Tag: ಕ್ಸಿಯೋಮಿ

  • 900 ಉದ್ಯೋಗಿಗಳನ್ನು ಮನೆಗೆ ಕಳುಹಿಸಿದ ಕ್ಸಿಯೋಮಿ

    900 ಉದ್ಯೋಗಿಗಳನ್ನು ಮನೆಗೆ ಕಳುಹಿಸಿದ ಕ್ಸಿಯೋಮಿ

    ಬೀಜಿಂಗ್‌: ಆರ್ಥಿಕ ಹಿಂಜರಿತ ಭೀತಿ ಬೆನ್ನಲ್ಲೇ ಚೀನಾದ ಸ್ಮಾರ್ಟ್‌ಫೋನ್‌ ತಯಾರಕ ಕಂಪನಿ ಕ್ಸಿಯೋಮಿ 900 ಉದ್ಯೋಗಿಗಳನ್ನು ಮನೆಗೆ ಕಳುಹಿಸಿದೆ.

    ಕ್ಸಿಯೋಮಿ ಶೇ.3 ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿದೆ ಎಂದು ಚೀನಾ ಮಾರ್ನಿಂಗ್‌ ಪೋಸ್ಟ್‌ ವರದಿ ಮಾಡಿದೆ.

    ಯಾವ ಕಾರಣಕ್ಕೆ ಈ ನಿರ್ಧಾರ ಕೈಗೊಂಡಿದೆ ಎಂಬ ಮಾಹಿತಿ ತಿಳಿದು ಬಂದಿಲ್ಲ. ಆದರೆ ಆದಾಯ ಕುಸಿತದಿಂದ ಈ ನಿರ್ಧಾರ ಕೈಗೊಂಡಿರಬಹುದು ಎನ್ನಲಾಗುತ್ತದೆ.

    ಜೂನ್‌ ತಿಂಗಳಿಗೆ ಅಂತ್ಯಗೊಂಡ ತ್ರೈಮಾಸಿಕದಲ್ಲಿ ಕ್ಸಿಯೋಮಿ ಶೇ.20 ರಷ್ಟು ಆದಾಯ ಕುಸಿತ ಕಂಡಿತ್ತು. ಕ್ಸಿಯೋಮಿ ಕಂಪನಿಗೆ ಅರ್ಧಕ್ಕಿಂತಲೂ ಹೆಚ್ಚಿನ ಆದಾಯ ಸ್ಮಾರ್ಟ್‌ಫೋನ್‌ ಮಾರಾಟದಿಂದಲೇ ಬರುತ್ತದೆ. ಸ್ಮಾರ್ಟ್‌ಫೋನ್‌ ಮಾರಾಟ ಶೇ.29 ರಷ್ಟು ಕುಸಿತ ಕಂಡಿದೆ. ಐಪಿಒ ಲಿಸ್ಟಿಂಗ್‌ ಆದ ಬಳಿಕ ಮೊದಲ ಬಾರಿಗೆ ಕ್ಸಿಯೋಮಿ ಆದಾಯ ಇಳಿಕೆಯಾಗಿದೆ.

    ಜೂನ್‌ವರೆಗೆ 32,869 ಮಂದಿ ಉದ್ಯೋಗದಲ್ಲಿದ್ದರು. ಈ ಪೈಕಿ ಚೀನಾದಲ್ಲೇ 30,110 ಮಂದಿ ಕೆಲಸದಲ್ಲಿದ್ದಾರೆ. ಉಳಿದಂತೆ ಭಾರತ ಮತ್ತು ಇಂಡೋನೇಷ್ಯಾದಲ್ಲಿ ಉದ್ಯೋಗಿಗಳಿದ್ದಾರೆ. ಇದನ್ನೂ ಓದಿ: ಜಿಯೋ ಬಿಡುಗಡೆ ಮಾಡಲಿದೆ ಕಡಿಮೆ ಬೆಲೆಯ 5G ಫೋನ್‌ – ಬೆಲೆ ಎಷ್ಟು? ಗುಣ ವೈಶಿಷ್ಟ್ಯಗಳು ಏನು?

    ಜಾಗತಿಕ ಹಣದುಬ್ಬರ, ವಿದೇಶಿ ವಿನಿಮಯ ಏರಿಳಿತ, ಸಂಕೀರ್ಣ ರಾಜಕೀಯ ಪರಿಸರದಿಂದಾಗಿ ಆದಾಯ ಕುಸಿತಗೊಂಡಿದೆ ಎಂದು ಕ್ಸಿಯೋಮಿ ಅಧ್ಯಕ್ಷ ವಾಂಗ್‌ ಕ್ಸಿಯಾಂಗ್‌ ತಿಳಿಸಿದ್ದಾರೆ.

    ಚೀನಾ ಬಿಟ್ಟರೆ ಕ್ಸಿಯೋಮಿಯ ದೊಡ್ಡ ಮಾರುಕಟ್ಟೆ ಭಾರತವಾಗಿದೆ. ಆದರೆ ತೆರಿಗೆ ವಂಚನೆ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಕ್ಸಿಯೋಮಿ ಕಂಪನಿ ಮೇಲೆ ಈ ಹಿಂದೆ ಆದಾಯ ತೆರಿಗೆ ಇಲಾಖೆ ದಾಳಿ ಮಾಡಿತ್ತು.

    Live Tv
    [brid partner=56869869 player=32851 video=960834 autoplay=true]

  • ಆಪಲ್ ಹಿಂದಿಕ್ಕಿ ವಿಶ್ವದಲ್ಲೇ ನಂಬರ್ 2 ಪಟ್ಟಕ್ಕೆ ಏರಿದ ಕ್ಸಿಯೋಮಿ

    ಆಪಲ್ ಹಿಂದಿಕ್ಕಿ ವಿಶ್ವದಲ್ಲೇ ನಂಬರ್ 2 ಪಟ್ಟಕ್ಕೆ ಏರಿದ ಕ್ಸಿಯೋಮಿ

    – ವಿಶ್ವದ ಸ್ಮಾರ್ಟ್‍ಫೋನ್ ಮಾರುಕಟ್ಟೆಯಲ್ಲಿ ಐಫೋನ್ ಮಾರಾಟ ಕುಸಿತ
    – ಸ್ಯಾಮ್‍ಸಂಗ್ ಮೊದಲ ಸ್ಥಾನದಲ್ಲೇ ಮುಂದುವರಿಕೆ

    ಬೀಜಿಂಗ್:  ವಿಶ್ವದ ಸ್ಮಾರ್ಟ್‍ಫೋನ್ ಮಾರುಕಟ್ಟೆಯಲ್ಲಿ ಆಪಲ್ ಕಂಪನಿಯನ್ನು ಸೋಲಿಸಿ ನಂಬರ್ 2 ಪಟ್ಟಕ್ಕೆ ಕ್ಸಿಯೋಮಿ ಏರಿದೆ.

    Canalys ಸಂಸ್ಥೆ ವಿಶ್ವದ ಸ್ಮಾರ್ಟ್‍ಫೋನ್ ಮಾರುಕಟ್ಟೆಯನ್ನು ಅಧ್ಯಯನ ಮಾಡಿ ಈ ವರದಿಯನ್ನು ಪ್ರಕಟಿಸಿದೆ. 2ನೇ ತ್ರೈಮಾಸಿಕದಲ್ಲಿ ವಿಶ್ವದ ಸ್ಮಾರ್ಟ್‍ಫೋನ್ ಮಾರುಕಟ್ಟೆ ಶೇ. 12ರಷ್ಟು ಪ್ರಗತಿ ಸಾಧಿಸಿದೆ.

    ವಿಶ್ವದ ಮಾರುಕಟ್ಟೆಯಲ್ಲಿ ಆಪಲ್ ಶೇ.14ರಷ್ಟು ಪಾಲನ್ನು ಹೊಂದಿದ್ದರೆ, ಕ್ಸಿಯೋಮಿ ಶೇ.17ರಷ್ಟು ಪಾಲನ್ನು ಹೊಂದಿದೆ. ಸ್ಯಾಮ್‍ಸಂಗ್ ಶೇ.19ರಷ್ಟು ಪಾಲನ್ನು ಹೊಂದುವ ಮೂಲಕ ಮೊದಲ ಸ್ಥಾನದಲ್ಲೇ ಮುಂದುವರಿದಿದೆ.

    ವರ್ಷದಿಂದ ವರ್ಷಕ್ಕೆ ಕ್ಸಿಯೋಮಿ ಮಾರುಕಟ್ಟೆ ಪಾಲು ಹೆಚ್ಚಾಗುತ್ತಿದೆ. ಕ್ಸಿಯೋಮಿ ಶೇ.83ರಷ್ಟು ಬೆಳವಣಿಗೆ ಸಾಧಿಸಿದರೆ ಸ್ಯಾಮ್‍ಸಂಗ್ ಶೇ.15, ಆಪಲ್ ಶೇ.1 ರಷ್ಟು ಪ್ರಗತಿ ಸಾಧಿಸಿದೆ. ಚೀನಾದ ಒಪ್ಪೋ ಮತ್ತು ವಿವೋ ಕಂಪನಿಗಳು ಕ್ರಮವಾಗಿ 4 ಮತ್ತು 5ನೇ ಸ್ಥಾನವನ್ನು ಪಡೆದುಕೊಂಡಿದೆ.

