೇ ದಿನಗಳಲ್ಲಿ ಆರ್ಡರ್ ಮಾಡಿದ ವ್ಯಕ್ತಿಯ ಮನೆ ಮುಂದೆ ಗನ್ ಹಾಜರಿರುತ್ತದೆ. ಇದನ್ನೂ ಓದಿ: ರಾಷ್ಟ್ರಧ್ವಜವನ್ನು ತಲೆಕೆಳಗಾಗಿ ಹಾರಿಸಿದ ಕೇರಳ ಸಚಿವ – ರಾಜೀನಾಮೆಗೆ ಬಿಜೆಪಿ ಆಗ್ರಹ

    ಈ ವಹಿವಾಟು ರಹಸ್ಯವಾಗಿ ನಡೆಯುತ್ತದೆ ಎಂದು ಜನರು ಭಾವಿಸಬಹುದು. ಆದರೆ ಈ ಪ್ರಕ್ರಿಯೆಗಳು ಫೇಸ್‍ಬುಕ್ ಹಾಗೂ ವಾಟ್ಸಪ್‍ಗಳಲ್ಲೇ ಯಾವುದೇ ಮುಚ್ಚು ಮರೆ ಇಲ್ಲದೆ ನಡೆಯುತ್ತದೆ ಎನ್ನುವುದು ಆಘಾತಕಾರಿ ವಿಷಯ.

    ಗನ್ ಅನ್ನು ತರಿಸಿಕೊಂಡ ಪಾಕ್ ಪ್ರಜೆಯೊಬ್ಬ ಈ ರಹಸ್ಯವನ್ನು ಸುದ್ದಿ ಮಾಧ್ಯಮಕ್ಕೆ ತಿಳಿಸಿದ್ದಾನೆ. 38 ಸಾವಿರ ರೂ.ಯ ಗನ್ ತರಿಸಿಕೊಳ್ಳಲು ವಿತರಕ ಯಾವುದೇ ಪರವಾನಗಿಯನ್ನೂ ಕೇಳಿರಲಿಲ್ಲ. ಫೋನ್ ಮೂಲಕವೇ ಸಂಪೂರ್ಣ ವ್ಯವಹಾರ ನಡೆದಿದ್ದು, 10 ಸಾವಿರ ರೂ.ಯನ್ನು ಮುಂಗಡ ಪಾವತಿಯಾಗಿ ನೀಡಿದ್ದ. ಗನ್ ಆತನ ಕೈಗೆ ತಲುಪಿದ ಬಳಿಕ ಉಳಿದ ಹಣವನ್ನು ಪಾವತಿ ಮಾಡಿದ್ದಾಗಿ ತಿಳಿಸಿದ್ದಾನೆ. ಇದನ್ನೂ ಓದಿ: ಋತುಸ್ರಾವದ ರಕ್ತ ಸೇವಿಸುತ್ತೇನೆ, ಫೇಸ್ ಮಾಸ್ಕ್‌ ಆಗಿ ಬಳಸುತ್ತೇನೆ

    ಕರಾಚಿಯಲ್ಲಿ ಅತ್ಯಂತ ಸುಲಭವಾಗಿ ಗನ್ ಖರೀದಿಸುವ ಜಾಲಗಳಿವೆ ಎಂಬುದು ತಿಳಿದು ಬಂದಿದೆ. ಶಸ್ತ್ರಾಸ್ತ್ರ ವಿತರಕರ ಹಾಗೂ ಅದನ್ನು ತಲುಪಿಸುವವರ ಪ್ರತ್ಯೇಕ ಎರಡು ನೆಟ್ವರ್ಕ್‍ಗಳು ಇವೆ. ಶಸ್ತ್ರಾಸ್ತ್ರ ಪ್ರಕಾರಗಳ ಆಯ್ಕೆಯಲ್ಲಿ ಯಾವುದೇ ರೀತಿಯ ಮಿತಿಗಳಿಲ್ಲ. 9 ಎಂಎಂ ಪಿಸ್ತುಲ್‍ನಿಂದ ಹಿಡಿದು ಎಕೆ-47 ವರೆಗಿನ ಎಲ್ಲಾ ರೀತಿಯ ಅಸ್ತ್ರಗಳು ಮಾರಾಟವಾಗುತ್ತವೆ ಎಂದು ವರದಿಗಳು ತಿಳಿಸಿವೆ.

