Tag: ಖಗೋಳಶಾಸ್ತ್ರ

  • ಭಾರತೀಯ ಖಗೋಳಶಾಸ್ತ್ರಜ್ಞರಿಂದ ನೂತನ ಪ್ರಯತ್ನ – ಎಐ ತಂತ್ರಜ್ಞಾನ ಬಳಸಿ ವಾಸಯೋಗ್ಯ ಗ್ರಹಗಳ ಪತ್ತೆ

    ಭಾರತೀಯ ಖಗೋಳಶಾಸ್ತ್ರಜ್ಞರಿಂದ ನೂತನ ಪ್ರಯತ್ನ – ಎಐ ತಂತ್ರಜ್ಞಾನ ಬಳಸಿ ವಾಸಯೋಗ್ಯ ಗ್ರಹಗಳ ಪತ್ತೆ

    ನವದೆಹಲಿ: ಭಾರತೀಯ ಖಗೋಳಶಾಸ್ತ್ರಜ್ಞರ ತಂಡ ಕೃತಕ ಬುದ್ಧಿಮತ್ತೆ(ಎಐ) ಆಧಾರಿತ ತಂತ್ರಜ್ಞಾನ ಬಳಸಿಕೊಂಡು ಭೂಮಿಯಂತಹ ಗುಣಲಕ್ಷಣಗಳುಳ್ಳ ಕೆಲವು ಗ್ರಹಗಳನ್ನು ಪತ್ತೆಹಚ್ಚಿದ್ದಾರೆ.

    ಮಲ್ಟಿ-ಸ್ಟೇಜ್ ಮೆಮೆಟಿಕ್ ಬೈನರಿ ಟ್ರೀ ಅನಾಮಲಿ ಐಡೆಂಟಿಫೈಯರ್ ಎಂದು ಕರೆಯಲಾಗುವ ಎಐ ತಂತ್ರಜ್ಞಾನ ಆಧಾರಿತ ವಿಧಾನದಿಂದ ಕೆಲವು ಭೂಮಿಯಂತಹ ಅಂಶಗಳುಳ್ಳ ಗ್ರಹಗಳನ್ನು ಗುರುತಿಸಲಾಗಿದೆ. ಈ ವಿಧಾನ ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ಅನುಕರಣೆ ಮಾಡುವ ರೀತಿಯಲ್ಲಿ ಕೆಲಸ ಮಾಡುತ್ತದೆ.

    ಭಾರತೀಯ ಇನ್‍ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್‍ನ ಖಗೋಳಶಾಸ್ತ್ರಜ್ಞರು ಮತ್ತು ಬಿಟ್ಸ್ ಪಿಲಾನಿ ಹಾಗೂ ಗೋವಾ ಕ್ಯಾಂಪಸ್‍ನ ಖಗೋಳಶಾಸ್ತ್ರಜ್ಞರು ಭೂಮಿಯ ಅಸಂಗತತೆ(ಎನೋಮಲಿ) ಎಂಬ ಸಿದ್ಧಾಂತದ ಆಧಾರದ ಮೇಲೆ ವಾಸಿಸಲು ಯೋಗ್ಯವಿರುವ ಗ್ರಹಗಳನ್ನು ಗುರುತಿಸಿದ್ದಾರೆ. ಇದನ್ನೂ ಓದಿ: ಡಿಜಿಟಲ್ ರೂ.ಗೂ ಸಾಮಾನ್ಯ ರೂ.ಗೂ ವ್ಯತ್ಯಾಸವಿಲ್ಲ: ಶಕ್ತಿಕಾಂತ ದಾಸ್

    ಸಾವಿರಾರು ಗ್ರಹಗಳಲ್ಲಿ ಭೂಮಿ ಮಾತ್ರ ವಾಸಯೋಗ್ಯ ಗ್ರಹವಾಗಿರುವುದರಿಂದ ಅದನ್ನು ಅಸಂಗತತೆ ಎಂದು ವ್ಯಾಖ್ಯಾನಿಸಲಾಗಿದೆ. ಹೊಸ ಅಸಂಗತತೆ ಪತ್ತೆ ವಿಧಾನಗಳನ್ನು ಬಳಸಿಕೊಂಡು ಇದೇ ರೀತಿಯ ಇತರ ಗ್ರಹಗಳನ್ನು ಕಂಡುಹಿಡಿಯಬಹುದೇ ಎಂದು ನಾವು ಅನ್ವೇಷಿಸಿದ್ದೇವೆ ಎಂದು ಖಗೋಳಶಾಸ್ತ್ರಜ್ಞರು ತಿಳಿಸಿದ್ದಾರೆ. ಇದನ್ನೂ ಓದಿ: ಭೂಕಾಂತೀಯ ಬಿರುಗಾಳಿಗೆ ಸ್ಟಾರ್‌ಲಿಂಕ್ನ 40 ಉಪಗ್ರಹಗಳು ನಾಶ

    ಇಲ್ಲಿಯವರೆಗೆ ಪರಿಶೀಲಿಸಲಾದ ಸುಮಾರು 5000 ಗ್ರಹಗಳಲ್ಲಿ 60 ಸಂಭಾವ್ಯ ವಾಸಯೋಗ್ಯ ಗ್ರಹಗಳಿವೆ ಎಂದು ಅಧ್ಯಯನದಿಂದ ತಿಳಿದು ಬಂದಿದೆ.