    ಕಡಿಮೆ ಬೆಲೆಯ ಮತ್ತು ಮಿಡ್ ರೇಂಜ್ ಫೋನ್ ಮಾರಾಟದಿಂದ ಕ್ಸಿಯೋಮಿ ಈ ಸಾಧನೆ ಮಾಡಿದೆ. ಎರಡನೇ ಸ್ಥಾನಕ್ಕೆ ಏರಿದ್ದರೂ ಆಪಲ್ ಫೋನ್ ಗಳಿಗೆ ಹೋಲಿಸಿದರೆ ಕ್ಸಿಯೋಮಿ ಫೋನ್ ಶೇ.75ರಷ್ಟು ಬೆಲೆ ಕಡಿಮೆಯಿದೆ.

    https://twitter.com/manukumarjain/status/1415897728706519041

    ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಮಾರುಕಟ್ಟೆಯನ್ನು ಗುರಿಯಾಗಿಸಿ ಫೋನ್ ತಯಾರಿಸುತ್ತಿದ್ದ ಕ್ಸಿಯೋಮಿ ಈಗ ಯುರೋಪ್ ಮತ್ತು ಅಮೆರಿಕನ್ ಮಾರುಕಟ್ಟೆಯ ಮೇಲೆ ಕಣ್ಣಿಟ್ಟಿದೆ. ಈ ನಿಟ್ಟಿನಲ್ಲಿ ಎಂಐ 11 ಆಲ್ಟ್ರಾ, ಎಂಐ ಮಿಕ್ಸ್ ಫೋಲ್ಡ್ ಫೋನ್ ಬಿಡುಗಡೆ ಮಾಡಿದೆ.

    ವಿಶ್ವದ ಸ್ಮಾರ್ಟ್‍ಫೋನ್ ಕಂಪನಿಗಳಲ್ಲಿ ಒಂದಾಗಿದ್ದ ಹುವಾವೇ ಮೇಲೆ ಅಮೆರಿಕ ನಿಷೇಧ ವಿಧಿಸಿದ್ದು ಕ್ಸಿಯೋಮಿಗೆ ವರದಾನವಾಗಿದೆ. ಸಾಫ್ಟ್ ವೇರ್ ಮತ್ತು ಚಿಪ್ ಪೂರೈಕೆಗೆ ತಡೆಯಾಗಿದ್ದರಿಂದ ಹುವಾವೇ ಸ್ಪರ್ಧೆಯಿಂದ ಹಿಂದೆ ಸರಿದರೆ ಕ್ಸಿಯೋಮಿ ನಿಧನವಾಗಿ ಬೆಳವಣಿಗೆಯಾಗಿ ಈಗ ವಿಶ್ವದ ಎರಡನೇ ದೊಡ್ಡ ಸ್ಮಾರ್ಟ್‍ಫೋನ್ ಕಂಪನಿಯಾಗಿ ಹೊರಹೊಮ್ಮಿದೆ. ಇದನ್ನೂ ಓದಿ: ಚೀನಾಗೆ ಸ್ಯಾಮ್‍ಸಂಗ್ ಶಾಕ್ – ನೋಯ್ಡಾಕ್ಕೆ ಡಿಸ್‍ಪ್ಲೇ ಘಟಕ ಸ್ಥಳಾಂತರ

    ಈ ವರ್ಷದ ಮಾರ್ಚ್ ನಲ್ಲಿ ಕ್ಸಿಯೋಮಿ ಎಲೆಕ್ಟ್ರಿಕ್ ವಾಹನ ಉದ್ಯಮದಲ್ಲಿ ತೊಡಗುವುದಾಗಿ ಘೋಷಣೆ ಮಾಡಿತ್ತು. ಈ ಸಂಬಂಧ ಮುಂದಿನ 10 ವರ್ಷದಲ್ಲಿ 10 ಶತಕೋಟಿ ಡಾಲರ್ ಬಂಡವಾಳ ಹೂಡುವುದಾಗಿ ಹೇಳಿದೆ.

  • ಕ್ಸಿಯೋಮಿಯನ್ನು ಸೋಲಿಸಿದ ಸ್ಯಾಮ್‌ಸಂಗ್‌ ಈಗ ನಂ. 1 ಕಂಪನಿ

    ಕ್ಸಿಯೋಮಿಯನ್ನು ಸೋಲಿಸಿದ ಸ್ಯಾಮ್‌ಸಂಗ್‌ ಈಗ ನಂ. 1 ಕಂಪನಿ

    – 2 ವರ್ಷದ ಬಳಿಕ ಮೊದಲ ಸ್ಥಾನಕ್ಕೆ ಏರಿಕೆ
    – ಭಾರತದ ಸ್ಮಾರ್ಟ್‌ಫೋನ್‌ ಮಾರುಕಟ್ಟೆ ಬಗ್ಗೆ ಅಧ್ಯಯನ

    ನವದೆಹಲಿ: ದೇಶದ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಕ್ಸಿಯೋಮಿಯನ್ನು ಸ್ಯಾಮ್‌ಸಂಗ್‌ ಸೋಲಿಸಿದೆ. ಈ ಮೂಲಕ ಎರಡು ವರ್ಷದ ಬಳಿಕ ಸ್ಯಾಮ್‌ಸಂಗ್‌ ಮೊದಲ ಸ್ಥಾನಕ್ಕೆ ಏರಿದೆ.

    ಸ್ಮಾರ್ಟ್‌ಫೋನ್‌ ಮಾರುಕಟ್ಟೆಯ ಬಗ್ಗೆ ಅಧ್ಯಯನ ನಡೆಸುವ ಕೌಂಟರ್‌ಪಾಯಿಂಟ್‌ ಸಂಸ್ಥೆ 2020ರ ಮೂರನೇ ತ್ರೈಮಾಸಿಕದ ವರದಿಯನ್ನು ಬಿಡುಗಡೆ ಮಾಡಿದೆ.

    ದಕ್ಷಿಣ ಕೊರಿಯಾದ ಸ್ಯಾಮ್‌ಸಂಗ್‌ ಹೊರತುಪಡಿಸಿ ನಂತರದ ನಾಲ್ಕು ಸ್ಥಾನಗಳನ್ನು ಅನುಕ್ರಮವಾಗಿ ಚೀನಾದ ಕ್ಸಿಯೋಮಿ,ವಿವೋ, ರಿಯಲ್‌ ಮೀ, ಒಪ್ಪೋ ಕಂಪನಿಗಳು ಪಡೆದುಕೊಂಡಿದೆ.

     

    2019ರ ಮೂರನೇ ತ್ರೈಮಾಸಿಕದಲ್ಲಿ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಸ್ಯಾಮ್‌ಸಂಗ್‌ ಶೇ.20ರಷ್ಟು ಪಾಲನ್ನು ಹೊಂದಿದ್ದರೆ ಈ ಅವಧಿಯಲ್ಲಿ ಶೇ.24ಕ್ಕೆ ಏರಿಕೆಯಾಗಿದೆ. 2019ರಲ್ಲಿ ಕ್ಸಿಯೋಮಿ ಶೇ.26 ರಷ್ಟು ಪಾಲು ಹೊಂದಿದ್ದರೆ ಈ ಬಾರಿ ಶೇ.23ಕ್ಕೆ ಕುಸಿದಿದೆ.

    ಉಳಿದಂತೆ ವಿವೋ ಶೇ.16, ರಿಯಲ್‌ ಮೀ ಶೇ.15, ಒಪ್ಪೋ ಶೇ.10, ಇತರೇ ಕಂಪನಿಗಳ ಫೋನ್‌ಗಳು ಮಾರುಕಟ್ಟೆಯಲ್ಲಿ ಶೇ.12 ರಷ್ಟು ಪಾಲನ್ನು ಹೊಂದಿವೆ.

    ಸ್ಯಾಮ್‌ಸಂಗ್‌ ಆನ್‌ಲೈನ್‌ನಲ್ಲಿ ಹೊಸ ಫೋನ್‌ಗಳನ್ನು ಬಿಡುಗಡೆ ಮಾಡಿದ್ದರಿಂದ ಮಾರಾಟ ಹೆಚ್ಚಳವಾಗಿದೆ. 2018ರ ಮೂರನೇ ತ್ರೈಮಾಸಿಕದಿಂದ ಕ್ಸಿಯೋಮಿ ಪ್ರತಿ ತ್ರೈಮಾಸಿಕದಲ್ಲೂ ಮೊದಲ ಸ್ಥಾನವನ್ನು ಉಳಿಸಿಕೊಂಡಿತ್ತು. ಆದರೆ ಈ ಬಾರಿ ಕೋವಿಡ್‌ 19ನಿಂದಾಗಿ ಬೇಡಿಕೆ ಇದ್ದರೂ ವಿತರಣೆಗೆ ಸಮಸ್ಯೆಯಾದ ಕಾರಣ ಮಾರುಕುಟ್ಟೆಯಲ್ಲಿ ಕುಸಿತ ಕಂಡಿದೆ. ರೆಡ್‌ಮೀ ನೋಟ್‌ 9 ಮತ್ತು ನೋಟ್‌ 9 ಸೀರಿಸ್‌ಗೆ ಬಹಳ ಬೇಡಿಕೆ ಇದೆ. ಹೀಗಾಗಿ ಮುಂದಿನ ದಿನದಲ್ಲಿ ಕ್ಸಿಯೋಮಿ ಮೊದಲ ಸ್ಥಾನಕ್ಕೆ ಬರುವ ಸಾಧ್ಯತೆಯಿದೆ ಎಂದು ಕೌಂಟರ್‌ಪಾಯಿಂಟ್‌ ಹೇಳಿದೆ.