  • ರೈತರಿಂದ ಹಣ್ಣುಗಳನ್ನು ಖರೀದಿಸಿ ಸೋಂಕಿತರಿಗೆ ನೀಡಿದ ಉದ್ಯಮಿ

    ರೈತರಿಂದ ಹಣ್ಣುಗಳನ್ನು ಖರೀದಿಸಿ ಸೋಂಕಿತರಿಗೆ ನೀಡಿದ ಉದ್ಯಮಿ

    ಕೊಪ್ಪಳ: ಹಣ್ಣುಗಳನ್ನು ಬೆಳೆದು ಮಾರಾಟ ಮಾಡಲು ಆಗದ ರೈತರಿಂದ ಹಣ್ಣುಗಳನ್ನು ಖರೀದಿಸಿ ಉಚಿತವಾಗಿ ಉದ್ಯಮಿ ಕಳಕನಗೌಡ್ರು ಕೊರೊನಾ ಸೋಂಕಿತರಿಗೆ ನೀಡುತ್ತಿದ್ದಾರೆ.

    ಹಣ್ಣುಗಳನ್ನು ಬೆಳೆದು ಮಾರಾಟ ಮಾಡಲು ಆಗದ ರೈತರಿಂದ ಹಣ್ಣುಗಳನ್ನು ಖರೀದಿಸಿ ಇದೇ ಹಣ್ಣುಗಳನ್ನು ಗ್ರಾಮ ಗ್ರಾಮಗಳಿಗೆ ಹಂಚುತ್ತಿದ್ದಾರೆ. ಬಸವ ಜಯಂತಿಯಿಂದ ಆರಂಭಿಸಿ ಇಲ್ಲಿಯವರೆಗೂ ಹಣ್ಣುಗಳನ್ನು ವಿತರಿಸುತ್ತಿದ್ದಾರೆ. ಮೂಲತಃ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಕಲ್ಲೂರು ಗ್ರಾಮದವರಾಗಿರುವ ಕಳಕನಗೌಡ ಕಲ್ಲೂರು ಅವರ ಈ ಕಾರ್ಯಕ್ಕೆ ಎಲ್ಲರೂ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ: ಹೆಸರಿಟ್ಟು ಮುದ್ದು ಮಗನನ್ನು ಪರಿಚಯಿಸಿದ ಗಾಯಕಿ ಶ್ರೇಯಾ ಘೋಷಾಲ್

    ಕೃಷಿಯೊಂದಿಗೆ ಗ್ರಾನೈಟ್ ಉದ್ಯಮ ಮಾಡುತ್ತಿರುವ ಕಳಕನಗೌಡರು ವೀರಶೈವ ಪಂಚಮಸಾಲಿ ಸಮಾಜದ ಅಧ್ಯಕ್ಷರಾಗಿದ್ದಾರೆ. ಬಿಜೆಪಿ ಜಿಲ್ಲಾ ರೈತ ಮೋರ್ಚ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ. ಮಹಾಮಾರಿ ಕೊರೊನಾ ಅಬ್ಬರಿಸಲು ಆರಂಭವಾಗಿರುವ ಹಿನ್ನಲೆಯಲ್ಲಿ ಜನತಾ ಕಫ್ರ್ಯೂ, ಲಾಕ್‍ಡೌನ್ ಜಾರಿಯಾಗಿದೆ. ಈ ಸಂದರ್ಭದಲ್ಲಿ ಹಣ್ಣು ಬೆಳೆದ ಬೆಳೆಗಾರರು ಹಣ್ಣುಗಳ ಮಾರಾಟ ಮಾಡಲು ಪರದಾಡುತ್ತಿದ್ದಾರೆ. ಇದನ್ನೂ ಓದಿ: ಲಾಕ್‍ಡೌನ್ ಬಗ್ಗೆ ಜೂನ್ 5ರಂದು ಸಿಎಂ ತೀರ್ಮಾನ ಮಾಡ್ತಾರೆ: ಬೊಮ್ಮಾಯಿ

