Tag: ಕ್ಷೌರ

  • ದಲಿತರಿಗೆ ಕ್ಷೌರ ಮಾಡಲ್ಲ – ಮನನೊಂದು ಆತ್ಮಹತ್ಯೆಗೆ ಯತ್ನಿಸಿದ ಯುವಕರು

    ದಲಿತರಿಗೆ ಕ್ಷೌರ ಮಾಡಲ್ಲ – ಮನನೊಂದು ಆತ್ಮಹತ್ಯೆಗೆ ಯತ್ನಿಸಿದ ಯುವಕರು

    ಕೊಪ್ಪಳ: ದಲಿತರಿಗೆ ಕ್ಷೌರ ಮಾಡುವುದಿಲ್ಲ ಎಂದು ಕ್ಷೌರಿಕರು ಹೇಳಿದ್ದಕ್ಕೆ ಮನನೊಂದು ಯುವಕರು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ.

    ಯಲಬುರ್ಗಾ ತಾಲೂಕಿನ ಹೊಸಳ್ಳಿಯಲ್ಲಿ ದಲಿತರಿಗೆ ಕ್ಷೌರ ಮಾಡಲು ನಿರಾಕರಿಸಿ ಕ್ಷೌರಿಕರು ಜಗಳ ಮಾಡಿದ್ದಾರೆ. ಇದರಿಂದ ನೊಂದ ದಲಿತ ಯುವಕರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ಸಂಬಂಧ 16 ಜನರ ಮೇಲೆ ಪ್ರಕರಣ ದಾಖಲಿಸಲಾಗಿದೆ.

    ಹೊಸಳ್ಳಿಯಲ್ಲಿ ಜೂ. 6 ರಂದು ಗ್ರಾಮದ ಸಣ್ಣ ಹನುಮಂತ ಹಾಗೂ ಬಸವರಾಜ ಎಂಬವರು ಕ್ಷೌರ ಮಾಡಿಸಲು ಹೋಗಿದ್ದರು. ಆಗ ಕ್ಷೌರಿಕರು ದಲಿತರಿಗೆ ಕ್ಷೌರ ಮಾಡಲು ನಿರಾಕರಣೆ ಮಾಡಿದ್ದಾರೆ. ನಮಗೆ ಯಾಕೆ ಕ್ಷೌರ ಮಾಡುವುದಿಲ್ಲ ಎಂದು ದಲಿತರು ಪ್ರಶ್ನಿಸಿದ್ದು ನಂತರ ಎಂದು ವಾಗ್ವಾದ ನಡೆದಿದೆ. ಇದನ್ನು ಓದಿ: ಹಿಂದೂ ಧಾರ್ಮಿಕ ದತ್ತಿಯಿಂದ ಮಸೀದಿ, ಮದರಸಾಗಳಿಗೆ ತಸ್ತಿಕ್ ಭತ್ತೆ ನೀಡಲು ನಿರ್ಧಾರ- ವಿಹೆಚ್‍ಪಿ ವಿರೋಧ

    ಇದೇ ಸಂದರ್ಭದಲ್ಲಿ ಸ್ಥಳೀಯ ಸವರ್ಣೀಯರು ಸೇರಿಕೊಂಡು ಕ್ಷೌರ ಮಾಡಿಸಿಕೊಳ್ಳಲು ಬಂದವರ ಮೇಲೆ ಹಲ್ಲೆ, ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಗಲಾಟೆಯ ನಂತರ ಇಬ್ಬರು ಯುವಕರು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಕ್ಷಣ ಅವರನ್ನು ಯಲಬುರ್ಗಾ ಆಸ್ಪತ್ರೆಗೆ ಸೇರಿಸಲಾಗಿದೆ.