     

    ಪೋಕೋ ಫೋನ್‌ಗಳು ಸೇರಿ ಕ್ಸಿಯೋಮಿ ಮಾರುಕಟ್ಟೆಯನ್ನು ಲೆಕ್ಕ ಹಾಕಲಾಗಿದೆ. ಒಟ್ಟು 10 ಲಕ್ಷ ಪೊಕೋ ಫೋನ್‌ಗಳು ಮಾರಾಟವಾಗಿದೆ.

    ಡಿಸ್ಪೇ ಮತ್ತು ಟಚ್‌ ಪ್ಯಾನೆಲ್‌ಗಳ ಮೇಲೆ ಶೇ.10 ಅಬಕಾರಿ ಸುಂಕ ಹೇರಿದ ಪರಿಣಾಮ ಮುಂದಿನ ತ್ರೈಮಾಸಿಕದಲ್ಲಿ ಫೋನ್‌ಗಳ ಬೆಲೆ ಹೆಚ್ಚಳವಾಗಲಿದೆ ಎಂದು ಕೌಂಟರ್‌ಪಾಯಿಂಟ್‌ ಅಂದಾಜಿಸಿದೆ.

    ಈ ಅವಧಿಯಲ್ಲಿ ಒಟ್ಟು ದೇಶದಲ್ಲಿ 5.3 ಕೋಟಿ ಸ್ಮಾರ್ಟ್‌ಫೋನ್‌ಗಳು ಮಾರಾಟಗೊಂಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇ.9ರಷ್ಟು ಫೋನ್‌ ಮಾರಾಟದಲ್ಲಿ ಏರಿಕೆಯಾಗಿದೆ. 10 ಸಾವಿರ -20 ಸಾವಿರ ರೂ. ಮಧ್ಯೆ  ಬೆಲೆ ಇರುವ ಫೋನ್‌ಗಳು ದೇಶದಲ್ಲಿ ಹೆಚ್ಚು ಮಾರಾಟ ಕಂಡಿದೆ.

  • ಸ್ಮಾರ್ಟ್‌ಫೋನ್‌ ಮಾರಾಟದಲ್ಲಿ ದಾಖಲೆ – ಯಾವ ಕಂಪನಿ ಎಷ್ಟು ಫೋನ್‌ ಮಾರಾಟ ಮಾಡಿದೆ?

    ಸ್ಮಾರ್ಟ್‌ಫೋನ್‌ ಮಾರಾಟದಲ್ಲಿ ದಾಖಲೆ – ಯಾವ ಕಂಪನಿ ಎಷ್ಟು ಫೋನ್‌ ಮಾರಾಟ ಮಾಡಿದೆ?

    ನವದೆಹಲಿ: ಸೆಪ್ಟೆಂಬರ್‌ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ 5 ಕೋಟಿ ಸ್ಮಾರ್ಟ್‌ಫೋನ್‌ಗಳು ಭಾರತದಲ್ಲಿ ಮಾರಾಟಗೊಂಡಿದೆ. ಈ ಮೂಲಕ ಸ್ಮಾರ್ಟ್‌ಫೋನ್‌ ಮಾರಾಟದಲ್ಲಿ ಭಾರತದಲ್ಲಿ ದಾಖಲೆ ನಿರ್ಮಾಣವಾಗಿದೆ.

    2019ರ ಈ ಅವಧಿಗೆ ಹೋಲಿಸಿದರೆ ಶೇ.8 ರಷ್ಟು ಬೆಳವಣಿಗೆಯಾಗಿದೆ. ಒಂದು ತ್ರೈಮಾಸಿಕದಲ್ಲಿ ಇಷ್ಟೊಂದು ಬೆಳವಣಿಗೆಯಾಗಿದ್ದು ದಾಖಲೆ ಎಂದು ಮಾರುಕಟ್ಟೆ ವಿಶ್ಲೇಷಣಾ ಕಂಪನಿ ಕ್ಯಾನಲಿಸ್‌ ಹೇಳಿದೆ.

    ಲಾಕ್‌ಡೌನ್‌ ಬಳಿಕ ನಿರ್ಬಂಧಗಳು ತೆರವುಗೊಂಡಿದ್ದು ಆರ್ಥಿಕ ಚಟುವಟಿಕೆಗಳು ಮತ್ತೆ ಆರಂಭವಾಗಿದೆ. 3 ತಿಂಗಳು ಲಾಕ್‌ಡೌನ್‌ ಅವಧಿಯಲ್ಲಿ ಅಂಗಡಿಗಳು ಮುಚ್ಚಿತ್ತು. ಬಳಿಕ ಗ್ರಾಹಕರು ಹೆಚ್ಚಿನ ಸಂಖ್ಯೆಯನ್ನು ಫೋನ್‌ ಖರೀದಿಸಿದ್ದರಿಂದ ಈ ಪ್ರಗತಿಯಾಗಿದೆ ಎಂದು ತಿಳಿಸಿದೆ.

     

    ಗಲ್ವಾನ್‌ ಘರ್ಷಣೆಯ ಬಳಿಕ ಚೀನಾ ಮತ್ತು ಭಾರತ ನಡುವಿನ ಸಂಬಂಧ ಹಳಸಿದ್ದರೂ ರೆ ಇದು ಸ್ಮಾರ್ಟ್‌ಫೋನ್‌ ಮಾರುಕಟ್ಟೆಯ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಕಳೆದ ವರ್ಷ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಚೀನಿ ಕಂಪನಿಗಳ ಪಾಲು ಶೇ.74 ರಷ್ಟು ಇದ್ದರೆ ಈ ವರ್ಷ ಶೇ.76ಕ್ಕೆ ಏರಿಕೆಯಾಗಿದೆ. ಈ ಮೂಲಕ ಶೇ.2 ರಷ್ಟು ಬೆಳವಣಿಗೆ ಸಾಧಿಸಿದೆ. ಆದರೆ ಜೂನ್‌ ತಿಂಗಳ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ.4ರಷ್ಟು ಕುಸಿತ ಕಂಡಿದೆ. ಜೂನ್‌ ತ್ರೈಮಾಸಿಕದಲ್ಲಿ ಚೀನಿ ಕಂಪನಿಗಳ ಪಾಲು ಶೇ.80 ರಷ್ಟು ಇತ್ತು.

    ಚೀನಾದೊಂದಿಗಿನ ಘರ್ಷಣೆಯ ಬಳಿಕ ಚೀನಾ ಕಂಪನಿಗಳು ಮಾರುಕಟ್ಟೆ ಹೂಡುವ ಖರ್ಚನ್ನು ಕಡಿಮೆ ಮಾಡಿವೆ. ನಾವು ದೇಶದ ಆರ್ಥಿಕ ಅಭಿವೃದ್ಧಿಗೆ ಸಹಕಾರ ನೀಡುತ್ತಿದ್ದೇವೆ ಎಂಬುದನ್ನು ಬಿಂಬಿಸಲು ಮುಂದಾಗುತ್ತಿವೆ ಎಂದು ತಿಳಿಸಿದೆ.

    ಯಾವ ಕಂಪನಿಯ ಪಾಲು ಎಷ್ಟಿದೆ?
    ಮೊದಲ ಸ್ಥಾನದಲ್ಲಿ ಕ್ಸಿಯೋಮಿ ಮುಂದುವರಿದ್ದರೆ ಎರಡನೇ ಸ್ಥಾನದಲ್ಲಿ ದಕ್ಷಿಣ ಕೊರಿಯಾದ ಸ್ಯಾಮ್‌ಸಂಗ್‌ ಕಂಪನಿ ಇದೆ. ಚೀನಾದ ವಿವೋ, ರಿಯಲ್‌ಮೀ, ಒಪ್ಪೋ ಅನುಕ್ರಮವಾಗಿ ಮೂರು, ನಾಲ್ಕು, ಐದನೇ ಸ್ಥಾನ ಪಡೆದಿದೆ.

    ಕ್ಸಿಯೋಮಿ 1.31 ಕೋಟಿ ಸ್ಮಾರ್ಟ್‌ಫೋನ್‌ ಮಾರಾಟ ಮಾಡುವ ಮೂಲಕ ಮಾರುಕಟ್ಟೆಯಲ್ಲಿ ಶೇ.26.1 ರಷ್ಟು ಪಾಲನ್ನು ಹೊಂದಿದೆ. ಸ್ಯಾಮ್‌ಸಂಗ್‌ 1.02 ಕೋಟಿ ಫೋನ್‌ಗಳನ್ನು ಮಾರಾಟ ಮಾಡಿ ಮಾರುಕಟ್ಟೆಯಲ್ಲಿ ಶೇ.20.4 ರಷ್ಟು ಪಾಲನ್ನು ಪಡೆದುಕೊಂಡಿದೆ.

    ಉಳಿದಂತೆ ವಿವೋ 88 ಲಕ್ಷ(ಶೇ.17.6), ರಿಯಲ್‌ಮೀ 87 ಲಕ್ಷ(ಶೇ.17.4), ಒಪ್ಪೋ 61 ಲಕ್ಷ(ಶೇ.12.1) ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡಿವೆ. ಐಫೋನ್‌, ಒನ್‌ ಪ್ಲಸ್‌ ಸೇರಿದಂತೆ ಇತರೇ ಎಲ್ಲ 31 ಲಕ್ಷ(ಶೇ.6.3) ಫೋನ್‌ಗಳು ಮಾರಾಟವಾಗಿದೆ ಎಂದು ಕ್ಯಾನಲಿಸ್‌ ತಿಳಿಸಿದೆ.