    ಬೆಳೆಗಾರರ ಬಳಿ ಕಳಕನಗೌಡರು ಹಣ್ಣುಗಳನ್ನು ಖರೀದಿಸಿ ಇದೇ ಹಣ್ಣುಗಳನ್ನು ಹಳ್ಳಿ ಹಳ್ಳಿಗೆ ಹಂಚುತ್ತಿದ್ದಾರೆ. ಬಾಳೆ, ಮಾವು, ಅನಾನಸ್ ಸೇರಿದಂತೆ ವಿವಿಧ ಹಣ್ಣುಗಳು ತೋಟದಲ್ಲಿಯೇ ಮಾರಾಟ ಮಾಡಲು ಆಗದೆ ಇರುವ ರೈತರು ಸಂಪರ್ಕಿಸಿದರೆ ಅಲ್ಲಿರುವ ಹಣ್ಣುಗಳನ್ನು ಖರೀದಿಸಿ ಗ್ರಾಮ ಗ್ರಾಮಗಳಿಗೆ ಹಂಚುತ್ತಿದ್ದಾರೆ. ಇಂದು ಕೊಪ್ಪಳ ಗವಿಮಠಕ್ಕೆ ರೈತರಿಂದ ಖರೀದಿಸಿ ಬಾಳೆ ಹಾಗು ಮಾವಿನ ಹಣ್ಣನ್ನು ಸಮರ್ಪಿಸಿದರು, ಕೊಪ್ಪಳ ಗವಿಮಠದಿಂದ 300 ಜನರಿಗೆ ಸೋಂಕಿತರಿಗಾಗಿ ಆರಂಭಿಸಿರುವ ಕೊರೊನಾ ಆಸ್ಪತ್ರೆ, ಕೇರ್ ಸೆಂಟರ್ ಮತ್ತು ಮಠದಿಂದ ನಗರದ ವಿವಿಧೆಡೆ ವಿತರಿಸಲು ಎರಡು ವಾಹನಗಳಲ್ಲಿ ಹಣ್ಣುಗಳನ್ನು ನೀಡಿದ್ದಾರೆ. ಸಂಕಷ್ಟ ಸಂದರ್ಭದಲ್ಲಿ ನೆರವಾಗಬೇಕು ಎನ್ನುವ ಕಾರಣಕ್ಕೆ ಹಣ್ಣುಗಳನ್ನು ಖರೀದಿಸಿ ಜನರಿಗೆ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ.

  • ವಿದೇಶದಲ್ಲಿ ದುಬಾರಿ ಕಾರ್ ಖರೀದಿ ಮಾಡಿದ ಸೀರಿಯಲ್ ನಟಿ

    ವಿದೇಶದಲ್ಲಿ ದುಬಾರಿ ಕಾರ್ ಖರೀದಿ ಮಾಡಿದ ಸೀರಿಯಲ್ ನಟಿ

    ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮನೆದೇವ್ರು ಧಾರಾವಾಹಿ ಖ್ಯಾತಿಯ ನಟಿ ಅರ್ಚನಾ ಲಕ್ಷ್ಮೀನರಸಿಂಹಸ್ವಾಮಿ ಹೊಸ ಕಾರ್ ಖರೀದಿ ಮಾಡಿದ್ದಾರೆ. ದುಬಾರಿ ಕಾರ್‍ ಫೋಟೋವನ್ನು ಅರ್ಚನಾ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ.

    ಮರ್ಸಿಡಿಸ್ ಬೆಂಜ್ ಕಾರ್ ಖರೀದಿ ಮಾಡಿದ್ದೇವೆ. ವಿಘ್ನೇಶ್ ಮತ್ತು ನಾನು ಮರ್ಸಿಡಿಸ್ ಬೆಂಜ್ ಜೊತೆ ಆರಾಮದಾಯಕ ಮತ್ತು ಸುರಕ್ಷಿತ ಪ್ರಯಾಣವನ್ನು ಮಾಡಬೇಕೆಂದು ಆಶಿಸುತ್ತೇವೆ ಎಂದು ಬರೆದುಕೊಂಡು ಕಾರ್ ಬಳಿ ನಿಂತುಕೊಂಡಿರುವ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಶೂಟಿಂಗ್ ಮುಗಿಸಿ ಬರ್ತಿದ್ದ ರಂಜಿನಿ ರಾಘವನ್‍ಗೆ ರಾತ್ರಿ ಏನಾಯ್ತಂತೆ ಗೊತ್ತಾ?

    ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮಧುಬಾಲ, ಮನೆದೇವ್ರು ಧಾರಾವಾಹಿಯಲ್ಲಿ ಅರ್ಚನಾ ನಟಿಸಿದ್ದರು, 2 ತಮಿಳು ಧಾರಾವಾಹಿಯಲ್ಲಿ ನಟಿಸಿದ್ದರು. ಮದುವೆಯಾಗಿ ನ್ಯೂಯಾರ್ಕ್‍ಗೆ ತೆರಳಿದಮೇಲೆ ಅಲ್ಲಿ 6 ತಿಂಗಳುಗಳ ಕಾಲ ಅರ್ಚನಾ ಕೆಲಸ ಹುಡುಕಿದ್ದರು. ನಟನೆಗೆ ಬರುವ ಮುನ್ನ ಎಚ್‍ಆರ್ ಕೆಲಸ ಮಾಡುತ್ತಿದ್ದ ಅರ್ಚನಾ ಅವರು ವಿದೇಶಕ್ಕೆ ಹೋದಮೇಲೆ ಮತ್ತೆ ಎಚ್‍ಆರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇದನ್ನೂ ಓದಿ: ಕನ್ನಡಿಗಳೆಂದು ತಮಿಳುನಾಡಿನಲ್ಲಿ ನನ್ನ ಸಹಾಯಕ್ಕೆ ಯಾರೂ ಬರ್ತಿಲ್ಲ: ವಿಜಯಲಕ್ಷ್ಮಿ

