Tag: ಕ್ಷೇಮವನ

  • ನುಡಿದಂತೆ ನಡೆಯುವವರು ಯೋಗಿ ಆದಿತ್ಯನಾಥ್ – ಬೊಮ್ಮಾಯಿ

    ನುಡಿದಂತೆ ನಡೆಯುವವರು ಯೋಗಿ ಆದಿತ್ಯನಾಥ್ – ಬೊಮ್ಮಾಯಿ

    ಬೆಂಗಳೂರು: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನುಡಿದಂತೆ ನಡೆಯುವ ಸಜ್ಜನ ವ್ಯಕ್ತಿ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಡಿ ಹೊಗಳಿದ್ದಾರೆ.

    ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಕೇಂದ್ರ ಕ್ಷೇಮವನ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಯೋಗಿ ಆದಿತ್ಯನಾಥ್ ರಾಜ್ಯಕ್ಕೆ ಆಗಮಿಸಿರುವುದು ನಮಗೆ ಸಂಭ್ರಮ ಮತ್ತು ಹೆಮ್ಮೆ. ಉತ್ತರದಿಂದ ದಕ್ಷಿಣದವರೆಗೂ ಅವರು ಮನೆ ಮಾತಾಗಿದ್ದಾರೆ. ಯೋಗಿ ಆದಿತ್ಯನಾಥ್ ಗುರುಗಳಾಗಿದ್ದವರು. ನಮ್ಮ ಧರ್ಮ ಮತ್ತು ಸಮಾಜದಲ್ಲಿ ಗುರುಗಳಿಗೆ ಅ ಅತ್ಯುತ್ತಮ ಸ್ಥಾನವಿದೆ. ಮೂರು ದಶಕಗಳಿಗೂ ಹೆಚ್ಚು ಕಾಲ ಸಾರ್ವಜನಿಕ ಜೀವನದಲ್ಲಿದ್ದಾರೆ. ಆದರ್ಶಪ್ರಾಯ, ಮಾದರಿಯಾಗಿ, ಸಾರ್ವಜನಿಕ ಜೀವನವನ್ನು ಅತಿ ಉನ್ನತ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ನುಡಿದಂತೆ ನಡೆಯುತ್ತಾರೆ. ಗುರುಗಳು ಕೂಡ ದಕ್ಷ ಆಡಳಿತಗಾರರಾಗಬಹುದೆಂದು ಅವರು ನಿರೂಪಿಸಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಕ್ಷೇಮವನ ಜೀವನದ ಸೂತ್ರವಾಗಲಿ: ಬೊಮ್ಮಾಯಿ