    ಈ ಘಟನೆಯ ಬಳಿಕ ಇಬ್ಬರು ಕ್ಷೌರಿಕರು ಹಾಗೂ ಸ್ಥಳೀಯ 14 ಜನರ ಮೇಲೆ ಯಲಬುರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕೊಪ್ಪಳ ಡಿವೈಎಸ್‍ಪಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಇದನ್ನು ಓದಿ: ವೆಂಟಿಲೇಟರ್ ಕದ್ದು ಪರಾರಿಯಾದ ಖತರ್ನಾಕ್ ಕಳ್ಳರು

  • ಕೊರೊನಾದಿಂದ ಮೃತ ವೃದ್ಧನಿಗೆ ಕ್ಷೌರ ಮಾಡಿದ್ದ ಕ್ಷೌರಿಕನಿಗೆ ಕ್ವಾರಂಟೈನ್

    ಕೊರೊನಾದಿಂದ ಮೃತ ವೃದ್ಧನಿಗೆ ಕ್ಷೌರ ಮಾಡಿದ್ದ ಕ್ಷೌರಿಕನಿಗೆ ಕ್ವಾರಂಟೈನ್

    ಚಿಕ್ಕಬಳ್ಳಾಪುರ: ನಗರದಲ್ಲಿ ಕೊರೊನಾಗೆ ಬಲಿಯಾದ ವೃದ್ಧನಿಗೆ ಕ್ಷೌರ ಮಾಡಿದ್ದ ಕ್ಷೌರಿಕನನ್ನೂ ಇದೀಗ ಕ್ವಾರಂಟೈನ್‍ನಲ್ಲಿ ಇಡಲಾಗಿದೆ. ಇದರ ಜೊತೆಗೆ ಈ ಕ್ಷೌರಿಕನ ಬಳಿ ಕ್ಷೌರ ಮಾಡಿಸಿಕೊಂಡವರಿಗೆ ಈಗ ಕೊರೊನಾ ಆತಂಕ ಶುರುವಾಗಿದೆ.

    ಕಳೆದ 4 ದಿನಗಳ ಹಿಂದೆ ಚಿಕ್ಕಬಳ್ಳಾಪುರ ನಗರದ 65 ವರ್ಷದ ವೃದ್ಧ ಕೊರೊನಾಗೆ ಬಲಿಯಾಗಿದ್ದರು. ಈಗಾಗಲೇ ವೃದ್ಧನ ಮಗ ಹಾಗೂ ಮನೆಯ ಎದುರಗಡೆಯ ಇಬ್ಬರು ಯುವಕರಿಗೆ ಕೊರೊನಾ ಸೋಂಕಿರುವುದು ದೃಢವಾಗಿದೆ. ಹೀಗಾಗಿ ಇವರ ಬಳಿ ಕ್ಷೌರ ಮಾಡಿಸಿಕೊಂಡವರಿಗೂ ಕೊರೊನಾ ಭೀತಿ ಎದುರಾಗಿದೆ.

    ಲಾಕ್‍ಡೌನ್ ಹಿನ್ನೆಲೆ ಮಾರ್ಚ್ ತಿಂಗಳ ಅಂತ್ಯದಲ್ಲಿ ವೃದ್ಧನ ಮನೆಗೆ ಹೋಗಿ ಕ್ಷೌರ ಮಾಡಿದ್ದರು. ಇದಾದ ಬಳಿಕ ವೃದ್ಧ ಆಸ್ಪತ್ರೆಗೆ ದಾಖಲಾಗಿದ್ದರು. ಸದ್ಯ ಕ್ಷೌರಿಕನಿಗೆ ಕೊರೊನಾ ಭೀತಿ ಶುರುವಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಮೃತ ಸೊಂಕಿತನ ಏರಿಯಾದಲ್ಲೇ ಕ್ಷೌರಿಕ ಅಂಗಡಿ ಇಟ್ಟುಕೊಂಡಿರುವ 65 ವರ್ಷದ ವ್ಯಕ್ತಿಯನ್ನು ಇನ್ಸ್ಟಿಟಿಟ್ಯೂಟ್ ಕ್ವಾರಂಟೈನ್ ಮಾಡಲಾಗಿದೆ. ಈತನ ಪತ್ನಿ ಹಾಗೂ ಮಗನನ್ನು ಹೋಮ್ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ. ಈ ಕ್ಷೌರಿಕ ಸಾವನ್ನಪ್ಪಿದ ವೃದ್ಧನಿಗೆ ಕ್ಷೌರ ಮಾಡಿ ಬಂದ ನಂತರ ಸುಮಾರು 50ಕ್ಕೂ ಹೆಚ್ಚು ಮಂದಿಗೆ ಕ್ಷೌರ ಮಾಡಿದ್ದಾರೆ ಎನ್ನಲಾಗಿದ್ದು, ಈಗ ಅವರಿಗೂ ಕೊರೊನಾ ಆತಂಕ ಶುರುವಾಗಿದೆ.