  • ಮಿಲ್ಕಿ ವೇಯಲ್ಲಿ 18 ನಿಮಿಷಗಳಿಗೊಮ್ಮೆ ಸ್ಫೋಟವಾಗುವ ವಸ್ತು ಪತ್ತೆ

    ಕ್ಯಾನ್‌ಬೆರಾ: ಆಕಾಶದಲ್ಲಿ ಇಲ್ಲಿಯವರೆಗೆ ಎಂದಿಗೂ ಕಾಣಿಸಿಕೊಳ್ಳದ ವಿಚಿತ್ರ ವಸ್ತುವೊಂದನ್ನು ಮಿಲ್ಕಿ ವೇ(ಕ್ಷೀರಪಥ) ಗ್ಯಾಲಕ್ಸಿಯಲ್ಲಿ  ಪತ್ತೆ ಹಚ್ಚಲಾಗಿದೆ. 18.18 ನಿಮಿಷಗಳಿಗೊಮ್ಮೆ ಸ್ಫೋಟಿಸುವ ಈ ಹೊಸ ವಸ್ತು ವಿಜ್ಞಾನ ಲೋಕಕ್ಕೆ ಹೊಸ ಸವಾಲಾಗಿದೆ.

    ಪಶ್ಚಿಮ ಆಸ್ಟ್ರೇಲಿಯಾದ ಹೊರವಲಯದಲ್ಲಿರುವ ಮರ್ಚಿಸನ್ ವೈಡ್‌ಫೀಲ್ಡ್ ಅರೇ ಪ್ರಾಜೆಕ್ಟ್ ಅಡಿ ತಯಾರಾದ ದೂರದರ್ಶಕವನ್ನು ಬಳಸಿಕೊಂಡು ವಿದ್ಯಾರ್ಥಿಗಳು ಮೊದಲ ಬಾರಿಗೆ ಈ ವಿಚಿತ್ರ ವಸ್ತುವನ್ನು ಕಂಡುಹಿಡಿದಿದ್ದರು. ಈಗ ಪ್ರತಿ ಗಂಟೆಗೆ 3 ಬಾರಿ ದೊಡ್ಡ ಮಟ್ಟದ ಸ್ಫೋಟವನ್ನು ಬಿಡುಗಡೆ ಮಾಡುವ ವಸ್ತುವಿನ ಬಗ್ಗೆ ಖಗೋಳಶಾಸ್ತ್ರಜ್ಞರು ಕುತೂಹಲ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಚಂದ್ರನಿಗೆ ಅಪ್ಪಳಿಸಲಿದೆ SpaceX ರಾಕೆಟ್

    ಈ ವಿಚಿತ್ರ ವಸ್ತು ಭೂಮಿಯಿಂದ 4 ಸಾವಿರ ಬೆಳಕಿನ ವರ್ಷಗಳಷ್ಟು ದೂರದಲ್ಲಿದೆ ಎಂದು ಊಹಿಸಲಾಗಿದೆ. ಅತ್ಯಂತ ಪ್ರಕಾಶಮಾನವಾಗಿರುವ ವಸ್ತು ಅತ್ಯಂತ ಬಲವಾದ ಕಾಂತೀಯ ಕ್ಷೇತ್ರವನ್ನು ಹೊಂದಿದೆ. ಇದರ ಬಗ್ಗೆ ಇನ್ನೂ ಹಲವು ರಹಸ್ಯವನ್ನು ಬಯಲು ಮಾಡುವುದು ಬಾಕಿ ಇದೆ ಎಂದು ಖಗೋಳಶಾಸ್ತ್ರಜ್ಞ ನತಾಶಾ ಹರ್ಲಿ-ವಾಕರ್ ತಿಳಿಸಿದ್ದಾರೆ. ಇದನ್ನೂ ಓದಿ: ಕಚ್ಚಾತೈಲ ಬೆಲೆ ಭಾರೀ ಏರಿಕೆ – ಮತ್ತೆ ಪೆಟ್ರೋಲ್ ಬೆಲೆ ದುಬಾರಿ?