    ತತ್ವಜ್ಞಾನ ಮತ್ತು ಆಡಳಿತ ಒಂದೇ ನಾಣ್ಯದ ಎರಡು ಮುಖಗಳೆಂದು ತೋರಿಸಿಕೊಟ್ಟಿದ್ದಾರೆ ಹಾಗೂ ಆಧ್ಯಾತ್ಮ ಮತ್ತು ಆಡಳಿತವೂ ಒಂದೇ ನಾಣ್ಯದ ಎರಡು ಮುಖಗಳೆಂದು ನಿರೂಪಸಿದ್ದಾರೆ. ದುಷ್ಟರ ಶಿಕ್ಷೆ, ಶಿಷ್ಟರ ರಕ್ಷಣೆ ಅವರ ಆಡಳಿತದ ಪ್ರಮುಖ ಅಂಶ. ಹಲವಾರು ಸಮುದಾಯಗಳಲ್ಲಿ ವಿಶ್ವಾಸ ಮೂಡಿಸುವ ಕೆಲಸವನ್ನು ಅವರು ಮಾಡಿದ್ದಾರೆ. ಪ್ರಜಾಸತ್ತಾತ್ಮಕ, ಬಹು ಸಂಸ್ಕೃತಿಯ ಭಾರತದಲ್ಲಿ ಹೊಸ ಅಧ್ಯಾಯವನ್ನು ಅವರು ಬರೆದಿದ್ದಾರೆ. ನಮ್ಮ ಸಮಾಜದಲ್ಲಿ ಗುರುಗಳಿಗೆ ಅತ್ಯುನ್ನತ ಸ್ಥಾನವಿದೆ. ಸಾರ್ವಜನಿಕ ಬದುಕಿನಲ್ಲಿ 3 ದಶಕಗಳಿಂದಲೂ ಹೆಚ್ಚಿದ್ದು, ನುಡಿದಂತೆ ನಡೆಯುತ್ತಾರೆ. ಗುರುಗಳು ದಕ್ಷ ಆಡಳಿತಗಾರರಾಗಿರಬಹುದು. ತತ್ವಜ್ಞಾನ, ಆಡಳಿತಕ್ಕೆ ಸಂಬಂಧವಿಲ್ಲ ಎಂದು ತೋರಿಸಿಕೊಟ್ಟಿದ್ದಾರೆ. ಇದನ್ನೂ ಓದಿ: ಬೆಂಗಳೂರಿಗೆ ಇನ್ಮುಂದೆ ಸಾಂಪ್ರದಾಯಿಕ ವೈದ್ಯ ಪದ್ಧತಿ ಹಬ್ ಆಗೋ ಅವಕಾಶ- ಯೋಗಿ ಆದಿತ್ಯನಾಥ್

    Live Tv
    [brid partner=56869869 player=32851 video=960834 autoplay=true]

  • ಬೆಂಗಳೂರಿನಲ್ಲಿ SDM ಕ್ಷೇಮವನ ಉದ್ಘಾಟನೆ – ವಿಶೇಷತೆಗಳೇನು ಗೊತ್ತಾ?

    ಬೆಂಗಳೂರಿನಲ್ಲಿ SDM ಕ್ಷೇಮವನ ಉದ್ಘಾಟನೆ – ವಿಶೇಷತೆಗಳೇನು ಗೊತ್ತಾ?

    ಬೆಂಗಳೂರು : ನೆಲಮಂಗಲದಲ್ಲಿ ನಿರ್ಮಾಣ ಆಗಿರುವ   ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಕೇಂದ್ರ ಕ್ಷೇಮವನವನ್ನ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಉದ್ಘಾಟನೆ ಮಾಡಿದ್ದಾರೆ. 20 ಎಕರೆ ವಿಶಾಲವಾದ ಜಾಗದಲ್ಲಿ ಕ್ಷೇಮವನ ನಿರ್ಮಾಣವಾಗಿದ್ದು, ಸಂಪೂರ್ಣ ಪ್ರಕೃತಿ ಚಿಕಿತ್ಸೆ ಇಲ್ಲಿ ಸಿಗಲಿದೆ.

    ಕ್ಷೇಮವನದ ವಿಶೇಷತೆ ಏನು?
    20 ಎಕರೆ ಜಾಗದಲ್ಲಿ ನಿರ್ಮಾಣಗೊಂಡಿದೆ ಕ್ಷೇಮವನ. ನಿಸರ್ಗದತ್ತ ಪುನರುಜ್ಜೀವನ ಸೌಲಭ್ಯಗಳು ಇಲ್ಲಿ ಇವೆ. ಈ ಕೇಂದ್ರದ ವಿನ್ಯಾಸವನ್ನ ತಜ್ಞ ಮಹೇಶ್ ಡಿಯೋಫೋಡೆ ಮಾಡಿದ್ದಾರೆ. ಪರಿಕಲ್ಪನೆ ವಿನ್ಯಾಸವನ್ನ ಆಯುಷ್ ಕಾಸ್ಲಿವಾಲ್ ಅವರು ಮಾಡಿದ್ದಾರೆ.