  • ಇಸ್ರೋದ ‘ನಾವಿಕ್’ ಬಳಸಿ ಫೋನ್ ಬಿಡುಗಡೆ ಮಾಡಲಿದೆ ಕ್ಸಿಯೋಮಿ – ಏನಿದರ ವಿಶೇಷತೆ?

    ಇಸ್ರೋದ ‘ನಾವಿಕ್’ ಬಳಸಿ ಫೋನ್ ಬಿಡುಗಡೆ ಮಾಡಲಿದೆ ಕ್ಸಿಯೋಮಿ – ಏನಿದರ ವಿಶೇಷತೆ?

    – ಅಮೆರಿಕದ ಜಿಪಿಎಸ್ ಅವಶ್ಯಕತೆಯಿಲ್ಲ
    – ರೆಡ್‍ಮೀ ಫೋನಿನಲ್ಲಿ ಇರಲಿದೆ ಕ್ವಾಲಕಂ ಸ್ನಾಪ್‍ಡ್ರಾಗನ್ ಚಿಪ್

    ಬೆಂಗಳೂರು: ದೇಶದ ನಂಬರ್ ಒನ್ ಸ್ಮಾರ್ಟ್ ಫೋನ್ ಕಂಪನಿ ಕ್ಸಿಯೋಮಿ ಇಸ್ರೋ ನಿರ್ಮಿತ ಸ್ವದೇಶಿ ಜಿಪಿಎಸ್ ‘ನಾವಿಕ್’ ಬಳಸಿ ಫೋನ್ ಬಿಡುಗಡೆ ಮಾಡುವುದಾಗಿ ತಿಳಿಸಿದೆ.

    ಇಲ್ಲಿಯವರೆಗೆ ಭಾರತದಲ್ಲಿ ಬಿಡುಗಡೆಯಾಗುತ್ತಿದ್ದ ಫೋನ್ ಗಳು ಅಮೆರಿಕದ ಜಿಪಿಎಸ್(ಗ್ಲೋಬಲ್ ಪೊಸಿಶನಿಂಗ್ ಸಿಸ್ಟಂ) ಬಳಸಿಕೊಳ್ಳುತ್ತಿದ್ದವು. ಆದರೆ ಇನ್ನು ಮುಂದೆ ಭಾರತದಲ್ಲಿ ಬಿಡುಗಡೆಯಾಗಲಿರುವ ಫೋನ್ ಗಳು ನಾವಿಕ್(ನಾವಿಗೇಷನ್ ವಿಥ್ ಕಾನ್‍ಸ್ಟೇಲೇಶನ್) ಬಳಸಲಿವೆ.

    ಫೋನಿನಲ್ಲಿ ‘ನಾವಿಕ್’ ನೀಡಲಿರುವ ಮೊದಲ ಕಂಪನಿ ಕ್ಸಿಯೋಮಿ ಆಗಿದ್ದು, ಈ ಸಂಬಂಧ ಕ್ಸಿಯೋಮಿ ಇಂಡಿಯಾ ಕಂಪನಿಯ ಉಪಾಧ್ಯಕ್ಷ ಮನುಕುಮಾರ್ ಜೈನ್ ಬೆಂಗಳೂರಿನ ಇಸ್ರೋ ಕಂಪನಿಗೆ ಮಂಗಳವಾರ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.

    “ಭಾರತದ ಟೆಕ್ ಲೋಕದಲ್ಲಿ ಹೊಸ ಅಧ್ಯಾಯ. ಇಸ್ರೋ ನಾವಿಕ್ ವಿಶೇಷತೆಯನ್ನು ನೀಡುವ ವಿಶ್ವದ ಮೊದಲ ಫೋನ್ ರೆಡ್ ಮಿ ಆಗಲಿದೆ ಎಂದು ಬಹಳ ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ” ಎಂದು ಮನುಕುಮಾರ್ ಜೈನ್ ಟ್ವೀಟ್ ಮಾಡಿದ್ದಾರೆ.

    ‘ನಾವಿಕ್’ ವಿಶೇಷತೆ ಅಷ್ಟು ಸುಲಭವಾಗಿ ಫೋನಿನಲ್ಲಿ ಬರಲು ಸಾಧ್ಯವಿಲ್ಲ. ಫೋನ್ ತಯಾರಿಕಾ ಕಂಪನಿ ಮತ್ತು ಚಿಪ್ ತಯಾರಿಕಾ ಕಂಪನಿ ಇಸ್ರೋ ಜೊತೆ ಮಾತುಕತೆ ನಡೆಸಿ ನಾವಿಕ್ ಬೆಂಬಲಿಸುವ ಸಾಫ್ಟ್ ವೇರ್ ತಯಾರಿಸಬೇಕಾಗುತ್ತದೆ. ಈ ಕಾರಣಕ್ಕಾಗಿ ಇಸ್ರೋ ಜೊತೆ ಅಮೆರಿಕದ ಸೆಮಿಕಂಡಕ್ಟರ್ ಕಂಪನಿ ಕ್ವಾಲಕಂ ಮಾತುಕತೆ ನಡೆಸಿ ಈ ವರ್ಷದ ಜನವರಿಯಲ್ಲಿ ಸ್ನಾಪ್‍ಡ್ರಾಗನ್ ಚಿಪ್ ಬಿಡುಗಡೆ ಮಾಡಿತ್ತು. ಈ ಚಿಪ್ ಬಳಸಿಕೊಂಡು ಕ್ಸಿಯೋಮಿ ಕಂಪನಿ ನಾವಿಕ್ ಬೆಂಬಲಿಸುವ ಸಾಫ್ಟ್ ವೇರ್ ತಯಾರಿಸಿ ಫೋನ್ ಬಿಡುಗಡೆ ಮಾಡಲಿದೆ.

    2020ರಲ್ಲಿ ಬಿಡುಗಡೆಯಾಗಲಿರುವ ವಿವಿಧ ಬೆಲೆಯ ಫೋನ್ ಗಳಲ್ಲಿ ಸ್ನಾಪ್ ಡ್ರಾಗನ್ ಚಿಪ್ ಬಳಸಿ ನಾವಿಕ್ ಬೆಂಬಲಿಸುವ ಫೋನ್ ಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಕ್ಸಿಯೋಮಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

    ಕ್ವಾಲಕಂ ಸ್ನಾಪ್‍ಡ್ರಾಗನ್ 720ಜಿ, 662 ಮತ್ತು 460 ಚಿಪ್ ಗಳು ನಾವಿಕ್ ಬೆಂಬಲಿಸಲಿದೆ. ಮಧ್ಯಮ ಮತ್ತು ಎಂಟ್ರಿ ಲೆವೆಲ್ ಸ್ಮಾರ್ಟ್‍ಫೋನ್ ಗಳಲ್ಲಿ ಬಳಸುವ ಉದ್ದೇಶಕ್ಕಾಗಿ ಈ ಚಿಪ್ ಅಭಿವೃದ್ಧಿ ಪಡಿಸಲಾಗಿದೆ. ಈ ಚಿಪ್ ಗಳು ವೈಫೈ 6, ಬ್ಲೂಟೂತ್ 5.1 ಜೊತೆಗೆ 4ಜಿ ನೆಟ್‍ವರ್ಕಿಗೆ ಬೆಂಬಲ ನೀಡುತ್ತದೆ. ಕ್ವಾಲಕಂ ಬಿಡುಗಡೆ ಮಾಡಿದ ಚಿಪ್ ನಾವಿಕ್ ಅಲ್ಲದೇ ಅಮೆರಿಕದ ‘ಜಿಪಿಎಸ್’, ರಷ್ಯಾದ ‘ಗ್ಲೋನಾಸ್’, ಯುರೋಪಿಯನ್ ಒಕ್ಕೂಟದ ‘ಗೆಲಿಲಿಯೊ’, ಚೀನಾದ ‘ಬೈಡೂ’ವನ್ನು ಬೆಂಬಲಿಸುತ್ತದೆ.

    ಭಾರತೀಯ ಪ್ರಾದೇಶಿಕ ಪಥದರ್ಶಕ ಉಪಗ್ರಹ ವ್ಯವಸ್ಥೆ(ಐಆರ್‌ಎನ್‌ಎಸ್‌ಎಸ್)7 ಉಪಗ್ರಹಗಳನ್ನು ಹೊಂದಿದೆ. ಅಮೆರಿಕದ ಜಿಪಿಎಸ್ ವ್ಯವಸ್ಥೆಯಲ್ಲಿ 24 ಉಪಗ್ರಹಗಳು ಇದ್ದರೆ, ಭಾರತದ `ನಾವಿಕ್’ನಲ್ಲಿ 7 ಉಪಗ್ರಹಗಳಿವೆ. ಅಮೆರಿಕದ ಉಪಗ್ರಹಗಳು ಇಡೀ ವಿಶ್ವದ ವ್ಯಾಪ್ತಿ ಹೊಂದಿದ್ದರೆ, ನಾವಿಕ್ ಭಾರತಕ್ಕೆ ಮಾತ್ರ ಸೀಮಿತವಾಗಿದೆ. ಈ ಹಿಂದೆ ಇಸ್ರೋದ ಹಿರಿಯ ಅಧಿಕಾರಿಯೊಬ್ಬರು ಅಮೆರಿಕದ ಜಿಪಿಎಸ್‍ಗಿಂತಲೂ ಭಾರತದ ನಾವಿಕ್ ಬೇಕಾದ ಸ್ಥಳವನ್ನು ಹೆಚ್ಚು ನಿಖರವಾಗಿ ಗುರುತಿಸುವ ಸಾಮಥ್ರ್ಯವನ್ನು ಹೊಂದಿದೆ ಎಂದು ತಿಳಿಸಿದ್ದರು.

