Tag: ಖತೀಜಾ

  • ಬೇಗಂ ಅವತಾರದಲ್ಲಿ ಕಾಣಿಸಿಕೊಂಡ ಸಮಂತಾ

    ಬೇಗಂ ಅವತಾರದಲ್ಲಿ ಕಾಣಿಸಿಕೊಂಡ ಸಮಂತಾ

    ಕ್ಷಿಣ ಭಾರತದ ಸ್ಟಾರ್ ನಟಿ ಸಮಂತಾ, ಸದಾ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಸಮಂತಾ ಸಿನಿಮಾ, ನಟನೆಯ ವಿಷ್ಯವಾಗಿ ಅದೆಷ್ಟು ಸುದ್ದಿಯಲಲಿರುತ್ತಾರೋ ಅಷ್ಟೇ ವಯಕ್ತಿಕ ವಿಚಾರವಾಗಿ ಅಷ್ಟೇ ಸುದ್ದಿಯಲ್ಲಿರುತ್ತಾರೆ. ಈಗ ಆಪಲ್ ಬ್ಯೂಟಿ ಸಮಂತಾ ಹೊಸ ಫೋಟೋಶೂಟ್ ವಿಷ್ಯವಾಗಿ ಸಖತ್ ಸುದ್ದಿ ಮಾಡ್ತಿದ್ದಾರೆ.

    ಚಿತ್ರರಂಗದಲ್ಲಿ ಸದ್ಯ ಸಮಂತಾದೇ ಸದ್ದು ಸುದ್ದಿ, ಕಳೆದ ಸಲ ಹಾಟ್ ಫೋಟೋಶೂಟ್‌ನಿಂದ ಗಮನ ಸೆಳೆದಿದ್ದ ನಟಿ ಈಗ ಮುಸ್ಲಿಂ ವರ್ಗದ ಹುಡುಗಿಯಾಗಿ ಬೇಗಂ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ರೆಡ್ ಕಲರ್ ಡ್ರೆಸ್‌ನಲ್ಲಿ ಮಿರ ಮಿರ ಅಂತಾ ಮಿಂಚಿದ್ದಾರೆ. ಸಮಂತಾ ನ್ಯೂ ಲುಕ್ ನೋಡಿ ಫ್ಯಾನ್ಸ್ ಕೂಡ ಖುಷಿಪಟ್ಟಿದ್ದಾರೆ. ಈ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ಇದನ್ನೂ ಓದಿ: ಸರಾಯಿ ಜೊತೆ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ನಟಿ

    ಇತ್ತೀಚೆಗಷ್ಟೇ ತೆರೆಕಂಡಿದ್ದ ಕಾತುವಾಕುಲ ಎರಡು ಕಾದಲ್ ಚಿತ್ರದಲ್ಲಿ ಖತೀಜಾ ಪಾತ್ರದಲ್ಲಿ ಸಮಂತಾ ಬಣ್ಣ ಹಚ್ಚಿದ್ದರು. ಈ ಚಿತ್ರದ ಸಮಂತಾ ಸಾಕಷ್ಟು ಲುಕ್ ರಿವೀಲ್ ಆಗಿತ್ತು. ಆದರೆ ಖತೀಜಾ ಪಾತ್ರದ ಈ ಲುಕ್ ರಿವೀಲ್ ಆಗಿರಲಿಲ್ಲ. ಈಗ ಸಮಂತಾ ರೆಡ್ ಡ್ರೆಸ್‌ನಲ್ಲಿ ಕಾಣಿಸಿಕೊಂಡಿರೋ ಫೋಟೋಗಳು ಸಖತ್ ವೈರಲ್ ಆಗುತ್ತಿದೆ. ಸಮಂತಾ ಫ್ಯಾನ್ಸ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.