    ಅರ್ಚನಾ ಮದುವೆ ನಂತರ ಪತಿ ವಿಘ್ನೇಶ್ ಕುಮಾರ್ ಜೊತೆಗೆ ಅವರು ವಿದೇಶದಲ್ಲಿ ನೆಲೆಸಿದ್ದಾರೆ. ಇಷ್ಟುದಿನ ನ್ಯೂಯಾರ್ಕ್‍ನಲ್ಲಿದ್ದ ಅರ್ಚನಾ ಫ್ಲೋರಿಡಾಗೆ ಬಂದು ಈಗ ನೆಲೆಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿರುವ ಅರ್ಚನಾ ಹೊಸ ಆರಂಭ, ಹೊಸ ಜೀವನ, ಹೊಸ ಸ್ಥಳ, ಎಲ್ಲವೂ ಹೊಸದು. ಹೊಸ ಕೆಲಸ, ಹೊಸ ಅನುಭವ. ಜೀವನ ಸದಾ ಖುಷಿಯಿಂದ, ಆಸಕ್ತಿದಾಯಕವಾಗಿರುವುದು ಎಂದು ಹೇಳಿಕೊಂಡಿದ್ದಾರೆ. ಇದೀಗ ದುಬಾರಿ ಕಾರ್ ಖರೀದಿ ಮಾಡಿರುವ ಸಂತೋಷವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

  • ಉಚಿತವಾಗಿ ಬೆಳೆ ನೀಡಿ ಉಪ್ಪಿ ಸಮಾಜ ಸೇವೆಗೆ ಸಾಥ್ ನೀಡಿದ ರೈತ

    ಉಚಿತವಾಗಿ ಬೆಳೆ ನೀಡಿ ಉಪ್ಪಿ ಸಮಾಜ ಸೇವೆಗೆ ಸಾಥ್ ನೀಡಿದ ರೈತ

    ಬೆಂಗಳೂರು: ಉಪೇಂದ್ರ ಅವರು ಮಾಡುತ್ತಿರುವ ಸಮಾಜ ಸೇವೆಗೆ ಉಚಿತವಾಗಿ ಟೊಮೇಟೋ ನೀಡುವ ಮೂಲಕವಾಗಿ ರೈತರೊಬ್ಬರು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ಸಿದ್ದರಾಜು ಬ್ಯಾಲಾಳು ಗ್ರಾಮದ ರೈತರು ಇಂದು 15 ಕ್ರೇಟ್ ಟೊಮೇಟೋ ಉಚಿತವಾಗಿ ಕೊಟ್ಟು ಬೇಕಾದವರಿಗೆ ಹಂಚಿ ಎಂದು ನಮಗೆಲ್ಲರಿಗೂ ಮಾದರಿಯಾದರು. ಟೊಮೇಟೋಗೆ ಹಣ ಪಡೆಯಲು ನಿರಾಕರಿಸಿದ ಬ್ಯಾಲಾಳು ಸಿದ್ದರಾಜು ತನ್ನ ಗ್ರಾಮದಲ್ಲಿ ಸಂಕಷ್ಟದಲ್ಲಿರುವ ಇಪ್ಪತ್ತು ಕುಟುಂಬಕ್ಕೆ ದಿನಸಿ ಕಿಟ್ ವಿತರಿಸುವ ಜವಾಬ್ಧಾರಿಯನ್ನು ತಾನೇ ವಹಿಸಿಕೊಂಡು ಕಿಟ್ ಕೊಂಡೊಯ್ಯುತ್ತಿದ್ದಾರೆ ಎಂದು ಉಪೇಂದ್ರ ಅವರು ಮಾದರಿ ರೈತರ ಕುರಿತಾಗಿ ಟ್ವೀಟ್ ಮಾಡುವಮೂಲಕವಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಲಾಕ್‍ಡೌನ್ ಕಾರಣ ಸಂಪಾದನೆ ಇಲ್ಲದೇ ಕೂತಿರುವ ರೈತರು ಹಾಗೂ ಬಡವರ ಪಾಲಿಗೆ ನಟ ಉಪೇಂದ್ರ ಅವರು ನೆರವಿಗೆ ನಿಂತಿದ್ದಾರೆ. ಇದೀಗ ಉಪೇಂದ್ರ ಅವರು ಮಾಡುತ್ತಿರುವ ನಿಸ್ವಾರ್ಥ ಸೇವೆಗೆ ಬ್ಯಾಲಾಳು ಗ್ರಾಮದ ರೈತರೊಬ್ಬರು ಸಾಥ್ ನೀಡಿದ್ದಾರೆ. ತಾವು ಬೆಳೆದಿರುವ ಫಸಲನ್ನು ಉಚಿತವಾಗಿ ಉಪೇಂದ್ರ ಅವರ ಕೈಗೊಪ್ಪಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ.