    ಐಆರ್‌ಎನ್‌ಎಸ್‌ಎಸ್ ಸರಣಿಯ ಮೊದಲ ಉಪಗ್ರಹವನ್ನು 2013ರ ಜುಲೈ 1ರಂದು ಹಾರಿಬಿಡಲಾಗಿತ್ತು. ಕೊನೆಯ ಉಪಗ್ರಹವನ್ನು 2018ರ ಏಪ್ರಿಲ್ 12 ರಂದು ಕಕ್ಷೆಗೆ ಸೇರಿಸಲಾಗಿತ್ತು. ಈ `ನಾವಿಕ್’ ಪಥನಿರ್ದೇಶನ ವ್ಯವಸ್ಥೆಗೆ 4 ಉಪಗ್ರಹ ಸಾಕಾದರೂ ಜಿಪಿಎಸ್ ವ್ಯವಸ್ಥೆಯ ಹೆಚ್ಚಿನ ನಿಖರತೆಗಾಗಿ 7 ಉಪಗ್ರಹಗಳನ್ನು ಇಸ್ರೋ ಹಾರಿಸಿದೆ.

    ಯೋಜನೆಗೆ ಕೈ ಹಾಕಿದ್ದು ಯಾಕೆ?
    1999 ರ ಕಾರ್ಗಿಲ್ ಯುದ್ಧದ ವೇಳೆ ಪಾಕಿಸ್ತಾನ ಸೇನೆ ಭಾರತಕ್ಕೆ ನುಸುಳಿತ್ತು. ಈ ವೇಳೆ ಭಾರತ ಅಮೆರಿಕಗೆ ಜಿಪಿಎಸ್ ಮಾಹಿತಿ ನೀಡುವಂತೆ ಮನವಿ ಸಲ್ಲಿಸಿತ್ತು. ಆದರೆ ಅಮೆರಿಕ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಹೇಳಿತ್ತು. ಹೀಗಾಗಿ ಭಾರತೀಯ ವಿಜ್ಞಾನಿಗಳು ಸ್ವದೇಶಿ ಜಿಪಿಎಸ್ ವ್ಯವಸ್ಥೆ ನಿರ್ಮಿಸಲು ಮುಂದಾಗಿದ್ದರು. ಈ ಯೋಜನೆಗಾಗಿ ಒಟ್ಟು 1420 ಕೋಟಿ ರೂ. ಹಣವನ್ನು ಇಸ್ರೋ ವೆಚ್ಚ ಮಾಡಿದೆ.

    ಲಾಭ ಏನು?
    ಹವಾಮಾನ ಮುನ್ಸೂಚನೆ, ವಿಕೋಪ ನಿಯಂತ್ರಣ, ಅಪರಿಚಿತ ಸ್ಥಳದ ವಿಳಾಸವನ್ನು ಪತ್ತೆ ಮಾಡುತ್ತದೆ. ಎರಡು ರೀತಿಯ ಸೇವೆಯನ್ನು ಈ ಉಪಗ್ರಹ ನೀಡಲಿದ್ದು, ಸ್ಟ್ಯಾಂಡರ್ಡ್ ಪೊಸಿಷನಿಂಗ್ ಸೇವೆಯ ಮೂಲಕ ಸಾರ್ವಜನಿಕ ಬಳಕೆಗೆ ಸಹಕಾರ ನೀಡಲಿದ್ದರೆ, ರಿಸ್ಟ್ರಿಕ್ಟಡ್ ಸರ್ವಿಸ್ ಮೂಲಕ ಭಾರತೀಯ ಸೇನೆ, ಮತ್ತು ಭಾರತ ಸರ್ಕಾರದ ಕೆಲ ಸಂಸ್ಥೆಗಳಿಗೆ ಸೇವೆ ನೀಡುತ್ತದೆ.

    ಜಿಪಿಎಸ್ ವ್ಯವಸ್ಥೆ ಹೊಂದಿರುವ ದೇಶಗಳು:
    ಪ್ರಸ್ತುತ ವಿಶ್ವದಲ್ಲಿ ಅಮೆರಿಕ,(ಜಿಪಿಎಸ್), ಯುರೋಪಿಯನ್ ಒಕ್ಕೂಟ(ಗೆಲಿಲಿಯೊ), ರಷ್ಯಾ(ಗ್ಲೋನಾಸ್), ಚೀನಾ(ಬೈಡೂ) ಜಿಪಿಎಸ್ ವ್ಯವಸ್ಥೆಯನ್ನು ಹೊಂದಿದೆ. ಐದನೇ ದೇಶವಾಗಿ ಭಾರತ ಈ ಪಟ್ಟಿಗೆ ಸೇರ್ಪಡೆಯಾಗಿತ್ತು.

  • 13 ಲಕ್ಷ ರೂ. ಮೌಲ್ಯದ ನಕಲಿ ಕ್ಸಿಯೋಮಿ ಉತ್ಪನ್ನಗಳು ವಶ

    13 ಲಕ್ಷ ರೂ. ಮೌಲ್ಯದ ನಕಲಿ ಕ್ಸಿಯೋಮಿ ಉತ್ಪನ್ನಗಳು ವಶ

    – ದೇಶದಲ್ಲಿ ಬಿಡುಗಡೆಯಾಗದೇ ಇದ್ದರೂ ಈ ಮಾರುಕಟ್ಟೆಯಲ್ಲಿ ಲಭ್ಯ

    ನವದೆಹಲಿ: ಒಟ್ಟು 13 ಲಕ್ಷ ರೂ. ಮೌಲ್ಯದ ಕ್ಸಿಯೋಮಿ ಕಂಪನಿಯ ನಕಲಿ ಉತ್ಪನ್ನಗಳನ್ನು ದೆಹಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ನಕಲಿ ಎಂಐ ಪವರ್ ಬ್ಯಾಂಕ್, ನೆಕ್ ಬ್ಯಾಂಡ್, ಕೇಬಲ್ ಜೊತೆಗೆ ಟ್ರಾವೆಲ್ ಅಡಾಪ್ಟರ್, ಇಯರ್ ಫೋನ್ ಮತ್ತು ಹೆಡ್‍ಸೆಟ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

    ದೇಶದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗದೇ ಇದ್ದರೂ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವುದನ್ನು ಕಂಡು ಕ್ಸಿಯೋಮಿ ಕಂಪನಿ ದೂರು ನೀಡಿತ್ತು.

    ಈ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಕರೋಲ್ ಬಾಗ್‍ನ ಗಫೂರ್ ಮಾರುಕಟ್ಟೆ ಮೇಲೆ ದಾಳಿ ನಡೆಸಿ ವಸ್ತುಗಳನ್ನು ವಶ ಪಡಿಸಿಕೊಂಡಿದ್ದಾರೆ.

    ಗಫೂರ್ ಮಾರುಕಟ್ಟೆ ದೆಹಲಿಯ ಪ್ರಸಿದ್ಧ ಮೊಬೈಲ್ ಫೋನ್ ಮತ್ತು ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಮಾರುಕಟ್ಟೆಯಾಗಿದ್ದು ಕಡಿಮೆ ಬೆಲೆಯಲ್ಲಿ ಚೀನಾ ವಸ್ತುಗಳು ದೊರಕುತ್ತಿವೆ. ವಿಚಾರಣೆ ವೇಳೆ 4 ಮಂದಿ ವಿತರಕರು ಕ್ಸಿಯೋಮಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾರೆ ಎನ್ನುವ ವಿಚಾರ ಬೆಳಕಿಗೆ ಬಂದಿದೆ. 2015ರಲ್ಲಿ ದೆಹಲಿ ಪೊಲೀಸರು 30 ನಕಲಿ ಐಫೋನ್ 5 ಮತ್ತು ಐಫೋನ್ 6 ಮಾದರಿಯನ್ನು ವಶಪಡಿಸಿಕೊಂಡಿದ್ದರು.

    ದೆಹಲಿ ಮಾರುಕಟ್ಟೆಯಲ್ಲಿ ಎಷ್ಟು ಕಡಿಮೆಗೆ ಉತ್ಪನ್ನಗಳು ಸಿಗುತ್ತದೆ ಎಂದರೆ ಕೇವಲ 11 ಸಾವಿರ ರೂ.ಗೆ ಐಫೋನ್6 ದೊರೆಯುತ್ತದೆ. ಈ ಫೋನಿಗೆ ಆನ್‍ಲೈನ್ ಶಾಪಿಂಗ್ ತಾಣದಲ್ಲಿ 25,749 ರೂ. ದರ ನಿಗದಿಯಾಗಿದೆ.

  • ಶೀಘ್ರವೇ ಭಾರತದ ಮಾರುಕಟ್ಟೆಗೆ ಕ್ಸಿಯೋಮಿಯ 108 ಎಂಪಿ ಫೋನ್ ಬಿಡುಗಡೆ

    ಶೀಘ್ರವೇ ಭಾರತದ ಮಾರುಕಟ್ಟೆಗೆ ಕ್ಸಿಯೋಮಿಯ 108 ಎಂಪಿ ಫೋನ್ ಬಿಡುಗಡೆ

    ನವದೆಹಲಿ: ಶೀಘ್ರವೇ ಭಾರತದ ಮಾರುಕಟ್ಟೆಗೆ ಚೀನಾದ ಸ್ಮಾರ್ಟ್ ಫೋನ್  ಕಂಪನಿ ಕ್ಸಿಯೋಮಿಯ 108 ಮೆಗಾಪಿಕ್ಸೆಲ್ ಹೊಂದಿರುವ ಪೆಂಟಾ ಕ್ಯಾಮೆರಾ ಇರುವ ಡ್ಯುಯಲ್ ನಾನೋ ಸಿಮ್ ಫೋನ್ ಬಿಡುಗಡೆಯಾಗಲಿದೆ.