    ಪ್ರಾಚೀನ ವಾಸ್ತು ವಿನ್ಯಾಸಗಳಿಗೆ ಅನುಗುಣವಾದ ಬಣ್ಣ, ವಿನ್ಯಾಸ ಮತ್ತು ಸಂರಚನೆಗಳು ರೂಪುಗೊಂಡಿದೆ. ಆಮೆ, ನಂದಿ, ಗರುಡ ಸಂಕೇತಿಸುವ ವಿನ್ಯಾಸದ ಕಟ್ಟಡಗಳು ನಿರ್ಮಾಣ ಮಾಡಲಾಗಿದೆ. ಸಮುದ್ರ, ಭೂಮಿ, ಮತ್ತು ಆಕಾಶ ತತ್ವದ ನೆಲೆಯಲ್ಲಿ ಸಂರಚಿತವಾಗಿದೆ. ಇದನ್ನೂ ಓದಿ: ಬೆಂಗಳೂರಿಗೆ ಇನ್ಮುಂದೆ ಸಾಂಪ್ರದಾಯಿಕ ವೈದ್ಯ ಪದ್ಧತಿ ಹಬ್ ಆಗೋ ಅವಕಾಶ- ಯೋಗಿ ಆದಿತ್ಯನಾಥ್

    ಯೋಗ, ಧ್ಯಾನಕ್ಕೆ ವಿನೂತನ ಕಟ್ಟಡ ʼಕೂರ್ಮಾʼ ನಿರ್ಮಾಣ ಮಾಡಲಾಗಿದೆ. ಕೇಂದ್ರವು ಎಸಿ ಈಜುಕೊಳದ ಸೌಲಭ್ಯ ಒಳಗೊಂಡಿದೆ. ಕೂರ್ಮಾವತಾರದ ಪೌರಾಣಿಕ ಪರಿಕಲ್ಪನೆಯಲ್ಲಿ ಈ ಕಟ್ಟಡ ಅರಳಿದೆ. ನಂದಿ ಹೆಸರಿನ ಕಟ್ಟಡ ಶಾಖೆ ಊಟದ ವಿಭಾಗವಾಗಿದೆ. ಡಯಟ್ ಮಾದರಿಗಳು 25 ಬಗೆಯ ಥೆರಪಿ ಶುಶ್ರೂಷಾ ಕ್ರಮಗಳನ್ನು ಒಳಗೊಂಡಿದೆ.

    ಕ್ಷೇಮವನ 400 ಜನರಿಗೆ ಶುಶ್ರೂಷೆ ನೀಡಬಲ್ಲದು. 86 ವಿಶೇಷ ಕೊಠಡಿಗಳು, 30 ಡಿಲಕ್ಸ್ ವಿಂಗ್ ಗಳು ಇವೆ.16 ಕಾಟೇಜ್ ಗಳು ಇವೆ. ನಿಸರ್ಗ, ಮೌನ ಮತ್ತು ಸರಳತೆ ಕೇಂದ್ರೀಕರಿಸಿಕೊಂಡ ಜೈವಿಕ ಮೌಲಿಕತೆಯನ್ನ ಈ ಕೇಂದ್ರ ಬಿಂಬಿಸುತ್ತದೆ. ಇದನ್ನೂ ಓದಿ: ಕ್ಷೇಮವನ ಜೀವನದ ಸೂತ್ರವಾಗಲಿ: ಬೊಮ್ಮಾಯಿ

    5 ಬಗೆಯ ಶುಶ್ರೂಷಾ ವಿಧಾನ ಇಲ್ಲಿ ಲಭ್ಯವಿದೆ.
    1.ಮನಸ್ಸು ಮತ್ತು ದೈಹಿಕ ಆರೋಗ್ಯ
    2.ಶಯನಾರೋಗ್ಯ
    3.ಪೌಷ್ಟಿಕ ಆಹಾರ
    4.ಗಟ್ ಆರೋಗ್ಯ
    5.ಶಕ್ತಿ ಔಷಧಿ

    Live Tv
    [brid partner=56869869 player=32851 video=960834 autoplay=true]