    ಕ್ಷೀರ ಪಥದಲ್ಲಿ ಕಂಡುಹಿಡಿಯಲಾದ ಈ ವಿಚಿತ್ರ ವಸ್ತು ಸದ್ಯ ಅಸ್ತಿತ್ವದಲ್ಲಿ ಇದೆಯೋ ಇಲ್ಲವೋ ಎಂಬುದರ ಬಗ್ಗೆ ಖಚಿತವಾಗಿಲ್ಲ. ಇದು ನಕ್ಷತ್ರದ ಅವಶೇಷವೂ ಅಗಿರುವ ಸಾಧ್ಯತೆಯಿದೆ. ಆದರೆ ಇದು ಇಲ್ಲಿಯವರೆಗೆ ಆಕಾಶದಲ್ಲಿ ಕಂಡುಹಿಡಿಯಲಾದ ಎಲ್ಲಾ ವಸ್ತುಗಳಿಗಿಂತಲೂ ಭಿನ್ನವಾಗಿದೆ ಎಂದು ತಿಳಿಸಿದ್ದಾರೆ.

  • 353 ವರ್ಷಗಳ ನಂತ್ರ ಖಗೋಳ ಕೌತುಕ: ಗುರುವಾರ ಅತ್ಯಂತ ಕೆಟ್ಟದಿನ ಯಾಕೆ?

    353 ವರ್ಷಗಳ ನಂತ್ರ ಖಗೋಳ ಕೌತುಕ: ಗುರುವಾರ ಅತ್ಯಂತ ಕೆಟ್ಟದಿನ ಯಾಕೆ?

    ಬೆಂಗಳೂರು: 1664ರ ಬಳಿಕ ಇದೇ ಮೊದಲ ಬಾರಿಗೆ ಖಗೋಳ ಕೌತುಕ ನಡೆಯಲಿದ್ದು, ಗುರುವಾರ ಯಾವುದೇ ಹೊಸ ನಿರ್ಣಯ ಕೈಗೊಳ್ಳಬಾರದು ಎಂದು ಜ್ಯೋತಿಷಿಗಳು ಸಲಹೆ ನೀಡಿದ್ದಾರೆ.

    ಹೌದು, ಬರೋಬ್ಬರಿ 353 ವರ್ಷಗಳ ನಂತರ ಶನಿ, ರವಿ ಸಮಾಗಮವಾಗಲಿದೆ. ಖಗೋಳಶಾಸ್ತ್ರದ ಪ್ರಕಾರ ಗುರುವಾರ ಅಪಾಯಕಾರಿಯಾಗಿದ್ದು, ನಾಳೆ ಯಾವುದೇ ಹೊಸ ನಿರ್ಣಯ ಕೈಗೊಳ್ಳಬಾರದು ಎಂದು ಹೇಳಿದ್ದಾರೆ.

    ಡಿಸೆಂಬರ್ 21 ಅತ್ಯಂತ ಕಡಿಮೆ ಹಗಲಿನ ದಿನವಾಗಿದ್ದು, ರವಿ, ಶನಿ ಜೊತೆಯಾಗಿ ಸಂಚಾರ ಮಾಡುವ ಕಾರಣ ಬಹಳ ಅಪಾಯಕಾರಿ ದಿನ ಎಂದು ಜ್ಯೋತಿಷಿಗಳು ಹೇಳುತ್ತಿದ್ದಾರೆ.

    ಜ್ಯೋತಿಷಿಗಳು ಹೇಳೋದು ಏನು?
    ಇದು ಅತಿ ವಿರಾಳವಾದ ದಿನವಾಗಿದ್ದು, ನಾಳೆ ಕಷ್ಟಕ್ಕೆ ಸಿಲುಕಿದರೆ ಇನ್ನು 1 ವರ್ಷ ಪರಿಣಾಮ ಅನುಭವಿಸಬೇಕಾಗುತ್ತದೆ. ಇನ್ನೊಂದು ವರ್ಷ ಶನಿ ಕಾಡುತ್ತಲೇ ಇರುತ್ತಾನೆ. ಮನೆಯಲ್ಲಿ ಅಗ್ನಿ ಆಕಸ್ಮಿಕ ಹೆಚ್ಚಾಗಿ ಸಂಭವಿಸುತ್ತದೆ. ಅಪಘಾತಗಳು ಜಾಸ್ತಿ ಆಗುತ್ತವೆ. ಮನೆಯಲ್ಲಿನ ಹಿರಿಯರು ದೈವಾಧೀನರಾಗುತ್ತಾರೆ. ಈ ಎಲ್ಲ ಕಾರಣಕ್ಕಾಗಿ ಯಾವುದೇ ಹೊಸ ನಿರ್ಧಾರವನ್ನು ಕೈಗೊಳ್ಳದೇ ಇರುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ.

    https://www.youtube.com/watch?v=E1FfyUkMeUY