    ಕ್ಸಿಯೋಮಿ ಭಾರತದ ಕಂಪನಿಯ ಮುಖ್ಯಸ್ಥ ಮನುಕುಮಾರ್ ಜೈನ್ ಟ್ವಿಟ್ಟರ್ ನಲ್ಲಿ ಈ ಫೋನ್ ಬಿಡುಗಡೆಯಾಗಲಿರುವ ಬಗ್ಗೆ ಮಾಹಿತಿ ನೀಡಿದ್ದು ಯಾವಾಗ ಬಿಡುಗಡೆಯಾಗುತ್ತದೆ ಎನ್ನುವುದನ್ನು ತಿಳಿಸಿಲ್ಲ. ಕ್ಸಿಯೋಮಿ ಕಡಿಮೆ ಬೆಲೆಯ ಫೋನ್‍ಗಳಲ್ಲಿ ನಂಬರ್ ಒನ್ ಪಟ್ಟದಲ್ಲಿ ಮುಂದುವರಿದಿದ್ದು ಪ್ರೀಮಿಯಂ ಸೆಗ್ಮೆಂಟ್ ನಲ್ಲಿ ಇನ್ನೂ ಮಾರುಕಟ್ಟೆಯನ್ನು ವಿಸ್ತರಿಸಿಲ್ಲ. ಈಗ ಈ ಫೋನ್ ಬಿಡುಗಡೆ ಮಾಡುವ ಮೂಲಕ ಆಪಲ್, ಸ್ಯಾಮ್‍ಸಂಗ್, ಒನ್ ಪ್ಲಸ್ ಕಂಪನಿಗಳಿಗೆ ಸ್ಪರ್ಧೆ ನೀಡಲು ಮುಂದಾಗಿದೆ.

    ಸ್ಪೇನ್ ದೇಶದ ರಾಜಧಾನಿ ಮ್ಯಾಡ್ರಿಡ್ ನಲ್ಲಿ ನವೆಂಬರ್ ಎರಡನೇ ವಾರದಲ್ಲಿ ಎಂಐ ನೋಟ್ 10 ಫೋನ್ ಎರಡು ಮಾದರಿಯಲ್ಲಿ ಬಿಡುಗಡೆಯಾಗಿತ್ತು.  6 ಜಿಬಿ ರ‍್ಯಾಮ್+ 128 ಜಿಬಿ ಆಂತರಿಕ ಮೆಮೊರಿಯ ಫೋನಿಗೆ 549 ಯುರೋ(ಅಂದಾಜು 43 ಸಾವಿರ ರೂ.), 8 ಜಿಬಿ ರ‍್ಯಾಮ್ + 256 ಜಿಬಿ ಆಂತರಿಕ ಮಮೊರಿಯ ಫೋನಿಗೆ  649 ಯುರೋ(ಅಂದಾಜು 51 ಸಾವಿರ ರೂ.) ನಿಗದಿ ಮಾಡಿದೆ. ಬಿಳಿ, ಹಸಿರು, ಕಪ್ಪು, ಬಣ್ಣದಲ್ಲಿ ಈ ಫೋನ್ ಲಭ್ಯವಿದೆ. ಇದನ್ನೂ ಓದಿ: ಮೊಬೈಲ್ ಡೇಟಾ ಹನಿಮೂನ್ ಅವಧಿ ಮುಕ್ತಾಯ – ಒಬ್ಬ ಗ್ರಾಹಕನಿಂದ ಟೆಲಿಕಾಂ ಕಂಪನಿಗೆ ಎಷ್ಟು ಆದಾಯ ಬರುತ್ತೆ?

    ಭಾರತದ ಮಾರುಕಟ್ಟೆಯಲ್ಲಿ ಕಳೆದ ಎರಡು ವರ್ಷಗಳಿಂದ ಕ್ಸಿಯೋಮಿ ನಂಬರ್ ಒನ್ ಪಟ್ಟದಲ್ಲಿ ಮುಂದುವರಿಯುತ್ತಿದೆ. ಮಾರುಕಟ್ಟೆ ಕ್ಸಿಯೋಮಿ ಶೇ.27 ರಷ್ಟು ಪಾಲನ್ನು ಹೊಂದಿದ್ದರೆ ಸ್ಯಾಮ್‍ಸಂಗ್ ಶೇ.18.9 ರಷ್ಟು ಪಾಲನ್ನು ಹೊಂದುವ ಮೂಲಕ ಎರಡನೇ ಸ್ಥಾನ ಪಡೆದಿದೆ. ವಿವೋ ಶೇ.15.2, ರಿಯಲ್ ಮೀ ಶೇ.14.3, ಒಪ್ಪೋ ಶೇ.11.8 ರಷ್ಟು ಪಾಲನ್ನು ಪಡೆದುಕೊಂಡಿದೆ.

    ಕ್ಯಾಮೆರಾ ವೈಶಿಷ್ಟ್ಯತೆ ಏನು?
    ನೋಟ್ 10 ಫೋನಿನಲ್ಲಿ ಒಟ್ಟು 5 ಕ್ಯಾಮೆರಾ ಇದೆ. 108 ಮೆಗಾಪಿಕ್ಸೆಲ್ ಸೆನ್ಸರ್ ಹೊಂದಿರುವ ಕ್ಯಾಮೆರಾ, 5 ಎಂಪಿ ಕ್ಯಾಮೆರಾ(50 ಎಕ್ಸ್ ಝೂಮ್), ಸ್ಪಷ್ಟವಾದ ಭಾವಚಿತ್ರ ತೆಗೆಯಲು 12 ಎಂಪಿ ಪೊಟ್ರೈಟ್ ಕ್ಯಾಮೆರಾ, 20 ಎಂಪಿ ಆಲ್ಟ್ರಾ ವೈಡ್ ಆಂಗಲ್, ಮ್ಯಾಕ್ರೋ ಫೋಟೋಗಳಿಗಾಗಿ 2 ಎಂಪಿ ಕ್ಯಾಮೆರಾ ನೀಡಲಾಗಿದೆ. ಮುಂದುಗಡೆ ಸೆಲ್ಫಿ ಕ್ಲಿಕ್ಕಿಸಿಲು 32 ಎಂಪಿ ಕ್ಯಾಮೆರಾವನ್ನು ನೀಡಲಾಗಿದೆ. ಮುಂದುಗಡೆ ಕ್ಯಾಮೆರಾದ ಜೊತೆ ವಾಟರ್ ಪ್ರೂಫ್ ನಾಚ್ ಇದೆ.

    ಬಾಡಿ ಮತ್ತು ಡಿಸ್ಪ್ಲೇ:
    157.8*74.2*9.7 ಮಿ.ಮೀ ಗಾತ್ರ, 208 ಗ್ರಾಂ ತೂಕ, ಹಿಂದುಗಡೆ ಮುಂದುಗಡೆ ಗ್ಲಾಸ್(ಗೊರಿಲ್ಲ ಗ್ಲಾಸ್), ಡ್ಯುಯಲ್ ಸಿಮ್, 6.47 ಇಂಚಿನ ಸೂಪರ್ ಅಮೊಲೆಡ್ ಕೆಪಾಸಿಟೆಟಿವ್ ಟಚ್ ಸ್ಕ್ರೀನ್(1080*2340 ಪಿಕ್ಸೆಲ್, 398 ಪಿಪಿಐ), ಕಾರ್ನಿಂಗ್ ಗೊರಿಲ್ಲ ಗ್ಲಾಸ್ 5.

    https://twitter.com/manukumarjain/status/1194220026879827968

    ಪ್ಲಾಟ್‍ಫಾರಂ ಮತ್ತು ಮೆಮೊರಿ:
    ಆಂಡ್ರಾಯ್ಡ್ 9.0 ಪೈ ಓಎಸ್, ಕ್ವಾಲಕಂ ಸ್ನಾಪ್ ಡ್ರಾಗನ್ ಅಕ್ಟಾಕೋರ್ ಪ್ರೊಸೆಸರ್, ಅಡ್ರಿನೊ 618 ಗ್ರಾಫಿಕ್ಸ್ ಪ್ರೊಸೆಸರ್, 6 ಜಿಬಿ ರ‍್ಯಾಮ್+ 128 ಜಿಬಿ ಆಂತರಿಕ ಮೆಮೊರಿ ಅಥವಾ 8 ಜಿಬಿ ರ‍್ಯಾಮ್ + 256 ಜಿಬಿ ಆಂತರಿಕ ಮಮೊರಿ, ಹೆಚ್ಚುವರಿ ಮೆಮೊರಿ ವಿಸ್ತರಿಸಲು ಕಾರ್ಡ್ ಸ್ಲಾಟ್ ಇಲ್ಲ.

    ಇತರೇ
    ಫಿಂಗರ್ ಪ್ರಿಂಟ್ ಸೆನ್ಸರ್, ತೆಗೆಯಲು ಅಸಾಧ್ಯವಾದ ಲಿಪೋ 5260 ಎಂಎಎಚ್ ಬ್ಯಾಟರಿ, ಫಾಸ್ಟ್ ಬ್ಯಾಟರಿ ಚಾರ್ಜಿಂಗ್

  • ಕ್ಸಿಯೋಮಿಯಿಂದ 108 ಎಂಪಿ ಕ್ಯಾಮೆರಾ ಫೋನ್ ಬಿಡುಗಡೆ – ಬೆಲೆ ಎಷ್ಟು? ಗುಣ ವೈಶಿಷ್ಟ್ಯ ಏನು?