    ಕ್ಷೌರಿಕನ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಜಿಲ್ಲಾಡಳಿತ ವರದಿಯ ನಿರೀಕ್ಷೆಯಲ್ಲಿದೆ. ಈ ವೃದ್ಧನ ಬಳಿ ಯಾರಾದರೂ ಕ್ಷೌರ ಮಾಡಿಸಿಕೊಂಡಿದ್ದಲ್ಲಿ ಸ್ವಯಂಪ್ರೇರಿತವಾಗಿ ಪರೀಕ್ಷೆಗೆ ಒಳಪಡುವಂತೆ ಜಿಲ್ಲಾಡಳಿತ ಹಾಗೂ ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.

  • ಯಾರಿಗೂ ಕಮ್ಮಿ ಇಲ್ಲದಂತೆ ಕ್ಷೌರ ಮಾಡೋ ಗಂಗಮ್ಮ

    ಯಾರಿಗೂ ಕಮ್ಮಿ ಇಲ್ಲದಂತೆ ಕ್ಷೌರ ಮಾಡೋ ಗಂಗಮ್ಮ

    -ಜೀವನ ನಿರ್ವಹಣೆಗಾಗಿ ಕ್ಷೌರ ವೃತ್ತಿಗಿಳಿದ ಮಹಿಳೆ

    ಬೆಂಗಳೂರು: ನಗರದ ಹೊರವಲಯ ನೆಲಮಂಗಲದ ಕೆರೆಕತ್ತಿಗನೂರು ಗ್ರಾಮದ ನಿವಾಸಿ ಗಂಗಮ್ಮ ಇವತ್ತಿನ ನಮ್ಮ ಪಬ್ಲಿಕ್ ಹೀರೋ. ಜೀವನಾಧಾರಕ್ಕಾಗಿ ಕಳೆದ 25 ವರ್ಷಗಳಿಂದ ಕ್ಷೌರ ವೃತ್ತಿ ಮಾಡುತ್ತಿದ್ದಾರೆ. ಪತಿ ನಿಧನರಾದ ಕಾರಣ ತಾವೇ ಕತ್ತರಿ ಹಿಡಿದು ಕ್ಷೌರ ಕೆಲಸವನ್ನು ಈ ಇಳಿವಯಸ್ಸಿನಲ್ಲೂ ಮುಂದುವರಿಸಿದ್ದಾರೆ.

    ಒಂದು ಪೆಟ್ಟಿ ಅಂಗಡಿಯಲ್ಲಿ ಯುವಕರು-ವಯೋವೃದ್ಧರಿಗೆ ಕಟಿಂಗ್, ಶೇವಿಂಗ್ ಮಾಡುತ್ತಿದ್ದಾರೆ. ಜೊತೆಗೆ ಪುಟಾಣಿ ಮಕ್ಕಳಿಗೆ ಈಗಿನ ಟ್ರೆಂಡಿಂಗ್‍ನ ಕಟಿಂಗ್ ಸಹ ಮಾಡುತ್ತಾರೆ. ಗ್ರಾಮದ ಪಕ್ಕದಲ್ಲಿರುವ ಮಹಿಮೇರಂಗನಾಥ ಸ್ವಾಮಿ ದೇವಾಲಯಕ್ಕೆ ಆಗಮಿಸುವ ಹರಕೆ ಹೊತ್ತ ಭಕ್ತರ ಮುಡಿ ತೆಗೆಯೋ ಕೆಲಸವನ್ನೂ ಗಂಗಮ್ಮ ಮಾಡುತ್ತಾರೆ.

    ಬಾಲ್ಯದಿಂದ ಗಂಗಮ್ಮ ಅವರು ಕ್ಷೌರ ವೃತ್ತಿ ಕಲಿತಿರಲಿಲ್ಲ. ಗಂಡನ ಅಕಾಲಿಕ ನಿಧನ, ಜೀವನ ಸಾಗಿಸುವ ಅನಿವಾರ್ಯತೆಯಿಂದ ಈ ಕೆಲಸ ಮಾಡಲು ಆರಂಭಿಸಿದ್ದಾರೆ. ಗಂಗಮ್ಮರಿಗೆ ಮೂವರು ಮಕ್ಕಳಿದ್ದು, ಅವರನ್ನ ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದಾರೆ. ಈ ಮೂಲಕ ದುಡಿದು ತಿನ್ನದೇ ಸೋಮಾರಿ ಆಗಿರುವರಿಗೆ ಗಂಗಮ್ಮ ಮಾದರಿಯಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=4qdoepVwGx4

  • ಬಲವಂತವಾಗಿ ಮುಸ್ಲಿಂ ಯುವಕನ ಗಡ್ಡ ತೆಗೆಸಿದ ದುಷ್ಕರ್ಮಿಗಳು!

