Tag: ಖತಲ್ ಸಾಬ್

  • ಬಾವಿಯಲ್ಲಿ ಗಣೇಶ ವಿಸರ್ಜನೆ ಮಾಡುವಾಗ ವ್ಯಕ್ತಿ ನೀರು ಪಾಲು

    ಬಾವಿಯಲ್ಲಿ ಗಣೇಶ ವಿಸರ್ಜನೆ ಮಾಡುವಾಗ ವ್ಯಕ್ತಿ ನೀರು ಪಾಲು

    ಯಾದಗಿರಿ: ಗಣೇಶ ವಿಸರ್ಜನೆ ವೇಳೆ ವ್ಯಕ್ತಿ ನೀರು ಪಾಲಾಗಿರುವ ಘಟನೆ ಯದಗಿರಿ ತಾಲೂಕಿನ ಸೈದಾಪುರದಲ್ಲಿ ನಡೆದಿದೆ.

    ಶನಿವಾರ ಗಣೇಶ ಮೆರವಣಿಗೆ ಮುಗಿಸಿಕೊಂಡು ಗ್ರಾಮದ ಬಾವಿಯಲ್ಲಿ ಗಣೇಶ ವಿಸರ್ಜನೆ ಮಾಡುವಾಗ ಖತಲ್ ಸಾಬ್ (28) ಎಂಬ ಯುವಕನು ನೀರು ಪಾಲಾಗಿದ್ದಾರೆ. ಘಟನೆಯಲ್ಲಿ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಹೇಳಲಾಗಿದೆ.

    ಗಣೇಶ ವಿಸರ್ಜನೆ ವೇಳೆ ಯವುದೇ ಅಹಿತಕರ ಘಟನೆಯು ನಡೆಯದಂತೆ ಮುಂಜಾಗೃತೆ ತೆಗೆದುಕೊಳ್ಳದ ಜಿಲ್ಲಾ ಪಂಚಾಯತ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ದೌಡಾಯಿಸಿ ಅಗ್ನಿಶಾಮಕದಳದಿಂದ ಶವ ಶೋಧ ಕಾರ್ಯವು ಮುಂದುವರೆಸಿದ್ದಾರೆ.

    ಘಟನೆ ಸಂಬಂಧ ಸೈದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.