    ಕೊರೊನಾ ಬಿಕ್ಕಟ್ಟಿನ ಈ ಸಮಯದಲ್ಲಿ ಸಿನಿಕಾರ್ಮಿಕರಿಗೆ, ಬಡವರಿಗೆ ದಿನಸಿ ಕಿಟ್‍ಗಳನ್ನು ನೀಡುತ್ತಿರುವ ಸೂಪರ್ ಸ್ಟಾರ್ ಉಪೇಂದ್ರ ಅವರು ಈಗ ರೈತರಿಂದ ನೇರವಾಗಿ ತರಕಾರಿ ಖರೀದಿಸಿ ಅಗತ್ಯ ಇರುವವರಿಗೆ ಹಂಚುತ್ತಿದ್ದಾರೆ. ಬೆಳೆಯನ್ನು ಖರೀದಿ ಮಾಡಿ ಅಗತ್ಯ ಇರುವವರಿಗೆ ಹಂಚಿಕೆ ಮಾಡುತ್ತಿರುವ ಉಪೇಂದ್ರ ಅವರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

  • ಮೀನು ಖರೀದಿಸಿದವನಿಗೆ ಆನ್‍ಲೈನ್‍ನಲ್ಲಿ ಬಂತು ಮೊಸಳೆ

    ಮೀನು ಖರೀದಿಸಿದವನಿಗೆ ಆನ್‍ಲೈನ್‍ನಲ್ಲಿ ಬಂತು ಮೊಸಳೆ

    ಬೀಜಿಂಗ್: ಮನೆಯಲ್ಲಿ ಮೀನು ಸಾಕಲೇಂದು ಆನ್‍ಲೈನ್‍ನಲ್ಲಿ ಮೀನು ಖರೀದಿಸಿದ್ದ ಬಾಲಕ ಪಾರ್ಸಲ್ ತೆರೆದುನೋಡಿದಾಗ ಮೊಸಳೆ ಇರುವುದನ್ನು ನೋಡಿ ಶಾಕ್ ಆಗಿದದ್ದಾನೆ.

    ಚೈನಾದ ಬಾಲಕನೋರ್ವ ಮೀನಿನ ಬದಲಿಗೆ ಪಾರ್ಸ್‍ಲ್ ಬಂದಿರುವ ಮೊಸಳೆ ಸಿಯಾಮಿಸ್ ಎನ್ನು ತಳಿಯ ಮೊಸಳೆಯಾಗಿದೆ. ಈ ಮೊಸಳೆ ತಳಿ ಅಳಿವಿನಂಚಿನಲ್ಲಿರುವ ಜೀವಿಯಾಗಿದೆ ಎನ್ನಲಾಗಿದೆ. ಮೊಸಳೆ ಕಂಡು ಗಾಬರಿಯಾಗಿ ಅದನ್ನು ಸ್ಥಳೀಯ ಪೊಲೀಸರಿಗೆ ಒಪ್ಪಿಸಿದ್ದಾನೆ.

    ನಾವು ಯಾವುದೇ ಜೀವಂತ ಪ್ರಾಣಿಗಳನ್ನು ಡೆಲಿವರಿ ಮಾಡುವುದಿಲ್ಲ. ಈ ಪ್ರಕರಣದಲ್ಲಿ ಸಾಬೀತಾದಲ್ಲಿ ಕೊರಿಯರ್‍ನ್ನು ಕೊನೆಯದಾಗಿ ಕಲೆಕ್ಟ್ ಮಾಡಿಕೊಂಡವರ ವಿರುದ್ಧವಾಗಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಕೊರಿಯರ್ ಮಾಡಿದ ಕಂಪನಿ ಹೇಳಿದೆ.