    ಕ್ಸಿಯೋಮಿಯಿಂದ 108 ಎಂಪಿ ಕ್ಯಾಮೆರಾ ಫೋನ್ ಬಿಡುಗಡೆ – ಬೆಲೆ ಎಷ್ಟು? ಗುಣ ವೈಶಿಷ್ಟ್ಯ ಏನು?

    ಮ್ಯಾಡ್ರಿಡ್: ಚೀನಾದ ಸ್ಮಾರ್ಟ್ ಫೋನ್ ಕಂಪನಿ ಕ್ಸಿಯೋಮಿ 108 ಮೆಗಾಪಿಕ್ಸೆಲ್ ಹೊಂದಿರುವ ಪೆಂಟಾ ಕ್ಯಾಮೆರಾ ಇರುವ ಡ್ಯುಯಲ್ ನಾನೋ ಸಿಮ್ ಫೋನನ್ನು ಬಿಡುಗಡೆ ಮಾಡಿದೆ. ಈ ಮೂಲಕ ದುಬಾರಿ ಬೆಲೆಯ ಫೋನ್ ಬಿಡುಗಡೆ ಮಾಡಿ ಮಾರುಕಟ್ಟೆಯಲ್ಲಿ ಆಪಲ್, ಸ್ಯಾಮ್‍ಸಂಗ್, ಒನ್ ಪ್ಲಸ್ ಕಂಪನಿಗಳಿಗೆ ಸ್ಪರ್ಧೆ ನೀಡಲು ಮುಂದಾಗಿದೆ.

    ಸ್ಪೇನ್ ದೇಶದ ರಾಜಧಾನಿ ಮ್ಯಾಡ್ರಿಡ್ ನಲ್ಲಿ ಎಂಐ ನೋಟ್ 10 ಫೋನನ್ನು ಎರಡು ಮಾದರಿಯಲ್ಲಿ ಬಿಡುಗಡೆ ಮಾಡಿದೆ. 6 ಜಿಬಿ ರ‍್ಯಾಮ್+ 128 ಜಿಬಿ ಆಂತರಿಕ ಮೆಮೊರಿಯ ಫೋನಿಗೆ 549 ಯುರೋ(ಅಂದಾಜು 43 ಸಾವಿರ ರೂ.), 8 ಜಿಬಿ ರ‍್ಯಾಮ್ + 256 ಜಿಬಿ ಆಂತರಿಕ ಮಮೊರಿಯ ಫೋನಿಗೆ 649 ಯುರೋ(ಅಂದಾಜು 51 ಸಾವಿರ ರೂ.) ನಿಗದಿ ಮಾಡಿದೆ. ಬಿಳಿ, ಹಸಿರು, ಕಪ್ಪು, ಬಣ್ಣದಲ್ಲಿ ಈ ಫೋನ್ ಬಿಡುಗಡೆಯಾಗಿದೆ.

    ಇಟಲಿ ಮತ್ತು ಸ್ಪೇನ್ ದೇಶಗಳಲ್ಲಿ ನವೆಂಬರ್ 18 ರಂದು ಈ ಫೋನ್ ಲಭ್ಯವಿದ್ದರೆ ಇಂಗ್ಲೆಂಡ್ ನೆದರ್‍ಲ್ಯಾಂಡ್, ಬೆಲ್ಜಿಯಂಗಳಲ್ಲಿ ನಂತರದ ದಿನಗಳಲ್ಲಿ ಫೋನ್ ಲಭ್ಯವಿರಲಿದೆ ಎಂದು ಕ್ಸಿಯೋಮಿ ತಿಳಿಸಿದೆ.

    ಕ್ಯಾಮೆರಾ ವೈಶಿಷ್ಟ್ಯತೆ ಏನು?
    ನೋಟ್ 10 ಫೋನಿನಲ್ಲಿ ಒಟ್ಟು 5 ಕ್ಯಾಮೆರಾ ಇದೆ. 108 ಮೆಗಾಪಿಕ್ಸೆಲ್ ಸೆನ್ಸರ್ ಹೊಂದಿರುವ ಕ್ಯಾಮೆರಾ, 5 ಎಂಪಿ ಕ್ಯಾಮೆರಾ(50 ಎಕ್ಸ್ ಝೂಮ್), ಸ್ಪಷ್ಟವಾದ ಭಾವಚಿತ್ರ ತೆಗೆಯಲು 12 ಎಂಪಿ ಪೊಟ್ರೈಟ್ ಕ್ಯಾಮೆರಾ, 20 ಎಂಪಿ ಆಲ್ಟ್ರಾ ವೈಡ್ ಆಂಗಲ್, ಮ್ಯಾಕ್ರೋ ಫೋಟೋಗಳಿಗಾಗಿ 2 ಎಂಪಿ ಕ್ಯಾಮೆರಾ ನೀಡಲಾಗಿದೆ. ಮುಂದುಗಡೆ ಸೆಲ್ಫಿ ಕ್ಲಿಕ್ಕಿಸಿಲು 32 ಎಂಪಿ ಕ್ಯಾಮೆರಾವನ್ನು ನೀಡಲಾಗಿದೆ. ಮುಂದುಗಡೆ ಕ್ಯಾಮೆರಾದ ಜೊತೆ ವಾಟರ್ ಪ್ರೂಫ್ ನಾಚ್ ಇದೆ.

    ಬಾಡಿ ಮತ್ತು ಡಿಸ್ಪ್ಲೇ:
    157.8*74.2*9.7 ಮಿ.ಮೀ ಗಾತ್ರ, 208 ಗ್ರಾಂ ತೂಕ, ಹಿಂದುಗಡೆ ಮುಂದುಗಡೆ ಗ್ಲಾಸ್(ಗೊರಿಲ್ಲ ಗ್ಲಾಸ್), ಡ್ಯುಯಲ್ ಸಿಮ್, 6.47 ಇಂಚಿನ ಸೂಪರ್ ಅಮೊಲೆಡ್ ಕೆಪಾಸಿಟೆಟಿವ್ ಟಚ್ ಸ್ಕ್ರೀನ್(1080*2340 ಪಿಕ್ಸೆಲ್, 398 ಪಿಪಿಐ), ಕಾರ್ನಿಂಗ್ ಗೊರಿಲ್ಲ ಗ್ಲಾಸ್ 5.

    ಪ್ಲಾಟ್‍ಫಾರಂ ಮತ್ತು ಮೆಮೊರಿ:
    ಆಂಡ್ರಾಯ್ಡ್ 9.0 ಪೈ ಓಎಸ್, ಕ್ವಾಲಕಂ ಸ್ನಾಪ್ ಡ್ರಾಗನ್ ಅಕ್ಟಾಕೋರ್ ಪ್ರೊಸೆಸರ್, ಅಡ್ರಿನೊ 618 ಗ್ರಾಫಿಕ್ಸ್ ಪ್ರೊಸೆಸರ್, 6 ಜಿಬಿ ರ‍್ಯಾಮ್+ 128 ಜಿಬಿ ಆಂತರಿಕ ಮೆಮೊರಿ ಅಥವಾ 8 ಜಿಬಿ ರ‍್ಯಾಮ್ + 256 ಜಿಬಿ ಆಂತರಿಕ ಮಮೊರಿ, ಹೆಚ್ಚುವರಿ ಮೆಮೊರಿ ವಿಸ್ತರಿಸಲು ಕಾರ್ಡ್ ಸ್ಲಾಟ್ ಇಲ್ಲ.

    ಇತರೇ
    ಫಿಂಗರ್ ಪ್ರಿಂಟ್ ಸೆನ್ಸರ್, ತೆಗೆಯಲು ಅಸಾಧ್ಯವಾದ ಲಿಪೋ 5260 ಎಂಎಎಚ್ ಬ್ಯಾಟರಿ, ಫಾಸ್ಟ್ ಬ್ಯಾಟರಿ ಚಾರ್ಜಿಂಗ್

  • ಕ್ಸಿಯೋಮಿಯಿಂದ 108 ಎಂಪಿ ಕ್ಯಾಮೆರಾ ಸ್ಮಾರ್ಟ್‌ಫೋನ್ – ಕ್ಯಾಮೆರಾ ವೈಶಿಷ್ಟ್ಯಗಳೇನು?

    ಕ್ಸಿಯೋಮಿಯಿಂದ 108 ಎಂಪಿ ಕ್ಯಾಮೆರಾ ಸ್ಮಾರ್ಟ್‌ಫೋನ್ – ಕ್ಯಾಮೆರಾ ವೈಶಿಷ್ಟ್ಯಗಳೇನು?

    ಮ್ಯಾಡ್ರಿಡ್: ಚೀನಾದ ಸ್ಮಾರ್ಟ್ ಫೋನ್ ದಿಗ್ಗಜ ಕಂಪನಿ ಕ್ಸಿಯೋಮಿ 108 ಮೆಗಾಪಿಕ್ಸೆಲ್ ಹೊಂದಿರುವ ವಿಶ್ವದ ಮೊದಲ ಪೆಂಟಾ ಕ್ಯಾಮೆರಾ ಇರುವ ಫೋನನ್ನು ನವೆಂಬರ್ 6 ರಂದು ಬಿಡುಗಡೆ ಮಾಡಲಿದೆ.

    ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರವನ್ನು ಕ್ಸಿಯೋಮಿ ತಿಳಿಸಿದ್ದು ಸ್ಪೇನ್ ದೇಶದ ರಾಜಧಾನಿ ಮ್ಯಾಡ್ರಿಡ್ ನಲ್ಲಿ ಎಂಐ ನೋಟ್ 10 ಫೋನ್ ಬಿಡುಗಡೆ ಮಾಡಲಾಗುವುದು ಎಂದು ಹೇಳಿದೆ.

    ಕ್ಯಾಮೆರಾ ವೈಶಿಷ್ಟ್ಯತೆ ಏನು?
    ನೋಟ್ 10 ಫೋನಿನಲ್ಲಿ ಒಟ್ಟು 5 ಕ್ಯಾಮೆರಾ ಇದೆ. 108 ಮೆಗಾಪಿಕ್ಸೆಲ್ ಸೆನ್ಸರ್ ಹೊಂದಿರುವ ಕ್ಯಾಮೆರಾ, 5 ಎಂಪಿ ಕ್ಯಾಮೆರಾ(50 ಎಕ್ಸ್ ಝೂಮ್), ಸ್ಪಷ್ಟವಾದ ಭಾವಚಿತ್ರ ತೆಗೆಯಲು 12 ಎಂಪಿ ಪೊಟ್ರೈಟ್  ಕ್ಯಾಮೆರಾ, 20 ಎಂಪಿ ಆಲ್ಟ್ರಾ ವೈಡ್ ಆಂಗಲ್, ಮ್ಯಾಕ್ರೋ ಫೋಟೋಗಳಿಗಾಗಿ 2 ಎಂಪಿ ಕ್ಯಾಮೆರಾ ಇರಲಿದೆ.

    ಹಿಂದೆ 64 ಮೆಗಾ ಪಿಕ್ಸೆಲ್ ಕ್ಯಾಮೆರಾ ಹೊಂದಿರುವ ರೆಡ್‌ಮೀ ನೋಟ್ 8 ಪ್ರೋ ಫೋನನ್ನು ಬಿಡುಗಡೆ ಮಾಡಿದ ಬಳಿಕ ಕ್ಸಿಯೋಮಿ ಸ್ಯಾಮ್‌ಸಂಗ್ ಕಂಪನಿ ಅಭಿವೃದ್ಧಿ ಪಡಿಸಿರುವ ಕ್ಯಾಮೆರಾ ಸೆನ್ಸರ್ ಬಳಸಿ ಈ ಫೋನ್ ತಯಾರಿಸಲು ಮುಂದಾಗುತ್ತಿದೆ ಎನ್ನುವ ಸುದ್ದಿ ಪ್ರಕಟವಾಗಿತ್ತು.

    ಸ್ಯಾಮ್‍ಸಂಗ್ ಕಂಪನಿ ಐಎಸ್‍ಒಸಿಇಎಲ್‍ಎಲ್ ಬ್ರೈಟ್ ಎಚ್‍ಎಂಎಕ್ಸ್ ಸೆನ್ಸರ್ ಅಭಿವೃದ್ಧಿ ಪಡಿಸಿದೆ. 108 ರೆಸಲ್ಯೂಷನ್ ಮೆಗಾ ಪಿಕ್ಸೆಲ್ ಚಿತ್ರವನ್ನು ತೆಗೆಯಬಹುದಾದ ಮೊದಲ ಇಮೇಜ್ ಸೆನ್ಸರ್ ಇದಾಗಿದೆ. 10,80,00,000 ಪಿಕ್ಸೆಲ್(10.80 ಕೋಟಿ ಪಿಕ್ಸೆಲ್) 12032*9024 ರೆಸಲ್ಯೂಷನ್ ಹೊಂದಿರುವ ಫೋಟೋವನ್ನು ಈ ಕ್ಯಾಮೆರಾ ಸೆನ್ಸರ್ ಮೂಲಕ ತೆಗೆಯಬಹುದಾಗಿದೆ.

    ಫೋನಿನ ಗುಣವೈಶಿಷ್ಟ್ಯತೆಗಳೇನು?
    ಕ್ಯಾಮೆರಾ ವೈಶಿಷ್ಟ್ಯತೆ  ಮಾತ್ರ ಈಗ ಬಹಿರಂಗವಾಗಿದ್ದು ಇನ್ನಿತರ ಮಾಹಿತಿ ಬಹಿರಂಗವಾಗಿಲ್ಲ. ಆದರೂ ಕೆಲ ಟೆಕ್ ಸೈಟ್‌ಗಳು ಪ್ರಕಟಿಸಿದಂತೆ 6ಜಿಬಿ, 8ಜಿಬಿ, 12 ಜಿಬಿ ರ‍್ಯಾಮ್, 64 ಜಿಬಿ, 128 ಜಿಬಿ, 256 ಜಿಬಿ ಆಂತರಿಕ ಮೆಮೊರಿ, 6.47 ಇಂಚಿನ ಫುಲ್ ಎಚ್‌ಡಿ(1080*2340 ಪಿಕ್ಸೆಲ್) ಒಎಲ್‌ಇಡಿ ಸ್ಕ್ರೀನ್,  ಕ್ವಾಲಕಂ ಸ್ನಾಪ್ ಡ್ರಾಗನ್ 730 ಜಿ ಪ್ರೊಸೆಸರ್, 5026 ಎಂಎಎಚ್ ಬ್ಯಾಟರಿ ಹೊಂದಿರಲಿದೆ ಎಂದು ವರದಿಯಾಗಿದೆ. ಈ ಫೋನಿನ ಬೆಲೆ ಎಷ್ಟು ಎನ್ನುವ ಮಾಹಿತಿ ಲಭ್ಯವಾಗಿಲ್ಲ. ಅಂದಾಜು 25 ಸಾವಿರ ರೂ. ಇರಬಹುದು ಎನ್ನಲಾಗುತ್ತಿದೆ.

  • ಶಾಪಿಂಗ್ ಹಬ್ಬದಲ್ಲಿ 38 ಲಕ್ಷ ಕ್ಸಿಯೋಮಿ ಫೋನ್‌ಗಳ ಮಾರಾಟ

    ಶಾಪಿಂಗ್ ಹಬ್ಬದಲ್ಲಿ 38 ಲಕ್ಷ ಕ್ಸಿಯೋಮಿ ಫೋನ್‌ಗಳ ಮಾರಾಟ

    ನವದೆಹಲಿ: ದಸರಾ ಹಬ್ಬದ ವೇಳೆ ಆಯೋಜನೆಗೊಂಡಿದ್ದ ಆನ್‍ಲೈನ್ ಶಾಪಿಂಗ್ ಹಬ್ಬದಲ್ಲಿ ಒಟ್ಟು 38 ಲಕ್ಷ ಸ್ಮಾರ್ಟ್ ಫೋನ್‍ಗಳನ್ನು ಮಾರಾಟ ಮಾಡಲಾಗಿದೆ ಎಂದು ಕ್ಸಿಯೋಮಿ ಕಂಪನಿ ಹೇಳಿದೆ.

    ಹಬ್ಬದ ಸಂದರ್ಭದಲ್ಲಿ ಅಮೆಜಾನ್, ಫ್ಲಿಪ್‍ಕಾರ್ಟ್, ಎಂಐ.ಕಾಂ ನಲ್ಲಿ 38 ಲಕ್ಷ ಸ್ಮಾರ್ಟ್ ಫೋನ್‌ಗಳು ಸೇರಿದಂತೆ ಒಟ್ಟು 53 ಲಕ್ಷ ಸಾಧನಗಳು ಮಾರಾಟವಾಗಿದೆ ಎಂದು ಕ್ಸಿಯೋಮಿ ಕಂಪನಿ ತಿಳಿಸಿದೆ.

    ಪ್ರತಿ ವರ್ಷದ ಹಬ್ಬದ ಸಂದರ್ಭದಲ್ಲಿ ಶೇ.50 ರಷ್ಟು ಮಾರಾಟ ಹೆಚ್ಚಳವಾಗುತ್ತದೆ. ಫ್ಲಿಪ್ ಕಾರ್ಟಿನಲ್ಲಿ ರೆಡ್‍ಮೀ ನೋಟ್ 7 ಅತಿ ಹೆಚ್ಚು ಮಾರಾಟಗೊಂಡಿದ್ದರೆ ಅಮೇಜಾನ್ ತಾಣದಲ್ಲಿ ರೆಡ್‍ಮೀ 7ಎ ಹೆಚ್ಚು ಮಾರಾಟಗೊಂಡಿದೆ ಎಂದು ಕ್ಸಿಯೋಮಿ ಹೇಳಿದೆ.

    ಆನ್‍ಲೈನ್ ಶಾಪಿಂಗ್ ತಾಣಗಳ ಪೈಕಿ ಅತಿ ಹೆಚ್ಚು ಮಾರಾಟ ಕಂಡಿರುವ 10 ಫೋನ್ ಗಳ ಪೈಕಿ 5 ಫೋನ್‍ಗಳು ಕ್ಸಿಯೋಮಿಯದ್ದು ಎಂದು ತಿಳಿಸಿದೆ. ಹಬ್ಬ ಆರಂಭಗೊಂಡ ಬಳಿಕ ಅ.3 ರಂದು ಕ್ಸಿಯೋಮಿ ಟ್ವೀಟ್ ಮಾಡಿ, 2.5 ಲಕ್ಷ ಎಂಐ ಟಿವಿಗಳನ್ನು ಮಾರಾಟ ಮಾಡಿದ್ದೇವೆ ಎಂದು ಹೇಳಿಕೊಂಡಿತ್ತು.