    ಬಲವಂತವಾಗಿ ಮುಸ್ಲಿಂ ಯುವಕನ ಗಡ್ಡ ತೆಗೆಸಿದ ದುಷ್ಕರ್ಮಿಗಳು!

    ಚಂಡೀಗಢ: ಮುಸ್ಲಿಂ ಯುವಕೊಬ್ಬನನ್ನು ಗಡ್ಡ ತೆಗೆಸಬೇಕೆಂದು ಒತ್ತಾಯಿಸಿ ಕೆಲ ದುಷ್ಕರ್ಮಿಗಳು ಹಲ್ಲೆ ಮಾಡಿ, ಬಲವಂತವಾಗಿ ಕ್ಷೌರ ಮಾಡಿಸಿದ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ.

    ಮೇವಾಟ್ ಜಿಲ್ಲೆಯ ಬದ್ಲಿ ನಿವಾಸಿ ಜಾಫರ್ ಉದ್ದಿನ್ ಹಲ್ಲೆಗೆ ಒಳಗಾದ ಮುಸ್ಲಿಂ ಯುವಕ. ಜಾಫರ್ ಉದ್ದಿನ್‍ನನ್ನು ಕ್ಷೌರದ ಅಂಗಡಿಗೆ ಬಲವಂತವಾಗಿ ಎತ್ತಿಕೊಂಡು ಬಂದಿದ್ದಾರೆ. ಗಡ್ಡ ತೆಗೆಯಲು ನಿರಾಕರಿಸಿದ ಕ್ಷೌರಿಕನ ಮೇಲೂ ದುಷ್ಕಮಿಗಳು ಹಲ್ಲೆ ಮಾಡಿದ್ದಾರೆ.

    ಧರ್ಮ ಸೂಚಕವಾಗಿ ಗಡ್ಡ ಬಿಟ್ಟಿರುವೆ ಎಂದು ಹೇಳಿ ಥಳಿಸಿದ ದುಷ್ಕರ್ಮಿಗಳು, ಕ್ಷೌರದ ಅಂಗಡಿಗೆ ಬಲವಂತವಾಗಿ ನನ್ನನ್ನು ಎಳೆದುಕೊಂಡು ಹೋಗಿದ್ದರು. ಕ್ಷೌರಿಕ ಗಡ್ಡ ತೆಗೆಯಲು ಹಿಂದೇಟು ಹಾಕಿದ್ದಕ್ಕೆ, ಆತನ ಮೇಲೂ ಹಲ್ಲೆ ಮಾಡಿದ್ದಾರೆ. ಅಷ್ಟೆ ಅಲ್ಲದೇ ನೀನು ಪಾಕಿಸ್ತಾನಿ ವ್ಯಕ್ತಿ, ಹೀಗಾಗಿ ಗಡ್ಡ ತೆಗೆಯಲು ಹಿಂದೇಟು ಹಾಕುತ್ತಿರುವೆ ಎಂದು ಥಳಿಸಿದ್ದರು. ಬಲವಂತವಾಗಿ ಕುರ್ಚಿಯ ಮೇಲೆ ಕೂರಿಸಿ, ಕ್ಷೌರಿಕನಿಗೆ ಗಡ್ಡ ಬೊಳಿಸುವಂತೆ ಒತ್ತಾಯಿಸಿದ್ದರು ಎಂದು ಜಾಫರ್ ಹೇಳಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ.

    ಈ ಕುರಿತು ಜಾಫರ್ ಉದ್ದಿನ್ ಗುರುಗ್ರಾಮ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ದುಷ್ಕರ್ಮಿಗಳ ಬಂಧನಕ್ಕೆ ಪೊಲೀಸರು ಈಗ ಬಲೆ ಬೀಸಿದ್ದಾರೆ.